ಶ್ರೀನಿವಾಸಪುರ : ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವು ನಮ್ಮ ನೆಲದ ಸಂಸ್ಕøತಿ ಆದರ್ಶ-ಮೌಲ್ಯಗಳನ್ನು ಎತ್ತಿ ಹಿಡಿಯುತ್ತದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ತಿಳಿಸಿದರು.
ಪಟ್ಟಣದ ಮಾರುತಿ ಸಭಾ ಭವನದಲ್ಲಿ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆದರ್ಶಪ್ರಾಯರಾದ ತಂದೆ, ತಾಯಿ, ಸಮಾಜದಲ್ಲಿ ಅವರ ಸ್ಥಾನಮಾನ, ಸಹೋದರರ ಸಂಬಂಧ ಹೇಗಿರಬೇಕು. ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಹಾಗೂ ಘನತೆ ಮುಂತಾದ ವಿಷಯಗಳ ಬಗ್ಗೆ ಇದರಲ್ಲಿ ಮಹರ್ಷಿಗಳು ಬೆಳಕು ಚಲ್ಲಿದ್ದಾರೆ . ಸಮಾಜದ ಸುಧಾರಕರೂ ಮಾತ್ರ ಯೋಜಿಸಲು ಸಾಧ್ಯ ಎಂದರು.
ಕಳೆದ ಆರು ಏಳು ವರ್ಷಗಳಿಂದ ಈ ಸಮುದಾಯದ ರೈತವರ್ಗದವರಿಗೆ ಸರ್ಕಾರದಿಂದ ಉಚಿತ ಕೊಳವೆ ಬಾವಿಗಳು ವಿತರಣೆಯಾಗಿಲ್ಲ , ಈ ಭಾರಿ ಸರ್ಕಾರದೊಂದಿಗೆ ಚರ್ಚಿಸಿ ಈ ಸಮುದಾಯದ ರೈತವರ್ಗಗದ ಫಲಾನುಭವಿಗಳಿಗೆ 110 ಕೊಳವೆ ಬಾವಿಗಳನ್ನು ಉಚಿತವಾಗಿ ಪಕ್ಷಬೇದ ಮರೆತು ಸಮುದಾಯದವರಿಗೆ ಹಂಚಿಕೆ ಮಾಡುವುದಾಗಿ ಕರ್ತವ್ಯವಾಗಿದೆ ಎಂದರು .
ತಾಲೂಕಿನ ಸೋಮಯಾಜಪಲ್ಲಿ,ಮುದಿಮಡುಗು, ನೆಲವಂಕಿ, ಕೊಳತೂರು ಗ್ರಾಮಪಂಚಾಯಿತಿಗಳಲ್ಲಿ ಸಮುದಾಯದಲ್ಲಿ ಕಡುಬಡವರಿದ್ದು, ಸರ್ಕಾರಿ ಯೋಜನೆಗಳನ್ನು ಮನೆ ಬಾಗಿಲಿಗೆ ಸೇರಿಸುವ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು. ಕೈಗಾರಿಕ ವಲಯ ಸ್ಥಾಪಿಸುವುದರಿಂದ ಕ್ಷೇತ್ರದ ಜನತೆಗೆ ಅನುಕೂಲವಾಗಲಿದೆ ಹೊರತು ಅನಾನುಕೂಲವಾಗುವುದಿಲ್ಲ ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ವಾಲ್ಮೀಕಿ ಮಹರ್ಷಿಗಳು ಒಬ್ಬ ವಿಜ್ಞಾನಿ, ಮಹಾಕವಿ, ಖಗೋಳಶಾಸ್ತ್ರಜ್ಞ ರವರು ತಪ್ಪಸ್ಸಿನ ಫಲದಿಂದ ಅನೇಕ ರೀತಿಯಾದ ಸಮಾಜಮುಖಿ ಕೆಲಸಗಳನ್ನು ಹಮ್ಮಿಕೊಂಡಿದ್ದರು. ಆದ್ದರಿಂದ ಇಂದು ನಾವೆಲ್ಲರೂ ಅವರ ಆದರ್ಶಗಳನ್ನು ಕಾರ್ಯಪ್ರವೃತ್ತಿಯನ್ನು ಜೀವನಕ್ಕೆ ಆಳವಡಿಸಿಕೊಳ್ಳಬೇಕು ಎಂದರು.
ಈ ಸಮಯದಲ್ಲಿ ತಹಶೀಲ್ದಾರ್ ಕಛೇರಿಯಲ್ಲಿ ವಾಲ್ಮೀಕಿ ಬಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಅಂಬೇಡ್ಕರ್ ಪುತ್ಥಳಿಗೆ ಮಾರ್ಲಾಪಣೆ ಮಾಡಲಾಯಿತು. ತಾಲೂಕಿನ ಎಲ್ಲಾ ಗ್ರಾಮಪಂಚಾಯಿತಿ ಕೇಂದ್ರಗಳಿಂದ ಬೆಳ್ಳಿ ರಥದಲ್ಲಿ ಬಂದತಹ ಬೆಳ್ಳಿರಥಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆಯನ್ನ ಹಮ್ಮಿಕೊಳ್ಳಲಾಗಿತ್ತು. ಎಸ್ಸಿ, ಎಸ್ಟಿ ಸಮುದಾಯದ ಎಸ್ಎಸ್ಎಲ್ಸಿ, ಪಿಯುಸಿ ವಾರ್ಷಿಕ ಪರೀಕ್ಷೆಗಳಲ್ಲಿ ಅಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಬ್ರಾಹ್ಮಣರ ಸಂಘದ ತಾಲೂಕು ಅಧ್ಯಕ್ಷ ದಿವಾಕರ್ ಮಾತನಾಡಿದರು. ಆರ್.ಬಾಬು ವಿದ್ಯಾರ್ಥಿಗಳಿಗೆ ಪಾರಿತೋಷಕನ್ನು ವಿತರಿಸಿದರು. ಕೆ.ಇಒ ಎ.ಎನ್.ರವಿ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಪೊಲೀಸ್ ಇನ್ಸ್ಪೆಕ್ಟರ್ ಎಂ.ಬಿ.ಗೊರವನಕೊಳ್ಳ, ಪಿಎಸ್ಐ ಜಯರಾಮ್, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕ ರಾಜೇಶ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್,ಸಿಡಿಪಿಒ ನವೀನ್, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಜಿಡಿಎಸ್ ಪಕ್ಷದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗಾಯತ್ರಿ ಮುತ್ತಪ್ಪ, ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ವೇಣುಗೋಪಾಲ್, ಸಮುದಾಯದ ಮುಖಂಡರಾದ ರಮೇಶ್, ಗೌನಿಪಲ್ಲಿ ರಾಮಮೋಹನ, ಕೊರ್ನಹಳ್ಳಿ ಆಂಜಿ, ಹೊಗಳಗೆರೆ ಆಂಜಿ, ವಾಲ್ಮೀಕಿ ಗುರುಕುಲ ಪೀಠ ಜಿಲ್ಲಾಧ್ಯಕ್ಷ ಗುಮ್ಮಿರೆಡ್ಡಿಪುರ ಹರೀಶ್ನಾಯಕ್, ತಾಲೂಕು ಪ್ರದಾನ ಕಾರ್ಯದರ್ಶಿ ಗುಮ್ಮಿರೆಡ್ಡಿಪುರ ಪ್ರದೀಪ್, ಕೃಷ್ಣಪ್ಪ, ತಾಲೂಕು ಅಧ್ಯಕ್ಷ ನಾಗರಾಜ್, ಸಿ.ಎಸ್. ಆನಂದ್, ಸಿ.ಎನ್.ಕೃಷ್ಣಮೂರ್ತಿ, ಯಮ್ಮನೂರು ನಾಗರಾಜ್, ಅಂಬೇಡ್ಕರ್ ಪಾಳ್ಯ ನಹಸಿಂಹ, ಚಲ್ದಿಗಾನಹಳ್ಳಿ ಈರಪ್ಪ, ಹೂಹಳ್ಳಿ ಅಂಬರೀಶ್, ಮನು, ಶ್ರೀನಾಥ್ ಇದ್ದರು.
