ವರದಿ : ವಾಲ್ಟರ್ ಮೊಂತೇರೊ, ಬೆಳ್ಮಣ್ಣು

ಕಾರ್ಕಳ ತಾಲೂಕು ಅತ್ಯುತ್ತಮ ಶಾಲೆ ಪ್ರಶಸ್ತಿ ಪುರಸ್ಕøತ ಸಂಸ್ಥೆ ಕೆದಿಂಜೆ ಗ್ರಾಮದ ಪರಿಸರದಲ್ಲಿ ಗುಣಮಟ್ಟ ಮತ್ತು ರಚನಾತ್ಮಕ ಶಿಕ್ಷಣ ನೀಡುತ್ತಿರುವ ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆ ಕೆದಿಂಜೆ ಶ್ರೀ ವಿದ್ಯಾಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ.
1935ರಲ್ಲಿ ಉದ್ಯಮಿ ದಿ| ಯು. ಸುಬ್ಬಣ್ಣ ಕಾಮತ್‍ರವರು ಸ್ಥಾಪಿಸಿದ ವಿದ್ಯಾಸಂಸ್ಥೆಯು ಯು.ಸುಬ್ಬಣ್ಣ ಕಾಮತ್ ಶಿಕ್ಷಣ ಪ್ರತಿಷ್ಠಾನ ಇದರ ಅಧ್ಯಕ್ಷರು ಹಾಗೂ ಶಾಲಾ ಸಂಚಾಲಕ ಯು.ಶೇಷಗಿರಿ ಕಾಮತ್‍ರ ನೇತೃತ್ವದಲ್ಲಿ ಸಂಸ್ಥೆಯು ಬಹಳಷ್ಟು ಏಳಿಗೆಯನ್ನು ಕಂಡಿದೆ.
ಅತೀ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳಿಗೂ ಉಚಿತ ಶಿಕ್ಷಣ ನೀಡುವುದರೊಂದಿಗೆ ಕೇವಲ ಪಠ್ಯ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸೇವಾದಳ, ಪ್ರತಿಭಾ ಕಾರಂಜಿ, ಕ್ರೀಡೆ, ಸಾಂಸ್ಕøತಿಕ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ಹೆಗ್ಗಳಿಕೆ ಕೆದಿಂಜೆ ಶ್ರೀ ವಿದ್ಯಾಬೋದಿನಿ ಶಾಲೆಯದ್ದು. ಈಗಗಲೇ ಇಲ್ಲಿ ಕಲಿತ ವಿದ್ಯಾರ್ಥಿಗಳು ಫ್ರೌಢ, ಪಿಯುಸಿ ಹಾಗೂ ಪದವಿ ವಿಭಾಗಗಳಲ್ಲೂ ಉತ್ತಮ ಅಂಕ ಅಂಕ ಗಳಿಸಿ ಉನ್ನತ ವಿದ್ಯಾಭ್ಯಾಸದೊಂದಿಗೆ ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ.
