ಕಾರ್ಕಳ, ಅ.27: ಯುವತಿಗೆ ಡ್ರಗ್ಸ್ ನೀಡಿ ಅತ್ಯಾಚಾರ ಎಸಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಮೂರನೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಭಯ್ ಎಂಬವನೆ ಬಂಧಿತ ಆರೋಪಿಯಾಗಿದ್ದು,ಈತ ಬಿಜೆಪಿ ಕಾರ್ಯಕರ್ತ ಎನ್ನಲಾಗಿದೆ, ಉಡುಪಿ ಅತ್ಯಾಚಾರ ಕೇಸನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದ ಬಿಜೆಪಿ, ಹಿಂದೂ ಸಂಘಟನೆಗಳಿಗೆ ಅಭಯ್ ಬಂಧನ ಮುಖ ಭಂಗ ತಂದಿದೆ.
ಅಲ್ಲದೆ ಅಭಯ್ ಅತ್ಯಾಚಾರಿ ಅಲ್ತಾಫ್ಗೆ ಡ್ರಗ್ಸ್ ಪೂರೈಕೆ ಮಾಡಿರುವುದು ತಿಳಿದು ಬಂದಿದ್ದು,ಪೊಲೀಸರು ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.
ಕಾರ್ಕಳದಲ್ಲಿ ಡ್ರಗ್ಸ್ ಬೆರೆಸಿದ ಮದ್ಯ ಕುಡಿಸಿ ಯುವತಿ ಮೇಲೆ ಅತ್ಯಾಚಾರ ಪ್ರಕರಣದ 3ನೇ ಆರೋಪಿ ಅಭಯ್ ಫೇಸ್ಬುಕ್ನಲ್ಲಿ ಶಾಸಕ ಸುನೀಲ್ಕುಮಾರ್ ಫೋಟೋ ಹಾಕಿಕೊಂಡಿದ್ದು, ಬಿಜೆಪಿ, ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದಾನೆ.
ಇತ್ತೀಚೆಗೆ ಈ ಪ್ರಕರಣಕ್ಕೆ ಬಿಜೆಪಿ, ಹಿಂದೂ ಸಂಘಟನೆಗಳು ಲವ್ ಜಿಹಾದ್ ಹಣೆಪಟ್ಟಿ ಕಟ್ಟಿದ್ದರು. ಆದರೆ ಇದೀಗ ತಮ್ಮದೇ ಕಾರ್ಯಕರ್ತ ಈ ಪ್ರಕರಣದಲ್ಲಿ ಭಾಗಿಯಾಗಿರೋದು ಮುಖಭಂಗವಾಗಿದೆ. ಆರೋಪಿ ಅಭಯ್, ಪ್ರಮುಖ ಆರೋಪಿ ಅಲ್ತಾಫ್ ಜೊತೆ ಆತ್ಮೀಯವಾಗಿದ್ದ. ಅತ್ಯಾಚಾರ ನಡೆದ ದಿನ ಅಲ್ತಾಫ್ಗೆ ಡ್ರಗ್ಸ್ ಒದಗಿಸಿದ್ದ. ಅಭಯ್ ಬಂಧನ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ
Month: August 2024
12 ಕೇಂದ್ರಗಳಲ್ಲಿ ಗೆಜೆಟೆಡ್ ಪ್ರೋಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಪರೀಕ್ಷೆ ಯಶಸ್ವಿ ಪರೀಕ್ಷೆಗೆ ನೋಂದಾಯಿಸಿದ್ದ 4422 ಮಂದಿ ಪೈಕಿ 1634 ಮಂದಿ ಗೈರು-ಕೇಂದ್ರಗಳಿಗೆ ಡಿಸಿ,ಎಸ್ಪಿ ಭೇಟಿ
ಕೋಲಾರ:- ನಗರದ 12 ಕೇಂದ್ರಗಳಲ್ಲಿ ನಡೆದ 2023-24 ನೇ ಸಾಲಿನ ಗೆಜೆಟೆಡ್ ಪ್ರೋಬೆಷನರ್ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳ ಪರೀಕ್ಷೆ ಯಾವುದೇ ಗೊಂದಲವಿಲ್ಲದೇ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿದ್ದ 4422 ಅಭ್ಯರ್ಥಿಗಳ ಪೈಕಿ ಬೆಳಗಿನ ಅವಧಿ ಪರೀಕ್ಷೆಗೆ 1630 ಮಂದಿ ಹಾಗೂ ಮಧ್ಯಾಹ್ನದ ಅವಧಿಯ ಪರೀಕ್ಷೆಗೆ 1634 ಮಂದಿ ಗೈರಾಗಿದ್ದು, ಕೇಂದ್ರಗಳಿಗೆ ಜಿಲ್ಲಾಧಿಕಾರಿ ಅಕ್ರಂಪಾಷಾ, ಎಸ್ಪಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರೀಕ್ಷೆಗೆ ಗೈರಾದವರ ಕುರಿತು ಮಾಹಿತಿ ನೀಡಿರುವ ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಕೃಷ್ಣಮೂರ್ತಿ, ಬೆಳಗ್ಗೆ 10ರಿಂದ 12 ರವರೆಗೂ ನಡೆದ ಬೆಳಗಿನ ಅವಧಿಯ ಪರೀಕ್ಷೆಗೆ ನಗರದ 12 ಕೇಂದ್ರಗಳಲ್ಲಿ ಒಟ್ಟು 4422 ಮಂದಿ ನೋಂದಾಯಿಸಿದ್ದು, ಅವರ ಪೈಕಿ 2792 ಮಂದಿ ಹಾಜರಾಗಿದ್ದರು ಮತ್ತು 1630 ಮಂದಿ ಗೈರಾಗಿದ್ದರು ಎಂದು ತಿಳಿಸಿದ್ದಾರೆ.
ಮಧ್ಯಾಹ್ನದ ಅವಧಿಯ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆವರೆಗೂ ನಡೆದಿದ್ದು, ಪರೀಕ್ಷೆಗೆ ನೋಂದಾಯಿಸಿದ್ದ 442 ಮಂದಿ ಪೈಕಿ 2788 ಮಂದಿ ಹಾಜರಾಗಿದ್ದು 1634 ಮಂದಿ ಗೈರಾಗಿದ್ದರು ಎಂದು ತಿಳಿಸಿದ್ದಾರೆ.
ಪರೀಕ್ಷೆ ಯಾವುದೇ ಗೊಂದಲವಿಲ್ಲದೇ ನಡೆದಿದ್ದು, ಜಿಲ್ಲಾಧಿಕಾರಿ ಅಕ್ರಂಪಾಷಾ, ಎಸ್ಪಿ ಬಿ.ನಿಖಿಲ್ ಕೇಂದ್ರಗಳಿಗೆ ಭೇಟಿ ನೀಡಿ ಪರೀಕ್ಷಾ ಸಿದ್ದತೆಗಳು ಮತ್ತು ಪರೀಕ್ಷಾ ವಿಧಾನದ ಕುರಿತು ಪರಿಶೀಲನೆ ನಡೆಸಿದರು.
