ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಯಚ್ಚನಹಳ್ಳಿ ಕ್ರಾಸ್ ಸಮೀಪದ ವಿಐಪಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಮಾತನಾಡಿ ದೇಶದ ಸ್ವಾತಂತ್ರ್ಯ ರಕ್ಷಣೆ ಎಲ್ಲರ ಹೊಣೆ’ ಎಂದರು. ಭಾರತ ಸ್ವಾತಂತ್ರ್ಯಾನಂತರ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ದೇಶದ ಬಹುದೊಡ್ಡ ಜನಸಂಖ್ಯೆಗೆ ಮೂಲ ಸೌಕರ್ಯ ಒದಗಿಸುವಲ್ಲಿ ಯಶಸ್ವಿಯಾಗಿದೆ. ನಾಗರಿಕರ ತಲಾದಾಯದಲ್ಲೂ ಹೆಚ್ಚಳವಾಗಿದೆ. ಈ ಪರಿಸ್ಥಿತಿಗೆ ಕಾರಣರಾದ ಸ್ಯಾತಂತ್ರ್ಯ ಹೋರಾಟಗಾರಿಗೆ ನಾವು ಕೃತಜ್ಞರಾಗಿರಬೇಕು ಎಂದು ವಿಐಪಿ ಶಾಲೆಯ ಅಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. ಕೆ.ಎನ್.ವೇಣುಗೋಪಾಲ್ ಹೇಳಿದರು.
ತಾಲ್ಲೂಕಿನ ಯಚ್ಚನಹಳ್ಳಿ ಕ್ರಾಸ್ ಸಮೀಪದ ವಿಐಪಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ದೇಶದ ಸ್ವಾತಂತ್ರ್ಯ ಇತಿಹಾಸವನ್ನು ತಿಳಿದುಕೊಳ್ಳಬೇಕು. ಸ್ವಾತಂತ್ರ್ಯ ಯೋಧರ ತ್ಯಾಗ ಬಲಿದಾನದ ಬಗ್ಗೆ ಅರಿಯಬೇಕು ಎಂದು ಹೇಳಿದರು.
ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯದ ಸವಿಯ ಹಿಂದೆ ಲಕ್ಷಾಂತರ ದೇಶ ಪ್ರೇಮಿಗಳ ಶ್ರಮ ಅಡಗಿದೆ. ದೇಶದ ಸ್ವಾತಂತ್ರ್ಯ ರಕ್ಷಣೆ ಎಲ್ಲರ ಹೊಣೆ. ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ದೇಶಪ್ರೇಮ ಪ್ರದರ್ಶಿಸಬೇಕು. ದೇಶದ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎನ್.ವಿ.ಜಯರಾಮೇಗೌಡ ಮಾತನಾಡಿ, ಸ್ವಾತಂತ್ರ್ಯ ಮತ್ತು ಸಂವಿಧಾನ ಪರಸ್ಪರ ಪೂರಕ. ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳನ್ನು ಪಾಲಿಸಿದಾಗ ಮಾತ್ರ ಸ್ವಾತಂತ್ರ್ಯ ಅರ್ಥಪೂರ್ಣವಾಗುತ್ತದೆ ಎಂದು ಹೇಳಿದರು.
ಈಗ ಬ್ರಿಟಿಷರ ಕಾಲದ ಕಾನೂನುಗಳಿಗೆ ಬದಲಾಗಿ, ನಮ್ಮದೇ ಆದ ಹೊಸ ಕಾನೂನು ಜಾರಿಗೆ ಬಂದಿದೆ. ಆ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಕಾನೂನಿಗೆ ವಿರುದ್ಧವಾದ ಯಾವುದೇ ಕೆಸಲ ಮಾಡಬಾರದು. ಯಾರೇ ಆದರೂ ಬೇರೊಬ್ಬರ ಸ್ವಾತಂತ್ರ್ಯ ಕಿತ್ತುಕೊಳ್ಳಲು ಪ್ರಯತ್ನಿಸಬಾರದು. ಕಾನೂನು ಅರಿವು ಇದ್ದಲ್ಲಿ ತೊಂದರೆಗೆ ಒಳಗಾಗಬೇಕಾಗಿ ಬರುವುದಿಲ್ಲ. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ನಾಟಕ, ದೇಶಭಕ್ತಿ ಗೀತೆಗಳ ಗಾಯನ, ವೇಷ ಭೂಷಣ, ನೃತ್ಯ ಮತ್ತಿತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷ ರೋಣೂರು ಚಂದ್ರಶೇಖರ್, ಪ್ರಾಂಶುಪಾಲ ರಾಜ್ಕುಮಾರ್, ಪ್ರಾಂಶುಪಾಲೆ ಅಸ್ಮಾ ತಬಸಂ ಇದ್ದರು.
Month: August 2024
ಭಾರತ ಸೇವಾದಳವತಿಯಿಂದ 78 ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆದೇಶದ ಸಾರ್ವಭೌಮತ್ವತೆ ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ – ಸಿಎಂಆರ್ ಶ್ರೀನಾಥ್
ಕೋಲಾರ:- ಪ್ರತಿಯೊಬ್ಬರೂ ಜಾತಿ ಮತ ಧರ್ಮಗಳನ್ನು ಮೀರಿ ಭಾರತೀಯರೆಂಬ ಭಾವನೆಯಲ್ಲಿ ದೇಶದ ಅಖಂಡತೆ ಮತ್ತು ಸಾರ್ವಭೌಮತ್ವತೆಯನ್ನು ಕಾಪಾಡಬೇಕೆಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.
ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ, ಹಳೇ ಮಾಧ್ಯಮಿಕ ಶಾಲೆ, ಉರ್ದು ಮಾಧ್ಯಮಿಕ ಶಾಲೆ ಹಾಗೂ ರೋಟರಿ ಸೆಂಟ್ರಲ್ವತಿಯಿಂದ ಆಯೋಜಿಸಲಾಗಿದ್ದ 78 ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡು ನಿವೃತ್ತರಾಗಲಿರುವ ಬಿಇಒ ಕನ್ನಯ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸುಲೇಮಾನ್ ಖಾನ್ರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
ಸ್ವಾತಂತ್ರ್ಯಾನಂತರ ಸಂವಿಧಾನದಡಿ ಏಕತೆಯನ್ನು ಸಾಸಿರುವ ಭಾರತ ದೇಶವು ಇಡೀ ಜಗತ್ತೇ ಗಮನಿಸುವಂತೆ ಹಲವಾರು ಸಾಧನೆಗಳನ್ನು ಮಾಡಿದ್ದರೂ, ಇನ್ನೂ ಸಾಸಬೇಕಾದುದು ಸಾಕಷ್ಟಿರುವುದನ್ನು ಅರಿತು, ದೇಶವನ್ನು ಒಗ್ಗಟ್ಟಿನಿಂದ ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದರು.
ಕೇಂದ್ರ ಸರಕಾರವು ಪ್ರತಿ ಮನೆಯಲ್ಲೂ ತ್ರಿವರ್ಣ ಆಚರಿಸುವ ಕಾರ್ಯಕ್ರಮ ಕ್ಕೆ ಕರೆ ನೀಡಿರುವುದು ಸ್ವಾಗತಾರ್ಹ ಆದರೆ, ಸ್ವಾತಂತ್ರ್ಯೋತ್ಸವದ ನಂತರ ಅದೇ ತ್ರಿವರ್ಣ ಧ್ವಜಗಳು ಹಾದಿ ಬೀದಿಯಲ್ಲಿ ಕಸವಾಗುವುದಕ್ಕೆ ಬಿಡಬಾರದು, ಇದರಿಂದ ಹೆಮ್ಮೆಯ ರಾಷ್ಟ್ರಧ್ವಜಕ್ಕೆ ಅವಮಾನವಾದಂತಾಗುತ್ತದೆ ಎನ್ನುವುದರ ಅರಿವಿರಬೇಕೆಂದರು.
ಕ್ಷೇತ್ರ ಶಿಕ್ಷಣಾಕಾರಿ ಕನ್ನಯ್ಯ ಮಾತನಾಡಿ, ದೇಶವು ಸ್ವಾತಂತ್ರ್ಯವಾದ ನಂತರ ಎತ್ತಿನ ಗಾಡಿಯಿಂದ ಆರಂಭಿಸಿ ಇದೀಗ ಚಂದ್ರಲೋಕಕ್ಕೆ ರಾಕೆಟ್ ಕಳುಹಿಸುವವರೆವಿಗೂ ಅಗಾಧವಾದ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿಯಾಗಿದೆ, ದೇಶವಾಸಿಗಳಾದ ನಾವುಗಳು ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಅರಿತು ಕಡ್ಡಾಯವಾಗಿ ಪಾಲಿಸುವಂತಾಗಬೇಕೆಂದರು.
ಧ್ವಜಾರೋಹಣ ನೆರವೇರಿಸಿದ ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ಅನೇಕರ ತ್ಯಾಗ ಬಲಿದಾನಗಳಿಂದ ದೇಶವು ಸ್ವಾತಂತ್ರ್ಯವನ್ನು ಗಳಿಸಿದ್ದು, ಹೊಸ ಪೀಳಿಗೆ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ಅರಿತುಕೊಂಡು, ಭಾರತ ಸೇವಾದಳದ ಸೇವೆಗಾಗಿ ಬಾಳು ತತ್ವದಡಿ ರಾಷ್ಟ್ರಧ್ವಜ, ರಾಷ್ಟ್ರಗೀತೆ ಹಾಗೂ ರಾಷ್ಟ್ರ ಲಾಂಛನಕ್ಕೆ ಗೌರವ ನೀಡಬೇಕು, ಈ ಮೂಲಕ ಸದೃಢ ರಾಷ್ಟ್ರ ನಿರ್ಮಾಣದ ಭವ್ಯ ಪ್ರಜೆಗಳಾಬೇಕೆಂದರು.
ಇದೇ ಅಗಸ್ಟ್ ಅಂತ್ಯಕ್ಕೆ ಸೇವೆಯಿಂದ ನಿವೃತ್ತಿಯಾಗುತ್ತಿರುವ ಕ್ಷೇತ್ರ ಶಿಕ್ಷಣಾಕಾರಿ ಕನ್ನಯ್ಯ ಹಾಗೂ ನಿವೃತ್ತರಾಗಿ ಸಾರ್ಥಕ ಬದುಕು ಸಾಗಿಸುತ್ತಿರುವ ರಾಷ್ಟ್ರ ಪ್ರಶಸ್ತಿ ವಿಜೇತ ಸುಲೇಮಾನ್ ಖಾನ್ರನ್ನು ಸನ್ಮಾನಿಸಲಾಯಿತು.
ಶಾಲಾ ಮಕ್ಕಳು ಸ್ವಾತಂತ್ರ್ಯೋತ್ಸವ ಕುರಿತು ಕಿರು ಭಾಷಣ ಮಾಡಿದರು.
ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್, ಖಜಾಂಚಿ ನಾಗರಾಜ್, ಜಿಲ್ಲಾ ಸಮಿತಿ ಸದಸ್ಯ ಬಹಾದ್ದೂರ ಸಾಬ್, ಕೆ.ಜಯದೇವ್, ಅಪ್ಪಿ ನಾರಾಯಣಸ್ವಾಮಿ, ತಾಲೂಕು ಅಧ್ಯಕ್ಷ ಶ್ರೀರಾಮ್ , ರಾಜೇಶ್ಸಿಂಗ್, ಗೋಕುಲ ಚಲಪತಿ, ಮುನಿವೆಂಕಟ ಯಾದವ, ರೋಟರಿ ಸೆಂಟ್ರಲ್ ಪದಾಕಾರಿಗಳಾದ ಕೆ.ಎನ್.ಎನ್.ಪ್ರಕಾಶ್, ಚಂಪಕ್ ರಮೇಶ್, ದೈಹಿಕ ಶಿಕ್ಷಣಾಕಾರಿ ಚೌಡಪ್ಪ, ಪೈಂಟರ್ ಬಷೀರ್, ಶ್ರೀನಿವಾಸ್, ಬಿಇಒ ಕಚೇರಿ ಸಿಬ್ಬಂದಿಗಳಾದ ಗಿರೀಶ್ ಹಾಗೂ ಎರಡೂ ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ರಾಷ್ಟ್ರಧ್ವಜಾರೋಹಣ ಜವಾಬ್ದಾರಿ ನಿರ್ವಹಿಸಿದರು.
ಶ್ರೀನಿವಾಸಪುರದಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭವನ್ನು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಉದ್ಘಾಟಿಸಿದರು
ಶ್ರೀನಿವಾಸಪುರ: ಸ್ವಾತಂತ್ರ್ಯ ಯೋಧರ ತ್ಯಾಗ, ಹೋರಾಟ ಹಾಗೂ ಬಲಿದಾನದ ಮೂಲಕ ಪಡೆದುಕೊಂಡಿರುವ ಸ್ವಾತಂತ್ರ್ಯ ಅಮೂಲ್ಯವಾದುದು. ಅದು ಕೈಜಾರದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆದರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕಾಗಿ ಜೈಲುವಾಸ ಅನುಭವಿಸಿದ, ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ನಿತ್ಯ ಸ್ಮರಣೀಯರು ಎಂದು ಹೇಳಿದರು.
ಸ್ವಾತಂತ್ರ್ಯಾನಂತರ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಎಲ್ಲ ರಂಗಗಳಲ್ಲೂ ಗಣನೀಯ ಪ್ರಮಾಣದ ಪ್ರಗತಿಯಾಗಿದೆ. ಅಭಿವೃದ್ಧಿಯ ವೇಗ ಹೆಚ್ಚಬೇಕಾದರೆ, ಪ್ರತಿಯೊಬ್ಬರೂ ದೇಶದ ಹಿತರಕ್ಷಣೆ ದೃಷ್ಟಿಯಿಂದ ಪ್ರಾಮಾಣಿಕವಾಗಿ ದುಡಿಯಬೇಕು. ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಅರಿಬೇಕು ಎಂದು ಹೇಳಿದರು.
ತಾಲ್ಲೂಕಿನ ಜನರಿಗೆ ಉದ್ಯೋಗ ದೊಕಿಸಿಕೊಡುವ ಉದ್ದೇಶದಿಂದ ತಾಲ್ಲೂಕಿನಲ್ಲಿ ಸುಮಾರು 5 ಸಾವಿರ ಎಕರೆಯಲ್ಲಿ ಕೈಗಾರಿಕಾ ಪ್ರದೇಶ ಸ್ಥಾಪಿಸಲಾಗುವುದು. ಆ ಕುರಿತು ರಾಜ್ಯ ಸರ್ಕಾರ ಹಾಗೂ ಕೇಂದ್ರ ಚಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಲಾಗಿದೆ. ರೂ.40 ಕೋಟಿ ವೆಚ್ಚದಲ್ಲಿ ಶ್ರೀನಿವಾಸಪುರ ಕೋಲಾರ ರಸ್ತೆ ಅಭಿವೃದ್ಧಿ ಕೈಗೊಳ್ಳಲಾಗುವುದು. ಅಗತ್ಯವಿರುವ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲಾಗುವುದು. ಶಾಲಾಭಿವೃದ್ಧಿ, ರಸ್ತೆ ಹಾಗೂ ಚರಂಡಿ ನಿರ್ಮಾಣ ಕೈಗೊಳ್ಳಲಾಗುವುದು. ಪಟ್ಟಣದ ಸರ್ವತೋಮುಖ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ತಹಶೀಲ್ದಾರ್ ಜಿ.ಎನ್. ಸುಧೀಂದ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಮಹಾತ್ಮಾಗಾಂಧಿ ಅವರ ನೇತೃತ್ವದಲ್ಲಿ ನಡೆದ ಸ್ಯಾತಂತ್ರ್ಯ ಹೋರಾಟದಲ್ಲಿ ಪ್ರಮುಖ ನಾಯಕರು ಸೇರಿದಂತೆ ಲಕ್ಷಾಂತರ ಮಂದಿ ಭಾಗವಹಿಸಿದ್ದಾರೆ. ಕಷ್ಟ ನಷ್ಟ ಅನುಭವಿಸಿದ್ದಾರೆ. ದೇಶದ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದರ ಮೂಲಕ ಸ್ವಾತಂತ್ರ್ಯ ಯೋಧರಿಗೆ ಗೌರವ ತಂದುಕೊಡಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಪೊಲೀಸ್ ಇಲಾಖೆ ಹಾಗೂ ವಿದ್ಯಾರ್ಥಿಗಳಿಂದ ಪಥ ಸಂಚಲನ ಏರ್ಪಡಿಸಲಾಗಿತ್ತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು. ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎ.ಎನ್.ರವಿ, ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಸ್.ರಾಜೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಲಕ್ಷ್ಮಯ್ಯ, ಹಿರಿಯ ಕಂದಾಯ ನಿರೀಕ್ಷಕ ಬಿ.ವಿ.ಮುನಿರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ ಕೆ.ಸಿ.ಮಂಜುನಾಥ್, ಸಹಾಯಕ ತೋಟಗಾರಿಕಾ ನಿರ್ದೇಶಕ ಎ.ಬೈರೆಡ್ಡಿ, ಬೇರೆ ಬೇರೆ ಇಲಾಖೆಗಳ ಮುಖ್ಯಸ್ಥರಾದ ವೆಂಕಟಸ್ವಾಮಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ, ಬಿಆರ್ಸಿ ಸಂಯೋಜಕಿ ಕೆ.ಸಿ.ವಸಂತ, ದೈಹಿಕ ಶಿಕ್ಷಣ ವಿಷಯ ಪರಿವೀಕ್ಷಕ ಎಸ್.ವಿ.ಜನಾರ್ಧನ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಎನ್.ನಾರಾಯಣಸ್ವಾಮಿ, ಬಿಸಿಎಂ ಇಲಾಖೆ ಅಧಿಕಾರಿ ಪ್ರಸನ್ನ, ಇಸಿಒ ಸುಬ್ರಮಣಿ, ಶಿಕ್ಷಕಿ ಜಯಲಕ್ಷ್ಮಿ ಇದ್ದರು.
