ಬಹರೈನ್ ನಿಂದ ಇಂದು ಮಂಗಳೂರಿಗೆ ಬಂದಿಳಿಯಲಿದೆ 40 ಮೆಟ್ರಿಕ್ ಟನ್ ಆಕ್ಸಿಜನ್

JANANUDI.COM NETWORK


ಮಂಗಳೂರು,ಮೇ.5 ದೇಶದಲ್ಲಿ ಉಂಟಾಗಿರುವ ಆಕ್ಸಿಜನ್ ಪೂರೈಕೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಸಮುದ್ರ ಸೇತು-2 ಕಾರ್ಯಾಚರಣೆಯ ಅಂಗವಾಗಿ ಭಾರತದ ನೌಕಾಸೇನಾ ಹಡಗು ಐಎನ್ಎಸ್ ತಲ್ವಾರ್, 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಮಂಗಳೂರು ಬಂದರಿಗೆ ತಲುಪಲಿದೆ. ಈಗಾಗಲೇ ಕೇಂದ್ರ ಸರ್ಕಾರ ಆಮ್ಲಜನಕದ ಉಚಿತವಾಗಿ ನಿರ್ವಹಣೆ ಮಾಡುವಂತೆ ನವಮಂಗಳೂರು ಬಂದರಿಗೆ ಸೂಚನೆ ನೀಡಿದೆ.
ಇದಲ್ಲದೆ ಬಹರೈನ್ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋ ಕಂಟೈನರ್ಗಳಲ್ಲಿ 40 ಮೆಟ್ರಿಕ್ ಟನ್ ಆಕ್ಸಿಜನ್ ಬರಲಿದೆ. ಆಕ್ಸಿಜನ್ ಜೊತೆಗೆ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ವೈಧ್ಯಕೀಯ ಉಪಕರಣಗಳೂ ಬರಲಿವೆ.ಈ ಹೊತ್ತಿಗೆ ನವಮಂಗಳೂರು ಬಂದರಿಗೆ ಈ 40 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿಳಿದಾಗಿರಬಹುದು.
ವಿದೇಶಗಳಿಂದ ಆಕ್ಸಿಜನ್ ತರುವ ಉದ್ದೇಶದಿಂದ ಭಾರತೀಯ ನೌಕಾಪಡೆ ಆಪರೇಷನ್ ಸಮುದ್ರ ಸೇತು 2 ಕಾರ್ಯಾಚರಣೆ ಆರಂಭಿಸಿದೆ. ಏಳು ಭಾರತೀಯ ನೌಕಾ ಹಡಗುಗಳಾದ ಕೋಲ್ಕತ್ತಾ, ಕೊಚ್ಚಿ, ತಲ್ವಾರ್, ತಬಾರ್, ತ್ರಿಕಾಂಡ್, ಜಲಶ್ವಾ ಮತ್ತು ಐರಾವತ್ ಈ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ.