ಕೋಲಾರ,ಆ.28: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ತಾಲೂಕಿನ ಸೀಸಂದ್ರ ಗೋಪಾಲಗೌಡ, ಅರ್ಬಾಜ್ ಪಾಷ, ಹಾಗೂ ಎಸ್.ಜೈದೀಪ್ ಅವರನ್ನು ರಾಜ್ಯಪಾಲರ ಅಜ್ಞನುಸಾರ ಉನ್ನತ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿ ಕೆ ಮಂಜುನಾಥ್ ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ,
ತಾಲೂಕಿನ ಸೀಸಂದ್ರ ಗ್ರಾಮದ ಎಂ.ಗೋಪಾಲಗೌಡ ಅವರು ಕಾಂಗ್ರೆಸ್ ವಿಧ್ಯಾರ್ಥಿ ಘಟಕದ ಜಿಲ್ಲಾ ಅಧ್ಯಕ್ಷ, ರಾಜ್ಯ ಉಪಾಧ್ಯಕ್ಷರಾಗಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ್ದಾರೆ ವಿಧ್ಯಾರ್ಥಿ ದೆಸೆಯಿಂದಲೂ ಬೆಂಗಳೂರು ವಿವಿಯ ಉಳಿವಿಗಾಗಿ ಹಾಗೂ ಬಲವರ್ಧನೆಗಾಗಿ ಸಾಕಷ್ಟು ಹೋರಾಟಗಳನ್ನು ಸಂಘಟಿಸಿದ್ದು ಇವರನ್ನು ನೇಮಕ ಮಾಡಲಾಗಿದೆ
ಇನ್ನೂ ಕೋಲಾರದ ಷಹೀನ್ ಷಾ ನಗರದ ಅರ್ಬಾಜ್ ಪಾಷ ಅವರು ಸುಮಾರು 10 ವರ್ಷಗಳ ಉಪನ್ಯಾಸಕ ವೃತ್ತಿಯೊಂದಿಗೆ ಬೆಂಗಳೂರಿನ ಕಿಂಗ್ ಸ್ಟನ್ ಕಾಲೇಜಿನಲ್ಲಿ 7 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ ಇವರ ಶೈಕ್ಷಣಿಕ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಇವರನ್ನು ಆಯ್ಕೆ ಮಾಡಲಾಗಿದೆ ಮತ್ತೊಬ್ಬರು ನಗರದ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಜೈದೀಪ್ ಅವರನ್ನು ಸಹ ಬೆಂಗಳೂರು ಉತ್ತರ ವಿವಿಗೆ ಸಿಂಡಿಕೇಟ್ ಸದಸ್ಯರಾಗಿ ನಾಮನಿರ್ದೇಶನ ಮಾಡಿದ್ದಾರೆ,
ಬೆಂಗಳೂರು ಉತ್ತರ ವಿವಿಗೆ ಸಿಂಡಿಕೇಟ್ ಸದಸ್ಯರಾಗಿ ನೇಮಿಸಲು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್ ಶಾಸಕ ಕೊತ್ತೂರು ಮಂಜುನಾಥ್, ಎಸ್.ಎನ್ ನಾರಾಯಣಸ್ವಾಮಿ, ಎಂಎಲ್ಸಿ ಅನಿಲ್ ಕುಮಾರ್ ಸೇರಿದಂತೆ ಜಿಲ್ಲೆಯ ಶಾಸಕರಿಗೆ ಮುಖಂಡರಿಗೆ ಧನ್ಯವಾದಗಳು ಅವರುಗಳು ಮಾರ್ಗದರ್ಶನದಲ್ಲಿ ಹೊಸ ವಿವಿಯನ್ನು ಮಾದರಿ ವಿಶ್ವವಿದ್ಯಾಲಯವಾಗಿಸಲು ಒಗ್ಗಟ್ಟಿನಿಂದ ಶ್ರಮಿಸುತ್ತೇವೆ ಎಂದು ನೂತನ ಸಿಂಡಿಕೇಟ್ ಸದಸ್ಯರು ತಿಳಿಸಿದ್ದಾರೆ
Month: August 2024
ಅಗಲಿದ ಜಾಕೋಬ್ ಡಿಸೋಜಾ ರವರಿಗೆ ಕಾಂಗ್ರೆಸ್ ಪಕ್ಷದಿಂದ ನುಡಿ ನಮನ
ಕುಂದಾಪುರ,ಅ.28: ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ಅ.26 ಸೋಮವಾರ ಸಂಜೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಜಾಕೋಬ್ ಡಿಸೋಜರವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆ ಮಾತನಾಡಿ ಜಾಕೋಬ್ ಡಿಸೋಜ ಓರ್ವ ಸರಳ, ಸಜ್ಜನ ವ್ಯಕ್ತಿತ್ವವನ್ನು ಹೊಂದಿದ್ದು, ಕುಂದಾಪುರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರವಾಗಿದೆ ಎಂದರು.
ಪಿಎಲ್ಡಿ ಬ್ಯಾಂಕಿನ ಅಧ್ಯಕ್ಷರಾದ ಶಿವರಾಮಶೆಟ್ಟಿ ಮಾತನಾಡಿ ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಜಾಕೋಬ್ ಡಿಸೋಜಾ, ಉತ್ತಮ ನಾಯಕರಾಗಿ ಪಾರದರ್ಶಕ ಆಡಳಿತವನ್ನು ಪುರಸಭೆ ಮತ್ತು ನಗರ ಯೋಜನಾ ಪ್ರಾಧಿಕಾರದಲ್ಲಿ ನಡೆಸಿದರು ಎಂದರು.
ಈ ಸಂದರ್ಭದಲ್ಲಿ ನಾಯಕರಾದ ದಿನೇಶ್ ಹೆಗ್ಡೆ, ಕೆದೂರು ಸದಾನಂದ ಶೆಟ್ಟಿ, ರಘು ದೇವಾಡಿಗ, ವಿಕಾಸ ಹೆಗ್ಡೆ , ಗಣೇಶ್ ಶೇರಿಗಾರ್ ನುಡಿ ನಮನ ಸಲ್ಲಿಸಿದರು.
ಸಭೆಯ ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹರಿಪ್ರಸಾದ್ ಶೆಟ್ಟಿ ವಹಿಸಿದ್ದರು.