ಪತ್ರಕರ್ತರ ಭವನದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಣೆ
ಕೋಲಾರ,ಆ.15: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಕಛೇರಿಯ ಕಾರ್ಯಾಲಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷರಾದ ಬಿ.ವಿ.ಗೋಪಿನಾಥ್ ಧ್ವಜಾರೋಹಣವನ್ನು ನೆರವೇರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ವಿ.ಮುನಿರಾಜು ಕೆ.ಎಸ್.ಗಣೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್ಕುಮಾರ್, ಹಿರಿಯ ಪತ್ರಕರ್ತರಾದ ಬಿ.ಸುರೇಶ್, ಕೆ.ಬಿ.ಜಗದೀಶ್, ಕೋ.ನಾ.ಪ್ರಭಾಕರ್, ನಾ.ಮಂಜುನಾಥ್, ಶ್ರೀನಿವಾಸಮೂರ್ತಿ, ಕೋ.ನಾ.ಮಂಜುನಾಥ್, ಎಚ್.ಕೆ.ರಾಘವೇಂದ್ರ, ಸಿ.ಜಿ.ಮುರಳಿ, ಅಯ್ಯೂಬ್ ಖಾನ್, ಆಸೀಫ್ ಪಾಷ, ಎಸ್ ಸೋಮಶೇಖರ್, ಸಮೀರ್ ಅಹಮದ್, ಎಸ್.ರವಿಕುಮಾರ್, ವೆಂಕಟೇಶಪ್ಪ, ಅಮರ್, ಮಂಜುನಾಥ್, ರಘುರಾಜ್, ರಾಘವೇಂದ್ರ, ಸುಧಾಕರ್, ಸೈಯದ್ ತಬ್ರೇಜ್, ಜಹೀರ್ ಆಲಂ, ಮುಕ್ತಿಯಾರ್ ಅಹಮ್ಮದ್, ಸ್ಕಂದಕುಮಾರ್, ಪಿ.ಶ್ರೀನಿವಾಸ್, ಲಕ್ಷ್ಮೀಪತಿ, ಶಿವಶಂಕರ್, ಸಿ.ಅಮರೇಶ್, ಪುರುಷೋತ್ತಮ, ಎನ್.ಸತೀಶ್, ಶ್ರೀನಿವಾಸ್ ಸರ್ವಜ್ಞಮೂರ್ತಿ, ಚಂದ್ರು, ರಮೇಶ್, ಗೋಪಿ, ಗಂಗಾಧರ್, ಉಪಸ್ಥಿತರಿದ್ದರು.
ಕುಂದಾಪುರ ಆರ್. ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ
ಕುಂದಾಪುರ : ಕುಂದಾಪುರ ಆರ್. ಎನ್.ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವ “ಸ್ವಾತಂತ್ರ್ಯ ದೊರಕಿದ ಕಾಲದ ನಾಯಕರ ಹೋರಾಟವನ್ನು ಪ್ರಾದೇಶಿಕ ನೆಲೆಯಲ್ಲಿ ನೆನಪಿಸಿ ಗೌರವಿಸುವ ಊರಿನ ಹಲವು ರಸ್ತೆಗಳ ಹೆಸರಿನ ಔಚಿತ್ಯವನ್ನು ಇಂದಿನ ಮಕ್ಕಳಿಗೆ ವಿವರಿಸುವ ಕೆಲಸ ಶಿಕ್ಷಕರು ಮಾಡಬೇಕು. ಅಂಥ ಧೀಮಂತ ನಾಯಕರು ಪ್ರತಿಪಾದಿಸಿದ ಒಗ್ಗಟ್ಟು ಮತ್ತು ಸಮಗ್ರತೆಯ ಮೌಲ್ಯಗಳನ್ನು ನಾವೆಲ್ಲರೂ ಪಾಲಿಸಬೇಕು. ಬಿಕ್ಕಟ್ಟು ಎದುರಿಸುತ್ತಿರುವ ನೆರೆಯ ರಾಷ್ಟ್ರಗಳ ಸಂಘರ್ಷಗಳ ಅರಿವು ನಮಗಿದ್ದು, ನಮ್ಮ ದೇಶವನ್ನು ಸಾಮರಸ್ಯದ ಸೂತ್ರದಿಂದ ಒಗ್ಗೂಡಿಸಬೇಕು ” ಎಂದು ಕುಂದಾಪುರದ ಆರ್.ಎನ್. ಶೆಟ್ಟಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ನೆರವೇರಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕರೆ ನೀಡಿದರು. ಈ ಸಂದರ್ಭದಲ್ಲಿ ಗಾಂಧೀಜಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ರವರ ಭಾವಚಿತ್ರಗಳಿಗೆ ಪುಷ್ಪಾಂಜಲಿ ಸಲ್ಲಿಸಲಾಯಿತು. ಕಾಲೇಜಿನ ಉಪಪ್ರಾಂಶುಪಾಲರಾದ ಶ್ರೀ ಪ್ರೀತೇಶ್ ಶೆಟ್ಟಿಯವರು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ರಾಮ್ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಂಪ್ಯೂಟರ್ ವಿಭಾಗದ ಮುಖ್ಯಸ್ಥರಾದ ಶ್ರೀ ಸಂದೀಪ್ ಪೂಜಾರಿಯವರು ಧ್ವಜಾರೋಹಣ ಕಾರ್ಯಕ್ರಮವನ್ನು ನಿರ್ದೇಶಿಸಿದರು. ಕಾಲೇಜಿನ
ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಕೃಷ್ಣಮೂರ್ತಿ ಡಿ. ಬಿ. ಯವರು ಕಾರ್ಯಕ್ರಮ ನಿರ್ವಹಿಸಿದರು.
CSI ಕೃಪಾ ವಿದ್ಯಾಲಯ ನರ್ಸರಿ ಶಾಲೆ ಮತ್ತು UBMC ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆ / 78th Independence Day Celebration at CSI Krupa Vidyalaya Nursery School and UBMC English Medium School
ಕುಂದಾಪುರ: CSI ಕೃಪಾ ವಿದ್ಯಾಲಯ ನರ್ಸರಿ ಶಾಲೆ ಮತ್ತು UBMC ಆಂಗ್ಲ ಮಾಧ್ಯಮ ಶಾಲೆಯಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು 15 ಆಗಸ್ಟ್, 2024 ರಂದು ಬೆಳಿಗ್ಗೆ 8:00 ಗಂಟೆಗೆ ಶಾಲಾ ಮೈದಾನದಲ್ಲಿ ಅತ್ಯಂತ ಉತ್ಸಾಹ ಮತ್ತು ಗೌರವದಿಂದ ಆಚರಿಸಲಾಯಿತು. ಸ್ಕೌಟ್ ವಿದ್ಯಾರ್ಥಿಗಳಿಂದ ಗಣ್ಯರಿಗೆ ಗೌರವ ವಂದನೆ ಸಲ್ಲಿಸಲಾಯಿತು. ಆವಾಹನೆಗಾಗಿ ‘ವಂದೇ ಮಾತರಂ’ ಹಾಡನ್ನು ಹಾಡಲಾಯಿತು. ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಅಲಿಸ್ ಡಿಸೋಜ ಸ್ವಾಗತ ಭಾಷಣದಲ್ಲಿ ದಾಸ್ಯವಾಗಿರುವ ಮತ್ತು ತನ್ನ ಅಭಿವೃದ್ಧಿಗೆ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಅಡ್ಡಿಯುಂಟುಮಾಡುವ ಎಲ್ಲಾ ಅಹಿತಕರ ಮತ್ತು ಋಣಾತ್ಮಕ ನಡವಳಿಕೆಗಳಿಂದ ಮುಕ್ತಿ ಪಡೆಯುವಂತೆ ಒತ್ತಾಯಿಸಿದರು. ಮುಖ್ಯ ಅತಿಥಿಗಳಾದ ಸಿಎಸ್ಐ ಕೃಪಾ ಚರ್ಚ್ ಧರ್ಮಗುರು ರೆ.ಫಾ.ಇಮ್ಯಾನುಯೆಲ್ ಜಯಕರ್ ಅವರು ಧ್ವಜಾರೋಹಣ ನೆರವೇರಿಸಿದರು. ಎಲ್ಲರೂ ರಾಷ್ಟ್ರಧ್ವಜಕ್ಕೆ ವಂದನೆ ಸಲ್ಲಿಸಿ ಗೌರವ ಸಲ್ಲಿಸಿದರು ಮತ್ತು ಧ್ವಜ ಗೀತೆ ಮತ್ತು ರಾಷ್ಟ್ರಗೀತೆಯನ್ನು ಎಲ್ಲರೂ ಭಾವಪೂರ್ಣವಾಗಿ ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳು ನೃತ್ಯ ಮತ್ತು ದೇಶಭಕ್ತಿ ಗೀತೆ ಹಾಡಿದರು. ದೇಶಭಕ್ತಿ ಗೀತೆ ಸ್ಪರ್ಧೆಯ ನಿಮಿತ್ತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆರನೇ ತರಗತಿಯ ಅದ್ವಿತ್ ಮಾತನಾಡಿ, ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರನ್ನು ಸ್ಮರಿಸಿದರು. ಮುಖ್ಯ ಅತಿಥಿ ರೆ.ಫಾ.ಇಮ್ಯಾನುಯೆಲ್ ಜಯಕರ್ ಅವರು ತಮ್ಮ ಭಾಷಣದಲ್ಲಿ ತ್ರಿವರ್ಣ ಧ್ವಜದ ಮಹತ್ವ ಮತ್ತು ಸ್ವಾತಂತ್ರ್ಯದ ಮೌಲ್ಯವನ್ನು ವಿವರಿಸಿದರು. ವರದಿಗಾರರಾದ ಶ್ರೀಮತಿ ಐರಿನ್ ಸಾಲಿನ್ಸ್ ಎಲ್ಲರಿಗೂ ಧನ್ಯವಾದಗಳನ್ನು ಭಾವನಾತ್ಮಕವಾಗಿ ವ್ಯಕ್ತಪಡಿಸಿದರು. “ಸ್ವಾತಂತ್ರ್ಯ ದಿನ” ವಿಷಯದ ಮೇಲೆ ವಿದ್ಯಾರ್ಥಿಗಳ ರೇಖಾಚಿತ್ರಗಳು ಮತ್ತು ಕರಕುಶಲಗಳನ್ನು ಪ್ರದರ್ಶಿಸಲಾಯಿತು; ಅಲ್ಲಿ ಪೋಷಕರು ತುಂಬಿ ತುಳುಕಿದರು ಮತ್ತು ವಿದ್ಯಾರ್ಥಿಗಳ ಸೃಜನಶೀಲ ಪ್ರವೃತ್ತಿ ಮತ್ತು ಕೌಶಲ್ಯಗಳ ಪ್ರಯತ್ನಗಳನ್ನು ಮೆಚ್ಚಿದರು. ರುಚಿಕರವಾದ ಸಿಹಿತಿಂಡಿಗಳನ್ನು ಸೇವಿಸಿದ ನಂತರ ಕಾರ್ಯಕ್ರಮವು ಮಧುರವಾಗಿ ಮುಕ್ತಾಯಗೊಂಡಿತು.
