ಕುಂದಾಪುರ; ಮರದಿಂದ ಬಿದ್ದು ಪೆಟ್ಟಾಗಿರುವ ಬಾಬು ಎನ್ನುವ ವ್ಯಕ್ತಿಗೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ವತಿಯಿಂದ ವೀಲ್ ಚೈರ್ ನೀಡಲಾಯಿತು. ಸಭಾಪತಿ ಎಸ್ ಜಯಕರ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ನಿರ್ವಹಣ ಸಮಿತಿಯ ಸದಸ್ಯರಾದ ಸೀತಾರಾಮ ಶೆಟ್ಟಿ, ಸತ್ಯನಾರಾಯಣ ಪುರಾಣಿಕ, ಮುತ್ತಯ್ಯ ಶೆಟ್ಟಿ , ಸೀತಾರಾಮ ನಕ್ಕತ್ತಾಯ, ಗಣೇಶ ಆಚಾರ್ಯ ಹಾಗೂ ಸದಾನಂದ ಶೆಟ್ಟಿ ಉಪಸ್ಥಿತರಿದ್ದರು
Year: 2024
ಪಾವೂರು ಉಳಿಯ,ಪ್ರದೇಶಗಳಲ್ಲಿ ತೂಗು ಸೇತುವೆಯನ್ನು ನಿರ್ಮಿಸಲು ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರಿಗೆ ಕಥೊಲಿಕ್ ಸಭಾ ಸಂಘಟನೆಯಿಂದ ಮನವಿ
ಮಂಗಳೂರು: ಈ ಪ್ರದೇಶದಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದುದನ್ನು ಸಂಪೂರ್ಣವಾಗಿ ನಿಷೇಧಿಸಿದಕ್ಕಾಗಿ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರಿಗೆ ಕಥೊಲಿಕ್ ಸಭಾ ಸಂಘಟನೆಯಿಂದ ಸಮಸ್ತ ದ್ವೀಪ ನಿವಾಸಿಗಳ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು.
ಮಂಗಳೂರು ತಾಲೂಕು ಗ್ರಾಮದ ಪಾವೂರು ಉಳಿಯ ಎಂಬಲ್ಲಿ ನೇತ್ರಾವತಿ ನದಿ ಹರಿಯುತ್ತಿದ್ದು ಈ ನದಿ ತೀರದಲ್ಲಿ ದ್ವೀಪವಿದ್ದು,
ಈ ದ್ವೀಪದ ಸುತ್ತ ಪ್ರದೇಶವು ನದಿಯು ಹರಿಯುತ್ತಿದ್ದು, ಈ ದ್ವೀಪದಲ್ಲಿ 58 ಮನೆಗಳು ಹಾಗೂ ಕ್ರೈಸ್ತ ದೇವಾಲಯ ಇರುತ್ತದೆ. ಈ ದ್ವೀಪ ಪ್ರದೇಶದ ನಿವಾಸಿಗಳು ಪೇಟೆಗೆ ಹಾಗೂ ದಿನ ನಿತ್ಯ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು, ಗರ್ಭಿಣಿಯರನ್ನು ಮತ್ತು ರೋಗಿಗಳನ್ನು ಆಸ್ಪತ್ರೆಗೆ ಕೊಂಡುಹೋಗಲು ತಾವೂ ಸರಕಾರದಿಂದ ಒದಗಿಸಿದ ದೋಣಿಯನ್ನೇ ಅವಲಂಬಿಸಬೇಕಾಗಿರುತ್ತದೆ, ರಾತ್ರಿ ಹೊತ್ತಲ್ಲಿ ಈ ನದಿಯಲ್ಲಿ ಸಂಚಾರಿಸುವುದು ಅತೀವ ಕಷ್ಟಕರವಾಗಿರುತ್ತದೆ. ತಾವೂ ಪ್ರತಿನಿಧಿಸುತ್ತಿರುವ ಕ್ಷೇತ್ರ ಇದಾಗಿದ್ದು ನಮ್ಮ ಬೇಡಿಕೆಗಳಿಗೆ ಹಾಗೂ ಕಷ್ಟಕಾರ್ಪಣ್ಯಗಳಿಗೆ ಸದಾ ಸ್ಪಂದಿಸುತ್ತಿರವ ತಾವೂ ಬಡವರಾದ ದ್ವೀಪ ನಿವಾಸಿಗಳ ಮೇಲೆ ದಯೆ ತೋರಿ ಪಾವೂರು ಉಳಿಯ ದ್ವೀಪಕ್ಕೆ ಒಂದು ತೂಗು ಸೇತುವೆ ಯನ್ನು ನಿರ್ಮಿಸಿ ಕೊಟ್ಟು ನಿವಾಸಿಗಳ ಅಗತ್ಯತೆಗಳಿಗೆ ಸ್ಪಂದಿಸಬೇಕಾಗಿ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ರವರಿಗೆ ಕಥೊಲಿಕ್ ಸಭಾ ಸಂಘಟನೆಯಿಂದ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸ್ಪೀಕರ್ ಸನ್ಮಾನ್ಯ ಯು.ಟಿ. ಖಾದರ್ ಸಮಸ್ಯೆಯನ್ನು ಆಲಿಸಿ ಅಲ್ಲಿಯ ನಿವಾಸಿಗಳಿಗೆ ನ್ಯಾಯ ಒದಗಿಸಿ ಕೊಡುವ ಭರವಸೆಯನ್ನು ನೀಡಿದರು. ಪಾವೂರು ಉಳಿಯ ಪ್ರದೇಶಕ್ಕೆ ಅತೀ ಶೀಘ್ರದಲ್ಲಿ ತೂಗು ಸೇತುವೆಯನ್ನು ನಿರ್ಮಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಅಧ್ಯಕ್ಷರಾದ ಆಲ್ವಿನ್ ಡಿಸೋಜ ಮಾಜಿ ಅಧ್ಯಕ್ಷರಾದ ಪಾವ್ಲ್ ರೋಲ್ಪಿ ಡಿಕೊಸ್ತಾ, ಉಪಾಧ್ಯಕ್ಷರಾದ ಸ್ಟೀವನ್ ರೊಡ್ರಿಗಸ್ ಮಾಜಿ ಅಧ್ಯಕ್ಷರು, ವಲಯ ಅಧ್ಯಕ್ಷರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು.