ಜಿಲ್ಲಾಡಳಿತದಿಂದ ಬಿಗಿ ಬಂದೋಬಸ್ತ್
ಸುಗಮ ಪರೀಕ್ಷೆಗಾಗಿ ಜಿಲ್ಲಾಡಳಿತದಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದ್ದು, ಪರೀಕ್ಷೆಗೆ ಆಗಮಿಸಿದ್ದ ಅಭ್ಯರ್ಥಿಗಳನ್ನು ತಪಾಸಣೆ ನಡೆಸಿದ ನಂತರವೇ ಕೇಂದ್ರದೊಳಕ್ಕೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಯಿತು. ಮಂಗಳಸೂತ್ರ, ಕಾಲುಂಗುರ ಹೊರತುಪಡಿಸಿ ಉಳಿದ ಅಭರಣಗಳ ಧರಿಸಲು ನಿಷೇಧವಿತ್ತು. ಪೂರ್ಣ ತೋಳಿನ ಶರ್ಟ್, ಶೂಹಾಕಿದ್ದರೂ ಪ್ರವೇಶವಿರಲಿಲ್ಲ.
ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಬಂದ್ ಮಾಡಲು ಸೂಚಿಸಲಾಗಿತ್ತು.
12ಕೇಂದ್ರಗಳಲ್ಲಿನ ಹಾಜರಾಗಿ ವಿವರ
ನಗರದ 12 ಕೇಂದ್ರಗಳಲ್ಲಿನ ಹಾಜರಾತಿ ವಿವರ ನೀಡಿರುವ ಅವರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 558 ಮಂದಿ ನೋಂದಾಯಿಸಿದ್ದು 428 ಮಂದಿ ಹಾಜರಾಗಿ 130 ಮಂದಿ ಗೈರಾಗಿದ್ದರು. ಬಾಲಕರಪಿಯು ಕಾಲೇಜು ಕೇಂದ್ರದಲ್ಲಿ 480 ಮಂದಿ ಪೈಕಿ 318 ಮಂದಿ ಹಾಜರಾಗಿ 162 ಮಂದಿ ಗೈರಾಗಿದ್ದರು.
ಬಾಲಕಿಯರ ಪದವಿ ಪೂರ್ವ ಕಾಲೇಜುಕೇಂದ್ರದಲ್ಲಿ 288 ಮಂದಿ ನೋಂದಾಯಿಸಿದ್ದು, 192 ಮಂದಿ ಹಾಜರಾಗಿ 96 ಮಂದಿಗೈರಾಗಿದ್ದರು. ಕಾರಂಜಿಕಟ್ಟೆಯ ಸುಭಾಷ್ ಶಾಲೆಯಲ್ಲಿ 336 ಮಂದಿ ನೋಂದಾಯಿಸಿದ್ದು, 224 ಮಂದಿ ಹಾಜರಾಗಿ 112 ಮಂದಿ ಗೈರಾಗಿದ್ದರು. ಸೆಂಟ್ಆನ್ಸ್ ಶಾಲೆಯಲ್ಲಿ 288 ಮಂದಿ ಪೈಕಿ 171 ಮಂದಿ ಹಾಜರಾಗಿದ್ದು, 117 ಮಂದಿ ಗೈರಾಗಿದ್ದರು.
ಮೆಥೋಡಿಸ್ಟ್ ಶಾಲೆ ಕೇಂದ್ರದಲ್ಲಿ 264 ಮಂದಿ ಪೈಕಿ 153 ಮಂದಿ ಹಾಜರಾಗಿದ್ದು, 111 ಮಂದಿ ಗೈರಾಗಿದ್ದರೆ, ಅಲಮಿನ್ ಕಾಲೇಜು ಕೇಂದ್ರದಲ್ಲಿ 240 ಮಂದಿ ಪೈಕಿ 129 ಮಂದಿ ಹಾಜರಾಗಿದ್ದು, ಅಲ್ಲಿಯೂ 111 ಮಂದಿ ಗೈರಾಗಿದ್ದರು.
ಎಸ್ಡಿಸಿ ಕಾಲೇಜು ಕೇಂದ್ರದಲ್ಲಿ 576 ಮಂದಿ ಪೈಕಿ 238 ಮಂದಿ 338 ಮಂದಿ ಹಾಜರಾಗಿದ್ದು, 238 ಮಂದಿ ಗೈರಾಗಿದ್ದರು. ಚಿನ್ಮಯ ವಿದ್ಯಾಲಯ ಕೇಂದ್ರದಲ್ಲಿ 480 ಮಂದಿ ಪೈಕಿ 305 ಮಂದಿ ಹಾಜರಾಗಿದ್ದು, 175 ಮಂದಿ ಗೈರಾಗಿದ್ದರೆ, ಎಸ್ಡಿಸಿ ಇಂಡಿಪೆಂಡೆಂಟ್ ಕಾಲೇಜಿನಲ್ಲಿ 336 ಮಂದಿ ಪೈಕಿ 199 ಮಂದಿ ಹಾಜರಾಗಿದ್ದು, 137 ಮಂದಿ ಗೈರಾಗಿದ್ದಾರೆ.
ಉಳಿದಂತೆ ಮಹಿಳಾ ಸಮಾಜ ಪ್ರೌಢಶಾಲೆಕೇಂದ್ರದಲ್ಲಿ 336 ಮಂದಿ ಪೈಕಿ 197 ಮಂದಿ ಹಾಜರಾಗಿದ್ದು, 139 ಮಂದಿ ಗೈರಾಗಿದ್ದಾರೆ. ಮಹಿಳಾ ಸಮಾಜ ಪಿಯು ಕಾಲೇಜು ಕೇಂದ್ರದಲ್ಲಿ 240 ಮಂದಿ ಪೈಕಿ 138 ಮಂದಿ ಹಾಜರಾಗಿ 102 ಮಂದಿ ಗೈರಾಗಿದ್ದರು ಎಂದು ತಿಳಿಸಿದ್ದಾರೆ.
ಪರೀಕ್ಷಾ ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದ್ದ ಅಪರ ಜಿಲ್ಲಾಧಿಕಾರಿ ಮಂಗಳಾ ಅವರು, ಪರೀಕ್ಷೆ ಯಶಸ್ವಿಯಾಗಿ ನಡೆಸಲು ಸಹಕಾರ ನೀಡಿ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪರೀಕ್ಷೆ ಕಾರ್ಯಗಳಲ್ಲಿ ಡಿಡಿಪಿಐ ಕೃಷ್ಣಮೂರ್ತಿ, ಶಿಕ್ಷಣಾಧಿಕಾರಿ ವೀಣಾ, ಪರೀಕ್ಷಾ ನೋಡಲ್ ಅಧಿಕಾರಿ ವಿಷಯ ಪರಿವೀಕ್ಷಕ ಶಂಕರೇಗೌಡ,ಕೇಂದ್ರಗಳಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಪ್ರತಿ ಕೇಂದ್ರಕ್ಕೆ ವಿಶೇಷವಾಗಿ ನಿಯೋಜನೆ ಮಾಡಲಾಗಿತ್ತು. 4 ಕೇಂದ್ರಗಳಿಗೆ ಒಬ್ಬ ವೀಕ್ಷಕರು. 3 ಕೇಂದ್ರಗಳಿಗೆ ಒಬ್ಬರು ಮಾರ್ಗಾಧಿಕಾರಿ, ಪ್ರತಿ ಕೇಂದ್ರಕ್ಕೆ ಮುಖ್ಯಅಧೀಕ್ಷಕರು, ಸ್ಥಳೀಯ ನಿರೀಕ್ಷಣಾಧಿಕಾರಿಗಳನ್ನು ನೇಮಿಸಲಾಗಿತ್ತು.
