Mangluru: The 34th Graduation Ceremony of FMHMC was held on 20.04.2024 at 10.00am at Father Muller convention Centre Kankanady, Mangaluru.
The programme was initiated with the grandiose procession of graduates accompanied by the band and salutation with the guard of honour at the entrance of the Father Muller Convention Centre, Kankanady. The President of the programme Most Rev. Dr Peter Paul Saldanha, Bishop of Mangalore Diocese and President of FMCI, The Chief Guest, Prof (Dr) M S Moodithaya, Vice Chancellor, Nitte Deemed To Be University, Deralakatte, Rev. Fr Richard A. Coelho, Director, Father Muller Charitable Institutions, Rev. Fr Roshan Crasta, Administrator Father Muller Homoeopathic Medical College & Hospital, Rev. Fr Ashwin Crasta, Asst. Administrator Father Muller Homoeopathic Medical College & Hospital, Dr E.S.J. Prabhu Kiran, Principal Father Muller Homoeopathic Medical College, Vice Principal Dr Vilma Meera D’Souza, Medical Superintendent of Father Muller Homoeopathic Medical College Hospital Dr Girish Navada U.K., Convenor of Graduation Ceremony 2024 Dr Reshel Noronha, were offered a solemn welcome with traditional Poornakumbha.
The formal programme commenced by invoking the blessings of the almighty through a prayer song by the students of Father Muller Homoeopathic Medical College.
In his welcome speech, Director, Rev Fr Richard Aloysius Coelho rekindled the memorable journey of inception of Father Muller Charitable Institutions and also recalled how patient centric care takes into consideration the holistic approach in treatment of many ailments. Fr Richard also stated how innovativeness and traditional medicinal approaches are practiced hand in hand in our institutions.
Dr ESJ Prabhu Kiran, Principal, FMHMC then presented a descriptive Annual report of the activities of Father Muller Homoeopathic Medical College and Hospital for the academic year 2023-2024.
Graduands were honoured and certificates were conferred by the Chief Guest, Prof (Dr) M S Moodithaya , which was followed by the administration of the oath led by Principal, Dr ESJ Prabhu Kiran.
Chief Guest Prof (Dr) M S Moodithaya, Vice Chancellor, Nitte Deemed To Be University, Deralakatte in his message first of all congratulated the stars of today, the graduates and added that how lucky they are to be part of the most prosperous country in the world, reminded the 3 Cs of Success- Condition in which you are, Capacity you have and your Credibility. Sir also reminded the graduates to always remember the struggles of their Parents, teachers in shaping their future and wished all the best wishes for their bright future.
On behalf of the graduates, Dr Anagha K G expressed her gratitude to the Institutions.
The post graduates were honoured with their MD (Hom.) degree by Most Rev. Dr Peter Paul Saldanha, Bishop of Mangalore Diocese and President of FMCI
Total of 85 BHMS students graduated on this occasion and 25 Post Graduates were awarded with their MD (Hom) degree.
Bishop of Mangalore Diocese & President of FMCI honoured 7 UG rankholders declared by the Rajiv Gandhi University of Health Sciences, Karnataka for the Overall BHMS examinations conducted from September 2018 to October 2022.
‘Dr Sumod Jacob Solomon Award’ sponsored by 6th Batch of Mullerians for the Best Outgoing Postgraduate student of 2020-21 batch was awarded to Dr Meban Rani.
Father Muller Charitable Institutions President’s Gold Medal for the Best Outgoing Undergraduate student B.H.M.S. – 2018-19 Batch was awarded to Dr Deeksha Parvathi.
Award of Excellence for Undergraduates award was bagged Dr Shelcy Maria Sebastian and for post graduates for bagged by Dr Rushali Sudhir Gugaratti.
On this occasion, Dr Madona Joseph was honoured with a memento for her relentless services of 32 years at FMCI at various posts and at the end superannuating at Head OF Department of Forensic Medicine and Toxicology at FMHMC.
Prof (Dr) M S Moodithaya, Vice Chancellor, Nitte Deemed To Be University, Deralakatte, the Chief Guest of the programme was honoured by the President of FMCI, Most Rev Dr Peter Paul Saldanha.