ಶಿಕ್ಷಕರು ವಿದ್ಯಾರ್ಥಿಗಳ ಮನೋಬಲವನ್ನು ಅರಿಯಬೇಕು –ಖ್ಯಾತ ಶಿಕ್ಷಣ ತಜ್ಞ ಡಾ. ರಾಮ್ ನಾರಾಯಣ್
ಕುಂದಾಪುರ (ಅ.19) : ಶಿಕ್ಷಕರಾದವರು ಸಾಧುಸಂತರ ಹಾಗೆ ವೇದಿಕೆಯಲ್ಲಿ ನಿಂತು ಪ್ರವಚನ ನೀಡುವುದಕ್ಕಿಂತ ವಿದ್ಯಾರ್ಥಿಗಳ ಜೊತೆಗಿದ್ದು, ಅವರ ಮನೋಬಲವನ್ನು ಅರಿತು ಮಾರ್ಗದರ್ಶಕರಾಗಬೇಕು ಎಂದು ಖ್ಯಾತ ಶಿಕ್ಷಣ ತಜ್ಞ ಸಿಕ್ಕಿಂ ಮಣಿಪಾಲ ವಿಶ್ವವಿದ್ಯಾನಿಲಯದ ಪ್ರೊ. ಚಾನ್ಸಲರ್ ಆಗಿರುವ ಡಾ. ರಾಮನಾರಾಯಣ್ ಹೇಳಿದರು. ಅವರು ಎಚ್.ಎಮ್.ಎಮ್ ಮತ್ತು ವಿ.ಕೆ.ಆರ್ ಶಾಲೆಗಳಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ ಪುನಶ್ಚೇತನ ಕಾರ್ಯಾಗಾರದಲ್ಲಿ ಮಾತನಾಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮಾತನಾಡುತ್ತಾ ತರಗತಿಯಲ್ಲಿ ಸಮಸ್ಯೆಗಳು ಎಲ್ಲಿವೆ ಎಂದು ಯೋಚಿಸುವುದಕ್ಕಿಂತ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದನ್ನು ಇಂದಿನ ದಿನಗಳಲ್ಲಿ ಯೋಚಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷರಾಗಿರುವ ಕುಂದಾಪುರ ಎಜುಕೇಶನ್ ಸೊಸೈಟಿ (ರಿ.) ಯ ಕಾರ್ಯದರ್ಶಿಯಾಗಿರುವ ಸೀತಾರಾಮ ನಕ್ಕತ್ತಾಯರು, ಶಿಕ್ಷಕರು ಕ್ರಿಯಾಶೀಲರಾಗಬೇಕಾದರೆ ತರಬೇತಿಗಳು ಅತೀ ಮುಖ್ಯ ಎಂದರು.
ಶಿಕ್ಷಣ ಸಂಯೋಜಕರಾದ ವಿಲ್ಮಾ ಡಿ ಸಿಲ್ವಾ ಅತಿಥಿಗಳ ಪರಿಚಯ ಮಾಡಿದರು. ಶಿಕ್ಷಕಿ ಶ್ವೇತಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಂಸ್ಥೆಯ ಎಲ್ಲಾ ವಿಭಾಗದ ಮುಖ್ಯಸ್ಥರು, ಶಿಕ್ಷಕರು, ಸಂಸ್ಥೆಯ ಶಿಕ್ಷಕ ವಿದ್ಯಾರ್ಥಿಗಳು, ಕುಂದಾಪುರ ಪರಿಸರದ ವಿವಿಧ ಶಾಲೆಗಳ ಆಸಕ್ತ ಶಿಕ್ಷಕರು ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ “ಸ್ವಯಂ ಕಾಳಜಿ ಮತ್ತು ಸ್ವಚ್ಛತೆ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ
ಕುಂದಾಪುರ: ಅಕ್ಟೋಬರ್ 18 ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಮಹಿಳಾ ವೇದಿಕೆಯ ಆಶ್ರಯದಲ್ಲಿ ” ಸ್ವಯಂ ಕಾಳಜಿ ಮತ್ತು ಸ್ವಚ್ಛತೆ ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಆಯುಷ್ ಧಾಮ ಆಸ್ಪತ್ರೆಯ ವ್ಯವಸ್ಥಾಪಕರಾದ ಡಾ.ಸೋನಿ ಡಿಕೊಸ್ತಾ ಮಾತನಾಡಿ ಮೊದಲು ಆಧ್ಯಾತ್ಮಿಕ ನೆಲೆಯಲ್ಲಿ ಸ್ವಯಂ ಕಾಳಜಿ ಮಾಡಬೇಕು. ಅಂದರೆ ಸಕಾರಾತ್ಮಕ ಆಲೋಚನೆ ಮತ್ತು ಮನಸ್ಥಿತಿಯನ್ನು ರೂಡಿಸಿಕೊಳ್ಳಬೇಕು. ತುಂಬಾ ಭಾವನಾತ್ಮಕತೆಗೆ ಒಳಗಾಗದೆ ಮಾನಸಿಕವಾಗಿ ಗಟ್ಟಿತನ ಬೆಳೆಸಿಕೊಳ್ಳಬೇಕು. ಜೊತೆಗೆ ದೈಹಿಕ ಸ್ವಾಸ್ಥ್ಯ ಮತ್ತು ಸ್ವಚ್ಛತೆಯನ್ನು ಅರಿತು ನಿಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ
ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ ಸತ್ಯನಾರಾಯಣ, ಮಹಿಳಾ ವೇದಿಕೆಯ ಸಂಚಾಲಕರಾದ ಮೀನಾಕ್ಷಿ ಎನ್.ಎಸ್. ಉಪಸ್ಥಿತರಿದ್ದರು.
ವಿದ್ಯಾರ್ಥಿನಿಯರಾದ ಅಫ್ರಾ ಕಾರ್ಯಕ್ರಮ ನಿರೂಪಿಸಿದರು. ಓಜಸ್ವಿನಿ ಪರಿಚಯಿಸಿದರು . ಸ್ಪೂರ್ತಿ ಸ್ವಾಗತಿಸಿದರು. ಪ್ರೀತಿಕಾ ವಂದಿಸಿದರು. ಶ್ವೇತಾ ಮತ್ತು ರಕ್ಷಿತಾ ಪ್ರಾರ್ಥನೆ ಮಾಡಿದರು.
ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ. ಅನುದಾನ ಬಳಕೆಯಲ್ಲಿ ಶೇಕಡ 100 ರಷ್ಟು ಆರ್ಥಿಕ ಭೌತಿಕ ಪ್ರಗತಿ ಸಾಧಿಸಿ : ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಏಕ್ ರೂಪ್ ಕೌರ್
ಕೋಲಾರ : 2024-25ನೇ ಸಾಲಿಗೆ ಇಲಾಖೆಗಳಿಗೆ ಬಿಡುಗಡೆಯಾಗಿರುವ ಅನುದಾನಕ್ಕೆ ಸಂಬಂಧಿಸಿದಂತೆ ಆಯಾ ಇಲಾಖೆಗಳು ಕ್ರಿಯಾಯೋಜನೆ, ಟೆಂಡರ್ ಪ್ರಕ್ರಿಯೆ, ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಬಿಡುಗಡೆಯಾಗಿರುವ ಅನುದಾನವನ್ನು ಸಂಪೂರ್ಣ ಖರ್ಚು ಮಾಡುವ ಮೂಲಕ ಶೇಕಡ 100 ರಷ್ಟು ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಿ ಎಂದು ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿಗಳು ಹಾಗೂ ಕೋಲಾರ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಏಕ್ ರೂಪ್ ಕೌರ್ ಅವರು ಹೇಳಿದರು.
