

ಕುಂದಾಪುರ, ಸೆ.23: ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 33 ನೇ ವಾರ್ಷಿಕ ಸಾಮಾನ್ಯ ಸಭೆಯು ಕೋಟೇಶ್ವರದ ಸಹನಾ ಕನ್ ವೆನ್ಶನ್ ಸೆಂಟರ್ನಲ್ಲಿ ಸಭಾಂಗಣದಲ್ಲಿ ಭಾನುವಾರ (ಸೆ. 22 ರಂದು) ನಡೆಯಿತು. ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿ’ ಅಲ್ಮೇಡಾ ಅಧ್ಯಕ್ಷತೆ ವಹಿಸಿ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ. 22 % ಡಿವಿಡೆಂಡ್ ಘೋಷಣೆ ಮಾಡಿದರು.
ಅಧ್ಯಕ್ಶತೆ ವಹಿಸಿದ್ದ ಅವರು ‘ನಮ್ಮ ಸದಸ್ಯರು ಗ್ರಾಹಕರಾಗಿ ವ್ಯವಹಾರ ಮಾಡಬೇಕು, ನಾವು ರಾಷ್ಟ್ರೀಕ್ರತ ಬ್ಯಾಂಕುಗಳಿಗೆ ಪೈಪೋಟಿ ನೀಡುತ್ತೇವೆ, ಕಡಿಮೆ ಬಡ್ಡಿಯಲ್ಲಿ ಸಾಲ, ವಿದ್ಯಾಭಾಸಕ್ಕಾಗಿ, ಚಿನ್ನಕ್ಕೆ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತೇವೆ, ನಮ್ಮ ಎಲ್ಲಾ ಶಾಖೆಗಳಿಗೆ ಸ್ವಂತ ಸ್ಥಿರಾಸ್ತಿ ಮತ್ತು ಕಟ್ಟಡಗಳನ್ನು ಮಾಡಿಕೊಳ್ಳಲು ಅಣಿಯಾಗಿದ್ದೇವೆ. ನಾವು ಪ್ರಸ್ತೂತವಾಗಿ ನಮ್ಮ ಸೊಸೈಟಿಯಲ್ಲಿ 1087 ಸಾವಿರ ವ್ಯವಹಾರ ನಡೆದಿದೆ, 4.05 ಕೋಟಿ ನಿವ್ವಳ ಲಾಭ ಪಡೆದಿದ್ದು, ಪ್ರಗತಿಯ ಮೆಟ್ಟಿಲುಗಳನ್ನು ಹತ್ತುತ್ತಾ ಇದ್ದೇವೆ, ನಿರಂತರವಾಗಿ 6 ಸಾಧಕ ಪ್ರಶಸ್ತಿಗಳು ಲಭಿಸುತ್ತಾ ಬಂದಿದ್ದು ನಮ್ಮ ಪ್ರಗತಿಗೆ ಸಾಕ್ಶಿಯಾಗಿದೆ. ನಾವು ಕೇವಲ ಲಾಭ ಮಾತ್ರ ನಿರೀಕ್ಷಿಸಿಸದೆ, ನಿರಂತರವಾಗಿ 6 ಸಾಧಕ ಪ್ರಶಸ್ತಿಗಳು ಪಭಿಸುತ್ತಾ ಬಂದಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ, ಮನೆ ಕಟ್ಟಲು ಹೀಗೆ ಅನೇಕ ರೂಪದಲ್ಲಿ ಸಹಾಯ ಹಸ್ತ ನೀಡಿದ್ದೆವೆ ಎಂದರು. ಈ ಸಂದರ್ಭದಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿಗಳಿಗೆ ಗೌರವ ವೇತನ ನೀಡಲಾಯಿತು. ವೇದಿಕೆಯಲ್ಲಿ, ಸಂಘದ ಉಪಾಧ್ಯಕ್ಷರಾದ ಕಿರಣ್ ಲೋಬೊ, ನಿರ್ದೇಶಕರಾದ ಫಿಲಿಪ್ ಡಿಕೋಸ್ತಾ, ವಿನೋದ್ ಕ್ರಾಸ್ಟೊ, ಬ್ಯಾಪ್ಟಿಸ್ಟ್ ಡಾಯಾಸ್, ಓಜಲಿನ್ ರೆಬೆಲ್ಲೊ, ಪ್ರಕಾಶ್ ಲೋಬೋ, ಡೈನಾ ಡಿ ಅಲ್ಮೇಡಾ, ಶಾಂತಿ ಆರ್ ಕರ್ವಾಲ್ಲೊ, ಶಾಂತಿ ಡಾಯಾಸ್, ವಿಲ್ಸನ್ ಡಿಸೋಜಾ, ಸಂತೋಷ್ ಓಝೊವಲ್ಡ್ ಡಿ ಸಿಲ್ವಾ, ವಿಲ್ಫ್ರೆಡ್ ಮಿನೇಜಸ್, ಟೆರೆನ್ಸ್ ಸುವಾರಿಸ್, ಮೈಕಲ್ ಪಿಂಟೊ, ತಿಯೋದರ ಒಲಿವೇರ ಮತ್ತು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಕಿರಣ್ ಲೋಬೊ ಸ್ವಾಗತಿಸಿದರು. ನಿರ್ದೇಶಕ ಡೆರಿಕ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಸೊಸೈಟಿಯ ಮುಖ್ಯಕಾರ್ಯ ನಿರ್ವಹಣ ಅಧಿಕಾರು ಮೇಬಲ್ ಡಿಆಲ್ಮೇಡಾ ವಂದಿಸಿದರು.



















