ಆರೋಗ್ಯ ತಪಾಸಣಾ ಶಿಬಿರ ರೆಡ್ ಕ್ರಾಸ್ ಸಂಸ್ಥೆಯು ನಿಯತವಾಗಿ ನಡೆಸುತ್ತಾ ಬಂದಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರ ಇತ್ತೀಚಿಗೆ ಕುಂದಾಪುರ ಸರಕಾರಿ ಆಸ್ಪತ್ರೆಯ ಬಳಿಯಿರುವ ಜನೌಷಧಿ ಕೇಂದ್ರದ ವಠಾರದಲ್ಲಿ ಜರುಗಿದ್ದು 146 ಮಂದಿ ಇದರ ಪ್ರಯೋಜನ ಪಡೆದರು.
Year: 2024
ಕುಂದಾಪುರ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಸಿಸ್ಟರ್ ತೆರೆಜ್ ಶಾಂತಿ ಡಿ’ಸೋಜಾರವರಿಗೆ ರುಪ್ಸಾದಿಂದ ‘ವಿದ್ಯಾರತ್ನ’ ಪ್ರಶಸ್ತಿ ಪ್ರಧಾನ
ಕುಂದಾಪುರದ ಪ್ರತಿಷ್ಠಿತ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ತೆರೆಜ್ ಶಾಂತಿ ಡಿ’ಸೋಜಾ ಎ.ಸಿ. ರವರು ಕರ್ನಾಟಕರಾಜ್ಯ ಮಾನ್ಯತೆ ಪಡೆದ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ರುಪ್ಸಾ ಇವರಿಂದ ಕೊಡಲ್ಪಡುವ ರಾಜ್ಯ ಮಟ್ಟದ‘ವಿದ್ಯಾರತ್ನ’ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ದಿನಾಂ :21/10/2024ರ ಸೋಮವಾರದಂದು ಬೆಂಗಳೂರಿನ ಜುಬಲಿ ಇಂಟರ್ನ್ಯಾಶಾನಲ್ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಮಾನ್ಯ ಶಿಕ್ಷಣ ಸಚಿವರಿಂದ ಪಡೆದಿರುತ್ತಾರೆ.
ಇವರು ಕಳೆದ 5 ವರ್ಷಗಳಿಂದ ಕುಂದಾಪುರದ ಹೋಲಿ ರೋಜರಿಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಮುಖ್ಯೋಪಾಧ್ಯಾಯಿನಿಯಾಗಿ ಜವಬ್ದಾರಿ ವಹಿಸಿಕೊಂಡ ನಂತರ ಶಾಲೆಯಲ್ಲಿ ಮಕ್ಕಳ ಸಂಖ್ಯೆಅಧಿಕವಾಯಿತು. ಶಾಲೆಯಲ್ಲಿ ಶಿಸ್ತು ,ಮೌಲ್ಯಯುತ ಶಿಕ್ಷಣ ಮತ್ತುಪಠ್ಯೇತರ ಚಟುವಟಿಕೆಗಳ ಜೊತೆಗೆಕಳೆದ 7ವರ್ಷಗಳಿಂದ ಶಾಲೆ ಸತತವಾಗಿ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡಾ100 ದಾಖಲೆಯ ಫಲಿತಾಂಶ ಪಡೆಯಲುಇವರ ಸೇವೆ ಹಾಗು ಪರಿಶ್ರಮವೇಕಾರಣ. ಇವರ ಈ ನಿಸ್ವಾರ್ಥ ಸೇವೆ ಹಾಗು ಪರಿಶ್ರಮವನ್ನು ಪರಿಗಣಿಸಿ ರುಪ್ಸಾ2024ರ ‘ವಿದ್ಯಾರತ್ನ’ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಮುಖ್ಯೋಪಾಧ್ಯಾಯಿನಿಯವರಿಗೆ ಹೋಲಿ ರೋಜರಿಆಂಗ್ಲ ಮಾಧ್ಯಮ ಶಾಲಾ ಸಂಚಾಲಕರು ಆಡಳಿತ ಮಂಡಳಿ, ಶಿಕ್ಷಕ ಶಿಕ್ಷಕೇತರ ವೃಂದ,ವಿದ್ಯಾರ್ಥಿಗಳು, ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
“ಪ್ಲಾಸ್ಟಿಕ್ ಮುಕ್ತ ಕೋಲಾರ ಜಿಲ್ಲೆ” ಗಾಗಿ ಅಭಿಯಾನದ ಮೂಲಕ “ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ”
ಕೋಲಾರ,ಅ.21: ಗ್ರಾಮವಿಕಾಸ ಮತ್ತು ರೆಸ್ಟ್ಲೆಸ್ ಡೆವೆಲಪ್ಮೆಂಟ್, ಕೋಲಾರ ಲೇಕ್ಸೈಡ್ ರೋಟರಿ ಕ್ಲಬ್ ಮತ್ತು ಗ್ರೀನ್ ವಾರಿಯರ್ಸ್ ತಂಡದ ಸಹಯೋಗದಲ್ಲಿ ಮುಳಬಾಗಿಲು ಪಟ್ಟಣದಲ್ಲಿರುವ ವಾಸವಿ ಕಲ್ಯಾಣಮಂಟಪದಲ್ಲಿ “ಪ್ಲಾಸ್ಟಿಕ್ ಮುಕ್ತ ಕೋಲಾರ ಜಿಲ್ಲೆ” ಗಾಗಿ ಅಭಿಯಾನದ ಮೂಲಕ “ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ” ಎಂಬ ಸಂದೇಶವನ್ನು ಸಾರುತ್ತಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಹವಾಮಾನ ಬದಲಾವಣೆ ಇಡೀ ವಿಶ್ವವನ್ನೆ ನಿದ್ದೆ ಇಲ್ಲದೇ ಮಾಡುತ್ತದೆ. ಪ್ರಪಂಚದಲ್ಲಿ ಎಲ್ಲಾ ರಾಷ್ಟ್ರಗಳು ಹವಾಮಾನ ಬದಲಾವಣೆಗೆ ತುತ್ತಾಗಿವೆ. 1.5 ಡಿಗ್ರೀಸ್ ತಾಪಮಾನ ಹೆಚ್ಚಾದರೆ ಪ್ರಪಂಚವೇ ಉಳಿಯುವುದಿಲ್ಲ. ಈಗ ನಾವೆಲ್ಲರೂ ಸೇರಿ 1.5 ಡಿಗ್ರೀಸ್ ಒಳಗೆ ತಾಪಮಾನವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಇದಕ್ಕೆ ಪ್ರತಿ ಒಬ್ಬ ವ್ಯಕ್ತಿ ಕೆಲಸ ಮಾಡಬೇಕಾಗಿದೆ. ಹವಾಮಾನ ಬದಲಾವಣೆಗೆ ಅನೇಕ ಕಾರಣಗಳಿವೆ. ಅದರಲ್ಲಿ ಮುಖ್ಯವಾದದು ಪ್ಲಾಸ್ಟಿಕ್ ಎಂಬುದನ್ನು ಮನಗಾಣಬೇಕಿದೆ.
ಮದುವೆ, ಮುಂಜಿ, ನಿಶ್ಚಿತಾರ್ಥ ಇಂತಹ ಸಾಮಾಜಿಕ ಸಂಭ್ರಮಗಳಲ್ಲಿ ಅಧಿಕೃತ ಸಭೆ ಸಮಾರಂಭಗಳಲ್ಲಿಯೂ ಸಹ ಪ್ಲಾಸ್ಟಿಕ್ ಬಾಟಲ್ಗಳು ಮತ್ತು ಪ್ಲಾಸ್ಟಿಕ್ ಚೀಲಗಳು ಪ್ಲಾಸ್ಟಿಕ್ ವಸ್ತುಗಳನ್ನು ಯಥೇಚ್ಛವಾಗಿ ಬಳಸುತ್ತಾರೆ.
