ಕೋಲಾರ,ಅ.10: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸಮೂಹ ಶಿಕ್ಷಣ ಸಂಸ್ಥೆಗಳು ಹಂಚಾಳಗೇಟ್, ಶ್ರೀ ಈಶ್ವರಮ್ಮಾಜಿ ಸ್ಕೂಲ್ & ಕಾಲೇಜ್ ಆಫ್ ನರ್ಸಿಂಗ್, ಪ್ಯಾರಾಮೆಡಿಕಲ್ ಮತ್ತು ಫಾರ್ಮಸಿ ಕಾಲೇಜುಗಳ ವತಿಯಿಂದ ಏರ್ಪಡಿಸಿದ್ದ ಲುಂಬಿಣಿ ಕಲಾಮಂದಿರ, ಬುದ್ಧ ಪ್ರತಿಮೆ ಅನಾವರಣ, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳ ಪ್ರೆಷರ್ಸ್ ಡೇ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ಅಕ್ರಂಪಾಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತಿನಲ್ಲಿ ಬುದ್ದನಂತಿರಬೇಕು, ಜ್ಞಾನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರಂತಿರಬೇಕು ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಜ್ಞಾನಿಗಳಾಗಿ ಬೆಳೆಯಬೇಕೆಂದು ಶುಭ ಹಾರೈಸಿದರು.
ಅಪರ ಜಿಲ್ಲಾಧಿಕಾರಿ ಎಸ್.ಎಂ.ಮಂಗಳ ಮಾತನಾಡಿ, ವಿದ್ಯಾರ್ಥಿಗಳಿಗೆ ದುಚ್ಛಟಗಳಿಂದ ದೂರ ಉಳಿದು ಶೈಕ್ಷಣಿಕವಾಗಿ ಅಭಿವೃದ್ದಿ ಹೊಂದಿ ಸಂಪನ್ಮೂಲ ವ್ಯಕ್ತಿಗಳಾಗಿ ಹೊರಹೊಮ್ಮಿ ಸಂಸ್ಥೆಗೆ, ಗುರುಗಳಿಗೆ, ತಾಯಿ ತಂದೆಗೆ ಮತ್ತು ರಾಷ್ಟ್ರಕ್ಕೆ ಸೇವಾ ಮನೋಭಾವನೆಯಿಂದ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕೋಲಾರ ಉಪವಿಭಾಗಾಧಿಕಾರಿ ಡಾ.ಮೈತ್ರಿ, ಸಂಸ್ಥೆಯ ಶೈಕ್ಷಣಿಕ ವ್ಯವಸ್ಥೆಯ ಮತ್ತು ವಿದ್ಯಾರ್ಥಿಗಳ ಶಿಸ್ತಿನ ಬಗ್ಗೆ ಪ್ರಶಂಸಿಸಿದ ಅವರು ವಿದ್ಯಾರ್ಥಿ ದೆಸೆಯಿಂದಲೇ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕಗಳಲ್ಲಿ ತೊಡಗಿಕೊಂಡು ಸೇವಾ ಮನೋಭಾವನೆಯನ್ನು ಹೊಂದಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕೆಂದು ಸೂಚಿಸಿದರು.
ಜಿಲ್ಲಾ ರಕ್ಷಣಾಧಿಕಾರಿ ಬಿ. ನಿಖಿಲ್, ವಿದ್ಯಾರ್ಥಿಗಳಿಗೆ ವಿಶೇಷವಾದ ಜವಾಬ್ಧಾರಿಗಳನ್ನು ನಿರ್ವಹಿಸಬೇಕೆಂದು ಕರೆ ನೀಡಿದರು, ಸಮಾನತೆ, ಭಾತೃತ್ವ, ಜೊತೆಗೆ ಮೂಲಭೂತ ಕರ್ತವ್ಯಗಳನ್ನು ದೇಶಕ್ಕಾಗಿ ನಿರ್ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳಾದ ನೀವುಗಳು ನಿಮ್ಮ ತಂದೆ, ತಾಯಿ, ಅಣ್ಣ, ಅಕ್ಕ ರವರನ್ನು ತುಂಬಾ ಪ್ರೀತಿಸುತ್ತಿದ್ದೀರಾ? ಹಾಗಾದರೆ ಹೊರಗಡೆ ದ್ವಿಚಕ್ರ ವಾಹನಗಳಲ್ಲಿ ಹೋಗುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಹಠಮಾಡಿ, ಮನವೊಲಿಸಿ ಜೀವರಕ್ಷಣೆ ಮಾಡಬೇಕೆಂದು ಕಿವಿಮಾತು ಹೇಳಿದರು. ಭಾರತ ದೇಶ ಇಂದು ಪ್ರಪಂಚದಲ್ಲಿ 3ನೇ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದೆ. ಹೇಗೆಂದರೆ ನಿಮ್ಮ ಜ್ಞಾನ, ನಿಮ್ಮ ಸಂಪನ್ಮೂಲ, ನಿಮ್ಮ ಸಂವಹನ ಕೌಶಲ್ಯಗಳಿಂದ. ಹಾಗಾಗಿ ನೀವುಗಳು ಶೈಕ್ಷಣಿಕವಾಗಿ ದೇಶದ ಸಂಪನ್ಮೂಲ ವ್ಯಕ್ತಿಗಳಾಗಿ ಬೆಳೆಯಬೇಕೆಂದು ಹಾರೈಸಿದರು.