ಇಂದು ಕೋಲಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಇಲಾಖೆಗಳಿಗೆ ಬಿಡುಗಡೆಯಾದ ಹಣವನ್ನು ಸಂಪೂರ್ಣವಾಗಿ ಖರ್ಚು ಮಾಡಬೇಕು. ಮಾರ್ಚ್ ಅಂತ್ಯದವರೆಗೆ ಕಾಯದೆ ತ್ವರಿತವಾಗಿ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಡಿಸೆಂಬರ್ ಅಂತ್ಯ ಅಥವಾ ಜನವರಿ ಮಾಹೆಯೊಳಗೆ ಶೇಕಡ 100 % ರಷ್ಟು ಆರ್ಥಿಕ ಮತ್ತು ಭೌತಿಕ ಪ್ರಗತಿ ಸಾಧಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ನರೇಗಾ ಯೋಜನೆಯ ಸದ್ಬಳಕೆ ಆಗಬೇಕು. ನರೇಗಾ ಯೋಜನೆಯಡಿ ಹಲವು ಇಲಾಖೆಗಳಿಗೆ ಅನುದಾನ ಬಿಡುಗಡೆ ಆಗುತ್ತದೆ. ಅನುದಾನ ಸದ್ಬಳಕೆಯಾಗಬೇಕು. ಅರಣ್ಯ ಇಲಾಖೆಯಲ್ಲಿ ನರೇಗಾ ಯೋಜನೆಯಡಿ ಗಿಡ ನೆಡುವ ಅರಣೀಕರಣ ಕಾರ್ಯಕ್ರಮ ಒಂದು ಉತ್ತಮ ಯೋಜನೆಯಾಗಿದೆ.
ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಿಭಾಗವು ಹೆಚ್ಚು ಹೆಚ್ಚು ಸಸಿಗಳನ್ನು ನಾಟಿ ಮಾಡಿ ಬೇಡಿಕೆ ಅನುಗುಣವಾಗಿ ರೈತರಿಗೆ, ಸಾರ್ವಜನಿಕರಿಗೆ ಹಂಚಬೇಕು. ಹಾಗೆಯೇ ವಿವಿಧ ವನಮಹೋತ್ಸವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರಿ ಜಾಗಗಳಲ್ಲಿ, ಬೆಟ್ಟಗುಡ್ಡಗಳಲ್ಲಿ, ಪ್ರವಾಸಿ ತಾಣಗಳಲ್ಲಿ, ರಸ್ತೆ ಬದಿಗಳಲ್ಲಿ ಹೆಚ್ಚೆಚ್ಚು ಸಸಿಗಳನ್ನು ನೆಡಬೇಕು. ನೆಟ್ಟ ನಂತರ ಸಸಿಗಳನ್ನು ಪೋಷಿಸಿ ಬೆಳೆಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸ್ತುತ ಈಗಿರುವ ವಾತಾವರಣ ಪರಿಸ್ಥಿತಿಯಲ್ಲಿ ಹವಾಮಾನ ವೈಪರೀತ್ಯ, ಪರಿಸರ ಸಂರಕ್ಷಣೆ, ಪ್ರಕೃತಿ ಸಮತೋಲನ ಕಾಪಾಡಲು ಗಿಡ ಮರಗಳನ್ನು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ಪ್ರಸ್ತುತ ರಸಗೊಬ್ಬರ ಕೊರತೆ ಇರುವುದಿಲ್ಲ. ಸೆಪ್ಟೆಂಬರ್ ಮಾಹೆಯಲ್ಲಿ ಮಳೆ ಕೊರತೆ ಆಗಿದೆ. ಆದರೆ ಪ್ರಸಕ್ತ ಮಾಹೆಯಲ್ಲಿ ಸಾಕಷ್ಟು ಮಳೆಯಾಗಿದೆ ಎಂದು ಕೃಷಿ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಎಸ್.ಎಸ್.ಎಲ್.ಸಿ, ಪಿಯುಸಿ ಯಲ್ಲಿ ಈ ವರ್ಷ ಉತ್ತಮ ಫಲಿತಾಂಶ ಬರಲು ಯೋಜನೆ ರೂಪಿಸಿ. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡಿ. ಶಾಲಾ ಕಾಲೇಜು ಶಿಕ್ಷಕರಿಗೆ, ಮುಖ್ಯೋಪಾಧ್ಯಾಯರಾಗಿ, ಪ್ರಾಂಶುಪಾಲರಿಗೆ ಸೂಕ್ತ ತರಬೇತಿ, ಮಾರ್ಗಸೂಚಿಗಳನ್ನು ನೀಡಿ, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು.