Year: 2024
ಪತ್ರಕರ್ತರಿಗೆ ರಿಯಾಯಿತಿ ದರದಲ್ಲಿ ನಿವೇಶನ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಭರವಸೆ
ಬೆಂಗಳೂರು : ಮಾಧ್ಯಮದವರಿಗೂ ಆದ್ಯತೆ ಮೇರೆಗೆ ರಿಯಾಯಿತಿ ದರದಲ್ಲಿ ನಿವೇಶನ ಮತ್ತು ಮನೆ ದೊರಕಿಸಿಕೊಡುವ ಪ್ರಯತ್ನ ಮಾಡುವುದಾಗಿ ಗೃಹ ಮಂಡಳಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಅವರು ಭರವಸೆ ನೀಡಿದ್ದಾರೆ.
ಕರ್ನಾಟಕ ಕಾರ್ಯದ ನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಗೃಹಮಂಡಳಿಯಲ್ಲಿ ಭೇಟಿ ಮಾಡಿ, ಸಲ್ಲಿಸಿದ ಮನವಿ ಸ್ವೀಕರಿಸಿದ ಸಂದರ್ಭದಲ್ಲಿ ಅವರು ಈ ಭರವಸೆ ನೀಡಿದ್ದಾರೆ.
ಗೃಹ ಮಂಡಳಿಯಲ್ಲಿ ನಾನಾ ಕಾರಣಗಳಿಗಾಗಿ ಹಂಚಿಕೆಯಾಗದೆ ಉಳಿದಿರುವ ನಿವೇಶನಗಳೇ ಬಹಳಷ್ಟಿವೆ. ಅವುಗಳನ್ನು ಜಿಲ್ಲಾವಾರು ಪಟ್ಟಿ ಮಾಡಿ ನಿವೇಶನ ರಹಿತರಾದ ಪತ್ರಕರ್ತರಿಗೆ ಮರು ಹಂಚಿಕೆ ಮಾಡುವ ಬಗ್ಗೆ ಪರಿಶೀಲನೆ ಮಾಡಲಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೂ ಚರ್ಚೆ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಗೃಹಮಂಡಳಿ ವತಿಯಿಂದ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಅಭಿವೃದ್ಧಿಪಡಿಸುವ ಬಡಾವಣೆಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸುವ ಪತ್ರಕರ್ತರು, ಛಾಯಾಚಿತ್ರಗ್ರಾಹಕರು, ಕ್ಯಾಮರಾಮೆನ್ಗಳು ಸೇರಿದಂತೆ ಸುದ್ದಿಮನೆಯಲ್ಲಿ ನಾನಾ ಹಂತದಲ್ಲಿ ಕೆಲಸ ಮಾಡುವವರನ್ನು ಪ್ರತ್ಯೇಕವಾಗಿ ಪರಿಗಣಿಸಿ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ಮನವಿ ಮಾಡಲಾಯಿತು.
ಗೃಹಮಂಡಳಿ ವತಿಯಿಂದ ನಿರ್ಮಾಣ ಮಾಡುವ ಮನೆಗಳ ಹಂಚಿಕೆ ಸಂದರ್ಭದಲ್ಲಿ ಪತ್ರಕರ್ತರಿಗೆ ಆದ್ಯತೆ ನೀಡಿ ರಿಯಾಯಿತಿ ದರದಲ್ಲಿ ನೀಡುವ ವ್ಯವಸ್ಥೆ ಮಾಡಬೇಕು ಎಂದು ಕೆಯುಡಬ್ಲೂೃಜೆ ಮನವಿಯಲ್ಲಿ ವಿನಂತಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ನೀರಿನಲ್ಲಿ ಫ್ಲೋರೈಡ್ ಅಂಶ ಮತ್ತು ಸ್ತನ ಕ್ಯಾನ್ಸರ್ – ಸ್ತ್ರೀಯರಿಗೆ ಎಚ್ಚರಿಕೆ
ಕೋಲಾರ,ಅ.16: ಅಕ್ಟೋಬರ್ ಮಾಹೆಯನ್ನು ಸ್ತನ ಕ್ಯಾನ್ಸರ್ ತಿಳುವಳಿಕೆ ಮಾಹೆಯಾಗಿ ಪ್ರಪಂಚದಾದ್ಯಂತ ಅಚರಿಸಲಾಗುತ್ತದೆ. ಇದರಂಗವಾಗಿ ನಮ್ಮ ಫ್ಲೋರೋಸಿಸ್ ಪ್ರಯೋಗಾಲಯವು ಒಂದು ಪ್ರಯತ್ನವಾಗಿ ಈ ಪ್ರಬಂಧವನ್ನು ಪ್ರಕಟಿಸುತ್ತಿದ್ದೇವೆ. ಕೋಲಾರ ಜಿಲ್ಲೆಯ ನೀರಿನಲ್ಲಿ ಫ್ಲೋರೈಡ್ ಅಂಶವು ಮಿತಿ ಮೀರಿರುವುದರಿಂದ ಇದರ ಸಂಬಂಧವೇನಾದರೂ ಸ್ತನ ಕ್ಯಾನ್ಸರಿಗೆ ಪೂರಕವಾಗಿ ಅಥವ ಮಾರಕವಾಗುವುದಾ ಎಂದು ಸಂಶೋಧನೆ ನಡೆಯುತ್ತಿದೆ ಈ ಪ್ರಬಂಧವು ಅದರ ಪ್ರಾಥಮಿಕವಾಗಿ ಪ್ರಕಟಿಸುತ್ತಿದ್ದೇವೆ.
ಫ್ಲೋರೋಸಿಸ್ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿ ಜನರನ್ನು ಕಾಡುತ್ತಿದೆ. ಫ್ಲೋರೈಡ್ ಅಂಶವು ಕುಡಿಯುವ ನೀರು, ಫ್ಲೋರೈಡ್ ಹೊಂದಿರುವ ಆಹಾರ ಉತ್ಪನ್ನಗಳು ಮತ್ತು ಪರಿಸರ ಅಥವಾ ಕೈಗಾರಿಕಾ ಮಾಲಿನ್ಯಕಾರಕಗಳಿಂದ ಹಾಗೂ ದೀರ್ಘಕಾಲದ ಒಡ್ಡಿಕೊಳ್ಳುವುದರಿಂದ ಉಂಟಾಗುತ್ತದೆ. ಫ್ಲೋರೈಡ್ಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಕೀಲು ನೋವು, ದಂತ ಮತ್ತು ಮೂಳೆಯೇತರ ಅಂಗಾಂಗಳ ವಿರೂಪಗಳಿಗೆ ಕಾರಣವಾಗುತ್ತದೆ.