ಸಂಸ್ಥೆಯ ಅಧ್ಯಕ್ಷ ಡಾ: ಎಂ.ಚಂದ್ರಶೇಖರ್ ಮಾತನಾಡಿ, ಜಿಲ್ಲಾಧಿಕಾರಿಗಳು ಮತ್ತು ರಕ್ಷಣಾಧಿಕಾರಿಗಳು ಅಂಶಗಳನ್ನು ಉಲ್ಲೇಖಿಸಿ ಈ ಸಂಸ್ಥೆಯು ತುಂಬಾ ಕಷ್ಠ ಕಾರ್ಪಣ್ಯಗಳಿಂದ ಬೆಳೆದು ಈಗ ಬೃಹದಾಕಾರವಾಗಿ ನಿಂತಿದೆ, 1986 ರಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಯೊಂದಿಗೆ ಸ್ಥಾಪನೆಯಾದ ಈ ಸಂಸ್ಥೆ ಅನೇಕ ಏಳು ಬೀಳುಗಳು ಮತ್ತು ಆರ್ಥಿಕ ಸಮಸ್ಯೆಗಳನ್ನು ಹೊಂದಿದೆ. ಆದರೂ ಈ ತಹಲ್ ವರೆವಿಗೂ ಉತ್ತಮವಾದ ಶಿಕ್ಷಣವನ್ನು ನೀಡಿ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉತ್ತಮ ವಿದ್ಯಾರ್ಥಿನಿಲಯಗಳ ಸೌಲಭ್ಯವನ್ನು ಸಹ ನೀಡುತ್ತಾ ಬಂದಿದೆ. ಪ್ರೌಢಶಿಕ್ಷಣದ ನಂತರ ಗ್ರಾಮೀಣ ಪ್ರದೇಶದ ಮಕ್ಕಳು ಪಟ್ಟಣದ ಕಾಲೇಜುಗಳಲ್ಲಿ ಹೆಚ್ಚಿನ ಶುಲ್ಕವನ್ನು ಭರಿಸುವುದಕ್ಕಾಗದೆ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ಈ ಬೆಳವಣಿಗೆಗಳು ಪೋಷಕರಿಗೆ ನುಂಗಲಾರದ ತುತ್ತಾಗಿದೆ. ಇದನ್ನರಿತ ನಾವುಗಳು ಗ್ರಾಮೀಣ ಪ್ರದೇಶದ ಪ್ರತಿಭೆಗಳನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವತಿಯಿಂದ ವೃತ್ತಿ ತರಬೇತಿ ಕೇಂದ್ರಗಳನ್ನು ತೆರೆದು ತರಬೇತಿಯನ್ನು ನೀಡಿ ಉದ್ಯೋಗಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದೆ. ಸಂಸ್ಥೆ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆಯ ಜೊತೆಗೆ ಸಂಸ್ಕಾರ, ಮಾನವೀಯ ಮೌಲ್ಯಗಳು, ಜೀವನದ ಮೌಲ್ಯಗಳನ್ನು ಕಲಿಸಿಕೊಡುತ್ತಿದೆ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸಿ.ವೆಂಕಟೇಶಪ್ಪ ಮತ್ತು ಪದಾಧಿಕಾರಿಗಳು, ಆಡಳಿತಾಧಿಕಾರಿ ಎಸ್. ಲಕ್ಷ್ಮೀನಾರಾಯಣರೆಡ್ಡಿ, ಪ್ರಾಂಶುಪಾಲರುಗಳು, ಮುಖ್ಯೋಪಾಧ್ಯಾಯರುಗಳು, ಸಿಬ್ಬಂದಿವರ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮುನಿಕೃಷ್ಣಪ್ಪ ತಂಡದಿಂದ ಬುದ್ಧ ಪ್ರಾರ್ಥನೆ ನಡೆಯಿತು. ಸಂವಿಧಾನ ಪೀಠಿಕೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು, ಸಾಮೂಹಿಕವಾಗಿ ನಾಡಗೀತೆ ಹಾಡುವುದರೊಂದಿಗೆ ನಾಡಿನ ಬಗ್ಗೆ ಹೆಮ್ಮೆಹೊಂದುವಂತೆ ಸಮಾನತೆಯನ್ನು ಸಾರಲಾಯಿತು. ಭಾರತ ದೇಶದ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ವಿವಿಧ ರಾಜ್ಯಗಳ ಕಲಾ ತಂಡಗಳಿಂದ ನೃತ್ಯ, ಭರತನಾಟ್ಯ, ಕತಕ್ಕಳಿ, ಕುಚುಪುಡಿ ಮುಂತಾದ ಸಾಂಸ್ಕøತಿಕ ಚಟುವಟಿಕೆಗಳು ಮನಮುಟ್ಟುವಂತಿತ್ತು, ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಜಾನ್ಸಿ ಪ್ರಸನ್ನ ಸ್ವಾಗತಿಸಿ, ವಂದಿಸಿ, ನಿರೂಪಿಸಿದರು.
