ಮಂಗಳೂರು : ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಹೋಮಿಯೋಪಥಿ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 34ನೇ ಪದವಿ ಪ್ರದಾನ ಸಮಾರಂಭವನ್ನುಕಂಕನಾಡಿಯ ಫಾದರ್ ಮುಲ್ಲರ್ಕನ್ವೆನ್ಷನ್ ಸೆಂಟರ್ನಲ್ಲಿದಿನಾಂಕ20.04.2024ರಂದುಹಮ್ಮಿಕೊಳ್ಳಲಾಗಿದೆ.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು 40ನೇ ವರ್ಷದ ಹೊಸ್ತಿಲಲ್ಲಿ:
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು 1985ರಲ್ಲಿ ಆರಂಭಗೊಂಡಿದ್ದು, ಹೋಮಿಯೋಪಥಿವೈದ್ಯಕೀಯ ಪದವಿ ಹಾಗೂ ಸ್ನಾತಕೋತ್ತರ ಕೋರ್ಸ್ಗಳನ್ನು ನಡೆಸುತ್ತಿದೆ.ತಮ್ಮ ಅಸ್ತಿತ್ವದ 40ನೇ ವರ್ಷಕ್ಕೆಕಾಲಿಟ್ಟಿರುವಈ ಮಹಾವಿದ್ಯಾಲಯವುರಾಜೀವ್ಗಾಂಧಿಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದಗುರುತಿಸಲ್ಪಟ್ಟಿದ್ದು, ಹೋಮಿಯೋಪಥಿರಾಷ್ಟ್ರೀಯ ಪರಿಷತ್ತು ಮತ್ತುಆಯುಷ್ಇಲಾಖೆ, ನವದೆಹಲಿ ಇವುಗಳ ಮಾನ್ಯತೆ ಪಡೆದಿದೆ. ಔಷಧಿಶಾಸ್ತ್ರೀಯ ವಿಚಕ್ಷಣೆಗೆ (Pharmacovigilence) ಪ್ರಾದೇಶಿಕ ಕೇಂದ್ರವಾಗಿದ್ದು, ರಾಜೀವ್ಗಾಂಧಿಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಎಲ್ಲಾ ಹೋಮಿಯೋಪಥಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ಸಂಶೋಧನಾ ವಿಧಾನಗಳಲ್ಲಿ ತರಬೇತಿ ನೀಡುವಕೇಂದ್ರವನ್ನಾಗಿಗುರುತಿಸಲ್ಪಟ್ಟಿದೆ.ಸುಮಾರು 144 ವರ್ಷಗಳ ಹೋಮಿಯೋಪಥಿ ಹೊರರೋಗಿ ವಿಭಾಗದಇತಿಹಾಸವಿರುವಫಾದರ್ ಮುಲ್ಲರ್ ಹೋಮಿಯೋಪಥಿ ಮಹಾವಿದ್ಯಾಲಯ ಮತ್ತುಆಸ್ಪತೆಯುಕಳೆದ 15 ವರ್ಷಗಳಿಂದ 24×7 ಹೋಮಿಯೋಪಥಿ ಒಳರೋಗಿ ವಿಭಾಗದ ಮೂಲಕಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಾ, ‘ಗುಣಪಡಿಸು’ ಮತ್ತು‘ಸಾಂತ್ವನಿಸು’(Heal & Comfort) ಎಂಬ ಸಂಸ್ಥೆಯಧ್ಯೇಯೊಕ್ತಿಯೊಂದಿಗೆಹೋಮಿಯೋಪಥಿಚಿಕಿತ್ಸೆಯುಎಲ್ಲಾ ವಿಭಾಗದಜನರಿಗೂತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇತ್ತೀಚೆಗೆಸ್ಪೆಷಾಲಿಟಿ ಕ್ಲಿನಿಕ್, ಆನ್ಲೈನ್ ಸಮಾಲೋಚನೆ, ಆರೋಗ್ಯ ತಪಾಸಣೆ ಯೋಜನೆ, ಉಪಶಾಮಕ ಆರೈಕೆ ಕೇಂದ್ರ, “ಜೆನೆಸಿಸ್” – ಫರ್ಟಿಲಿಟಿ ಕ್ಲಿನಿಕ್, ಹೇರ್ ಆಂಡ್ ಸ್ಕಿನ್ ಕ್ಲಿನಿಕ್ ಇಂತಹ ಹೊಸ ಸೌಲಭ್ಯಗಳು ಸೇರ್ಪಡೆಗೊಂಡಿದ್ದು, ಗುಣಮಟ್ಟದ ಚಿಕಿತ್ಸೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆ.
ಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ಡಿವಿಜನ್– 20 ನೇ ವರ್ಷದ ಸಂಭ್ರಮದಲ್ಲಿ: ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಮತ್ತೊಂದುಘಟಕವಾಗಿರುವಫಾದರ್ ಮುಲ್ಲರ್ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ಡಿವಿಜನ್ 2004 ರಿಂದ ದೇರಳಕಟ್ಟೆಯ ಆಧುನಿಕ ಯಂತ್ರೋಪಕರಣಗಳನ್ನೊಳಗೊಂಡ ಸುಸಜ್ಜಿತಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು ಈ ವರ್ಷ ಈ ಹೋಮಿಯೋಪಥಿಔಷಧಿತಯಾರಿಕಾಕೇಂದ್ರವು ದೇರಳಕಟ್ಟೆಯಲ್ಲಿ 20 ವರ್ಷಗಳನ್ನು ಪೂರ್ಣಗೊಳಿಸಿದೆ. ಈ ಹೋಮಿಯೋಪಥಿ ಫಾರ್ಮಸ್ಯೂಟಿಕಲ್ಡಿವಿಜನ್ದೇಶ ವಿದೇಶಗಳಲ್ಲಿ ಗುಣಮಟ್ಟದ ಉತ್ಪನ್ನಗಳಿಗೆ ಪ್ರಖ್ಯಾತವಾಗಿದೆ.
34ನೇ ಪದವಿ ಪ್ರದಾನ ಸಮಾರಂಭ :
ಪದವಿ ಪ್ರದಾನ ಸಮಾರಂಭವು20.04.2024ರಂದು (ಶನಿವಾರ) ಬೆಳಿಗ್ಗೆ 10.00 ಗಂಟೆಗೆಕಂಕನಾಡಿಯ ಫಾದರ್ ಮುಲ್ಲರ್ಕನ್ವೆನ್ಶನ್ ಸೆಂಟರ್ನಲ್ಲಿ ನಡೆಯಲಿದೆ.ಸಮಾರಂಭದಅಧ್ಯಕ್ಷತೆಯನ್ನುಮಂಗಳೂರು ಧರ್ಮಪ್ರಾಂತ್ಯದಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರಾದವಂದನೀಯಡಾ. ಪೀಟರ್ ಪೌಲ್ ಸಲ್ಡಾನ್ಹಾರವರು ವಹಿಸಲಿದ್ದಾರೆ ಹಾಗೂನಿಟ್ಟೆಡೀಮ್ಡ್ಟು. ಬಿ. ಯುನಿವರ್ಸಿಟಿಯ ಉಪಕುಲಪತಿಗಳಾದ ಪ್ರೊ .ಡಾ. ಎಂ.ಎಸ್. ಮೂಡಿತ್ತಾಯರವರುಮುಖ್ಯಅತಿಥಿಯಾಗಿ ಪದವೀಧರರನ್ನು ಸನ್ಮಾನಿಸಲಿದ್ದಾರೆಎಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಈ ದಿನ 85 ಹೋಮಿಯೋಪಥಿ ಪದವಿ ಹಾಗೂ25 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿರುವರು.ರಾಜೀವ್ಗಾಂಧಿಆರೋಗ್ಯವಿಜ್ಞಾನವಿಶ್ವವಿದ್ಯಾಲಯಘೋಷಿಸಿದ 2017-18 ಸಾಲಿನ 7ಪದವಿರ್ಯಾಂಕ್ವಿಜೇತವಿದ್ಯಾರ್ಥಿಗಳನ್ನುಈ ಸಂದರ್ಭದಲ್ಲಿಗೌರವಿಸಲಾಗುವುದು.
ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ನೀಡುವಅಧ್ಯಕ್ಷೀಯಚಿನ್ನದ ಪದಕವನ್ನುಅಂದುಘೋಷಿಸಲಿದ್ದುಕಳೆದ 5ಳಿವರ್ಷಗಳ ವಿದ್ಯಾರ್ಥಿಜೀವನದಲ್ಲಿಶೈಕ್ಷಣೀಯ ಮತ್ತು ಶಿಕ್ಷಕೇತರ ಕ್ಷೇತ್ರದಲ್ಲಿಅತ್ಯುತ್ತಮ ಸಾಧನೆ ಮಾಡಿದ ಪದವಿ ವಿದ್ಯಾರ್ಥಿಗೆದೊರಕಲಿದೆ. ಅದೇರೀತಿ2020-21 ಬ್ಯಾಚ್ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಯನ್ನು ಗುರುತಿಸಿ ವಿಶೇಷಬಹುಮಾನದೊಂದಿಗೆ ಸನ್ಮಾನಿಸಲಾಗುವುದು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ತನ್ನ ಅಸ್ತಿತ್ವದ 25 ವರ್ಷಗಳ ಮೈಲಿಗಲ್ಲನ್ನು ಪೂರ್ಣಗಳಿಸಿದ್ದು, ಈ ಸಂದರ್ಭದಲ್ಲಿ ‘ರಜತೋತ್ಸವ’- ರಾಷ್ಟ್ರೀಯಸ್ನಾತಕೋತ್ತರ ಸಮ್ಮೇಳನವನ್ನು ಇದೇ ಮೇ ತಿಂಗಳ 18 ರಂದು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹೋಮಿಯೋಪಥಿ ಜನಕರಾದ ಡಾ. ಸಾಮ್ಯುವೆಲ್ ಹಾನ್ನಿಮನ್ನ್ರವರ ಜನ್ಮದಿನದ ಸ್ಮರಣಾರ್ಥವಾಗಿ ವಿಶ್ವ ಹೋಮಿಯೋಪಥಿ ದಿನ 2024 ನ್ನು ಎಪ್ರಿಲ್ ತಿಂಗಳ 30ರಂದು ಆಚರಿಸಲಾಗುವುದು.
ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯು ಪ್ರಸ್ತುತ್ತ ಶೈಕ್ಷಣಿಕ ವರ್ಷದಲ್ಲಿ ಕಾಲೇಜ್ ಆಫ್ ಫಾರ್ಮಸ್ಯೂಟಿಕಲ್ ಸೈನ್ಸಸ್ ಕೋರ್ಸನ್ನುದೇರಳಕಟ್ಟೆಯಲ್ಲಿಆರಂಭಿಸಲಿದ್ದು ಆರೋಗ್ಯ ಶಿಕ್ಷಣ ಕ್ಷೇತ್ರದಲ್ಲಿನ ತಮ್ಮ ಪ್ರಗತಿಯನ್ನು ಇನ್ನೂ ವೃದ್ಧಿಗೊಳಿಸಿದೆ.60 ಸೀಟ್ಗಳ ಪ್ರವೇಶಾರ್ಹ ಹೊಂದಿರುವ ಈ ಕೋರ್ಸ್ಗೆ ಈಗಾಗಲೇ ದಾಖಲಾತಿ ಆರಂಭಗೊಂಡಿದೆಎಂದು ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರುತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿರುವ ಇತರರು :
ವಂದನೀಯರಿಚರ್ಡ್ ಅಲೋಶಿಯಸ್ ಕುವೆಲ್ಲೊ, ನಿರ್ದೇಶಕರು ಫಾದರ್ ಮುಲ್ಲರ್ಚಾರಿಟೇಬಲ್ ಸಂಸ್ಥೆ.
ವಂದನೀಯರೋಶನ್ಕ್ರಾಸ್ತಾ, ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆ.
ವಂದನೀಯ ಅಶ್ವಿನ್ ಕ್ರಾಸ್ತಾ, ಸಹಾಯಕ ಆಡಳಿತಾಧಿಕಾರಿ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತುಆಸ್ಪತ್ರೆ.