ಕಂಪೌಂಡ್ ಗೋಡೆ ನಿರ್ಮಿಸಲು ಹಾಗೂ ಆಟದ ಮೈದಾನಗಳನ್ನು ನಿರ್ಮಿಸಲು ಕ್ರಮ ವಹಿಸಿ, ಮಕ್ಕಳಿಗೆ ಆಟದ ಪರಿಕರಗಳನ್ನು ಒದಗಿಸಲು ಕ್ರಮ ವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಯಲ್ಲಿ ಈಗಾಗಲೇ ಕ್ರೀಡಾಕೂಟಗಳನ್ನು ಏರ್ಪಡಿಸಲಾಗಿದೆ ಎಂದು ಸಹಾಯಕ ನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಕಾರ್ಯದರ್ಶಿಗಳು ಹಾಸ್ಟೆಲ್ ಗಳಲ್ಲಿ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಒತ್ತು ನೀಡಬೇಕು. ಖಾಸಗಿ ಸಂಸ್ಥೆಗಳೊಂದಿಗೆ ಸಹಕರಿಸಿ ಕ್ರೀಡಾಂಗಣ ವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಆರೋಗ್ಯ ಇಲಾಖೆಲ್ಲಿ18 ವೈದ್ಯರ ಕೊರತೆ ಇರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸಭೆಗೆ ತಿಳಿಸಿದರು. ಅದಕ್ಕೆ ಕಾರ್ಯದರ್ಶಿಗಳು ಹೊರಗುತ್ತಿಗೆ ಮೂಲಕ ತುಂಬಲು ಕ್ರಮ ವಹಿಸಲು ಸೂಚಿಸಿದರು. ಜಿಲ್ಲಾಯಲ್ಲಿ ಡೆಂಗ್ಯೂ ಪ್ರಕರಣಗಳು ಗಣನಿಯವಾಗಿ ಕೆಡಿಮೆಯಾಗಿರುವುದಕ್ಕೆ ಅಭಿನಂದಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಂಗನವಾಡಿ ಕೇಂದ್ರಗಳಲ್ಲಿ ಪುಸ್ತಕಗಳ ಕೊರತೆ ಇದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. ಅಂಗನವಾಡಿಗಳಲ್ಲಿ ಸಮಯಕ್ಕೆ ಸರಿಯಾಗಿ ಯಾರೂ ಬರುವುದಿಲ್ಲ. ಎಲ್ಲಾ ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಲು ಸೂಚಿಸಿದರು.ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಜೂನ್ 2024ರವರೆಗೆ ಪಾವತಿ ಮಾಡಲಾಗಿದೆ. ಅದರಲ್ಲಿ 3190 ವಿಫಲ ಪ್ರಕಾರಣಗಳಿದ್ದು ಅವುಗಳನ್ನು ಶೀಘ್ರದಲ್ಲೇ ಸರಿಪಡಿಸಿ ಪಾವತಿಮಾಡಲು ಕ್ರಮ ವಹಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಮಾಜಕಲ್ಯಾಣ ಇಲಾಖೆ ಹಾಸ್ಟೆಲಗಳಲ್ಲಿ ಆಟದ ಪರಿಕರಗಳನ್ನು ಇತರೆ ಕೆಲಸಗಳಿಗಾಗಿ ಬಳಸಲಾಗುತ್ತಿದೆ. ಅಂತಹ ಪ್ರಕರಣ ಕಂಡುಬಂದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಆಹಾರ ಇಲಾಖೆಯ ಅನ್ನಭಾಗ್ಯ ಯೋಜನೆಯಡಿಯಲ್ಲಿ ಜುಲೈ ವರೆಗೆ ಅನುದಾನ ಬಿಡುಗಡೆಯಗಿದ್ದು, 1075ಕೋಟಿ ಮೊತ್ತದ ಅನುದಾನ ಫಲಾನುಭವಿಗಳಿಗೆ ವಿತರಣೆ ಮಾಡಲಾಗಿದೆ ಎಂದು ಸಂಬಂದಿಸಿದ ಅಧಿಕಾರಿಗಳು ಸಭೆಗೆ ತಿಳಿಸಿದರು.
ಉಳಿದಂತೆ ರೇಷ್ಮೆ ಇಲಾಖೆ, ವಯಸ್ಕರ ಶಿಕ್ಷಣ, ಆಯುಷ್ ಇಲಾಖೆ, ವಿಕಲಚೇತನರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮೀನುಗಾರಿಕೆ ಇಲಾಖೆ ಕೈಗಾರಿಕೆ ಇಲಾಖೆ, ಲೋಕೋಪಯೋಗಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಸದರಿ ಯೋಜನೆಗೆ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವುದರಿಂದ ಆಯ್ಕೆಯಾಗುವವರೆಗಿನ ಸಮಸ್ತ ಪ್ರಕ್ರಿಯೆ ಆನ್ ಲೈನ್ ನಲ್ಲಿ ಆಗಲಿದೆ. ಇದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ. ನಿಖಿಲ್, ಉಪವಿಭಾಗಾಧಿಕಾರಿ ಡಾ. ಮೈತ್ರಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.
ಸಿಒಡಿಪಿ ಸಮಾಜ ಸೇವಾ ಸಂಸ್ಥೆಯಲ್ಲಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣ ನೆರವು
ಮಂಗಳೂರು: 17 ಅಕ್ಟೋಬರ್ 2024 ರಂದು, ಸಿಒಡಿಪಿಯ ಮದರ್ ಥೆರೆಸಾ ಸಭಾಂಗಣದಲ್ಲಿ ಶ್ರೀಮಾನ್ ಮೈಕಲ್ ಡಿ ಸೋಜ ಮತ್ತು ಕುಟುಂಬದವರಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಶಿಕ್ಷಣ ನೆರವು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಡಾ.ವಂ.ಪೀಟರ್ ಪೌಲ್ ಸಲ್ಡಾನ್ಹ ವಹಿಸಿ, ಸಾಂಕೇತಿಕವಾಗಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಬಡ್ಡಿರಹಿತ ಸಾಲರೂಪದ ನೆರವನ್ನು ಹಸ್ತಾಂತರಿಸಿ ಈ ಕಾರ್ಯಕ್ರಮಕ್ಕೆ ಶುಭ ನುಡಿದರು.
ಶ್ರೀಮಾನ್ ಮೈಕಲ್ ಡಿ ಸೋಜ ರವರು ಹೆತ್ತವರ ಬಗ್ಗೆ ಕಾಳಜಿ ವಹಿಸಿ, ಸಮಾಜದಲ್ಲಿ ಉತ್ತಮ ನಡವಳಿಕೆ ಮತ್ತು ಶಿಕ್ಷಣ ಪಡೆದು, ತಮ್ಮ ಮಾತೃಭಾಷೆಗೆ ಪ್ರಾಮುಖ್ಯತೆ ಕೊಡಬೇಕು ಹಾಗೂ ಹಿರಿಯರು ನಮಗೆ ಮಾಡಿದ ಸಹಾಯವನ್ನು ಎಂದಿಗೂ ಮರೆಯಬಾರದು. ವಿದ್ಯಾಭ್ಯಾಸ ಮುಗಿದ ನಂತರ, ಹೆತ್ತವರನ್ನು ಚೆನ್ನಾಗಿ ನೋಡುವ ಜವಬ್ದಾರಿ ವಹಿಸಿ ಮತ್ತು ತಮ್ಮಿಂದ ಬಡವರಿಗೆ ಸಹಾಯ ಮಾಡುವ ಆಸಕ್ತಿ ಇರಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಫ್ಲಾವಿಯ ಡಿ ಸೋಜ, ಸಿಒಡಿಪಿ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾ| ವಿನ್ಸೆಂಟ್ ಡಿ ಸೋಜ ಮತ್ತು ಸಹ ನಿರ್ದೇಶಕ ವಂದನೀಯ ಫಾ| ಲೊರೆನ್ಸ್ ಕುಟಿನ್ಹಾ ರವರು ಹಾಜರಿದ್ದರು.
