

ಫಾದರ್ ಮುಲ್ಲರ್ ಸೇವಾ ಸಂಸ್ಥೆಯಘಟಕವಾಗಿರುವ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಹೋಮಿಯೋಪಥಿ ಪದವಿ ಹಾಗೂ ಹೋಮಿಯೋಪಥಿ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ 33ನೇ ಪದವಿ ಪ್ರದಾನ ಸಮಾರಂಭವನ್ನುಕಂಕನಾಡಿಯ ಫಾದರ್ ಮುಲ್ಲರ್‍ಕನ್ವೆನ್ಷನ್ ಸೆಂಟರ್‍ನಲ್ಲಿದಿನಾಂಕ29.04.2023ರಂದುಹಮ್ಮಿಕೊಳ್ಳಲಾಗಿದೆ.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯವು 1985ರಿಂದ ಹೋಮಿಯೋಪಥಿ ವೈದ್ಯಕೀಯ ಪದ್ದತಿಯಲ್ಲಿಅತ್ಯುನ್ನತ ಸೇವೆಯನ್ನು ಸಲ್ಲಿಸುತ್ತಾ, ಹೋಮಿಯೋಪಥಿಚಿಕಿತ್ಸೆಯುಎಲ್ಲಾ ವಿಭಾಗದಜನರಿಗೂತಲುಪುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.ಸಂಸ್ಥೆಯು‘ಗುಣಪಡಿಸು’ ಮತ್ತು‘ಸಾಂತ್ವನಿಸು’(Heal & Comfort)ಎಂಬ ಧ್ಯೇಯೊಕ್ತಿಯೊಂದಿಗೆ ಸಮಾಜ ಸೇವೆಯನ್ನು ಮಾಡುತ್ತಿದೆ. ಈ ಮಹಾವಿದ್ಯಾಲಯವುರಾಜೀವ್‍ಗಾಂಧಿಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದಗುರುತಿಸಲ್ಪಟ್ಟಿದ್ದು, ಹೋಮಿಯೋಪಥಿರಾಷ್ಟ್ರೀಯ ಪರಿಷತ್ತು ಮತ್ತುಆಯುಷ್‍ಇಲಾಖೆ, ನವದೆಹಲಿ ಇವುಗಳ ಮಾನ್ಯತೆ ಪಡೆದಿದೆ.ಔಷಧಿಶಾಸ್ತ್ರೀಯ ವಿಚಕ್ಷಣೆಗೆ (Pharmacovigilence) ಪ್ರಾದೇಶಿಕ ಕೇಂದ್ರವಾಗಿದ್ದು, ಇತ್ತೀಚಿಗೆರಾಜೀವ್‍ಗಾಂಧಿಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಎಲ್ಲಾ ಹೋಮಿಯೋಪಥಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಕ್ಲಿನಿಕಲ್ ಸಂಶೋಧನಾ ವಿಧಾನಗಳಲ್ಲಿ ತರಬೇತಿ ನೀಡುವಕೇಂದ್ರವನ್ನಾಗಿಗುರುತಿಸಲ್ಪಟ್ಟಿದೆ.ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನಿಂದ (NAAC) ‘A’’ಗ್ರೇಡ್ ಶ್ರೇಯಾಂಕವನ್ನು ಪಡೆದುಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ.ಈ ಸಂಸ್ಥೆಯು ಹೋಮಿಯೋಪಥಿ ವೈದ್ಯಕೀಯ ಪದವಿ ಹಾಗೂ 7 ವಿಶೇಷತೆಗಳಲ್ಲಿ ಹೋಮಿಯೋಪಥಿ ಸ್ನಾತಕೋತ್ತರ ಪದವಿ ಕೋರ್ಸ್‍ಗಳನ್ನು ನಡೆಸುತ್ತಿದೆ.
