ಕುಂದಾಪುರ ಸಂತ ಜೋಸೆಫರ ಪ್ರೌಢ ಶಾಲೆಯಲ್ಲಿ ಗಾಂಧೀಜಿಯಂತಿಯನ್ನು ಆಚರಿಸಲಾಯಿತು. ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ ಇವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗೈಡ್ಸ್ ವಿದ್ಯಾರ್ಥಿಗಳು ಸರ್ವಧರ್ಮ ಪ್ರಾರ್ಥನೆಯನ್ನು ನೆರವೇರಿಸಿದರು. ಗಾಂಧೀಜಿಯವರ ವಿಷಯವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಮೈಕಲ್ ಸರ್ ಇವರು ಬಹುಮಾನ ವಿತರಿಸಿದರು. ಶಿಕ್ಷಕರಾದ ಅಶೋಕ್ ದೇವಾಡಿಗ ಇವರು ಗಾಂಧಿ ಜಯಂತಿಯ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮ ನಡೆಸಲು ಗೈಡ್ಸ್ ಶಿಕ್ಷಕಿ ಶ್ರೀಮತಿ ಸೆಲೀನ ಇವರು ಸಹಕರಿಸಿದರು. ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.
Year: 2024
ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಕೂಡ ಸ್ವಾವಲಂಬಿ ಜೀವನ ನಡೆಸಲು ಬ್ಯಾಂಕ್ ಗಳಿಂದ ಸಾಲ ತೆಗೆದು ಕೊಟ್ಟ ಹೆಗ್ಗಳಿಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯದ್ದು -ಎ.ವೆಂಕಟರೆಡ್ಡಿ ಹೇಳಿದರು
ಶ್ರೀನಿವಾಸಪುರ 3 : ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಕೂಡ ಸ್ವಾವಲಂಬಿ ಜೀವನ ನಡೆಸಲು ಬ್ಯಾಂಕ್ ಗಳಿಂದ ಸಾಲ ತೆಗೆದು ಕೊಟ್ಟ ಹೆಗ್ಗಳಿಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯದ್ದು. ಧರ್ಮಸ್ಥಳ ನಂಬಿಕೆಗೆ ಹೆಸರುವಾಸಿಯಾದ ಕ್ಷೇತ್ರ.. ಬಡಜನರ ಅಭಿವೃದ್ಧಿಗೆ ಪೂಜ್ಯರು ಮಾಡಿದ ನೂರಾರು ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯವಾದದ್ದು… ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದು ಬೈರವೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಎ.ವೆಂಕಟರೆಡ್ಡಿ ಹೇಳಿದರು.
ಪಟ್ಟಣ ಹೊರವಲಯದ ಕನಕಭವನದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಶ್ರೀನಿವಾಸಪುರ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಶ್ರೀನಿವಾಸಪುರ ತಾಲ್ಲೂಕು ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಜಿಲ್ಲಾ ನಿರ್ದೇಶಕರಾದ ಪದ್ಮಯ್ಯರವರು ಮಾತನಾಡುತ್ತಾ ಹಸಿದವನಿಗೆ ಅನ್ನ ನೀಡುವುದಕ್ಕಿಂತ ಅನ್ನವನ್ನು ಉತ್ಪಾದಿಸುವ ಕಲೆಯನ್ನು ಕಲಿಸಿಕೊಡು ಎನ್ನುವುದು ಧರ್ಮಸ್ಥಳದ ಪೂಜ್ಯರ ಆಶಯ. ತಾನು ನೀಡುವ ದಾನ ಒಂದು ಹೊತ್ತಿನ ತುತ್ತಾಗದೇ ಮೂರು ಹೊತ್ತಿನ ಊಟಕ್ಕೆ ಆಸರೆಯಾಗಬೇಕು.
ತಾನು ನೀಡುವ ದಾನ ಬರೀ ದಾನವಾಗದೇ ಬಡವರ ಬದುಕಿಗೆ ಕಲೆಯಾಗಬೇಕು ಭರವಸೆಯ ಬೆಳಕಾಗಬೇಕು ಎನ್ನುವುದು ಪರಮ ಪೂಜ್ಯರ ಚಿಂತನೆ.. ಈ ನಿಟ್ಟಿನಲ್ಲಿ ಪರಮ ಪೂಜ್ಯರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ರಾಜ್ಯದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ದುರ್ಬಲ ವರ್ಗದ ಸದಸ್ಯರಿಗೆ ಅರ್ಥಿಕ ಶಿಸ್ತಿನ ಜೊತೆ ಸ್ವಾವಲಂಬಿ ಬದುಕನ್ನು ಕಲಿಸಿಕೊಟ್ಟಿದೆ ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ರವಿ ಕುಮಾರ್ ರವರು ಮಾತನಾಡುತ್ತಾ ಶ್ರೀನಿವಾಸಪುರ ತಾಲ್ಲೂಕಿನ ಜನತೆ ಬ್ಯಾಂಕಿನ ವ್ಯವಹಾರ ವನ್ನು ಪ್ರಾಮಾಣಿಕ ಮಾಡುತ್ತಿದ್ದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಒಪ್ಪಂದ ಮಾಡಿಕೊಂಡು ಸ್ವಸಹಾಯ ಸಂಘಗಳಿಗೆ ಸಾಲಗಳನ್ನು ಬ್ಯಾಂಕ್ ನಿಂದ ನೀಡುತ್ತಿದ್ದು ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಬ್ಯಾಂಕ್ ನಿಂದ ಸ್ವಸಹಾಯ ಸಂಘಗಳಿಗೆ ಸಾಲವನ್ನು ನೀಡಲಾಗುತ್ತಿದೆ.