ಸಿಒಡಿಪಿ ನಿರ್ದೇಶಕರಾದ ರೆ.ಫಾ. ವಿನ್ಸೆಂಟ್ ಡಿ ಸೋಜ ಶಿಕ್ಷಣ ನಿಧಿಯ ಪ್ರತಿಷ್ಠಾಪಕ ಧಾನಿಗಳಾದ ಶ್ರೀಮಾನ್ ಮೈಕಲ್ ಡಿ ಸೋಜ ಮತ್ತು ಶ್ರೀಮತಿ ಫ್ಲಾವಿಯ ಡಿಸೋಜ ರವರ ಪರಿಚಯ ನೀಡಿದರು. ಬಿಷಪ್ರವರು ಅವರಿಗೆ ಗೌರವ ಅರ್ಪಣೆ ಸಲ್ಲಿಸಿದರು.
ಕುಟುಂಬದ ಪರವಾಗಿ ಮಂಗಳೂರು ಧರ್ಮಪ್ರಾಂತ್ಯದ 103 ವಿದ್ಯಾರ್ಥಿಗಳಿಗೆ ರೂ. 86,60,000/- ಬಡ್ಡಿ ರಹಿತ ಸಾಲವನ್ನು ಬ್ಯಾಂಕಿನ ಮುಖಾಂತ್ರ ವಿತರಿಸಲಾಗುವುದು.
ವಂದನೀಯ ಫಾ| ಲೊರೆನ್ಸ್ ಕುಟಿನ್ಹಾರವರು ಕಾರ್ಯಕ್ರಮವನ್ನು ನಿರೂಪಿಸಿ, ವಂದಾರ್ಪನೆ ಗೈದರು.
ಕಥೋಲಿಕ್ ಸಭಾ ಕುಂದಾಪುರ ವಲಯದಿಂದ ವಲಯ ಮಟ್ಟದ ಭಾಷಣ ಸ್ಪರ್ಧೆ / Deanery Level Elocution Competition by Catholic Sabha Kundapur Deanery
ಕಥೋಲಿಕ್ ಸಭಾ ಕುಂದಾಪುರ ವಲಯ ಮಟ್ಟದ ಭಾಷಣ ಸ್ಪರ್ಧೆಗಳು 2024 ರ ಅಕ್ಟೋಬರ್ 17 ರಂದು ಗುರುವಾರ ಬೆಳಿಗ್ಗೆ 9.30 ಕ್ಕೆ ಕುಂದಾಪುರ ಸಂತ ಮೇರಿಸ್ ಪಿಯು ಕಾಲೇಜು ಸಭಾಂಗಣದಲ್ಲಿ ಕೊಂಕಣಿ ಮತ್ತು ಕನ್ನಡದಲ್ಲಿ ಭಾಷಣ ಸ್ಪರ್ಧೆಗಳನ್ನು ಆಯೋಜಿಸಿತ್ತು. ಹನ್ನೊಂದು ಚರ್ಚ್ ಘಟಕ್ಗಳ ವಿವಿಧ ಶಾಲೆಗಳ ಯುವ ವಾಗ್ಮಿಗಳನ್ನು, ಘಟಕ ಮಟ್ಟದ ವಿಜೇತರನ್ನು ಒಟ್ಟುಗೂಡಿಸಿತು. ಕಾರ್ಯಕ್ರಮವು ಸಾರ್ವಜನಿಕ ಮಾತನಾಡುವ ಕೌಶಲಗಳನ್ನು ಬೆಳೆಸುವ ಗುರಿಯನ್ನು ಹೊಂದಿತ್ತು, ಆತ್ಮವಿಶ್ವಾಸವನ್ನು ಹೆಚ್ಚಿಸಲು ಮತ್ತು ಸಂಬಂಧಿತ ಸಾಮಾಜಿಕ ವಿಷಯಗಳ ಬಗ್ಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತದೆ.
ತೀವ್ರ ಸ್ಪರ್ಧೆಯ ಸ್ಪರ್ಧೆಗಳನ್ನು ಪ್ರಾರಂಭಿಸಲು, ವಲಯದ ಅಧ್ಯಕ್ಷ ಶ್ರೀ ವಿಲ್ಸನ್ ಡಾಲ್ಮೇಡಾ ಅವರು ಸ್ಪರ್ಧಿಗಳನ್ನು ಪೋಷಕರನ್ನು ಮತ್ತು ತೀರ್ಪುಗಾರರ ತಂಡಕ್ಕೆ ಆತ್ಮೀಯ ಸ್ವಾಗತವನ್ನು ನೀಡಿದರು, ಇದು ವಿವಿಧ ಕ್ಷೇತ್ರಗಳ ಒಂಬತ್ತು ತಜ್ಞರನ್ನು ಒಳಗೊಂಡಿತ್ತು, ಏಕೆಂದರೆ ಇದು ಕಲ್ಯಾಣಪುರ ಮತ್ತು ಉಡುಪಿಯಿಂದ ಬಂದಿದೆ. ವರಾಡೋ, ಗುಲಾಬಿಗಳೊಂದಿಗೆ, ನಂತರ ಎಲ್ಲಾ ಭಾಗವಹಿಸುವವರಿಗೆ ಅಮೂಲ್ಯವಾದ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹವನ್ನು ನೀಡಿದರು.
ಸ್ಪರ್ಧಿಗಳು ಪ್ರಭಾವಶಾಲಿ ಕೌಶಲ್ಯಗಳನ್ನು ಪ್ರದರ್ಶಿಸಿದರು, ಕೆಲವು ಭಾಷಣಗಳನ್ನು ನಿರರ್ಗಳವಾಗಿ ಮಾತ್ರವಲ್ಲದೆ ಆಳವಾದ ಚಿಂತನೆಗೆ ಪ್ರಚೋದಿಸುವಂತಿತ್ತು.
