ನೇಜಿಗುರಿ ಅಂಗನವಾಡಿ ಕೇಂದ್ರ, ನೇಜಿಗುರಿ ಗುಂಪು ಹಾಗೂ ಇತರ ಸಂಘಟನೆಗಳ ವತಿಯಿಂದ ನಡೆದ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಅತಿಥಿಗಳಾಗಿ ನಾರಪ್ಪ KB (ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ), ಶೃತಿ KM (ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ), ಭಗಿನಿ ಹೆಲೆನ್ ಫರ್ನಾಂಡಿಸ್(ಜಿಪ್ಪು ಸ್ಪಂದನ ಸಂಸ್ಥೆಯ ಆಡಳಿತ ಅಧಿಕಾರಿ), ಜಯಪ್ರಕಾಶ್ ಗಟ್ಟಿ (ದೀಪ ಫ್ರೆಂಡ್ಸ್ ಕ್ಲಬ್ ಹಾಗೂ ಗಣೇಶೋತ್ಸವ ಸಮಿತಿ KHB ಬೋಂದೇಲ್ ಇದರ ಅಧ್ಯಕ್ಷರು), ಭಗಿನಿ ಲೀನಾ (ಜಿಪ್ಪು ಸ್ಪಂದನ ಸಂಸ್ಥೆ), ವಿಕ್ಟರ್ ವಾಸ್ (ಜಿಪ್ಪು ಸ್ಪಂದನ ಸಂಸ್ಥೆಯ ಕಾರ್ಯ ಸಂಯೋಜಕರು), ತೀರ್ಥ ಟೀಚರ್ (ಸಮಾಜ ಸೇವಕರು), ಪವನ್ (ಶಿವಶಕ್ತಿ ಇದರ ಅಧ್ಯಕ್ಷರು), ಸಚಿನ್ (ಆದಿಶಕ್ತಿ ಗೇಮ್ಸ್ ಟೀಮ್ ಇದರ ಅಧ್ಯಕ್ಷರು), ಗೋಪಾಲ್ ಮುಗ್ರೋಡಿ ( ಸಮಾಜ ಸೇವಕರು ), ಪ್ರಾಣೇಶ್ (ಮೊಸರು ಕುಡಿಕೆ ಸೇವಾ ಸಮಿತಿಯ ಕಾರ್ಯದರ್ಶಿ), ಚಂದ್ರಿಕಾ (ಆಶಾ ಕಾರ್ಯಕರ್ತೆ), ಶುಭಕರ್ ಮುಗ್ರೋಡಿ ( ಸಮಾಜ ಸೇವಕರು ), ಹರಿಣಾಕ್ಷಿ ಟೀಚರ್ (ನೇಜಿಗುರಿ ಅಂಗನವಾಡಿ ಕೇಂದ್ರ), ಶ್ಯಾಮಲ (ನೇಜಿಗುರಿ ಅಂಗನವಾಡಿ ಕೇಂದ್ರ), ಶ್ರೀಮತಿ ಗೋಪಿ (ನೇಜಿಗುರಿ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷರು), ಅರುಣ್ ಡಿಸೋಜ (ನೇಜಿಗುರಿ ಗುಂಪಿನ ಅಧ್ಯಕ್ಷರು) ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೃತಿ KM, ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ ಇವರು ಧ್ವಜಾರೋಹಣಗೈದರು.
ಭಗಿನಿ ಹೆಲೆನ್ ಫರ್ನಾಂಡಿಸ್, ಜಿಪ್ಪು ಸ್ಪಂದನ ಸಂಸ್ಥೆಯ ಆಡಳಿತ ಅಧಿಕಾರಿ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಹಾಗೂ ಸ್ವಾತಂತ್ರ್ಯೋತ್ಸವದ ಶುಭಹಾರೈಸಿದರು.
ನಾರಪ್ಪ KB ,ಪೋಲಿಸ್ ಕಾನ್ಸ್ಟೇಬಲ್ ಕದ್ರಿ ಪೊಲೀಸ್ ಠಾಣೆ, ಶೃತಿ KM ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಕಂಕನಾಡಿ ಪೊಲೀಸ್ ಠಾಣೆ ಇವರುಗಳ ಸೇವೆಯನ್ನು ಪರಿಗಣಿಸಿ ಗಣ್ಯರ ಸಮ್ಮುಖದಲ್ಲಿ ಸಮಾಜ ಸೇವಕರಾದ ಶುಭಕರ್ ಮುಗ್ರೋಡಿ ಇವರಿಂದ ಗೌರವಿಸಲಾಯಿತು.
ಸನ್ಮಾನ ಕಾರ್ಯಕ್ರಮ ಚೈತ್ರ ರವರು ನಡೆಸಿಕೊಟ್ಟರು.
ಅಂಗನವಾಡಿಯ ಶ್ಯಾಮಲ ಅಂಗನವಾಡಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು. ರಾಕೇಶ್ ನೇಜಿಗುರಿ ರವರು ಕಾರ್ಯಕ್ರಮ ನಿರೂಪಿಸಿದರು.
ಅರುಣ್ ಡಿಸೋಜ,ನೇಜಿಗುರಿ ಗುಂಪಿನ ಅಧ್ಯಕ್ಷರು ಸ್ವಾಗತಿಸಿ, ಅಂಗನವಾಡಿಯ ಟೀಚರ್ ಹರಿಣಾಕ್ಷಿ ವಂದಿಸಿದರು. ನೆರೆದವರೆಲ್ಲರಿಗೂ ತಿಂಡಿ ಹಾಗೂ ಸಿಹಿಹಂಚಿ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸಲಾಯಿತು.