ನೀವು ಕಟ್ಟಿದ ಹಣ ಬ್ಯಾಂಕಿನಲ್ಲಿ ಭದ್ರವಾಗಿದೆ. ನಂಬಿಕೆಗೆ ಅರ್ಹವಾದ ಧರ್ಮಸ್ಥಳ ಸಂಸ್ಥೆ ನಿಮ್ಮ ಬದುಕನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುಲು ಬ್ಯಾಂಕಿನೊಂದಿಗೆ ಒಪ್ಪಂದ ಮಾಡಿಕೊಂಡು ನಿಮ್ಮ ಮನೆ ಬಾಗಿಲಿಗೆ ಅರ್ಥಿಕ ಸೇವೆಯನ್ನು ನೀಡುತ್ತಿದೆ. ಸಂಸ್ಥೆಯ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮವನ್ನು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ವೇಮಣ್ಣರವರು ಉದ್ಗಾಟಿಸಿ ಶುಭ ಹಾರೈಸಿದರು . ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಗಿರಿಜಾ ಮತ್ತು ವಾಸುದೇವ್ ಯೋಜನಾಧಿಕಾರಿಗಳಾದ ಪ್ರಕಾಶ್ ಕುಮಾರ್ ಹಾಗೂ ಗೋಪಾಲಕೃಷ್ಣ, ಎಂಐಎಸ್ ಯೋಜನಾಧಿಕಾರಿ ಗಿರೀಶ್, ತಾ.ಪಂ ಮಾಜಿ ಸದಸ್ಯೆ ನಾಗವೇಣಿರೆಡ್ಡಿ ಉಪಸ್ಥಿತರಿದ್ದರು.
ತಾಲೂಕಿನ 7 ವಲಯದ 67 ಒಕ್ಕೂಟಗಳ 350 ಮಂದಿ ಪದಾಧಿಕಾರಿಗಳು, ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು ಸೇವಾಪ್ರತಿನಿಧಿಗಳು ಸಿಎಸ್ಸಿ ಸೇವಾದಾರರು, ಉಪಸ್ಥಿತರಿದ್ದರು.
ಶ್ರೀನಿವಾಸಪುರ : ವಾಲ್ಮೀಕಿ ಮಹರ್ಷಿಗಳು ಮಹಾನ್ ಪುರುಷರು ಅವರನ್ನ ಕೇವಲ ಒಂದು ಜಾತಿಗೆ ಸೀಮಿತ ಮಾಡಬಾರದು – ತಹಶೀಲ್ದಾರ್ ಜಿ.ಎನ್.ಸುದೀಂದ್ರ
ಶ್ರೀನಿವಾಸಪುರ : ವಾಲ್ಮೀಕಿ ಮಹರ್ಷಿಗಳು ಮಹಾನ್ ಪುರುಷರು ಅವರನ್ನ ಕೇವಲ ಒಂದು ಜಾತಿ ಸೀಮಿತ ಮಾಡಬಾರದು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಹೇಳಿದರು.
ಪಟ್ಟಣದ ನೌಕರರ ಭವನದಲ್ಲಿ ಮಂಗಳವಾರ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ನಡೆದ ಪೂರ್ವ ಸಭೆಯಲ್ಲಿ ಮಾತನಾಡಿದರು.
ಎಲ್ಲಾ ಸಮುದಾಯಗಳಿಗೂ ಅವರ ಜೀವನವು ಆದರ್ಶ ಪ್ರಾಯವಾಗಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ಸಮುದಾಯಗಳು ಸಹ ಈ ಒಂದು ಕಾರ್ಯಕ್ರಮದಲ್ಲಿ ಪಾಲ್ಗುಂಡು ಯಶಸ್ವಿ ಮಾಡಬೇಕು ಎಂದು ಮನವಿ ಮಾಡಿದರು. ಯುವ ಪಿಳೀಗೆಯು ಅವರ ಆದರ್ಶವನ್ನ ತಮ್ಮ ಜೀವಕ್ಕೆ ಅಳವಡಿಸಿಕೊಳ್ಳಬೇಕು ಎಂದರು.
