ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು – ರೈತ ಸಂಘದ ಉಪಾಧ್ಯಕ್ಚ ಬಚ್ಚೇಗೌಡ

ಶ್ರೀನಿವಾಸಪುರ : ಚುನಾವಣೆ ಸಂದರ್ಭದಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದಂತೆ ರೈತ ವಿರೋಧಿ 3 ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್ಸು ಪಡೆಯಬೇಕು ಎಂದು ರೈತ ಸಂಘದ ಉಪಾಧ್ಯಕ್ಚ ಬಚ್ಚೇಗೌಡ ಆಗ್ರಹಿಸಿದರು.
ಪಟ್ಟಣದ ನೌಕರರ ಭವನದಲ್ಲಿ ಮಂಗಳವಾರ ನಡೆದ ರೈತ ಸಂಘದ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣ ಮಾಡಬಾರದು, ಹಾಗೂ ಕೇರಳ, ತಮಿಳು ನಾಡು, ತೆಲಂಗಾಣ ರಾಜ್ಯ ಸರ್ಕಾರಗಳಂತೆ ರಾಜ್ಯದಲ್ಲಿಯೂ ಯಾವುದೇ ಕಾರಣಕ್ಕೂ ವಿದ್ಯುತ್ ಖಾಸಗೀಕರಣ ಮಾಡುವುದಿಲ್ಲ ಎಂದು ವಿಧಾನ ಸಭೆಯಲ್ಲಿ ನಿರ್ಣಯ ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು. ರಾಜ್ಯದಲ್ಲಿ ನೀರಾವರಿ ಯೋಜನೆಗಳ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿದ್ದು, ಯೋಜನೆಗಳಿಗೆ ಸೂಕ್ತ ಹಣ ಬಿಡುಗಡೆ ಮಾಡಿ ತೋರಿತವಾಗಿ ಕಾಮಗಾರಿಗಳು ಸಂಪೂರ್ಣಗೊಳ್ಳಲು ಸರ್ಕಾರ ಕ್ರಮವಹಿಸಬೇಕು ಎಂದರು.
ರೈತ ಸಂಘದ ರಾಜ್ಯ ಮುಖಂಡ ಪ್ರಭಾಕರಗೌಡ ಮಾತನಾಡಿ ಜಿಲ್ಲೆಯು ಪದೇಪದೇ ಬರಗಾಲಕ್ಕೆ ಗುರಿಯಾಗುತ್ತಿದ್ದೆ. ಜಿಲ್ಲೆಯ ರೈತರು ಕೃಷಿಯ ಜೊತೆ ಹೈನುಗಾರಿಕೆಯನ್ನು ಉಪ ಕಸುಬಾಗಿ ಮಾಡುತ್ತೀರುತ್ತಾರೆ. ಇಂತಹ ಸಮಯದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟಯು ರೈತರಿಗೆ ನೀಡುತ್ತಿದ್ದ ಹಾಲಿನ ಬೆಲೆಯಲ್ಲಿ 2 ರೂಂ.ಗಳನ್ನು ಕಡಿತ ಮಾಡಿರುವುದು ಜಿಲ್ಲೆಯ ರೈತರಿಗೆ ಮಾಡಿದ ದ್ರೋಹವಾಗಿದೆ. ಹೆಚ್ಚು ಹಾಲು ಉತ್ಪಾದನೆ ಆಗುತ್ತಿದೆ ಮಾರುಕಟ್ಟೆ ಮಾಡಲು ಆಗದೆ ರೈತರಿಗೆ ನೀಡುತ್ತಿದ್ದ ಬೆಲೆಯಲ್ಲಿ ಕಡಿತ ಮಾಡಿರುವುದು ರೈತರಿಗೆ ಮಾಡಿದ ಮೋಸ ವಾಗಿದೆ. ಕೂಡಲೇ ಕಡಿತ ಮಾಡಿರುವ ದರವನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿ ವಿವಿಧ ಬೇಡಿಕೆಗಳ ಬಗ್ಗೆ ಚರ್ಚೆ ಮಾಡಿದರು.
ರೈತ ಮುಖಂಡರಾದ ಅಬ್ಬಣಿ ಶಿವಪ್ಪ, ಆನಂದ್, ಚಂದ್ರಪ್ಪ, ವೆಂಕಟಸ್ವಾಮಿ ರೆಡ್ಡಿ, ಸೀನಪ್ಪ, ಉಮಾದೇವಿ, ಅನ್ನಪೂರ್ಣ, ಭಾರತಿ ಇದ್ದರು.