Reported by – Prof Archibald Furtado Photographs: Praveen Cutinho.
ಬಾರ್ಕೂರು:ಬಾರ್ಕೂರು ನೇಶನಲ್ ಶಿಕ್ಷಣ ಸಂಸ್ಥೆಗಳಿಂದ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.
ಹನೆಹಳ್ಳಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರ ಸಾರಥ್ಯದಲ್ಲಿ ವಿದ್ಯಾರ್ಥಿಗಳು” ಜೈ ಜವಾನ್ ಜೈ ಕಿಸಾನ್ ” “ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಿ ಜೈ ” “ಭಾರತ್ ಮಾತಾ ಕಿ ಜೈ” ಎನ್ನುವ ಜಯ ಘೋಷಗಳನ್ನು ಕೂಗುತ್ತಾ ದೇಶಪ್ರೇಮಿಗಳ ದಂಡು ಧ್ವಜಾರೋಹಣದ ಕೇಂದ್ರ ಸ್ಥಳವಾದ ನೇಶನಲ್ ಪದವಿ ಪೂರ್ವ ಕಾಲೇಜಿನ ಪರಿಸರವನ್ನು ತಲುಪಿದರು. ಆ ಬಳಿಕ ಕಾಲೇಜಿನ ಪ್ರಾಂಶುಪಾಲರನೊಡಗೂಡಿಕೊಂಡು ಉಪನ್ಯಾಸಕರು, ಶಿಕ್ಷಕರು, ಶಿಕ್ಷಕೇತರರು ,ವಿದ್ಯಾರ್ಥಿಗಳು ಧ್ವಜಕಟ್ಟೆಯ ಮುಂಭಾಗದಲ್ಲಿ ಜಮಾವಣಿಗೊಂಡರು . ಶುದ್ಧ ಖಾದಿ ಬಟ್ಟೆಯಿಂದ ತಯಾರಿಸಿದ ನೂತನ ತ್ರಿವರ್ಣ ಧ್ವಜವು ನಮ್ಮ ಶಾಲೆಯ 78ನೇ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಮೆರುಗನ್ನು ನೀಡಿತು.
ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಎ ಎಚ್ ಗೌಡ ಮತ್ತು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಉಮೇಶ್ ಶೆಟ್ಟಿಯವರು ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರದೊಂದಿಗೆ ಧ್ವಜ ಸಂಹಿತೆಯನ್ನು ಪಾಲಿಸುತ್ತಾ ಧ್ವಜಕಟ್ಟೆಯನ್ನು ಶೃಂಗರಿಸಿದರು. ನಮ್ಮ ಶಾಲೆಯ ಶ್ಯಾಮಲಕ್ಕ ಮತ್ತು ನಿರ್ಮಲಕ್ಕ ರವರು ಧ್ವಜಕಟ್ಟೆ ಶೃಂಗಾರದಲ್ಲಿ ಶಿಕ್ಷಕದ್ವಯರಿಗೆ ಸಹಕರಿಸಿದರು.
ನೂತನ ಎನ್ ಸಿ ಸಿ ಅಧಿಕಾರಿಯಾಗಿರುವ ಶ್ರೀಮತಿ ಐಶ್ವರ್ಯ ಶೆಟ್ಟಿ ಯವರ ಮಾರ್ಗದರ್ಶನದ ಎನ್ ಸಿ ಸಿ ವಿದ್ಯಾರ್ಥಿಗಳ ಉಪಸ್ಥಿತಿಯು ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಮೆರುಗನ್ನು ನೀಡಿತು. ಶಾಲಾ ಸಂಚಾಲಕರಾದ ಗೋಪಾಲ್ ನಾಯ್ಕ್ ಧ್ವಜಾರೋಹಣ ಮಾಡಿದರು.