ಸಮುದಾಯದ ಮುಖಂಡರ ಪ್ರಶ್ನೆಗೆ ಉತ್ತರಿಸಿ ಪುರಸಭೆ ಮುಖ್ಯಾಧಿಕಾರಿ, ಇಒ ರವರು ಸಂತೆ ಮೈದಾನದಲ್ಲಿ ಸ್ಥಳ ಗುರ್ತಿಸಿ ಕೊಡುತ್ತಾರೆ ಆ ಸ್ಥಳದಲ್ಲಿ ವಾಲ್ಮೀಕಿ ಪುತ್ಥಳಿಯನ್ನ ಸ್ಥಾಪಿಸಿ, ಆ ದಿನ ಪುತ್ಥಳಿಗೆ ಹೂಮಾಲೆ ಹಾಕಿ ನಂತರ ಕಲಾ ತಂಡಗಳೊಂದಿಗೆ ಅದ್ದೂರಿ ಮೆರವಣಿಗೆಯೊಂದಿಗೆ ತಹಶೀಲ್ದಾರ್ ಕಚೇರಿಯ ಆವಣರದಲ್ಲಿ ನಡೆಯುವ ವಾಲ್ಮೀಕಿ ಜಯಂತಿ ಕಾರ್ಯಕ್ರಮ ಆಚರಿಸುವುದಾಗಿ ಮಾಹಿತಿ ನೀಡಿದರು . ಸಮುದಾಯದ ಮುಖಂಡರು ಅಧಿಕಾರಿಗಳಗೆ ಸಹಕಾರ ನೀಡಿ ಕಾರ್ಯಕ್ರಮವನ್ನು ಯಶಸ್ವಿಮಾಡುವಂತೆ ಮನವಿ ಮಾಡಿದರು.
ಇಒ ಎ.ಎನ್.ರವಿ ಮಾತನಾಡಿ ಇಲಾಖೆಯಿಂದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಸ್ಥಳಿಯ ಗ್ರಾಮಪಂಚಾಯಿತಿಗಳ ಅಧ್ಯಕ್ಷರ, ಉಪಾಧ್ಯಕ್ಷರ ವಿವೇಚನೆಗೆ ತಕ್ಕಂತೆ ವ್ಯವಸ್ಥೆ ಮಾಡಬಹುದು ಎಂದರು. ಸಾಧ್ಯವಾದಷ್ಟು ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿಗಳಿಂದಲೂ ಬೆಳ್ಳಿ ರಥದಲ್ಲಿ ಬರುವಂತೆ ಸೂಚಿಸುತ್ತೇನೆ ಎಂದರು
ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ಎನ್.ರಾಜೇಶ್ ಮಾತನಾಡಿ ಸಮುದಾಯದ ಮುಖಂಡರ ಪ್ರಶ್ನೆಗೆ ಉತ್ತರಿಸಿ ಎಸ್ಎಸ್ಎಲ್ಸಿ, ಪಿಯುಸಿ ಹೆಚ್ಚು ಅಂಕಗಳನ್ನು ಪಡೆದ ಸಮುದಾಯದ ವಿದ್ಯಾರ್ಥಿಗಳಿ ಪ್ರತಿಭಾ ಪುರಸ್ಕಾರ, ಸಮುದಾಯದ ಸಮಾಜ ಸೇವಕರಿಗೆ ಸನ್ಮಾನ , ಪೆಂಡಾಲ್, ಆಸನ ವ್ಯವಸ್ಥೆ, ಕರಪತ್ರ, ಕಲಾತಂಡಗಳು, ಊಟದ ವ್ಯವಸ್ಥೆ ಇಲಾಖೆಯಿಂದ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಪಿಡಬ್ಲ್ಯೂಡಿ ಅಬಿಯಂತರ ಎನ್. ನಾರಾಯಣಸ್ವಾಮಿ, ಸಬ್ರಿಜಿಸ್ಟರ್ ರಾಮಕೃಷ್ಣಪ್ಪ, ಸಿಡಿಪಿಒ ಅಧಿಕಾರಿ ನವೀನ್, ತೋಟಗಾರಿಕೆ ಸಹಾಯಕ ನಿರ್ದೇಶಕ ಬೈರೆಡ್ಡಿ, ಬೆಸ್ಕಾಂ ಎಇಇ ಪಿ.ಪಿ.ರವೀಂದ್ರಬಾಬು, ಮುಖಂಡರಾದ ರಾಮಮೋಹನ, ಗಾಯತ್ರಿ ಮುತ್ತಪ್ಪ, ಸುಣ್ಣಕಲ್ಲು ಮಂಜುನಾಥ್, ರಾಮಚಂದ್ರಪ್ಪ, ಹರೀಶ್ನಾಯಕ್, ಕೃಷ್ಣಪ್ಪ, ಆಂಜಿ, ಶ್ರೀನಿವಾಸ್, ರಾಮಾಂಜಮ್ಮ, ಈರಪ್ಪ, ವೆಂಕಟೇಶ್ ಇದ್ದರು.
