341 ವರ್ಷಗಳ ಹಿಂದೆ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿದ್ದ ಸಂತ ಜುಜೆ ವಾಜರ ವಾರ್ಷಿಕ ಹಬ್ಬ

JANANUDI.COM NETWORK


ಕುಂದಾಪುರ,ಜ.17: ಸುಮಾರು 341 ವರ್ಷಗಳ ಹಿಂದೆ ಗೋವಾ ಧರ್ಮಾಧ್ಯಕ್ಷರಿಂದ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳಾಗಿ ಪ್ರಪ್ರಥಮವಾಗಿ ಒರ್ವ ಭಾರತೀಯ ಹಾಗೇ ಕೊಂಕಣಿಗನಾಗಿ ಒಂದು ಚರ್ಚಿನ ಪ್ರಧಾನ ಯಾಜಕರಾಗಿ, ಅದೂ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾಗಿ ಅಧಿಕಾರ ದೊರಕಿಸಿಕೊಂಡರೆಂಬ ಹೆಮ್ಮೆಯುಳ್ಳ, ಸಂತ ಪದವಿಗೇರಿದವರಾದ, ಕುಂದಾಪುರ ವಲಯ ಧರ್ಮ ಸಭೆಯ ಪಾಲಕ ಸಂತ ಜೋಸೆಪ್ ವಾಜ್‍ರವರ ವಾರ್ಷಿಕ ಹಬ್ಬ ಭಾನುವಾರ (ಜ.17) ಸಂಜೆ ಜರುಗಿತು.
ಕುಂದಾಪುರಕ್ಕೆ ಆಗಮಿಸಿ, ಕುಂದಾಪುರ ಮತ್ತು ಆಸುಪಾಸಿನಲ್ಲಿ ಸೇವೆ ನೀಡಿದ ಮಹತ್ಮಾರು. ಸಂತ ಜುಜೆ ವಾಜ್ ಕುಂದಾಪುರದ ಅಂದಿನ ಚರ್ಚಿನ ತಮ್ಮ ಕೊಠಡಿಯಲ್ಲಿದ್ದು ದೇವರ ಜೊತೆ ಪ್ರಾರ್ಥನೆಯಲ್ಲಿ ತೊಡಗಿದಾಗ ಅವರು ಯಾವ ಆಧಾರವೂ ಇಲ್ಲದೆ ನೆಲದಿಂದ ಬಹಳ ಮೇಲಕ್ಕೆ ಗಾಳಿಯಲ್ಲಿ ತೂಗಾಡುತ್ತಾ ಇದದ್ದು, ಮತ್ತು ಆ ಕೊಠಡಿ ಪ್ರಕರ ಬೆಳಕಿನಲ್ಲಿ ಕೂಡಿದ್ದುದನ್ನು ಕಣ್ಣಾರೆ ಕಂಡ, ಇನ್ನೊಬ್ಬ ಅತಿಥಿ ಧರ್ಮಗುರುಗಳು ಈ ಘಟನೆ ಗೋವಾದ ಧರ್ಮಾಧ್ಯಕ್ಷರಿಗೆ ತಿಳಿಸಿದ್ದು ಒಂದು ಚಾರಿತ್ರಿಕ ವಿಷಯವಾಗಿದೆ. ಕುಂದಾಪುರ ಚರ್ಚ್ ದೇವರ ಮಹಿಮಾಭರಿತವಾದ ಪವಿತ್ರ ಸ್ಥಳವಾಗಿದೆಯೆಂಬ ಖ್ಯಾತಿ ಗಳಿಸಿದೆ. ಮುಂದೆ ಇದೆ ಸಂತ ಜುಜೆ ವಾಜರು ಶ್ರೀಲಂಕಾದಲ್ಲಿ ಯೇಸು ಕ್ರಿಸ್ತರ ಸೇವೆಯಲ್ಲಿ ತೊಡಗಿದಾಗ ಇನ್ನೂ ಹೆಚ್ಚೆಚ್ಚು ಅದ್ಬುತಗಳನ್ನು ಮಾಡಿ ಅವರು ಸಂತ ಪದವಿಯನ್ನು ಪಡೆದರು.