Year: 2024
ನೇಜಿಗುರಿ ಗುಂಪು ವತಿಯಿಂದ ನೇಜಿಗುರಿಯಲ್ಲಿ ಆಯುಧ ಪೂಜೆ
ದಿನಾಂಕ 12/10/2024ನೇ ಶನಿವಾರ ನೇಜಿಗುರಿ ರಾಮಚಂದ್ರ-ದಿವ್ಯ ಲತಾ ಇವರ ನೇತೃತ್ವದಲ್ಲಿ ಆಯುಧ ಪೂಜೆ ನಡೆಯಿತು.
ವಾಹನ ಪೂಜೆ ಮಾಡಿಸುವಂತವರು ಬೆಳಗ್ಗೆ 9:00 ಗಂಟೆಗೆ ಸರಿಯಾಗಿ ತಮ್ಮ ವಾಹನಗಳನ್ನು ಅಲಂಕರಿಸಿ ತಂದು ನಿಲ್ಲಿಸಿದರು .
ವಾಹನಕ್ಕೆ ಮತ್ತು ದೈನಂದಿನ ಕೆಲಸ ಮಾಡುವ ಸಾಮಾನುಗಳಿಗೆ ಪೂಜೆ ಮಾಡಲಾಯಿತು. ಎಲ್ಲರಿಗೂ ಸುಖ, ಶಾಂತಿ, ಆರೋಗ್ಯ, ನೆಮ್ಮದಿ ದೊರೆಯಲಿ ಎಂದು ನಾನು ಪ್ರಾರ್ಥಿಸಿದೇವು. ವಿಜಯದಶಮಿ ಹಬ್ಬದ ಶುಭಾಷಯ ಕೋರಲಾಯಿತು. ಸಿಹಿ ತಿಂಡಿ ಹಂಚಲಾಯಿತು.
ಮುಖ್ಯ ಅತಿಥಿಯಾಗಿ ಪೃಥ್ವಿ ಸೇವಾ ಇದರ ಅಧ್ಯಕ್ಷರಾದ ಪ್ರದೀಪ್ ಗೌರೀಶ್ ಆಗಮಿಸಿದ್ದರು.ರಾಕೇಶ್ ನೇಜಿಗುರಿ ಕಾರ್ಯಕ್ರಮ ನಿರ್ವಹಿಸಿದರು.ನೇಜಿಗುರಿ ಗುಂಪು ನ ಅಧ್ಯಕ್ಷರಾದ ಅರುಣ್ ಡಿಸೋಜ ಸ್ವಾಗತ ಕೋರಿದರು.ಕಾರ್ಯಕ್ರಮಕ್ಕೆ ವ್ಯವಸ್ಥೆ ಮಾಡಿದ ರಾಮಚಂದ್ರ,ದಿವ್ಯ ಲತಾ, ಪಾಯಲ್, ರಾಕೇಶ್, ನಿತಿನ್ ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
Honouring the rich Tradition and Scientific Innovation
‘Ayudha Pooja Celebration’ at NITI (National Industrial Technical Institute) on Thursday, 10th October, 2024.
As the vibrant festival of Dussehra approaches, National Industrial Technical Institute, Heradi – Barkur had its all preparations at place, to celebrate ‘Ayudha Pooja’, ‘a cherished tradition that beautifully intertwines spirituality with our commitment to technology and learning. This auspicious occasion, dedicated to the worship of tools and instruments, serves as a reminder of the importance of knowledge, skill, and the hard work that drives innovation’, Principal Prof Kramadhari informed the students.
The Office Bearers and Members of ‘The Barkur Educational Society’ – BES, the Teaching faculty led by its Principal Prof Kramadhari, Students fraternity joined together as they honoured the essence of Machines, Equipments and Tools and the spirit of creativity that empowers NITI’s glorious journey in the world of technology, over the last 4 decades, Mr Ramachandra Kamath, the Correspondent of the Institute narrated to the gathering.
‘Through rituals, cultural performances, and collective festivities, we will celebrate our achievements and reaffirm our dedication to excellence in our fields. Let’s come together to embrace our roots while looking toward a future filled with promise and potential’, as the retired Principal of NJC, Mr B Seetharama Shetty shared his feelings on this auspicious occasion.
As many as at eight locations, from 10.00 am onwards, the devotional Pooja was performed and students were the enthusiastic lot to decorate the pendal and attractive venue for the celebrations.
Among others, Secretary of the BES Mr Ashok Kumar Shetty, Former Principal of the NITI Mr Dinakar Thollar, Admn. Coordinator of the National Educational Institutions Mr Archibald Furtado, Correspondents and Heads of National Institutions gracefully participated in the Pooja and followed reception.