ವಿದ್ಯಾರ್ಥಿಗಳು ಹರ್ಡೀಕರ್ ಅವರ ಆದರ್ಶ ಪಾಲಿಸಬೇಕು- ಕೆ.ಎಸ್.ಗಣೇಶ್
ಕೋಲಾರ:- ಭಾರತ ಸೇವಾದಳ ಸ್ಥಾಪನೆಯ ಮೂಲಕ ದೇಶಪ್ರೇಮ ಸೇವಾ ಮನೋಭಾವವನ್ನು ಸಮಾಜದಲ್ಲಿ ಭಿತ್ತಿದ ನಾರಾಯಣ ಸುಬ್ಬರಾವ್ ಹರ್ಡೀಕರ್ ಅವರ ಆದರ್ಶವನ್ನು ವಿದ್ಯಾರ್ಥಿಗಳು ಪಾಲಿಸುವ ಮೂಲಕ ದೇಶದ ಆಸ್ತಿಯಾಗಿ ಉನ್ನತಿ ಸಾಧಿಸಬೇಕು ಎಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಕರೆ ನೀಡಿದರು.
ನಗರದ ಹಳೇ ಮಾಧ್ಯಮಿಕ ಶಾಲೆ, ಉರ್ದು ಹಿರಿಯಪ್ರಾಥಮಿಕ ಶಾಲೆ, ಸರಕಾರಿ ಪ್ರಾಥಮಿಕ ಶಾಲಾ ಮಕ್ಕಳ ಸಮ್ಮುಖದಲ್ಲಿ ನಾ.ಸು.ಹರ್ಡೀಕರ್ ಅವರ 49ನೇ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕರ್ನಾಟಕದಲ್ಲಿ ಜನಿಸಿ, ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡರೂ ಎದೆಗುಂದದೆ ಸೇವಾ ಮನೋಭಾವನೆ ಮೈಗೂಡಿಸಿಕೊಂಡು, ವೈದ್ಯರಾದ ನಂತರ ಸ್ವಾತಂತ್ರ್ಯ ಚಳವಳಿಗೆ ಧುಮುಕಿ ಬ್ರಿಟೀಷರ ವಿರುದ್ಧ ಸಮರಶೀಲವಾಗಿ ಹೋರಾಡಲು ಹಿಂದೂಸ್ತಾನಿ ಸೇವಾದಳ ಎಂಬ ಸಂಘಟನೆಯನ್ನು ಸ್ಥಾಪಿಸಿದ ಕೀರ್ತಿ ನಾ.ಸು.ಹರ್ಡೀಕರ್ ಅವರಿಗೆ ಸಲ್ಲುತ್ತದೆ ಎಂದರು.
ಸ್ವಾತಂತ್ರ್ಯ ನಂತರ ಹಿಂದೂಸ್ತಾನಿ ಸೇವಾದಳವು ಶಿಕ್ಷಣ ಇಲಾಖೆಯ ಭಾಗವಾಗಿ ಭಾರತ ಸೇವಾದಳವಾಗಿ ಬದಲಾಗಿದೆ, ಜಾತಿ, ಮತ, ಧರ್ಮಗಳ ಬೇಧವಿಲ್ಲದೆ ಪ್ರತಿಯೊಬ್ಬರೂ ಭಾರತೀಯರು, ರಾಷ್ಟ್ರಗೀತೆ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸುವ ವಿಧಾನಗಳ ಕುರಿತು ತರಬೇತಿ ನೀಡುವ ದೇಶದ ಏಕೈಕ ಸಂಸ್ಥೆಯಾಗಿ ಭಾರತ ಸೇವಾದಳ ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು.
ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿ ಎಸ್.ಸುಧಾಕರ್ ಮಾತನಾಡಿ, ಸೇವೆಗಾಗಿ ಬಾಳು ಎಂಬ ಧ್ಯೇಯವಾಕ್ಯದಡಿ ಭಾರತ ಸೇವಾದಳ ಕಾರ್ಯನಿರ್ವಹಿಸುತ್ತಿದ್ದು, ಸೇವಾದಳದ ಜಿಲ್ಲಾ ಗೌರವಾಧ್ಯಕ್ಷ ಸಿಎಂಆರ್ ಶ್ರೀನಾಥ್ ಉರ್ದು ಶಾಲಾ ಮಕ್ಕಳ ನಿತ್ಯ ಪ್ರಯಾಣಕ್ಕೆ ಆರಂಭಿಸಿದ್ದ ಉಚಿತ ಆಟೋ ಸೇವೆಯನ್ನು ಮತ್ತೇ ಮುಂದುವರೆಸುವುದಾಗಿ ಘೋಷಿಸಿದರು.
ಜಿಲ್ಲಾ ಸಮಿತಿ ಸದಸ್ಯ ಆರ್.ಶ್ರೀನಿವಾಸನ್ ಮಾತನಾಡಿ, ಸರಕಾರಿ ಶಾಲಾ ಮಕ್ಕಳು ವಿವಿಧ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ವಿದ್ಯಾಭ್ಯಾಸ ಮಾಡಬೇಕು, ಓದಲು ಹಾಗೂ ಬರೆಯುವುದನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ ಓದಿನಲ್ಲಿ ಮುಂದುವರೆಯಲು ಸಹಕಾರಿಯಾಗುತ್ತದೆ ಎಂಬ ಕಿವಿಮಾತು ಹೇಳಿದರು.
ಮಕ್ಕಳಿಗೆ ಹರ್ಡೀಕರ್ ಸ್ಮರಣೆಯಲ್ಲಿ ಸಿಹಿ ವಿತರಿಸಿದ ಜಿಲ್ಲಾ ಸಮಿತಿ ಸದಸ್ಯ ಕೆ.ಜಯದೇವ್ ಮಾತನಾಡಿ, ಹರ್ಡೀಕರ್ ರೂಪಿಸಿದ ಶಿಸ್ತಿನ ಪಾಠಗಳು ಸ್ವಾತಂತ್ರ್ಯ ಹೋರಾಟದಲ್ಲಿ ಮಾತ್ರವಲ್ಲದೆ ಪ್ರಸ್ತುತ ಹಾಗೂ ಎಲ್ಲಾ ಕಾಲಕ್ಕೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವುದರಿಂದ ಸೇವಾದಳ ಶಿಕ್ಷಣ ಪಡೆದುಕೊಳ್ಳಬೇಕೆಂದರು.