ಶ್ರೀನಿವಾಸಪುರ : ತಾಲೂಕಿನ ತಾಡಿಗೋಳ್ ಕ್ರಾಸ್ ಬಳಿ ಇರುವ ಆರ್ಟಿಒ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ಎಸ್ಪಿ ಧನಂಜಯ್ ನೇತೃತ್ವದಲ್ಲಿ ದಾಳಿ
ಶ್ರೀನಿವಾಸಪುರ : ತಾಲೂಕಿನ ತಾಡಿಗೋಳ್ ಕ್ರಾಸ್ ಬಳಿ ಇರುವ ಆರ್ಟಿಒ ಚೆಕ್ಪೋಸ್ಟ್ ಮೇಲೆ ಮಂಗಳವಾರ ಬೆಳ್ಳಂ ಬೆಳಗ್ಗೆ ಸುಮಾರು 3 ಗಂಟೆಯಲ್ಲಿ ಕೋಲಾರ ಜಿಲ್ಲಾ ಲೋಕಾಯುಕ್ತ ಎಸ್ಪಿ ಧನಂಜಯ್ ನೇತೃತ್ವದಲ್ಲಿ ದಾಳಿ ದಾಖಲೆಗಳ ಪರೀಶಿಲನೆ.
ಆರ್ಟಿಒ ಚೆಕ್ ಪೋಸ್ಟ್ಗಳ ವಿರುದ್ಧ ಅತಿಯಾದ ದೂರುಗಳು ಬಂದ ಹಿನ್ನೆಲೆಯಲ್ಲಿ ಚೆಕ್ಪೋಸ್ಟ್ ಮೇಲೆ ದಾಳಿ ನಡೆಸಲಾಯಿತು ಎಂದು ಎಸ್ಪಿ ಧನಂಜಯ್ ಮಾಹಿತಿ ನೀಡುತ್ತಾ, ದಾಖಲೆಗಳನ್ನು ಪರೀಶಿಲಿಸಿದ ವೇಳೆ ದಾಖಲೆ ಹಣಕ್ಕಿಂತ 400 ರೂ ಕಡಿಮೆ ಇರುವುದಾಗಿ ಸ್ಪಷ್ಟಪಡಿಸಿದರು. ಸತತ 8 ಗಂಟೆಗಳ ಕಾಲ ಇತರೆ ದಾಖಲೆಗಳನ್ನು ಪರಿಶೀಲಿಸಲಾಗಿದೆ ಎಂದರು.
ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ, ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ
ಶ್ರೀನಿವಾಸಪುರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ, ತಾಲ್ಲೂಕು ಗ್ರಾಮ ಪಂಚಾಯಿತಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪಾತಕೋಟ ನವೀನ್ ಕುಮಾರ್ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕೆಲವು ಬೇಡಿಕೆ ಈಡೇರಿಕೆಗೆ ಸರ್ಕಾರ ಅನುಮೋದನೆ ನೀಡಿದ್ದರೂ, ಸಂಬAಧಪಟ್ಟ ಅಧಿಕಾರಿಗಳು ಜಾರಿ ಮಾಡಲು ಮುಂದಾಗುತ್ತಿಲ್ಲ. ಪದೇ ಪದೇ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಅರ್ಹ ಸಿಬ್ಬಂದಿಯನ್ನೂ ಏಕಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸುವುದು ಸೇರಿದಂತೆ ಒಟ್ಟು ೩೦ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು. ಸರ್ಕಾರದ ನಿರ್ಲಕ್ಷö್ಯದ ಫಲವಾಗಿ ನೌಕರರ ಕುಟುಂಬಗಳು ಬೀದಿಗೆ ಬೀಳುವುದನ್ನು ತಪ್ಪಿಸಬೇಕು. ಇಲ್ಲವಾದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯಿತಿ ನೌಕರರ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿ ಅವರಿಗೆ ನೀಡಿದರು.
ಜಿಲ್ಲಾ ಗ್ರಾಮ ಪಂಚಾಯಿತಿ ನೌಕರರ ಸಂಘದ ಅಧ್ಯಕ್ಷ ಅಮರನಾರಾಯಣಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಶಿವಶಂಕರ್, ಸಂಘಟನಾ ಕಾರ್ಯದರ್ಶಿ ಟಿ.ಎನ್.ಆಂಜಿನಪ್ಪ, ಮುಖಂಡರಾದ ಕ್ರಿಷ್ಟಪ್ಪ, ಅಶೋಕ್, ಟಿ.ಎಚ್.ಆಂಜಿನಪ್ಪ, ವೆಂಕಟರವಣಪ್ಪ ಇದ್ದರು.
ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿಯವರನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಮಂಜುನಾಥ ಭಂಡಾರಿ ಕರೆ
ಕುಂದಾಪುರ, ಸ್ಥಳೀಯಾಡಳಿತಕ್ಕೆ ಶಕ್ತಿ ನೀಡಿದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮತ್ತು ಸ್ಥಳೀಯಾಡಳಿತದ ಮೂರು ಸ್ಥರಗಳಲ್ಲಿ ಕೆಲಸ ಮಾಡಿ ಅಪಾರ ಅನುಭವ ಹೊಂದಿರುವ ಕಾಂಗ್ರೆಸ್ ಅಭ್ಯರ್ಥಿ ರಾಜು ಪೂಜಾರಿಯವರನ್ನು ಗೆಲ್ಲಿಸಿ ಎಂದು ಕೆಪಿಸಿಸಿ ಕಾರ್ಯಾದ್ಯಕ್ಷ ಮಂಜುನಾಥ ಭಂಡಾರಿ ಕರೆ ನೀಡಿದರು .
ತೆಕ್ಕಟ್ಟೆ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತದಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು .
ಸಭೆಯ ಅಧ್ಯಕ್ಷತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ವಹಿಸಿದ್ದರು .
ಸಭೆಯಲ್ಲಿ ಮಾಜಿ ಸಚಿವರಾದ ಕೆ. ಜಯ ಪ್ರಕಾಶ ಹೆಗ್ಡೆ , ವಿನಯ ಕುಮಾರ ಸೊರಕೆ , ಅಭ್ಯರ್ಥಿ ರಾಜು ಪೂಜಾರಿ , ಕೆಪಿಸಿಸಿ ಉಸ್ತುವಾರಿ ಮಿಥುನ್ ರೈ,ಎಂ . ಎಸ್ . ಮಹಮದ್ , ಕಿಶನ್ ಹೆಗ್ಡೆ ಎಂ. ದಿನೇಶ್ ಹೆಗ್ಡೆ , ಮಲ್ಯಾಡಿ ಶಿವರಾಮ ಶೆಟ್ಟಿ ,ಬಿ ಹಿರಿಯಣ್ಣ , ದೇವಾನಂದ ಶೆಟ್ಟಿ ,ಪ್ರಸನ್ನ ಶೆಟ್ಟಿ ಕೆರಾಡಿ, ವಿಕಾಸ ಹೆಗ್ಡೆ , ರೇಖಾ ಪೂಜಾರಿ, ದೇವಕಿ ಸಣ್ಣಯ್ಯ , ಕ್ರಷ್ಣದೇವ ಕಾರಂತ , ರಮಾನಂದ ಶೆಟ್ಟಿ , ಅಶೋಕ ಪೂಜಾರಿ ಬೀಜಾಡಿ , ರೋಶನ್ ಶೆಟ್ಟಿ ಇನ್ನಿತರು ಉಪಸ್ಥಿತರಿದ್ದರು .
ಬ್ಲಾಕ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಶಂಕರ್ ಕುಂದರ್ ವಂದಿಸಿ, ಬ್ಲಾಕ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿದರು.
ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮ
ಶ್ರೀನಿವಾಸಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಶ್ರೀನಿವಾಸಪುರ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಶ್ರೀನಿವಾಸಪುರ ತಾಲ್ಲೂಕು ಇದರ ಆಶ್ರಯದಲ್ಲಿ ತಾಲೂಕು ಮಟ್ಟದ ಒಕ್ಕೂಟ ಪದಾಧಿಕಾರಿಗಳ ಸಮಾವೇಶ ಕಾರ್ಯಕ್ರಮವು ತಾಲ್ಲೂಕಿನ ಕನಕಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷರಾದ ವೇಮಣ್ಣರವರು ಉದ್ಘಾಟಿಸಿ ಶುಭ ಹಾರೈಸಿದರು .
ಬೈರವೇಶ್ವರ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೆಂಕಟ ರೆಡ್ಡಿ ಯವರು ಮಾತನಾಡುತ್ತಾ ದೀನ ದುರ್ಬಲರ ಸಮಗ್ರ ಅಭಿವೃದ್ಧಿ ಅದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾತ್ರ ಸಾಧ್ಯ. ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೂ ಕೂಡ ಸ್ವಾವಲಂಬಿ ಜೀವನ ನಡೆಸಲು ಬ್ಯಾಂಕ್ ಗಳಿಂದ ಸಾಲ ತೆಗೆದು ಕೊಟ್ಟ ಹೆಗ್ಗಳಿಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯದ್ದು.
ಧರ್ಮಸ್ಥಳ ನಂಬಿಕೆಗೆ ಹೆಸರುವಾಸಿಯಾದ ಕ್ಷೇತ್ರ ಬಡಜನರ ಅಭಿವೃದ್ಧಿಗೆ ಪೂಜ್ಯರು ಮಾಡಿದ ನೂರಾರು ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯವಾದದ್ದು. ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಎಂದರು.
ಜಿಲ್ಲಾ ನಿರ್ದೇಶಕರಾದ ಪದ್ಮಯ್ಯರವರು ಮಾತನಾಡುತ್ತ, ಹಸಿದವನಿಗೆ ಅನ್ನ ನೀಡುವುದಕ್ಕಿಂತ ಅನ್ನವನ್ನು ಉತ್ಪಾದಿಸುವ ಕಲೆಯನ್ನು ಕಲಿಸಿಕೊಡು ಎನ್ನುವುದು ಧರ್ಮಸ್ಥಳದ ಪೂಜ್ಯರ ಆಶಯ. ತಾನು ನೀಡುವ ದಾನ ಒಂದು ಹೊತ್ತಿನ ತುತ್ತಾಗದೇ ಮೂರು ಹೊತ್ತಿನ ಊಟಕ್ಕೆ ಆಸರೆಯಾಗಬೇಕು ತಾನು ನೀಡುವ ದಾನ ಬರೀ ದಾನವಾಗದೇ ಬಡವರ ಬದುಕಿಗೆ ಕಲೆಯಾಗಬೇಕು ಭರವಸೆಯ ಬೆಳಕಾಗಬೇಕು ಎನ್ನುವುದು ಪರಮ ಪೂಜ್ಯರ ಚಿಂತನೆ.
