ವರದಿ:ಶಬ್ಬೀರ್ ಅಹ್ಮದ್
ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಿ : ಹೋರಾಟಕ್ಕೆ ಸಿದ್ದರಾದ ಅವಧಿ ಮುಗಿದ ಕೋಲಾರ ನಗರಸಭಾ ಸದಸ್ಯರು
ಕೋಲಾರ : ಕೋಲಾರ ನಗರಸಭೆಯ ಸದಸ್ಯರ ಅವಧಿಯು ಮಾರ್ಚ್ 3, 2019ಕ್ಕೆ ಮುಗಿದಿದ್ದು, ಅಂದಿನಿಂದ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದು, ಸಾರ್ವಜನಿಕರ ಕೆಲಸಗಳು ನಗರ ವ್ಯಾಪ್ತಿಯಲ್ಲಿ ಕುಂಟಿತವಾಗಿರುತ್ತದೆ ಎಂದು ಅವಧಿಮುಗಿದಿರುವ ಸದಸ್ಯರುಗಳು ಆರೋಪಿಸಿದ್ದಾರೆ.
ನಗರದೆಲ್ಲೆಡೆ ನೀರಿನ ವ್ಯವಸ್ಥೆ, ಪಂಪು ಮೋಟರ್ ರಿಪೇರಿ, ನಗರಸಭೆಯ ಟ್ಯಾಕರ್ ನೀರಿನ ಹಂಚಿಕೆ, ಚರಂಡಿ ಹಾಗೂ ಒಳಚರಂಡಿ ನೈರ್ಮಲೀಕರಣ, ಸ್ವಚ್ಚತೆ ಹಾಗೂ ಕಸವಿಲೇವಾರಿ, ಬೀದಿದೀಪ ನಿರ್ವಹಣೆ ಸೇರಿದಂತೆ ಇಂತಹ ಕನಿಷ್ಠ ಸೌಲಭ್ಯಗಳು ನಮ್ಮ ಕೋಲಾರ ನಗರದ ಸಾರ್ವಜನಿಕರಿಗೆ ಮರಿಚಿಕೆಯಾಗಿದೆ. 35 ಜನ ನಗರಸಭಾ ಸದಸ್ಯರ ಅವಧಿ ಮುಗಿದರೂ ಸಹ ಆಯಾ ಪ್ರದೇಶದ ಆಯಾ ವಾರ್ಡುಗಳ ಸಾರ್ವಜನಿಕರು ಆ ಭಾಗದ ಅವಧಿ ಮುಗಿದ ಸದಸ್ಯರುಗಳ ಮೇಲೆ ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿ ಒತ್ತಡ ಹೇರುತ್ತಿದ್ದು, ಆ ಸಮಸ್ಯೆಗಳ ಬಗ್ಗೆ ನಗರಸಭಾ ಅಧಿಕಾರಿಗಳಾಗಲಿ ಮತ್ತು ನಗರಸಭೆಯ ಆಡಳಿತಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ಇಷ್ಟು ದಿನಗಳು ಲೋಕಸಭಾ ಚುನಾವಣೆಯಲ್ಲಿ ಅಧಿಕಾರಿಗಳು ಮಗ್ನರಾಗಿದ್ದು, ಈಗ ಚುನಾವಣೆ ಮುಗಿದಿದ್ದು ಹೀಗಾದರೂ ಮೇಲ್ಕಂಡ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ 3 ದಿನಗಳÀ ನಂತರ ಸಾರ್ವಜನಿಕರ ಹಿತ ಕಾಪಾಡಲು ಹೋರಾಟ ಮಾಡಬೇಕಗುತ್ತದೆ ಎಂದು ಅವಧಿ ಮುಗಿದಿರುವ ಸದಸ್ಯರುಗಳಾದ ಸಲ್ಲಾವುದ್ದೀನ್ ಬಾಬು, ಅಪ್ರೋಜ್ ಪಾಷ, ಶೇಕ್ ಚಾಂದ್ ಪಾಷ, ಎಸ್.ಆರ್.ಮುರಳಿಗೌಡ, ಸೋಮಶೇಖರ್, ಶಫಿವುಲ್ಲಾ, ಅಬ್ದುಲ್ ಸಾದಿಕ್ ಪಾಷ, ಕಾಶಿ ವಿಶ್ವನಾಥ್, ರವೀಂದ್ರ, ಮಂಜುನಾಥ ರವರುಗಳು ನಗರಸಭಾ ಅಧಿಕಾರಿಗಳಿಗೆ ಹಾಗೂ ಆಡಳಿತಾಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ.