

ಮಂಗಳೂರು, ಅ.17: ಉಳ್ಳಾಲದ ನೇತ್ರಾವತಿ ಸೇತುವೆಯಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಸರಣಿ ಅಪಘಾತದಲ್ಲಿ ಲಾರಿ, ಕಾರು, ಆಟೊ ರಿಕ್ಷಾ ಸಹಿತ ಏಳು ವಾಹನಗಳಿಗೆ ಹಾನಿಯಾಗಿವೆ ಎಂದು ತಿಳಿದುಬಂದಿದೆ. ಅಲ್ಲದೆ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಕುರಿತು ಸಂಚಾರ ದಕ್ಷಿಣ ಠಾಣೆಯ ಪೊಲೀಸರ ಮಾಹಿತಿ ಲಭಿಸಿದೆ.
ನಗರದ ಪಂಪ್‌ವೆಲ್‌ನಿಂದ ತೊಕ್ಕೊಟ್ಟು ಕಡೆಗೆ ತೆರಳುವ ಉಳ್ಳಾಲ ನೇತ್ರಾವತಿ ಸೇತುವೆಯಲ್ಲಿ ಡೀಸೆಲ್ ಖಾಲಿಯಾಗಿ ಲಾರಿಯೊಂದು ನಿಂತಿತ್ತು. ಸೋಮವಾರ ಸಂಜೆಯ ವೇಳೆ ನಗರದಲ್ಲಿ ಭಾರೀ ಮಳೆಯಾಗಿದ್ದು, ಈ ಸಂದರ್ಭ ನಿಂತಿದ್ದ ಲಾರಿಯನ್ನು ಗಮನಿಸದ ಸ್ವಿಪ್ಟ್ ಕಾರು ಲಾರಿಗೆ ಢಿಕ್ಕಿ ಹೊಡೆದಿದೆ. ಇದರ ಹಿಂದಿನಿಂದ ಬರುತ್ತಿದ್ದ ಕೇರಳ ನೋಂದಣಿಯ 3 ಕಾರು ಒಂದಕ್ಕೊಂದು ಢಿಕ್ಕಿಯಾಗಿದೆ. ಅಲ್ಲದೆ ಪಿಕಪ್, ಬಸ್ ಕೂಡಾ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಮಳೆ ಸುರಿಯುತ್ತಿದ್ದ ಕಾರಣ ಒಂದರ ಹಿಂದೆ ಒಂದರಂತೆ ವಾಹನಗಳು ಸಾಲಾಗಿ ಚಲಿಸುತ್ತಿದ್ದವು. ಹಾಗೇ ಒಂದಕ್ಕೊಂದು ಢಿಕ್ಕಿಯಾಗಿದ್ದು, 7 ವಾಹನಗಳಿಗೆ ಹಾನಿಯಾಗಿವೆ. ಇದರಲ್ಲಿ 3 ಕಾರು, ಬಸ್‌ಗೆ ಭಾರೀ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಮಂಗಳೂರು ದಕ್ಷಿಣ ಸಂಚಾರ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಇಬ್ಬನಿಯ ದೆಸೆಯಿಂದ ಈ ರೀತಿ ಅಪಘಾತವಾಗುವುದು ಗಲ್ಫ್ ರಾಷ್ಟ್ರ್ರಗಳಲ್ಲಿ ನಎಡೆಯುವುದು ಸಾಮಾನ್ಯ ಆದರೆ ಮಂಗಳೂರಿನಲ್ಲಿ ಮಳೆಯ ಮೊಬ್ಬಿನಿಂದ ನಡೆದಿದೆ ಎಂದು ಅಂದಾಜು.






