ತ್ರಾಸಿಯಲ್ಲಿ ಕುಂದಾಪುರ ವಲಯದ ವೈ.ಸಿಎಸ್. ಸಮಾವೇಷ – ವ್ಯಕ್ತಿತ್ವ ವಿಕಸನ ಸಾಂಸ್ಕ್ರತಿಕ ಸ್ಪರ್ಧೆಗಳು

JANANUDI.COM NETWORK 

ತ್ರಾಸಿಯಲ್ಲಿ ಕುಂದಾಪುರ ವಲಯದ ವೈ.ಸಿಎಸ್. ಸಮಾವೇಷ – ವ್ಯಕ್ತಿತ್ವ ವಿಕಸನ ಸಾಂಸ್ಕ್ರತಿಕ ಸ್ಪರ್ಧೆಗಳು

ಕುಂದಾಪುರ, ಆ.22: ಕುಂದಾಪುರ ವಲಯ ಮಟ್ಟದ ಸಮಾವೇಷ ಮತ್ತು ಸಾಂಸ್ಕ್ರತಿಕ ಸ್ಪರ್ಧೆಗಳು ತ್ರಾಸಿ ಚರ್ಚಿನ ಮಿಲೇನಿಯಮ್ ಸಭಾ ಭವನದಲ್ಲಿ ಆ. 18 ರಂದು ನಡೆಯಿತು. ತ್ರಾಸಿ ಚರ್ಚಿನ ಧರ್ಮಗುರು ವಂ|ಫಾ|ಚಾಲ್ರ್ಸ್ ಲುವಿಸ್ ಅಧ್ಯಕ್ಷತೆ ವಹಿಸಿ ಸಮಾರಂಭದ ಉದ್ಘಾಟನೆಯನ್ನು ಮಾಡಿ ಶುಭ ಕೋರಿದರು.
ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಂ|ಫಾ|ಕಿರಣ್ ಸಲ್ಡಾನ್ಹಾ ಸ್ವಂತ ವ್ಯಕ್ತಿತ್ವ ವಿಕಸನದ ಬಗ್ಗೆ ಮಾಹಿತಿ ನೀಡಿದರು. ಉಡುಪಿ ಧರ್ಮಪ್ರಾಂತ್ಯದ ವೈ.ಸಿಎಸ್ ನಿರ್ದೇಶಕ ವಂ|ಫಾ|ಎಡ್ವಿನ್ ಡಿಸೋಜಾ ಮತ್ತು ಕುಂದಾಪುರ ವಲಯ ವೈ.ಸಿಎಸ್ ನಿರ್ದೇಶಕ ವಂ|ಫಾ|ಆಲ್ಬರ್ಟ್ ಕ್ರಾಸ್ತಾ ಶುಭ ನುಡಿದರು. ಕುಂದಾಪುರ ವಲಯ ವೈ.ಸಿ.ಎಸ್ ಲೋನಾ ಲುವಿಸ್, ಅಧ್ಯಕ್ಷೆ ನೆಲ್ಡ್ರಿಯಾ ಕ್ರಾಸ್ತಾ ಉಪಸ್ಥಿತರಿದ್ದರು.
ಮಧ್ಯಾನ್ಹದ ಸಮಾರಂಭದ ಅಧ್ಯಕ್ಷರಾಗಿ ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ|ಫಾ|ಸ್ಟ್ಯಾನಿ ತಾವ್ರೊ ‘ಇವತ್ತಿನ ಕಾಲ ಸರಿಯಿಲ್ಲಾ, ಎಲ್ಲೂ ನೋಡಿದರೂ ವಂಚನೆ ಕಾಣುತ್ತದೆ, ಯಾವುದಾದರೂ ಅಮಿಷವೊಡ್ಡಿ ಮೋಸ ಮಾಡುತ್ತಾರೆ ಆದರಿಂದ ನಾವು ಜಾಗ್ರತರಾಗಿರಬೇಕು, ಹದಿಹರೆಯದ ಪ್ರಾಯದಲ್ಲಿ ತಪ್ಪಿ ಬೀಳುವುದು ಸಹಜ ಆದರಿಂದ ಜಾಗರೂಕರಾಗಿರಿ, ವೈ.ಸಿ.ಎಸ್ ನಿಂದ ಸಿಗುವ ಅವಕಾಶ ಪ್ರೇರಣೆಯಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ದೇವರ ಮಕ್ಕಳಂತೆ ಜೀವಿಸಿ’ ಎಂದು ಸಂದೇಶ ನೀಡಿದರು. ಕುಂದಾಪುರದ ಸಹಾಯಕ ಧರ್ಮಗುರು ಉಪಸ್ಥಿತರಿದ್ದು. ವಲಯದ ಹಲವಾರು ವೈ.ಸಿಎಸ್ ಘಟಕಗಳು ಸಾಂಸ್ಕ್ರತಿಕ ಸ್ಪರ್ದೆಯಲ್ಲಿ ಭಾಗವಹಿಸಿ ವಿವಿಧ್ ಥರಹದ ಪ್ರದರ್ಶನಗಳನ್ನು ನೀಡಿದರು. ಸರಿತ ಆಳ್ವ, ಮೆಲ್ಕಮ್ ಲುವಿಸ್ ಮತ್ತು ರೇಶ್ಮಾ ಫೆರ್ನಾಂಡಿಸ್ ತೀರ್ಪುಗಾರಾಗಿದ್ದರು. ಜುನಿತಾ ವಂದಿಸಿದರು, ಪ್ರಿಯಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.