ಡಾ. ಇ.ಎಸ್.ಜೆ. ಪ್ರಭುಕಿರಣ್, ಪ್ರಾಂಶುಪಾಲರು ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ
ಡಾ. ವಿಲ್ಮಾ ಮೀರಾ ಡಿ’ಸೋಜ, ಉಪಪ್ರಾಂಶುಪಾಲರು, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ
ಡಾ. ರೇಶೆಲ್ ನೊರೊನ್ಹ ಸಂಯೋಜಕರು, ಪದವಿ ಪ್ರದಾನಕಾರ್ಯಕ್ರಮ 2024.
ಡಾ. ಅನುಷಜಿ.ಎಸ್, ಸಂಯೋಜಕರು, ಮಾದ್ಯಮ ಸಮಿತಿ, ಪದವಿ ಪ್ರದಾನಕಾರ್ಯಕ್ರಮ 2024
34thGraduation Ceremony at Father Muller Homoeopathic Medical College & Hospital on 20.04.202
Mangalore: Father Muller Homoeopathic Medical College & Hospital, a unit of Father Muller Charitable Institutions, is organizing the 34th Graduation Ceremony on 20.04.2024at Father Muller Convention Centre Kankanady, Mangaluru.
Ruby Jubilee Year (40 Years) of Father Muller Homoeopathic Medical College & 20 Years of Father Muller Homoeopathic Pharmaceutical Divisionat Deralakatte
It gives us immense joy in announcing that Father Muller Homoeopathic Medical College is completing 40 years of inception and completing 20 years of the Homoeopathic Pharmaceutical Division being instilled at Deralakatte this year. The College is affiliated to Rajiv Gandhi University of Health Sciences (RGUHS) and is recognized by National Commission for Homoeopathy& Department of Ministry of AYUSH, New Delhi. Father Muller Homoeopathic Medical College & Hospital is a regional centre of ‘Pharmacovigilance’ under the Ministry of AYUSH and identified as Centre for Training Programme in Clinical Research Methods for all M.D. (Hom.) students of RGUHS. The college has emerged as a premier medical institute in research, academic excellence, patient careby providing commendable and exemplary services to the societywith the motto “Heal and Comfort”. The College conducts Under Graduate programme and Post Graduate programmes in 7 specialties.
- 34thGraduation Ceremony at Father Muller Convention Center, Kankanady.
The Graduation Ceremony will be held on 20.04.2024(Saturday) at 10.00am in the Father Muller convention Centre Kankanady, Mangaluru. Most Rev. Dr Peter Paul Saldanha, Bishop of Mangalore Diocese and President of Father Muller Charitable Institutions will preside over the ceremony. TheChief Guest for the programme Prof. Dr M.S Moodithaya, Vice Chancellor, NITTE (Deemed to be University), Mangaluruwill honour the Graduands.
- On this day,85 Under Graduands will be graduating and 25 Post Graduates will be awarded with MD (Hom) degree.The 7BHMS rank holders of 2017-18 batch declared by RGUHS will be honoured on this occasion.
- The President’s Gold Medal for the best outgoing undergraduate student will be announced and presented. And also the best outgoing Postgraduate student of 2020-21batchwill be announced and honoured.
- Post-graduation course at Father Muller Homoeopathic Medical Collegecrossed the milestone of 25 years of its existence and as a culmination of the Silver Jubilee, a National Post Graduate Conference, RAJATHOTHSAVA will be held on 18th May 2024.
- World Homoeopathy Day 2024 commemorating the 269th Birth Anniversary of Dr Samuel Hahnemann will be celebrated at FMHMC on 30th April 2024.
- Adding another feather to its cap, Father Muller Charitable Institutions is proud to announce that Admissions are open for year 2024-25 of Father Muller College of Pharmaceutical Sciences, which will be functional soon in this very Deralakatte campus with an intake of 60 seats for B. Pharm.
Members present during the Press meet were:
- Rev. Fr Richard Aloysius Coelho, Director, FMCI
- Rev. FrRoshanCrasta, Administrator, FMHMC&H
- Rev. FrAshwinCrasta, Assistant Administrator, FMHMC&H
- Dr E S J PrabhuKiran, Principal, FMHMC
- DrVilmaMeera D’Souza, Vice Principal, FMHMC
- DrReshel Noronha, Convenor, Graduation Ceremony 2024
- Dr Anusha G. S, Chairperson, Media Committee, Graduation Ceremony 2024