ಪ್ರದೇಶದ ಜನಪ್ರಿಯ ಕಾರ್ಯನಿರ್ವಾಕ ಅನಿಲ್ ಡಿಸಿಲ್ವಾ ಅವರು ನಾಯಕತ್ವ, ಸಂವಹನ ಕೌಶಲ್ಯಗಳನ್ನು ಹೆಚ್ಚಿಸಲು ಕ್ಯಾಥೋಲಿಕ್ ಸಭಾದ ಉದ್ದೇಶಗಳನ್ನು ಎತ್ತಿ ತೋರಿಸಿದರು, ವಿಮರ್ಶಾತ್ಮಕ ಚಿಂತನೆ ಮತ್ತು ಆಲೋಚನೆಗಳ ಅಭಿವ್ಯಕ್ತಿಯನ್ನು ಉತ್ತೇಜಿಸಲು ಮತ್ತು ಮಾತನಾಡುವವರಿಗೆ ಧೈರ್ಯ ಮತ್ತು ತಮ್ಮ ವೃತ್ತಿಜೀವನದಲ್ಲಿ ಮಿಂಚಲು ವೇದಿಕೆಯನ್ನು ಒದಗಿಸುತ್ತಾರೆ. ತೀರ್ಪುದಾರರ ಸಮಿತಿಯ ಪರವಾಗಿ – ಪ್ರೊ. ಆರ್ಚಿಬಾಲ್ಡ್ ಫುರ್ಟಾಡೊ ಹೆಚ್ಚಿನ ಭಾಗವಹಿಸುವವರ ಉತ್ತಮ ಗುಣಮಟ್ಟ ಮತ್ತು ತಯಾರಿಯನ್ನು ವೀಕ್ಷಿಸಲು ಸಂತೋಷವನ್ನು ವ್ಯಕ್ತಪಡಿಸಿದರು ಮತ್ತು ಅವರು ಅದನ್ನು ವಿಷಯ, ವಿತರಣೆ ಮತ್ತು ಒಟ್ಟಾರೆ ಪ್ರಭಾವದ ಆಧಾರದ ಮೇಲೆ ಮಾಡಿದ್ದರಿಂದ ಮೌಲ್ಯಮಾಪನ ಮಾಡುವುದು ನಿಜವಾದ ಕಠಿಣ ಕೆಲಸವಾಗಿತ್ತು ಮತ್ತು ಬ್ರಿಡ್ಜೆಟ್ ಗೊನ್ಸಾಲ್ವ್ಸ್ ಮಕ್ಕಳನ್ನು ಪಡೆದುಕೊಳ್ಳಲು ಕರೆ ನೀಡಿದರು. ತಮ್ಮ ದಾರಿಯಲ್ಲಿ ಬರುವ ಅವಕಾಶಗಳು ಮತ್ತು ಈ ಸ್ಪರ್ಧೆಗಳನ್ನು ನಿಯಮಿತವಾಗಿ ನಡೆಸುವಲ್ಲಿ ಕ್ಯಾಥೋಲಿಕ್ ಸಭಾ ಪ್ರಯತ್ನಗಳನ್ನು ಶ್ಲಾಘಿಸಿದರು.
ಅಂತಿಮ ಫಲಿತಾಂಶಗಳನ್ನು ವಲಯದ ಖಜಾಂಚಿ ಘೋಷಿಸಿದರು:
ವಿಜೇತರ ಪಟ್ಟಿ ಇಲ್ಲಿದೆ
I. ಗುಂಪು – ಕೊಂಕಣಿ
- ವೆಲೆನ್ಸಿಯಾ ಡಿಸೋಜಾ – ಕುಂದಾಪುರ
- ಡೀಪ್ ಡಿಸಿಲ್ವ – ತಲ್ಲೂರು
- ರಿಯಾ ನಜರೆತ್, ಬೈಂದೂರು
II. ಗುಂಪುಗಳು- ಕೊಂಕಣಿ - ಫಿಯೋನಾ ನಜರೆತ್, ಬೈಂದೂರು
- ಸವಿಯಾ ಮಾರ್ಟಿಸ್, ಕೋಟೇಶ್ವರ.3. ವಿಲ್ಶಾ ದಾಲ್ಮೇಡಾ, ಕುಂದಾಪುರ
II ಗುಂಪು – ಕನ್ನಡ - ನಿಶಾನ್ ಮೊಂತೆರೊ, ಪಡುಕೊನ್ನೆ
- ಅನ್ಸನ್ ರೆಬೆರಿಯೊ, ಬೈಂದೂರು
- ರಿಶೆಲ್ ದಾಲ್ಮೇಡಾ, ಕುಂದಾಪುರ
III ಗುಂಪುಗಳು – ಕೊಂಕಣಿ - ದಿಯಾ ಡಿಸಿಲ್ವಾ, ತಲ್ಲೂರು
- ಜೆನಿಶಾ ಡಿಸೋಜಾ, ಪಿಯುಸ್ ನಗರ 3. ಪ್ರಿನ್ಸಿಯಾ ಮೊಂಥೆರೊ, ಪಡುಕೊನ್ನೆ ಮತ್ತು ಪ್ರೆಸ್ಟನ್ ರೆಬೈರೊ, ಬೈಂದೂರು
III ಗುಂಪು – ಕನ್ನಡ - ಆರನ್ ಲೋಬೋ, ಬೈಂದೂರು
- ಕರೋಲ್ ಲೋಬೋ, ಬೈಂದೂರು
- ಲತಿಕಾ ಲೂಯಿಸ್, ಕುಂದಾಪುರ
IV – ಗುಂಪು – ಕೊಂಕಣಿ - ವೆನಿಶಾ ಡಿಸೋಜಾ, ಕುಂದಾಪುರ
- ಅಲ್ವಿತಾ ರೆಬೆಲ್ಲೊ, ದೇವಲ್ಕುಂದ, ತಲ್ಲೂರು
- ಮರಿಯಾ ರೆಬೆರಿಯೊ, ಬೈಂದೂರು
IV – ಗುಂಪು – ಕನ್ನಡ - ನೆರಿಸ್ಸಾ ಡಯಾಸ್, ಬೈಂದೂರು
- ಜೋನಿಟಾ ಮೆಂಡೋನ್ಕಾ, ತಲ್ಲೂರು
- ಅಲಿಸ್ಟೆನ್ ರೆಬೆರಿಯೊ, ಬೈಂದೂರು
ಕಾರ್ಯಕ್ರಮವು ಅದ್ಭುತ ಯಶಸ್ಸನ್ನು ಕಂಡಿತು, 68 ಯುವಕರು ಮತ್ತು ಮಕ್ಕಳು ತಮ್ಮ ಶ್ಲಾಘನೀಯ ಪ್ರದರ್ಶನಗಳೊಂದಿಗೆ ಉತ್ಸಾಹದಿಂದ ಭಾಗವಹಿಸಿದರು. ಯುವ ಧ್ವನಿಗಳನ್ನು ಕೇಳಲು ಮತ್ತು ಆಚರಿಸಲು ಇದು ವೇದಿಕೆಯಾಯ್ತು.
ಸಂಘಟಕರ ಪರವಾಗಿ ಕ್ಯಾಥೋಲಿಕ್ ಸಭಾ ಕಾರ್ಯದರ್ಶಿ ಗ್ರೆವಿನ್ ಪಸಾನ್ಹಾ ಅವರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದಲ್ಲದೆ ಸ್ಮರಣೀಯವಾಗಿಸುವಲ್ಲಿ ಶ್ರಮಿಸಿದ ಎಲ್ಲಾ ಭಾಗವಹಿಸುವವರು, ನ್ಯಾಯಾಧೀಶರು ಮತ್ತು ಸ್ವಯಂಸೇವಕರಿಗೆ ವಂದಿಸಿದರು. ಈ ಪ್ರತಿಭಾವಂತ ವ್ಯಕ್ತಿಗಳು ಭವಿಷ್ಯದ ಉಡುಪಿ ಧರ್ಮಪ್ರಾಂತ್ಯದ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ವಿಜೇತರಾಗಿ 2024ರ ನವೆಂಬರ್ 3 ರಂದು ನಡೆಯಲಿರುವ ಮುಂದಿನ ಹಂತಕ್ಕೆ ಅರ್ಹತೆ ಪಡೆದಿರುತ್ತಾರೆ
Catholic Sabha organises, kundapur Deanery Level Elocution Competition
Catholic Sabha Kundapur Deanery organised the Deanery level Elocution Competitions in Konkani and Kannada on Thursday, 17th October, 2024, at the Mary’s PU College Auditorium at 9.30 am, bringing together young orators, the winners at Parish levels, from various schools across the eleven parishes. The event aimed to foster public speaking skills, boost confidence, and encourage students to express their thoughts on pertinent social issues.