9ನೇ ತರಗತಿ ವಿದ್ಯಾರ್ಥಿ ಆದಿತ್ಯ ನು ಎನ್ ಸಿ ಸಿ ವಿದ್ಯಾರ್ಥಿಗಳ ನೇತೃತ್ವವನ್ನು ವಹಿಸಿ ಮುಗಿಲು ಮುಟ್ಟುವ ಕಮಾಂಡ್ ಗಳನ್ನು ನೀಡಿ ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳನ್ನು ಸಾಂಗವಾಗಿ ನೆರವೇರಿಸಿ ಕೊಟ್ಟನು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಎನ್ ಸಿ ಸಿ ವಿದ್ಯಾರ್ಥಿಗಳನ್ನು ವೀಕ್ಷಿಸಿ ಮುಂದಿನ ದಿನಗಳಲ್ಲಿ ತಾನು ಇದೇ ಪ್ರೌಢ ಶಾಲೆಯನ್ನು ಸೇರಿ
ಎನ್ ಸಿ ಸಿ ವಿಭಾಗವನ್ನು ಸೇರ್ಪಡೆಗೊಳ್ಳಬೇಕು ಎನ್ನುವ ಇಂಗಿತವನ್ನು ಮನಸಿನಲ್ಲಿ ವ್ಯಕ್ತಪಡಿಸಿಕೊಂಡಿದ್ದಂತು ಸುಳ್ಳಲ್ಲ.
ಎನ್ ಸಿ ಸಿ ವಿಭಾಗದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ವಿಶಿಷ್ಟವಾದ ಪದಕಗಳನ್ನು ನೀಡಿ ಗೌರವಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಯು ಕೊಟ್ರ ಸ್ವಾಮಿಯವರು ಕಳೆದ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿನಿಯಾದ ಅಪೇಕ್ಷ ಆಚಾರ್ ರವಳಿಗೆ ಲಯನ್ಸ್ ಕ್ಲಬ್ ನವರು ಕೊಡ ಮಾಡಿದ ನಗದು ಬಹುಮಾನವನ್ನ ನೀಡಿ ಗೌರವಿಸಿದರು . ಸ್ವಾತಂತ್ರ್ಯ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನಮ್ಮ ಶಾಲೆಯ ಪ್ರತಿಭೆಗಳನ್ನು ಗುರುತಿಸಿದ್ದು ಸ್ವಾತಂತ್ರ್ಯ ದಿನಕ್ಕೆ ವಿಶೇಷ ಕಳೆ ನೀಡಿತು .ಪ್ರೌಢಶಾಲಾ ವಿಭಾಗದ ವಿಜ್ಞಾನ ಶಿಕ್ಷಕಿಯವರಾದ ಜ್ಯೋತಿ ಎ ಶೆಟ್ಟಿಯವರು ಎನ್ ಸಿ ಸಿ ವಿಭಾಗದ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು.
ವಿದ್ಯಾರ್ಥಿಗಳಿಗೆ ವಿವಿಧ ಸಿಹಿತಿಂಡಿಯನ್ನು ವಿತರಿಸಿ ದಾನಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಲಾಯಿತು ಸಿಹಿ ತಿಂಡಿ ವಿತರಣೆ ಮುಗಿಯುತ್ತಿದ್ದಂತೆ ಇನ್ನೊಮ್ಮೆ ಒಕ್ಕೊರಲಿನಿಂದ ಕೇಳಿ ಬಂದಿದ್ದು ಮುಗಿಲು ಮುಟ್ಟುವ ಜಯಘೋಷಗಳು. ಈ ಸಂದರ್ಭದಲ್ಲಿ ಹನೆಹಳ್ಳಿ ಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಉದಯ ಸರ್ ರವರ ಉತ್ಸಾಹವನ್ನು ಮೆಚ್ಚಲೇಬೇಕು. ದೇಶಭಕ್ತಿ ವಿಚಾರ ಬಂದಾಗ
“ತಾ ಮುಂದು “ಎನ್ನುವಂತೆ ಜಯಘೋಷ ಮೊಳಗಿಸಿದರು.
78ನೇ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಜಯಘೋಷಕ್ಕೆ ಧ್ವನಿಗೂಡಿಸಿದರೊಂದಿಗೆ ಕಾಲೇಜಿನ ಪರಿಸರದಲ್ಲಿ ದೇಶಭಕ್ತಿಯು ಮಾರ್ಧನಿಸಿತು.
