

ಕೋಟೇಶ್ವರ: ಊರಿನ ಅಭಿವೃದ್ದಿಗೆ ಸಂಘಟನೆ ಅಗತ್ಯ.ಸಂಘಟನೆ ಬೆಳೆಯಬೇಕಾದರೇ ಒಳ್ಳೆಯ ನಾಯಕತ್ವವುಳ್ಳ ಯುವಕರು ಬೇಕು.ಇಂತಹ ಯುವಪಡೆ ಬೀಜಾಡಿ ಮಿತ್ರ ಸಂಗಮದಲ್ಲಿ ಇದೆ ಎಂದು ವಿಶ್ವ ಹಿಂದು ಪರಿಷತ್ ಕರ್ನಾಟಕ ದಕ್ಷಿಣದ ಪ್ರಾಂತ ಪ್ರಮುಖರಾದ ಪ್ರೇಮಾನಂದ ಶೆಟ್ಟಿ ಕಟ್ಕೇರೆ ಹೇಳಿದರು.
ಅವರು ಶನಿವಾರ ಬೀಜಾಡಿ ಮಿತ್ರಸೌಧದ ವಠಾರದಲ್ಲಿ ಜಿಲ್ಲಾ ಪ್ರಶಸ್ತಿ ಪುರಸ್ಕøತ ಸಂಸ್ಥೆ ಮಿತ್ರ ಸಂಗಮ ಬೀಜಾಡಿ-ಗೋಪಾಡಿ ಇದರ 28ನೇ ವಾರ್ಷಿಕೋತ್ಸವ, ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ, ಸಾಧಕರಿಗೆ ಗೌರವಾರ್ಪಣೆ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ವಉದ್ಯೋಗಕ್ಕೆ ದನದ ಕರು ವಿತರಣೆ ಹಾಗೂ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣಾ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕ,ರಕ್ತದಾನಿಪದ್ಮನಾಭ ಆಚಾರ್ಯ ಕೋಟೇಶ್ವರ ಇವರಿಗೆ ಊರ ಗೌರವದ ನಮ್ಮೂರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪತ್ರಕರ್ತ ಪ್ರಭಾಕರ ಆಚಾರ್ಯ ಚಿತ್ತೂರು, ಉಡುಪಿ ಜಿಲ್ಲಾ ನಿವೃತ್ತ ಜಿಎಸ್ಟಿ ಅಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ, ಬ್ರಹ್ಮಾವರ ಸಿಎ ಬ್ಯಾಂಕ್ ನಿವೃತ್ತ ಶಾಖಾ ಪ್ರಬಂಧಕ ರಘುರಾಮ ಬೈಕಾಡಿ, ಕರ್ನಾಟಕ ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕøತ ಡಾ.ಗಣೇಶ ಗಂಗೊಳ್ಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪರಿಸರದ ಏಳು ಪ್ರಾಥಮಿಕ ಶಾಲೆ ಮತ್ತು ಎರಡು ಪ್ರೌಢಶಾಲೆಗಳ 30 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಾಯಿತು. ಹುತಾತ್ಮ ಯೋಧ ಅನೂಪ್ ಪೂಜಾರಿ ಬೀಜಾಡಿ ಅವರಿಗೆ ನುಡಿನಮನ ಸಲ್ಲಿಸಲಾಯಿತು.
ಮುಖ್ಯ ಅತಿಥಿಯಾಗಿ ಕೋಟೇಶ್ವರದ ಉದ್ಯಮಿ ಆಟಕೆರೆ ವಿಶ್ವನಾಥ ಅನಂತ ಪೈ ಆಗಮಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಚಿತ್ರದುರ್ಗ ಹೋಟೆಲ್ ಉದ್ಯಮಿ ದೀಪಾನಂದ ಉಪಾಧ್ಯ, ಮಿತ್ರ ಸಂಗಮದ ಅಧ್ಯಕ್ಷ ಮಹೇಶ್ ಮೊಗವೀರ ಉಪಸ್ಥಿತರಿದ್ದರು.
ಮಿತ್ರ ಸಂಗಮದ ಗೌರವಾಧ್ಯಕ್ಷ ಬಿ.ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು. ಪ್ರದೀಪ್ ದೇವಾಡಿಗ ವರದಿ, ಅನೂಪ್ಕುಮಾರ್ ಬಿ.ಆರ್ ಸನ್ಮಾನಪತ್ರ, ಗಿರೀಶ್ ಕೆ.ಎಸ್ ಪ್ರತಿಭಾ ಪುರಸ್ಕಾರದ ಪಟ್ಟಿ ವಾಚಿಸಿದರು. ಚಂದ್ರ ಬಿ.ಎನ್ ವಂದಿಸಿದರು. ಪತ್ರಕರ್ತ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು.ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸ್ಥಳೀಯ ಪ್ರತಿಭೆಗಳಿಂದ ವಿವಿಧ ವಿನೋದಾವಳಿಗಳು, ಓಂಕಾರ ಕಲಾವಿದರು ಕನ್ನುಕೆರೆ ತೆಕ್ಕಟ್ಟೆ ಇವರಿಂದ ಕುಂದಗನ್ನಡದ ಹಾಸ್ಯಮಯ ನಗೆ ನಾಟಕ ಜರುಗಿತು.