ಹೆಚ್ಚಿನ ಫ್ಲೋರೈಡ್ಗೆ ತುತ್ತಾದ ಜನರಿಗೆ ಇದರ ಅಪಾಯಗಳ ಅರಿವು ನೀಡಬೇಕಾಗಿರುತ್ತದೆ. ತಡೆಗಟ್ಟುವ ಕ್ರಮಗಳು ಮತ್ತು ನಿರ್ವಹಣೆಯ ತಂತ್ರಗಳು ಫ್ಲೋರೈಡ್ -ಸಂಬಂಧಿತ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಸ್ತನ ಕ್ಯಾನ್ಸರ್ ವಿಶ್ವಾದ್ಯಂತ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕ್ಯಾನ್ಸರ್ಗಳಲ್ಲಿ ಒಂದಾಗಿದೆ, ಇದು ಮಹಿಳೆಯರ ಆರೋಗ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರಿರುವುದರಿಂದ ಗಮನಾರ್ಹ ಆರೋಗ್ಯ ಕಾಳಜಿಯನ್ನು ಹೊಂದಿದೆ. ಸ್ತನ ಕ್ಯಾನ್ಸರ್ಗೆ ಸಂಬಂಧಿತ ಅಂಶಗಳು ಬಹುಕ್ರಿಯಾತ್ಮಕವಾಗಿವೆ. ಇದು ಆನುವಂಶಿಕ, ಎಪಿಜೆನೆಟಿಕ್ಸ್, ಹಾರ್ಮೋನುಗಳು, ಪರಿಸರ ಅಂಶಗಳು ಮತ್ತು ಜೀವನಶೈಲಿಯಿಂದ ಪ್ರಭಾವಿತವಾಗಿರುತ್ತದೆ. ಸ್ತನ ಕ್ಯಾನ್ಸರ್ ಬೆಳವಣಿಗೆ ಮತ್ತು ಪ್ರಗತಿಯಲ್ಲಿ ಈ ಅಂಶಗಳು ಮಹತ್ವದ ಪಾತ್ರವನ್ನು ವಹಿಸುತ್ತವೆ. ಸ್ತನ ಅಂಗಾಂಶದಲ್ಲಿನ ಜೀವಕೋಶಗಳು ಅನಿಯಂತ್ರಿತ ಮತ್ತು ಅಸಹಜ ಬೆಳವಣಿಗೆಗೆ ಒಳಗಾದಾಗ ಸ್ತನ ಕ್ಯಾನ್ಸರ್ ಸಂಭವಿಸುತ್ತದೆ. ಜೀವಕೋಶಗಳ ಅನಿಯಂತ್ರಿತ ಪ್ರಸರಣವು ಸಾಮಾನ್ಯ ಅಂಗಾಂಶ ಕಾರ್ಯವನ್ನು ಅಡ್ಡಿಪಡಿಸುತ್ತದೆ ಮತ್ತು ಸುತ್ತಮುತ್ತಲಿನ ಅಂಗಾಂಶಗಳ ಆಕ್ರಮಣಕ್ಕೆ ಕಾರಣವಾಗುತ್ತದೆ. ಸ್ತನ ಕಾರ್ಸಿನೋಮ ಪ್ರಾಥಮಿಕವಾಗಿ ಮಹಿಳೆಯರ ಮೇಲೆ ಪರಿಣಾಮ ಬೀರುತ್ತದೆ. ಸ್ತನ ಕ್ಯಾನ್ಸರ್ ಪುರುಷರನ್ನು ಹೊರೆತುಪಡಿಸಿಲ್ಲ. ಸ್ತನ ಕ್ಯಾನ್ಸರ್ನ ಪರಿಣಾಮವನ್ನು ಕಡಿಮೆ ಮಾಡುವಲ್ಲಿ ಜಾಗೃತಿ ಶಿಬಿರಗಳು ಮತ್ತು ನಿಯಮಿತ ತಪಾಸಣೆಯು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಸ್ತನ ಕ್ಯಾನ್ಸರ್ ಸಂಬಂಧಿತ ಅಪಾಯದ ಅಂಶಗಳು ಬಿಆರ್ಸಿಎ1 ಮತ್ತು ಬಿಆರ್ಸಿಎ2 ಜೀನ್ಗಳಲ್ಲಿನ ರೂಪಾಂತರಗಳು.
ಸ್ತನ ಕ್ಯಾನ್ಸರ್ ಪೀಡಿತ ಕುಟುಂಬದ ಇತಿಹಾಸ. ನೈಸರ್ಗಿಕವಾಗಿ ಅಥವಾ ಹಾರ್ಮೋನ್ ರಿಪ್ಲೇಸ್ಮೆಂಟ್ ಥೆರಪಿ (ಹೆಚ್.ಆರ್.ಟಿ) ಮೂಲಕ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ಗೆ ದೀರ್ಘಕಾಲ ಒಡ್ಡಿಕೊಳ್ಳುವುದು.ಸ್ಥೂಲಕಾಯತೆ, ಮದ್ಯಪಾನ, ಜಡ ಜೀವನಶೈಲಿ ಮತ್ತು ಪರಿಸರ ಮಾಲಿನ್ಯ.
ರೋಗಲಕ್ಷಣಗಳು ಸ್ತನದಲ್ಲಿ ಗಡ್ಡೆ ಅಥವಾ ಹಠಾತ್ ಸ್ತನದ ಗಾತ್ರ ಹೆಚ್ಚಾಗುವುದು, ಮೊಲೆತೊಟ್ಟಿನಿಂದ ದ್ರವಸೂಸುವಿಕೆ, ಆಕಾರ ಬದಲಾವಣೆ, ಸ್ತನದ ಮೇಲಿನ ಚರ್ಮದ ಡಿಂಪ್ಲಿಂಗ್ ಅಥವಾ ಪುಕ್ಕರಿಂಗ್, ಮೊಲೆತೊಟ್ಟುಗಳ ಒಳಜಗ್ಗುವಿಕೆ, ಸ್ತನ ಅಥವಾ ಮೊಲೆತೊಟ್ಟುಗಳ ಕೆಂಪು ಅಥವಾ ಸ್ಕೇಲಿಂಗ್.
ಸ್ತನ ಕ್ಯಾನ್ಸರ್ ತಡೆಗಟ್ಟುವ ವಿಧಾನಗಳು
ಜೀವನಶೈಲಿ ಮಾರ್ಪಾಡುಗಳು: ಋತುಬಂಧದ ನಂತರ ಅಧಿಕ ದೇಹದ ಕೊಬ್ಬು, ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಸರಿಯಾದ ಆಹಾರ ಮತ್ತು ನಿಯಮಿತ ದೈಹಿಕ ಚಟುವಟಿಕೆಯ ಮೂಲಕ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು.
ಪರಿಸರದ ಮಾಲಿನ್ಯಗಳಿಂದ ಆದಷ್ಟು ಕಡಿಮೆಮಾಡುವುದು ಕೀಟನಾಶಕಗಳು, ಫ್ಲೋರೈಡ್, ಬಿಸ್ಫೆನಾಲ್ ಎ (ಬಿಪಿಎ) ಮತ್ತು ವಿಕಿರಣಗಳಿಗೆ ಒಡ್ಡಿಕೊಳ್ಳುವುದನ್ನು ಮಿತಿಗೊಳಿಸುವುದು.