ಪುರಸಭಾ ಸದಸ್ಯ ಕೆ ಜಿ ನಿತ್ಯಾನಂದ , ಚಂದ್ರಶೇಖರ ಖಾರ್ವಿ, ಪ್ರಭಾವತಿ ಶೆಟ್ಟಿ, ಪಂಚಾಯತ್ ಸದಸ್ಯರಾದ ದೀಪಕ್ ಶೆಟ್ಟಿ, ಜಾನಕಿ ಬಿಲ್ಲವ ,ರಮೇಶ್ ಶೆಟ್ಟಿ, ಜೆಸಿಂತಾ ಡಿಮೇಲ್ಲೊ, ಟ್ಯಾಕ್ಸಿ ಮತ್ತು ಡ್ರೈವರ್ ಎಸೋಸಿಯೇಷನ್ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಚಂದ್ರ ಅಮೀನ್, ಸದಾನಂದ ಖಾರ್ವಿ, ಅಶೋಕ್ ಸುವರ್ಣ, ಪ್ರಭಾಕರ ಶೇರಿಗಾರ್, ಜ್ಯೋತಿ ಪುತ್ರನ್, ರೇವತಿ ಶೆಟ್ಟಿ, ಆಶಾ ಕರ್ವಾಲ್ಲೊ, ಜ್ಯೋತಿ ನಾಯಕ್, ಶೋಭಾ ಸಚ್ಚಿದಾನಂದ, ಶಶಿರಾಜ್ ಪೂಜಾರಿ, ಸುನಿಲ್ ಪೂಜಾರಿ, ಮಧುಕರ ರಾವ್, ಲಕ್ಷ್ಮಣ ಬರೆಕಟ್ಟು, ದಿನೇಶ ಬೆಟ್ಟ ,ವಿಟ್ಟಲ್ ಕಾಂಚನ್, ಶಶಿಧರ ನಂದಿಬೆಟ್ಟು, ವೇಣುಗೋಪಾಲ, ವಿನಯ, ಕೆ ಸುರೇಶ್, ಅರುಣ್ ಪಟೇಲ್, ಎಡಾಲ್ಫ್ ಡಿಕೋಸ್ತಾ, ವೇಲಾ ಬ್ರಗಾಂಜ ,ಪ್ರೀತಂ ಕರ್ವಾಲ್ಲೊ, ರಿಯಾಜ್ ಕೋಡಿ, ಕರುಣಾಕರ ,ಜಯಕರ ಶೆಟ್ಟಿ, ಸಂತೋಷ ,ರಾಘವೇಂದ್ರ, ಕುಟುಂಬದ ಆತ್ಮೀಯರಾದ ಮಂಜು ಪೂಜಾರಿ ಆಲೂರು, ತಮ್ಮಯ್ಯ ದೇವಾಡಿಗ, ವಿನ್ಸೆಂಟ್ ಡಿಸೋಜ, ವಿಜೇಶ್ ಡಿಸೋಜಾ, ಇನ್ನಿತರರು ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ಸ್ವಾಗತಿಸಿ ನಿರೂಪಿಸಿದರು. ಕುಟುಂಬದ ವತಿಯಿಂದ ಜಾಕೋಬ್ ಡಿಸೋಜಾರವರ ಪುತ್ರ ಜೊಯ್ ಡಿಸೋಜಾ ವಂದಿಸಿದರು.
ಅರಣ್ಯ ಒತ್ತುವರಿ ತೆರವು ವಿಚಾರ, ಹರಿಪ್ರಸಾದ್ ಫೋನ್ ಕರೆಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ
ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ರೈತರು ಸಾಗುವಳಿ ಮಾಡುತ್ತಿರುವ ಅರಣ್ಯ ಒತ್ತುವರಿ (Encroachment) ತೆರವುಗೊಳಿಸದಂತೆ ವಿಧಾನ ಪರಿಷತ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದಾರೆ. ಈ ಸಂಬಂಧ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ದೂರವಾಣಿ ಕರೆ ಮಾಡಿ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.
ಕೇರಳ ಹಾಗೂ ಕಾರವಾರದಲ್ಲಿ ಭೂಮಿ ಕುಸಿತದ ಬಳಿಕ ರಾಜ್ಯ ಸರಕಾರ 2015ರಿಂದ ಈಚೆಗೆ ಆಗಿರುವ ಅರಣ್ಯ ಭೂಮಿ ಒತ್ತುವರಿ ತೆರವು ಮಾಡುವ ಕ್ರಮ ಸರಿಯಾಗಿದೆ. ಆದರೆ ಹೊಟ್ಟೆ ಪಾಡಿಗಾಗಿ ಸಾಗುವಳಿ ಮಾಡಿಕೊಂಡಿರುವ ರೈತರ ಭೂಮಿ ತೆರವು ಮಾಡಬಾರದು.ಎಂದು ತಿಳಿಸಿದ್ದಾರೆ
ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಅತೀ ಸಣ್ಣ ರೈತರು ಸಾಗುವಳಿ ಭೂಮಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಇವರಲ್ಲಿ ಅಹಿಂದ ವರ್ಗವೇ ಹೆಚ್ಚಿದೆ ಎಂಬುದು ಗಮನಾರ್ಹ. ಯಾವುದೇ ವಾಣಿಜ್ಯ ಉದ್ದೇಶದಿಂದ ಈ ಜನರು ಸಾಗುವಳಿ ಮಾಡಿಲ್ಲ. ವಿವಿಧ ಯೋಜನೆಗಳಲ್ಲಿ ನಿರಾಶ್ರಿತರಾಗಿರುವ ಬಡ ರೈತರು ಜೀವನೋಪಾಯಕ್ಕೆ ಕೃಷಿ ಮಾಡಿಕೊಂಡಿದ್ದಾರೆ. ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಬೇಕು.
ಇನ್ನು, ಈ ಕುರಿತು ಸ್ಪಷ್ಟನೆ ನೀಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮಲೆನಾಡು ಮತ್ತು ಕರಾವಳಿಯಲ್ಲಿ ಕೆಲವರು ಅರಣ್ಯ ಒತ್ತುವರಿ ತೆರವಿಗೆ ವಿರೋಧಿಸುತ್ತಿದ್ದಾರೆ. ಈ ವಿಚಾರದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ಸರ್ಕಾರ ಬಡವರ ಭೂಮಿ ಒತ್ತುವರಿ ತೆರವು ಮಾಡಿಸುತ್ತಿಲ್ಲ. ಬದಲಾಗಿ ದೊಡ್ಡ ಒತ್ತುವರಿ ಮತ್ತು 2015ರ ನಂತರದ ಒತ್ತುವರಿ ಮಾತ್ರ ತೆರವು ಮಾಡಲು ಸೂಚಿಸಲಾಗಿದೆ. ಮೂರು ಎಕರೆಗಿಂತ ಕಡಿಮೆ (ಒತ್ತುವರಿ ಮತ್ತು ಆ ವ್ಯಕ್ತಿಯ ಪಟ್ಟಾಭೂಮಿ ಸೇರಿ) ಒತ್ತುವರಿ ಆಗಿದ್ದಲ್ಲಿ ಜೀವನೋಪಾಯಕ್ಕೆ ತೊಂದರೆ ಆಗದಂತೆ ಕ್ರಮ ವಹಿಸಲು ಅರಣ್ಯ ಸಂರಕ್ಷಣಾ ಕಾಯಿದೆ 1980ರ ಅಡಿಯಲ್ಲಿ ಭಾರತ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದೂ ತಿಳಿಸಿದ್ದಾರೆ.