Month: August 2024
ಕೋಲಾರ ಜಿಲ್ಲಾ ಮಟ್ಟದ ಛಾಯಾಚಿತ್ರ ಸ್ವರ್ಧೆಯಲ್ಲಿ ಪತ್ರಿಕಾ ಛಾಯಗ್ರಾಹಕ ಕೆ.ಎನ್.ಚಂದ್ರಶೇಖರ್ ಚಿತ್ರಕ್ಕೆ ಮೊದಲ ಬಹುಮಾನ
ಕೋಲಾರ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೋಲಾರ ಜಿಲ್ಲಾ ಛಾಯಗ್ರಾಹಕ ಸಂಘದ ಸಂಯುಕ್ತಾಶ್ರಯದಲ್ಲಿ ಹಿರಿಯ ಪತ್ರಿಕಾ ಛಾಯಗ್ರಾಹಕರಾದ ದಿವಂಗತ ಜಿ.ಸೋಮಶೇಖರ್ (ಶೇಖರ್ ಸ್ಟುಡಿಯೋ) ರವರ ನೆನಪಿನಲ್ಲಿ ಆಯೋಜಿಸಲಾದ ಕೋಲಾರ ಜಿಲ್ಲಾ ಮಟ್ಟದ ಛಾಯಾಚಿತ್ರ ಸ್ವರ್ಧೆಯಲ್ಲಿ ಗ್ರಾಮೀಣ ಜನಜೀವನ ಮತ್ತು ಕುಲಕಸುಬು ಸಂಬಧಿಸಿದಂತೆ ಕುರಿ ಕಾಯುವ ಮಹಿಳೆಯೊಬ್ಬರು ಸಂಜೆ ಸಮಯದಲ್ಲಿ ಕುರಿಗಳನ್ನು ದೊಡ್ಡಿಗೆ ಕರೆದೊಯುವ ಅತ್ಯೂತ್ತಮ ಚಿತ್ರಕ್ಕೆ ಪತ್ರಿಕಾ ಛಾಯಗ್ರಾಹಕ ಕೆ.ಎನ್.ಚಂದ್ರಶೇಖರ್ (ಕೋಲಾರ್ ನ್ಯೂಸ್ ಚಂದ್ರು) ಪ್ರಥಮ ಬಹುಮಾನ ಪಡೆದು ಕೊಂಡರು ಜೊತೆಗೆ 5000 ನಗದು ಮತ್ತು ಪ್ರಶಸ್ತಿಪತ್ರ ನೀಡಿ ಗೌರವಿಸಲಾಯಿತು.
ಭತ್ತದ ಗದ್ದೆಯಲ್ಲಿ ಕೆಲಸಮಾಡುತ್ತಿರುವ ಮಹಿಳೆಯರ ಚಿತ್ರಕ್ಕೆ ದೇವೇಂದ್ರ ದ್ವಿತೀಯ ಬಹುಮಾನ 3000 ನಗದು ಮತ್ತು ಪ್ರಶಸ್ತಿಪತ್ರ ಹಾಗೂ ಬಿದಿರಿನ ಬುಟ್ಟಿ ಎಣೆಯುವ ಚಿತ್ರಕ್ಕೆ ಕೃಷ್ಣ ತೃತೀಯ ಬಹುಮಾನ 2000 ನಗದು ಮತ್ತು ಪ್ರಶಸ್ತಿಪತ್ರವನ್ನು ಪಡೆದುಕೊಂಡರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ರವರು ಎಲ್ಲಾ ಬಹುಮಾನಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಹಿರಿಯ ಪತ್ರಕರ್ತ ಜಗನ್ನಾಥ್ ಪ್ರಕಾಶ್, ರಾಜ್ಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಎಚ್.ಎಲ್.ನಾಗೇಶ್, ನಿದೇರ್ಶಕರಾದ ಉಮಾಶಂಕರ್, ಕೋಲಾರ ಜಿಲ್ಲಾ ಅಧ್ಯಕ್ಷ ವಿ.ಕೃಷ್ಣ, ತಾಲೂಕು ಅಧ್ಯಕ್ಷ ಸ್ಪಂದನ ರಂಗನಾಥ್, ಪತ್ರಕರ್ತರು ಮತ್ತು ಛಾಯಗ್ರಾಹಕರು ಉಪಸ್ಥಿತರಿದ್ದರು.
ಮಂಗಳೂರಿನಲ್ಲಿ ಕೊಂಕಣಿ ಪರಂಪರೆಯ ಆಚರಣೆ: ಕೊಂಕಣಿ ಮಾನ್ಯತಾ ದಿವಸ್ ಮತ್ತು ಪುಸ್ತಕ ಪುರಸ್ಕಾರ-2024 / Celebrating Konkani Heritage: Konkani Manyata Divas and Pustak Puraskar-2024 Held in Mangaluru
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಕೊಂಕಣಿ ಮಾನ್ಯತಾ ದಿವಸ್ ಮತ್ತು ಕೊಂಕಣಿ ಪುಸ್ತಕ ಪುರಸ್ಕಾರ-2024 ಅನ್ನು ಮಂಗಳವಾರ, ಆಗಸ್ಟ್ 20 ರಂದು ಮಂಗಳೂರಿನ ಪುರಭವನದಲ್ಲಿ ಆಚರಿಸಿತು.
ಕಾರ್ಯಕ್ರಮದಲ್ಲಿ ಎಂಎಲ್ ಸಿ ಐವನ್ ಡಿಸೋಜ ಮಾತನಾಡಿ, ಕೊಂಕಣಿ ಸಂಗೀತ ಮತ್ತು ಸಂಸ್ಕೃತಿಗೆ ಎರಿಕ್ ಒಜಾರಿಯೊ ಅವರ ಮಹತ್ವದ ಕೊಡುಗೆಯನ್ನು ಎತ್ತಿ ಹೇಳಿದರು. “ಇಂದು ನಾವು ಕೊಂಕಣಿ ಮಾನ್ಯತಾ ದಿವಸ್ ಮತ್ತು ಕೊಂಕಣಿ ಸಂಗೀತದಲ್ಲಿ ಎರಿಕ್ ಒಜಾರಿಯೊ ಅವರ ಕೊಡುಗೆಗಳನ್ನು ಆಚರಿಸುತ್ತೇವೆ. ನಮ್ಮ ಸಾಧನೆಗಳ ಬಗ್ಗೆ ನಾವು ಹೆಮ್ಮೆಪಡುತ್ತೇವೆ ಮತ್ತು ಒಂದು ದಿನ ಕೊಂಕಣಿಯಲ್ಲಿ ಸಂಸತ್ತಿಗೆ ಈ ಕೊಡುಗೆಗಳನ್ನು ಪ್ರಸ್ತುತಪಡಿಸುತ್ತೇವೆ ಎಂದು ಭಾವಿಸುತ್ತೇವೆ” ಎಂದು ಡಿಸೋಜಾ ಹೇಳಿದರು.
