

ಮಂಗಳೂರು; ಫಾದರ್ ಮುಲ್ಲರ್ ಚಾರೀಟೇಬಲ್ ಸಂಸ್ಥೆಗಳ ಘಟಕವಾದ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ತನ್ನ 35ನೇ ಪದವಿ ಪ್ರದಾನ ಸಮಾರಂಭವನ್ನು 03.04.2025 ರಂದು ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಿದೆ. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತಿ ವಂ. ಡಾ. ಪೀಟರ್ ಪೌಲ್ ಸಲ್ಡಾನ್ಹಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೈಂಟ್ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಉಪಕುಲಪತಿ ವಂ. ಡಾ. ಪ್ರವೀಣ್ ಮಾರ್ಟಿಸ್ Sಎ ಮತ್ತು ಗೌರವ ಅತಿಥಿಯಾಗಿ ಡಾ. ಸುಭಾಸ್ ಸಿಂಗ್, ಕೋಲ್ಕತ್ತಾದ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಹೋಮಿಯೋಪಥಿಯ ಮಾಜಿ ನಿರ್ದೇಶಕರು, ಇವರು ಪದವೀಧರರನ್ನು ಸನ್ಮಾನಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ, 89 ಹೋಮಿಯೋಪಥಿ ಪದವಿ ಹಾಗೂ 27 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಸ್ವೀಕರಿಸಲಿರುವರು. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಘೋಷಿಸಿದ 2018-19 ನೇ ಸಾಲಿನ 6 ಬಿ.ಎಚ್.ಎಂ.ಎಸ್. ರ್ಯಾಂಕ್ ವಿಜೇತರು ಹಾಗೂ 2020ರ ಸಾಲಿನ 11 ಸ್ನಾತಕೋತ್ತರ ರ್ಯಾಂಕ್ ವಿಜೇತರನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು.
– ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ನೀಡುವ ಚಿನ್ನದ ಪದಕವನ್ನು ಅಂದು ಘೋಷಿಸಲಿದ್ದು ಕಳೆದ 5ಳಿ ವರ್ಷದ ವಿದ್ಯಾರ್ಥಿ ಜೀವನದಲ್ಲಿ ಶೈಕ್ಷಣಿಕ ಮತ್ತು ಶಿಕ್ಷಕೇತರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಪದವಿ ವಿದ್ಯಾರ್ಥಿಗೆ ದೊರಕಲಿದೆ
– ಅದೇ ರೀತಿ 2021-22ರ ಸಾಲಿನ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗೆ ಮುಲ್ಲೇರಿಯನ್ಸ್ ಪ್ರಾಯೋಜಿಸಿದ ಡಾ. ಸುಮೋದ್ ಜಾಕೋಬ್ ಸೊಲೊಮನ್ ಪ್ರಶಸ್ತಿಯನ್ನು ನೀಡಲಾಗುವುದು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಸ್ಥಾಪನೆಯ 40ನೇ (ರೂಬಿ ಜುಬಿಲಿ) ವರ್ಷದಲ್ಲಿ ಈ 35 ನೇ ಪದವಿ ಪ್ರದಾನ ಸಮಾರಂಭ ನಡೆಯುತ್ತಿರುವುದು ಗಮನಾರ್ಹ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರು:
ವಂದನೀಯ ಫಾದರ್ ರಿಚರ್ಡ್ ಅಲೋಶಿಯಸ್ ಕೊವೆಲ್ಲೋ, ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ
ವಂದನೀಯ ಫಾದರ್ ಫೌಸ್ಟಿನ್ ಲ್ಯೂಕಸ್ ಲೋಬೊ, ನಿಯೋಜಿತ ನಿರ್ದೇಶಕರು, ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆ ಮತ್ತು ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ
ವಂದನೀಯ ಫಾದರ್ ಅಶ್ವಿನ್ ಕ್ರಾಸ್ತಾ, ಸಹಾಯಕ ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ
ವಂದನೀಯ ಫಾದರ್ ನೆಲ್ಸನ್ ಧೀರಾಜ್ ಪಾಯ್ಸ್, ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ ಡಿವಿಜನ್
ಡಾ. ಇ.ಎಸ್.ಜೆ. ಪ್ರಭು ಕಿರಣ್, ಪ್ರಾಂಶುಪಾಲರು, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ
ಡಾ. ವಿಲ್ಮಾ ಮೀರಾ ಡಿ’ಸೋಜಾ, ಉಪ ಪ್ರಾಂಶುಪಾಲರು, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ
ಡಾ. ಗಿರೀಶ್ ನವಾಡ ಯು.ಕೆ, ವೈದ್ಯಕೀಯ ಅಧೀಕ್ಷಕರು. ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಆಸ್ಪತ್ರೆ
ಡಾ. ರೇಶೆಲ್ ನೊರೊನ್ಹಾ, ಸಂಯೋಜಕರು ಪದವಿ ಪ್ರದಾನ ಸಮಾರಂಭ 2025, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ
ಡಾ. ಶೆರ್ಲಿನ್ ಪೌಲ್, ಸಂಯೋಜಕರು, ಮಾಧ್ಯಮ ಸಮಿತಿಯ ಪದವಿ ಪ್ರದಾನ ಸಮಾರಂಭ 2025, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ
35th Graduation Ceremony at Father Muller Homoeopathic Medical College & Hospital on 03.04.2025

Father Muller Homoeopathic Medical College & Hospital, a unit of Father Muller Charitable Institutions, will be hosting its 35th Graduation Ceremony on 03.04.2025 (Thursday) at 10.00am at Father Muller Convention Centre Kankanady, Mangaluru.
Most Rev. Dr Peter Paul Saldanha, Bishop of Mangalore Diocese and President of FMCI, President of Father Muller Charitable Institutions will preside over the ceremony. Chief Guest for the programme is Rev Dr Praveen Martis SJ, Vice Chancellor, St Aloysius Deemed to be University and the Guest of Honour – Dr Subhas Singh, Former Director of NIH, Kolkata will honour the graduands.
- On this day, 89 Under Graduands will be graduating and 27 Post Graduates will be awarded with MD (Hom) degree. The 6 BHMS rank holders of batch of 2018-19 and 11 rank holders of MD (Hom.) 2020 batch declared by Rajiv Gandhi University of Health Sciences (RGUHS) will be honored on this occasion.
- The best outgoing undergraduate student of the 2019-20 batch will be honored with Father Muller Charitable Institutions President’s Gold Medal.
- The best outgoing Postgraduate student of 2021-22 batch will be awarded with Dr Sumod Jacob Solomon Award sponsored by the 6th Batch of Mullerians.
It is also noteworthy that the 35th Graduation ceremony will be taking place in the Ruby Jubilee Year of inception of Father Muller Homoeopathic Medical College.
Members present during the Press meet were:
- Rev. Fr Richard Aloysius Coelho, Director, FMCI
- Rev. Fr Faustine Lucas Lobo, Designate Director,FMCI & Administrator, FMHMC&H
- Rev. Fr Ashwin Crasta, Assistant Administrator, FMHMC&H
- Rev. Fr Nelson Dheeraj Pais, Administrator, FMHPD
- Dr E S J Prabhu Kiran, Principal, FMHMC
- Dr Vilma Meera D’Souza, Vice Principal, FMHMC
- Dr Girish Navada U K, Medical Superintendent, FMHMCH
- Dr Reshel Noronha, Convenor, Graduation Ceremony 2025
- Dr Sherlyn Paul, Chairperson, Media Committee, Graduation Ceremony 2025
Rev Fr Faustine Lucas Lobo, Designate Director, FMCI & Administrator, FMHMC&H
