58 ಸ್ತ್ರೀಶಕ್ತಿ ಸಂಘಗಳಿಗೆ 2.75ಕೋ.ರೂ. ಸಾಲ-ಮೈಕ್ರೋ ಎಟಿಎಂಗೆ ಚಾಲನೆ ಮನೆಬಾಗಿಲಿಗೆ ಡಿಸಿಸಿ ಬ್ಯಾಂಕ್ ಗ್ರಾಹಕ ಸೇವೆ-ಬ್ಯಾಲಹಳ್ಳಿ ಗೋವಿಂದಗೌಡ

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

ಕೋಲಾರ:- ದೇಶದಲ್ಲೇ ಮೊದಲಬಾಗಿಗೆ ಮೈಕ್ರೋ ಎಟಿಎಂಗೆ ಚಾಲನೆ ನೀಡುವ ಮೂಲಕ ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲೆಗಳ ತಾಯಂದಿರ ಮನೆಬಾಗಿಲಿಗೆ ಡಿಸಿಸಿ ಬ್ಯಾಂಕ್ ಗ್ರಾಹಕ ಸೇವೆ ಒದಗಿಸುತ್ತಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು.
ಗುರುವಾರ ಜಿಲ್ಲೆಯ ಟೇಕಲ್ ಸಮೀಪದ ದಿನ್ನೇರಿಹಾರೋಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯಲ್ಲಿ 58 ಸ್ತ್ರೀಶಕ್ತಿ ಸಂಘಗಳಿಗೆ 2.75 ಕೋಟಿ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.
ತಾಯಂದಿರು ಇನ್ನೂ ಸಂಘದ ಕಾರ್ಯದರ್ಶಿಗೆ ಒಂದು ಮೆಸೆಜ್ ಇಲ್ಲವೇ, ಕರೆ ಮಾಡಿದರೆ ಅವರೇ ನಿಮ್ಮ ಮನೆ ಬಾಗಿಲಿಗೆ ಬಂದು ಮೈಕ್ರೋ ಎಟಿಎಂ ಮುಖಾಂತರ ಹಣ ನೀಡುತ್ತಾರೆ ಮತ್ತು ತಾವು ಸಂಘಕ್ಕೆ ಹಣ ಕಟ್ಟಬೇಕಾದರೆ ತಮ್ಮ ಮನೆ ಬಳಿಯೇ ಹಣ ಪಡೆದು ರಸೀದಿ ನೀಡುತ್ತಾರೆ ಎಂದರು.
ಪ್ರತಿ ಸಂಘದ 10 ಮಂದಿಯು ಬ್ಯಾಂಕಿನ ಖಾತೆ ತೆರೆದಿದ್ದರೆ ಎಲ್ಲಾ ಸದಸ್ಯರಿಗೂ ಪ್ರತ್ಯೇಕ ಎಟಿಎಂ ಕಾರ್ಡನ್ನು ನೀಡಲಾಗುತ್ತದೆ. ಇದರಿಂದ ತಮ್ಮ ಮನೆ ಬಳಿಯೇ ತಾಯಂದಿರು ಸಾಲದ ಹಣ ಪಡೆಯಬಹುದು ನಿಮ್ಮ ಹಣವು ಸುರಕ್ಷಿತವಾಗಿರುತ್ತದೆ ಎಂದರು.
ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಬೀಳಲಿದ್ದು, ನಿಮ್ಮ ಹಣ ನಿಮ್ಮ ಖಾತೆಗೆ ಸಂದಾಯವಾಗುತ್ತದೆ. ಇದು ದೇಶದಲ್ಲಿಯೇ ನಮ್ಮ ರಾಜ್ಯದ ದಿನ್ನೇರಿಹಾರೋಹಳ್ಳಿ ಗ್ರಾಮದ ಕೃಷಿ ಪತ್ತಿನ ಸೊಸೈಟಿಯಲ್ಲಿ ಪ್ರಪ್ರಥಮ ಬಾರಿಗೆ ಇಂದು ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ, ನಾಳೆಯಿಂದ ಎಲ್ಲಾ ಕಡೆ ಚಾಲನೆಯಾಗುತ್ತದೆ ಎಂದರು.
ಶಾಸಕ ಕೆ.ವೈ.ನಂಜೇಗೌಡರ ಒತ್ತಾಯದಂತೆ ಮಾಲೂರು ತಾಲ್ಲೂಕಿನಲ್ಲಿ ಎಲ್ಲಾ ಸೊಸೈಟಿಗೆ ಸಾಲ ಯೋಜನೆ ನೀಡುತ್ತಿದ್ದು ಅವರ ಸಹಕಾರದಿಂದ ಇಂದು ತಾಯಂದಿರು ಸಾಲ ಪಡೆದು ಮರುಪಾವತಿ ಮಾಡಬೇಕೆಂದರು.
ಮೈಕ್ರೋ ಎಟಿಎಂಗೆ
ನಂಜೇಗೌಡ ಚಾಲನೆ
ಶಾಸಕ ಕೆ.ವೈ.ನಂಜೇಗೌಡ ಮೈಕ್ರೋ ಎಟಿಎಂಗೆ ಚಾಲನೆ ನೀಡಿ, ಇಂದು ಎರಡು ಜಿಲ್ಲೆಗಳ ರೈತರು, ತಾಯಂದಿರಿಗೆ ಸಾಲ ಸೌಲಭ್ಯ ಸಿಗುವಂತಾಗಲು ಮತ್ತು ಡಿಸಿಸಿ ಬ್ಯಾಂಕ್ ಇಷ್ಟೊಂದು ಅಭಿವೃದ್ದಿ ಹೊಂದಲು ಅಧ್ಯಕ್ಷರಾದ ಬ್ಯಾಲಹಳ್ಳಿ ಗೋವಿಂದೇಗೌಡರ ಶ್ರಮ ಶ್ಲಾಘನೀಯವೆಂದರು.