ಇವರ ಪುಣ್ಯ ಸ್ಮರಣೆಯ ಹಬ್ಬದ ದಿವ್ಯ ಬಲಿ ಪೂಜೆಯನ್ನು ಅರ್ಪಿಸಿದ ಒಮ್ಜೂರು ಚರ್ಚಿನ ಧರ್ಮಗುರುಗಳಾದ ವಂ|ಒಲ್ವಿನ್ ಡಿಕುನ್ಹಾ ‘ಸಂತ ಜುಜೆ ವಾಜರ ಜೀವನ ಚರಿತ್ರೆಯನ್ನು ವಿವರಿಸುತ್ತಾ, ಅವರು ಕುಂದಾಪುರಕ್ಕೆ ಬರುವಾಗ ಪರಿಸ್ಥಿತಿ ಬಹಳ ಕೆಟ್ಟದಿತ್ತು, ಆದರೂ ಕ್ರೈಸ್ತರ ಸಂದೇಶಗಳನ್ನು ಸಾರುತ್ತ ಕ್ರೈಸ್ತರ ಅನುಪಮ ಸೇವೆಯನ್ನು ಮಾಡಿದರು. ಯೇಸುವಿಗಾಗಿ, ಮುಂದೆ ಅವರು ಶ್ರೀಲಂಕಾದಲ್ಲಿ ತಮ್ಮ ಜೀವನವನ್ನೆ ಪಣಕಿಟ್ಟು, ಉಪವಾಸವಿದ್ದು, ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿದರೂ ಅಲ್ಲಿ ತಮ್ಮ ಪ್ರವಚನಗಳಿಂದ,ಪವಾಡಗಳನ್ನು ಮಾಡಿ ಸಂತ ಪದವಿ ಗಳಿಸಿಕೊಂಡ ಜುಜೆವಾಜರು ಯೇಸುವಿನ ಸಂದೇಶದಂತೆ ಪರರಿಗೆ ಹೆಚ್ಚಾಗಿ ವಂಚೀತರಿಗೆ, ಕಷ್ಟಕ್ಕೆ ಒಳಗಾದವರಿಗೆ ದೀನ ದಲಿತರ ಧ್ವನಿಯಾಗೋಣ’ ಎಂದು ಅವರು ಸಂದೇಶ ನೀಡಿದರು.
ಕುಂದಾಪುರ ಚರ್ಚ್ ಹಾಗೂ ವಲಯ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ, ಬಲಿದಾನದಲ್ಲಿ ಭಾಗಿಯಾಗಿ ಶುಭ ಕೋರಿದರು. ಅತಿಥಿ ಧರ್ಮಗುರುಗಳಾದ ತ್ರಾಸಿ ಡಾನ್ ಬಾಸ್ಕೊ ವಂ|ಫಾ| ಲೀಯೊ ಡಿಸೋಜಾ, ಕಟ್ಕರೆ ಬಾಲ ಯೇಸುವಿನ ಆಶ್ರಮದ ರೆಕ್ಟರ್ ವಂ| ಫಾ|ಒಲ್ವಿನ್ ಸಿಕ್ವೇರಾ, ವಂ| ಫಾ|ಚಾಲ್ರ್ಸ್ ನೊರೊನ್ಹಾ, ಕೋಟಾ ಚರ್ಚಿನ ವಂ| ಫಾ|ಆಲ್ಫೊನ್ಸ್ ಡಿಲೀಮಾ, ಪ್ರಾಂಶುಪಾಲ ವಂ| ಪ್ರವೀಣ್ ಅಮ್ರತ್ ಮಾರ್ಟಿಸ್, ಕುಂದಾಪುರ ಸಹಾಯಕ ಧರ್ಮಗುರು ವಂ|ಫಾ|ವಿಜಯ್ ಡಿಸೋಜಾ, ಈ ಉತ್ಸವದ ಬಲಿದಾನದಲ್ಲಿ ಪಾಲ್ಗೊಂಡರು. ಈ ಉತ್ಸವದಲ್ಲಿ ಹಲವಾರು ಧರ್ಮಗಿನಿಯರು, ಕುಂದಾಪುರ ವಲಯದ ಅನೇಕ ಚರ್ಚಗಳ ಭಕ್ತಾಧಿಗಳು ಪಾಲುಗೊಂಡಿದ್ದರು. ಕುಂದಾಪುರ ಚರ್ಚ್ 20 ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ ವಂದಿಸಿದರು.