ಸಮತೋಲಿತ ಆಹಾರ ಪದ್ದತಿ: ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಫ್ರೊಟೀನ್ಗಳು ಒಟ್ಟಾರೆ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಆಂಟಿ ಆಕ್ಸಿಡೆಂಟ್ ಮತ್ತು ಫೈಬರ್ ಅಧಿಕವಾಗಿರುವ ಆಹಾರಗಳು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಸಂಸ್ಕರಿಸಿದ ಆಹಾರಗಳು, ಕೆಂಪು ಮಾಂಸ ಮತ್ತು ಸಕ್ಕರೆ ಸೇವನೆಯನ್ನು ಸೀಮಿತಗೊಳಿಸುವುದು.
ಮ್ಯಾಮೊಗ್ರಾಮ್ಗಳಂತ ಪರೀಕ್ಷೆಯನ್ನು ನಿಯಮಿತವಾಗಿ ಮಾಡಿಸಿಕೊಳ್ಳುವುದು.
ಆನುವಂಶಿಕ ಪರೀಕ್ಷೆ: ಕುಟುಂಬದ ಇತಿಹಾಸ ಹೊಂದಿರುವ ವ್ಯಕ್ತಿಗಳಿಗೆ ಆನುವಂಶಿಕ ಅಂದರೆ ಜೆನೆಟಿಕ್ ಅನಾಲಿಸಿಸ್ ಮಾಡಿಸಿಕೊಳ್ಳುವುದು.
ಆರಂಭಿಕ ಪತ್ತೆ ಮತ್ತು ವೈಯಕ್ತಿಕ ಚಿಕಿತ್ಸೆಯು ಸ್ತನ ಕ್ಯಾನ್ಸರ್ ತಡಗಟ್ಟಲು ಪ್ರಮುಖಪಾತ್ರ ವಹಿಸುತ್ತದೆ.
ಚಿಕಿತ್ಸಾ ವಿಧಾನಗಳು
ಸ್ತನ ಕ್ಯಾನ್ಸರ್ಗೆ ಚಿಕಿತ್ಸೆಯು ವಿಧ, ಹಂತ ಮತ್ತು ರೋಗಿಯ ಒಟ್ಟಾರೆ ಆರೋಗ್ಯ ಮತ್ತು ಆದ್ಯತೆಗಳಂತಹ ವೈಯಕ್ತಿಕ ಅಂಶಗಳನ್ನು ಅವಲಂಬಿಸಿರುತ್ತದೆ. ಪ್ರಾಥಮಿಕ ಚಿಕಿತ್ಸಾ ಆಯ್ಕೆಗಳಲ್ಲಿ ಶಸ್ತ್ರಚಿಕಿತ್ಸೆ, ವಿಕಿರಣ, ಕೀಮೋಥೆರಪಿ, ಹಾರ್ಮೋನ್ ಚಿಕಿತ್ಸೆ, ಉದ್ದೇಶಿತ ಚಿಕಿತ್ಸೆ ಮತ್ತು ಇಮ್ಯುನೊಥೆರಪಿಗಳನ್ನು ಒಳಗೊಂಡಿದೆ.
ಶಸ್ತ್ರಚಿಕಿತ್ಸೆ: ಆಯ್ಕೆಗಳಲ್ಲಿ ಲಂಪೆಕ್ಟಮಿ ಅಥವಾ ಸ್ತನಛೇದನ.
ವಿಕಿರಣ ಚಿಕಿತ್ಸೆ: ಶಸ್ತ್ರಚಿಕಿತ್ಸೆಯ ನಂತರ ಉಳಿದಿರುವ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿ ಮತ್ತು ನಿಷ್ಕ್ರಿಯಗೊಳಿಸುದು.
ಕೀಮೋಥೆರಪಿ: ಕ್ಯಾನ್ಸರ್ ಕೋಶಗಳನ್ನು ಕೊಲ್ಲುವ ಔಷಧಿಗಳು, ಪೂರ್ವಭಾವಿಯಾಗಿ, ನಿಯೋಡ್ಜುವಂಟ್ ಮತ್ತು ಶಸ್ತ್ರಚಿಕಿತ್ಸೆಯ ನಂತರದ, ಸಹಾಯಕ ಚಿಕಿತ್ಸೆ.
ಹಾರ್ಮೋನ್ ಥೆರಪಿ: ಹಾರ್ಮೋನ್ ರಿಸೆಪ್ಟರ್-ಪಾಸಿಟಿವ್ ಕ್ಯಾನ್ಸರ್ ಟ್ಯಾಮೋಕ್ಸಿಫೆನ್ ಅಥವಾ ಅರೋಮ್ಯಾಟೇಸ್ ಇನ್ಹಿಬಿಟರ್ಗಳನ್ನು ತಜ್ಞ ಹಾಗು ನುರಿತ ವೈದ್ಯರ ಸಲಹೆ ಮೇಲೆ ಪಡೆಯುವುದು.
ಉದ್ದೇಶಿತ ಚಿಕಿತ್ಸೆಯು ಹೆಚ್.ಇ.ಆರ್ 2-ಪಾಸಿಟಿವ್ ಕ್ಯಾನ್ಸರ್ಗಳಿಗೆ ಟ್ರಾಸ್ಟುಜುಮಾಬ್ ಅನ್ನು ಒಳಗೊಂಡಿದೆ.
ಇಮ್ಯುನೊಥೆರಪಿ: ಟ್ರಿಪಲ್-ನೆಗೆಟಿವ್ ಸ್ತನ ಕ್ಯಾನ್ಸರ್ಗೆ ಉದಯೋನ್ಮುಖ ಚಿಕಿತ್ಸೆ.
ಈ ಎಲ್ಲಾ ಸೌಲಭ್ಯಗಳು ಆರ್. ಎಲ್. ಜಾಲಪ್ಪ ಆಸ್ಪತ್ರೆಯೆಲ್ಲಿ ದೊರೆಯುತ್ತದೆ. ಇದರ ಹೆಚ್ಚಿನ ಮಾಹಿತಿಗಾಗಿ ಪ್ರತಿ ಸೋಮವಾರ ಶಸ್ರಚಿಕಿತ್ಸಾ ವಿಭಾಗದ ನುರಿತ ತಜ್ಞರಾದ ಡಾ.ಶ್ರೀರಾಮುಲು ಪಿ.ಎನ್ ದೂ:9845316361 ಅವರನ್ನು ಸಂಪರ್ಕಿಸಬಹುದು ಅಥವ ಡಾ. ಶಶಿರೇಖಾರನ್ನು ಸಂಪರ್ಕಿಸಬಹುದು.