ಈ ನಿಟ್ಟಿನಲ್ಲಿ ಪರಮ ಪೂಜ್ಯರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ರಾಜ್ಯದ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ದುರ್ಬಲ ವರ್ಗದ ಸದಸ್ಯರಿಗೆ ಅರ್ಥಿಕ ಶಿಸ್ತಿನ ಜೊತೆ ಸ್ವಾವಲಂಬಿ ಬದುಕನ್ನು ಕಲಿಸಿಕೊಟ್ಟಿದೆ ಎಂದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ನಿವೃತ್ತ ಪ್ರಧಾನ ವ್ಯವಸ್ಥಾಪಕರಾದ ರವಿ ಕುಮಾರ್ ರವರು ಮಾತನಾಡುತ್ತಾ ಶ್ರೀನಿವಾಸಪುರ ತಾಲ್ಲೂಕಿನ ಜನತೆ ಬ್ಯಾಂಕಿನ ವ್ಯವಹಾರ ವನ್ನು ಪ್ರಾಮಾಣಿಕ ಮಾಡುತ್ತಿದ್ದು ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಒಪ್ಪಂದ ಮಾಡಿಕೊಂಡು ಸ್ವಸಹಾಯ ಸಂಘಗಳಿಗೆ ಸಾಲಗಳನ್ನು ಬ್ಯಾಂಕ್ ನಿಂದ ನೀಡುತ್ತಿದ್ದು ರಿಸರ್ವ್ ಬ್ಯಾಂಕ್ ನಿಯಮದ ಪ್ರಕಾರ ಬ್ಯಾಂಕ್ ನಿಂದ ಸ್ವಸಹಾಯ ಸಂಘಗಳಿಗೆ ಸಾಲವನ್ನು ನೀಡಲಾಗುತ್ತಿದೆ. ನೀವು ಕಟ್ಟಿದ ಹಣ ಬ್ಯಾಂಕಿನಲ್ಲಿ ಭದ್ರವಾಗಿದೆ.
ನಂಬಿಕೆಗೆ ಅರ್ಹವಾದ ಧರ್ಮಸ್ಥಳ ಸಂಸ್ಥೆ ನಿಮ್ಮ ಬದುಕನ್ನು ಕತ್ತಲೆಯಿಂದ ಬೆಳಕಿನೆಡೆಗೆ ಒಯ್ಯುಲು ಬ್ಯಾಂಕಿನೊಂದಿಗೆ ಒಪ್ಪಂದ ಮಾಡಿಕೊಂಡು ನಿಮ್ಮ ಮನೆ ಬಾಗಿಲಿಗೆ ಅರ್ಥಿಕ ಸೇವೆಯನ್ನು ನೀಡುತ್ತಿದೆ. ಸಂಸ್ಥೆಯ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಗಿರಿಜಾ ಮತ್ತು ವಾಸುದೇವ್ ಯೋಜನಾಧಿಕಾರಿ ಪ್ರಕಾಶ್ ಕುಮಾರ್ ಹಾಗೂ ಗೋಪಾಲಕೃಷ್ಣ ಎಂ ಐ ಎಸ್ ಯೋಜನಾಧಿಕಾರಿ ಗಿರೀಶ್ ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ನಾಗವೇಣಿ ರೆಡ್ಡಿಯವರು ಉಪಸ್ಥಿತರಿದ್ದರು.
ತಾಲೂಕಿನ 7 ವಲಯದ 67 ಒಕ್ಕೂಟಗಳ 350 ಮಂದಿ ಪದಾಧಿಕಾರಿಗಳು, ಎಲ್ಲಾ ಮೇಲ್ವಿಚಾರಕ ಶ್ರೇಣಿಯ ಕಾರ್ಯಕರ್ತರು ಸೇವಾಪ್ರತಿನಿಧಿಗಳು ಸಿ ಎಸ್ ಸಿ ಸೇವಾದಾರರು, ಉಪಸ್ಥಿತರಿದ್ದರು.