78th Independence Day Celebration at CSI Krupa Vidyalaya Nursery School and UBMC English Medium School
CSI Krupa Vidyalaya Nursery School and UBMC English Medium School: Kundapura: 15.08.2024 : The 78th Independence Day was celebrated 15th August, 2024 at 8:00 am in the school ground with great enthusiasm and respect. The dignitaries were given a Guard of Honour by the Scout students. ‘Vande Matharam’ song was sung for invocation. The Principal, Mrs.Anita Alice Dsouza in her welcome address urged to get freedom from all the unpleasant and negative behaviour that is a bondage and causes hindrance in the development of oneself and development of the nation . The flag was hoisted by Chief guest, Rev.Fr.Emmanuel Jayakar, CSI Krupa Church priest. Everyone saluted and paid their respect to the National flag and the flag song and National Anthem were sung passionately by all. As a part of the cultural programme, students danced and sung Patriotic song. Students were awarded prizes on account of Patriotic song competition. Advith of sixth standard delivered the speech and remembered the martyrs, who sacrificed their lives to attain freedom. Chief guest Rev. Fr. Emmanuel Jayakar in his address explained the significance of the Tricolour and the value of freedom. Mrs .Irene Salins, Correspondent expressed an emotional vote of thanks to all. The students’ drawings and craft on the theme “Independence Day” were exhibited ; wherin parents were overwhelmed and appreciated the efforts of students’ creative instincts and skills. The event winded up sweetly after having delicious sweets.
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ, ಗೆ ಸತತ 2ನೇ ಬಾರಿಗೆ “ಸಾಧನಾ ಪ್ರಶಸ್ತಿ”
ಉಡುಪಿ ಕಥೋಲಿಕ್ ಕ್ರೆಡಿಟ್ ಕೋ-ಅಪರೇಟಿವ್ ಸೊಸೈಟಿ.ಲಿ, ಉಡುಪಿ. 2023-24 ನೇ ಸಾಲಿನಲ್ಲಿ ಸಂಘವು ಸಾಧಿಸಿದ ಸರ್ವತೋಮುಖ ಅಭಿವೃದ್ಧಿಗಾಗಿ ಸತತ 2ನೇ ಬಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್,ಮಂಗಳೂರು ಇವರಿಂದ ಗುರುತಿಸಲ್ಪಟ್ಟು ದಿನಾಂಕ 14-08-2024 ರಂದು ನಡೆದ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಸಮಾರಂಭದಲ್ಲಿ ಬ್ಯಾಂಕಿನ ಗೌರವಾನ್ವಿತ ಅಧ್ಯಕ್ಷರಾದ ಡಾ.ಎಂ.ಎನ್.ರಾಜೇಂದ್ರ ಕುಮಾರ್,ನಿರ್ದೇಶಕರಾದ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಮತ್ತು ಆಡಳಿತ ಮಂಡಳಿ ಸದಸ್ಯರು, ಶ್ರೀಮತಿ
ಲಾವಣ್ಯ ಸಹಕಾರ ಸಂಘಗಳ ಉಪನಿಬಂಧಕರು,ಉಡುಪಿ ಜಿಲ್ಲೆ ಉಡುಪಿ, ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಇವರ ಗಣ್ಯ ಉಪಸ್ಥಿತಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ, ಲೂವಿಸ್ಲೋ ಬೋ ರವರು ಮತ್ತು ಮುಖ್ಯ ಕಾರ್ಯ ನಿರ್ವಾಹಣ ಅಧಿಕಾರಿಯಾದ ಶ್ರೀ ಸಂದೀಪ್ ಫೆರ್ನಾಂಡಿಸ್ ರವರು ಜಂಟಿಯಾಗಿ “ಸಾಧನಾ ಪ್ರಶಸ್ತಿ” ಯನ್ನು ಸ್ವೀಕರಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷರಾದ ಶ್ರೀ ಜೇಮ್ಸ್ ಡಿ’ಸೋಜರವರು ಉಪಸ್ಥಿತರಿದ್ದರು. 1997 ನೇ ಇಸವಿಯಲ್ಲಿ
