ಕೆದಿಂಜೆ ಶಾಲೆ : ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

ವರದಿ: ವಾಲ್ಟರ್ ಮೊಂತೇರೊ

ಕೆದಿಂಜೆ ಶಾಲೆ : ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ


ಕೆದಿಂಜೆ ಶ್ರೀ ವಿದ್ಯಾ ಬೋಧಿನಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮತ್ತು ಯು. ಸುಬ್ಬಣ್ಣ ಕಾಮತ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕರ್ನಾಟಕ ಸರಕಾರದಿಂದ ಉಚಿತ ಪಠ್ಯ ಪುಸ್ತಕ, ಮತ್ರೆಂಗಿ ಪರಾರಿ ದಿ| ರಾಮಣ್ಣ ಶೆಟ್ಟಿಯವರ ಸ್ಮರಣಾರ್ಥ ದೇವಕಿ ರಾಮಣ್ಣ ಶೆಟ್ಟಿ ಮತ್ತು ಮಕ್ಕಳು ಹಾಗೂ ಮೊಮ್ಮಕ್ಕಳು, ಕೆದಿಂಜೆ-ಕೂಟಾಯಿ, ನಂದಳಿಕೆ ಮೂಡುಮನೆ ಗಿರಿಜಮ್ಮ ಸುಬ್ಬರಾವ್ ಸ್ಮರಣಾರ್ಥ ಅವರ ಮೊಮ್ಮಕ್ಕಳಾದ ಡಾ|| ಕಿರಣ್ ಶ್ರೀಹರ್ಷ, ಅಮೇರಿಕ ಹಾಗೂ ಚಂದನ ಪ್ರದೀಪ್ ಶೆಣೈ, ಬೆಂಗಳೂರು ಇವರಿಂದ ಸುಮಾರು ರೂಪಾಯಿ 15,000/- ಮೌಲ್ಯದ ಉಚಿತ ಬರೆಯುವ ಪುಸ್ತಕ ಮತ್ತು ನಿಟ್ಟೆ-ಕೆಮ್ಮಣ್ಣು ಪಡುಮನೆ ದೀಪಕ್ ಕುಮಾರ್ ಮತ್ತು ದಿಲೀಪ್ ಕುಮಾರ್ ಹಾಗೂ ನಿವೃತ್ತ ಶಿಕ್ಷಕ ಲಕ್ಷ್ಮೀನಾರಾಯಣ ಭಟ್‍ರವರಿಂದ ಉಚಿತ ಲೇಖನ ಸಾಮಾಗ್ರಿ ವಿತರಣಾ ಕಾರ್ಯಕ್ರಮ ಮಂಗಳವಾರ ಶಾಲಾ ಸಭಾಭವನದಲ್ಲಿ ಜರಗಿತು.
ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ನಿವೃತ್ತ ಮುಖ್ಯೋಪಾಧ್ಯಾಯ ಎನ್. ಸುಧಾಕರ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ ಮೊದಲಾದವರು ಉಪಸ್ಥಿತತಿರಿದ್ದರು.
ಶಾಲಾ ಶಿಕ್ಷಕ ಪ್ರಥ್ವೀರಾಜ್ ಬಲ್ಲಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸಹ ಶಿಕ್ಷಕಿ ರೇಖಾ ಪೈ ವಂದಿಸಿದರು. ಕಾರ್ಯಕ್ರಮ ನಿರೂಪಿಸಿದರು, ಶಾಲಾ ಗೌರವ ಶಿಕ್ಷಕಿಯರು ಉಪಸ್ಥಿತಿತರಿದ್ದರು.