JANANUDI.COM NETWORK
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 41,779 ಕರೋನಾ ಸೋಂಕು ಪ್ರಕರಣಗಳು ಕಂಡು ಬಂದಿದ್ದು, 373 ಮಂದಿ ಬಲಿಯಾಗಿದ್ದಾರೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶುಕ್ರವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಬೆಂಗಳೂರಿನಲ್ಲಿ 14,316 ಸೋಂಕಿತರು ಪ್ರಕರಣಗಳು ಹೊಸದಾಗಿ ಕಂಡು ಬಂದರೆ, 121 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 1219 ಸೋಂಕಿತರು, 3 ಸಾವು, ದಕ್ಷಿಣಕನ್ನಡ ಜಿಲ್ಲೆಯಲ್ಲಿ 1215 ಸೋಂಕಿತರು 3 ಸಾವು.
ಶಿವಮೊಗ್ಗದಲ್ಲಿ ಐದು ಸಾವು, ಶಿವಮೊಗ್ಗ ಜಿಲ್ಲೆಯಲ್ಲಿ ಕರೋನಾ ಸೋಂಕಿತರ ಸಂಖ್ಯೆ ಕೊಂಚ ತಗ್ಗಿದ್ದು 720 ಮಂದಿಗೆ ಮಹಾಮಾರಿ ಸೋಂಕು ತಗುಲಿದೆ. 5 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಕೊರೊನಾದಿಂದ ಸಾವಿಗೀಡಾದವರ ಸಂಖ್ಯೆ 557 ಕ್ಕೇರಿದೆ. ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಒಟ್ಟು ಸಂಖ್ಯೆ 7277 ಆಗಿದೆ.
ಸೋಂಕಿತರ ವಿವರ: ಶಿವಮೊಗ್ಗ 209, ಭದ್ರಾವತಿ 103, ಶಿಕಾರಿಪುರ 41, ತೀರ್ಥಹಳ್ಳಿ 61, ಸೊರಬ 78, ಹೊಸನಗರ 31, ಸಾಗರ 171, ಇತರೆ ಜಿಲ್ಲೆಯಿಂದ ಬಂದ 26 ಮಂದಿಯಲ್ಲಿ ಇಂದು ವೈರಸ್ ಕಾಣಿಸಿಕೊಂಡಿದೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಷ್ಟು ಕೇಸ್!: ಚಿಕ್ಕಮಗಳೂರು ಜಿಲ್ಲೆಯಲ್ಲಿ ಶುಕ್ರವಾರ 835 ಸೋಂಕಿತರು ಪತ್ತೆಯಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 4933 ಸೋಂಕಿತರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ 191 ಜನರು ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದ್ದಾರೆ.
ಚಿಕ್ಕಮಗಳೂರು ತಾಲೂಕಿನಲ್ಲಿ 223, ಕಡೂರು ತಾಲೂಕಿನಲ್ಲಿ 222, ತರೀಕೆರೆ ತಾಲೂಕಿನಲ್ಲಿ 152, ಮೂಡಿಗೆರೆ ತಾಲೂಕಿನಲ್ಲಿ 132, ಎನ್.ಆರ್ ಪುರ ತಾಲೂಕಿನಲ್ಲಿ 21, ಕೊಪ್ಪ ತಾಲೂಕಿನಲ್ಲಿ 50 ಹಾಗೂ ಶೃಂಗೇರಿ ತಾಲೂಕಿನಲ್ಲಿ 35 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಒಟ್ಟು ಜಿಲ್ಲೆಯಲ್ಲಿ 835 ಜನರಿಗೆ ಮಹಾಮಾರಿ ಒಕ್ಕರಿಸಿದೆ.
ಸಾವಿನ ಮನೆಗೆ ಕರೋನಾ!: ಸಾವಿನ ಮನೆಗೆ ಐದಕ್ಕಿಂತ ಹೆಚ್ಚು ಜನ ಭಾಗವಹಿಸದಂತೆ ಸರ್ಕಾದ ಆದೇಶ ಇದ್ದರೂ ಸಹ ಸಾವಿನ ಮನೆಗೆ ಹೋದ ಇಪ್ಪತ್ತಕ್ಕೂ ಹೆಚ್ಚು ಜನರಲ್ಲಿ ಕರೊನಾ ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಸಾವಿನ ಮನೆಗೆ ತೆರಳಿದ 30 ಜನರಲ್ಲಿ 22 ಮಂದಿಗೆ ಸೋಂಕು ತಗುಲಿದೆ. ಪ್ರೈಮರಿ ಕಾಂಟಾಕ್ಟ್ ನ 30 ಮಂದಿಯನ್ನು ಕರೊನಾ ತಪಾಸಣೆ ಒಳಪಡಿಸಲಾಗಿದೆ. ತಾಲೂಕಿನ ಕೋಡಿಹಳ್ಳಿ ಗ್ರಾಮದಲ್ಲಿ ಘಟನೆ ಈ ಘಟನೆ ನಡೆದಿದೆ. ಗ್ರಾಮದ ಜನ ಮನೆಯಿಂದ ಹೊರ ಬಾರದಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.