ಆರಂಭಗೊಂಡ ಸಂಘವು ತನ್ನ ಯಶಸ್ವಿ 27ನೇವರ್ಷಕ್ಕೆ ಪಾದಾರ್ಪಣೆ ಗೈದಿದೆ. 2023-24 ನೇ ಸಾಲಿನಲ್ಲಿ ರೂ.84.00 ಲಕ್ಷ
ನಿವ್ವಳ ಲಾಭಾಂಶವನ್ನುಗಳಿಸಿ,ತನ್ನೆಲ್ಲಾ ಸದಸ್ಯರಿಗೆ ಶೇಕಡಾ 17 ರಷ್ಟು ಡಿವಿಡೆಂಡನ್ನು ಮಂಜೂರು ಮಾಡಲಾಗಿದೆ. ಉಡುಪಿ ಸುಪರ್ ಬಜಾರ್
ನಲ್ಲಿ ಆಡಳಿತ ಕಚೇರಿಯನ್ನು ಹೊಂದಿರುವ ಸಂಸ್ಥೆಯು ಉಡುಪಿ,ಮಲ್ಪೆ,ಉದ್ಯಾವರ ಹಾಗೂ ಶಿರ್ವದಲ್ಲಿ ಈಗಾಗಲೇ
ಶಾಖೆಗಳನ್ನು ಹೊಂದಿದ್ದು, ನೂತನ ಹೂಡೆ-ಕೆಮ್ಮಣ್ಣು ಶಾಖೆಯು ದಿನಾಂಕ 31-08-2024 ರಂದು ಉದ್ಘಾಟನೆ
ಗೊಳ್ಳಲಿದೆ. ಈ ಸಾಧನೆಯನ್ನು ಮಾಡುವಲ್ಲಿ ಸಹಕರಿಸಿದ ಸಂಘದ ನೆಚ್ಚಿನ ಆಡಳಿತ ಮಂಡಳಿ ನಿರ್ದೇಶಕರಿಗೂ,
ಸದಸ್ಯರಿಗೂ, ಗ್ರಾಹಕರಿಗೂ, ಹಿತೈಷಿಗಳಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಅಧ್ಯಕ್ಷರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ
ಮಂಗಳೂರು ಸೈಂಟ್ ಅಲೋಶಿಯಸ್ ಪದವಿ ಕಾಲೇಜು 78 ನೇ ಸ್ವಾತಂತ್ರ್ಯ ದಿನಾಚರಣೆ / MANGLORE ST. ALOYSIUS DEGREE COLLEGE CELEBRATES 78TH INDEPENDENCE DAY
ಮಂಗಳೂರು : ಸೈಂಟ್ ಅಲೋಶಿಯಸ್ ಪದವಿ ಕಾಲೇಜು 78 ನೇ ಸ್ವಾತಂತ್ರ್ಯ ದಿನಾಚರಣೆ ಸೇಂಟ್ ಅಲೋಶಿಯಸ್ ಪದವಿ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮ ಮತ್ತು ದೇಶಭಕ್ತಿಯಿಂದ ಕಾಲೇಜು ಆವರಣದಲ್ಲಿ ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಖ್ಯಾತ ಕೈಗಾರಿಕೋದ್ಯಮಿ ಡಾ.ಜೇಕಬ್ ಕ್ರಾಸ್ತಾ, ಪ್ರಾಂಶುಪಾಲರಾದ ಡಾ.ಸರ್.ಸಗಾಯಮರಿ ಬಿ., ವ್ಯವಸ್ಥಾಪಕರಾದ ರೆ.ಫಾ. ಆಂಟನಿ ಮಹೇಂದ್ರನ್, ಆಡಳಿತ ಮಂಡಳಿ ಸದಸ್ಯ
ಶ್ರೀ ಅನಿಲ್ ಡಿ’ಓಜಾ, ಪಿಯು ಪ್ರಾಂಶುಪಾಲರಾದ ಸೀನಿಯರ್ ವೈಲೆಟ್, ಮತ್ತು ಸೇಂಟ್ ಅಲೋಶಿಯಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಜಾನ್ ವಿಯಾನಿ. ಆಚರಣೆಯಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು,
ಎಲ್ಲರೂ ರಾಷ್ಟ್ರದ ಗೌರವದಲ್ಲಿ ಒಗ್ಗೂಡಿದರು.
ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ನಿಂದ ಭವ್ಯ ಮೆರವಣಿಗೆಯೊಂದಿಗೆ ಬೆಳಿಗ್ಗೆ 8:30 ಕ್ಕೆ ಕಾರ್ಯಕ್ರಮವು ಪ್ರಾರಂಭವಾಯಿತು, ಇದರಲ್ಲಿ ಪ್ರೌಢಶಾಲೆ, ಪೂರ್ವ ವಿಶ್ವವಿದ್ಯಾಲಯ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದಾದ ನಂತರ ಡಾ.ಜೇಕಬ್ ಕ್ರಾಸ್ತಾ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ರಾಷ್ಟ್ರಗೀತೆ ಹಾಡಲಾಯಿತು. .
ಹೆಮ್ಮೆ ಮತ್ತು ದೇಶಭಕ್ತಿಯೊಂದಿಗೆ. ರಾಷ್ಟ್ರದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಮತ್ತು ಪ್ರಗತಿಯನ್ನು ಸಾಧಿಸುವಲ್ಲಿ ಕಠಿಣ ಪರಿಶ್ರಮ, ಸಮರ್ಪಣೆ, ಉದ್ಯಮಶೀಲತೆ ಮತ್ತು ಏಕತೆಯ ಮಹತ್ವವನ್ನು ಡಾ.ಕ್ರಾಸ್ತಾ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದರು. ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಚಟುವಟಿಕೆಗಳು ಮತ್ತು ಸಮಾಜಕ್ಕೆ ಧನಾತ್ಮಕ ಕೊಡುಗೆ ಅಗತ್ಯವಿದೆಯೆಂದರು.
ಸಮಾರಂಭದಲ್ಲಿ ಪದವಿ ಕಾಲೇಜು ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಳು ಮತ್ತು ಭಾರತದ ಶ್ರೀಮಂತ ಪರಂಪರೆ ಮತ್ತು ಇತಿಹಾಸವನ್ನು ಬಿಂಬಿಸುವ ನೃತ್ಯಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಈ ಪ್ರದರ್ಶನಗಳು ಪ್ರತಿಯೊಬ್ಬರಿಗೂ ದೇಶದಲ್ಲಿ ಲಭ್ಯವಿರುವ ಸ್ವಾತಂತ್ರ್ಯ ಮತ್ತು ಅವಕಾಶಗಳ ಬಗ್ಗೆ ಹೆಮ್ಮೆ ಮತ್ತು ಕೃತಜ್ಞತೆಯ ಭಾವವನ್ನು ಮೂಡಿಸಿದವು.
ಸಂತ ಅಲೋಶಿಯಸ್ ಪದವಿ ಕಾಲೇಜಿಗೆ ಸೇವಾ ನಿಯಮಗಳ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ನಮ್ಮ ಸಂಸ್ಥೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ. ಹೆಚ್ಚುವರಿಯಾಗಿ, ನಾವು ಕಾಲೇಜಿನ ತ್ರೈಮಾಸಿಕ ಸುದ್ದಿಪತ್ರವನ್ನು ಪ್ರಕಟಿಸಿದ್ದೇವೆ.
