ಕುಂದಾಪುರ: ಕುಂದಾಪುರ ರೋಜರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ 32 ನೇ ವಾರ್ಷಿಕ ಸಾಮಾನ್ಯ ಸಭೆಯು ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಭಾನುವಾರ (ಸೆ.10 ರಂದು) ನಡೆಯಿತು. ಸೊಸೈಟಿಯ ಅಧ್ಯಕ್ಷ ಜಾನ್ಸನ್ ಡಿ’ ಅಲ್ಮೇಡಾ ಅಧ್ಯಕ್ಷತೆ ವಹಿಸಿ 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಸಂಘದ ಸದಸ್ಯರಿಗೆ ಶೇ. 22 % ಡಿವಿಡೆಂಡ್ ಘೋಷಣೆ ಮಾಡಿದರು.
ಸಂಘದ ಕಾರ್ಯನಿರ್ವಹಣ ಅಧಿಕಾರಿ ಮೇಬಲ್ ಡಿಆಲ್ಮೇಡಾ ಪರಿಶೋಧಿತ ಲೆಕ್ಕಪತ್ರಗಳನ್ನು ಮಂಡಿಸಿದರು ವರದಿ ಸಾಲಿನ ಅಂತ್ಯಕ್ಕೆ ಒಟ್ಟು 4123 ಸದ್ಯಸರಿಂದ 1,00,68,230 ಪಾಲು ಬಂಡವಾಳ ಹಾಗೂ 142 ಕೋಟಿ ರೂ ಠೇವಣಿ ಇದ್ದು 115 ಕೋಟಿ ಹೊರಬಾಕಿ ಸಾಲ ಹೊಂದಿದ್ದು, ರೂಪಾಯಿ 660 ಕೋಟಿ ವ್ಯವಹಾರ 3.53 ಕೋಟಿ ನಿವ್ವಳ ಲಾಭ ಪಡೆದಿದೆ’ ಎಂದರು.
ಅಧ್ಯಕ್ಶತೆ ವಹಿಸಿದ್ದ ಜಾನ್ಸನ್ ಡಿ’ ಅಲ್ಮೇಡಾ 2023 ರ ಆಗಸ್ಟ್ ಅಂತ್ಯಕ್ಕೆ ಒಟ್ಟು ರೂಪಾಯಿ 148 ಕೋಟಿ ಠೇವಣಿ ಹಾಗೂ ರೂ 119 ಕೋಟಿ ಸಾಲ ಇದೆ. ವರದಿ ಸಾಲಿನಲ್ಲಿ ಸಂಘವು ರೂ 3.53 ನಿವ್ವಳ ಲಾಭವನ್ನು ಗಳಿಸಿದೆ ಎಂದು ಸಂಘದ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು.
ಕಳೆದ ಸಾಲಿನಲ್ಲಿ ಸಂಸ್ಥೆ ಒಟ್ಟು ರೂಪಾಯಿ 660 ಕೋಟಿ ವ್ಯವಹಾರ ಮಾಡಿದೆ ಈಗಾಗಲೆ ಸೊಸೈಟಿಗೆ 8 ಶಾಖೆಗಳು ಇದ್ದು, ಇನ್ನೂ ಎರಡು ಶಾಖೆಗಳನ್ನು ಆದಷ್ಟು ಬೇಗನೆ ತೆರೆಯಲಿವೆ ಎಂದು ತಿಳಿಸಿ, ಸೊಸೈಟಿಯು ಕೇವಲ ಹಣದ ವ್ಯವಹಾರ ಮಾಡದೆ, ಸಮಾಜಕ್ಕೆ ಒಳಿತಾಗುವಂತಹ ಯೋಜನೆಗಳನ್ನು ಮಾಡುತ್ತ ಇದ್ದು ಈ ವರ್ಷ ವಿದ್ಯಾರ್ಥಿಗಳಿಗೆ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಲು ಆರಂಭಿಸುತ್ತದೆ, ಮುಂದಿನ ವರ್ಷ ಸಿ.ಎ. ಮತ್ತು ಡಾಕ್ಟರೇಟ್ ಪದವಿ ಪಡೆದವರಿಗೆ ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಅಧ್ಯಕ್ಷರು ತಿಳಿಸಿದರು. ಸಂಘವು ಈ ವರ್ಷ ದಕ್ಷಿಣ ಕನ್ನಡ ಸಹಾಕಾರಿ ಬ್ಯಾಂಕ್ ಪ್ರಶಸ್ತಿ ಗಳಿಸಿ ಹಿಂದಿನ ನಾಲ್ಕು ವರ್ಷಗಳಲ್ಲಿ ನಿರಂತರ ವಿವಿಧ ರೀತಿಯ ಸಹಾಕಾರಿ ಪ್ರಶಸ್ತಿಗಳ ಗರಿಯನ್ನು ಗಳಿಸಿಕೊಂಡಿದೆ ಎಂದು. ತೀಳಿಸಿದರು.
