ಕ್ಷೇತ್ರಕ್ಕೆ ಸಂಬಂಧಿಸಿದಂತೆ (ಜೆಜೆಎಂ)ಜಲ ಜೀವನ್ ಯೋಜನೆಗೆ ಇದುವರೆಗೂ 350 ಕೋಟಿ ಅನುದಾನ ಬಿಡುಗಡೆಯಾಗಿದೆ. ಕ್ಷೇತ್ರದಲ್ಲಿ ಯೋಜನೆಯು ಪ್ರಗತಿಯಲ್ಲಿದ್ದು, ಮುಂದಿನ ವರ್ಷ ಮಾರ್ಚ್ ಒಳಗಾಗಿ ಪೂರ್ಣಗೊಳಿಸಲು ಇಂಜನೀಯರ್ರವರಿಗೆ ಸೂಚನೆ ನೀಡಿದ್ದೇನೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ತಾಲೂಕಿನ ಕೊಳತೂರು ಗ್ರಾ.ಪಂ. ವ್ಯಾಪ್ತಿಯ ವೆಂಕಟೇಶ ನಗರ ಗ್ರಾಮದಲ್ಲಿ ಶನಿವಾರ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೊಳತೂರು ಗ್ರಾಮಪಂಚಾಯಿತಿಗೆ ಸಂಬಂದಿಸಿದಂತೆ ಅಂದಾಜು ಒಟ್ಟು 6.5 ಕೋಟಿ ವೆಚ್ಚದಲ್ಲಿನ ಜಲಜೀವನ್ ಮಿಷನ್ ಕಾಮಗಾರಿ ಹಮ್ಮಿಕೊಂಡಿದ್ದು , ಕೊಳತೂರು ಗ್ರಾಮಕ್ಕೆ 1 ಕೋಟಿ ವೆಚ್ಚದಲ್ಲಿ ಜೆಜೆಎಂ ಕಾಮಗಾರಿ ನಡೆಯಲಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾಹಿತಿ ನೀಡಿದರು.
ಇದೇ ಸಮಯದಲ್ಲಿ ಶೆಟ್ಟಿಹಳ್ಳಿ, ಉಪ್ಪುಕಂಟೆ, ರಮೇಶ್ನಗರ , ಆಚಂಪಲ್ಲಿ, ಹರಳಕುಂಟೆ, ಸೀತರೆಡ್ಡಪಲ್ಲಿ ಗ್ರಾಮದಲ್ಲಿಯೂ ಜಲಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಿದರು. ಗ್ರಾ.ಪಂ. ಅಧ್ಯಕ್ಷೆ ನಾಗಮಣಿ ಮುಖಂಡರಾದ ಮಣಿ, ಆಂಜಿ, ಜಯರಾಮ್, ನಾರಾಯಣಗೌಡ, ನಂಜುಂಡಗೌಡ, ಚಂಗಪ್ಪ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಇಂಜಿನೀಯರ್ ಎಇಇ ನಾರಾಯಣಸ್ವಾಮಿ, ಪಿಡಿಒ ಮೆಹರ್ತಾಜ್, ನರೇಗಾ ಇಂಜಿನೀಯರ್ ರುದ್ರಪ್ಪ ಇದ್ದರು.