ಯುವಜನರ ಆಯೋಗ ಗುಲ್ಬರ್ಗ ಧರ್ಮಕ್ಷೇತ್ರದಲ್ಲಿ “ಯುವ ಸ್ಪಂದನ” ಕಾರ್ಯಕ್ರಮ
ಗುಲ್ಬರ್ಗ : ಗುಲ್ಬರ್ಗ ಧರ್ಮ ಕ್ಷೇತ್ರದ ಬಸವಕಲ್ಯಾಣ ವಲಯದ ಮುಚ್ಚಳಂಬ ಧರ್ಮ ಕೇಂದ್ರದಲ್ಲಿ 25/8/2024 ರಂದು ವಲಯದ ಎಲ್ಲ ಯುವ ಜನರಿಗೆ ಯುವ ಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸುಮಾರು 50 ಯುವ ಜನರು ಭಾಗವಹಿಸಿದ್ದರು, ಏಕತೆ ಮತ್ತು ವೈವಿಧ್ಯತೆಯಲ್ಲಿ ನಮ್ಮ ಸಮಾನತೆಯನ್ನು ಕಾಣುವುದು ಎಂಬ ಧ್ಯೇಯ ವಾಕ್ಯದಡಿಯಲ್ಲಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಪ್ರಾರಂಭಿಸಿ ಮುಚ್ಚಳಾಂಬ ಕೇಂದ್ರದವರು ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಿಕೊಟ್ಟರು, ಅಧ್ಯಕ್ಷ ಸ್ಥಾನವನ್ನು ವಹಿಸಿದಂತ ಫಾದರ್ ಸ್ಟಾನಿ ಮುಚ್ಚಳಂಬ ಧರ್ಮ ಕೇಂದ್ರದ ಗುರುಗಳು ಎಲ್ಲಾ ಯುವಜನರನ್ನು ಕುರಿತು ಹೀಗೆಂದರು ಯುವಜನರು ಸಮಾಜದ ಹಾಗೂ ಧರ್ಮ ಸಭೆಯ ಸ್ತಂಭಗಳಾಗಿದ್ದಾರೆ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಮನ ಮುಟ್ಟುವ ಹಾಗೆ ತಮ್ಮ ಹಿತನುಡಿಯನ್ನು ಯುವಜನರನ್ನು ಕುರಿತು ನೀಡಿದರು. ಗುಲ್ಬರ್ಗ ಧರ್ಮ ಕ್ಷೇತ್ರದ ಯುವ ನಿರ್ದೇಶಕರಾದ ಫಾದರ್ ಸಚಿನ್ ರವರು ಎಲ್ಲ ಯುವಜನರನ್ನು ಕುರಿತು ಏಕತೆ ಮತ್ತು ವೈವಿಧ್ಯತೆಯಲ್ಲಿ ನಮ್ಮ ಪಾತ್ರವನ್ನ ತಿಳಿಸಿದರು ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುವಂತಹ ಜವಾಬ್ದಾರಿಯನ್ನು ನಾವೆಲ್ಲರೂ ಹೊಂದಿದ್ದೇವೆ ಯುವಜನರಾಗಿ ನಾವು ಸಮಾಜವನ್ನು ಕಟ್ಟದಿದ್ದರೆ ಸಮಾಜದ ದುರ್ಗತಿಯನ್ನು ನಮ್ಮ ಕಣ್ಣಮುಂದೆಯೇ ಕಾಣಬೇಕಾಗುತ್ತದೆ ಎಂದು ಯುವ ಜನರಿಗೆ ಮನಮುಟ್ಟುವಾಹಾಗೆ ಹೇಳಿದರು. ತದನಂತರ ಯುವ ಜನರಿಗೆ ಯುವ ಸಚೇತಕರು ಅನೇಕ ಚಟುವಟಿಕೆಯನ್ನು ಆಯೋಜಿಸಿದರು ಎಲ್ಲ ಯುವಜನರು ಈ ಚಟುವಟಿಕೆಯಲ್ಲಿ ಭಾಗವಹಿಸಿದ್ದರು. ಈ ಒಂದು ಕಾರ್ಯಕ್ರಮವನ್ನು ದಿವ್ಯ ಬಲಿ ಪೂಜೆಯ ಮೂಲಕ ಕೊನೆಗೊಳಿಸಲಾಯಿತು. ಇದರಲ್ಲಿ ಭಾಗವಹಿಸಿದವರು ಫಾದರ್ಸ್ ಸ್ಟ್ಯಾನಿ, ಫಾದರ್ ಆರೋಗ್ಯ, ಫಾದರ್ ಜಾರ್ಜ್, ಫಾದರ್ ಸಚಿನ್ ಕ್ರಿಸ್ಟಿ, ಸಿಸ್ಟರ್ ಕ್ರಿಸ್ಟಿನ, ಸಿಸ್ಟರ್ ಜೋಸ್ಫಿನ್, ಸಿಸ್ಟರ್ ಅಣ್ಣಮರಿಯ.
ಫಾದರ್ ಸಚಿನ್ ಕ್ರಿಸ್ಟಿ, ಯುವ ನಿರ್ದೇಶಕರು, ಗುಲ್ಬರ್ಗ ಧರ್ಮ ಕ್ಷೇತ್ರ
ವಂದೇ ಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಶೇ.12 ಡಿವಿಡೆಂಡ್ ಘೋಷಣೆ
1984-85ನೇ ಸಾಲಿನ ಕುಂದಾಪುರ ಭಂಡಾರ್ಕಾರ್ಸ್ ಕಾಲೇಜು ಹಳೇ ವಿದ್ಯಾರ್ಥಿಗಳು ಸ್ಥಾಪಿಸಿದ ವಂದೇ ಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ 14ನೇ ವಾರ್ಷಿಕ ಮಹಾಸಭೆ ಸಂಘದ ಸಭಾಂಗಣದಲ್ಲಿ ನಡೆದು, ಸದಸ್ಯರಿಗೆ ಶೇ.12 ಡಿವಿಡೆಂಡ್ ಘೋಷಣೆ ಮಾಡಲಾಯಿತು.
ವಂದೇ ಮಾತರಂ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಾಜಗೋಪಾಲ ಎಮ್. ಅಧ್ಯಕ್ಷತೆ ವಹಿಸಿ, ಸಂಘ ಉತ್ತಮ ಪ್ರಗತಿ ಪಥದಲ್ಲಿ ಮುನ್ನಡೆಯುತ್ತಿದ್ದು, 4.40 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ ಎಂದು ಹೇಳಿದರು.
ಸಂಘದ ನಿರ್ದೇಶಕರಾದ ದಿನೇಶ ನಾವಡ, ರಘುರಾಮ್ ಶೆಟ್ಟಿ ಸಿ, ಶಾಂತಿ ಕಾಮತ್ ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ನಾಗರಾಜ ಶೇರೆಗಾರ್ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಗನ್ನಾಥ ಪುತ್ರನ್ ವರದಿ ಹಾಗೂ ಆಯವ್ಯಯ ಮಂಡಿಸಿದರು.
ನಿರ್ದೇಶಕ ಮಂಜುನಾಥ ಗಾಣಿಗರು ಕಾರ್ಯಕ್ರಮ ನಿರೂಪಿಸಿದರು. ಸ್ಥಾಪಕಾಧ್ಯಕ್ಷ ವಿನಯ ಎ. ಪಾೈಸ್ ವಂದಿಸಿದರು.
ಸೇಂಟ್ ರಾಫೆಲ್ ಚರ್ಚ್ ಬದ್ಯಾರ್ ‘ಜಲಬಂಧನ್’ ನೀರು ಕೊಯ್ಲು ಜಾಗೃತಿ ಕಾರ್ಯಕ್ರಮ / St Raphael Church Badyar Organizes ‘Jalabandhan’ water harvesting awareness programme
25 ಆಗಸ್ಟ್ 2024 ರಂದು ಭಾನುವಾರ ಸೇಂಟ್ ರಾಫೆಲ್ ಚರ್ಚ್ ಬದ್ಯಾರ್ನಲ್ಲಿ ನೀರು ಕೊಯ್ಲು ಜಾಗೃತಿ ಕಾರ್ಯಕ್ರಮ ‘ಜಲಬಂಧನ್’ ನಡೆಯಿತು. ಮಾಸಾಚರಣೆಯ ನಂತರ, ಬಾವಿ ಮತ್ತು ಕೊಳವೆ ಬಾವಿಗಳನ್ನು ತೆರೆಯಲು ನೀರು ಕೊಯ್ಲು ಮಾಡುವ ವಿಧಾನಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಪ್ರಾಯೋಗಿಕ ಪ್ರಾತ್ಯಕ್ಷಿಕೆ ಅಧಿವೇಶನವನ್ನು ಯೋಜಿಸಲಾಗಿದೆ. ಈ ಸಂವಾದಾತ್ಮಕ ಅಧಿವೇಶನದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು. ನಂತರ ಚರ್ಚ್ ಸಭಾಂಗಣದಲ್ಲಿ ಜಾಗೃತಿ ಸಂವಾದವನ್ನು ಆಯೋಜಿಸಲಾಯಿತು ಮತ್ತು ಡಾ.ಯು.ಪಿ.ಶಿವಾನಂದ್ ಸಿಇಒ, “ಸುಧಿ” ಮಾಧ್ಯಮ ಸಮೂಹ ಬೆಳ್ತಂಗಡಿ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಈ ಕಾರ್ಯಕ್ರಮವನ್ನು ಕ್ಯಾಥೋಲಿಕ್ ಸಭಾ ಬದ್ಯಾರ್ ಘಟಕವು ಐಸಿವೈಎಂ ಬದ್ಯಾರ್ ಮತ್ತು ಪರಿಸರ ಆಯೋಗದ ಬದ್ಯಾರ್ ಚರ್ಚ್ ಸಹಯೋಗದಲ್ಲಿ ಜಂಟಿಯಾಗಿ ಆಯೋಜಿಸಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬದ್ಯಾರ್ ಚರ್ಚ್ನ ಧರ್ಮಗುರುಗಳಾದ ರೋಶನ್ ಕ್ರಾಸ್ತಾ ಮತ್ತು ಫಾದರ್ ಎಲ್.ಎಂ.ಪಿಂಟೋ ಆಸ್ಪತ್ರೆಯ ಆಡಳಿತಾಧಿಕಾರಿ ವಂದಿಸಿದರು. ವೇದಿಕೆಯಲ್ಲಿ ಶ್ರೀ ವಲೇರಿಯನ್ ಕ್ರಾಸ್ತಾ ಪಾಲಿಕೆ ಉಪಾಧ್ಯಕ್ಷೆ, ಪ್ರೇಮಲತಾ ಫ್ರಾಂಕ್ ಕಾರ್ಯದರ್ಶಿ ಪ್ಯಾರಿಷ್ ಪಾಲನಾ ಪರಿಷತ್ತು, ಶ್ರೀ ರವಿ ಗೋವಸ್ ಅಧ್ಯಕ್ಷ ಕೆಥೋಲಿಕ್ ಸಭಾ, ಮಿಸ್ ವಿನಿತಾ ಫೆರ್ನಾಂಡಿಸ್ ಐಸಿವೈಎಂ ಅಧ್ಯಕ್ಷೆ, ಪರಿಸರ ಆಯೋಗದ ಅಧ್ಯಕ್ಷ ಶ್ರೀ ಮ್ಯಾಕ್ಸಿಮ್ ಸಿಕ್ವೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ICYM ಸದಸ್ಯರು ಪ್ರಾರ್ಥನಾ ಗೀತೆಯ ಮೂಲಕ ದೇವರ ಆಶೀರ್ವಾದವನ್ನು ಕೋರಿದರು. ಶ್ರೀ ಅರವಿನ್ ಗೋವಸ್ ಸ್ವಾಗತಿಸಿದರು. ರವಿ ಗೋವಸ್ ವಂದಿಸಿದರು. ಜೆರಾಲ್ಡ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
St Raphael Church Badyar Organizes ‘Jalabandhan’ water harvesting awareness programme
Water harvesting awareness programme ‘Jalabhandhan’ was held at St Raphael Church Badyar on Sunday 25th August 2024. After the Mass, practical demonstration session was planned to create awareness among the community on water harvesting methods to open wells and bore wells. Large number of faithful participated in this interactive session. Later in the Church hall, an awareness talk was organized and Dr U.P Shivanand CEO, “Sudhi” media group Belthangady was the resource person. This programme was jointly organized by Catholic Sabha Badyar unit in association with ICYM Badyar and Commission for environment Badyar Church. Rev. Fr Roshan Crasta Parish Priest of Badyar Church and administer of Fr L.M Pinto Hospital presided over the programme. Mr Valerian Crasta Vice president Parish Pastoral Parishad, Mrs Premlatha Frank Secretary Parish Pastoral Parishad, Mr Ravi Goveas President Catholic Sabha, Miss Vinitha Fernandes President ICYM, Mr Maxim Sequiera Chairperson for the commission of environment were present on the dais. Members of ICYM invoked God’s blessings through a prayer Song. Mr Arvin Goveas welcomed the gathering. Mr Ravi Goveas proposed vote of thanks. Mr Jerald DSouza compered the programme.
ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಆಶ್ರಯದಾತೆ “ಮದರ್ ತೆರೇಸಾ ರವರ 114ನೇ ಜನ್ಮದಿನಾಚರಣೆ” ಅಂಗವಾಗಿ ಚಾರಿಟಿ ಡೇ ಉದ್ಘಾಟನೆ
ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ ಸೋಮವಾರ ದಿನಾಂಕ 26 ಆಗಸ್ಟ್ 2024 ರಂದು ಮಹಾನ್ ಮಾನವತಾವಾದಿಯಾಗಿರುವ ಮದರ್ ತೆರೇಸಾರವರ 114ನೇ ಜನ್ಮದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು ಸರಿಸುಮಾರು 45 ವರ್ಷಗಳ ಕಾಲ ಬಡವರ, ರೋಗಿಗಳ, ಅನಾಥರ ಮತ್ತು ಮರಣ
ಸಂಕಟದಲ್ಲಿರುವವರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಇವರು ಒಬ್ಬ ಮಾನವತಾವಾದಿಗಳಾಗಿ ಬಡವರ, ನಿರ್ಗತಿಕರ,ರೋಗಿಗಳ, ಅನಾಥರ, ವೃದ್ಧರ ಪರವಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಇವರಿಗೆ ವಿಶ್ವದ ಅತ್ಯುನ್ನತ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಭಾರತರತ್ನ, ಗೋಲ್ಡನ್ ಆನರ್ ಆಫ್ ದಿ ನೇಶನ್, ಪದ್ಮಶ್ರೀ, ಜವಾಹರ್ ಲಾಲ್ ನೆಹರು, ರಾಮನ್ ಮಾಗಸೆಸ್ಸೆ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ ಪುರಸ್ಕೃತರಾದ ಮಹಾನ್ ಚೇತನರ ಜನ್ಮದಿನಾಚರಣೆಯನ್ನು ದೀಪ ಪ್ರಜ್ವಲಿಸಿ ಪುಷ್ಪಾರ್ಚನೆಯೊಂದಿಗೆ ಆಚರಿಸಲಾಯಿತು ಸಂಸ್ಥೆಯ 1229 ವಿದ್ಯಾರ್ಥಿಗಳೂ ಮಹಾನ್ ಮಾನವತಾವಾದಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಸೆಪ್ಟೆಂಬರ್ ಮಾಹೆಯನ್ನು ಪೂರ್ಣವಾಗಿ ಚಾರಿಟಿ ತಿಂಗಳನ್ನಾಗಿ ಆಚರಿಸುವ ಉದ್ದೇಶದಿಂದ ಎಲ್ಲಾ ಮಕ್ಕಳಲ್ಲಿ ಪರೋಪಕಾರ, ವಾತ್ಸಲ್ಯ, ದಾನಧರ್ಮ ಮತ್ತು ಕರುಣಾ ಮನೋಭಾವವನ್ನು ಅಳವಡಿಸಿಕೊಳ್ಳುವತೆ ಪ್ರೆರೇಪಿಸಲಾಯಿತು
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿಗಳು, ಮುಖ್ಯಶಿಕ್ಷಕರು, ಉಪಾಪ್ರಾಂಶುಪಾಲರು, ಸಂಯೋಜಕರು, ಉಪನ್ಯಾಸಕರು, ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು
ವಿದ್ಯಾರ್ಥಿಗಳಿಗೆ ಮದರ್ ತೆರೇಸಾ ರವರ ಭಾವಚಿತ್ರ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಿ ನಂತರ ಮದರ್ ತೆರೇಸಾರವರ ಭಾವಚಿತ್ರದ ಪ್ರದರ್ಶನ ಏರ್ಪಡಿಸಲಾಯಿತು. ಕೊನೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಹಿ ವಿತರಿಸಲಾಯಿತು.
ಅವರ್ ಲೇಡಿ ಆಫ್ ಹೆಲ್ತ್ ಮೈನರ್ ಬೆಸಿಲಿಕಾ, ಹರಿಹರದ ವಾರ್ಷಿಕ ಹಬ್ಬ, 08 ಸೆಪ್ಟೆಂಬರ್ 2024 ರಂದು ನೊವೆನಾ ಆಗಸ್ಟ್ 30 ರಂದು ಪ್ರಾರಂಭ / Annual feast of Our Lady of Health Minor Basilica, Harihar, ON 08 SEPTEMBER 2024 Novena beginnig on August 30
ಹರಿಹರ ಬೆಸಿಲಿಕಾ ಇತಿಹಾಸ
ಅನೇಕ ಚರ್ಚುಗಳು ಮತ್ತು ಬೆಸಿಲಿಕಾಗಳು ತಮ್ಮ ಇತಿಹಾಸದಲ್ಲಿ ಕೆಲವು ಹಂತದಲ್ಲಿ ಸಂಭವಿಸಿದ ಅಸಾಧಾರಣ ಘಟನೆಯ ಹಿನ್ನೆಲೆಯಲ್ಲಿ ಸ್ಥಾಪಿಸಲ್ಪಟ್ಟವು. ಅವರ್ ಲೇಡಿ ಆಫ್ ಹೆಲ್ತ್ ಬೆಸಿಲಿಕಾ ಹೆಚ್ಚು ವ್ಯಾಪಕವಾಗಿ ತಿಳಿದಿರುವಂತೆ ಹರಿಹರ ಚರ್ಚ್ ಈ ನಿಯಮಕ್ಕೆ ಹೊರತಾಗಿಲ್ಲ. ಇದರ ಕಥೆಯು 1800 ರ ದಶಕದ ಆರಂಭದಲ್ಲಿ ಅದರ ದಡದಲ್ಲಿ ಸ್ನಾನ ಮಾಡುತ್ತಿದ್ದ ಬ್ರಾಹ್ಮಣನು ಆಕಸ್ಮಿಕವಾಗಿ ಊದಿಕೊಂಡ ತುಂಗಭದ್ರಾ ನದಿಗೆ ಬಿದ್ದಾಗ ಪ್ರಾರಂಭವಾಗುತ್ತದೆ. ಸ್ಥಳೀಯ ಸಂಪ್ರದಾಯದ ಪ್ರಕಾರ, ಅವರು ಅವರ್ ಲೇಡಿ ಆಫ್ ಹೆಲ್ತ್ನ ತೇಲುವ ಪ್ರತಿಮೆಯನ್ನು ನೋಡಿದರು ಮತ್ತು ಮುಳುಗುವಿಕೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು. ಅವರು ಪ್ರತಿಮೆಯನ್ನು ಮನೆಗೆ ಕೊಂಡೊಯ್ದರು ಮತ್ತು ಅವರ ಪತ್ನಿ ಮತ್ತು ಮಕ್ಕಳು ಸಹ ಅವರ ಅನಾರೋಗ್ಯದಿಂದ ಅದ್ಭುತವಾಗಿ ಗುಣಮುಖರಾದರು.