ವಿದ್ಯಾರ್ಥಿ ಸ್ನೇಹಿ ಶಿಕ್ಷಣ ಸಂಸ್ಥೆ
ಗುಣಮಟ್ಟದ ಶಿಕ್ಷಣ, ಅನುಭವಿ ಶಿಕ್ಷಕ ವೃಂದ, ಉತ್ತಮ ಪರಿಸರ, ಶಿಸ್ತುಬದ್ಧ ಪಠ್ಯೇತರ ಚಟುವಟಿಕೆಗಳು, ವಿಸ್ತಾರವಾದ ಆಟದ ಮೈದಾನ, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲು ವಾರ್ಷಿಕೋತ್ಸವ ಸಮಾರಂಭ ಆಯೋಜನೆ, ಯೋಗ ತರಬೇತಿ, ಕಂಪ್ಯೂಟರ್ ತರಗತಿ, ಒಂದನೆ ತರಗತಿಯಿಂದಲೇ ಇಂಗ್ಲೀಷ್ ಕಲಿಕೆ, ಭಜನೆ, ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಚಿಲ್ಡ್ರನ್ಸ್ ಪಾರ್ಕ್, ಸುವ್ಯವಸ್ಥಿತಿತವಾದ ಶಾಲಾ ಭವ್ಯ ಕಟ್ಟಡದೊಂದಿಗೆ ಶಾಲಾ ಬಸ್ಸುಗಳ ವ್ಯವಸ್ಥೆ ಇದೆ. ವಿದ್ಯಾರ್ಥಿ ಸ್ನೇಹಿ ವಾತಾವರಣದ ಈ ಸಂಸ್ಥೆಯಲ್ಲಿ ಶಿಕ್ಷಕ ವೃಂದದ ಶಿಸ್ತುಬದ್ಧ ಶಿಕ್ಷಣದೊಂದಿಗೆ ನಿರಂತರ ಪರಿಶ್ರಮ ಹಾಗೂ ವಿದ್ಯಾರ್ಥಿಗಳ ಪ್ರಯತ್ನದ ಫಲವಾಗಿ ಶಾಲೆ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.
ವಿದ್ಯಾರ್ಥಿ ವೇತನ ಹಾಗೂ ವಿವಿಧ ಕೊಡುಗೆಗಳು
ಕೆದಿಂಜೆ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನೊಂದಿಗೆ ಪ್ರತಿವರ್ಷ ಅಧಿಕ ಮೊತ್ತದ ವಿದ್ಯಾರ್ಥಿವೇತನ, ಉಚಿತ ಬರೆಯುವ ಪುಸ್ತಕ, ಉಚಿತ ಸಮವಸ್ತ್ರ, ಸ್ಕೂಲ್ ಬ್ಯಾಗ್, ಲೇಖನಾ ಸಾಮಾಗ್ರಿ ಮುಂತಾದ ವಿವಿಧ ಕೊಡುಗೆಗಳನ್ನು ನೀಡಲಾಗುತ್ತದೆ.
ಶಾಲಾ ಹಳೆವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕವೃಂದ
ಸಂಸ್ಥೆಯ ಬೆಳವಣಿಗೆಗೆ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಬಿರೋಟ್ಟು ದಿನೇಶ್ ಪೂಜಾರಿ, ಕಾರ್ಯದರ್ಶಿ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಬೋಳ ಹರಿಣಿ ಸುಂದರ ಪೂಜಾರಿ, ಶಿಕ್ಷಕ-ರಕ್ಷಕ ಸಂಘಗಳ ಸಹಕಾರ ಮತ್ತು ಮಾರ್ಗದರ್ಶನವೂ ಉತ್ತಮ ರೀತಿಯಲ್ಲಿ ದೊರಕುತ್ತಿವೆ. ಗ್ರಾಮೀಣ ಪ್ರದೇಶದ ಮಕ್ಕಳನ್ನು ಮುಂಚೂಣಿಗೆ ತಂದು ನಿಲ್ಲಿಸುವಲ್ಲಿ ಸಂಸ್ಥೆ ಯಶಸ್ವಿಯಾಗಿದೆ. ಆಡಳಿತ ಮಂಡಳಿ, ಶಾಲಾ ಮುಖ್ಯ ಶಿಕ್ಷಕ ಪ್ರಥ್ವೀರಾಜ್ ಬಲ್ಲಾಳ್‍ರವರೊಂದಿಗಿನ ಶಿಕ್ಷಕವೃಂದದ ಶಿಸ್ತು ಮತ್ತು ಗುಣಮಟ್ಟದ ಶಿಕ್ಷಣದ ಧ್ಯೇಯವನ್ನು ಇಟ್ಟುಕೊಂಡು ನಿರಂತರವಾಗಿ ಕಾರ್ಯಪ್ರವೃತ್ತರಾಗಿದ್ದಾರೆ.