ಶ್ರೀನಿವಾಸಪುರ : ಭಕ್ತಿ, ಭಕ್ತ ಹಾಗೂ ವಾಸ್ತವದಲ್ಲಿನ ನಡವಳಿಕೆ ಕುರಿತು ತಿಳಿಸಿದ್ದಾರೆ. ಅಂತಹ ಮಹನೀಯರ ಸಾಧನೆ ನಮಗೆ ಸ್ಪೂರ್ತಿಯಾಗಬೇಕಿದ್ದು, ಹಿಂದುಳಿದ ಸಮಾಜ, ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ಮುಖ್ಯವಾಹಿನಿಗೆ ಬರಬೇಕಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
ಪಟ್ಟಣದ ನೌಕರರ ಭವನದಲ್ಲಿ ಮಂಗಳವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶಿವಯೋಗಿ ಸಿದ್ದರಾಮೇಶ್ವರ 583 ನೇ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗುಂಡು ಮಾತನಾಡಿದರು.
ಕ್ಷೇತ್ರಕ್ಕೆ ಸಂಬಂದಿಸಿದಂತೆ ಸಾರ್ವಜನಿಕರು ತಮಗೆ ಬೇಕಾದ ಮೂಲಸೌಲಭ್ಯಗಳ ಬಗ್ಗೆ ನನ್ನ ಗಮನಕ್ಕೆ ತಂದು ಅವುಗಳ ಸರಿಪಡಿಸಿಕೊಂಡು ಸರ್ಕಾರದ ಯೋಜನೆಗಳನ್ನು ಸದ್ಭಳಕೆ ಮಾಡಿಕೊಳ್ಳುವುದು. ಹಾಗು ಸಾರ್ವಜನಿಕರು ತಮ್ಮ ಮಕ್ಕಳ ಶಿಕ್ಷಣ , ಆರೋಗ್ಯ, ಯಾವುದೇ ಇಲಾಖೆಗೆ ಸಂಬಂದಿಸಿದ ಕೆಲಸ ಕಾರ್ಯಗಳು ಇದ್ದ ಪಕ್ಷದಲ್ಲಿ ನನ್ನ ಗಮನಕ್ಕೆ ತಂದು ಅವುಗಳನ್ನು ಪರಿಹರಿಸಿಕೊಳ್ಳವಂತೆ ತಿಳಿಸಿದರು.
ಪಟ್ಟಣದ ಕ್ರೀಡಾಂಗಣದ ಬಳಿ ಎಲ್ಲಾ ಸಮುದಾಯದವರಿಗೂ ನಿವೇಶನ ಗುರ್ತಿಸಿ ಸಮುದಾಯಭವನವನ್ನು ನಿರ್ಮಿಸಿಕೊಡಲು ಚಿಂತನೆ ಮಾಡಿದ್ದೇನೆ. ಭೋವಿ ಸಮುದಾಯದವರು ಒಂದು ನಿವೇಶನ ಕೊಡಿಸುವಂತೆ ನನ್ನ ಬಳಿ ಬೇಡಿಕೆ ಇಟ್ಟಿದ್ದು, ಅದರಂತೆ ಸ್ಥಳದಲ್ಲಿಯೇ ಇದ್ದು ಪುರಸಭೆ ಮುಖ್ಯಾಧಿಕಾರಿಗೆ ಸಮುದಾಯದವರಿಗೆ ನಿವೇಶವನ್ನು ಗುರ್ತಿಸಿಕೊಡುವಂತೆ ಸೂಚಿಸಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ಸಂತರ ವಿಚಾರ ಹಾಗೂ ಸಾಧನೆಗಳನ್ನು ಪ್ರತಿಯೊಬ್ಬ ಯುವಕರು ತಮ್ಮ ಜೀವನದ ಸಾಧನೆಗೆ ಅಳವಡಿಸಿಕೊಳ್ಳಬೇಕು ಎಂದರು.
ಇದೇ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಛೇರಿ ಮುಂಭಾಗದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಹೂವಿನ ಹಾರವನ್ನು ಹಾಕುವುದರ ಮೂಲಕ ನಮನ ಸಲ್ಲಿಸಿದರು ಸಮುದಾಯದಲ್ಲಿನ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್, ಆರ್ಐಗಳಾದ ಗುರುರಾಜರಾವ್, ಮುನಿರೆಡ್ಡಿ, ಜೆ.ವಿ.ಕಾಲೋನಿ ಗ್ರಾ.ಪಂ.ಸದಸ್ಯ ರಾಜಣ್ಣ, ಮುಖಂಡರಾದ ಶಿವಪುರ ಗಣೇಶ್. , ಶಿವಕುಮಾರ್, ಗುರುಮೂರ್ತಿ, ಮುನಿವೆಂಕಟಪ್ಪ, ಟಿ.ಸಿ.ಶಂಕರಪ್ಪ, ಆರ್.ವೆಂಕಟರೆಡ್ಡಿ, ನಕ್ಕಲಗಡ್ಡ ನಾರಾಯಣಸ್ವಾಮಿ, ಕೃಷ್ಣಪ್ಪ, ಭೋವಿ ಕ್ಷೇಮಾಭಿವೃದ್ಧಿ ಸಂಘ ಮತ್ತು ಸರ್ಕಾರಿ ನೌಕರರ ಭೋವಿ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಇದ್ದರು.