To begin the keenly contested competitions, the Varado President Mr Wilson DAlmeida extended a warm and cordial welcome to all participants, parents as well as team of judges for the event, as it comprised of nine experts from different fields, hailing from Kallianpur, and Udupi Varado’s, with roses, who later provided valuable feedback and encouragement to all participants.
Participants exhibited impressive skills, with some delivering speeches that were not only eloquent but also deeply thought-provoking.
Popular emcee in the region, Mr Anil DSilva highlighted objectives of Catholic Sabha to enhance leadership, communication skills, promote critical thinking and expression of ideas and provide a platform for speakers to be courageous and shine in their career… On behalf panel of judges – Prof Archibald Furtado expressed happiness to observe the high quality and preparation of most of the participants and it was a real tough job to evaluate, as they did it based on content, delivery and overall impact and Mrs Bridget Gonsalves gave a call to children to grab the opportunities coming on their way and appreciated Catholic Sabha efforts in conducting these competitions regularly. Final Results were declared by the Varado Treasurer
Here is the list of winners
I. Group – Konkani
Alisten Reberio, Byndoor
The event was a resounding success, with enthusiastic participation of 68 youth and children with their commendable performances. It provided a platform for young voices to be heard and celebrated.
On behalf the organizers Catholic Sabha Secretary Mr Grevin Passanha expressed gratitude to all participants, judges, and volunteers for their efforts in making this event not only successful but also memorable one. He expressed confidence that, these talented individuals shine in future Udupi Diocese Level competitions, as the first and second place winners, qualified for the next level to be held on 3rd November, 2024.
Here is the list of winners
I. Group – Konkani
- Valencia DSouza – Kundapur
- Deep DSilva – Tallur
- Riya Nazareth, Byndoor
II. Groups- Konkani - Fiyona Nazareth, Byndoor
- Saviya Martis, Koteshwar.3. Wilsha DAlmeida, Kundapur
II Group – Kannada - Nishan Monthero, Padukonne
- Anson Reberio, Byndoor
- Rishel DAlmeida, Kundapur
III Groups – Konkani - Diya DSilva, Tallur
- Jenisha DSouza, Pius Nagar 3. Princia Monthero, Padukonne & Preston Rebeiro, Byndoor
III Group – Kannada - Aaron Lobo, Byndoor
- Carol Lobo, Byndoor
- Lathika Lewis, Kundapur
IV – Group – Konkani - Venisha DSouza, Kundapur
- Alvita Rebello, Devalkunda, Tallur
- Maria Reberio, Byndoor
IV – Group – Kannada - Nerissa Dias, Byndoor
- Jonita Mendonca, Tallur
- Alisten Reberio, Byndoor
The event was a resounding success, with enthusiastic participation of 68 youth and children with their commendable performances. It provided a platform for young voices to be heard and celebrated.
On behalf the organizers Catholic Sabha Secretary Mr Grevin Passanha expressed gratitude to all participants, judges, and volunteers for their efforts in making this event not only successful but also memorable one. He expressed confidence that, these talented individuals shine in future Udupi Diocese Level competitions, as the first and second place winners, qualified for the next level to be held on 3rd November, 2024
Reported and Photographs by: Grevin Passanha.
ಸಾಯಿಧಾಮ್ ಹೋಟೆಲ್ನಲ್ಲಿ ಓರಾ ಫೈನ್ ಜ್ಯುವೆಲರಿ ಆಭರಣ ಪ್ರದರ್ಶನ
ಕೋಲಾರ,ಅ.17: ನಗರದ ಸಾಯಿಧಾಮ್ ಹೋಟೆಲ್ನಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಓರಾ ಫೈನ್ ಜ್ಯುವೆಲರಿ ಆಭರಣ ಪ್ರದರ್ಶನಕ್ಕೆ ಶ್ರೇಯಾ ಆಸ್ಪತ್ರೆಯ ಡಾ. ವಂದನಾ ಅವರು ಇಂದು ಚಾಲನೆ ನೀಡಿದರು.
ಶನಿವಾರದವರೆಗೂ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ವೀಕ್ಷಿಸಿ ಆಭರಣಗಳನ್ನು ಖರೀದಿ ಹಾಗೂ ಲೋನ್ ಮುಖಾಂತರ ಖರೀದಿ ಹಾಗೂ ಜಿರೋ ಡೌನ್ ಫೇಮಂಟ್ ಮೂಲಕವೂ ಸಹ ಖರೀದಿ ಮಾಡಬಹುದು.
ಈ ಸಂದರ್ಭದಲ್ಲಿ ಕೋಲಾರ ನರ್ಸಿಂಗ್ ಹೋಂನ ಡಾ.ಹಮಾ, ಡಾ.ಶಶಿಕಲಾ ಶಂಕರ್, ವ್ಯವಸ್ಥಾಪಕ ಲೋಕೇಶ್ರೆಡ್ಡಿ, ಸೋಮಶರ್ಮ ಉಪಸ್ಥಿತರಿದ್ದರು.
ಮನುಕುಲ ಇರುವವರೆವಿಗೂ ವಾಲ್ಮೀಕಿ ಮಹರ್ಷಿ ಚಿರಸ್ಮರಣೀಯ ಆಗಿರುತ್ತಾರೆ – ಸಿಎಂಆರ್ ಶ್ರೀನಾಥ್
ಕೋಲಾರ:- ಜಗತ್ತಿನಲ್ಲಿ ಮನುಕುಲ ಇರುವವರೆವಿಗೂ ರಾಮಾಯಣ ಇರುತ್ತದೆ, ರಾಮಾಯಣ ಇರುವವರೆವಿಗೂ ವಾಲ್ಮೀಕಿ ಮಹರ್ಷಿ ಚಿರಸ್ಮರಣೀಯವಾಗಿರುತ್ತಾರೆಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್. ಶ್ರೀನಾಥ್ ಹೇಳಿದರು.
