JANANUDI.COM NETWORK

ಬೆಂಗಳೂರು:ಕಳೆದ 6 ವರ್ಷಗಳಲ್ಲಿ ರಾಜ್ಯ ಸರ್ಕಾರದ ಬಾಲ ಮಂ0ದಿರಗಳಿ0ದ 510 ಮಕ್ಕಳು ನಾಪತ್ತೆಯಾಗಿದ್ದಾರೆ. ಮಕ್ಕಳ ರಕ್ಷಣಾ ನಿರ್ದೇಶನಾಲಯ ಈ ಮಾಹಿತಿ ನೀಡಿದೆ. ಕೋಲಾರದ ಆರ್.ಟಿ.ಐ. ಕಾರ್ಯಕರ್ತ ಕೆ.ಸಿ. ರಾಜಣ್ಣ ಎ0ಬುವರು ಮಾಹಿತಿ. ಹಕ್ಕು ನಿಯಮದಡಿ ಕೇಳಿದ್ದ ಪ್ರಶ್ನೆಯಿಂದ ಈಮಾಹಿತಿ ದೊರಕಿದೆ
ನಾಪತ್ತೆಯಾಗಿರುವವರಲ್ಲಿ ಬಾಲಕಿಯರೇ ಹೆಚ್ಚು ಇದ್ದಾರೆ ಎಂಬ ಆತಂಕಕಾರಿ ವಿಷಯವಾಗಿದೆ. ಹೀಗೆ ನಾಪತ್ತೆಯಾಗಿರುವವರ ಸುಳಿವು ಈವರೆಗೂ ಸಿಕ್ಕಿಲ್ಲ ಎಂದು ತಿಳಿದು ಬಂದಿದೆ .
ಬೆ0ಗಳೂರು ನಗರ, ಮೈಸೂರು, ಧಾರವಾಡ, ಬಳ್ಳಾರಿ ಜಿಲ್ಲೆಯಲ್ಲಿನ ಬಾಲಮಂದಿರಗಳಿ0ದ ಹೆಚ್ಚು ಮಕ್ಕಳು ನಾಪತ್ತೆಯಾಗಿದ್ದಾರೆ. ಬಾಲಮಂದಿರಗಳಿ0ದ ನಾಪತ್ತೆಯಾದ ಮಕ್ಕಳನ್ನು ಪತ್ತೆ ಹಚ್ಚಲು ಸರ್ಕಾರಕ್ಕೆ ನಿರ್ದೇಶನ ವೀಡುವ0ತೆ ರಾಜ್ಯಪಾಲರು, ಲೋಕಾಯುಕ್ತ ನ್ಯಾಯಮೂರ್ತಿ, ಪೆÇಲೀಸ್ ಮಹಾನಿರ್ದೇಶಕರು ಹಾಗೂ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ಕೆ.ಸಿ.ರಾಜಣ್ಣ ತಿಳಿಸಿದ್ದಾರೆ