ಆ ಸಮಯದಿಂದ, ಬ್ರಾಹ್ಮಣನು ತನ್ನನ್ನು ಕೆಲವು ವರ್ಷಗಳ ನಂತರ ಸಾಯುವವರೆಗೂ ಅವರ್ ಲೇಡಿಯ ಸೇವೆಗೆ ಸಂಪೂರ್ಣವಾಗಿ ಅರ್ಪಿಸಿಕೊಂಡನು. ಅವರ ವಸತಿ ಆಸ್ತಿಯಲ್ಲಿ ಅವರನ್ನು ಸಮಾಧಿ ಮಾಡಲಾಯಿತು, ಸ್ವಲ್ಪ ಸಮಯದ ನಂತರ ಚರ್ಚ್ ಅನ್ನು ನಿರ್ಮಿಸಲಾಯಿತು. ಈ ದೇಗುಲವು ತುಂಗಭದ್ರಾ ನದಿಯ ಸಮೀಪದಲ್ಲಿದೆ ಮತ್ತು ಕರ್ನಾಟಕದ ಅನೇಕ ಭಾಗಗಳ ಜನರ ಯಾತ್ರಾ ಕೇಂದ್ರವಾಗಿ ಬೆಳೆದಿದೆ. ಹರಿಹರ ಚರ್ಚ್ ವಿವಿಧ ಭಾಷೆಗಳನ್ನು ಮಾತನಾಡುವ ವಿವಿಧ ಧರ್ಮಗಳ ಜನರಿಗೆ ಅಯಸ್ಕಾಂತದಂತೆ ಕಾರ್ಯನಿರ್ವಹಿಸುತ್ತದೆ. ಅದು ‘ಕರ್ನಾಟಕದ ವೈಲಾಂಕಣಿ’ ಎಂಬ ಶಬ್ದವನ್ನು ಏಕೆ ಗಳಿಸಿದೆ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳುವುದು ಸುಲಭ.
ಹರಿಹರವು ಹಿಂದಿನ ಮೈಸೂರು ರಾಜ್ಯದ ಭಾಗವಾಗಿದ್ದ ದಾವಣಗೆರೆ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. 1833 ರಲ್ಲಿ, ಪಾಂಡಿಚೇರಿಯಲ್ಲಿ ದೀಕ್ಷೆ ಪಡೆದ ಫ್ರೆಂಚ್ MEP ಪಾದ್ರಿ ಫ್ರಾ ಬಿಗೋಟ್ ಬ್ಯೂಕ್ಲೇರ್ ಅವರು ಹರಿಹರಕ್ಕೆ ಭೇಟಿ ನೀಡಿದರು. ಪೂಜ್ಯ ಕನ್ಯೆಯ ಪ್ರತಿಮೆಯನ್ನು ಬಹಳ ಭಕ್ತಿಯಿಂದ ಪೂಜಿಸಲಾಗಿದ್ದ ಸ್ಥಳಕ್ಕೆ ಯಾತ್ರಾರ್ಥಿಗಳು ಸೇರುವುದನ್ನು ಅವರು ವೀಕ್ಷಿಸಿದರು ಎಂದು ಹೇಳಲಾಗುತ್ತದೆ. ಪ್ರತಿಮೆಯ ಹಿಂದಿನ ದಂತಕಥೆ ಮತ್ತು ಜನರು ಅದರ ಬಗ್ಗೆ ಭಕ್ತಿಯನ್ನು ಪ್ರದರ್ಶಿಸಲು ಕಾರಣವೇನು ಎಂದು ಅವರಿಗೆ ನಂತರ ತಿಳಿಸಲಾಯಿತು. ಹರಿಹರದಲ್ಲಿ ಬ್ರಾಹ್ಮಣರ ಕುಟುಂಬ ದಾನವಾಗಿ ನೀಡಿದ ಆಸ್ತಿಯಲ್ಲಿ ಫ್ರಾ ಬಿಗೋಟ್ ಚರ್ಚ್ ನಿರ್ಮಿಸಿದ್ದಾರೆ ಎಂದು ದಾಖಲಿಸಲಾಗಿದೆ.
ಹರಿಹರ ಚರ್ಚ್ನ ಖ್ಯಾತಿಯು ಈ ಪ್ರದೇಶದಲ್ಲಿ ಗಣನೀಯವಾಗಿ ಹರಡಿದ್ದರೂ, ಆ ಊರಿನ ಕ್ರಿಶ್ಚಿಯನ್ನರ ಆಧ್ಯಾತ್ಮಿಕ ಅಗತ್ಯಗಳನ್ನು ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಚರ್ಚ್ನ ಪಾದ್ರಿಗಳು ಪೂರೈಸಿದರು. 1870 ರಲ್ಲಿ, ಫ್ರೆಂಚ್ MEP ಪಾದ್ರಿ, ಶಿವಮೊಗ್ಗದ ಫ್ರಾ ಕ್ಲೀನರ್ ಅವರಿಗೆ ಈ ಪ್ಯಾರಿಷ್ನ ಆರೈಕೆಯನ್ನು ವಹಿಸಲಾಯಿತು. ಫ್ರೆಂಚ್ ವಸಾಹತು ಪಾಂಡಿಚೇರಿಯಿಂದ ಅನೇಕ ಫ್ರೆಂಚ್ ಪಾದ್ರಿಗಳನ್ನು ಶಿವಮೊಗ್ಗ ಡಯಾಸಿಸ್ಗೆ ನಿಯೋಜಿಸಲಾಯಿತು. ಕಾಲಾನಂತರದಲ್ಲಿ, ಪೂಜ್ಯ ವರ್ಜಿನ್ ಮೇರಿ ನೇಟಿವಿಟಿಯಾದ ಸೆಪ್ಟೆಂಬರ್ 8 ರಂದು ದೇವಾಲಯದ ಹಬ್ಬದ ದಿನವನ್ನು ಆಚರಿಸಲಾಯಿತು.