ಕೋಲಾರ: ನಿವೃತ್ತ ಶಿಕ್ಷಕ ಹಾಗೂ ಕಲಾವಿದ ಬೀರಮಾನಹಳ್ಳಿ ಡಾ.ಬಿ.ವಿ.ವೆಂಕಟಗಿರಿಯಪ್ಪರಿಗೆ ಅಭಿನಂದನೆ ಹಾಗೂ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಕೋಲಾರ,ಅ.07: ಅಸಂಘಟಿತ ಕಾರ್ಮಿಕರ ಹಾಗೂ ಕಲಾವಿದರ ಅಭಿವೃದ್ಧಿ ಸಂಸ್ಥೆ ಬೆಂಗಳೂರು, ಕರ್ನಾಟಕ ಕಲಾ ಸಂಘ, ತಿರುಮಲ ಟ್ರಸ್ಟ್ ಕೋಲಾರ, ಸಂಜೀವಿನಿ ಜಾನಪದ ಕಲಾ ಸಂಸ್ಥೆ ಐತರಾಸನಹಳ್ಳಿ ಜ್ಞಾನ ಪ್ರಚಾರ ಶೈಕ್ಷಣಿಕ ಹಾಗೂ ಕ್ರೀಡಾ ಸಂಸ್ಥೆ ವೇಮಗಲ್ ಇವರ ಸಂಯುಕ್ತಾಶ್ರಯದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಿವೃತ್ತ ಶಿಕ್ಷಕ ಹಾಗೂ ಕಲಾವಿದ ಬೀರಮಾನಹಳ್ಳಿ ಡಾ.ಬಿ.ವಿ.ವೆಂಕಟಗಿರಿಯಪ್ಪರಿಗೆ ಅಭಿನಂದನೆ ಹಾಗೂ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಆಯೋಜಿಸಲಾಗಿತ್ತು.
ಜಿಲ್ಲಾಧಿಕಾರಿ ಅಕ್ರಂಪಾಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗಡಿನಾಡು ಕೊಲಾರ ಜಿಲ್ಲೆ ಸಂಸ್ಕøತಿ ಮತ್ತು ಹೈನುಗಾರಿಕೆಯಲ್ಲಿ ಮತ್ತು ತರಕಾರಿ ಬೆಳೆಗಳಿಗೆ ಹೆಸರುವಾಸಿಯಾಗಿದೆ. ಇಂತಹ ಜಿಲ್ಲೆಯಲ್ಲಿ ಎಲೆಮರೆಯಕಾಯಂತೆ ಸಾಂಸ್ಕøತಿಕ ಮತ್ತು ಸಮಾಜ ಸೇವೆಯಲ್ಲಿ ಉತ್ತಮ ಸಾಧನೆ ಮಾಡಿರುವ ಡಾ.ಬಿ.ವಿ.ವೆಂಕಟಗಿರಿಯಪ್ಪರನ್ನು ಗುರುತಿಸಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ನೀಡಿರುವುದು ಸಂತಸದ ವಿಷಯ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಎಂ.ಚಂದ್ರಶೇಖರ್, ಬಿ.ವಿ.ವೆಂಕಟಗಿರಿಯಪ್ಪ ನನಗೆ 40 ವರ್ಷಗಳ ಮೇಲ್ಪಟ್ಟು ಪರಿಚಯ ಹಾಗೂ ನನ್ನ ಗೆಳೆಯರು. ಇವರ ನಾಟಕಗಳಲ್ಲಿ ನಾನು ಸಹ ಅಭಿನಯಿಸಿರುವೆ. ಸಾಹಿತಿ, ನಾಟಕಕಾರರಾದ ಬಿ.ವಿ.ವಿ.ಗಿರಿ ಸರ್ಕಾರ ಹಾಗೂ ಸಂಘ ಸಂಸ್ಥೆಗಳಿಂದ ಹೆಚ್ಚಿನ ಪ್ರೋತ್ಸಾಹ ಸಿಗುವಂತಾಗಲಿ ಎಂದು ಆಶಿಸಿದರು.
ಪತ್ರಕರ್ತ ಕೆ.ಎಸ್.ಗಣೇಶ್ ಮಾತನಾಡಿ, ಬಿ.ವಿ.ವಿ.ಗಿರಿ ಸದಾ ಹಸನ್ಮುಖಿಯಾಗಿ ಒಳ್ಳೆಯ ಉತ್ತಮ ಕಲಾವಿದರಾಗಿ ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ಅಸಂಘಟಿತ ಕಲಾವಿದರನ್ನು ಸೇರಿಸಿ ಅವರಿಗೆ ಸಾಮಾಜಿಕ, ಐತಿಹಾಸಿಕ ನಾಟಕಗಳನ್ನು ತರಬೇತಿ ನೀಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉತ್ತೇಜನ ನೀಡಿ ಪ್ರೇರೇಪಿಸಿರುತ್ತಾರೆ. ಕಲೆ ಹಾಗೂ ಸಮಾಜಸೇವೆಯನ್ನು ಗುರುತಿಸಿ ಡಾಕ್ಟರೇಟ್ ಪದವಿ ನೀಡಿರುವುದು ಶ್ಲಾಘನೀಯ. ಜಿಲ್ಲೆಯ ಒಬ್ಬ ನಿಷ್ಟಾವಂತ ಪ್ರಾಮಾಣಿಕ ಕಲಾವಿದನಿಗೆ ಸಿಕ್ಕ ಗೌರವ, ಇವರ ಸೇವೆ ಜಿಲ್ಲೆಗ ಅಗತ್ಯ. ಮುಂದಿನ ದಿನಗಳಲ್ಲಿ ಕರ್ನಾಟಕ ಸರ್ಕರದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಸಿಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಎನ್.ವಿಜಯಲಕ್ಷ್ಮಿ, ಎಸ್.ಆರ್.ಯಲ್ಲಪ್ಪ, ಮಹಮದ್ ಆಲಿ, ಕೆ.ವಿ.ಮಹೇಶ, ವಿ.ಸಂಜೀವಯ್ಯ, ಭಾರ್ಗವರಾಮ್ ಬಿ.ವಿ ಉಪಸ್ಥಿತರಿದ್ದರು.
