ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ
ಕೋಲಾರ : ಒಂದು ದಶಕದಿಂದ ಬೀಗ ಜಡಿದಿದ್ದ ಶ್ರೀನಿವಾಸಂದ್ರ ವ್ಯವಸಾಯ ಸಹಕಾರ ಸಂಘವನ್ನು ಪುನಶ್ಚತನಗೊಳಿಸಿ ಕಟ್ಟಡವನ್ನು ೫ ಲಕ್ಷ ರೂ.ಗಳ ವೆಚ್ಚದಲ್ಲಿ ದುರಸ್ಥಿಗೊಳಿಸಿ ಈ ಭಾಗದ ರೈತರಿಗೆ ೧೦ ಕೋಟಿ ರೂ.ಗಳ ಸಾಲ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದೆಗೌಡ ತಿಳಿಸಿದರು . ಶ್ರೀನಿವಾಸಂದ್ರ ಗ್ರಾಮದಲ್ಲಿ ರೈತರು ಮತ್ತು ಸ್ತ್ರೀ ಶಕ್ತಿ ಸಂಘಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಶ್ರೀನಿವಾಸಸಂದ್ರ ಗ್ರಾಮ ಪಂ , ವ್ಯಾಪ್ತಿಗೆ ಬರುವ ೧೮ ಗ್ರಾಮಗಳ ಬಡ ರೈತರನ್ನು ಪಟ್ಟಿ ಮಾಡಿ ಡಿಸಿಸಿ ಬ್ಯಾಂಕ್ ವತಿಯಿಂದ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿ ರೈತರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಸಕಲ್ಪ ತೊಡುವುದಾಗಿ ತಿಳಿಸಿದರು . ಜಾತಿ ಧರ್ಮ ಪಕ್ಷಗಳ ಬೇದಭಾವವನ್ನು ನೋಡದೆ ಬಡ ಮಹಿಳೆಯರು , ಬಡ ರೈತರು ಆರ್ಥಿಕವಾಗಿ ಸದೃಡರಾಗಬೇಕು , ೫ ಗುಂಟೆ , ೧೦ ಗುಂಟೆ ಇರುವ ರೈತರಿಗೂ ಬ್ಯಾಂಕ್ ಸಾಲವನ್ನು ನೀಡಲಿದೆ . ಇದರಿಂದ ಕಟ್ಟಕಡೆಯ ರೈತನಿಗೆ ಆರ್ಥಿಕವಾಗಿ ಬ್ಯಾಂಕ್ ಸಹಾಯ ಹಸ್ತ ನೀಡಲಿದೆ ಎಂದರು.
ನೀಡಿದರು . ರೈತರು ಕೃಷಿ ಭೂಮಿ ಮೇಲೆ ಶೂನ್ಯ ಬಡ್ಡಿ ದರದಲ್ಲಿ ಅನುಸರಿಸಬೇಕಾದ ಕ್ರಮಗಳ ಮಾಹಿತಿ ಬಡವರಿಗೆ ಕಲ್ಪವೃಕ್ಷವಾಗಿ ನಿರ್ವಹಿಸುತ್ತಿರುವ ಬ್ಯಾಂಕ್ ವಿರುದ್ಧವಾಗಿ ಕೆಲವರು ಅಪಪ್ರಚಾರದಲ್ಲಿ ತೊಡಗಿದರು ಬಡವರಿಗೆ ಮಾಡುತ್ತಿರುವ ಸೇವೆಯನ್ನು ಪ್ರಮಾಣಿಕವಾಗಿ ಮುಂದುವರೆಸುತ್ತೇನೆ , ಎಲ್ಲಾ ಮುಖಂಡರು ರೈತರ ಮನೆ ಮನೆಗೆ ಭೇಟಿ ನೀಡಿ ರಾಜಕೀಯ ಪಕ್ಷದ ಹೆಸರು ಪ್ರಸ್ತಾಪಿಸದೆ ರೈತರ ಪಟ್ಟಿ ಮಾಡಿ , ಅಗತ್ಯವಿರುವ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ವ್ಯವಸ್ಥೆ ಮಾಡಬೇಕು , ಪಿ ನಂಬರ್ ಹೊಂದಿರುವ ಜಮೀನುಗಳಿಗೂ ಸಹ ಸಾಲ ನೀಡಲಾಗುವುದು ಆದರೆ ನಿಮ್ಮ ಆಧಾರ ಕಾರ್ಡ್ ಇತರೆ ಬ್ಯಾಂಕ್ಗಳಲ್ಲಿ ಜೊಡಣೆಯಾಗಿರಬಾರದು ಮತ್ತು ಕೋಳಿ ಫಾರಂ ಮಾಡಲು ಕುರಿ ಸಾಕಾಣಿಕೆ ಸೇರಿದಂತೆ ವಿವಿಧ ಕಸಬುಗಳಿಗೆ ಸಾಲ ನೀಡಲಾಗುವುದು ಇವುಗಳನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು . ಶ್ರೀನಿವಾಸಂದ ಪಂಚಾಯತಿ ಸಂಘಕ್ಕೆ ೧೦ ಕೋಟಿ ಸಾಲವನ್ನು ನೀಡಲು ನಾನು ಸಿದ್ಧನಾಗಿದ್ದು ನೀವುಗಳು ಮುಂದೆ ಬ ೦ ದು ರೈತರ ಪಟ್ಟಿ ಮಾಡಿ ಅವರಿಗೆ ಸಾಲ ದೊರಕುವ ನಿಟ್ಟಿನಲ್ಲಿ ಸಹಕರಿಸಿ ಎಂದು ಹೇಳಿದರು . ಶಾಸಕಿ ರೂಪಶಶಿಧರ್ ಮಾತನಾಡಿ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ರೈತರ ಮಹಿಳೆಯರ ಪಾಲಿಗೆ ಡಿಸಿಸಿ ಬ್ಯಾಂಕ್ ಆಪ್ತಭಾಂದವ ರೀತಿಯಲ್ಲಿ ಪ್ರಮಾಣಿಕ ಸೇವೆಯನ್ನು ನೀಡುತ್ತಿದೆ , ದೇಶದಲ್ಲಿ ಹಲವು ರಾಷ್ಟ್ರೀಕೃತ ಬ್ಯಾಂಕ್ಗಳು ಕಾರ ನಿರ್ವಹಿಸುತ್ತಿವೆ ಆದರೆ ಅವುಗಳಲ್ಲಿ ಒಂದು ಬ್ಯಾಂಕ್ ಸಹ ನಿಮ್ಮ ಮನೆ ಬಾಗಿಲಿಗೆ ತೆರಳಿ ಸಾಲ ನೀಡುವಲ್ಲಿ ಮುಂದೆ ಬಂದಿಲ್ಲ , ಆದರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಕೆಜಿಎಫ್ ತಾಲ್ಲೂಕಿನಲ್ಲಿ ೧೦೦ ಕೋಟಿ ಸಾಲ ನೀಡುವುದಾಗಿ ಆಶ್ವಾಸನೆ ನೀಡುತ್ತಿದ್ದು ಸರ್ಮಪಕವಾಗಿ ರೈತರು ಸದ್ಬಳಕೆ ಮಾಡಿಕೊಂಡು ರೈತರು ತಮ್ಮ ಜಮೀನುಗಳಲ್ಲಿ ಉತ್ತಮ ಬೆಳೆ ಬೆಳೆಯಲು ಮುಂದೆ ಬನ್ನಿ ಎಂದರು .
ಡಿಸಿಸಿ ಬ್ಯಾಂಕ್ ಉತ್ತಮ ಸೇವೆ ಮಾಡುತ್ತಿರುವ ಹಿನ್ನಲೆಯಲ್ಲಿ ನಬಾರ್ಡ್ ಹಾಗೂ ಅಪೇಕ್ ಬ್ಯಾಂಕ್ ಡಿಸಿಸಿ ಬ್ಯಾಂಕ್ನ ಅಧ್ಯಕ್ಷರನ್ನು ಗುರ್ತಿಸಿ ಸನ್ಮಾನವನ್ನು ಮಾಡುತ್ತಿದೆ ಇದು ಮಹಿಳೆಯರಿಗೆ ರೈತರಿಗೆ ಹೆಮ್ಮೆಯ ಸಂಗತಿಯಾಗಿದೆ ತಾಲ್ಲೂಕಿನ ಕಟ್ಟ ಕಡೆಯ ವ್ಯಕ್ತಿಗೂ ಸಾಲ ಸೌಲಭ್ಯ ದೊರಕುವಂತೆ ಕಮವಹಿಸಲಾಗುವುದು ಎಂದು ಹೇಳಿದರು . ಕಾರ್ಯಕ್ರಮದಲ್ಲಿ ಮಾಜಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹಾಗು ಹಿರಿಯ ಕಾಂಗ್ರೆಸ್ ಮುಖಂಡ ವೆಂಕಟಕೃಷ್ಣಾರೆಡ್ಡಿ , ಘಟ್ಟಮಾದಮಂಗಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಹರಿಕೃಷ್ಣ , ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಅಪ್ಪಿ ವೆಂಕಟರಾಮರೆಡ್ಡಿ , ಕೃಷ್ಣಮೂರ್ತಿ , ಜಕ್ಕರಸಕುಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚಂದಪ್ಪಕಮ್ಮಸಂದ್ರ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ನಾಗರಾಜ್ , ಆನಂದಮೂರ್ತಿ , ಬಾಲಕೃಷ್ಣ , ಸುರೇಂದಗೌಡ , ಶ್ರೀನಿವಾಸರೆಡ್ಡಿ , ಎನ್ಟಿಆರ್ , ಪಾರಂಡಹಳ್ಳಿ ಗ್ರಾಮ ಪಂಚಾಯ್ತಿ , ವೆಂಕಟೇಶ್ , ಎಂ.ಬಿ.ಕೃಷ್ಣಪ್ಪ ಹಾಗೂ ಇತರರು ಹಾಜರಿದ್ದರು .