450 ವರ್ಷದ ಸಂಭಮ್ರನದಲ್ಲಿರುವ ಕುಂದಾಪುರ ರೋಜರಿ ಚರ್ಚ್ ದುರಸ್ಥಿ ಮತ್ತು ನವ್ಯ ಮಾರ್ಪಾಡು ಯೋಜನೆಗಳು ಶ್ರಮದಾನದ ಮೂಲಕ ಆರಂಭ

JANANUDI.COM NETWORK

 

450 ವರ್ಷದ ಸಂಭಮ್ರನದಲ್ಲಿರುವ ಕುಂದಾಪುರ ರೋಜರಿ ಚರ್ಚ್ ದುರಸ್ಥಿ ಮತ್ತು ನವ್ಯ ಮಾರ್ಪಾಡು ಯೋಜನೆಗಳು ಶ್ರಮದಾನದ ಮೂಲಕ ಆರಂಭ 

ಕುಂದಾಪುರ, ಫೆ.9: ಉಡುಪಿ ಧರ್ಮ ಪ್ರಾಂತ್ಯದ ಅತ್ಯಂತ ಹಿರಿಯ ಇಗರ್ಜಿಯಾದ ಕುಂದಾಪುರ ಹೋಲಿ ರೋಜರಿ ಚರ್ಚ್ ತನ್ನ 450 ನೇ ವರ್ಷದ ಸಂಭ್ರಮಾಚಣೆಯ ವರ್ಷದಲ್ಲಿರುವಾಗ, ಚರ್ಚ್ ದುರಸ್ಥಿ ಹಾಗೂ ಚರ್ಚಿನ ನವ್ಯ ಮಾರ್ಪಾಡು ಯೋಜನೆಗಳ ಪ್ರಯುಕ್ತ ಚರ್ಚಿನ ಮೆಲ್ಛಾವಣಿ ದುರಸ್ಥಿಯನ್ನು ಭಾನುವಾರ ಫೆ. 9 ರಂದು ಶ್ರಮದಾನದ ಮೂಲಕ ಆರಂಭಿಸಿ, ನವ್ಯ ಮಾರ್ಪಾಡು ಯೋಜನೆಗೆ ಚಾಲನೆಯನ್ನು ನೀಡಲಾಯಿತು.
ಭಾನುವಾರದ ಪವಿತ್ರ ಬಲಿದಾನದ ಬಳಿಕ ಚರ್ಚಿನ ಪ್ರಧಾನ ಧರ್ಮಗುರು ಅ| ವಂ| ಸ್ಟ್ಯಾನಿ ತಾವ್ರೊ ಅವರು ಪ್ರಾರ್ಥನೆಯ ಮೂಲಕ ಶ್ರಮದಾನ ಆರಂಭಗೊಂಡಿತು. 450 ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಇಗರ್ಜಿಯ ಪೀಠದ ಶೈಲಿಯನ್ನು ಉನ್ನತಿಕರಣ ಗೊಳಿಸಿ ನೂತನ ಶೈಲಿಯಲ್ಲಿ ನಿರ್ಮಾಣ ಮತ್ತು ಹಲವಾರು ನೂತನ ಯೋಜನೆಗಳ ಮೂಲಕ ನವ್ಯ ಮಾರ್ಪಾಡುಗಳಿಂದ ಉನ್ನತಿ ಗೊಳಿಸು ಯೋಜನೆಗಳು ಹಮ್ಮಿಕೊಂಡಿದ್ದು, ಇದಕ್ಕಾಗಿ ಆರಂಭಗೊಂಡ ಶ್ರಮದಾನದಕ್ಕೆ ಕುಂದಾಪುರ ಕ್ರೈಸ್ತ ಸಮಾಜದವರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿ ಸಹಕಾರ ನೀಡಿದರು. ಈ ಸಂದರ್ಭದಲ್ಲಿ ಉಪಾಧ್ಯಾಕ್ಷ ಎಲ್.ಜೆ.ಫೆರ್ನಾಂಡಿಸ್ ಶ್ರಮಾದಾನದ ರೂಪು ರೇಖೆಗಳನ್ನು ವಿವರಿಸಿದರು. ಸಹಾಯಕ ಧರ್ಮಗುರು ವಂ|ವಿಜಯ್ ಜೊಯ್ಸನ್ ಡಿಸೋಜಾ, ಪ್ರಾಂಶುಪಾಲ ಪ್ರವೀಣ್ ಅಮ್ರತ್ ಮಾರ್ಟಿಸ್, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ.  13 ವಾಳೆಯ ಗುರಿಕಾರರು, ಪ್ರತಿನಿಧಿಗಳು, ಆರ್ಥಿಕ ಮಂಡಳಿಯ ಸದಸ್ಯರು, ಚರ್ಚಿನ ವಿವಿಧ ಸಂಘಟನೇಯ ಸದಸ್ಯರು ಶ್ರಮದಾನದಲ್ಲಿ ಭಾಗಿಯಾದರು. ಕುಂದಾಪುರ ಕಥೋಲಿಕ್ ಸ್ತ್ರೀ ಸಂಘಟನೇಯ ಮಹಿಳೆಯರು ಭೋಜನವನ್ನು ಏರ್ಪಡಿಸಿದ್ದರು.