ಇದನ್ನು ಮನಗಂಡ ಗ್ರಾಮವಿಕಾಸ ಮತ್ತು ರೆಸ್ಟ್ಲೆಸ್ ಡೆವೆಲಪ್ಮೆಂಟ್, ಕೋಲಾರ ಲೇಕ್ಸೈಡ್ ಮತ್ತು ವೈ.ಐ.ಡಿ.ಎಸ್ ಸಂಸ್ಥೆ ಕೋಲಾರ ಮೂಲಕ ಸಂಘಟಿಸಿದ ಹಸಿರು ಯೋಧರ ತಂಡ ಯಾವುದೇ ಮದುವೆ ಸೇರಿದಂತೆ ಇನ್ನಿತರೆ ಸಮಾರಭಗಳಲ್ಲಿ ಸ್ಟೀಲ್ ಲೋಟಗಳನ್ನು ವಿತರಿಸುವ ಮೂಲಕ “ಪ್ಲಾಸ್ಟಿಕ್ ವಿರೋಧಿಸುವ ಕಾರ್ಯ ಮಾಡುತ್ತಾ ಜನರಲ್ಲಿ ಜಾಗೃತಿ ಮೂಡಿಸುತ್ತಾ ಬಂದಿದೆ.
ಮದುವೆಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬದಲು ಸ್ಟೀಲ್ ಲೋಟಗಳನ್ನು ತಂದು ನೀರು ತುಂಬಿಸುವ ಮೂಲಕ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ನಾವು ಇಟ್ಟ ದಿಟ್ಟ ಹೆಜ್ಜೆಯಾಗಿದೆ. ಮಳೆನೀರು ಹರಿಯುವಾಗ ಕೆರೆ-ಕುಂಟೆ ಬಾವಿ ಹಳ್ಳ-ಕೊಳೆಗಳನ್ನು ತುಂಬಿಕೊಂಡು ಜಲ ಪ್ರವಾಹಕ್ಕೆ ಕಾರಣವಾಗುತ್ತಿದೆ. ಮಾತ್ರವಲ್ಲದೆ ನದಿ ಸರೋವರಗಳ ಮೂಲಕ ಇಡೀ ಸಮುದ್ರವನ್ನೇ ಪ್ಲಾಸ್ಟಿಕ್ ಆವರಿಸಿಕೊಳ್ಳುತ್ತಿದೆ. ಇದರಿಂದ ಶೇ. 65 ರಷ್ಟು ಆಮ್ಲಜನಕವನ್ನು ಬಿಡುಗಡೆಗೊಳಿಸುತ್ತಿರುವ ಸಮುದ್ರವನ್ನೇ ನುಂಗುತ್ತಾ ಜನರನ್ನು ಉಸಿರುಗಟ್ಟಿಸಿ ಪ್ರಾಣ ತೆಗೆಯುತ್ತಿದೆ. ಈ ಪ್ಲಾಸ್ಟಿಕ್ ಇಡೀ ಜೀವ ಸಂಕುಲವನ್ನೇ ವಿನಾಶಕ್ಕೆ ತಳ್ಳುತ್ತಿದೆ. ಅನ್ನ ಆಹಾರ ಪೂರೈಸುವ ಅಕ್ಷಯ ಪಾತ್ರೆ ಭೂ ತಾಯಿಯನ್ನು ಆವರಿಸಿ, ಮಣ್ಣಿಗೆ ವಿಷ ಉಣಿಸಿ ಮಾನವ ಜೀವನವನ್ನು ಅಪಾಯಕ್ಕೆ ತಳ್ಳುತ್ತಿದೆ.
“ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ” ಎಂಬ ಸಂದೇಶವನ್ನು ಸಾರುತ್ತಾ ಸಮಾಜವನ್ನು ಜಾಗೃತಗೊಳಿಸುವ ಕೆಲಸವನ್ನು ಮಾಡಿತ್ತಿರುವುದಾಗಿ ತಿಳಿಸಿದರು.