ಫ್ಲೋರೋಸಿಸ್ ಮತ್ತು ಕ್ಯಾನ್ಸರ್
ಹೆಚ್ಚಿನ ಮಟ್ಟದ ಫ್ಲೋರೈಡ್ಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ ಆಕ್ಸಿಡೇಟಿವ್ ಒತ್ತಡ ಹೆಚ್ಚಾಗುತ್ತದೆ, ಇದು ಜೀವಕೋಶಗಳು ಮತ್ತು ಡಿಎನ್ಎಗೆ ಹಾನಿ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡ ಮತ್ತು ದೀರ್ಘಕಾಲದ ಉರಿಯೂತವು ಸ್ತನ ಕ್ಯಾನ್ಸರ್ ಸೇರಿದಂತೆ ಕ್ಯಾನ್ಸರ್ ಬೆಳವಣಿಗೆಗೆ ಗುರುತಿಸಲ್ಪಟ್ಟ ಕೊಡುಗೆಗಳಾಗಿವೆ. ಇದನ್ನು ಸ್ವಲ್ಪಮಟ್ಟಿಗೆ ನಿಯಂತ್ರಿಸಲು ಹಚ್ಚ ಹಸಿರು ತರಕಾರಿಗಳು, ವಿಟಮಿನ್ ಎ,ಈ ಮತ್ತು ಸಿ ಇರುವ ಹಣ್ಣು ತರಕಾರಿಗಳ ಸೇವನೆ
ಹಾರ್ಮೋನಿನ ಅಸಮತೋಲನಗಳು, ವಿಶೇಷವಾಗಿ ಹೆಚ್ಚಿದ ಈಸ್ಟ್ರೊಜೆನ್ ಅನ್ನು ಒಳಗೊಂಡಿರುವುದು ಸ್ತನ ಕ್ಯಾನ್ಸರ್ಗೆ ಪ್ರಮುಖ ಅಪಾಯಕಾರಿ ಅಂಶವಾಗಿದೆ. ದೀರ್ಘಕಾಲದ ಫ್ಲೋರೈಡ್ಗೆ ಮಾನ್ಯತೆ ಥೈರಾಯ್ಡ್ ಕಾರ್ಯವನ್ನು ಅಡ್ಡಿಪಡಿಸುತ್ತದೆ, ಇದು ಪರೋಕ್ಷವಾಗಿ ಈಸ್ಟ್ರೊಜೆನ್ ಮಟ್ಟವನ್ನು ಪ್ರಭಾವಿಸುತ್ತದೆ, ಸ್ತನ ಕ್ಯಾನ್ಸನರ್ಂತಹ ಹಾರ್ಮೋನ್-ಸಂಬಂಧಿತ ಕ್ಯಾನ್ಸರ್ಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ನಿಯಂತ್ರಿಸಲು ನಿಯಮಿತ ಆಹಾರ ಸೇವನೆ, ವ್ಯಾಯಾಮ ಯೋಗಾಭ್ಯಾಸ ಮತ್ತು ಪ್ರಾಣಾಯಾಮ
ಫ್ಲೋರೈಡ್ಗೆ ಒಡ್ಡಿಕೊಳ್ಳುವುದರಿಂದ ಆ ಅಪಾಯವನ್ನು ಉಲ್ಬಣಗೊಳಿಸಬಹುದು. ಆದಾಗ್ಯೂ, ಸ್ತನ ಕ್ಯಾನ್ಸರ್ಗೆ ಸಂಬಂಧಿಸಿದಂತೆ ಫ್ಲೋರೈಡ್ನ್ ಭಾವದ ಮೇಲೆ ಆನುವಂಶಿಕ ಅಧ್ಯಯನಗಳು ನಿರ್ದಿಷ್ಟವಾಗಿ ಗಮನಹರಿಸಿಲ್ಲ ಆದರೂ ಆರ್ ಓ ನೀರಿನ ಸೇವನೆ ಪ್ರಮುಖ ಪಾತ್ರ ವಹಿಸುತ್ತದೆ.
ಈ ಕೆಲವೊಂದು ವಿಶ್ಲೇಷಿಸಿರುವ ವಾಸ್ತವಾಂಶಗಳ ಬಗ್ಗೆ ಅರಿವು ಮೂಡಿಸುವುದು ಮತ್ತು ತಡೆಗಟ್ಟುವ ಸಲುವಾಗಿ ಶ್ರೀ ದೇವರಾಜ್ ಅರಸ್ ವೈದ್ಯಕೀಯ ಮಹಾವಿದ್ಯಾಲಯ ಜೀವರಸಾಯನ ಶಾಸ್ತ್ರ ವಿಭಾಗದ ಫ್ಲೋರೊಸಿಸ್ ರೀಸರ್ಚ್ ಅಂಡ್ ರೆಫೆರಲ್ ಲ್ಯಾಬ್ (ಎಫ್.ಆರ್.ಆರ್.ಎಲ್) ವೈದ್ಯರು ಮತ್ತೆ ವಿಜ್ಞಾನಿಗಳನ್ನು ಒಳಗೊಂಡ ತಂಡ ಡಾ.ಶಶಿಧರ್ ಕೆ.ಎನ್ (9845248742), ಡಾ. ಮುನಿಲಕ್ಷ್ಮಿ.ಯು (8748815373), ಡ. ಸಾಯಿ ದೀಪಿಕಾ ಆರ್ (9036413299), ರಾಮಗಿರಿ ಸತೀಶ್ (9676871510), ಕುಮಾರಿ ಶರಣ್ ರೋಸ್. ಪಿ (9182512774), ಎಚ್. ಸಂಪತ್ ಕುಮಾರ್ (9731249466) ಹಗಲಿರುಳು ಸಂಶೋಧನೆಯನ್ನು ನಡೆಸುತ್ತಿದ್ದಾರೆ. ಇದರ ಮುಂದುವರೆದ ಭಾಗವು ಪ್ರಕಟವಾಗುವುದು.
ರೆಡ್ ಕ್ರಾಸ್ ಕುಂದಾಪುರದ ವಾರ್ಷಿಕ ಮಹಾಸಭೆ
ಕುಂದಾಪುರ; ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ತಾಲೂಕು ಘಟಕದ 2023 -24 ಸಾಲಿನ ವಾರ್ಷಿಕ ಮಹಾಸಭೆಯು ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ರೋಟರಿ ಶ್ರೀ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಸಭಾಪತಿ ಶ್ರೀ ಎಸ್ ಜಯಕರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರುಗಿತು. ಉಪಸಭಾಪತಿ ಡಾ. ಉಮೇಶ್ ಪುತ್ರನ್ ಆಹ್ವಾನಿತ ಸದಸ್ಯರನ್ನು ಸ್ವಾಗತಿಸಿದರು. ಅಧ್ಯಕ್ಷ ಶ್ರೀ ಜಯಕರ್ ಶೆಟ್ಟಿಯವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಕುಂದಾಪುರ ರೆಡ್ ಕ್ರಾಸ್ ಸಂಸ್ಥೆ ನಡೆದು ಬಂದ ದಾರಿ, ಸಂಸ್ಥೆ ನಡೆಸುತ್ತಿರುವ ರಕ್ತ ನಿಧಿ ಹಾಗೂ ಜನೌಷಧಿ ಕೇಂದ್ರದ ಚಟುವಟಿಕೆ ಮತ್ತು ಸಂಸ್ಥೆಯ ಇತರೇ ಮಾನವೀಯ ಜನೋಪಯೋಗಿ ಸೇವಾ ಕಾರ್ಯಕ್ರಮಗಳನ್ನು ತಿಳಿಸಿದರು. ಕಾರ್ಯದರ್ಶಿ ಶ್ರಿ ಸೀತಾರಾಮ ಶೆಟ್ಟಿಯವರು 2023-24ರ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ಶ್ರೀ ಶಿವರಾಮ ಶೆಟ್ಟಿ ಸಂಸ್ಥೆಯ 2023-24ರ ಲೆಕ್ಕ ಪರಿಶೋಧನೆಯ ವರದಿ ಮತ್ತು 2024-25ರ ಬಜೆಟ್ ಮಂಡಿಸಿದರು. ವೀಕ್ಷಕರಾಗಿ ಆಗಮಿಸಿದ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಶ್ರೀ ಗಣನಾಥ್ ಶೆಟ್ಟಿ ಎಕ್ಕಾರ್ ತಾಲೂಕು ಘಟಕದ ಕಾರ್ಯವೈಖರಿಯನ್ನು ಶ್ಲಾಘಿಸಿದರು ಮತ್ತು ಮುಂದೆ ಕೈಗೊಳ್ಳುವ “ರೆಡ್ ಕ್ರಾಸ್ ಹಿರಿಯ ನಾಗರಿಕರ ಮನೆ” ಯೋಜನೆಗೆ ಶುಭ ಕೋರಿದರು.