Most Rev Dr Peter Paul Saldanha, Bishop of Mangaluru Diocese and President of Father Muller Charitable Institutions in his presidential address shared the sense of rejoicing felt by all today in the occasion of Graduation. It was also reminded the service of mankind into which today’s granduands are entering to , which makes them akin to the Supreme Power,with the motto of Heal and Comfort.
Rev Fr Richard Aloysius Coelho, Director, FMCI then honoured the President of the programme, Most Rev Dr Peter Paul Saldanha, Bishop of Mangaluru Diocese and President of Father Muller Charitable Institutions with the token of gratitude.
Rev. Fr Roshan Crasta, Administrator, FMHMC &H proposed the vote of thanks.The Graduation Ceremony concluded with institution anthem and recession of the graduates and dignitaries. Dr Jolly D’ Mello and Dr Manish Kumar compeered the graduation ceremony
A Thanksgiving Eucharistic celebration was offered by Rev. Fr Richard A. Coelho, Director, Father Muller Charitable Institutions at Our Lady of Lourdes Chapel, Deralakatte at 6.30 a.m. on the same day which was attended by Graduates, their parents and staff.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ 34ನೇ ಪದವಿ ಪ್ರದಾನ ಸಮಾರಂಭ
ಮಂಗಳೂರು: ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 34ನೇ ಪದವಿ ಪ್ರದಾನ ಸಮಾರಂಭವನ್ನು ದಿನಾಂಕ 20.04.2024 ರಂದು ಪೂರ್ವಾಹ್ನ 10.00 ಗಂಟೆಗೆ ಕಂಕನಾಡಿಯ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆಸಲಾಯಿತು.
ಸಮಾರಂಭದಲ್ಲಿ 85 ಪದವಿ ವಿದ್ಯಾರ್ಥಿಗಳಿಗೆ ಹಾಗೂ 25 ಸ್ನಾತಕೋತ್ತರ ಪದವೀದರರಿಗೆ ಪದವಿ ಪ್ರಮಾಣ ಪತ್ರಗಳನ್ನು ಪ್ರದಾನ ಮಾಡಲಾಯಿತು. ನಿಟ್ಟೆ ಡೀಮ್ಡ್ ಟು. ಬಿ. ಯುನಿವರ್ಸಿಟಿಯ ಉಪಕುಲಪತಿಗಳಾದ ಪೆÇ್ರ. ಡಾ. ಎಂ. ಎಸ್. ಮೂಡಿತ್ತಾಯರವರು ಮುಖ್ಯ ಅತಿಥಿಯಾಗಿ ಪದವೀಧರರಿಗೆ ಪ್ರಮಾಣ ಪತ್ರ ವಿತರಿಸಿದರು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಸಂಸ್ಥೆಯ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಸಭೆಯನ್ನು ಸ್ವಾಗತಿಸಿ, ಪದವಿ ಸ್ವೀಕರಿಸುವ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಫಾದರ್ ಮುಲ್ಲರ್ ಸಂಸ್ಥೆಯ ಚರಿತ್ರೆಯೊಂದಿಗೆ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಸಾಧನೆಯನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಇ.ಎಸ್.ಜೆ. ಪ್ರಭು ಕಿರಣ್ ರವರು ವಾರ್ಷಿಕ ವರದಿಯಲ್ಲಿ 2023-24ರಲ್ಲಿ ಕಾಲೇಜಿನಲ್ಲಿ ನಡೆದ ಚಟುವಟಿಕೆಗಳನ್ನು ಪ್ರಸ್ತುತಪಡಿಸಿದರು ಮತ್ತು ಪದವಿ ಸ್ವೀಕರಿಸಿದ ಹೋಮಿಯೋಪಥಿ ವೈದ್ಯರ ಪ್ರಮಾಣವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮುಖ್ಯ ಅತಿಥಿಗಳಾದ ಪೆÇ್ರ. ಡಾ. ಎಂ. ಎಸ್. ಮೂಡಿತ್ತಾಯ ಯು.ಜಿ. ಪದವೀದರರನ್ನು ಪದವಿಯೊಂದಿಗೆ ಸನ್ಮಾನಿಸಿದರು. ತಮ್ಮ ಸಂದೇಶದಲ್ಲಿ ಪದವೀದರರನ್ನು ಅಭಿನಂದಿಸಿ, ಪ್ರಪಂಚದ ಅತ್ಯಂತ ಶ್ರೀಮಂತ ದೇಶದೊಂದಿಗೆ ಭಾಗಿಯಾಗುವುದು ನಿಮ್ಮ ಅದೃಷ್ಟವೆಂದು ಹೊಗಳಿದರು. ತಮ್ಮ ಜೀವನದಲ್ಲಿ ಯಶಸ್ವಿಯಾಗಲು ‘ಸ್ಥಿತಿ’, ‘ಸಾಮರ್ಥ್ಯ’ ಹಾಗೂ ‘ವಿಶ್ವಾಸಾರ್ಹತೆ’ ಎಂಬ 3 ‘ಅ’ ಗಳನ್ನು ವಿವರಿಸಿ, ಇಂದು ತಮಗೆ ದೊರೆತಿರುವ ಅತೀ ಶಕ್ತಿಯುತ ಪದವಿಯೊಂದಿಗೆ ತಮ್ಮ ವೈದ್ಯಕೀಯ ಜೀವನದಲ್ಲಿ ಮುನ್ನಡೆಯುವಂತೆ ಹುರಿದುಂಬಿಸಿದರು ಹಾಗೂ ಹೆತ್ತವರು ಹಾಗೂ ಶಿಕ್ಷಕರು ನಿಮ್ಮ ಭವಿಷ್ಯವನ್ನು ನಿರೂಪಿಸುವಲ್ಲಿ ಪಟ್ಟ ಶ್ರಮವನ್ನು ಎಂದಿಗೂ ನೆನಪಿಸುವಂತೆ ಒತ್ತಿ ಹೇಳಿದರು.
ಪದವೀದರರ ಪರವಾಗಿ ಡಾ. ಅನಘಾ ಕೆ. ರವರು ಪ್ರತಿಕ್ರಿಯೆಯನ್ನು ವ್ಯಕ್ತ ಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಸ್ನಾತಕೋತ್ತರ ಪದವೀದರರನ್ನು ಸನ್ಮಾನಿಸಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಘೋಷಿಸಿದ 2017-18 ಸಾಲಿನ 7 ಪದವಿ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸ್ಮರಣಿಕೆಯೊಂದಿಗೆ ಗೌರವಿಸಿದರು. ಇದೇ ಸಂದರ್ಭದಲ್ಲಿ ಸಪ್ಟೆಂಬರ್ 2018 ರಿಂದ ಜೂನ್ 2022 ವರೆಗಿನ ಎಲ್ಲಾ ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ಪ್ರತಿಷ್ಠಿತ ಅಧ್ಯಕ್ಷೀಯ ಚಿನ್ನದ ಪದಕವನ್ನು ಅತ್ಯುತ್ತಮ ಸಾಧನೆ ಮಾಡಿದ ಹೋಮಿಯೋಪಥಿ ಪದವಿ ವಿದ್ಯಾರ್ಥಿನಿ ಡಾ. ದೀಕ್ಷಾ ಪಾರ್ವತಿ ರವರಿಗೆ ಹಾಗೂ ಶ್ರೇಷ್ಠ ವಿದ್ಯಾರ್ಥಿ ಪ್ರಶಸ್ತಿಯನ್ನು ಡಾ. ಶೆಲ್ಸಿ ಮರಿಯಾ ಸೆಬಾಸ್ಟಿಯನ್ರವರಿಗೆ ನೀಡಿ ಗೌರವಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್ ಕ್ರಾಸ್ತಾ ರವರು ಪ್ರಾಯೋಜಿಸಿದ ಪ್ರಶಸ್ತಿಯನ್ನು 2020-21 ಬ್ಯಾಚ್ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ಸಾಧನೆಗೈದ ಡಾ. ರುಶಾಲಿ ಸುದೀರ್ ಗುಗರಟ್ಟಿ ರವರಿಗೆ ಹಾಗೂ 6ನೇ ಮುಲ್ಲೇರಿಯನ್ ಬ್ಯಾಚ್ ಪ್ರಾಯೋಜಿಸಿದ ‘ಡಾ. ಸುಮೊದ್ ಜಾಕೊಬ್ ಸೊಲೊಮನ್ ಪ್ರಶಸ್ತಿ’ಯನ್ನು 2020-21 ಬ್ಯಾಚ್ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದ ಬೆಸ್ಟ್ ಔಟ್ ಗೋಯಿಂಗ್ ವಿದ್ಯಾರ್ಥಿ ಡಾ. ಮೆಬಾನ್ ಪಿ. ರಾನಿ ರವರಿಗೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಫೆÇರೆನ್ಸಿಕ್ ಮೆಡಿಸನ್ ಮತ್ತು ಟಾಕ್ಸಿಕಾಲಜಿ ವಿಭಾಗದ ಮುಖ್ಯಸ್ಥೆಯಾಗಿ 32 ವರ್ಷ ಸೇವೆ ಸಲ್ಲಿಸಿದ ಡಾ. ಮೆಡೊನಾ ಜೋಸೆಫ್ ಅವರಿಗೆ ಸಂಸ್ಥೆಯ ಪರವಾಗಿ ಬಿಷಪ್ ಅವರು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾದ ಪೆÇ್ರ. ಡಾ. ಎಂ. ಎಸ್. ಮೂಡಿತ್ತಾಯ ರವರನ್ನು ಬಿಷಪ್ರವರು ಸ್ಮರಣಿಕೆ ನೀಡಿ ಗೌರವಿಸಿದರು.
ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪದವೀಧರರನ್ನು ಅಭಿನಂದಿಸಿ, ಇಂದು ಪದವಿ ಪ್ರದಾನ ಸಂದರ್ಭದಲ್ಲಿ ಎಲ್ಲರೂ ಅನುಭವಿಸುತ್ತಿರುವ ಸಂತಸವನ್ನು ಹಂಚಿಕೊಂಡರು. ‘ಗುಣಪಡಿಸು’ ಮತ್ತು ‘ಸಾಂತ್ವನಿಸು’ ಎಂಬ ಸಂಸ್ಥೆಯ ಧ್ಯೇಯ ವಾಕ್ಯದೊಂದಿಗೆ ಇಂದಿನ ಪದವೀದರರು ಪ್ರವೇಶಿಸುತ್ತಿರುವ ಮನಕುಲದ ಸೇವೆಯನ್ನು ನೆನಪಿಸಿದರು.
ಸಂಸ್ಥೆಯ ನಿರ್ದೇಶಕರಾದ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಬಿಷಪ್ ರವರನ್ನು ಸ್ಮರಣಿಕೆ ನೀಡಿ ಗೌರವಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ವಂದನೀಯ ರೋಶನ್ ಕ್ರಾಸ್ತಾರವರು ವಂದನಾರ್ಪಣೆಗೈದರು.
ಡಾ. ಜೋಲಿ ಡಿ’ಮೆಲ್ಲೊ ಹಾಗೂ ಡಾ. ಮನಿಷ್ ಕೆ. ತಿವಾರಿ ರವರು ಪದವಿ ಪ್ರದಾನ ಕಾರ್ಯಕ್ರಮವನ್ನು ನಿರೂಪಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಉಪ ಆಡಳಿತಾಧಿಕಾರಿಗಳಾದ ವಂದನೀಯ ಅಶ್ವಿನ್ ಕ್ರಾಸ್ತ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಉಪಪ್ರಾಂಶುಪಾಲರಾದ ಡಾ. ವಿಲ್ಮಾ ಮೀರಾ ಡಿ’ಸೋಜ, ಹೋಮಿಯೋಪಥಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಗಿರೀಶ್ ನಾವಡ ಯು.ಕೆ., ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ರೇಶಲ್ ನೊರೊನ್ಹರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.