ಗ್ರಾಮ ವಿಕಾಸದ ಮುಖ್ಯಸ್ಥ ಎಂ.ವಿ.ಎನ್.ರಾವ್, ಚೌಡಪ್ಪ, ಹೂಹಳ್ಳಿ ನಾಗರಾಜ್, ಭವ್ಯ, ಕೋಲಾರ ಲೇಕ್ಸೈಡ್ ರೋಟರಿ ಕ್ಲಬ್ ಮತ್ತು ಗ್ರೀನ್ ವಾರಿಯರ್ಸ್ನ ಸದಸ್ಯರು ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸಂಘಕ್ಕೆ ಇದೇ ತಿಂಗಳು 28 ರಂದು 2024-29 ನೇ ಸಾಲಿನ ಚುನಾವಣೆ
ಶ್ರೀನಿವಾಸಪುರ ; ಸೋಮವಾರ 4.30 ಸಮಯದವರೆಗೂ ನಾಮಪತ್ರ ಹಿಂಪಡೆಯುವ ಕೊನೆ ದಿನವಾದ್ದರಿಂದ ಪ್ರಾಥಮಿಕ ,ಪ್ರೌಡಶಾಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇಲಾಖೆ ಸಿಬ್ಬಂದಿಗಳು ಸ್ಪರ್ಧಿಯಲ್ಲಿ ಸ್ಪರ್ಧಿಸಲಿದ್ದು, 28 ರಂದು ಚುನಾವಣೆ ನಡೆಯಲಿದ್ದು, ಉಳಿದಂತೆ 21 ಇಲಾಖೆಗಳ 27 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸೋಮವಾರ ನೌಕರರ ಕಚೇರಿಯಲ್ಲಿ ಚುನಾವಣಾಧಿಕಾರಿ ಐಮಾರಡ್ಡಿ ಮಾಹಿತಿ ನೀಡಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸಂಘಕ್ಕೆ ಇದೇ ತಿಂಗಳು 28 ರಂದು 2024-29 ನೇ ಸಾಲಿಗೆ ನಡೆಯಲಿದ್ದು, ಅಂತಿಮವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ದೇಶಕರ ವಿವರ ಪ್ರಾಥಮಿಕ ಶಾಲಾ ಶಿಕ್ಷಣ ಎಲ್.ಆನಂದ್, ಆರ್.ಕಾಳಾಚಾರಿ, ಎಂ.ಬೈರೇಗೌಡ, ಎಂ.ಮೂರ್ತಿ, ಕೆ.ರಾಜಣ್ಣ, ಎನ್,ವೇಣುಗೋಪಾಲರೆಡ್ಡಿ, ಜಿ.ಎನ್.ಶ್ರೀನಿವಾಸ್ಯ್ಯ, ಶ್ವೇತ, ಎಂ.ಶಂಕರಪ್ಪ, ಪ್ರೌಡಶಾಲಾ ಶಿಕ್ಷಣ ಎಸ್.ಮುನಿವೆಂಕಟಪ್ಪ, ಎಂ.ಸಿ.ಲಕ್ಷ್ಮೀಪತಿ, ಬಿಇಒ ಕಚೇರಿ ಸಿಬ್ಬಂದಿ ವೈ.ವಿ.ಶ್ರೀನಿವಾಸ್, ಸೈಯದ್ ಜಬಾವುದ್ದೀನ್ ಅಂತಿಮವಾಗಿ ಚುನಾವಣಾ ಕಣದಲ್ಲಿ ಇದ್ದಾರೆ ಎಂದು ಚುನಾವಣಾಧಿಕಾರಿ ಐಮಾರಡ್ಡಿ ಮಾಹಿತಿ ನೀಡಿದರು. ಸಹಾಯಕ ಚುನಾವಣಾಧಿಕಾರಿ ವಿ.ತಿಪ್ಪಣ್ಣ ಇದ್ದರು.