ಶಾಹಿ ಗಾರ್ಮೆಂಟ್ಸ್ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಜನತೆ ಆಗ್ರಹ -ಮಹಿಳೆಯರ ಜೀವಕ್ಕೆ ಸಂಚಕಾರ ಬರುವ ಮುನ್ನಾ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ
ಕೋಲಾರ:- ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಜನರ ಜೀವನದ ಕುರಿತು ಕಾಳಜಿ ಇರುವುದು ನಿಜವೇ ಆದರೆ ಎನ್ಹೆಚ್-75 ರಲ್ಲಿನ ಬೆತ್ತನಿ ಸಮೀಪ ತಮ್ಮ ಬದುಕು ಕಟ್ಟಿಕೊಳ್ಳಲು ಶಾಹಿ ಗಾರ್ಮೆಂಟ್ಸ್ಗೆ ಹೋಗುವ ಸಾವಿರಾರು ಮಹಿಳಾ ಕಾರ್ಮಿಕರಿಗೆ ರಸ್ತೆ ದಾಟಲು ಪಾದಚಾರಿ ಮೇಲ್ಸೇತುವೆ ನಿರ್ಮಿಸಿ ಜವಾಬ್ದಾರಿ ಪ್ರದರ್ಶಿಸಲಿ ಮತ್ತು ಜಿಲ್ಲಾಡಳಿತ ಈ ತಾಯಂದಿರ ಜೀವಕ್ಕೆ ಸಂಚಕಾರ ಬರುವ ಮುನ್ನಾ ಎಚ್ಚೆತ್ತುಕೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ರಾಷ್ಟ್ರೀಯ ಹೆದ್ದಾರಿ-75 ರಲ್ಲಿ ರಸ್ತೆ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವೈಫಲ್ಯದಿಂದಾಗಿ ಅನೇಕರು ಜೀವ ಕಳೆದುಕೊಂಡಿರುವುದು, ನಿತ್ಯ ಒಂದಿಲ್ಲೊಂದು ಅಪಘಾತಗಳಿಂದ ಸಂಕಷ್ಟಕ್ಕೆ ಗುರಿಯಾಗುತ್ತಿರುವುದು ಸತ್ಯ ಸಂಗತಿ.
ಟೋಲ್ ಸಂಗ್ರಹವೊಂದೇ ತಮ್ಮ ಗುರಿ ಎಂಬಂತೆ ಕೆಲಸಮಾಡುವ ಈ ಪ್ರಾಧಿಕಾರ ಇಂದಿಗೂ ಸೇವಾ ರಸ್ತೆ ಪೂರ್ಣ ಪ್ರಮಾಣದಲ್ಲಿ ನಿರ್ಮಿಸುವಲ್ಲಿ ವಿಫಲವಾಗಿದೆ. ಈ ನಡುವೆ ರಸ್ತೆಯಲ್ಲಿ ಅಗತ್ಯವಿರುವೆಡೆ ಪಾದಚಾರಿ ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ಮಿಸಿ ಜನರ ಅಮೂಲ್ಯ ಜೀವ ಉಳಿಸುವ ಕಾಯಕದಲ್ಲೂ ಎಡವಿದೆ.
ಶಾಹಿ ಗಾರ್ಮೆಂಟ್ಸ್ಗೆ ಸಾವಿರಾರು ಮಂದಿ
ನಗರ ಹೊರವಲಯದ ಬೆತ್ತನಿ ಸಮೀಪ ಹೆದ್ದಾರಿಗೆ ಹೊಂದಿಕೊಂಡಂತೆ ಸುಮಾರು 20 ವರ್ಷಗಳಿಂದ ಶಾಹಿ ಎಕ್ಸ್ಪೋರ್ಟ್ ಎಂಬ ಕಂಪನಿ ಕೆಲಸ ಮಾಡುತ್ತಿದೆ, ಇಲ್ಲಿಗೆ ನಗರ ಹಾಗೂ ವಿವಿಧೆಡೆಗಳಿಂದ ಸಾವಿರಾರು ಮಹಿಳಾ ಕಾರ್ಮಿಕರು ತಮ್ಮ ಬದುಕು ಕಟ್ಟಿಕೊಳ್ಳಲು ಬಂದು ಕಾರ್ಮಿಕರಾಗಿ ದುಡಿಯುತ್ತಿದ್ದಾರೆ.
ಕುಟುಂಬ ನಿರ್ವಹಣೆಗಾಗಿ, ಹೆತ್ತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ತವಕದೊಂದಿಗೆ ಅನೇಕ ತಾಯಂದಿರು ಇಲ್ಲಿ ಕೆಲಸ ಮಾಡುತ್ತಿದ್ದು, ನಿತ್ಯ ಗಾರ್ಮೆಂಟ್ಸ್ಗೆ ಬರುವಾಗ ಮತ್ತು ಹೋಗುವಾಗ ರಸ್ತೆ ದಾಟಲು ತಮ್ಮ ಜೀವ ಕೈಯಲ್ಲಿಡಿದು ಸಾಗುತ್ತಿದ್ದಾರೆ.
ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ವಾಹನಗಳು ಕನಿಷ್ಟ ಗಂಟೆಗೆ 100 ಕಿಮೀಗಿಂತಲೂ ಹೆಚ್ಚಿನ ವೇಗದಲ್ಲಿ ಸಂಚರಿಸುತ್ತವೆ, ಇಂತಹ ಅತಿ ವೇಗದ ವಾಹನಗಳಿಂದ ತಮ್ಮ ಜೀವ ಉಳಿಸಿಕೊಳ್ಳಲು ಪರದಾಡುತ್ತಾ ರಸ್ತೆ ದಾಟುವ ಈ ಮಹಿಳೆಯರ ಬದುಕಿಗೆ ಭದ್ರತೆ ಇಲ್ಲವಾಗಿದೆ.
ಕೆಲಸಕ್ಕೆ ಬಾರದ ಕಡೆಗಳಲ್ಲಿ ಒತ್ತಡಗಳಿಗೆ ಮಣಿದು ಪಾದಚಾರಿ ಮೇಲ್ಸೇತುವೆ ನಿರ್ಮಿಸಿರುವ ಹೆದ್ದಾರಿ ಪ್ರಾಧಿಕಾರಕ್ಕೆ ಸಾವಿರಾರು ಮಹಿಳೆಯರ ಜೀವ ರಕ್ಷಣೆಗಾಗಿ ಶಾಹಿ ಗಾರ್ಮೆಂಟ್ಸ್ ಮುಂದೆ ಒಂದು ಮೇಲ್ಸೇತುವೆ ನಿರ್ಮಿಸಬೇಕು ಎಂಬ ಪರಿಜ್ಞಾನವೇ ಇಲ್ಲದಂತಾಗಿದೆ.
