

ಮಂಗಳೂರು: ಸಂತ ಆಂತೊನಿಯವರ ಪುಣ್ಯ ಸ್ಮರಣಿಕೆ ಹಬ್ಬದ ಪ್ರಯುಕ್ತ ಏಳನೆಯ ದಿನದ ನೊವೆನಾ ಪ್ರಾರ್ಥನೆಯು ಮಿಲ್ಲಾಗ್ರಿಸ್ ಚರ್ಚಿನಲ್ಲಿ ನೆರವೇರಿತು ಮಂಗಳೂರು ಧರ್ಮ ಪ್ರಾಂತದ ಐ.ಸಿ.ವೈ .ಎಂ ನಿರ್ದೇಶಕರಾದ ವಂದನೀಯ ಅಶ್ವಿನ್ ಕಾರ್ಡೋಜ ಪ್ರಧಾನ ಗುರುಗಳಾಗಿ ಪೂಜೆಯನ್ನು ನೆರವೇರಿಸಿದರು. ಅವರು ದಿನದ ವಿಷಯವಾದ ನಮ್ಮ ನಾಲಿಗೆ ನಮ್ಮ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂಬ ವಿಷಯದ ಮೇಲೆ ಪ್ರವಚನ ವಿತ್ತರು. ಸಂತ ಆಂತೊನಿ ಅಶ್ರಮದ ನಿರ್ದೆಶಕರಾದ ವಂದನೀಯ ಜೆ.ಬಿ. ಕ್ರಾಸ್ತಾ, ಸಹಾಯಕ ನಿರ್ದೆಶಕರಾದ ವಂದನೀಯ ಲ್ಯಾರಿ ಪಿಂಟೊ ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡರು. ಏಳನೆಯ ದಿನದ ನೊವೆನಾ ಪ್ರಾರ್ಥನೆಯಲ್ಲಿ , ಯುವಕ ಯುವತಿಯರಿಗೋಸ್ಕರ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.