ಲಕ್ಷ್ಮಣ್ ಭಗತ್ ಬಿ.ವಿ ಸ್ವಾಗತಿಸಿ, ಮಾಗೇರಿ ವೆಂಕಟೇಶ್ ನಿರೂಪಿಸಿ, ನಂಜುಂಡಪ್ಪ ವಂದಿಸಿದರು.
ಕೋಲಾರ ಜಿಲ್ಲೆಯ ಎಲ್ಲಾ ಸಾಂಸ್ಕøತಿಕ ಕಲಾ ತಂಡಗಳು ಹಾಗೂ ಕಲಾವಿದರು ಸಕಾಲಕ್ಕೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಮೇಲ್ಕಂಡ ಸಂಸ್ಥೆಗಳಿಂದ ಭಾಗವಹಿಸಿದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನಮಗೆ ಸಹಕಾರ ನೀಡಿದ ಅಸಂಘಟಿತ ಕಾರ್ಮಿಕ ಹಾಗೂ ಕಲಾವಿದರ ಅಭಿವೃದ್ಧಿ ಸಂಸ್ಥೆಯ ರಾಜ್ಯಾಧ್ಯಕ್ಷ ಐತರಾಸನಹಳ್ಳಿ ವಿ.ಸಂಜೀವಯ್ಯ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.
Devotion and Celebration – A vibrant Patron Feast of Mount Rosary Church, Santhekatte – Kallianpur.
As the formal introduction was read out to welcome the parishioners and guests, ‘the titular Feast of the Queen of the Holy Rosary, the Patron of our parish, holds a special place in our hearts, serving as a poignant reminder of our spiritual journey and devotion to Mary, our patroness. This annual celebration brings together our community in a tapestry of faith, hope, and love’.
The Choir of Church at its usual best to sing the entrance hymn ‘Vandan Tuka Somiya’, as the celebrants entered the well decorated Church in a colourful procession, with brass band, at 10.30 am led by Very Rev Fr Denis DSa, the main celebrant. It was a working day and many were duty bound, nevertheless there was no dearth for enthusiasm, devotion and joy, as the Church was almost full to its capacities.
While breaking the word of God, Rev Fr Denis DSa focussed on the main theme ‘Mother Mary’s Life of prayer, ‘as we gathered to honour the Blessed Virgin, we reflect on her unwavering guidance and the power of prayer, particularly through the Rosary.
‘This titular feast on 7th October, 2024, not only deepens our connection to Mary but also strengthens our bonds with one another, creating a space for shared grace and communal support. Together, we celebrate our faith, our heritage, and the profound impact of the prayers in our lives’. He further explained various forms of prayers, including silent prayer which was very powerful to seek God. While concluding Fr DSa summarised the whole life of Mother Mary that of prayers – in thoughts, words and actions – “Behold the handmaid of the Lord: be it done unto me, according to Thy word…”
Pirjenth, the main sponsors for the Titular Feast, Mr Reiner and Mrs Namya DSouza – Fatima Ward, made elaborate arrangements – the decoration, live telecast of the Holy Mass, melodious Sunshine Brass Band, Cake and soft drinks etc, were acknowledged by the Vicar and deservedly thanked with decorated candle.
Rev Dr Roque DSouza, the Parish Priest thanked everyone for their cooperation and coordination – the Choir, Liturgy Ayog led by Sr Ancilla DMello, Altar servers, the youth and Gurkars and all pious organisations and laity leadership…
As informed by the Parish Priest earlier, the offering / collections during the Holy Mass will be credited to ‘Parish Medical Fund’.
The main celebrant of the High Mass Very Rev Fr Denis DSa native of our parish was felicitated on his 60th Birthday and congratulated on being nominated to CBCI, Commission for Ecumenism, as Member by both Vicar Rev Dr Roque DSouza accompanied by Assistant Rev Fr Oliver Nazareth with decorated candle and bouquet on this occasion.
‘The Feast of the Queen of the Holy Rosary, celebrated annually on October 7th, is a significant event in our community, honouring our patroness’. Vicar General of the Diocese, Msgr Ferdinand Gonsalves expressed his happiness to be a part of the celebrations of this fast growing parish as parishioners attended the Mass and related events, showcasing strong community involvement. The celebration not only strengthened our devotion to Mary but also reinforced the importance of prayer in our lives. He appreciated the leadership of Vicar and his assistant, SRA Sisters, cohesive Choir team, role and involvement of youth in the Deanery and Diocese, the parish magazine ‘Rozaricho Gaanch’ etc. in his crispy message to the faithful.
Many attendees expressed gratitude for the opportunity to gather in faith. The Feast of the Queen of the Holy Rosary was a profound celebration that united our community in prayer and fellowship. It served as a reminder of our patroness’s guidance.
Reported by: P. Archibald Furtado Photographs: Mr Praveen Cutinho.