ಅವರು ಅಕಾಡೆಮಿಯ ನಾಯಕತ್ವವನ್ನು ಶ್ಲಾಘಿಸಿದರು ಮತ್ತು ಕೊಂಕಣಿ ಭಾಷೆಗೆ ಒಜಾರಿಯೊ ಅವರ ದೃಢವಾದ ಬೆಂಬಲವನ್ನು ಗಮನಿಸಿದರು. ಹಿಂದಿನ ಸಂವಾದವನ್ನು ಪ್ರತಿಬಿಂಬಿಸಿದ ಡಿಸೋಜಾ, ಕೊಂಕಣಿ ಕಾರ್ಯಕ್ರಮಗಳಿಗೆ ಸಮಸ್ಯೆಗಳನ್ನು ಸೃಷ್ಟಿಸುವವರನ್ನು ನಿರ್ಲಕ್ಷಿಸುವ ಕುರಿತು ಒಜಾರಿಯೊ ಅವರ ಟೀಕೆಗಳನ್ನು ನೆನಪಿಸಿಕೊಂಡರು, ಇದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಿಂದ ಅನುವಾದ ವಿನಂತಿಗೆ ಕಾರಣವಾಯಿತು.ಡಿಸೋಜಾ ಅವರು ಅಕಾಡೆಮಿಯ ಬೆಳವಣಿಗೆಯ ಸಾಮರ್ಥ್ಯವನ್ನು ಒತ್ತಿ ಹೇಳಿದರು ಮತ್ತು ಹೆಚ್ಚಿನ ಕೊಂಕಣಿ ಭಾಷಾ ಪುಸ್ತಕಗಳು, ನ್ಯಾಯೋಚಿತ ಪ್ರಶಸ್ತಿ ವಿತರಣೆ ಮತ್ತು ಕಾಲೇಜುಗಳಲ್ಲಿ ಕೊಂಕಣಿ ಕಲಿಸಲು ಉತ್ತಮ ಸೌಲಭ್ಯಗಳ ಅಗತ್ಯವನ್ನು ಒತ್ತಿ ಹೇಳಿದರು. ಅವರು ಕೊಂಕಣಿಯಲ್ಲಿ ಸಂಸತ್ತನ್ನು ಉದ್ದೇಶಿಸಿ ತಮ್ಮ ಅನುಭವವನ್ನು ಮತ್ತು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಕೊಂಕಣಿಯಲ್ಲಿ ಎಂಎ ಕಾರ್ಯಕ್ರಮವನ್ನು ಸ್ಥಾಪಿಸುವ ತಮ್ಮ ಬದ್ಧತೆಯನ್ನು ಪ್ರಸ್ತಾಪಿಸಿದರು.
ಕೊಂಕಣಿ ಅಕಾಡೆಮಿಯ ಗೌರವಕ್ಕೆ ಮಾಂಡ್ ಸೊಭಾಣ್ ಗುರ್ಕರ್ ಎರಿಕ್ ಒಜಾರಿಯೊ ಕೃತಜ್ಞತೆ ಸಲ್ಲಿಸಿದರು. ಕೊಂಕಣಿ ಅಕಾಡೆಮಿಯು ನನ್ನನ್ನು ಸನ್ಮಾನಿಸಿರುವುದು ಸಂತಸ ತಂದಿದೆ.ಇ ದು ಕೇವಲ ಸಾಹಿತ್ಯ ಅಕಾಡೆಮಿ ಮಾತ್ರವಲ್ಲ ಕೊಂಕಣಿ ಅಕಾಡೆಮಿ ಎಂದು ಸರ್ಕಾರಕ್ಕೆ ಪದೇ ಪದೇ ನೆನಪಿಸುತ್ತಿದ್ದೇನೆ. ಕೊಂಕಣಿಯಲ್ಲಿ ಎಂಎ ಪದವಿಯನ್ನು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಮತ್ತು ಉಪಕುಲಪತಿಗಳೊಂದಿಗೆ ಮಾತುಕತೆ ನಡೆಸಬೇಕು. ಮಂಗಳೂರು ವಿಶ್ವವಿದ್ಯಾನಿಲಯವು ಈ ಕಾರ್ಯಕ್ರಮವನ್ನು ಜಾರಿಗೆ ತರಲು” ಒಜಾರಿಯೊ ಹೇಳಿದರು.
ಕೊಂಕಣಿ ಪುಸ್ತಕ ಪ್ರಶಸ್ತಿ-2024 ಅನ್ನು ರೋಶನ್ ಮೆಲ್ಕಿ ಸಿಕ್ವೇರಾ ಮತ್ತು ಫ್ರಾನ್ಸಿಸ್ ರೋಡ್ರಿಗಸ್ ಅವರಿಗೆ ನೀಡಲಾಯಿತು.
ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೊಕೀಮ್ ಸ್ಟ್ಯಾನಿ ಅಲ್ವಾರಿಸ್ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರಾಯ್ ಕ್ಯಾಸ್ಟೊಲಿನೊ ಉಪಸ್ಥಿತರಿದ್ದರು; ಪುತ್ತೂರಿನ ಎಸ್ ಪಿಎಂ ಕಾಲೇಜಿನ ಪ್ರೊ.ಸ್ಟೀವನ್ ಕ್ವಾಡ್ರಸ್; ಕೊಂಕಣಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ. ರೊನಾಲ್ಡ್ ಕ್ರಾಸ್ಟಾ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಸದಸ್ಯರು ಮತ್ತು ಇನ್ನಿತರರು ಉಪಸ್ಥಿರಿದ್ದರು.
Celebrating Konkani Heritage: Konkani Manyata Divas and Pustak Puraskar-2024 Held in Mangaluru
Mangaluru : The Karnataka Konkani Sahitya Academy celebrated Konkani Manyata Divas and the Konkani Pustak Puraskar-2024 on Tuesday, August 20, at Town Hall, Mangaluru.
MLC Ivan D’Souza spoke at the event, highlighting the significant contributions of Eric Ozario to Konkani music and culture. “Today we celebrate Konkani Manyata Divas and the contributions of Eric Ozario in Konkani music. We feel proud of our achievements and hope to one day present these contributions to Parliament in Konkani,” D’Souza said.
He praised the Academy’s leadership and noted Ozario’s steadfast support for the Konkani language. Reflecting on a past interaction, D’Souza recalled Ozario’s remarks about ignoring those who create problems for Konkani programmes, which led to a translation request from former chief minister Veerappa Moily.
D’Souza emphasised the Academy’s potential for growth and stressed the need for more Konkani language books, fair award distribution, and better facilities for teaching Konkani in colleges. He also mentioned his experience addressing Parliament in Konkani and his commitment to establishing an MA programme in Konkani at Mangalore University.
Eric Ozario, Gurkar of Maand Shoban, expressed his gratitude for the honour from the Konkani Academy. “I am pleased that the Konkani Academy has honoured me. I have repeatedly reminded the government that this is not just a Sahitya Academy but a Konkani Academy. We should encourage students to adopt an MA in Konkani and initiate talks with the vice-chancellor of Mangalore University to implement this programme,” Ozario said.
The Konkani Book Award-2024 was presented to Roshan Melki Sikkera and Fr Francis Rodriguez.
Jochim Stany Alvarez, president of the Konkani Sahitya Academy, welcomed the gathering.
The event was attended by Roy Castolino, former president of the Konkani Sahitya Academy; Prof Stevan Quadrus of SPM College, Puttur; Rajesh G, registrar of the Konkani Sahitya Academy; Ronald Crasta, member moderator, and others.
ಸಂಗೀತ ಭಾರತಿ ಟ್ರಸ್ಟ್ (ರಿ.) ಕುಂದಾಪುರ ಆಶ್ರಯದಲ್ಲಿ ಸಿತಾರ್ ವಾದನ ಹಾಗೂ ಗಾಯನ
ಸಂಗೀತ ಭಾರತಿ ಟ್ರಸ್ಟ್ (ರಿ.) ಕುಂದಾಪುರ ಆಶ್ರಯದಲ್ಲಿ ದಿ| ಎ. ವಿ. ಹೆಬ್ಬಾರ್ ಹಾಗೂ ದಿ| ಅವಿನಾಶ ಹೆಬ್ಬಾರ್ ಸಂಸ್ಮರಣೆಯಲ್ಲಿ ಆ. 25 ರಂದು ಹಿಂದುಸ್ತಾನಿ ಸೀತಾರ್ ವಾದನ ಹಾಗೂ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕುಂದಾಪುರ ಪಾರಿಜಾತ ಹೋಟೆಲ್ನ ಪದ್ಮಾವತಿ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಭಾರ್ಗವ ಹೆಗಡೆ ಶಿರಸಿ, ಸಿತಾರ್ ವಾದನದ ಮೂಲಕ ಶೋತೃವರ್ಗದವರನ್ನು ರಂಜಿಸಲಿದ್ದಾರೆ. ವಿಘ್ನೇಶ ಕಾಮತ್ ಕೋಟೇಶ್ವರ ತಬಲಾದಲ್ಲಿ ಸಹಕರಿಸಲಿದ್ದಾರೆ.
ಕು. ನಿಹಾರಿಕಾ ದೇರಾಜೆ ಹಿಂದುಸ್ತಾನಿ ಗಾಯನದ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸುವರು. ಶಶಿಕಿರಣ್ ಮಣಿಪಾಲ್ ಹಾರ್ಮೋನಿಯಂನಲ್ಲಿ ಸಹಕರಿಸಲಿದ್ದಾರೆ. ಸಂಗೀತಾಸಕ್ತರು ಪಾಲ್ಗೊಳ್ಳಬೇಕೆಂದು ಆಹ್ವಾನಿಸಲಾಗಿದೆ
ಲಯನ್ಸ್ನಿಂದ ಅತಿವೃಷ್ಠಿ ಭಾದಿತ ಕುಟುಂಬಗಳಿಗೆ ಕಿಟ್ ವಿತರಣೆ
ಕುಂದಾಪುರ: ಲಯನ್ಸ್ ಜಿಲ್ಲೆ ವತಿಯಿಂದ ಅತಿವೃಷ್ಠಿಯಿಂದ ನಷ್ಟ ಹೊಂದಿದ ಬಡ ಕುಟುಂಬದವರಿಗೆ ಆಹಾರದ ಕಿಟ್ ನೀಡುವ ಕಾರ್ಯಕ್ರಮ ಆ.18 ರಂದು ಕುಂದಾಪುರ ಭಂಡಾರ್ಕಾರ್ಸ್ ಕಾಲೇಜಿನ ರಾಧಾಬಾೈರಮಣ ಪ್ರಭು ಸಭಾಂಗಣದಲ್ಲಿ ನಡೆಯಿತು.
ಲಯನ್ಸ್ ಜಿಲ್ಲೆ 317ಸಿ, ವಲಯ 5 ಹಾಗೂ 6ರ ವ್ಯಾಪ್ತಿಯಲ್ಲಿರುವ ಫಲಾನುಭವಿಗಳಿಗೆ ಲಯನ್ಸ್ ಕ್ಲಬ್ ಇಂಟರ್ನ್ಯಾಶನಲ್ ಫೌಂಡೇಶನ್ ವತಿಯಿಂದ ನೀಡಲ್ಪಟ್ಟ ಆರ್ಥಿಕ ಸಹಾಯವನ್ನು, ಆಹಾರ ಸೌಲಭ್ಯ ಒದಗಿಸುವ ಮೂಲಕ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್ ಹಾಗೂ ಡಿಸ್ಟ್ರಿಕ್ಟ್ ಅಂಬಾಸಿಡರ್ ಅರುಣ ಕುಮಾರ್ ಹೆಗ್ಡೆ ನೇತೃತ್ವದಲ್ಲಿ ವಿತರಣಾ ಕಾರ್ಯಕ್ರಮ ನಡೆಯಿತು. ಲಯನ್ಸ್ ಜಿಲ್ಲೆಯ 21 ಕ್ಲಬ್ಗಳ ವ್ಯಾಪ್ತಿಯಲ್ಲಿರುವ 189 ಕುಟುಂಬಗಳನ್ನು ಆಯ್ಕೆ ಮಾಡಲಾಗಿದ್ದು, ಗ್ರಾಮೀಣ ಪ್ರದೇಶದ ಜನರಲ್ಲಿ ಆತ್ಮ ವಿಶ್ವಾಸ ತುಂಬಲಾಯಿತು. “ಜನರ ಸಂಕಷ್ಟದ ಸಮಯದಲ್ಲಿ ಲಯನ್ಸ್ ಅವರ ಸಹಾಯಕ್ಕೆ ಧಾವಿಸುತ್ತದೆ.” ಎಂದು ಗವರ್ನರ್ ಮಹಮ್ಮದ್ ಹನೀಫ್ ಹೇಳಿದರು.
ಲಯನ್ಸ್ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಗವರ್ನರ್ಗಳಾದ ಲಯನ್ ವಿ. ಜಿ. ಶೆಟ್ಟಿ, ಪ್ರಥಮ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಸ್ವಪ್ನಾ ಸುರೇಶ, ದ್ವಿತೀಯ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ರಾಜೀವ ಕೋಟ್ಯಾನ್, ರಿಜನಲ್ ಚೇರ್ ಪರ್ಸನ್ ಸೋಮನಾಥ ಹೆಗ್ಡೆ, ಜಗದೀಶ ಶೆಟ್ಟಿ, ವಲಯ ಮುಖ್ಯಸ್ಥರಾದ ಬಾಲಕೃಷ್ಣ ಶೆಟ್ಟಿ, ಡಾ| ಶಿವ ಕುಮಾರ್ ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಜ್ನೇಶ ಪ್ರಭು ಸ್ವಾಗತಿಸಿದರು. ರಮಾನಂದ ಕೆ. ಕಾರ್ಯಕ್ರಮ ನಿರ್ವಹಿಸಿದರು.
ಮಿಲಾಗ್ರಿಸ್ ಸೌರ್ಹಾದ ಸೊಸೈಟಿಯಿಂದ ಕುಂದಾಪುರ ಚೈತನ್ಯ ಸ್ಪೆಷಲ್ ಶಾಲೆಗೆ ಕಲಿಕಾ ಸಾಮಾಗ್ರಿಗಳ ಕೊಡುಗೆ
ಕುಂದಾಪುರ, ಅ.20:ಮಿಲಾಗ್ರಿಸ್ ಕ್ರೆಡಿಟ್ ಸೌರ್ಹಾದ್ ಕೋ-ಆಪ್ ಸೊಸೈಟಿ ಲಿ. ಇವರಿಂದ ಎಲ್ಲಾ 40ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳನ್ನು ಕೊಡಮಾಡಿತು.
ಈ ಕೊಡುಗೆಯ ಸಮಾರಂಭಕ್ಕೆ ಸ್ಥಳೀಯ ರೋಜರಿ ಚರ್ಚಿನ ಧರ್ಮಗುರು ಅ|ವಂ|ಪಾವ್ಲ್ ರೇಗೊ ಮುಖ್ಯ ಅಥಿತಿಗಳಾಗಿ ಆಗಮಿಸಿ ವಿಶೇಷ ಚೈತನ್ಯ ಮಕ್ಕಳಿಗೆ ಕೊಡುಗೆಯನ್ನು ವಿತರಿಸಿ ‘ದೇವರಿಗೆ ಎಲ್ಲರೂ ಸಮಾನರು, ದೇವರು ಎಲ್ಲರನ್ನು ಪ್ರೀತಿಸುತ್ತಾರೆ, ನಾವುಗಳು ಮಾತ್ರ ಅಸಮಾನತೆಯಿಂದ ನೋಡುತ್ತೇವೆ, ವಿಶೇಷ ಮಕ್ಕಳಿಗೆ ನೋಡಿಕೊಳ್ಳುವ ಶಿಕ್ಷಕರು, ಶಿಕ್ಷಕೇತರರ ಸೇವೆ ದೇವರು ಮೆಚ್ಚುವಂತಹ ಕೆಲಸ, ಇದು ದೇವರ ಕೆಲಸ, ನಿಮ್ಮ ಪ್ರಯತ್ನಗಳಿಂದ ಈ ಮಕ್ಕಳು ಸಮಾಜದಲ್ಲಿ ಒಳ್ಳೆಯ ಕೆಲಸಮಾಡುವಂತಹ ಉತ್ತಮ ಕೆಲಸ ಮಾಡುತ್ತೀರಿ, ಈ ಶಾಲೆಯ ಆಡಳಿತ ಮಂಡಳಿಗೆ ಮತ್ತು ಶಿಕ್ಷಕರು, ಶಿಕ್ಷಕೇತರರಿಗೆ ನಿಮಗೆ ಶುಭವನು ಕೋರುತ್ತೇವೆ ಹಾಗೇ ಮಿಲಾಗ್ರಿಸ್ ಕ್ರೆಡಿಟ್ ಸೊಸೈಟಿ ಬರೆ ಲಾಭವನ್ನು ನೋಡದೆ, ಅವರಿಗೆ ಸಿಕ್ಕ ಲಾಭದಲ್ಲಿ ಕೆಲ ಭಾಗವನ್ನು ಇಂತಹ ಮಕ್ಕಳಿಗೆ ಕಲಿಕಾ ಸಾಮಾಗ್ರಿಕೊಟ್ಟು ಉತ್ತಮ ಕೆಲಸವನ್ನು ಮಾಡುತ್ತಾರೆ, ದೇವರು ಅವರ ಮೇಲಿ ಆಶಿವದಿಸಲಿ, ಇನ್ನು ಹೆಚ್ಚಿನ ಸಹಾಯ ಮಾಡಲು ಸಹಕಾರ ನೀಡಲಿ, ಅವರ ಆಡಳಿತ ಮಂಡಳಿಗೂ ಶುಭವನ್ನು ಕೋರುತ್ತೇನೆ’ ಅವರ ಸಂದೇಶದಲ್ಲಿ ತಿಳಿಸಿದರು.
ಸೊಸೈಟಿಯ ಕುಂದಾಪುರ – ಭಟ್ಕಳ ವಿಭಾಗದ ಅಭಿವ್ರದ್ದಿ ಅಧಿಕಾರಿ ರೋಹಿತ್ ಮೋಗೆರಾ, ನಮ್ಮ ಸೊಸೈಟಿ ಬರೆ ಲಾಭವನ್ನು ನೋಡದೆ, ಸಾಮಜದ ಒಳಿತಿಗಾಗಿ ಇಂತಹ ಸಹಾಯವನ್ನು ವರ್ಷಪ್ರತಿ ಮಾಡಿಕೊಂಡು ಬರುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಸೊಸೈಟಿಯ ನಿರ್ದೇಶಕರಾದ ಮೈಕಲ್ ಡಿಸೋಜಾ, ಉಪಸ್ಥಿತರಿದ್ದರು.
ಶಾಲೆಯ ಪ್ರಾಂಶುಪಾಲರಾದ ಲೀಲಾವತಿ ಕರ್ಕಡ ವಿಶೇಷ ಶಾಲೆಯ ಬಗ್ಗೆ ತಿಳಿಸಿ ಈ ಚೈತನ್ಯ ವಿಶೇಷ ಶಾಲೆ ಶೋಭಾ ಪಿ. ಸೋನ್ಸ್ ಅವರ ಕಾಳಜಿಯಿಂದ 1997 ರಲ್ಲಿ ಹುಟ್ಟಿತು, ಮೊದಲು ಮಕ್ಕಳಿಂದ ಆರಂಭವಾಗಿ ಇಂದು 40 ಮಂದಿ ಮಕ್ಕಳಿದ್ದಾರೆ. ಮೆನೇಜಿಂಗ್ ಟ್ರಸ್ಟಿಯಾಗಿ ಶೋಭಾ ಪಿ. ಸೋನ್ಸ್ ಮತ್ತು ಕಾರ್ಯದರ್ಶಿಯಾಗಿ ಸುಜಾತ ನೆಕೆತ್ರಾಯ ಆಡಳಿತ ಮಂಡಳಿಯಲ್ಲಿ ಸೇವೆ ಸಲ್ಲಿಸುತಿದ್ದಾರೆ, ಈ ಶಾಲೆಗೆ ಸರಕಾರದಿಂದ ಸ್ವಲ್ಪ ಅನುದಾನ ಸಿಗುತ್ತದೆ ಮತ್ತು ದಾನಿಗಳ ಸಹಕಾರದಿಂದ ಈ ಶಾಲೆ ನಡೆಯುತ್ತದೆ, ಇಲ್ಲಿ 9 ಜನ ಶಿಕ್ಷಕರು -ಶಿಕ್ಷಕೇತರ ಸಿಬಂದಿ ಸೇವೆ ಮಾಡುತ್ತಾರೆಂದು ತಿಳಿಸಿ ಧನ್ಯವಾದಗಳನ್ನು ನೀಡಿದರು.
ಮಿಲಾಗ್ರಿಸ್ ಸೊಸೈಟಿಯ ಸಿಬಂದಿಗಳಾದ ಪ್ರವೀಕಾ ಬರೆಟ್ಟೊ ಸ್ವಾಗತಿಸಿದರು, ಶ್ವೇತಾ ದೆವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪುರ ಕೋಡಿಯಲ್ಲಿ ಕೊಂಕಣಿ ಖಾರ್ವಿ ಸಮಾಜದಿಂದ ಸಮುದ್ರ ಪೂಜೆ
ಕುಂದಾಪುರ: ಕೊಂಕಣಿ ಖಾರ್ವಿ ಸಮಾಜದ ವತಿಯಿಂದ ಕೋಡಿ ಸಮುದ್ರ ಕಿನಾರೆಯಲ್ಲಿ ಸೋಮವಾರ ಸಮುದ್ರ ಪೂಜೆ ಜರುಗಿತು. ಉತ್ತಮ ಮಳೆ ಬೆಳೆ, ಮತ್ಸ್ಯ ಸಮೃದ್ಧಿ ಹಾಗೂ ಲೋಕ ಕಲ್ಯಾಣಾರ್ಥ ಪ್ರಾರ್ಥನೆ ಸಲ್ಲಿಸಲಾಯಿತು. ಖಾರ್ವಿಕೇರಿ ಶ್ರೀಮಹಾಕಾಳಿ ಅಮ್ಮನವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಅಜಂತ ಖಾರ್ವಿ ಪೂಜೆಯ ನೇತೃತ್ವವಹಿಸಿದ್ದರು.
ದೇವಳದ ಪ್ರಧಾನ ಅರ್ಚಕರಾದ ಸುಮಂತ್ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ದೇವಳದ ಉಪಾಧ್ಯಕ್ಷರಾದ ಪ್ರಕಾಶ್ ಆರ್ ಖಾರ್ವಿ, ಮುಕ್ತೇಸರರದ ಆನಂದ ನಾಯ್ಕ, ಸಲಹೆಗಾರರಾದ ಜಯಾನಂದ ಖಾರ್ವಿ, ಕಾರ್ಯದರ್ಶಿ ನಾಮದೇವ ಖಾರ್ವಿ ಖಜಾಂಚಿ ರಾಜು ನಾಯ್ಕ್ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸಂತೋಷ್ ಖಾರ್ವಿ ಹಾಗೂ ಶ್ರೀ ಮಹಾಕಾಳಿ ದೇವಸ್ಥಾನದ ಆಡಳಿತ ಮಂಡಳಿ ನಿರ್ದೇಶಕರು ಮಹಾಕಾಳಿ ಮಹಿಳಾ ಮಂಡಳಿ ಸದಸ್ಯರು ನವರಾತ್ರಿ ಉತ್ಸವದ ಸದಸ್ಯರು ವಿದ್ಯಾರಂಗ ಮಿತ್ರ ಮಂಡಳಿ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಉಸ್ತುವಾರಿಯನ್ನು ಸುನಿಲ್ ಖಾರ್ವಿ ತಲ್ಲೂರು ನಿರ್ವಹಿಸಿದರು.
ಸೇಂಟ್ ಅಲೋಶಿಯಸ್ ಟೋಸ್ಟ್ ಮಾಸ್ಟರ್ಸ್ ಕ್ಲಬ್ ನೂತ ಕಾರ್ಯಕಾರಿ ಸಮಿತಿ ರಚನೆ / St. Aloysius Toastmasters Club Installs New Executive Committee
ಮಂಗಳೂರು : ಸೇಂಟ್ ಅಲೋಶಿಯಸ್ ಟೋಸ್ಟ್ಮಾಸ್ಟರ್ಸ್ ಕ್ಲಬ್ ತನ್ನ ನೂತನ ಸಮಿತಿಯ ಪದಗ್ರಹಣ ಸಮಾರಂಭವನ್ನು ಸೇಂಟ್ ಅಲೋಶಿಯಸ್ ಡೀಮ್ಡ್ ಯೂನಿವರ್ಸಿಟಿಯಲ್ಲಿ ನಡೆಸಿತು. ಕಾರ್ಯಕ್ರಮದಲ್ಲಿ ಉಪಕುಲಪತಿ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ರಿಜಿಸ್ಟ್ರಾರ್ ಡಾ.ಅಲ್ವಿನ್ ಡೆಸಾ, ಅಡ್ಮಿನ್ ಬ್ಲಾಕ್ ನ ನಿರ್ದೇಶಕ ಡಾ.ಚಾರ್ಲ್ಸ್ ವಿ.ಫುರ್ಟಾಡೊ, ಕಸ್ಟಮ್ಸ್ ಅಧೀಕ್ಷಕ ಶ್ರೀ.ಲಯೋನೆಲ್ ಫೆರ್ನಾಂಡಿಸ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಇವರು ಮುಖ್ಯ ಅತಿಥಿಗಳಾಗಿದ್ದರು.
ಟಿ.ಎಂ.ಪ್ರಿಯದರ್ಶಿನಿ ಕಾರ್ಯಕ್ರಮವನ್ನು ನಿರ್ವಹಿಸಿದರು, ಮತ್ತು ಟಿ.ಎಂ.ಆಂಡ್ರ್ಯೂ ಕಾರ್ಯದರ್ಶಿ ವರದಿಯನ್ನು ಮಂಡಿಸಿದರು. ಎಫ್ ವಿಭಾಗದ ನಿರ್ದೇಶಕಿ, ಡಿಟಿಎಂ ಜ್ಯೋತಿಕಾ ಶೆಟ್ಟಿ, ಅಧ್ಯಕ್ಷೆ ಟಿಎಂ ಜೂಲಿಯಾ ವೆಗಾಸ್ ನೇತೃತ್ವದಲ್ಲಿ ನೂತನವಾಗಿ ಆಯ್ಕೆಯಾದ ಕಾರ್ಯಕಾರಿ ಸಮಿತಿಗೆ ಪ್ರಮಾಣ ವಚನ ಬೋಧಿಸಿದರು. ಸಮಿತಿಯ ಸದಸ್ಯರು:
ಟಿಎಂ ಕೋರಲ್ ರೇಗೋ, ಉಪಾಧ್ಯಕ್ಷ ಶಿಕ್ಷಣ
ಟಿ ಎಮ್ ಡೀಯಾನ್, ಉಪಾಧ್ಯಕ್ಷ ಸದಸ್ಯತ್ವ
ಟಿ.ಎಂ.ಅನ್ವಿತಾ ಡಿಕುನ್ಹಾ, ಸಾರ್ವಜನಿಕ ಸಂಪರ್ಕ ಉಪಾಧ್ಯಕ್ಷ
ಟಿ ಎಮ್ ಆಂಡ್ರ್ಯೂ ಫೆರ್ನಾಂಡಿಸ್, ಕಾರ್ಯದರ್ಶಿ
ಟಿ ಎಮ್ ಜೇಡನ್ ಫೆರ್ನಾಂಡಿಸ್, ಸಾರ್ಜೆಂಟ್ ಅಟ್ ಆರ್ಮ್ಸ್
ಟಿಎಂ ಜೂಡ್ ಡಿಸೋಜ, ಖಜಾಂಚಿ
ಟಿ.ಎಂ.ಪ್ರಿಯದರ್ಶಿನಿ, ನಿಕಟಪೂರ್ವ ಅಧ್ಯಕ್ಷೆ
ಪ್ರತಿಷ್ಠಾಪನೆಯ ನಂತರ ಮುಖ್ಯ ಅತಿಥಿಗಳು, ಉಪಕುಲಪತಿಗಳು ಮತ್ತು ರಿಜಿಸ್ಟ್ರಾರ್ ಅವರು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು, ನಂತರ ನಿಕಟಪೂರ್ವ ಅಧ್ಯಕ್ಷರಾದ ಟಿ.ಎಂ.ಪ್ರಿಯದರ್ಶಿನಿ ಅವರ ಮಾತುಗಳನ್ನು ಹೇಳಿದರು.
ಈ ಸಂದರ್ಭದಲ್ಲಿ, ವಿಭಾಗದ ನಿರ್ದೇಶಕರು ಸೂಪರ್ 7 ಮತ್ತು ಅಧ್ಯಕ್ಷರ ಡಿಸ್ಟಿಂಗ್ವಿಶ್ಡ್ ಕ್ಲಬ್ ಪ್ರಶಸ್ತಿಗಳನ್ನು ಒಳಗೊಂಡಂತೆ ಕ್ಲಬ್ನ ಇತ್ತೀಚಿನ ಸಾಧನೆಗಳನ್ನು ಘೋಷಿಸಿದರು.
ಚಾರ್ಟರ್ ಸದಸ್ಯರಾಗಿ ಬೆಂಬಲ ನೀಡಿದ ವೈಸ್ ಚಾನ್ಸೆಲರ್ ಮತ್ತು ರಿಜಿಸ್ಟ್ರಾರ್ ಅವರ ವಿಶೇಷ ಮನ್ನಣೆಯೊಂದಿಗೆ ಸಮಾರಂಭವು ಕೊನೆಗೊಂಡಿತು. ಔಪಚಾರಿಕ ಕಾರ್ಯಕ್ರಮದ ನಂತರ, ಪಾಲ್ಗೊಳ್ಳುವವರು ಕ್ಲಬ್ನ ಸಾಧನೆಗಳನ್ನು ಸಂಪರ್ಕಿಸಲು ಮತ್ತು ಆಚರಿಸಲು ನೆಟ್ವರ್ಕಿಂಗ್ ಅಧಿವೇಶನವನ್ನು ಆನಂದಿಸಿದರು.
St. Aloysius Toastmasters Club Installs New Executive Committee
The St. Aloysius Toastmasters Club held its Installation Ceremony at St. Aloysius Deemed to be University. The event was graced by the presence of distinguished guests, including Vice Chancellor Rev. Dr. Praveen Martis SJ, Registrar Dr. Alwyn D’Sa, Dr. Charles V. Furtado, Director of the Admin Block, and Customs Superintendent Mr. Lionel Fernandes, who served as the Chief Guest.TM Priyadarshini hosted the event, and TM Andrew presented the Secretary’s report. Division F Director, DTM Jyothika Shetty, administered the oath to the newly elected executive committee, led by President TM Julia Veigas. The committee members are:
TM Coral Rego, Vice President Education, TM Deion, Vice President Membership, TM Anvita Dcunha, Vice President Public Relations, TM Andrew Fernandes , Secretary, TM Jaden Fernandes, Sergeant at Arms, TM Jude Dsouza,Treasurer, TM Priyadarshini, Immediate Past President
After the installation, the Chief Guest, Vice Chancellor, and Registrar shared their thoughts, followed by remarks from the Immediate Past President, TM Priyadarshini.
During the event, the Division Director also announced the club’s recent achievements, including the Super 7 and President’s Distinguished Club awards.
The ceremony ended with a special recognition of the Vice Chancellor and Registrar for their support as Charter members. After the formal program, attendees enjoyed a networking session to connect and celebrate the club’s accomplishments.
ಆಶಾ,ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸರಿಗೆ ಜಾಗೃತಿ ಕಾರ್ಯಾಗಾರ ಬಾಲ್ಯವಿವಾಹ, ಪೋಕ್ಸೋ ಪ್ರಕರಣ ತಡೆಗೆ ಜನರಿಗೆ ಅರಿವು ಮೂಡಿಸಿ-ಅಕ್ರಂಪಾಷಾ
ಕೋಲಾರ:- ಸಮಾಜದಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ, ಬಾಲ್ಯವಿವಾಹ ತಡೆಯಲು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರು ಹೆಚ್ಚಿನ ಮುತುವರ್ಜಿ ವಹಿಸಬೇಕು, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು,ಪೋಷಕರಿಗೆ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು.
ಜಿಲ್ಲಾಡಳಿತ, ಜಿಪಂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಾಗಿ ನಡೆದ ಒಂದು ದಿನದ ಬಾಲ್ಯವಿವಾಹ ನಿಷೇಧ ಕಾಯಿದೆ-2006 ಹಾಗೂ ಪೋಕ್ಸೋ ಕಾಯಿದೆ-2012ರ ಹಾಗೂ ಮಕ್ಕಳ ಮಾನಸಿಕ ಆರೋಗ್ಯ ಮತ್ತು ಮಕ್ಕಳ ಸಂರಕ್ಷಣಾ ಕಾನೂನುಗಳ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಪ್ರತಿಯೊಬ್ಬರಿಗೂ ಅರಿವು ಅಗತ್ಯವಿದೆ, ನೀವುನಿಮ್ಮ ವ್ಯಾಪ್ತಿಯಲ್ಲಿ ಮಕ್ಕಳ ರಕ್ಷಣೆಗೆ ಇರುವ ಕಾನೂನುಗಳ ಮಾಹಿತಿ ಪಡೆದು ಸಮಾಜಕ್ಕೆ ಅರಿವು ಮೂಡಿಸಿ ಎಂದು ಕಿವಿಮಾತು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ ಎಸ್.ಹೊಸಮನಿ ಮಾತನಾಡಿ, ತಾಯಿಯ ಗರ್ಭದಲ್ಲಿರುವ ಭ್ರೂಣದಿಂದ ಸಾಯುವವರೆಗೂ ಕಾನೂನಿನ ಅಗತ್ಯತೆ ಇದೆ, ದೈನಂದಿನ ಕಾನೂನುಗಳ ಅರಿವು ಪಡೆದರೆ ಮಾತ್ರವೇ ಉತ್ತಮ ಅಪರಾಧ ಮುಕ್ತ ಜೀವನ ನಡೆಸಲು ಸಾಧ್ಯ ಎಂದರು.
ಮಕ್ಕಳನ್ನು ಬಾಲಕಾರ್ಮಿಕರಾಗಿ ದುಡಿಸಿಕೊಳ್ಳುವುದು ಅಪರಾಧ ಎಂದು ಗೊತ್ತಿದ್ದರೂ ತಪ್ಪು ಮಾಡುತ್ತಿದ್ದಾರೆ, ಇದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದ್ದು, ಇಂತಹ ಪ್ರಕರಣಗಳು ಗಮನಕ್ಕೆ ಬಂದಾಗ 1098 ಹಾಗೂ 112 ಸಹಾಯವಾಣಿಯ ಉಪಯೋಗ ಪಡೆಯುವಂತಾಗಬೇಕು ಈ ಕುರಿತು ಅರಿವು ಅಗತ್ಯ ಎಂದ ಅವರು, ಮಕ್ಕಳ ಕಳ್ಳ ಸಾಗಾಣಿಕೆ ವಿರುದ್ದವೂ ಅರಿವು ನೀಡಿ ಎಂದು ಸಲಹೆ ನೀಡಿದರು.
ಪುಸ್ತಕ ರೂಪದಲ್ಲಿರುವ ಕಾನೂನುಗಳನ್ನು ಸಮರ್ಪಕವಾಗಿ ಜಾರಿಗೆ ತರಲು ಪೊಲೀಸ್ ಸಿಬ್ಬಂದಿ ಕೆಲಸ ಮಾಡಬೇಕು, ಶಾಲೆಗಳಲ್ಲಿ ಮಕ್ಕಳಿಗೆ ಅರಿವು ನೀಡುವ ಕೆಲಸವಾಗಬೇಕು ಎಂದು ತಿಳಿಸಿ, ಲಿಂಗ ಪತ್ತೆ ನಿಷೇಧ ಕಾಯಿದೆ, ಹೆಣ್ಣು ಭ್ರೂಣ ಹತ್ಯೆ ಕಾಯಿದೆ, ತಂಬಾಕು ಉತ್ಪನ್ನಗಳ ಕಾನೂನುಗಳ ಕುರಿತು ಮಾಹಿತಿ ನೀಡಿ, 15100 ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ ಬಳಕೆಗೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ.ನಿಖಿಲ್ ಮಾತನಾಡಿ, ಹಳ್ಳಿಗಳಲ್ಲಿ ಕೆಲಸ ಮಾಡುತ್ತಿರುವ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಜವಾಬ್ದಾರಿ ಹೆಚ್ಚಿನದ್ದಾಗಿದೆ, ಮಕ್ಕಳ ಮೇಲೆ ದೌರ್ಜನ್ಯ, ಬಾಲ್ಯವಿವಾಹ ಕಂಡು ಬಂದರೆ ಪೊಲೀಸರಿಗೆ ದೂರು ನೀಡಿ ಎಂದು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಖುಷಿ ಕುಶಾಲಪ್ಪ ಪೋಕ್ಸೋ ಕಾಯಿದೆ ಕುರಿತು ಮಾಹಿತಿ ನೀಡಿದರು. ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಚೈಲ್ಡ್ ರೈಟ್ಸ್ ಟ್ರಸ್ಟ್ನ ಜೆ.ಸತೀಶ್ ಬಾಲ್ಯವಿವಾಹ ಕಾಯಿದೆ ಕುರಿತು ಅರಿವು ಮೂಡಿಸಿದರು.
ಕಾರ್ಯಾಗಾರದಲ್ಲಿ ಜಿಲ್ಲಾಸ್ಪತ್ರೆಯ ಮನೋವೈದ್ಯರಾದ ಡಾ.ವಿಜೇತಾದಾಸ್, ಮಾನಸಿಕ ಆರೋಗ್ಯ ರಕ್ಷಣೆ, ಮಾನಸಿಕ ರೋಗಿಗಳಿಗೆ ಇರುವ ಕಾನೂನುಗಳು, ಅವರ ರಕ್ಷಣೆಗೆ ಕೈಗೊಳ್ಳಬೇಕಾದ ಕ್ರಮಗಳು, ಅವರೊಂದಿಗೆ ನಮ್ಮ ವರ್ತನೆ ಮತ್ತಿತರ ಅಂಶಗಳ ಕುರಿತು ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಗದೀಶ್, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ನಾರಾಯಣಸ್ವಾಮಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ.ನಾಗರತ್ನ ಮತ್ತಿತರರು ಉಪಸ್ಥಿತರಿದ್ದು, 600ಕ್ಕೂ ಹೆಚ್ಚು ಮಂದಿ ಅಂಗನವಾಡಿ,ಆಶಾ ಕಾರ್ಯಕರ್ತೆಯರು, ಬೀಟ್ ಪೊಲೀಸರು ಭಾಗವಹಿಸಿದ್ದರು.