A sizable number of First Batch students of NITI about 40 years ago were the special guests for this beautiful occasion, with many of their counterparts during the following years as they shared nostalgic memories and exchanged views on celebrating ‘Ruby Jubilee of their Alma mater NITI – on a fitting grand scale. Past students, Lecturers served earlier and the present students are planning something memorable in coming months.
Ayudha Pooja ceremony provided an excellent opportunity for a festive coming together of Management, past and present students and Teachers as the colourful NITI Campus wore a beautiful heavenly look, today as bright morning and clear sky doubled the joy of the spectators and stakeholders with sounds of crackers, music and sounds of bells and perfume of fresh flowers all around.
Reported by P. Archibald Furtado.
ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್-ಪಾವುರು ಉಳಿಯ ಭೇಟಿ ಹಾಗು ಬೆಂಬಲ
ಮಂಗ್ಳುರು: ಅಕ್ರಮವಾಗಿ ಮರಳು ತೆಗೆಯುತ್ತಿರುವ ಪಾವುರು ಉಳಿಯ ಪ್ರದೇಶಕ್ಕೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಸದಸ್ಯರು ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳನ್ನು ಸ್ವತಃ ವಿಕ್ಷೀಸಿಸಿದ್ದು, ನಿನ್ನೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ತಿಳಿಸಿ ಬೆಂಬಲ ಸೂಚಿಸಿದ್ದಾರೆ.
ಇದರಿಂದ ಪಾವುರು ಉಳಿಯ ಪ್ರದೇಶದ ಜನರಿಗೆ ಆತ್ಮವಿಶ್ವಾಸ ಮತ್ತು ಛಲ ಇನ್ನಷ್ಟು ಹೆಚ್ಚಿದೆ. ಈ ಹಂತದಲ್ಲಿ ಇಂತಹ ಬೆಂಬಲ ಬಹಳವೇ ಅಗತ್ಯವಾಗಿತ್ತು.
ಅಲ್ಲಿನ ನಿವಾಸಿಗಳು ಅವರ ಸಮಸ್ಯೆಗಳನ್ನು ಸವಿಸ್ಥರಾವಾಗಿ ತಿಳಿಸಿರುತ್ತಾರೆ.
ಅಲ್ಲಿನ ಧರ್ಮ ಗುರುಗಳಾದ ಫಾದರ್ ಮನೋಹರ್ ಡಿಸೋಜ ಎಲ್ಲರಿಗೂ ಸ್ವಾಗತ ಕೋರಿದರು.
ಕೇಂದ್ರೀಯ ಉಪಾಧ್ಯಕ್ಷರಾದ ಸ್ಟೀವನ್ ರೊಡ್ರಿಗಸ್ ಅಧ್ಯಕ್ಷತೆಯನ್ನು ವಹಿಸಿದ್ದರು , ಪಾವ್ಲ್ ರೋಲ್ಪಿ ಡಿ ಕೊಸ್ತಾ- ಮಾಜಿ ಅಧ್ಯಕ್ಷರು , ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇವರು ಮುಂದಿನ ನಡೆ ಕುರಿತು ಚರ್ಚೆ ನಡೆಸಿದರು.
ನಿಕಟ್ಟ ಪೂರ್ವ ಅಧ್ಯಕ್ಷರಾದ ಸ್ಟ್ಯಾನಿ ಲೋಬೊ ಇಷ್ಟರ ತನಕ ಆದ ಕೆಲಸಗಳ ವಿವರವನ್ನು ನೀಡಿದರು. ಸಹ ಕಾರ್ಯದರ್ಶಿ ಲವೀನ ಡಿಸೋಜ ಎಲ್ಲರಿಗೂ ಧನ್ಯವಾದ ತಿಳಿಸಿದರು. ವಕೀಲರಾದ ಬೆನೆಡಿಕ್ಟ್, ವಿಲ್ಫ್ರೆಡ್ ಅಲ್ವಾರಿಸ್, ಡೊಲ್ಪಿ ಡಿಸೋಜ, ಸಂತೋಷ್ ಡಿಸೋಜ, ವಿಲ್ಮಾ ಮೊಂತೇರೊ, ಅರುಣ್ ಡಿಸೋಜ, ಗಿಲ್ಬರ್ಟ್ ಡಿಸೋಜ ಹಾಗೂ ಪ್ರದೇಶದ ನಿವಾಸಿಗಳು ಉಪಸ್ಥಿತರಿದ್ದರು.