ನಗರದ ಭಾರತ ಸೇವಾದಳ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಮಾನವೀಯ ಸಂಬಂಧಗಳ ಔನತ್ಯವನ್ನು ಎತ್ತಿ ಹಿಡಿದ ರಾಮಾಯಣ ಮಹಾಕಾವ್ಯವನ್ನು ವಾಲ್ಮೀಕಿ ಮಹರ್ಷಿ ರಚಿಸಿದ ನಂತರ ಕೇವಲ ಭಾರತ ಮಾತ್ರವಲ್ಲದೆ ಜಗತ್ತಿನ ಎಲ್ಲಾ ಭಾಷೆಗಳಿಗೆ ರಾಮಾಯಣ ಅನುವಾದಗೊಂಡು ವಿಶ್ವಕ್ಕೆ ಪರಿಚಯವಾಗಿದೆ ಎಂದು ವಿವರಿಸಿದರು.
ವಾಲ್ಮೀಕಿ ಮಹರ್ಷಿ ರಚಿಸಿದ 24 ಸಾವಿರ ಶ್ಲೋಕಗಳನ್ನೊಳಗೊಂಡ ರಾಮಾಯಣವನ್ನು ನಿತ್ಯ ಪಠಿಸುತ್ತಾ, ಅದರಲ್ಲಿನ ಆದರ್ಶಗಳನ್ನು ಪ್ರತಿಯೊಬ್ಬರೂ ನಿತ್ಯವೂ ಪಾಲಿಸಿದಲ್ಲಿ ನೆಮ್ಮದಿಯುತ ಬದುಕು ಸಾಧ್ಯವಾಗುತ್ತದೆ ಎಂದರು.
ನಿವೃತ್ತ ಶಿಕ್ಷಣ ಸಂಯೋಜಕ ಭಾರತ ಸೇವಾದಳ ಜಿಲ್ಲಾ ಸಮಿತಿ ಸದಸ್ಯ ಆರ್.ಶ್ರೀನಿವಾಸನ್ ಮಾತನಾಡಿ, ಬುಡಕಟ್ಟು ಜನಾಂಗದಲ್ಲಿ ಜನಿಸಿ e್ಞÁನವಂತರಾಗಿ ರಾಮಾಯಣದಂತ ಮಹಾಕಾವ್ಯವನ್ನು ಸಂಸ್ಕøತದಲ್ಲಿ ರಚಿಸುವ ಮೂಲಕ ವಾಲ್ಮೀಕಿ ಮಹರ್ಷಿಗಳು ಮನುಷ್ಯ ಮನಸು ಮಾಡಿದರೆ ಎಂತದ್ದೇ ಸಾಧನೆ ಮಾಡಬಹುದು ಎಂಬುದಕ್ಕೆ ನಿದರ್ಶನವಾಗಿರುತ್ತದೆ, ಹಾಗೆಯೇ ರಾಮಾಯಣ ಕಥಾ ನಾಯಕ ಶ್ರೀರಾಮ ಮನುಷ್ಯನಾಗಿ ದೈವತ್ವಕ್ಕೇರಿದ ಸಂಕೇತವಾಗಿ ರೂಪುಗೊಂಡಿರುವುದು ಪ್ರತಿಯೊಬ್ಬರಿಗೂ ಪ್ರೇರಣೆ ಮತ್ತು ಆದರ್ಶವಾಗಿದೆ ಎಂದರು.
ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಜಗತ್ತಿನ ಎಲ್ಲಾ ಕಥೆಗಳನ್ನೊಳಗೊಂಡ ಮಹಾಕಥೆಯಾಗಿ ರಾಮಾಯಣವು ಯಾವುದೇ ಕಾಲಘಟ್ಟದಲ್ಲಿ ಅಗ್ರಗಣ್ಯವಾಗಿ ನಿಲ್ಲುತ್ತದೆ, ಮನುಷ್ಯನ ಎಲ್ಲಾ ಸಂಬಂಧಗಳನ್ನು ಒಂದೇ ಕಥೆಯಲ್ಲಿ ಬರುವಂತೆ ಕೃತಿಯನ್ನು ರಚಿಸಿರುವುದು ವಾಲ್ಮೀಕಿ ಮಹರ್ಷಿಯ ಜಾಣ್ಮೆಗೆ ಸಾಕ್ಷಿಯಾಗಿದೆ, ರಾಮಾಯಣವು ಕೇವಲ ಹಿಂದುಗಳ ಕೃತಿಯಾಗದೆ ಜಗತ್ತಿನ ಸಮಸ್ತ ಮನುಕುಲದ ಕೃತಿಯಾಗಿ ಮಾದರಿಯಾಗಿದೆ, ಬುಡಕಟ್ಟು ಜನರು ವಿದ್ಯಾಭ್ಯಾಸ ಮಾಡಬಾರದು ಎಂಬ ಕಾಲಘಟ್ಟದಲ್ಲಿಯೇ ವಾಲ್ಮೀಕಿ ಮಹರ್ಷಿ ವಿದ್ಯೆ ಕಲಿತು ರಾಮಾಯಣದಂತ ಕೃತಿ ಬರೆಯುವ ಸಾಧನೆ ಮಾಡಿರುವುದು ಐತಿಹಾಸಿಕ ದಾಖಲೆಯ ಸಂಗತಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಾಲ್ಮೀಕಿ ಮಹರ್ಷಿ ಭಾವಚಿತ್ರಕ್ಕೆ ಗಣ್ಯರು ಮತ್ತು ಅತಿಥಿಗಳಿಂದ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅದ್ಯಕ್ಷ ನಾರಾಯಣರೆಡ್ಡಿ, ಭಾರತ ಸೇವಾದಳ ತಾಲೂಕು ಅಧ್ಯಕ್ಷ ಶ್ರೀರಾಮ್, ಪದಾಧಿಕಾರಿಗಳಾದ ಕೆ.ಜಯದೇವ್, ಪಲ್ಗುಣ, ರಾಜೇಶ್ಸಿಂಗ್, ಗೋಕುಲ ಚಲಪತಿ, ಮುನಿವೆಂಕಟ್, ದನಂಜಯ್, ಚಾಂದ್ ಪಾಷಾ, ಚಾಮುಂಡೇಶ್ವರಿ ದೇವಿ, ಶಿಕ್ಷಕ ಸತೀಶ್, ನಯಾಜ್, ತಬ್ರೇಜ್ ಮತ್ತಿತರರು ಹಾಜರಿದ್ದರು.
ಭಾರತ ಸೇವಾದಳ ಸಂಘಟಕ ಕಾರ್ಯಕ್ರಮ ನಿರ್ವಹಿಸಿದರು. ಸರ್ವಧರ್ಮ ಪ್ರಾರ್ಥನೆ ಹಾಗೂ ರಾಷ್ಟ್ರಗೀತೆ ಗಾಯನ ನೆರವೇರಿತು.