ವೇದಿಕೆಯಲ್ಲಿ ಸೇವಾದಳ ತಾಲೂಕು ಸಮಿತಿ ಕೋಶಾಧ್ಯಕ್ಷ ಶ್ರೀನಿವಾಸಮೂರ್ತಿ, ತಾಲೂಕು ಉಪಾಧ್ಯಕ್ಷ ಗೋಕುಲ ಚಲಪತಿ, ಹಳೇ ಮಾಧ್ಯಮಿಕ ಶಾಲೆಯ ಶಿಕ್ಷಕಿ ಯಶೋಧ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಮತ, ಉರ್ದು ಶಾಲೆಯ ಮುಖ್ಯ ಶಿಕ್ಷಕಿ ಅಪ್ಸರಿ ಹಾಗೂ ಶಿಕ್ಷಕಿ ಅಜ್ರಭಾನು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಾ.ಸು.ಹರ್ಡೀಕರ್ ಭಾವಚಿತ್ರಕ್ಕೆ ಅತಿಥಿಗಳು ಹಾಗೂ ವಿದ್ಯಾರ್ಥಿಗಳಿಂದ ಪುಷ್ಪಾರ್ಚನೆ ಮಾಡಲಾಯಿತು.
ಭಾರತ ಸೇವಾದಳ ಜಿಲ್ಲಾ ಸಂಘಟಕ ಎಂ.ಬಿ.ದಾನೇಶ್ ಕಾರ್ಯಕ್ರಮ ನಿರ್ವಹಿಸಿದರು. ಸರ್ವಧರ್ಮ ಪ್ರಾರ್ಥನೆಯಿಂದ ಆರಂಭವಾದ ಕಾರ್ಯಕ್ರಮ ರಾಷ್ಟ್ರಗೀತೆ ಗಾಯನದೊಂದಿಗೆಗ ಪೂರ್ಣಗೊಂಡಿತು.
ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಹದಿನೈದನೇ ವರ್ಷಗಳನ್ನು ಕಳೆದು ಹದಿನಾರನೇ ವರ್ಷಕ್ಕೆ ಪಾದಾರ್ಪಣೆ-ಸಂತ ಮದರ್ ತೆರೆಸಾರವರ ಗ್ರೊಟ್ಟೊ ಇದರ ಉದ್ಘಾಟನೆ /Snehalaya Mental Rehabilitation Center completes 16th year – Inauguration of Saint Mother Teresa’s Grotto
ದಿನಾಂಕ 26.08.2024 ರಂದು ಮಂಜೇಶ್ವರದ ಪಾವೂರಿನಲ್ಲಿರುವ ಸ್ನೇಹಾಲಯ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರವು ತನ್ನ ನಿಸ್ವಾರ್ಥ ಸೇವೆಯ ಹದಿನೈದನೇ ವರ್ಷಗಳನ್ನು ಕಳೆದು ಹದಿನಾರನೇ ವರ್ಷಕ್ಕೆ ಪಾದಾರ್ಪಣೆ ಮಾಡಿತು. ಈ ಐತಿಹಾಸಿಕ ಕ್ಷಣದಲ್ಲಿ ಸ್ನೇಹಾಲಯದ ಸ್ಪೂರ್ತಿಯಾದ ಸಂತ ಮದರ್ ತೆರೆಸಾರವರ ಗ್ರೊಟ್ಟೊ ಇದರ ಉದ್ಘಾಟನೆ ಮತ್ತು ಆಶೀರ್ವಚನ ಕಾರ್ಯ ಅಂತೆಯೇ ಸಾಂಭ್ರಮಿಕ ಬಲಿಪೂಜೆಯನ್ನು, ಮಂಗಳೂರು ಧರ್ಮ ಪ್ರಾಂತ್ಯದ ನಿವೃತ್ತ ಬಿಷಪ್ ಅತಿ ವಂದನೀಯ ಸ್ವಾಮಿ ಅಲೋಶಿಯಸ್ ಪಾವ್ಲ್ ಡಿ ಸೋಜಾರವರು ನೆರವೇರಿಸಿದರು.
ತದನಂತರ ಗಂಟೆ 11:30 ಕ್ಕೆ ಸ್ನೇಹಾಲಯದ ಸಭಾಂಗಣದಲ್ಲಿ ಪುಟ್ಟ ಸಭಾಕಾರ್ಯಕ್ರಮವು ನಡೆಯಿತು ಈ ಕಾರ್ಯದ ಮುಖ್ಯ ಅತಿಥಿಯಾಗಿ ಅತೀ ವಂದನೀಯ ಸ್ವಾಮಿ ಅಲೋಶಿಯಸ್ ಪಾವ್ಲ್ ಡಿ ಸೋಜಾ ಅಂತೆಯೇ ಗೌರವ ಅತಿಥಿಗಳಾಗಿ ಶ್ರೀ ಸ್ಟೀಫನ್ ಪಿಂಟೋ, ಎಡ್ಯುಕೇರ್ ಸಂಯೋಜಕರು,ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಶ್ರೀ ರವಿ ನಾಯ್ಕಾಪು, ಸಮಾಜ ಕಾರ್ಯಕರ್ತ ಮತ್ತು ಸಂಗೀತ ಸಂಯೋಜಕರಾದ ಶ್ರೀ ಓಸ್ವಾಲ್ಡ್ ಡಿಸೋಜಾ ಸಂಪಿಗೆ, ಡಿಎಎಂ ಆಯುರ್ವೇದ ರತ್ನ ಡಾ.ಮಹಮ್ಮದ್ ಶಾಲಿಮಾರ್,ಶ್ರೀ ಕ್ಷೇತ್ರ ಅರಸು ಮಂಜಿಷ್ಣರ ಉದ್ಯಾವರ, ಮಾಡ ಇದರ ಮುಖ್ಯಸ್ಥರಾದ ಶ್ರೀ ರಾಜಾ ಬೆಳ್ಚಡ, ಶ್ರೀ ಸ್ಟ್ಯಾನಿ ಬೇಳಾ, ಪ್ರೊಡಕ್ಷನ್ ಡೈರೆಕ್ಟರ್, ಡೈಜಿವರ್ಲ್ಡ್ ಟಿವಿ, ಶ್ರೀ ಅಲ್ವಿನ್ ಡಿಸೋಜಾ, ಅಧ್ಯಕ್ಷರು, ಕೆಥೋಲಿಕ್ ಸಭಾ, ಮಂಗಳೂರು ಧರ್ಮಪ್ರಾಂತ್ಯ, ಮಂಜೇಶ್ವರ ಚರ್ಚಿನ ಧರ್ಮಗುರುಗಳಾದ ವಂದನೀಯ ಸ್ವಾಮಿ ಎಡ್ವಿನ್ ಪಿಂಟೋ, ಸ್ನೇಹಾಲದ ಆಧ್ಯಾತ್ಮಿಕ ನಿರ್ದೇಶಕರಾದ ವಂದನೀಯ ಸ್ವಾಮಿ ಸಿರಿಲ್ ಡಿಸೋಜಾರವರು ಉಪಸ್ಥಿತರಿದ್ದು ಪ್ರತಿಯೊಬ್ಬ ಗಣ್ಯ ಅಥಿತಿಯರು ತಮ್ಮ ಹಿತ ನುಡಿಗಳಿಂದ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಂದನೀಯ ಸ್ವಾಮಿ ಅಲೋಶಿಯಸ್ ಪಾವ್ಲ್ ಡಿಸೋಜಾರವರು ಸ್ನೇಹಾಲಯಕ್ಕೆ ನೀಡಿದ ಸಹಾಯವನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು ಅಂತೆಯೇ ಶ್ರೀ ರವಿ ನಾಯ್ಕಾಪು ಮತ್ತು ಮದರ್ ತೆರೆಸಾರವರ ಗ್ರೊಟ್ಟೊ ಇದರ ದಾನಿಗಳನ್ನು ಸನ್ಮಾನಿಸಲಾಯಿತು.
ಸ್ನೇಹಾಲಯ ವ್ಯಸನ ಮುಕ್ತಿ ಕೇಂದ್ರದ ಧನ ಸಹಾಯಕ್ಕಾಗಿ ಏರ್ಪಡಿಸಿದ ಲಕ್ಕಿಡಿಪ್ ಇದರ ‘ಡ್ರಾ’ ಈ ಸಂಧರ್ಬದಲ್ಲಿ ನಡೆಯಿತು. ಸ್ನೇಹಾಲಯದ ಸಂಸ್ಥಾಪಕರಾದ ಸಹೋದರ ಜೋಸೆಫ್ ಕ್ರಾಸ್ತಾ ಸ್ವಾಗತದ ಸವಿನುಡಿಗಳನ್ನಾಡಿದರು ಅಂತೆಯೇ ಶ್ರೀಮತಿ ಒಲಿವಿಯಾ ಕ್ರಾಸ್ತಾರವರು ಧನ್ಯವಾದ ಸಮರ್ಪಣೆ ನೆರವೇರಿಸಿದರು. ಶ್ರೀ ಜಿಯೋ ಅಗ್ರಾರ್ ಮತ್ತು ವಿಯೊಲಾ ಇವರು ಕಾರ್ಯಕ್ರಮದ ನಿರೋಪಣೆಯನ್ನು ಮಾಡಿದರು. ಸ್ನೇಹಾಲಯದ ಹದಿನೈದನೆ ವರ್ಷದ ಈ ಸಂಭ್ರಮಾಚರಣೆಯು ಸಹಭೋಜನದೊಂದಿಗೆ ಮುಕ್ತಾಯಗೊಂಡಿತು.
Crystal Jubilee Celebrations at Snehalaya Psychosocial Rehabilitation Center Snehalaya Mental Rehabilitation Center completes 16th year – Inauguration of Saint Mother Teresa’s Grotto
August 26, 2024: The Snehalaya Psychosocial Rehabilitation Center in Manjeswaram celebrated its Crystal Jubilee with great fervor and enthusiasm today. The momentous occasion marked 15 years of dedicated service to the community.
The day’s events commenced with the blessing of a new Grotto of Mother Teresa by Most Rev. Dr. Aloysious Paul D’Souza at 9:30 am, followed by a Solemn Eucharistic Celebration.
A formal stage function began at 11:30 am, with Most Rev. Dr.Aloysious Paul D’Souza, Bishop Emeritus of the Mangalore Diocese, as the chief guest. The guest of honor included esteemed individuals from various fields, such as education, social activism, music, and media.
The guests of honor were:
– Mr. Stephen Pinto, Educare Coordinator
– Rev. Fr. Cyril D’Souza, Chaplain, Snehalaya
– Mr. Ravi Naikap, President, Kasaragod District Kannada Journalists Welfare Association
– Mr. Oswald D’Souza, Social Activist and Music Composer, Sampige
– Dr. Mohammed Shalimar, D.A.M Ayurveda Ratna
– Raja Belchada, ArasuManjishnarUdyavara, Mada
– Mr.Stany Bela, Production Director, Daijiworld TV
– Mr.Alwyn D’Souza, President, Catholic Sabha, Mangalore Diocese
– Rev. Fr. Edwin Pinto, Parish Priest, Our Lady of Mercy Church, Manjeswaram
The celebrations also featured a Lucky Coupon Draw, with proceeds supporting the Snehalaya De-addiction Center.
The Snehalaya Psychosocial Rehabilitation Center has been a beacon of hope for many, providing vital services and support to the community. This milestone marks a significant achievement in their journey, and the celebrations today were a testament to their dedication and hard work.
ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕೇಸ್ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ಮಾಡಬೇಕು -ಅನಿತಾ ಡಿಸೋಜ, ಅಧ್ಯಕ್ಷರು ಬ್ಲಾಕ್ ಮಹಿಳಾ ಕಾಂಗ್ರೆಸ್, ಕಾರ್ಕಳ.
ಕಾರ್ಕಳ,ಅ.27: ಕಾರ್ಕಳದಲ್ಲಿ ನಡೆದ ಸಾಮೂಹಿಕ ಅತ್ಯಾಚಾರದ ಕೇಸ್ ಬಗ್ಗೆ ಪೋಲಿಸರು ನಿಷ್ಪಕ್ಷಪಾತ ತನಿಖೆ ಮಾಡಬೇಕು. ಯುವತಿಗೆ ಬಿಯರ್ ನಲ್ಲಿ ಅಮಲು ಪದಾರ್ಥವನ್ನು ಬೆರೆಸಿ ನಾಲ್ಕೈದು ಮಂದಿ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತ ಯುವತಿ ಕೇಸ್ ದಾಖಲಿಸಿದ್ದಾರೆ.
ಅವಳ ಹೇಳಿಕೆಯಂತೆ ಆಕೆಗೆ ಮದ್ಯಪಾನ ಮಾಡುವ ಚಟವಿದೆಯಾ ಅನ್ನುವ ಬಗ್ಗೆ ಅನುಮಾನ ಮೂಡಿಸುತ್ತಿದೆ. ಬಿಯರ್ ಒಂದು ಮದ್ಯಪಾನದ ಪೇಯ ಇದಕ್ಕೆ ಅಮಲು ಪದಾರ್ಥ ಸೇರಿಸುವ ಅಗತ್ಯ ಏನು ಬಂತು? ಕುಡಿಯುವ ಚಟ ಯಾರಿಗಿತ್ತು ಮತ್ತು ಯಾವ ಮಟ್ಟಕ್ಕೆ ಇದೆ ಎಂದೂ ಕೂಲಾಂಕುಶವಾಗಿ ಪರಿಶೀಲನೆ ಮಾಡಬೇಕು.
ಅತ್ಯಾಚಾರ ಮಾಡಿದ್ದಾರೆ ಎನ್ನಲಾದ ಆರೋಪಿಗಳು ಹಿಂದೂ,ಮುಸ್ಲಿಂ ಮತ್ತು ಕ್ರೈಸ್ತ ಧರ್ಮಕ್ಕೆ ಸೇರಿದವರಾಗಿದ್ದಾರೆ ಹೀಗಿರುವಾಗ ಇದು ಲವ್ ಜಿಹಾದ್ ಹೇಗಾಗುತ್ತದೆ…?
ಕಾರ್ಕಳದ ಶಾಸಕ ಸುನೀಲ್ ಕುಮಾರ್ ವಿರುದ್ಧ ಸರಕಾರಿ ಸಿಮೆಂಟ್ ಕಳ್ಳತನ ಮತ್ತು ದುರುಪಯೋಗ ಹಾಗೂ ಥೀಮ್ ಪಾರ್ಕ್ ನಲ್ಲಿ ಸ್ಥಾಪಿಸಿದ ಪರಶುರಾಮನ ಮೂರ್ತಿಯ ಅವ್ಯವಹಾರದ ಬಗ್ಗೆ ಗಂಭೀರವಾದ ಆರೋಪವಿದ್ದು ಈ ಬಗ್ಗೆ ರಾಜ್ಯ ಸರಕಾರ ತನಿಖೆಗೆ ಮುಂದಾದ ಕೂಡಲೇ ಕಾರ್ಕಳದಲ್ಲಿ ಸಾಮೂಹಿಕ ಅತ್ಯಾಚಾರದ ಪ್ರಕರಣವೊಂದು ಸಂಚಲನ ಉಂಟುಮಾಡಲು ಕಾರಣವೇನು…?.
ರಾಜಸ್ಥಾನದಲ್ಲಿ ಈ ಹಿಂದೆ ಇಸ್ಲಾಂ ಧರ್ಮದ ಕುರಿತು ಕೆಟ್ಟದಾಗಿ ಕಾಮೆಂಟ್ ಮಾಡಿದ ದರ್ಜಿಯೊಬ್ಬರನ್ನು ಹತ್ಯೆಗೈದ ಕುರಿತಾದ ಘಟನೆ ನಡೆದಿದ್ದು ಪತಾಕಿಗಳನ್ನು ಬಂಧಿಸಿದ ಬಳಿಕ ಪಾತಕಿಗಳು R.S.S ನ ಮುಸ್ಲಿಂ ಮಂಚ್ ಎಂಬ ಸಂಘಟನೆಯ ಸದಸ್ಯರು ಹಾಗೂ ಭಾಜಪದ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದವರೆಂಬ ಸತ್ಯ ಹೊರಬಂದವು ಅದೇ ರೀತಿ ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಸಂಘಪರಿವಾರದ ಮುಸ್ಲಿಂ ಮಂಚ್ ನ ಸಂಪರ್ಕ ಇದೆಯೇ..?
ಅವರು ಭಾಜಪದೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದರೇ ಪ್ರಧಾನ ಆರೋಪಿ ಅಲ್ತಾಫ್ ಗೆ ಡ್ರಗ್ಸ್ ಸರಬರಾಜು ಮಾಡಿದ ಆರೋಪಿ ಅಭಯ್ ಗೆ ಡ್ರಗ್ಸ್ ಎಲ್ಲಿಂದ ಬಂತು ಆತ ಯಾವುದಾದರೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದೇನೇ ಅಭಯ್ ಗೆ ಡ್ರಗ್ಸ್ ಸರಬರಾಜಿನ ಮೂಲ ಯಾವುದು ಎಂಬುದು ಜನತೆಗೆ ತಿಳಿಯಬೇಕಾದರೆ ತನಿಖೆಯನ್ನು ಬೇರು ಮಟ್ಟದಿಂದ ಮಾಡಬೇಕಾಗುತ್ತದೆ.
ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಸ್ತ್ರೀ ಆಯೋಗದ ಸಹಕಾರದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರಿಗೆ ತರಭೇತಿ ಕಾರ್ಯಾಗಾರ
ಕುಂದಾಪುರ,ಅ. 27: ತಲ್ಲೂರು ಸಂತ ಫ್ರಾನ್ಸಿಸ್ ಆಸ್ಸಿಸಿ ದೇವಾಲಯದಲ್ಲಿ ಸ್ತ್ರೀ ಆಯೋಗದ ಸಹಕಾರದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರಿಗೆ 25/08/2024 ರಂದು ತರಭೇತಿ ಕಾರ್ಯಾಗಾರ ಆಯೋಜಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಉಡುಪಿ ಡಯಾಸಿಸ್ ನ ಸಂಪದ ಸಂಬಂಧ ಸಂಸ್ಥೆಯ ಸಂಯೋಜಕರಾದ ಶ್ರೀ ಸ್ಟೇನ್ಲಿ ಫೆರ್ನಾಂಡಿಸ್ ರವರು ಹಾಜರಿದ್ದು, ಮಹಿಳೆಯರು ಚರ್ಚಿನಲ್ಲಿ ಆಯೋಜಿಸಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಸ್ವ ಇಚ್ಛೆಯಿಂದ ಭಾಗವಹಿಸಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಸಂಘದ ಘಟನಾವಳಿ ಪ್ರಕಾರ ಒಬ್ಬರು ಇನ್ನೊಬ್ಬರ ಸುಖ ದುಃಖದಲ್ಲಿ ಪಾಲ್ಗೊಂಡು ಘಟಕದ ಸ್ವ ಸಹಾಯ ಸಂಘವನ್ನು ಸಕ್ರಿಯವಾಗಿ ಇಡಬೇಕು. ಸಂಘದ ಸದಸ್ಯರು ತಮ್ಮ ಸಂಸಾರದ ಜವಾಬ್ದಾರಿಯ ಜೊತೆ ಜೊತೆಗೆ ಸ್ವಲ್ಪ ಸಮಯ ತ್ಯಾಗಮಾಡಿ ಸಮಾಜದ ಅಭಿವೃದ್ಧಿಗೆ ಕೈ ಜೋಡಿಸಿ ಸಂಘಗಳನ್ನು ಬಲ ಪಡಿಸುವುದರ ಮೂಲಕ ಸಮಾಜಕ್ಕೆ ಅಭೂತ ಪೂರ್ವ ಕೊಡುಗೆ ನೀಡುವಂತಾಗಬೇಕು ಎಂದು ತಿಳಿಸಿದರು.
ನಂತರ ಚರ್ಚಿನ ಧರ್ಮ ಗುರುಗಳಾದ ವಂದನೀಯ ಫಾದರ್ ಎಡ್ವಿನ್ ಡಿಸೋಜಾರವರು ಮಾತನಾಡಿ, ಘಟಕದ ಮಹಿಳೆಯರು ಸಮಾಜದ ಕಾಳಜಿ, ಸಂಘದ ಸದಸ್ಯರ ಕಾಳಜಿ, ಇಡೀ ಸಮುದಾಯದ ಕಾಳಜಿ ಹೊಂದಿದ್ದು ತಾನು ಪಂಗಡದ ಸದಸ್ಯಳಾಗಿ ತನ್ನ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಅರಿತಿರಬೇಕು. ಪ್ರತಿ ತಿಂಗಳ ನಾಲ್ಕನೇ ಭಾನುವಾರದಂದು ಪ್ರತಿ ಘಟಕದವರು ಒಂದು ಕಡೆ ಜೊತೆಸೇರಿ ಘಟಕದ ಆಗು ಹೋಗುಗಳ ಬಗ್ಗೆ ವಿಚಾರ ವಿನಿಮಯ ನಡೆಸಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಕುಂದಾಪುರ ವಲಯದ ಸ್ತ್ರೀ ಸ್ವ ಸಹಾಯ ಸಂಘದ ಅಧ್ಯಕ್ಷೆ ಶ್ರೀಮತಿ ಪ್ರೀತಿ ಫೆರ್ನಾಂಡಿಸ್,ಕಾರ್ಯದರ್ಶಿ ಏವ್ಲಿನ್ ಫೆರ್ನಾಂಡಿಸ್,ಕುಂದಾಪುರ ವಲಯದ ಸಂಚಾಲಕಿ ಶ್ರೀಮತಿ ಸಿಂತಿಯಾ ರೋಡ್ರಿಗಸ್, ತಲ್ಲೂರು ಘಟಕದ ಅಧ್ಯಕ್ಷೆ, ಕಾರ್ಯದರ್ಶಿ ಹಾಗೂ ಎಲ್ಲಾ ಪಾಧಾಧಿಕಾರಿಗಳು ಹಾಜರಿದ್ದರು.ಸುಮಾರು 60 ಮಹಿಳೆಯರು ಈ ಕಾರ್ಯಗಾರದ ಪ್ರಯೋಜನವನ್ನು ಪಡೆದರು.
ಕುಮಾರಿ ಕ್ಯಾರೋಲ್ ಗೊನ್ಸಾಲ್ವಿಸ್ ಸ್ವಾಗತಿಸಿದರು. ಚರ್ಚಿನ ಧರ್ಮ ಗುರುಗಳು ವಂದಿಸಿದರು.
ಪಡುಕೋಣೆಯಲ್ಲಿ ಕಥೊಲಿಕ್ ಸಭಾ ನೇತೃತ್ವದಲ್ಲಿ ರಕ್ತದಾನ ಶಿಬಿರ
ಕುಂದಾಪುರ : ಪಡುಕೋಣೆಯಲ್ಲಿ ನಡೆದ ನಡೆದ ರಕ್ತದಾನ ಶಿಬಿರದಲ್ಲಿ ಕಥೋಲಿಕ್ ಸಭಾದ ಅಧ್ಯಕ್ಷರಾದ ವಿನಯ್ ಡಿ ಅಲ್ಮೇಡ ರವರು ಅಧ್ಯಕ್ಷತೆಯನ್ನು ವಹಿಸಿದ್ದರು ಉದ್ಘಾಟಕರಾಗಿ ಪಡುಕೋಣೆ ಚರ್ಚಿನ ಧರ್ಮ ಗುರುಗಳಾದ ಫಾದರ್ ಫ್ರಾನ್ಸಿಸ್ ಕರ್ನೆಲಿಯೋ ಕಾರ್ಯಕ್ರಮವನ್ನು ಉದ್ಘಾಟಿಸಿದರು ಮುಖ್ಯ ಅತಿಥಿಯಾಗಿ ರೆಡ್ ಕ್ರಾಸ್ ಸಂಸ್ಥೆಯ ಚೇರ್ಮನಾದ ಜೈಕರ್ ಶೆಟ್ಟಿ ಅವರು ಮತ್ತು ಡಾಕ್ಟರ್ ಸೋನಿ ಡಿಕೋಸ್ಟ ಆಗಮಿಸಿದ್ದರು ಗೌರವ ಉಪಸ್ಥಿತಿಯಾಗಿ ಆಗಮಿಸಿದ ರಾಜ್ಯ ಪ್ರಶಸ್ತಿ ವಿಜೇತ ಡಾಕ್ಟರ್ ಚಿಕ್ಕಮರಿ ಯವರಿಗೆ ಸನ್ಮಾನಿಸಲಾಯಿತು , ದಲಿತ ಸಂಘರ್ಷ ಸಮಿತಿ ನಾಡ ಸೇನಾಪುರ ಮತ್ತು ಚರ್ಚಿನ ಇತರ ಸಂಘಟನೆಗಳ ನೆರವಿನಿಂದ ನಡೆದ ಶಿಬಿರದಲ್ಲಿ ಒಟ್ಟು 49 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು ಶಾಂತಿ ಡಿ ಅಲ್ಮೆಡ ಅವರು ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ವಿನ್ಸೆಂಟ್ ಡಿಸೋಜ ರವರು ಧನ್ಯವಾದ ಅರ್ಪಿಸಿದರು.
ವಿದ್ಯಾ ಅಕಾಡೆಮಿ ಮೂಡಲಕಟ್ಟೆಯಲ್ಲಿ ಹಲ್ಲಿನ ಆರೋಗ್ಯ ಕುರಿತು ಮಾಹಿತಿ ಕಾರ್ಯಾಗಾರ
ಕುಂದಾಪುರ : ವಿದ್ಯಾ ಅಕಾಡೆಮಿ ಮೂಡಲಕಟ್ಟೆಯಲ್ಲಿ ವಿದ್ಯಾರ್ಥಿಗಳಲ್ಲಿ ದಂತ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಶ್ರೀದೇವಿ ಡೆಂಟಲ್ ಕ್ಲಿನಿಕ್ನ ಡಾ. ಜಗದೀಶ್ ಜೋಗಿ ಕೋಟೇಶ್ವರ ಅವರಿಂದ ಮಾಹಿತಿಪೂರ್ಣ ಉಪನ್ಯಾಸ ಹಾಗೂ ದಂತ ಪರಿಶೀಲನೆ ಶಿಬಿರ ಆಯೋಜಿಸಲಾಯಿತು
ಈ ಸಂದರ್ಭ, ಡಾ. ಜಗದೀಶ್ ಜೋಗಿ ಅವರು ಬಾಯಿಗಾಸು, ಹಲ್ಲಿನ ಶ್ರದ್ಧೆ, ಹಾಗೂ ನಿತ್ಯದ ದಂತಚಿಕಿತ್ಸೆಯ ಮಹತ್ವದ ಬಗ್ಗೆ ವಿವರಣೆ ನೀಡಿದರು. ವಿದ್ಯಾರ್ಥಿಗಳಿಗೆ ಹಲ್ಲಿನ ಸ್ವಚ್ಛತೆಯ ಮೇಲೆ ಕೇವಲ ನಿತ್ಯದ ಶ್ರದ್ಧೆ ಮಾತ್ರವಲ್ಲದೆ, ಸಕ್ಕರೆ, ಚಾಕೊಲೇಟ್ಗಳು ಮತ್ತು ಶೀತ ಪಾನೀಯಗಳಂತಹ ಆಹಾರಗಳ ದುಷ್ಪರಿಣಾಮಗಳ ಬಗ್ಗೆ ಚರ್ಚೆ ಮಾಡಿದರು.
ಅವರ ಮಾರ್ಗದರ್ಶನದಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿಯ ಹಲ್ಲುಗಳನ್ನು ಪರಿಶೀಲಿಸಲಾಯಿತು, ಮತ್ತು ಕೆಲವು ವಿದ್ಯಾರ್ಥಿಗಳಿಗೆ ಪ್ರಾರಂಭದ ಹಲ್ಲಿನ ಸಮಸ್ಯೆಗಳು ಪತ್ತೆಯಾಗಿದ್ದು, ತಕ್ಷಣದ ಚಿಕಿತ್ಸೆಗಾಗಿಯು ಸಲಹೆ ನೀಡಲಾಯಿತು. ವಿದ್ಯಾರ್ಥಿಗಳು ಬಹಳ ಸಕ್ರಿಯವಾಗಿ ಭಾಗವಹಿಸಿದರು ಮತ್ತು ದಂತ ಚಿಕಿತ್ಸೆಯ ಬಗ್ಗೆ ತಮಗೆ ಮೂಡಿದ ಶಂಕೆಗಳನ್ನು ಡಾಕ್ಟರ್ರೊಂದಿಗೆ ಹಂಚಿಕೊಂಡರು.
ಕಾರ್ಯಾಗಾರದ ಕೊನೆಯಲ್ಲಿ ಡಾ.ಜಗದೀಶ್ ಜೋಗಿ ಅವರಿಗೆ ಶಾಲೆಯ ಪರವಾಗಿ ಧನ್ಯವಾದ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲಾ ಬೋಧಕ ಸಿಬ್ಬಂದಿ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಬಾಲರಾಧೆ ಮತ್ತು ಬಾಲಗೋಪಾಲ ಸ್ಪರ್ಧೆ
ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್
ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಮುಂಜಾನೆ ಎಲ್ ಕೆ ಜಿ ಮತ್ತು ಯು ಕೆ ಜಿ ಹಾಗೂ ಅಪರಾಹ್ನ ಒಂದರಿಂದ ಎರಡನೇ ತರಗತಿ ವಿದ್ಯಾರ್ಥಿಗಳಿಗೆ ಬಾಲರಾಧೆ ಮತ್ತು ಬಾಲಗೋಪಾಲ ಸ್ಪರ್ಧೆಯನ್ನು ಆಯೋಜಿಸಲಾಯಿತು
ಸ್ಪರ್ಧೆಯಲ್ಲಿ 90 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೃಷ್ಣ ರಾಧೆಯರ ವಿವಿಧ ವೇಷ ಭೂಷಣಗಳೊಂದಿಗೆ ಉಲ್ಲಾಸದಿಂದ ಪಾಲ್ಗೊಂಡರು ಬೆಣ್ಣೆ ಮಡಕೆಯೊಂದಿಗೆ ಶ್ರೀಕೃಷ್ಣನ
ಬಾಲ್ಯಲಿಲೆಗಳನ್ನು ವರ್ಣಿಸುವ ದೃಶ್ಯಾವಳಿಗಳು ನೋಡುಗರ ಮನ ಸೂರೆಗೊಳಿಸಿತು ಮುಂಜಾನೆ ನಡೆದ ಸ್ಪರ್ಧೆಯ ನಿರ್ಣಾಯಕರಾಗಿ ಕಿಶೋರಕುಮಾರ್ ಆರೂರು (ಯಕ್ಷಸಿರಿ ಶಂಕರನಾರಾಯಣ ) ಜಗದೀಶ್ ಬನ್ನಂಜೆ (ನೃತ್ಯಗಾರ,ಉಡುಪಿ ) ಪ್ರಿಯಾಂಕ ರಾವ್ (ಶಾಲೆಯ ಹಳೆ ವಿದ್ಯಾರ್ಥಿ) ಸಹಕರಿಸಿದರು ಅದೇರೀತಿ ಅಪರಾಹ್ನ ನಡೆದ ಸ್ಪರ್ಧೆಯಲ್ಲಿ ನಿರ್ಣಾಯಕರಾಗಿ ಪೂಜಿತಾ ಆಚಾರ್ಯ ( ಖ್ಯಾತ ನೃತ್ಯಗಾರ್ತಿ ಮಂದಾರ್ತಿ ) ಪ್ರಿಯಾಂಕಾ ರಾವ್ (ಸಂಸ್ಥೆಯ ಹಳೆ ವಿದ್ಯಾರ್ಥಿ)
ಭಾರತಿ (ಖ್ಯಾತ ನೃತ್ಯಗಾರ್ತಿ ಬಾರಕೂರು )ಸಹಕರಿಸಿದರು
ವಿಜೇತರ ಯಾದಿ* :
ಎಲ್ ಕೆ ಜಿ ವಿಭಾಗ
ಬಾಲರಾಧೆ
1.ಮನ್ವಿಕಾ ಎಮ್ ಶೇಟ್ 2.ಆರಾಧ್ಯ ಕೆ 3.ಆಯೇಷಾ ಶಾಜ್ನಾ
ಬಾಲಗೋಪಾಲ
1.ಆಗಮ್ಯ ಶೆಟ್ಟಿ 2.ತನ್ವಿ ಶೆಟ್ಟಿ 3.ಅಮೋಘವರ್ಷ
ಯು ಕೆ ಜಿ ವಿಭಾಗ
ಬಾಲರಾಧೆ
1.ಸಮನ್ವಿ ಕುಲಾಲ್ 2.ಅದ್ವಿಕಾ ಡಿ 3.ಪೂರ್ವಿ
ಬಾಲಗೋಪಾಲ
1.ಆರವ್ ಎಸ್ ಪೂಜಾರಿ
2.ಪ್ರತ್ವಿಕ್ ಎಸ್ ಪೂಜಾರಿ 3.ಅಶ್ವಿಜ್
1ನೇ ತರಗತಿ ವಿಭಾಗ
ಬಾಲರಾಧೆ
1.ಐಶಾನಿ ಸಿ 2. ಆಶನಿ ಆರ್ ಹೆಗ್ಡೆ 3.ರಿಶಾನಿ ಶೆಟ್ಟಿ ಬಾಲಗೋಪಾಲ
1.ಅಚಿಂತ್ಯ ಕನ್ನಂತ 2.ಅಹನ್ ಆರ್
3.ಪ್ರಣೀತ್ ಕೆ ಅರೂರ್
2ನೇ ತರಗತಿ*ಬಾಲರಾಧೆ
1.ಅದ್ವಿತಿ ಸಿ 2.ಧನುಶ್ರೀ 3.ಸನ್ನಿಧಿ ಪಿ
ಬಾಲಗೋಪಾಲ
1.ರಿಷಿಕ್ ಆರ್ ಪೂಜಾರಿ 2.ಯುಕ್ತ ಬಿ ಭಟ್ 3.ಚಿರಂತ್ ಎಸ್ ದೇವಾಡಿಗ ಕ್ರಮವಾಗಿ ಪ್ರಥಮ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿರುತ್ತಾರೆ
ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ
ಪ್ರಾಸ್ತಾವಿಕ ನುಡಿಗಳನ್ನಾಡಿದರು
ಸಂಯೋಜಕಿ ಕುಸುಮಾ ಶೆಟ್ಟಿ, ಸಹ ಸಂಯೋಜಕಿ ಅಕ್ಷತಾ,ಸಹಶಿಕ್ಷಕರು, ಪಾಲಕರು ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.