

ಬೆಂಗಳೂರು: ಉದ್ಯಮಿಗೆ 5 ಕೋಟಿ ರೂಪಾಯಿ ವಂಚನೆ ಎಸಗಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ, ವಿಚಾರಣ ಸಮಯದಲ್ಲಿ ಕುಸಿದು ಬಿದ್ದುದರಿಂದ ಇವಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆಯ ವೇಳೆಗೆ ಮಹಿಳಾ ಸಾಂತ್ವನ ಕೇಂದ್ರದಿಂದ ಚೈತ್ರಾಳನ್ನು ಸಿಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದಿದ್ದು, 45 ನಿಮಿಷದ ವಿಚಾರಣೆ ವೇಳೆ ಆಕೆ ಪ್ರಜ್ಞಾಹೀನ ಸ್ಥಿತಿಗೆ ಬಂದು ಕುಸಿದು ಬಿದ್ದಿದ್ದಾಳೆ. ವಿಚಾರಣೆ ವೇಳೆ ಮೂರ್ಛೆ ಹೋದ ಚೈತ್ರಾಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸದ್ಯ ತುರ್ತು ಚಿಕಿತ್ಸಾ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತಿದ್ದಾಳೆ.
ಆದರೆ ಇತ್ತೀಚೆಗಿನ ವರದಿ ಬಂದಂತೆ, ಆಸ್ಪತೆಯಲ್ಲಿ ಚೈತ್ರಗೆ ತಪಾಸಣೆ ನೆಡೆದಾಗ, ಮೂರ್ಛೆ ರೋಗದ ಲಕ್ಷಣಗಳು ಕಾಣಲಿಲ್ಲ ಎಂದು ವೈದ್ಯಕೀಯ ವರದಿ ತಿಳಿಸಿದೆ. ಅಂದ ಹಾಗೇ ನಿನ್ನೆ ಚೈತ್ರ ಬಟ್ಟೆ ತೊಳೆಯುವ ಸಾಬುನನನ್ನು ತರಿಸಿದ್ದಳೆಂದು ತಿಳಿದುಬಂದಿದೆ. ಹಾಗಾಗಿ ವಂಚಕಿ ಚೈತ್ರ ಕುಸಿದು ಬಿದ್ದದು ಕೂಡ ವಂಚಿಸಲು ರೂಪಿಸಿದ ನಾಟಕವೆಂಬತ್ತೆ ಅನುಮಾನ ವ್ಯಕ್ತವಾಗುತ್ತದೆ.