ಕುಂದಾಪುರ ರಕ್ತ ನಿಧಿ ಕೇಂದ್ರಕ್ಕೆ ಐವತ್ತು ಸಾವಿರ ಮೌಲ್ಯದ ಉಪಕರಣ ಹಸ್ತಾಂತರ
ಕುಂದಾಪುರ; ಆಚಾರ್ಯ ಕುಟುಂಬಸ್ಥರು ಇತ್ತೀಚಿಗೆ ತಮ್ಮನ್ನು ಅಗಲಿದ ಸಹೋದರಿ ಕೆ ಲಲಿತಾ ಆಚಾರ್ಯ ನೆನಪಿಗಾಗಿ ಐವತ್ತು ಸಾವಿರ ಮೌಲ್ಯದ ರಕ್ತ ನಿಧಿ ಕೇಂದ್ರಕ್ಕೆ ಉಪಯೋಗ ಇರುವ ಉಪಕರಣವನ್ನು ಹಸ್ತಾಂತರಿಸಿದರು. ರೆಡ್ ಕ್ರಾಸನ ಸಭಾಪತಿ ಜಯಕರ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಕಾರ್ಯದರ್ಶಿ ಸತ್ಯನಾರಾಯಣ ಪುರಾಣಿಕ, ಸೀತಾರಾಮ ಶೆಟ್ಟಿ ಹಾಗೂ ಆಚಾರ್ಯ ಕುಟುಂಬಸ್ಥರು ಉಪಸ್ಥಿತರಿದ್ದರು
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಗ್ರಾಮ ಸೌರಭ – 2024 NSS ವಸತಿ ಗ್ರಾಮ ಮಾನ್ಯತೆ ಶಿಬಿರ / Milagres College, Kallianpur, Udupi Grama Sourabha – 2024 (NSS residential village exposure camp)
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಎನ್ಎಸ್ಎಸ್ ಘಟಕವು ಐಕ್ಯುಎಸಿ ಸಹಯೋಗದಲ್ಲಿ ಹಂಗರಕಟ್ಟೆ ಸಮೀಪದ ಐರೋಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳ್ಕುದ್ರು ಗ್ರಾಮದಲ್ಲಿ (ಅಕ್ಟೋಬರ್ 19 ಮತ್ತು 20 2024) ಒಂದು ದಿನದ ವಸತಿ ಗ್ರಾಮಗಳ ಮಾನ್ಯತೆ ಶಿಬಿರವನ್ನು (NSS ವಸತಿ ಗ್ರಾಮ ಮಾನ್ಯತೆ ಶಿಬಿರ) ಆಯೋಜಿಸಿತ್ತು.
ಶ್ರೀ ಶ್ರೀಕಾಂತ್ ಸಮಂತ್, ಸಹಾಯಕ. ಬಳ್ಕುದ್ರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಬಳ್ಕುದ್ರು ಮಾತನಾಡಿ, ಜೀವನದಲ್ಲಿ ಉನ್ನತ ಸ್ಥಾನಕ್ಕೇರುವುದು ಜೀವನದ ಅಪೇಕ್ಷೆಯಾಗಿದೆ ಆದರೆ ನಾವು ಬೆಳೆದ ಬೇರುಗಳನ್ನು ಮರೆಯದೆ ಎಲ್ಲರೂ ಆಕಾಶ ಮೀರಿ ಬೆಳೆಯಬೇಕು ಎಂದರು. ಮಾತೃಭೂಮಿ ಮತ್ತು ಮಾತೃಭಾಷೆಯನ್ನು ಗೌರವಿಸುವುದು ದೇಶಭಕ್ತಿಯ ಅತ್ಯುನ್ನತ ರೂಪವಾಗಿದೆ ಎಂದು ಅವರು ಒತ್ತಿ ಹೇಳಿದರು. ಅಕ್ಟೋಬರ್ 19, 2024 ರಂದು ಶಿಬಿರವನ್ನು ಉದ್ಘಾಟಿಸಿದ ನಂತರ ಅವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಐರೋಡಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಅಶ್ವಿನ್ ಕೆ ಪೂಜಾರಿ ಉಪಸ್ಥಿತರಿದ್ದರು. ಈ ಶಿಬಿರದ ಉದ್ದೇಶ ಮತ್ತು ಉದ್ದೇಶಗಳ ಬಗ್ಗೆ ಎನ್ಎಸ್ಎಸ್ ಅಧಿಕಾರಿಗಳಾದ ಶ್ರೀ ಗಣೇಶ್ ನಾಯಕ್ ಮತ್ತು ಶ್ರೀಮತಿ ಶುಭಲತಾ ಸಂಕ್ಷಿಪ್ತವಾಗಿ ತಿಳಿಸಿದರು. ಶಿಬಿರದಲ್ಲಿ ಶ್ರಮದಾನ, ಪ್ರದೇಶ ಸ್ವಚ್ಛತೆ, ತಂಬಾಕು ಸೇವನೆ ಕುರಿತು ಗ್ರಾಮಸ್ಥರಿಗೆ ಅರಿವು ಮೂಡಿಸುವ ಕಾರ್ಯಗಳು ನಡೆದವು. ಅನಿಲ್ ದಾಂತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Milagres College, Kallianpur, Udupi Grama Sourabha – 2024 (NSS residential village exposure camp)
