

ಶ್ರೀನಿವಾಸಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ 22 ನೇ ತ್ರೈ ವಾರ್ಷಿಕ ಮಹಾಧಿವೇಶನ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆ ಯಲ್ಲಿ 6 ಜನ ಸದಸ್ಯರು ಸ್ಪರ್ದಿಸಿದ್ದು ಇದರಲ್ಲಿ 3 ಜನ ಸದಸ್ಯರು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಪಟ್ಟಣದ ಕೆಇಬಿ ಉಪವಿಬಾಗದಿಂದ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆಯಲ್ಲಿ ಚಂದ್ರು ಆರ್. 76 ಮತ, ಆರ್.ಕೆ ಶ್ರೀನಿವಾಸ್ ಕುಮಾರ್ 69 ಮತ, ಕೆ.ವಿ ನಂಜುಂಡೇಶ್ವರ 64 ಮತ ಪಡೆದು ಜಯಶೀಲರಾಗಿದ್ದಾರೆ, ಇವರ ಪ್ರತಿಸ್ಪರ್ದಿಗಳಾದ ಎನ್.ರಾಜಣ್ಣ 61 ಮತ, ಪಿ.ಶ್ರೀನಿವಾಸ್ 60 ಮತ, ಬಿ.ಆರ್ ನಾಗೇಶ್ 47 ಮತಗಳನ್ನು ಪಡೆದು ಪರಾಭವ ಗೊಂಡಿರುತ್ತಾರೆ ಎಂದು ಚುನಾವಣಾಧಿಕಾರಿ ರಾಜಗೋಪಾಲರೆಡ್ಡಿ ತಿಳಿಸಿದ್ದಾರೆ.
ಈ ಚುನಾವಣೆಯಲ್ಲಿ ಆಯ್ಕೆಯಾದ ಆರ್ ಚಂದ್ರು ರವರು ಮಾತನಾಡಿ 22 ನೇ ತ್ರೈವಾರ್ಷಿಕ ಮಹಾ ಅಧಿವೇಶನ ಚುನಾವಣೆಯಲ್ಲಿ ನಮಗೆ ಸಹಕಾರ ನೀಡಿದ ಎಲ್ಲಾ ನೌಕರರಿಗೆ ಕೃತಜ್ನತೆಗಳನ್ನು ಸಲ್ಲಿಸಿದರು, ನಮ್ಮ ಕೆಇಬಿ ನೌಕರರಿಗೆ ಮುಂದಿನ ದಿನಗಳಲ್ಲಿ ಅವರ ಕಷ್ಟ ಸುಖಗಳಿಗೆ ಬಾಗಿಯಾಗಿ ಯಾವುದೇ ಸಮಸ್ಯೆ ಬಂದರೂ ಈ ಚುನಾವಣೆಯಲ್ಲಿ ಗೆದ್ದಿರುವ ಮೂವರು ಸದಸ್ಯರೂ ಸಹ ಹಗಳಿರುಳು ಶ್ರಮಿಸಿ ಸಹಕಾರಿಯಾಗಿ ನಿಲ್ಲುತ್ತೇವೆ ಎಂದು ಹೇಳಿದರು.
ಈ ಸಮಯದಲ್ಲಿ ಕೆ.ಇ.ಬಿ ವಿವಿದ ಸಂಘಗಳ ಅದ್ಯಕ್ಷರುಗಳು, ಪದಾದಿಕಾರಿಗಳು ಹಾಗು ನೌಕರರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.