ಈ ಕುರಿತು ಪತ್ರಿಕೆಗಳು ಗಮನ ಸೆಳೆದಿವೆ, ಶಾಹಿ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಬೈರೇಗೌಡ ಅವರನ್ನು ಈ ಕುರಿತು ಪ್ರಶ್ನಿಸಿದರೆ ತಮ್ಮ ಕಂಫನಿ ಕಡೆಯಿಂದ ತಮ್ಮ ಕಾರ್ಮಿಕರ ರಕ್ಷಣೆಗಾಗಿ ಈಗಾಗಲೇ ನಾವು ಹೆದ್ದಾರಿ ಪ್ರಾಧಿಕಾರಕ್ಕೆ ಪಾದಚಾರಿ ಮೇಲ್ಸೇತುವೆ ನಿರ್ಮಾಣಕ್ಕೆ ಮನವಿ ನೀಡಿದ್ದೇವೆ, ಸೇತುವೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ ಎನ್ನುತ್ತಾರೆ.
ಹೆದ್ದಾರಿಯಲ್ಲಿ ಈಗಾಗಲೇ ಕೊಂಡರಾಜನಹಳ್ಳಿ ಸಮೀಪ ನಿರ್ಮಿಸಿರುವ ಮೇಲ್ಸೇತುವೆಯನ್ನು ಜನತೆ ಬಳಸಿಕೊಂಡ ನಿದರ್ಶನಗಳೇ ಇಲ್ಲ, ಯಾವೊಬ್ಬ ಪಾದಚಾರಿಯೂ ಅದರ ಮೇಲೆ ಓಡಾಡಿದ್ದನ್ನು ಕಾಣಲಿಲ್ಲ.
ಬದುಕು ಕಟ್ಟಿಕೊಳ್ಳಲು ದುಡಿಮೆಗೆ ಬರುವ ಮಹಿಳೆಯರ ಅಮೂಲ್ಯ ಜೀವಕ್ಕೆ ಕುತ್ತು ಬರುವ ಮುನ್ನಾ ಪ್ರಾಧಿಕಾರ ಎಚ್ಚೆತ್ತುಕೊಳ್ಳಲಿ, ಚುಂಚುದೇನಹಳ್ಳಿ ಸಮೀಪ ಅಪಘಾತಗಳಾಗಿ ಜೀವಗಳು ಬಲಿಯಾದ ನಂತರ ಅಂಡರ್ ಪಾಸ್ ನಿರ್ಮಾಣ ಮಾಡಿ ಮಧ್ಯೆ ರಸ್ತೆ ಬಂದ್ ಮಾಡಿದಂತೆ ಶಾಹಿ ಗಾರ್ಮೆಂಟ್ಸ್ ಬಳಿ ಮಾಡುವುದು ಬೇಡ ಅವಘಢಗಳು ಸಂಭವಿಸುವ ಮುನ್ನವೇ ಪಾದಚಾರಿ ಮೇಲ್ಸೇತುವೆ ನಿರ್ಮಿಸುವ ಸಾಮಾಜಿಕ ಜವಾಬ್ದಾರಿ ಮೆರೆಯಲಿ ಎಂಬುದು ಈ ಭಾಗದ ಸಾರ್ವಜನಿಕರ ಆಗ್ರಹವಾಗಿದೆ.
ಈ ನಿಟ್ಟಿನಲ್ಲಿ ರಸ್ತೆ ಸುರಕ್ಷತಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸುವ ಮೂಲಕ ಸಾವಿರಾರು ಮಹಿಳೆಯರು ತಮ್ಮ ಬದುಕುಕಟ್ಟಿಕೊಳ್ಳಲು ನಿರ್ಭಯವಾಗಿ ಸಾಗಲು ಅನುವು ಮಾಡಿಕೊಡಬೇಕಾಗಿದೆ.
Catholic Association of South Kanara (CASK) launched its inaugural program, “Reinventing Yourself: Through Paradigm Shifts in Thinking
Mangaluru; On October 15, 2024, the Catholic Association of South Kanara (CASK) launched its inaugural program, “Reinventing Yourself: Through Paradigm Shifts in Thinking,” as part of the ‘IgniteU’ project, in collaboration with the Center for Professional Excellence and the Department of English at the School of Social Work, Roshni Nilaya, Mangaluru.
The event was inaugurated by Mr. Ronald Gomes, President of CASK, along with Vice President and CASK Program Director Ms. Marjorie Texeira and Assistant Professor Vineetha Pereira, Director of the Center for Professional Excellence and Head of the Department of English. Notable attendees included Dr. Sandra Lobo, Dean of Humanities, and Assistant Professor Rancy D’Souza from the School of Social Work.
Professor Gerard D’Souza from St. Agnes College delivered an engaging presentation, highlighting the importance of ethical self-transformation through personal anecdotes. He introduced practical coping mechanisms such as the 9-10 Principle, the 10 Finger Principle, and the Window Technique. Additionally, he discussed internal “Viruses”—negative traits that hinder personal growth—and shared strategies to overcome them. Insights on interview techniques and the development of soft skills to enhance employability were also provided. The session, enriched by creative activities and discussions, inspired attendees to embrace personal and professional reinvention.
The event was compereed by Ms. Mahed Sadiaf, a III BA student.
ಕುಂದಾಪುರ : ವಿಧಾನ ಪರಿಷತ್ ಚುನಾವಣೆಯ ಸಿದ್ಧತಾ ಸಭೆ
ಕುಂದಾಪುರ : ಬಿಜೆಪಿಯ ನಿರಂತರ ಸುಳ್ಳು ಅಪಾದನೆಗಳಿಂದ ಜನಪರ ರಾಜ್ಯ ಸರ್ಕಾರವನ್ನು ಅಸ್ಥಿರ ಗೊಳಿಸುವುದು ಅಸಾಧ್ಯ ವಿಧಾನಪರಿಷತ್ತಿನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳ ಜನಪ್ರತಿನಿಧಿಗಳ ಧ್ವನಿ ಆಗಬಲ್ಲ ರಾಜು ಪೂಜಾರಿ ಅವರನ್ನು ಬೆಂಬಲಿಸಿದರೆ ,ಕರಾವಳಿಯ ಸ್ಥಳೀಯ ಆಡಳಿತಕ್ಕೆ ಶಕ್ತಿ ಬಂದಂತಾಗುತ್ತದೆ ,ಮಾತ್ರವಲ್ಲದೆ ಸಿದ್ದರಾಮಯ್ಯನವರ ಕೈ ಬಲಪಡಿಸಿದಂತಾಗುತ್ತದೆ ಎಂದು ಉಡುಪಿ ಜಿಲ್ಲಾ ಕೆಪಿಸಿಸಿ ಉಸ್ತುವಾರಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ ಹೇಳಿದರು.
ಇಂದು ಕೋಟೇಶ್ವರ ಸಹನಾ ಹೋಟೆಲ್ ನಾ ಸುಮುಖ ಹಾಲಿನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಕುಂದಾಪುರ ಕಾಂಗ್ರೆಸ್ ಉಸ್ತುವಾರಿಗಳನ್ನು ಉದ್ದೇಶಿಸಿ ಇವರು ಮಾತನಾಡಿದರು.