Kallianpur: The college NSS unit in association with IQAC organised one day residential village exposure camp at Balkudru village under Irody grama panchayat area near Hangarkatta (October 19 & 20 2024)
Mr Srikanth Samanth, Asst. Teacher at Government Higher Primary school, Balkudru said reaching higher in life is what life demands but everyone should grow beyond the sky not forgetting the roots we grew from. Being respectful to the mother land and mother tongue is the highest form of patriotism he stressed. He was speaking to the students after opening the camp open on October 19, 2024.
Mr Ashwin K Poojary, the member of Irody grama panchayat was present. Mr Ganesh Nayak and Mrs Shubhalatha, the NSS officers gave a brief on the purpose and objectives of this camp.
The camp involved activities like shramadhan, area cleaning, creating awareness on Tobacco consumption to the villagers. Mr Anil Danthy compered the program and proposed vote of thanks.
Photography and Reported by Anil Danthy
ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ – ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ
ಬೆಂಗಳೂರು : ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ. ಪಿ. ಯೋಗೇಶ್ವರ್ ಅವರು ವಿಧಾನ ಪರಿಷತ್ ಸ್ಥಾನಕ್ಕೆ ಅ.21ರಂದು ರಾಜೀನಾಮೆ
ಸಲ್ಲಿಸಿದ್ದಾರೆ. ಹುಬ್ಬಳ್ಳಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರನ್ನು ಭೇಟಿ ಮಾಡಿ ತಮ್ಮರಾಜೀನಾಮೆ ಪತ್ರವನ್ನು
ನೀಡಿದ್ದಾರೆ.
ಸಿಪಿ ಯೋಗೇಶ್ವರ್ ಅವರು ವಿಧಾನ ಪರಿಷತ್ನ ನಾಮನಿರ್ದೇಶಿತ ಬಿಜೆಪಿ ಸದಸ್ಯರಾಗಿದ್ದು ಈ ಬಾರಿ ಚನ್ನಪಟ್ಟಣ ಉಪಚುನಾವಣೆಯ
ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್ ಕ್ಷೇತ್ರವನ್ನು ಬಿಟ್ಟುಕೊಡದಿರಲು ನಿರ್ಧರಿಸಿದೆ.
ಬಿಜೆಪಿ ಹೈಕಮಾಂಡ್ ಸಹ ಜೆಡಿಎಸ್ ಕ್ಷೇತ್ರವಾಗಿದ್ದರಿಂದ ಅವರಿಗೆ ಬಿಟ್ಟುಕೊಟ್ಟಿದೆ. ಅಲ್ಲದೇ ಈ ಹಿಂದೆ ಜೆಡಿಎಸ್ ಚಿಹ್ನೆಯಿಂದ ಸ್ಪರ್ಧೆ
ಮಾಡುವಂತೆ ಕುಮಾರಸ್ವಾಮಿ ಸಹ ಸಿಪಿ ಯೋಗೇಶ್ವರ್ಗೆ ಆಫರ್ ನೀಡಿದ್ದರು. ಸಿಪಿ ಯೋಗೇಶ್ವರ್ ಜೆಡಿಎಸ್ನಿಂದ ಸ್ಪರ್ಧಿಸಲು.