ಸಂಘದ ಮುಖ್ಯ ಸಲಹದಾರರಾದ ಅತೀ ವಂದನಿಯ ಸ್ಟ್ಯಾನಿ ತಾವ್ರೋ ರವರು ‘ಈ ಸಂಘ ರೋಜರಿ ಮಾತೆಯ ಆಶಿರ್ವಾದದಲ್ಲಿ ಸ್ಥಾಪನೆಯಾಗಿದ್ದು, ಈ ಸಂಘಕ್ಕೆ ಅವಳ ಆಶಿರ್ವಾದ ಎಂದಿಗೂ ಇರುತ್ತದೆ, ರೋಜರಿ ಸಂಘ ವಿದ್ಯಾರ್ಥಿ ವೇತನ, ಶಿಕ್ಷಣಕ್ಕೆ ಸಾಲ ಕೊಟ್ಟು ಪ್ರೇರೆಪಿಸುತ್ತದೆ ಅಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಾಯ ನೀಡುತ್ತದೆ, ಮಾತ್ರವಲ್ಲ ವಾಪಾಸು ಬಂದು ತಾಯ್ನಾಡಿನಲ್ಲಿ ಉದ್ಯೋಗ ಮಾಡಲು ಪ್ರರೇಪಿಸುತ್ತದೆ ಎಂದು ಶ್ಲಾಘನೆ ಮಾಡುತ್ತಾ, ಸಂಘ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಹರಸಿದರು.
ಸಂಘದ ಸದಸ್ಯರ 10 ನೇ ತರಗತಿ, ಪಿ.ಯು.ಸಿ.ಪದವಿ, ಸ್ನಾಕೋತ್ತರ ಇಂಜಿನಿಯರಿoಗ್, ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಸಭೆಯಲ್ಲಿ ನಿರ್ದೇಶಕಿಯರಾದ ಡೈನಾ ಡಿ ಅಲ್ಮೇಡಾ, ಶಾಂತಿ ಆರ್ ಕರ್ವಾಲ್ಲೊ, ಶಾಂತಿ ಡಾಯಾಸ್, ನಿರ್ದೇಶಕರಾದ ಫಿಲಿಪ್ ಡಿಕೋಸ್ಟಾ, ವಿನೋದ್ ಕ್ರಾಸ್ಟೊ,ಬ್ಯಾಪ್ಟಿಸ್ಟ್ ಡಾಯಾಸ್, ಓಜಲಿನ್ ರೆಬೆಲ್ಲೊ, ಪ್ರಕಾಶ್ ಲೋಬೋ, ಸಂತೋಷ್ ಓಝೊವಲ್ಡ್ ಡಿ ಸಿಲ್ವಾ, ವಿಲ್ಫ್ರೆಡ್ ಮಿನೇಜಸ್, ಟೆರೆನ್ಸ್ ಸುವಾರಿಸ್, ಮತ್ತು ಮೈಕಲ್ ಪಿಂಟೊ, ತಿಯೋದರ ಒಲಿವೇರ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷರಾದ ಕಿರಣ್ ಲೋಬೊ ಸ್ವಾಗತಿಸಿದರು. ನಿರ್ದೇಶಕ ವಿಲ್ಸನ್ ಡಿ ಸೋಜಾ ಕಾರ್ಯಕ್ರಮ ನಿರೂಪಿಸಿದರು. ನಿರ್ದೇಶಕ ಡೆರಿಕ್ ಡಿಸೋಜಾ ವಂದಿಸಿದರು.