ಪ್ರತಿಯೊಂದು ಮನೆಗೆ ಆರ್ಥಿಕ ಶಕ್ತಿಯನ್ನು ನೀಡಿದ ಕಾಂಗ್ರೆಸ್ ಆಡಳಿತದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಂಸದರಾದ ಕೆ ಜಯಪ್ರಕಾಶ್ ಹೆಗ್ಡೆಯವರು ನುಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರು ವಹಿಸಿದ್ದರು.
ವೇದಿಕೆಯಲ್ಲಿ ಅಭ್ಯರ್ಥಿ ರಾಜು ಪೂಜಾರಿ , ಕಿಶನ್ ಹೆಗ್ಡೆ , ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ ,ಬಿ ಹೇರಿಯಣ್ಣ, ದೇವಕಿ ಸಣ್ಣಯ್ಯ , ವಾಸುದೇವ್ ಯಡಿಯಾಳ, ಅಶೋಕ ಪೂಜಾರಿ, ಶ್ರೀನಿವಾಸ್ ಅಮೀನ್ ಸಾಲಿಗ್ರಾಮ , ವಿಕಾಸ್ ಹೆಗ್ಡೆ, ರೋಶನ್ ಶೆಟ್ಟಿ ಇನ್ನಿತರು ಉಪಸ್ಥಿತರಿದ್ದರು .
ಕುಂದಾಪುರ ಬ್ಲಾಕ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಕೃಷ್ಣ ಪೂಜಾರಿ ವಂದಿಸಿ, ಬ್ಲಾಕ್ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿದರು.
ಸ್ಕೂಲ್ ಬಸ್ ಅಪಘಾತದಲ್ಲಿ ಎರಡು ಚಿಕ್ಕ ಮಕ್ಕಳನ್ನು ಕಳೆದುಕೊಂಡ ಮರಿನಾ ಡಿ’ಸಿಲ್ವಾ ನಿಧನ (42)
ಕುಂದಾಪುರ: ಹೆಮ್ಮಾಡಿಯ ಮರಿನಾ ಡಿ’ಡಿಸಿಲ್ವಾ ಅಕ್ಟೋಬರ್ 14ರಂದು ನಿಧನರಾದರು.
ಮೃತರು ಕುಂದಾಪುರ ಓಯಾಸಿಸ್ ಎಲೆಕ್ಟ್ರಾನಿಕ್ ಮಳಿಗೆಯ ಮಾಲಕರಾದ ಲಾಯ್ಡ್ ಡಿ’ಸಿಲ್ವಾ ಅವರ ಧರ್ಮಪತ್ನಿಯಾಗಿದ್ದಾರೆ
ಮರೀನಾ ತ್ಯಾಗಮಯಿ, ತಮ್ಮ ಯುವ ಪ್ರಾಯದಲ್ಲೇ ತಮ್ಮ ಒಂದು ಕಿಡ್ನಿಯನ್ನು ತನ್ನ ತಮ್ಮನಿಗೆ ದಾನ ನೀಡಿದವರು. ಕೆಲವು ವರ್ಷಗಳ ಹಿಂದೆ ಡಾನ್ ಬಾಸ್ಕೊ ಶಾಲೆಯ ವಿದ್ಯಾಥಿಗಳು ಶಾಲೆಗೆ ತೆರಳುತ್ತಿರುವ ಖಾಸಗಿ ಸ್ಕೂಲ್ ಬಸ್ಸಿನ ಭೀಕರ ಅಪಘಾತದಲ್ಲಿ ಅವರು ಎರಡು ಚಿಕ್ಕ ಮಕ್ಕಳನ್ನು ಕಳೆದುಕೊಂಡ ದುಖಿತೆ. ನಂತರ ಎರಡು ಮಕ್ಕಳಿಗೆ ಜನ್ಮ ಕೊಟ್ಟು ಮಹಾತಾಯಿ ಆದವರು, ನಂತರ ಕೆನ್ಸರ್ ಕಾಯಿಲೆಗೆ ಗುರಿಯಾಗಿ, ಕೆನ್ಸರ್ ಕಾಯಿಲೆಯಿಂದ ಪುನರ್ಜೀವನ ಪಡೆದವರು. ಈಕೆ ಈಗ ಸ್ವಲ್ಪ ದಿನಗಳ ಅಸ್ವಸ್ಥೆಯಿಂದ ದೈವಾಧಿನಳಾಗಿದ್ದಾರೆ. ಈಕೆ ಮೂಲತ ಬಸ್ರೂರಿನವಳಾಗಿದ್ದು, ಕುಂದಾಪುರ ಸಂತ ಜೋಸೆಫ್ ಪ್ರೌಢಶಾಲೆಯಲ್ಲಿ ಸುಧಿರ್ಘ ಸೇವೆ ಸಲ್ಲಿಸಿದ ಜಿಲ್ಲಿ ಬಾಯಮ್ಮಾವರ ಮಗಳಾಗಿದ್ದಾರೆ.
ಈಕೆಯೆ ಅಂತಿಮ ಕ್ರಿಯೆಯು ಅಕ್ಟೋಬರ್ 16ರಂದು ಸಂಜೆ, ಮನೆಯಿಂದ ಅಂತಿಮ ಸಂಸ್ಕಾರ 3.30 ಕ್ಕೆ ಆರಂಭವಾಗಿ 4 ಗಂಟೆಗೆ ತಲ್ಲೂರಿನ ಚರ್ಚಿನಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.
ಇವಳು ಪತಿ,ಇಬ್ಬರು ಚಿಕ್ಕ ಮಕ್ಕಳು, ಮಾವ,ಅತ್ತೆ, ತಾಯಿ, ಅಕ್ಕ ಅಣ್ಣದಿಂರದು ಮತ್ತು ಅಪಾರ ಬಂದು ಬಳಗದವರನ್ನು ಅಗಲಿದ್ದಾರೆ
ಜನನುಡಿ ಸುದ್ದಿ ಸಂಸ್ಥೆ ಈಕೆಗೆ ಪ್ರೀತಿಯ ಶ್ರದ್ದಾಂಜಲಿ ಅರ್ಪಿಸುತ್ತದೆ
ರಾಜ್ಯದಲ್ಲಿ ನಾಳೆಯಿಂದ ಅಧಿಕ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು,ಅ,15 : ಈಗಾಗಲೇ ರಾಜ್ಯದ ರಾಜಧಾನಿಯಲ್ಲಿ ಒಂದೇ ಸಮನೇ ಮಳೆಯಾಗಿದ್ದು, ಅಲ್ಲದೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು,ಇನ್ನೂ ಬುಧವಾರದಿಂದ (ಅ.16) ರಾಜ್ಯಾದ್ಯಂತ ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಬುಧವಾರದಿಂದ ಕರಾವಳಿ ಹಾಗೂ ಒಳನಾಡು ಭಾಗದಲ್ಲಿ ಮಳೆ ಅಧಿಕವಾಗಿ ಸುರಿಯಲಿದೆ. ಆದ್ದರಿಂದ, ಅ.16 ಮತ್ತು 17ಕ್ಕೆ ಕರಾವಳಿಯ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್, ಅ.18ಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.