ನಿರಾಕರಿಸಿದ್ದು ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಲ್ಲ ಪಕ್ಷೇತರವಾಗಿ ನಿಲ್ಲುತ್ತೇನೆ. ಈ ಕ್ಷಣಕ್ಕೂ ಬಿಜೆಪಿ ಟಿಕೆಟ್ ನೀಡಿದರೆ ಸ್ಪರ್ಧೆ ಮಾಡುತ್ತೇನೆ.
ಇಲ್ಲದಿದ್ದಲ್ಲಿ ಪಕ್ಷೇತರ ಸ್ಪರ್ಧೆ ಮಾಡುವೆ ಎಂದಿದ್ದಾರೆ.
Renowned Educationist Dr. Ramnarayan Emphasises Teacher-Student Connection
KUNDAPUR (Oct 21) : At a revival workshop organised for teachers at HMM and VKR SCHOOLS KUNDAPURA, esteemed educationist and Pro Chancellor of Sikkim Manipal University, Dr. Ramnarayan, stressed the importance of teachers building rapport with students.
“The teacher is a guide by the side, not a sage on the stage” quotes Dr Ramnarayan. He says, “Instead of lecturing from a pedestal, teachers should be alongside students, comprehending their concerns and serving as guides.” The workshop aimed to rejuvenate teaching practices and address classroom challenges. Principal Dr. Chintana Rajesh noted, “Rather than focusing on identifying problems, we should concentrate on finding solutions.” Sri Sitaram Nackathaya, Secretary of Kundapur Education Society and program chairman, highlighted the significance of training for teachers to remain effective. The Academic Coordinator Vilma D’Silva introduced the speaker. Teacher Shweta skillfully moderated the program and extended gratitude to attendees.
The workshop drew participation from heads of various sections, faculty members, teacher-students, and interested educators from diverse schools in the Kundapur area.
ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ – ವಿಶ್ವ ಮಾನಸಿಕ ಆರೋಗ್ಯ ದಿನಾಚಾರಣೆ
ಕುಂದಾಪುರ; ವಿಶ್ವ ಮಾನಸಿಕ ಆರೋಗ್ಯ ದಿನಾಚಾರಣೆ. ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ – ವಿಶ್ವ ಮಾನಸಿಕ ಆರೋಗ್ಯ ದಿನಾಚಾರಣೆ ಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನ ಸಭಾಂಗಣದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾದ ಶ್ರೀಮತಿ ಸೌಜನ್ಯ ಕರುಣಾಕರ ಶೆಟ್ಟಿ ಆಡಳಿತ ಅಧಿಕಾರಿ ಏ ವಿ ಬಾಳಿಗ ಮೆಮೋರಿಯಲ್ ಹಾಸ್ಪಿಟಲ್ ಉಡುಪಿ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಶ್ರೀಮತಿ ರೂಪಶ್ರೀ ಕೆ ಎಸ್ . ಪ್ರೋಗ್ರಾಮ್ ಕೋಒರ್ ಡಿನೇಟರ್ ಕುಮಾರಿ ವೆಲ್ ಮೀರಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾ ಶ್ರೀಮತಿ ಸೌಜನ್ಯ ಕರುಣಾಕರ ಶೆಟ್ಟಿ ಅವರು ಮಾನಸಿಕ ಒತ್ತಡ ಹಾಗೂ ಅದರ ನಿರ್ವಹಣೆ ಬಗ್ಗೆ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಕುಮಾರಿ ನಿತ್ಯ ಮಾಡಿದರು. ಶರೀಲ್ ಸಾರ ಸ್ವಾಗತಿಸಿ ಸೆರೆನಾ ವಂದಿಸಿದರು.