450 ವರ್ಷಾಚರಣೆಯಲ್ಲಿರುವ ರೋಜರಿ ಮಾತಾ ಚರ್ಚಿಗೆ,ರೋಜರಿ ಸೊಸೈಟಿಯಿಂದ 1 ಲಕ್ಷ ರೂಪಾಯಿ ದೇಣಿಗೆ

JANANUDI.COM NETWORK

ಕುಂದಾಪುರ,ಒ.10: ಉಡುಪಿ ಧರ್ಮ ಪ್ರಾಂತ್ಯದ ಅತ್ಯಂತ ಹಿರಿಯ ಇಗರ್ಜಿಯಾದ ರೋಜರಿ ಮಾತಾ ಇಗರ್ಜಿಯು 450 ವರ್ಷಾಚರಣೆಯ ಸಂಭ್ರಮದಲ್ಲಿದ್ದು, ಇಗರ್ಜಿಯು ಹಲವಾರು ಯೋಜನೆಗಳ ಮೂಲಕ ನವೀಕ್ರತಗೊಳ್ಳುತ್ತಾ ಇದೆ. ಈ ಯೋಜನೆಗಳ ನೆರವಿಗಾಗಿ ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಸಂಸ್ಥೆಯು ರೋಜರಿ ಮಾತಾ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಅವರಿಗೆ ದೇಣಿಗೆಯ ರೂಪದಲ್ಲಿ ಒಂದು ಲಕ್ಷ ರೂಪಾಯಿಗಳ ಚೆಕ್ಕೆನ್ನು ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ಅಧ್ಯಕ್ಷರಾದ ಜೋನ್ಸನ್ ಡಿ’ಆಲ್ಮೇಡಾ ಹಸ್ತಾಂತರಿಸಿದರು.


“ಚೆಕ್ಕನ್ನು ಹಸ್ತಾಂತರಿಸಿ ಮಾತನಾಡಿದ ಅಧ್ಯಕ್ಷರಾದ ಜೋನ್ಸನ್ ಡಿ’ಆಲ್ಮೇಡಾ ‘ವಲಯ ಪ್ರಧಾನ ಇಗರ್ಜಿಯಾದ ಇದೇ ರೋಜರಿ ಮಾತೆಯ ಆಶಿರ್ವಾದದಲ್ಲಿ, 28 ವರ್ಷಗಳ ಹಿಂದೆ ಅಂದಿನ ಅಧ್ಯಾತ್ಮಿಕ ನಿರ್ದೇಶಕ ಮತ್ತು ಕಥೊಲಿಕ್ ಸಭಾದ ಹಿರಿಯರಿಂದ ಆರಂಭಿಸಲ್ಪಟ್ಟ ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಮೇಲೆ ರೋಜರಿ ಮಾತೆಯ ಆಶಿರ್ವಾದಿಸುತ್ತಲೆ ಬಂದಿದ್ದಾಳೆ. ಇಂದು ಈ ಸಂಸ್ಥೆ ಉನ್ನತ ಮಟ್ಟದಲ್ಲಿ ಬೆಳೆದಿದೆ. ಅದಕ್ಕೆ ಪ್ರತ್ಯೋಪಕಾರವಾಗಿ ನಾವು ಈ ದೇಣಿಗೆಯನ್ನು ನೀಡುತಿದ್ದೆವೆ’ ಎಂದು ಹೇಳಿದರು.
ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಕ್ರತ್ಞತೆ ಸಲ್ಲಿಸುತ್ತಾ ‘ಈ ಸಂಸ್ಥೆ ಕೂಡ ಚಿರಾಯುವಾಗಿರಲಿ, ಸಂಸ್ಥೆ ಕೂಡ 450 ವರ್ಷ ಸಂಭ್ರಾಮಚರಣೆ ಆಚರಿಸುವ ಭಾಗ್ಯ ಲಭಿಸಲಿ ಮತ್ತು ಸಂಸ್ಥೆ ಇನ್ನು ಹೆಚ್ಚು ಎತ್ತರಕ್ಕೆ ಬೆಳೆಯಲಿ’ ಎಂದು ಆಶಿರ್ವದಿಸಿದರು.


ಈ ಸಂದರ್ಭದಲ್ಲಿ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ನ ನಿರ್ದೇಶಕರಾದ ವಿನೋದ್ ಕ್ರಾಸ್ಟೊ, ಶಾಂತಿ ಕರ್ವಾಲ್ಲೊ, ಡಯಾನಾ ಡಿಆಲ್ಮೇಡಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಸ್ಕಲ್ ಡಿಸೋಜಾ ಮತ್ತು ಕುಂದಾಪುರ ಶಾಖೆಯ ನಿರ್ವಹಣಾಧಿಕಾರಿ ಮೇಬಲ್ ಪುಟಾರ್ಡೊ ಉಪಸ್ಥಿತರಿದ್ದರು.