ಪದವಿ ಪ್ರದಾನ ಸಮಾರಂಭವು29.04.2023ರಂದು (ಶನಿವಾರ) ಬೆಳಿಗ್ಗೆ 10.00 ಗಂಟೆಗೆಕಂಕನಾಡಿಯ ಫಾದರ್ ಮುಲ್ಲರ್‍ಕನ್ವೆನ್ಶನ್ ಸೆಂಟರ್‍ನಲ್ಲಿ ನಡೆಯಲಿದೆ.ಸಮಾರಂಭದಅಧ್ಯಕ್ಷತೆಯನ್ನುಮಂಗಳೂರು ಧರ್ಮಪ್ರಾಂತ್ಯದಧರ್ಮಾಧ್ಯಕ್ಷರು ಹಾಗೂ ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ಅಧ್ಯಕ್ಷರಾದ ವಂದನೀಯಡಾ. ಪೀಟರ್ ಪೌಲ್ ಸಲ್ದಾನ್ಹಾರವರು ವಹಿಸಲಿದ್ದಾರೆ ಹಾಗೂ ವಿನಾಯಕ ಮಿಷನ್‍ರಿಸರ್ಚ್ ಫೌಂಡೇಶನ್, ಡೀಮ್ಡ್‍ಟು. ಬಿ.ಯುನಿವರ್ಸಿಟಿ.ಸೇಲಂ, ತಮಿಳುನಾಡು ಇದರಉಪಕುಲಪತಿಯಾದಡಾ. ಪಿ. ಕೆ.ಸುಧೀರ್‍ರವರು ಮುಖ್ಯಅತಿಥಿಯಾಗಿ ಪದವೀಧರರನ್ನು ಸನ್ಮಾನಿಸಲಿದ್ದಾರೆಎಂದು ಫಾದರ್ ಮುಲ್ಲರ್ ಸೇವಾ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್‍ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ಈ ದಿನ 97 ಹೋಮಿಯೋಪಥಿ ಪದವಿ ಹಾಗೂ18 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿರುವರು.ರಾಜೀವ್‍ಗಾಂಧಿಆರೋಗ್ಯವಿಜ್ಞಾನವಿಶ್ವವಿದ್ಯಾಲಯಘೋಷಿಸಿದಸ್ನಾತಕೋತ್ತರ ಪದವಿಯ ವಿವಿಧ ವಿಶೇಷತೆಗಳಲ್ಲಿ 10ರ್ಯಾಂಕ್‍ಗಳನ್ನು ಪಡೆದ ಪ್ರತಿಬಾನ್ವಿತ ವಿದ್ಯಾರ್ಥಿಗಳನ್ನುಇದೇ ಸಂದರ್ಭದಲ್ಲಿಗೌರವಿಸಲಾಗುವುದು.
2016-17 ನೇ ಸಾಲಿನ ರಾಜೀವ್‍ಗಾಂಧಿಆರೋಗ್ಯವಿಜ್ಞಾನವಿಶ್ವವಿದ್ಯಾಲಯ ಘೋಷಿಸಿದ ಚಿನ್ನದ ಪದಕವನ್ನುಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದಪದವೀಧರೆಡಾ. ಆಶ್ರಿತಾ ಬಿ.ಎ. ಹಾಗೂಸ್ನಾತಕೋತ್ತರ ಪದವಿಯ ಮೆಟಿರಿಯಾ ಮೆಡಿಕಾ ವಿಭಾಗದಲ್ಲಿಅತ್ಯುತ್ತಮಅಂಕ ಗಳಿಸಿರುವ ಡಾ.ರೆಮ್ಯಾ ವರ್ಗೀಸ್‍ಪಡೆದಿರುವರು. ಹಾಗೂ ಸೆಂಟ್ರಲ್‍ಕೌನ್ಸಿಲ್‍ಆಫ್‍ರಿಸರ್ಚ್‍ಇನ್ ಹೋಮಿಯೋಪಥಿ ವತಿಯಿಂದ ಸ್ನಾತಕೋತ್ತರ ಪದವಿಯಅತ್ಯುತ್ತಮ ಪ್ರಬಂದ ಮಂಡಣೆಗಾಗಿ ನೀಡಿರುವ ವಿದ್ಯಾರ್ಥಿವೇತನವನ್ನು 2019-20ರ ಹೋಮಿಯೋಪಥಿಸೈಕ್ಯಾಟ್ರಿ ವಿಭಾಗದಡಾ. ಸುದೀಪ್ತಿ ಸಿಂಗ್ ರವರು ಪಡೆದಿದ್ದುಇವರೆಲ್ಲರನ್ನೂ ಈ ಸಂದರ್ಭದಲ್ಲಿಗೌರವಿಸಲಾಗುವುದು. ಫಾದರ್ ಮುಲ್ಲರ್ ಸೇವಾ ಸಂಸ್ಥೆಯು ನೀಡುವಅಧ್ಯಕ್ಷೀಯಚಿನ್ನದ ಪದಕವನ್ನುಅಂದುಘೋಷಿಸಲಿದ್ದುಕಳೆದ 5ಳಿ ವರ್ಷಗಳ ವಿದ್ಯಾರ್ಥಿಜೀವನದಲ್ಲಿ ಶಿಕ್ಷಕೀಯ ಮತ್ತು ಶಿಕ್ಷಕೇತರ ಕ್ಷೇತ್ರದಲ್ಲಿಅತ್ಯುತ್ತಮ ಸಾಧನೆ ಮಾಡಿದ ಪದವಿ ವಿದ್ಯಾರ್ಥಿಗೆದೊರಕಲಿದೆ. ಅದೇರೀತಿ ಹೋಮಿಯೋಪಥಿ ಸ್ನಾತಕೋತ್ತರ ವಿಭಾಗದಲ್ಲಿಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಯನ್ನು ಗುರುತಿಸಿ ವಿಶೇಷಬಹುಮಾನದೊಂದಿಗೆ ಸನ್ಮಾನಿಸಲಾಗುವುದು.ಈ ವರ್ಷ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಕೋರ್ಸ್ ಆರಂಭಿಸಿ 25 ವರ್ಷ ಪೂರ್ಣಗೊಂಡಿದ್ದು, ಸ್ನಾತಕೋತ್ತರ ಪದವಿಯ ಬೆಳ್ಳಿ ಹಬ್ಬ ಸಮಾರಂಭವನ್ನು ಇದೇ ಮೇ ತಿಂಗಳ 6 ರಂದು ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