ಒಟ್ಟಾರೆಯಾಗಿ, ಆಚರಣೆಯು ರಾಷ್ಟ್ರದ ನಿರಂತರ ಮನೋಭಾವ ಮತ್ತು ಅದರ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿಹಿಡಿಯುವ ಸಾಮೂಹಿಕ ಜವಾಬ್ದಾರಿಯನ್ನು ನೆನಪಿಸುತ್ತದೆ. ಎಂದು ತಿಳಿಸಲಾಯಿತು.
MANGLORE ST. ALOYSIUS DEGREE COLLEGE CELEBRATES 78TH INDEPENDENCE DAY
Mangalore: St. Aloysius Degree College celebrated the 78th Independence Day with great enthusiasm and patriotic fervor on the college campus. The event was graced by Chief Guest Dr. Jacob Crasta, a renowned industrialist, along with the Principal, Dr. Sr. Sagayamary B., Manager Rev. Fr. Anthony Mahendran, Governing Council Member
Mr Anil D’ouza, PU Principal Sr. Violet, and Mr John Vianny, the Headmaster of St. Aloysius High School. The celebration was attended by students, faculty, and staff, all united in their reverence for the nation.
The program commenced at 8:30 AM with a grand march by the NCC, Scouts, and Guides, featuring students from the High School, Pre-University, and Degree College. This was followed by the hoisting of the national flag by Dr.Jacob Crasta, accompanied by the singing of the national anthem, which filled everyone present
with pride and patriotism. In his speech, Dr. Crasta emphasized the importance of hard work, dedication, Entrepreneurship and unity in maintaining the nation’s independence and achieving progress. He encouraged the students to actively participate in nation-building
activities and contribute positively to the society.
The event also featured cultural performances by the degree college students, including patriotic songs and dances that depicted the rich heritage and history of India. These performances left everyone with a sense of pride and gratitude for the freedom and opportunities available in the country.
We are pleased to announce the release of the Service Rule Book for St. Aloysius Degree College, marking a significant milestone in the history of our institution. Additionally, we have published the quarterly newsletter of the college.
Overall, the celebration was a reminder of the nation’s enduring spirit and the collective responsibility to uphold its values and principles.
ಅಕುಲುಟೊ ಸೇಂಟ್ ಕ್ಲೇರ್ ಶಾಲೆಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ / 78th Independence Day Celebration at Akuluto St. Clair School
Report by Fr Stephen Dsouza, OFM Cap
ಅಕುಲುಟೊ: ಸೇಂಟ್ ಕ್ಲೇರ್ ಶಾಲೆಯು 15ನೇ ಆಗಸ್ಟ್ 2023 ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು. ಎಲ್ಲಾ ವಿದ್ಯಾರ್ಥಿಗಳು ಬೆಳಗ್ಗೆ 8.00 ಗಂಟೆಗೆ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜಮಾಯಿಸಿದರು. ಭಾರತದ ಧ್ವಜಕ್ಕೆ ವಂದನೆ ಸಲ್ಲಿಸಿದ ನಂತರ ಮತ್ತು ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿ ಎಲ್ಲರೂ ರಾಷ್ಟ್ರಗೀತೆಯನ್ನು ಹಾಡಿದರು. ಫ್ರಾ ಸ್ಟೀಫನ್ ಅವರು ಸ್ವಾಂತ್ರದ ಪ್ರಾಮುಖ್ಯತೆಯನ್ನು ವಿವರಿಸಿದರು. ನಂತರ ಎಲ್ಲರೂ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಅಕುಲುಟೊ ಝೀರೋ ಪಾಯಿಂಟ್ಗೆ ತೆರಳಿದರು. ಅಕುಲುಟೊದ ಎಡಿಸಿ, ಶ್ರೀ ಅತ್ಸುಂಗ್ಬಾ ದಿನದ ಮುಖ್ಯ ಅತಿಥಿಯಾಗಿದ್ದರು. ಅಕುಲುತೋಟದ ಜನರು ಮತ್ತು ಪಟ್ಟಣದ ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳು ತೆರೆದ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಹಲವಾರು ಕಾರ್ಯಕ್ರಮಗಳನ್ನು ಹಾಕಿದರು. ಸೇಂಟ್ ಕ್ಲೇರ್ ವಿದ್ಯಾರ್ಥಿಗಳು ಪರೇಡ್ ಪ್ರಸ್ತುತಿ, ದೇಶಭಕ್ತಿಯ ನೃತ್ಯ, ಸೃಜನಾತ್ಮಕ ವಿಭಾಗ: ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವಾರ್ಥ ವಿವಿಧತೆಯಲ್ಲಿ ಏಕತೆಯಿಂದ ಕೂಡಿದ ಸಂಗೀತ ಮತ್ತು ಕಿರು ನಾಟಕ ಪ್ರದರ್ಶಿಸಲಾಯಿತು.
78th Independence Day Celebration at Akuluto St. Clair School
Akuluto: St Clare School celebrated Independence Day on 15th August 2023. All the students gathered in the Primary school ground at 8.00 am in the morning. Immediately after Saluting the Indian flag and paying respect to the National Flag all sang the National Anthem. Fr Stephen explained about the importance of the day by speaking few words on Independence Day thereafter all proceeded to Akuluto Zero point to celebrate the Independence Day. The ADC of Akuluto, Mr Atsungba was the chief guest of the day. Several Programmes were put up by the people of Akuluto and students of schools around the town, in the open ground to celebrate the Independence Day in a grandeur way. St Clare students partook in the parade Presentation, Patriotic dance, Creative Segment: Tribute to freedom fighters and Musical Skit: Unity in Diversity.
YoutubeLink :https://youtu.be/ysWFZifZFLQ?si=n9zz4IprIK_-zKGI