ವರದಿ: ಭಗಿನಿ ಸಿಲ್ವಿಯಾ
ಆಪೊಸ್ತಲಿಕ್ ಕಾರ್ಮಿಲ್ ಸಂಸ್ಥೆಯ ಮಹಾ ತಾಯಿ ಭಗಿನಿ ಸುಶೀಲ ಎ.ಸಿ. ಯವರ ಸ್ವರ್ಣ ಮಹೋತ್ಸವ : ಪರರ ಸೇವೆಯೆ ದೇವರ ಪ್ರೀತಿ ಪೂರ್ವಕ ಸೇವೆ
”ಪರರ ಸೇವೆಯೆ ದೇವರ ಸೇವೆ, ಹಾಗಾಗಿ ಪರರಿಗೆ ನನ್ನ ಪ್ರೀತಿ ಪೂರ್ವಕ ಸೇವೆ ನೀಡುತ್ತೆನೆ. ನಾನೊಬ್ಬಳು ಭಗಿನಿಯಾಗಲು ತುಂಬ ಮಂದಿಯ ಪ್ರೋತ್ಸಾಹ ನನಗೆ ಲಭಿಸಿತು, ಹಾಗೇಯೆ ದೇವರ ಸೇವೆಯಂತೆ ಪರರ ಸೇವೆ ಮಾಡಲು, ಈ ಕಾಲದಲ್ಲಿ ಹೆಚ್ಚಿನ ಯುವಕ ಯುವತಿಯರು ಮುಂದೆ ಬರಬೇಕು, ಮುಂದೆ ಬಂದವರಿಗೆಲ್ಲರಿಗೂ, ನಾವೆಲ್ಲಾ ನಾವು ಪ್ರೋತ್ಸಾಹಿಸೋಣ’ ಎಂದು ಆಪೊಸ್ತಲಿಕ್ ಕಾರ್ಮಿಲ್ ಸಂಸ್ಥೆಯ ಮಹಾ ತಾಯಿ (ಸುಪಿರೀಯರ್ ಜನರಲ್) ಭಗಿನಿ ಸುಶೀಲ ಎ.ಸಿ. ಯವರು ಸಂದೇಶ ನೀಡಿದರು.
ಅವರು ತಮ್ಮ ಧರ್ಮ ಭಗಿನಿ ದೀಕ್ಷೆಯ ಸ್ವರ್ಣ ಮಹೋತ್ಸವದ ಪ್ರಯುಕ್ತ ಮಂಗಳೂರಿನ ಕರ್ನಾಟಕ ಪ್ರಾಂತ್ಯದ ಸೈಂಟ್ ಆನ್ಸ್ ಪ್ರೋವಿನ್ಸಿಯಲ್ ವಸತಿ ಗ್ರಹದಲ್ಲಿ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಭಗಿನಿಯರು ಎರ್ಪಡಿಸಿದ ಸಂಭ್ರಾಮಾಚರಣೆಯ ಸಂದರ್ಭ ಅವರು ಉತ್ತರವಾಗಿ ಸಂದೇಶ ನೀಡಿದರು. ’ನಮ್ಮ ಆಪೊಸ್ತಲಿಕ್ ಸಂಸ್ಥೆ ಸಮಾಜದ ಸೇವೆಗಾಗಿ ಹೆಣ್ಣು ಮಕ್ಕಳ ಎಳಿಗೆ ಅಭಿವ್ರದ್ದಿಗಾಗಿಯೆ ಇದೆ, ಹಾಗಾಗಿ ಇಂಥ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಗೆ ಪ್ರಾರ್ಥನೆ ಮತ್ತು ಸೇವೆಯನ್ನು ಪ್ರೀತಿಸುವ ಹೆಣ್ಣು ಮಕ್ಕಳು ಸೇರಬೇಕು’ ಎಂದು ಅವರು ಆಶಿಸಿದರು.
ಆಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯನ್ನು 1870 ರಲ್ಲಿ ಮದರ್ ವೆರೋನಿಕ ಆರಂಭಿಸಿದರು. ಭಾರತೀಯ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿ, ಹಾಗೂ ಆತ್ಮ ವಿಶ್ವಾಸವನ್ನು ಮೂಡಿಸಿ, ಅವರ ಸರ್ವಾಂಗೀಣ ಅಭಿವ್ರದ್ದಿ ಪಡಿಸುವ ಗುರಿಯಾಗಿ ಈ ಸಂಸ್ಥೆ ಆರಂಭ ಗೊಂಡಿತ್ತು. ಹಾಗೇ ಕ್ರೈಸ್ತ ಹೆಣ್ಣು ಮಕ್ಕಳಲ್ಲಿ ದೈವ ಬಕ್ತಿ ಹೆಚ್ಚಿ, ಸಮಾಜದ ಸೇವೆಗಾಗಿ ಭಗಿನಿಯರಾಗಲು ಪ್ರೇರಣೆ ಪ್ರೋತ್ಸಾಹ ನೀಡುವಲ್ಲಿ ಶ್ರಮಿಸುತ್ತದೆ.
ಸುಪಿರೀಯರ್ ಜನರಲ್ ಭಗಿನಿ ಸುಶೀಲ ಎ.ಸಿ. ಯವರ ಸ್ವರ್ಣ ಮಹೋತ್ಸವದ ಸಂದರ್ಭ ಆಪೋಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಕರ್ನಾಟಕ ಪ್ರಾಂತ್ಯಾಧಿಕಾರಿ ಭಗಿನಿ ರೀಟಾ ಅಭಿನಂದನ ಮಾತುಗಳನ್ನಾಡಿದರು. ನಿಯೋಜಿತ ಸು್ಪಿರೀಯರ್ ಜನರಲ್ ಆಗಿ ಚುನಾಯಿಸಲ್ಪಟ್ಟ ಭಗಿನಿ ಶಮಿತಾ, ಇವರು ಎಪ್ರ್ಲಿಲ್ ೨೮ ರಂದು ಅಧಿಕಾರ ಸ್ವೀಕರಿಸುತ್ತಾರೆ, ಕರ್ನಾಟಕ ಪ್ರಾಂತ್ಯಾಧಿಕಾರಿಯ ಕಾರ್ಯದರ್ಶಿ ಭಗಿನಿ ಜೆನಿಫರ್ ಡಿಸಿಲ್ವಾ, ಕರ್ನಾಟಕ ಪ್ರಾಂತ್ಯದ ಸಹ ಪ್ರಾಂತ್ಯಾಧಿಕಾರಿ ರೋಜ್ ಆಗ್ನೆಸ್, ಆಪೋಸ್ತಲಿಕ್ ಕಾರ್ಮೆಲ್ ಕರ್ನಾಟಕ ಪ್ರಾಂತ್ಯದ ಕೋಶಾಧಿಕಾರಿ ರೋಜ್ ಆಗ್ನೆಸ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮಂಗಳೂರು, ಉಡುಪಿ, ಕುಂದಾಪುರ, ಕಾರ್ಕಳ ಹೀಗೆ ನಾನ ಕಡೆಯ ಆಪೊಸ್ತಲಿಕ್ ಕಾರ್ಮೆಲ್ ಸಂಸ್ಥೆಯ ಹಲವಾರು ಭಗಿನಿಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.