ಬಳಿಕ ಶಾಲಾ ವಿದ್ಯಾರ್ಥಿಗಳು ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ದೃಷ್ಟಿಯಿಂದ ಗ್ರಂಥಾಲಯದತ್ತ ಹೆಜ್ಜೆ ಹಾಕಿದರು. ಶಾಲಾ ಸಂಚಾಲಕರಾದ ಗೋಪಾಲ್ ನಾಯ್ಕ್ , ಆಡಳಿತ ಮಂಡಳಿ ಕಾರ್ಯದರ್ಶಿಯವರಾದ ಅಶೋಕ್ ಕುಮಾರ್ ಶೆಟ್ಟಿ, ಆಡಳಿತ ಸಂಯೋಜಕರಾದ ಆರ್ಚಿ ಬಾಲ್ಡ್ ,ಕಾಲೇಜಿನ ಪ್ರಾಂಶುಪಾಲರಾದ ಯು ಕೊಟ್ರು ಸ್ವಾಮಿ ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿಯಾದ ಹೇಮಾವತಿ ಪಿ ಎಸ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಉದಯ್ ಶೆಟ್ಟಿ ಮೊದಲಾದವರು ವೇದಿಕೆ ಮೇಲಿದ್ದು ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟರು.
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿಯರಾದ ಸಮೃದ್ಧಿ ,ಶ್ರೀತ ,ಪೂರ್ವಿಯವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ ನಾಯಕರುಗಳ ಬಗೆಗೆ ನಿರರ್ಗಳವಾಗಿ ಮತ್ತು ಸ್ಪೂರ್ತಿದಾಯಕವಾಗಿ ಮಾತುಗಳನ್ನಾಡಿ ನಾಯಕರ ಸಾಧನೆಗಳನ್ನು ಇನ್ನೊಮ್ಮೆ ಮೆಲುಕು ಹಾಕುವಂತೆ ಪ್ರೇಕ್ಷಕರನ್ನು ಪ್ರೇರೇಪಿಸಿದರು. ಆಡಳಿತ ಮಂಡಳಿಯ ಕಾರ್ಯದರ್ಶಿಗಳು ತಮ್ಮ ಸಂದರ್ಭೋಚಿತ ಮಾತುಗಳನ್ನು ಆಡಿದರು.
ಆಡಳಿತ ಸಂಯೋಜಕರ ಮತ್ತು ಶಾಲಾ ಸಂಚಾಲಕರ ಮಾತುಗಳು ಇತಿಹಾಸದ ಪುಟಗಳನ್ನು ಇನ್ನೊಮ್ಮೆ ನಮ್ಮ ಮುಂದೆ ತೆರೆದಿಟ್ಟವು. ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿಯಾದ ಹೇಮಾವತಿ ಪಿಎಸ್ ರವರ ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮವು ಸಮಾಪನಗೊಂಡಿತು. ಪ್ರೌಢಶಾಲಾ ವಿಭಾಗದ ಶಿಕ್ಷಕ ಪ್ರಭಾಕರ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು..
ಸಭಾ ಕಾರ್ಯಕ್ರಮಮುಗಿಯುತಿದ್ದಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಮನರಂಜನಾ ಕಾರ್ಯಕ್ರಮ ನಡೆಯಿತು.
9ನೇ ತರಗತಿಯ ವಿದ್ಯಾರ್ಥಿನಿ ಗಾಯಿತ್ರಿ ಮನರಂಜನಾ ಕಾರ್ಯಕ್ರಮದ ನಿರೂಪಣೆ ಮಾಡಿದಳು. ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಮೈಮ್, ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿ ,ತಮ್ಮೊಳಗೆ ಮಾತನಾಡಿಕೊಳ್ಳುವಂತೆ ಮಾಡಿತು. ವೇದಿಕೆಯಲ್ಲಿ ಪ್ರದರ್ಶಿಸಲ್ಪಟ್ಟ ನೃತ್ಯಗಳು ಎಲ್ಲಿಯೂ ಶಿಸ್ತಿನ ಚೌಕಟ್ಟನ್ನು ಮೀರದೆ ದೇಶಪ್ರೇಮವನ್ನು ಪ್ರತಿಬಿಂಬಿಸುತ್ತಿದ್ದವು, ನೃತ್ಯದಲ್ಲಿ ಭಾಗವಹಿಸಿದ ಪ್ರತಿಯೊಬ್ಬರು ನಮ್ಮ ಶಾಲೆಯ ಸಾಂಸ್ಕೃತಿಕ ರಾಯಭಾರಿಗಳಂತೆ ಕಂಡುಬಂದರು .ನೃತ್ಯ ಇತ್ಯಾದಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತರಬೇತಿ ನೀಡಿದ ಎಲ್ಲಾ ಮಾರ್ಗದರ್ಶಕ ಶಿಕ್ಷಕರಿಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು.
78th Independence Day Celebration by Barkur National Educational Institutions
Barkur : Vibrant National Group of Institutions Barkur, join hands, as the Tri-Schools Celebrate 78th Independence Day.
The serene village of Hanehalli-Barkur came alive with patriotic fervour as three esteemed educational institutions – National PU College, National High School, and National Higher Primary School – joined hands to commemorate India’s 78th Independence Day in a grand celebration that left an indelible mark on students and faculty alike.
The day began with an air of excitement as students from the primary school, led by their enthusiastic headmaster, marched towards the flag hoisting venue at the National PU College campus. Their passionate chants of “Jai Jawan, Jai Kisan,” “Mahatma Gandhi ki Jai,” and “Bharat Mata ki Jai” reverberated through the air, setting the tone for a day filled with national pride.
At the heart of the celebration was the flag hoisting ceremony, where Mr. Gopala Naik, the Correspondent of PU College and National High School, had the honour of unfurling the national flag. The tri-colour, made of pure khadi, billowed proudly in the morning breeze, symbolizing the freedom and unity of the nation. The NCC cadets, under the guidance of their new officer Mrs. Aishwarya Shetty, stood at attention, adding a touch of discipline and reverence to the proceedings.
Following the flag hoisting, a series of events unfolded that showcased the talents and patriotic spirit of the students. Samriddhi, Shreseta, and Poorvi from the high school delivered inspiring speeches about freedom fighters, rekindling the flame of nationalism in the hearts of the audience. The primary and high school students then took centre stage with a captivating mime performance that left the spectators spellbound and introspective.
The cultural extravaganza continued with a variety of dance performances that beautifully blended artistic expression with patriotic themes. Each performance, meticulously choreographed and executed, stood as a testament to the dedication of both students and teachers in preserving and celebrating India’s rich cultural heritage.
In a touching gesture of recognition, the college principal, U. Kottraswami, presented a cash prize to Apeksha Achar, the top-scoring 10th-grade student from the previous academic year. This award, sponsored by the local Lions Club, underscored the community’s commitment to encouraging academic excellence.
The event also saw the distribution of special medals to NCC cadets who had excelled in various competitions, highlighting the institution’s focus on all-round development. The list of awardees was announced by Ms. Jyoti A. Shetty, the science teacher from the high school division.
As the formal ceremonies concluded, the air was filled with jubilant cheers led by Mr. Uday, the primary school headmaster, whose enthusiasm was infectious. The celebration then moved to the library for a special assembly, where dignitaries including Mr. Ashok Kumar Shetty, the administrative board secretary, and Prof Archibald Furtado the administrative coordinator, addressed the gathering.
The event reached its crescendo with an enthralling cultural program featuring students from both primary and high school sections. Gaythri, a 9th-grade student, eloquently compeered the show, introducing a series of performances that ranged from patriotic songs to dance numbers, all adhering to the theme of national pride and unity.
As the sun began to set on this memorable day, students dispersed to their respective classrooms before heading home, their hearts filled with pride and minds inspired by the spirit of independence. The teachers and lecturers gathered for light refreshment, reflecting on the success of the joint celebration that had brought three educational institutions together in a harmonious display of patriotism.
The 78th Independence Day celebration at Hanehalli-Barkur not only commemorated India’s freedom but also reinforced the bonds between the National PU College, National High School, and National Higher Primary School. It stood as a shining example of how educational institutions can come together to instil values of nationalism, unity, and cultural pride in the younger generation, ensuring that the flame of independence continues to burn brightly in the hearts of India’s future leaders.