ಹರಿಹರ ಬೆಸಿಲಿಕಾ ಇತಿಹಾಸ
1954 ರಲ್ಲಿ, ಪುಣೆ-ಬೆಂಗಳೂರು ರಸ್ತೆಯಲ್ಲಿ ಹೊಸ ಚರ್ಚ್ ನಿರ್ಮಾಣಕ್ಕಾಗಿ ಭೂಮಿಯನ್ನು ಖರೀದಿಸಲಾಯಿತು. 1963 ರಲ್ಲಿ ಹೊಸ ಚರ್ಚ್ ಅನ್ನು ನಿರ್ಮಿಸಲಾಯಿತು ಮತ್ತು ಬೆಂಗಳೂರಿನ ಆರ್ಚ್ಬಿಷಪ್ ಆರ್ಚ್ಬಿಷಪ್ ಥಾಮಸ್ ಪೋತಕಮುರಿ ಅವರು ಪವಿತ್ರಗೊಳಿಸಿದರು. ಮೂಲ ದೇಗುಲದಿಂದ ಅದ್ಭುತವಾದ ಪ್ರತಿಮೆಯನ್ನು ಹೊಸ ಚರ್ಚ್ಗೆ ಸ್ಥಳಾಂತರಿಸಲಾಯಿತು. ಈ ಚರ್ಚ್ ಅನ್ನು 1992 ರಲ್ಲಿ ಪ್ರಸ್ತುತ ಕಟ್ಟಡದಿಂದ ಬದಲಾಯಿಸಲಾಯಿತು, ಇದು ಅನನ್ಯ ವಾಸ್ತುಶಿಲ್ಪದ ಕೌಶಲ್ಯಗಳಿಗೆ ಉದಾಹರಣೆಯಾಗಿದೆ.
ಹರಿಹರ ಚರ್ಚ್ ಚಿಮ್ಮಿ ಬೆಳೆದಿದೆ ಮತ್ತು 2018 ರಲ್ಲಿ ನೇಟಿವಿಟಿಯ ಕೊನೆಯ ಹಬ್ಬಕ್ಕೆ 200,000 ಕ್ಕೂ ಹೆಚ್ಚು ಜನಸಮೂಹವನ್ನು ಆಕರ್ಷಿಸಿದೆ ಎಂದು ಹೇಳಲಾಗುತ್ತದೆ. ಕರ್ನಾಟಕದಲ್ಲಿನ ಕ್ರಿಶ್ಚಿಯನ್ ಸಮುದಾಯಕ್ಕೆ ಅದರ ಗಣನೀಯ ಪ್ರಾಮುಖ್ಯತೆಯ ದೃಷ್ಟಿಯಿಂದ, ವ್ಯಾಟಿಕನ್ ಅವರ್ ಲೇಡಿ ದೇವಾಲಯವನ್ನು ಬೆಳೆಸಿದೆ. ಹರಿಹರದ ಆರೋಗ್ಯವು 18 ಸೆಪ್ಟೆಂಬರ್ 2019 ರಂದು ಮೈನರ್ ಬೆಸಿಲಿಕಾ ಸ್ಥಿತಿಗೆ ತಲುಪಿದೆ. ಅನೇಕ ಚರ್ಚ್ಗಳು ಮತ್ತು ಬೆಸಿಲಿಕಾಗಳು ತಮ್ಮ ಇತಿಹಾಸದಲ್ಲಿ ಕೆಲವು ಹಂತದಲ್ಲಿ ಸಂಭವಿಸಿದ ಅಸಾಧಾರಣ ಘಟನೆಯ ಹಿನ್ನೆಲೆಯಲ್ಲಿ ಸ್ಥಾಪಿಸಲ್ಪಟ್ಟಿವೆ. ಅವರ್ ಲೇಡಿ ಆಫ್ ಹೆಲ್ತ್ ಬೆಸಿಲಿಕಾ ಹೆಚ್ಚು ವ್ಯಾಪಕವಾಗಿ ತಿಳಿದಿರುವಂತೆ ಹರಿಹರ ಚರ್ಚ್ ಈ ನಿಯಮಕ್ಕೆ ಹೊರತಾಗಿಲ್ಲ. ಇದರ ಕಥೆಯು 1800 ರ ದಶಕದ ಆರಂಭದಲ್ಲಿ ಅದರ ದಡದಲ್ಲಿ ಸ್ನಾನ ಮಾಡುತ್ತಿದ್ದ ಬ್ರಾಹ್ಮಣನು ಆಕಸ್ಮಿಕವಾಗಿ ಊದಿಕೊಂಡ ತುಂಗಭದ್ರಾ ನದಿಗೆ ಬಿದ್ದಾಗ ಪ್ರಾರಂಭವಾಗುತ್ತದೆ. ಸ್ಥಳೀಯ ಸಂಪ್ರದಾಯದ ಪ್ರಕಾರ, ಅವರು ಅವರ್ ಲೇಡಿ ಆಫ್ ಹೆಲ್ತ್ನ ತೇಲುವ ಪ್ರತಿಮೆಯನ್ನು ನೋಡಿದರು ಮತ್ತು ಮುಳುಗುವಿಕೆಯಿಂದ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು. ಅವರು ಪ್ರತಿಮೆಯನ್ನು ಮನೆಗೆ ಕೊಂಡೊಯ್ದರು ಮತ್ತು ಅವರ ಪತ್ನಿ ಮತ್ತು ಮಕ್ಕಳು ಸಹ ಅವರ ಅನಾರೋಗ್ಯದಿಂದ ಅದ್ಭುತವಾಗಿ ಗುಣಮುಖರಾದರು.
