

ಕೋಲಾರ,ಫೆ.2: ಮೇ ತಿಂಗಳಿನಲ್ಲಿ ಮಲೇಷ್ಯಾದ ಓಕಿನೋವಾ ಗೊಜೋ ರಿಯೋ ಇಫೋ ಕ್ರೀಡಾಂಗಣದಲ್ಲಿ ನಡೆಯುವ 20ನೇ ಅಂತರರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಫ್ಗೆ ಅಂತರಾಷ್ಟ್ರೀಯ ಕ್ರೀಡಾಪಟು ಕೋಲಾರದ ನಿವಾಸಿ ರುಮಾನಾ ಕೌಸರ್ ಬೇಗ್ ಆಯ್ಕೆಯಾಗಿದ್ದಾರೆ.
ರುಮಾನಾ ಕೌಸರ್ ಬೇಗ್ ಕರಾಟೆ ಕ್ರೀಡೆಯಲ್ಲಿ ವಸತಿ ಶಾಲೆಗಳಲ್ಲಿ 3000 ಬಾಲಕಿಯರಿಗೆ ಆತ್ಮ ರಕ್ಷಣೆ ಕಲೆಯನ್ನು ಕರಾಟೆ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ ಹೈದರಾಬಾದ್ ತೆಲಂಗಾಣ ರಾಜ್ಯದಲ್ಲಿ ನಡೆದ ಚಾಂಪಿಯನ್ಶಿಫ್ 2024ನ್ನು ಹಾಗೂ ಮೆರಿಟ್ ಸರ್ಟಿಫಿಕೇಟ್ ಸೇರಿದಂತೆ ರಾಜ್ಯ ಮಟ್ಟದಲ್ಲಿ 30 ಪದಕಗಳು ಮತ್ತು 100 ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕರಾಟೆ ಟ್ರೋಫಿಗಳನ್ನು ಗಳಿಸಿದ ಸಾಧನೆಗಳ ದಾಖಲೆಯನ್ನು ಮಾಡಿದ್ದಾರೆ.
ಹಲವು ಸಂಘ ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿರುವ ರುಮಾನಾ ಕೌಸರ್ ಬೇಗ್ ಇತ್ತೀಚೆಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೂ ಸಹ ಭಾಜನರಾಗಿದ್ದಾರೆ. ಸಾಧಕ ರತ್ನ ರಾಷ್ಟ್ರೀಯ ಪ್ರಶಸ್ತಿ ಕರಾಟೆ 2023, ಇಂಡಿಯಾ ಬುಕ್ ಆಫ್ ರೆಕಾರ್ಡ್ ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ತಂದೆ ರಶೀದ್ ಅಹಮದ್, ತಾಯಿ ಶಭಾನಾ, ಪತಿ ಕೌಸರ್ ಬೇಗ್ ಎಲ್ಲಾ ರೀತಿಯ ಸಹಕಾರ ನೀಡಿ ಪ್ರೋತ್ಸಾಹಿಸಿದ್ದಾರೆ.