ಕೋಲಾರದಲ್ಲಿ ಆಯುಧಪೂಜೆ ಮತ್ತು ವಿಜಯದಶಮಿ ಸಂಭ್ರಮಕ್ಕೆ ಜನರ ಸಿದ್ದತೆಗಗನಕ್ಕೇರಿದ ಹೂ,ಹಣ್ಣಿನ ದರ- ಹೂವಿನ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ರೈತರಿಗೆ ಖುಷಿ
ಕೋಲಾರ:- ದಸರಾ ಮುಕ್ತಾಯದ ಹಿಂದಿನ ದಿನವಾದ ಆಯುಧಪೂಜೆಗಾಗಿ ನಗರದಲ್ಲಿ ಹಬ್ಬದ ವ್ಯಾಪಾರ ಜೋರಾಗೇ ನಡೆದಿದ್ದು, ಜನರಲ್ಲಿ ಹಬ್ಬ ಆಚರಣೆಯ ಉತ್ಸಾಹ ಎಲ್ಲೇ ಮೀರಿದೆ, ಹೂ,ಹಣ್ಣು,ಬುದುಗುಂಬಳದ ಬೆಲೆ ಗಗನಕ್ಕೇರಿ ಗ್ರಾಹಕನ ಜೇಬು ಕಚ್ಚುತ್ತಿದ್ದರೆ, ಕಳೆದೊಂದು ತಿಂಗಳಿಂದ ಹೂವಿನ ದರ ಕುಸಿತದಿಂದ ಕಂಗೆಟ್ಟಿದ್ದ ರೈತರಿಗೆ ಖುಷಿ ತಂದಿದೆ.
ಆಯುಧಪೂಜೆ ಹಿನ್ನಲೆಯಲ್ಲಿ ನಗರ ಹಾಗೂ ಗ್ರಾಮೀಣ ಜನತೆ ತಮ್ಮ ಮನೆಗಳ ಸ್ವಚ್ಚತೆಯ ಜತೆಗೆ ತಾವು ಬಳಸುವ ವಾಹನ,ಉಪಕರಣಗಳಿಗೆ, ವರ್ಷವಿಡೀ ಉದ್ಯೋಗ ನೀಡುವ ಅಂಗಡಿ,ಸಂಸ್ಥೆಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಸಂಪ್ರದಾಯ ಈ ಬಾರಿಯೂ ನಡೆದಿದ್ದು, ಹೂವಿನ ಮಾರುಕಟ್ಟೆಯಲ್ಲಿ ಜನಸಂದಣಿ ಕಂಡು ಬಂತು.
ಪ್ರತಿ ಮನೆಯಲ್ಲೂ ಬಳಸುವ ವಾಹನ, ಉಪಕರಣಗಳು, ಅಂಗಡಿ, ಕಚೇರಿಗಳಲ್ಲಿ ವಿಶೇಷ ಪೂಜೆ ನಡೆಯುವುದರಿಂದ ಹೂವಿನ ಬೆಲೆ ಈ ಸಂದರ್ಭದಲ್ಲಿ ಗಗನಮುಖಿಯಾಗಿದೆ, ಕಳೆದೊಂದು ತಿಂಗಳಿಂದ ನೆಲಕಚ್ಚಿದ್ದ ಹೂವಿನ ಬೆಲೆ ಏರಿಕೆ ಬೆಳೆಗಾರರಲ್ಲಿ ಸಂತಸಕ್ಕೆ ಕಾರಣವಾಗಿದೆ.
ಕನಕದಷ್ಟೇ ಬೆಲೆ
ಕನಕಾಂಬರ
ಹೂವಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂದಿದ್ದು, ಹೂವಿನ ಬೆಲೆ ಗಗನಮುಖಿಯಾಗಿದೆ, ಕನಕಾಂಬರ ಹೂ ಕನಕದ ರೀತಿ ಬೆಲೆ ಏರಿಸಿಕೊಂಡಿದ್ದು, ಪ್ರತಿಕೆಜಿಗೆ 1200 ಸಾವಿರದವರೆಗೂ ಮಾರಾಟವಾಗುತ್ತಿದೆ. ಉಳಿದಂತೆ ಮಲ್ಲಿಗೆ ಹೂ ಕೆಜಿಗೆ 1000ರೂ, ರೋಸ್,ಸೇವಂತಿ-250ರಿಂದ 300 ರೂ, ಇನ್ನು ಚೆಂಡು ಹೂ ಕೆಜಿಗೆ 60ರೂಗಳಿಂದ 80 ರೂ ಇದೆ.
ಈ ನಡುವೆ ಆಯುಧಪೂಜೆಯ ಬಲಿ ಪೂಜೆಗೆ ಅತ್ಯಗತ್ಯವಾಗಿರುವ ಬೂದುಗುಂಬಳ ನಗರದ ಹಳೆ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ ಸಮೀಪ ರಾಶಿಗಟ್ಟಲೇ ಬಂದಿದೆ ಆದರೆ ಬೆಲೆ ಮಾತ್ರ ಭಯ ಮೂಡಿಸುತ್ತದೆ. ಗಾತ್ರವಾರು ಬೂದುಗುಂಬಳ 100 ರೂಗಳಿಂದ 300 ರೂಗಳವರೆಗೂ ಮಾರಾಟವಾಗುತ್ತಿದೆ.
ನಗರದ ರಂಗಮಂದಿರದ ಮುಂಭಾಗ ರಾಶಿಗಟ್ಟಲೇ ಬೂದುಗುಂಬಳ ಕಾಯಿಗಳು, ಬಾಳೆ ಕಂಬಗಳು ಕಂಡು ಬಂದವು. ಇಲ್ಲಿಯೂ ವ್ಯಾಪಾರ ಜೋರಾಗೇ ನಡೆದಿದ್ದು, ಬಾಳೆ ಗಿಡ ಜತೆ 50 ರೂಗಳಿಂದ 100ರೂವರೆಗೂ ತನ್ನ ಬೆಲೆಯನ್ನು ಏರಿಸಿಕೊಂಡು ನಾಗರೀಕರ ಜೇಬಿಗೆ ಕತ್ತರಿ ಹಾಕಲು ಸಿದ್ದವಾಗಿದೆ.
ಕೆಲವು ನಾಗರೀಕರು ಕಳೆದ ಮೂರ್ನಾಲ್ಕು ದಿನಗಳ ಹಿಂದೆಯೇ ಹೂ ಖರೀದಿಸಿ ಫ್ರೀಡ್ಜ್ನಲ್ಲಿ ಸಂಗ್ರಹಿಸಿದ್ದಾರೆ ಆದರೂ ಇತರೆ ಮಧ್ಯಮ,ಬಡ ಜನತೆ ಇಷ್ಟೊಂದು ಬೆಲೆ ಏರಿಕೆಯ ನಡುವೆಯೂ ಹೂ ಖರೀದಿಯಲ್ಲಿ ತೊಡಗಿದ್ದರು.
ಸರ್ಕಾರಿ ಕಚೇರಿಗಳಲ್ಲಿ
ಆಯುಧಪೂಜೆ ಸಂಭ್ರಮ
ಸರ್ಕಾರಿ ಕಚೇರಿಗಳಲ್ಲಿ ಆಯುಧಪೂಜೆ, ವಿಜಯಧಶಮಿಗೆ ಎರಡು ದಿನ ರಜೆಯಿದ್ದ ಕಾರಣ ನಗರದ ಅನೇಕ ಕಚೇರಿಗಳಲ್ಲಿ ಗುರುವಾರವೇ ಪೂಜೆ ಮುಗಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿ, ಸರ್ವೇ, ಭೂದಾಖಲೆಗಳ ಇಲಾಖೆ, ಡಿಡಿಪಿಐ ಕಚೇರಿ, ಗ್ರಂಥಾಲಯ ಸೇರಿದಂತೆ ವಿವಿಧ ಕಚೇರಿಗಳಲ್ಲಿ ವಾಹನಗಳು, ಉಪಕರಣಗಳನ್ನು ತೊಳೆದು ಹೂಗಳಿಂದ ಅಲಂಕರಿಸಿ ಪೂಜಿಸಿದ್ದು ಕಂಡು ಬಂತು.
ಗ್ಯಾರೇಜ್ಗಳಲ್ಲಿ
ಬ್ಯುಸಿಯೋ ಬ್ಯುಸಿ
ನಾಳೆ ತಮ್ಮ ವಾಹನಗಳಿಗೆ ಪೂಜೆ ಮಾಡಲು ನಾಗರೀಕರು ಇಂದೇ ಸಿದ್ದತೆ ನಡೆಸಿದ್ದು ಕಂಡು ಬಂತು, ವಾಹನಗಳನ್ನು ತೊಳೆಯುವ ಗ್ಯಾರೇಜ್ಗಳು ತುಂಬಿ ತುಳುಕುತ್ತಿದ್ದು, ಕಾರು,ದ್ವಿಚಕ್ರವಾಹನಗಳ ಸಾಲು ನಗರದ ಗ್ಯಾರೇಜ್ಗಳ ಮುಂದೆ ಕಂಡು ಬಂತು ಒಟ್ಟಾರೆ ಆಯುಧಪೂಜೆ,ವಿಜಯದಶಮಿ ಸಂಭ್ರಮ ಇಡೀ ಜಿಲ್ಲೆಯಲ್ಲಿ ಮನೆ ಮಾಡಿದ್ದು, ಗ್ರಾಮೀಣ ಭಾಗದಲ್ಲೂ ಎತ್ತಿನಗಾಡಿ,ಟ್ರಾಕ್ಟರ್,ಕೃಷಿ ಉಪಕರಣಗಳಿಗೆ ಪೂಜೆ ಮಾಡುವ ಸಂಪ್ರದಾಯವನ್ನು ಸಂಭ್ರಮದಿಂದ ಆಚರಿಸಲು ಸಿದ್ದತೆ ನಡೆಸಲಾಗಿದೆ.
ಕನ್ಯಕಾಪರಮೇಶ್ವರಿ ದೇವಾಲಯದ ಮುಂದೆ ಏರ್ಪಡಿಸಿದ್ದ ಗಂಗಾ ಹಾರತಿ ಕಾರ್ಯಕ್ರಮ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಹಮದ್ ಬಿ.ಗೊರವಿನಕೊಳ್ಳ ಹಾಗೂ ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಉದ್ಘಾಟಿಸಿದರು
ಶ್ರೀನಿವಾಸಪುರದ ಕನ್ಯಕಾಪರಮೇಶ್ವರಿ ದೇವಾಲಯದ ಮುಂದೆ ಏರ್ಪಡಿಸಿದ್ದ ಗಂಗಾ ಹಾರತಿ ಕಾರ್ಯಕ್ರಮವನ್ನು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಹಮದ್ ಬಿ.ಗೊರವಿನಕೊಳ್ಳ ಹಾಗೂ ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಉದ್ಘಾಟಿಸಿದರು. ಕನ್ಯಕಾ ಪರಮೇಶ್ವರಿ ಪುತ್ಥಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಮಾವಿನ ಪಟ್ಟಣದಲ್ಲಿ ಗಂಗಾ ಹಾರತಿ, ತೆಪ್ಪೋತ್ಸವ ಉದ್ಘಾಟನೆ
ಶ್ರೀನಿವಾಸಪುರ: ಪಟ್ಟಣದ ಕನ್ಯಕಾ ಪರಮೇಶ್ವರಿ ದೇವಾಲಯದಲ್ಲಿ ದಸರಾ ಪ್ರಯುಕ್ತ ಮಂಗಳವಾರ ಗಂಗಾ ಹಾರತಿ ಹಾಗೂ ತೆಪ್ಪೋತ್ಸವ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಮಹಮದ್ ಬಿ.ಗೊರವಿನಕೊಳ್ಳ ಹಾಗೂ ಪುರಸಭಾಧ್ಯಕ್ಷ ಬಿ.ಆರ್.ಭಾಸ್ಕರ್ ಉದ್ಘಾಟಿಸಿದರು.
ಬಿ.ಆರ್.ಭಾಸ್ಕರ್ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಗಂಗಾ ಹಾರತಿಗೆ ಹೆಚ್ಚಿನ ಮಹತ್ವವಿದೆ. ತೆಪ್ಪೋತ್ಸವ ಒಂದು ಪರಂಪರೆಯಾಗಿ ಮುಂದುವರಿದಿದೆ. ಲೋಕಕಲ್ಯಾಣಕ್ಕಾಗಿ ನಡೆಸುವ ಈ ಕಾರ್ಯಕ್ರಮಗಳಲ್ಲಿ ಆರ್ಯವೈಶ್ಯ ಸಮುದಾಯ ಸ್ವಯಂ ಪ್ರೇರಣೆಯಿಂದ ಭಾಗವಹಿಸಿರುವುದು ಸ್ತುತ್ಯಾರ್ಹ ಎಂದು ಹೇಳಿದರು.
ಆರ್ಯ ವೈಶ್ಯ ಟ್ರಸ್ಟ್ನ ಅಧ್ಯಕ್ಷ ವೈ.ಆರ್.ಶಿವಪ್ರಕಾಶ್, ಕಾರ್ಯದರ್ಶಿ ಕೆ.ವಿ.ಸೂರ್ಯನಾರಾಯಣ ಶೆಟ್ಟಿ, ನಿರ್ದೆಶಕ ಎಸ್.ಆರ್.ಅಮರನಾಥ್, ಮುಖಂಡ ಬಿ.ಆರ್.ನಾಗೇಂದ್ರ ಬಾಬು, ಮಾಗಡಿ ಯುವಕ ಸಂಘದ ಪದಾಧಿಕಾರಿಗಳಾದ ಎಸ್.ಆರ್.ರಜತ್, ಪಿ.ರಸವಂತ್, ಬಿ.ಎಸ್.ಕೃಷ್ಣ, ಬಿ.ಎಚ್.ಸುಹಾಸ್, ಎಸ್.ಬಿ.ಸಂಕೀರ್ತ್, ಸೇವಾಕರ್ತರಾದ ವೈ.ಆರ್.ನಾಗೇಂದ್ರಬಾಬು, ಎಸ್.ಕಿಶೋರ್ ಕುಮಾರ್ ಇದ್ದರು
ಹೊಗಳಗರೆ ಕ್ರಾಸ್ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪದ್ಮಮ್ಮ (48ವರ್ಷ) ಹಾಗೂ ರಘು (26 ವರ್ಷ) ಸ್ಥಳದಲ್ಲಿ ಮೃತಪಟ್ಟಿದ್ದಾರೆ
ಶ್ರೀನಿವಾಸಪುರ : ಪಟ್ಟಣದ ಹೊರವಲಯದ ಹೊಗಳಗರೆ ಕ್ರಾಸ್ ಬಳಿ ಮಂಗಳವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಕೇತಗಾನಹಳ್ಳಿ ಗ್ರಾಮದ ಪದ್ಮಮ್ಮ ( 48ವರ್ಷ), ರಘು ( 26 ವರ್ಷ ) ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಮೃತರು ಶ್ರೀನಿವಾಸಪುರ ಪಟ್ಟಣದಿಂದ ಸ್ವಗ್ರಾಮ ಕೇತಗಾನಹಳ್ಳಿ ಗ್ರಾಮಕ್ಕೆ ತೆರಳುವ ವೇಳೆ ಘಟನೆ ನೆದಿದ್ದು, ಶ್ರೀನಿವಾಸಪುರ ಪೊಲೀಸರು ಕೇಸು ದಾಖಲಿಸಿಕೊಂಡು ಅಪರಚಿತ ವಾಹನದ ಪತ್ತೆಗಾಗಿ ಸಿಸಿ ಕ್ಯಾಮರಗಳ ಪರಿಶೀಲನೆ ಮಾಡುತ್ತಿದ್ದಾರೆ .
ಶ್ರೀ ಕ್ಷೇತ್ರ ಬೆಳ್ಮಣ್ಣು : ನವರಾತ್ರಿ ಉತ್ಸವ
ಇತಿಹಾಸ ಪ್ರಸಿದ್ಧ ಶ್ರೀ ವನದುರ್ಗೆ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದ ಬೆಳ್ಮಣ್ಣು ಶ್ರೀ ದುಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ದುರ್ಗಾಷ್ಟಮಿ ದಿನ ಬೆಳಿಗ್ಗೆ ಶ್ರೀ ದೇವರಿಗೆ ವಿಶೇಷ ಅಲಂಕಾರದೊಂದಿಗೆ ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ಪೂಜೆ ನಡೆಯಿತು. ಪ್ರತಿ ದಿನ ಸಾವಿರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ದೇವರ ದರ್ಶನ ಪಡೆದು ನವರಾತ್ರಿಯ ಪತ್ರಿ ದಿನ ರಾತ್ರಿ ಶ್ರೀ ಕ್ಷೇತ್ರದಲ್ಲಿ ಅನ್ನಸಂತರ್ಪಣೆ ಪ್ರಸಾದ ನಡೆಯುತ್ತಿದೆ.
ಅಕ್ಟೋಬರ್ 11ರಂದು ಶುಕ್ರವಾರ ಶ್ರೀ ಕ್ಷೇತ್ರದಲ್ಲಿ ಮಹಾನವಮಿ ಪ್ರಯುಕ್ತ ಶ್ರೀ ಕ್ಷೇತ್ರದ ಸಭಾಂಗಣದಲ್ಲಿ ಸಂಗೀತ ಸಂಭ್ರಮ, ಸ್ಥಳೀಯ ಪ್ರತಿಭೆಗಳಿಂದ ವಿವಿಧ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಹಾಗೂ ನವರಾತ್ರಿ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರಗಲಿದೆ. ಅಕ್ಟೋಬರ್ 12ರಂದು ವಿಜಯ ದಶಮಿ ಪ್ರಯುಕ್ತ ಮಧ್ಯಾಹ್ನ ವಿಶೇಷ ಪೂಜೆ ನಡೆಯಲಿದೆ ಎಂದು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಪತಿ-ಪತ್ನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪತಿ ಸ್ಥಳದಲ್ಲೇ ಮೃತಪಟ್ಟು, ಪತ್ನಿ ತೀವ್ರವಾಗಿ ಗಾಯ
ಪಡುಬಿದ್ರೆ: ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ಪತಿ-ಪತ್ನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದು ಪತಿ ಸ್ಥಳದಲ್ಲೇ ಮೃತಪಟ್ಟು, ಪತ್ನಿ ತೀವ್ರವಾಗಿ ಗಾಯಗೊಂಡ ಘಟನೆ ಮೂಳೂರು ಮಿರ್ಚಿ ಹೋಟೆಲ್ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಅ. 9ರಂದು ರಾತ್ರಿ ನಡೆದಿದೆ.
ಮೃತರನ್ನು ಕಾಪು ಭಾರತ್ ನಗರದ ನಿವಾಸಿ ಹಿದಾಯತ್ತುಲ್ಲಾ (55) ಎಂದು ಗುರುತಿಸಲಾಗಿದೆ. ತೀವ್ರವಾಗಿ ಗಾಯಗೊಂಡಿರುವ ಇವರ ಪತ್ನಿ ಸಾವರ್ ಎಂಬವರು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಉಚ್ಚಿಲ ಕಡೆಯಿಂದ ಕಾಪು ಕಡೆಗೆ ಹೋಗುತ್ತಿದ್ದ ಇವರು, ದಾರಿ ಮಧ್ಯೆ ಮೂಳೂರಿನಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಹೋಟೆಲಿಗೆ ಹೋಗಲು ಬೈಕನ್ನು ನಿಲ್ಲಿಸಿ ಪತ್ನಿ ಜೊತೆ ರಸ್ತೆ ದಾಟುತಿದ್ದ ಸಂದರ್ಭದಲ್ಲಿ ಉಡುಪಿ ಕಡೆಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಖಾಸಗಿ ಬಸ್ಸು ಇವರಿಬ್ಬರಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಪತಿ ಸ್ಥಳದಲ್ಲೇ ಮೃತಪಟ್ಟರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದ ಇವರು ರಜೆಯಲ್ಲಿ ಊರಿಗೆ ಬಂದಿದ್ದರು. ಕೆಲವೇ ದಿನಗಳಲ್ಲಿ ಮತ್ತೆ ಸೌದಿಗೆ ವಾಪಸ್ ಹೋಗುವವರಿದ್ದರು ಎಂದು ತಿಳಿದು ಬಂದಿದೆ.
ಪಡುಬಿದ್ರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.