JANANUDI.COM NETWORK
ಬೆಂಗಳೂರು,ಮೇ.7೭.ಕರ್ನಾಟಕದಲ್ಲಿ ವ್ಯಾಕ್ಸಿನ್ ಕೊರತೆ ಬಗ್ಗೆ ಹೈ ಕೋರ್ಟ್ 06-05-2021 ರಂದು ಕಳವಳ ವ್ಯಕ್ತಪಡಿಸಿದ್ದು ಮೊದಲ ಡೋಸ್ ಪಡೆದಿರುವ 65.83 ಲಕ್ಷ ಜನರಿಗೆ 2 ನೇ ಡೋಸ್ ನೀಡಲು ಲಸಿಕೆ ಕೊರತೆ ಇದೆ ಎಂದು ಹೇಳಿದೆ.
ಈಗ ರಾಜ್ಯ ಸರ್ಕಾರದ ಬಳಿ 7.76 ಲಕ್ಷ ಲಸಿಕೆ ಮಾತ್ರ ಇರುವುದು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಸೂಚಿಸಿದೆ. 3 ದಿನಗಳೊಳಗೆ ಕೇಂದ್ರ ಸರ್ಕಾರ, ರಾಜ್ಯದ ಮನವಿಯನ್ನು ಸ್ವೀಕರಿಸಿ ಸ್ಪಂದಿಸಬೇಕು. ತುರ್ತು ಸಂದರ್ಭದಲ್ಲಿ ಜನರ ರಕ್ಷಣೆಗೆ ಧಾವಿಸಬೇಕು ಎಂದು ಹೈಕೋರ್ಟ್ ಹೇಳಿದೆ.
ಲಸಿಕೆ ಉತ್ಪಾದಕರೊಂದಿಗೆ ಕೇಂದ್ರ ಸರ್ಕಾರ ಸಮಾಲೋಚಿಸಬೇಕು. ಶೀಘ್ರ ಲಸಿಕೆ ಪೂರೈಕೆಗೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಈಗಾಲೇ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಈ ಮಧ್ಯೆ ರಾಜ್ಯದಲ್ಲಿ ಆಕ್ಸಿಜನ್, ಬೆಡ್, ಚುಚ್ಚುಮದ್ದುಗಳಿಗೆ ಭಾರಿ ಕೊರತೆ ಉಂಟಾಗಿ ಸಾವಿನ ಪ್ರಮಾಣ ಹೆಚ್ಚಾಗಿ ತೊಡಗಿದ್ದಕ್ಕೆ ನ್ಯಾಯಲಯ ಎಚ್ಚರಿಕೆ ನೀಡಿದೆ.