JANANUDI.COM NETWORK
ಬೆಂಗಳೂರು, 23: ಕೊರೊನಾ ಸೋಂಕಿತ ಆರ್.ವಿ. ಪ್ರಸಾದ ಕುಟುಂಬದ 55 ವರ್ಷದ ವ್ಯಕ್ತಿಗೆ ಸಕಾಲದಲ್ಲಿ ಐಸಿಯು ಬೆಡ್ ಸಿಗದೆ ಮೃತಪಟ್ಟರು. ಈ ಮೃತ ಶವವನ್ನು ಸಾಗಿಸಲು ಹೆಬ್ಬಾಳ ಫ್ಲೈಓವರ್ ಬಳಿ ಇರುವ ನಂದನ ಇಂಟರ್ ಆಂಬ್ಯುಲೆನ್ಸ್ ಇಂಟರ್ನ್ಯಾಷನಲ್ ಆ್ಯಂಬುಲೆನ್ಸ್ ಚಾಲಕ ಮ್ರತ 60 ವ್ಯಕ್ತಿಯ ಮಗಳ ಹತ್ತಿರ 60 ಸಾವಿರ ರೂಪಾಯಿ ಬೇಡಿಕೆ ಇಟ್ಟು ಸತಾಯಿಸಿದ್ದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆ್ಯಂಬುಲೆನ್ಸ್ ಚಾಲಕನನ್ನು ಬಂಧನಕ್ಕೊಳಪಡಿಸಿದ್ದಾರೆ.
ಏಪ್ರಿಲ್ 20 ರಂದು ಈ ಘಟನೆ ನಡೆದಿದ್ದು. ಭವ್ಯಾ ಎಂಬ ಮಹಿಳೆಯ ತಂದೆ ಪ್ರಸಾದ್ ಎಂಬುವವರು ಕೊರೋನಾ ಸೋಂಕಿನಿಂದಾಗಿ ಖಾಸಗಿ ಆಸ್ಪತ್ರೆಯಲ್ಲಿ ಮ್ರತಪಟ್ಟಿದ್ದಾರೆ. ತಂದೆಯ ಮೃತದೇಹವನ್ನು ಚಿತಾಗಾರಕ್ಕೆ ಸಾಗಿಸಲು ಮುಂದಾದ ಭವ್ಯಾ ಅವರ ಬಳಿ ಆ್ಯಂಬುಲೆನ್ಸ್ ಚಾಲಕ ಮಾಲೀಕ ರೂ.60 ಸಾವಿರ ಬೇಡಿಕೆ ಇಟ್ಟು. ದುಡ್ಡು ಕೊಟ್ಟರಷ್ಟೇ ಮೃತದೇಹ ಸಾಗಿಸುತ್ತೇವೆ. ಇಲ್ಲವಾದರೆ, ರಸ್ತೆಯ ಮೇಲೆ ಮೃತದೇಹ ಬಿಟ್ಟು ಹೋಗುತ್ತೇವೆಂದು ಬೆದರಿಸಿದ ಪ್ರಕರಣ ಇದಾಗಿದೆ..
ಈ ವೇಳೆ ಭವ್ಯಾ ತಮ್ಮ ಬಳಿ ಇದೀಗ ಅಷ್ಟೊಂದು ಹಣವಿಲ್ಲ.ನನ್ನ ಮಾಂಗಲ್ಯ ಸರ ಮಾರಿ ಹಣ ನೀಡುತ್ತೇನೆ. ಈಗ ಮೃತದೇಹ ಸಾಗಿಸಲು ಸಹಾಯ ಮಾಡುವಂತೆ ಬೇಡಿಕೊಂಡಿದ್ದೇನೆ. ಆದರೆ, ಇದಕ್ಕೆ ಆ್ಯಂಬುಲೆನ್ಸ್ ಮಾಲೀಕ ನಿರಾಕರಿಸಿದ್ದು, ನಂತರ ಭವ್ಯಾ ಮಾಧ್ಯದವರಿಗಳ ಮೂಲಕ ಪೊಲೀಸರಿಗೆಮಾಹಿತಿ ಬಳಿಕ ಪರಿಸ್ಥಿತಿಯ ಗಂಭೀರತೆ ಅರಿತ ಆ್ಯಂಬುಲೆನ್ಸ್ ಮಾಲೀಕ ಹರೀಶ್ ಅಶ್ವತ ನಾರಾಯಣ ರೂ.16,000ಕ್ಕೆ ಮೃತದೇಹ ಸಾಗಿಸಲು ಒಪ್ಪಿದ್ದಾನೆ.
ಬಳಿಕ ಭವ್ಯಾ ಅವರು ಹಣವನ್ನು ನೀಡಿ ಮೃತದೇಹವನ್ನು ಸಾಗಿಸಿದ್ದಾರೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಅಮೃತಹಳ್ಳಿ ಪೊಲೀಸರು ಆ್ಯಂಬುಲೆನ್ಸ್ ನ್ನು ವಶಕ್ಕೆ ಪಡೆದು ಚಾಲಕ ಹನುಮಂತಪ್ಪ ಸಿಂಗ್ರಿ (30) ಮತ್ತು ಮಾಲೀಕ ಹರೀಶ್ ಅಶ್ವತ ನಾರಯಣ ಇವರನ್ನು ಬಂಧಿಸಿದ್ದಾರೆ.