JANANUDI.COM NETWORK
ಕುಂದಾಪುರ ತೆರಾಲಿಯ ಸಂಭ್ರಮ – ಮೇರಿ ಮಾತೆಯ ಆದರ್ಶದಂತೆ ನಾವೆಲ್ಲಾ ಬಾಳೋಣ -ಫಾ|ರೋಯ್ ಲೋಬೊ
ಕುಂದಾಪುರ,ನ.28: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ಮಂಗಳವಾರದಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿದ ತರುವಾಯ ಈ ದೇವರ ವಾಕ್ಯದ ಭಕ್ತಿಯನ್ನು ಆಚರಿಸಲಾಯಿತು
ಈ ಪೂಜಾ ವಿಧಿಯನ್ನು ಕಳೆದ ವರ್ಷ ಕುಂದಾಪುರ ಚರ್ಚಿನಲ್ಲಿ ಸೇವೆ ಸಹಾಯಕ ಗುರುಗಳಾಗಿ ನೀಡಿದ ವಂ|ಫಾ|ರೋಯ್ ಲೋಬೊ ನಡೆಸಿಕೊಟ್ಟು “ಯಾವುದೋ ಮನುಷ್ಯ ನಮಗೆ ಒಳಿತನ್ನು ಮಾತನಾಡಿದರೆ, ನಾವು ಸಂತೋಷಗೊಳ್ಳುತ್ತೇವೆ, ಅದೇ ರೀತಿ ನಮ್ಮನ್ನು ಕೆಟ್ಟದ್ದು ಮಾತನಾಡಿದರೆ, ನಮಗೆ ಅತೀವ ದುಖವಾಗುತ್ತದೆ, ಪೆಟ್ಟು ಹೊಡೆದರೆ ಮರೆಯಬಹುದು, ಆದರೆ ಆಡಿದ ಮಾತು ಮರೆಯುವುದು ಸಾಧ್ಯವಿಲ್ಲಾ ಎಂವ ಗಾದೆಯೆ ಇದೆ ಸಾಮಾನ್ಯ ಜನರ ಮಾತಿಗೆ ಅಷ್ಟು ಪ್ರಭಾವ ಇದೆಯೆಂದಾದರೆ ದೇವರ ಮಾತುಗಳಿಗೆ ವಾಕ್ಯಗಳಿಗೆ ಎಷ್ಟು ಮಹತ್ವ ಇರಬೇಡ? ಮೇರಿ ಮಾತೆ ದೇವರ ವಾಕ್ಯವನ್ನು ಅಕ್ಷರಸವಾಗಿ ಪಾಲಿಸಿದವಳು, ದೇವದೂತರು ದೇವರ ವಾಕ್ಯವನ್ನು ಮೇರಿ ಮಾತೆಗೆ ತಿಳಿಸಿದಾಗ ಅವಳು ‘ದೇವರೆ ನಾನು ನಿನ್ನ ಚರಣ ದಾಸಿ, ನಿಮ್ಮ ಮಾತಿನಂತೆ ನಡೆಯುತ್ತೇನೆ’ ಎಂದು ಉದ್ಗರಿಸಿದಳು, ಮತ್ತು ಜೀವನವೀಡಿ ದೇವರ ವಾಕ್ಯಕ್ಕೆ ಅನುಗುಣವಾಗಿ ನಡೆದುಕೊಂಡವಳು. ಮೇರಿ ಮಾತೆ ಯೇಸುವನ್ನು ಎಲ್ಲರಿಕಿಂತ ಹೆಚ್ಚು ಮೇರಿ ಮಾತೆ ಅರ್ಥ ಮಾಡಿಕೊಂಡವಳಾಗಿದ್ದಳು, ಹಾಗಾಗಿ ಮೇರಿ ಮಾತೆಯ ಆದರ್ಶದಂತೆ ನಾವೆಲ್ಲಾ ಬಾಳೋಣ’ ಎಂದು’ ಅವರು ಸಂದೇಶ ನೀಡಿದರು
ದೇವರ ವಾಕ್ಯದ ಭಕ್ತಿ ಸಂಭ್ರಮದ ವಿಧಿಯಲ್ಲಿ ಈ ಹಿಂದೆ ಸೇವೆ ನೀಡಿದ ಮಂಗಳೂರು ರೊಜಾರಿಯೊ ಕ್ಯಾಥೆಡ್ರಲ್ ಇಗರ್ಜಿಯ ಧರ್ಮಗುರು ಅ|ವಂ|ಜೆ.ಬಿ.ಕ್ರಾಸ್ತಾ, ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ|ವಿಜಯ್ ಡಿಸೋಜಾ, ಮತ್ತು ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲುಗೊಂಡರು. ಗಾಯನ ಮಂಡಳಿಯ ನೇತ್ರತ್ವವನ್ನು ಪ್ರಾಂಶುಪಾಲಾರಾದ ಧರ್ಮಗುರು ವಂ|ಪ್ರವೀಣ್ ಅಮ್ರತ್ ಮಾರ್ಟಿಸ್ ವಹಿಸಿದ್ದರು
ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷ ವಂದನಾರ್ಪಣೆ ಸಲ್ಲಿಸಿದರು. ಕಾರ್ಯದರ್ಶಿ ಸದಸ್ಯರು, ಗುರಿಕಾರರು, ಧರ್ಮ ಭಗಿನಿಯರು ಉಪಸ್ಥಿತರಿದ್ದರು. ಈ ಜಾತ್ರೆಗೆ ಕ್ರೈಸ್ತ ಬಾಂಧವರಲ್ಲದೆ, ಜಾತಿ ಧರ್ಮ ಭೇದ ಭಾವ ಮರೆತು ಬಹು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಭಾವೈಕತೆ ಮೆರೆದರು.