ಇಂದು ನಮ್ಮ ತಾಲ್ಲೂಕಿಗೆ ಮೈಕ್ರೋ ಎಟಿಎಂ ಚಾಲನೆ ದೊರೆತಿದ್ದು. ಸಂಘದ ಎಲ್ಲಾ ಸದಸ್ಯರಿಗೆ ಮನೆ ಬಾಗಿಲಿಗೆ ಹಣ ಸಂದಾಯವಾಗುತ್ತದೆ. ಒಟ್ಟು ದಿನ್ನೇರಿಹಾರೋಹಳ್ಳಿ ಸೊಸೈಟಿಗೆ 11 ಕೋಟಿ ರೂಪಾಯಿ ಸಾಲ ಕೊಟ್ಟಿದ್ದಾರೆ ಎಂದರು.
ಮಾಲೂರು ತಾಲ್ಲೂಕಿನ ಎಲ್ಲಾ ಸೊಸೈಟಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಒಟ್ಟು 110 ಕೋಟಿ ಸ್ತ್ರೀಶಕ್ತಿ ಸಂಘಗಳಿಗೆ, ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಿದ್ದು ಎರಡು ಜಿಲ್ಲೆಗೆ ಡಿಸಿಸಿ ಬ್ಯಾಂಕ್ ನಮ್ಮಗಳಿಗೆ ವರದಾನವಾಗಿದೆ ಎಂದರು.
ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಬ್ಯಾಂಕ್ ಕಾರ್ಯ ಮಾಡುತ್ತಿದ್ದು ವಿಶೇಷವಾಗಿಯು ಗ್ರಾಮಾಂತರ ಮಟ್ಟದ ಬಡಮಹಿಳಾ ಸ್ತ್ರೀಶಕ್ತಿ ಸಂಘಗಳನ್ನು ರಚನೆ ಮಾಡಿ ಅಂತಹವುಗಳಿಗೆ ಸಾಲ ನೀಡಿ ಆರ್ಥಿಕವಾಗಿ ಮುಂದೆ ಬರಲು ಸಹಕಾರಿಯಾಗಿದೆ. ಇನ್ನೂ ಸ್ತ್ರೀಶಕ್ತಿ ಸಂಘಗಳಿಗೆ ಪ್ರತಿ ಸಂಘಕ್ಕೆ 5 ಲಕ್ಷ ಸಿಗುತ್ತಿದ್ದು ಅದೇ ಸಾಲವನ್ನು 10 ಲಕ್ಷಕ್ಕೆ ಏರಿಸಬೇಕೆಂದು ಮುಂದಿನ ವಿಧಾನಸಭಾ ಅದಿವೇಶನದಲ್ಲಿ ನನ್ನ ಮನವಿಯಿದ್ದು ಇದಕ್ಕೆ ಇನ್ನೂ ಅನೇಕ ಮಂದಿ ಶಾಸಕರು ಕೈಜೋಡಿಸುತ್ತಿದ್ದಾರೆ ಎಂದರು.
ಇದೇ ವೇಳೆ ಸಾಂಕೇತಿಕವಾಗಿ ಸೊಸೈಟಿ ಸಿಇಒ ತಿರುಮಲೇಗೌಡರು ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೆಗೌಡ, ಶಾಸಕ ಕೆ.ವೈ.ನಂಜೇಗೌಡರ ಸಮ್ಮುಖದಲ್ಲಿ ಅದರ ಬಳಕೆ ಬಗ್ಗೆ ಮೈಕ್ರೋ ಎಟಿಎಂಗೆ ಚಾಲನೆ ನೀಡಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಚನ್ನರಾಯಪ್ಪ, ದಿನ್ನೇರಿಹಾರೋಹಳ್ಳಿ ಸೊಸೈಟಿ ಅಧ್ಯಕ್ಷ ಎಸ್.ರಾಜಪ್ಪ, ಉಪಾಧ್ಯಕ್ಷ ವೆಂಕಟಸ್ವಾಮಿ, ಸಂಸ್ಥಾಪಕ ಕೆಂಚಪ್ಪ, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರಾದ ಎಸ್.ವಿ.ಗೋವರ್ಧನ್‍ರೆಡ್ಡಿ, ಹುಳದೇನಹಳ್ಳಿ ಸೊಸೈಟಿ ಅಧ್ಯಕ್ಷರಾದ ಹೆಚ್.ವಿ.ಚಂದ್ರಶೇಖರಗೌಡ, ನಾರಾಯಣಸ್ವಾಮಿ, ಟಿ.ಪಿ.ಶ್ರೀನಿವಾಸ್, ಡಿಸಿಸಿ ಬ್ಯಾಂಕಿನ ಕೃಷ್ಣಪ್ಪ, ಸಿಇಒ ತಿರುಮಲೇಗೌಡ, ಸಂಘದ ನಿರ್ದೇಶಕರಾದ ಶಂಕರಪ್ಪ, ದೇವರಾಜ್, ರಾಮಕೃಷ್ಣಪ್ಪ, ರಾಜಗೋಪಾಲ್, ಗೋವಿಂದಪ್ಪ, ವೈ.ಎನ್.ನಾರಾಯಣಸ್ವಾಮಿ, ಮಂಜುನಾಥ, ಮಾಜಿ ಅಧ್ಯಕ್ಷರಾದ ತಿಮ್ಮೇಗೌಡ, ನರಸಿಂಹಪ್ಪ ಮತ್ತಿತರರಿದ್ದರು.