ಶ್ರೀನಿವಾಸಪುರ : ತಾಲೂಕಿನ ಯಲ್ದೂರು ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ಸಂಘದ ಅಧ್ಯಕ್ಷ ಬಿ.ವಿ.ಆದಿನಾರಾಯಣ ಮಾತನಾಡಿ 2023-24ನೇ ಸಾಲಿನಲ್ಲಿ 5.90 ಲಕ್ಷರೂ ವ್ಯಾಪಾರ ಲಾಭ ಮತ್ತು ನಿವ್ವಳ ಲಾಭ 2.06 ಲಕ್ಷರೂ ಬಂದಿದೆ. ಬಂದಿರುವ ಲಾಭಾಂಶದಲ್ಲಿ ಹಾಲು ಉತ್ಪಾದಕರಿಗೆ ಬೋನಸ್ ನೀಡಲಾಗುತ್ತದೆ ಎಂದು ತಿಳಿಸಿದರು.
ಕೋಚಿಮುಲ್ ಶ್ರೀನಿವಾಸಪುರದ ವಿಸ್ತರಣಾಧಿಕಾರಿ ಎಸ್. ವಿನಾಯಕ ಮಾತನಾಡಿ ರೈತರು ಡೇರಿಗೆ ಉತ್ತಮ ಕೊಬ್ಬಿನ ಅಂಶವಿರುವ ಹಾಲು ಸರಬರಾಜು ಮಾಡಬೇಕು. ಹಾಲಿನಲ್ಲಿ ಕೊಬ್ಬಿನಾಂಶ ಹೆಚ್ಚಿಸಲು ಹಸುಗಳಿಗೆ ನೀಡುವ ಆಹಾರದಲ್ಲಿ ಕ್ಯಾಲ್ಸಿಯಮ್ ಪೌಡರ್ ಬೆರೆಸಬೇಕು. ರೈತರ ಬೇಡಿಕೆಯಂತೆ ಡೇರಿಯ ಬಳಿ ಹಾಲು ಕರೆಯುವ ಯಂತ್ರಗಳನ್ನು ಕೋಚಿಮುಲ್ ಚುನಾವಣೆಯ ನಂತರ ಅಳವಡಿಸಲಾಗುವುದು ಎಂದು ತಿಳಿಸಿದರು.
ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕರಾದ ಬೀದರೆಡ್ಡಿ, ಡಿÀ.ನಂಜಾರೆಡ್ಡಿ, ಎಮ್.ನಾಗಪ್ಪ, ಎಸ್.ಎನ್.ಮುನಿಶಾಮಿ, ಆರ್.ವೇಣುಗೋಪಾಲ, ವೆಂಕಟರವಣ, ಎಮ್.ವೇಣುಗೋಪಾಲ, ಭಾಗ್ಯಮ್ಮ, ಲಕ್ಷಿ್ಮದೇವಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಎಸ್.ವೆಂಕಟರಾಮರೆಡ್ಡಿ, ಹಾಲು ಪರೀಕ್ಷಕ ಕೋದಂಡರಾಮಯ್ಯ, ಸಹಾಯಕ ಎನ್.ಮುನಿರಾಜು ಇದ್ದರು.