ಆ ಸಮಯದಿಂದ, ಬ್ರಾಹ್ಮಣನು ತನ್ನನ್ನು ಕೆಲವು ವರ್ಷಗಳ ನಂತರ ಸಾಯುವವರೆಗೂ ಅವರ್ ಲೇಡಿಯ ಸೇವೆಗೆ ಸಂಪೂರ್ಣವಾಗಿ ಅರ್ಪಿಸಿಕೊಂಡನು. ಅವರ ವಸತಿ ಆಸ್ತಿಯಲ್ಲಿ ಅವರನ್ನು ಸಮಾಧಿ ಮಾಡಲಾಯಿತು, ಸ್ವಲ್ಪ ಸಮಯದ ನಂತರ ಚರ್ಚ್ ಅನ್ನು ನಿರ್ಮಿಸಲಾಯಿತು. ಈ ದೇಗುಲವು ತುಂಗಭದ್ರಾ ನದಿಯ ಸಮೀಪದಲ್ಲಿದೆ ಮತ್ತು ಕರ್ನಾಟಕದ ಅನೇಕ ಭಾಗಗಳ ಜನರ ಯಾತ್ರಾ ಕೇಂದ್ರವಾಗಿ ಬೆಳೆದಿದೆ. ಹರಿಹರ ಚರ್ಚ್ ವಿವಿಧ ಭಾಷೆಗಳನ್ನು ಮಾತನಾಡುವ ವಿವಿಧ ಧರ್ಮಗಳ ಜನರಿಗೆ ಅಯಸ್ಕಾಂತದಂತೆ ಕಾರ್ಯನಿರ್ವಹಿಸುತ್ತದೆ. ಅದು ‘ಕರ್ನಾಟಕದ ವೈಲಾಂಕಣಿ’ ಎಂಬ ಶಬ್ದವನ್ನು ಏಕೆ ಗಳಿಸಿದೆ ಎಂಬುದನ್ನು ನಿಖರವಾಗಿ ಅರ್ಥಮಾಡಿಕೊಳ್ಳುವುದು ಸುಲಭ.
ಹರಿಹರವು ಹಿಂದಿನ ಮೈಸೂರು ರಾಜ್ಯದ ಭಾಗವಾಗಿದ್ದ ದಾವಣಗೆರೆ ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. 1833 ರಲ್ಲಿ, ಪಾಂಡಿಚೇರಿಯಲ್ಲಿ ದೀಕ್ಷೆ ಪಡೆದ ಫ್ರೆಂಚ್ MEP ಪಾದ್ರಿ ಫ್ರಾ ಬಿಗೋಟ್ ಬ್ಯೂಕ್ಲೇರ್ ಅವರು ಹರಿಹರಕ್ಕೆ ಭೇಟಿ ನೀಡಿದರು. ಪೂಜ್ಯ ಕನ್ಯೆಯ ಪ್ರತಿಮೆಯನ್ನು ಬಹಳ ಭಕ್ತಿಯಿಂದ ಪೂಜಿಸಲಾಗಿದ್ದ ಸ್ಥಳಕ್ಕೆ ಯಾತ್ರಾರ್ಥಿಗಳು ಸೇರುವುದನ್ನು ಅವರು ವೀಕ್ಷಿಸಿದರು ಎಂದು ಹೇಳಲಾಗುತ್ತದೆ. ಪ್ರತಿಮೆಯ ಹಿಂದಿನ ದಂತಕಥೆ ಮತ್ತು ಜನರು ಅದರ ಬಗ್ಗೆ ಭಕ್ತಿಯನ್ನು ಪ್ರದರ್ಶಿಸಲು ಕಾರಣವೇನು ಎಂದು ಅವರಿಗೆ ನಂತರ ತಿಳಿಸಲಾಯಿತು. ಹರಿಹರದಲ್ಲಿ ಬ್ರಾಹ್ಮಣರ ಕುಟುಂಬ ದಾನವಾಗಿ ನೀಡಿದ ಆಸ್ತಿಯಲ್ಲಿ ಫ್ರಾ ಬಿಗೋಟ್ ಚರ್ಚ್ ನಿರ್ಮಿಸಿದ್ದಾರೆ ಎಂದು ದಾಖಲಿಸಲಾಗಿದೆ.
ಹರಿಹರ ಚರ್ಚ್ನ ಖ್ಯಾತಿಯು ಈ ಪ್ರದೇಶದಲ್ಲಿ ಗಣನೀಯವಾಗಿ ಹರಡಿದ್ದರೂ, ಆ ಊರಿನ ಕ್ರೈಸ್ತರ ಆಧ್ಯಾತ್ಮಿಕ ಅಗತ್ಯಗಳನ್ನು ಶುಶ್ರೂಷೆ ಮಾಡಲಾಯಿತು.
Annual feast of Our Lady of Health Minor Basilica, Harihar, ON 08 SEPTEMBER 2024 Novena beginnig on August 30
HISTORY OF HARIHAR BASILICA
Many churches and basilicas of note were established in the wake of an extraordinary event that occurred at some point in their history. Harihar church, as the Basilica of Our Lady of Health is more widely known, is no exception to this rule. Its story begins sometime in the early 1800’s when a Brahmin who was bathing on its banks, accidentally fell into the swollen River Tungabhadra. According to local tradition, he saw a floating statue of Our Lady of Health and was able to save himself from drowning. He carried the statue back home and his wife and children too were miraculously healed of their ill health.
From that point of time, the Brahmin devoted himself completely to the service of Our Lady, until his death a few years later. He was laid to rest in his residential property, on which after some time a church was built. The shrine is situated quite close to the River Tungabhadra and has grown into a centre of pilgrimage from people of many parts of Karnataka. Harihar church acts like a magnet to people of different faiths who speak varied languages. It is easy to understand exactly why it has earned the sobriquet ‘Vailankanni of Karnataka’.
Harihar is a small town in Davangere district which was part of the erstwhile Mysore state. In 1833, the French MEP priest Fr Bigot Beauclair who was ordained in Pondicherry, paid a visit to Harihar. He is said to have witnessed pilgrims flocking to a place where a statue of the Blessed Virgin was venerated with great devotion. He was then informed of the legend behind the statue and what caused people to display such devotion to it. It is recorded that Fr Bigot built the church on the property donated by the Brahmin’s family in Harihar.
Although the fame of the Harihar church had spread considerably in the region, the spiritual needs of the Christians in that town were ministered to by priests from the Sacred Heart church at Shimoga. In 1870, the French MEP priest, Fr Kleiner from Shimoga was entrusted the care of this parish. Many of the French priests were deputed to Shimoga diocese, from the French colony of Pondicherry. In course of time the Feast Day of the shrine was celebrated on September 8th, which is the Nativity of the Blessed Virgin Mary.
HISTORY OF HARIHAR BASILICA
In 1954, land for the construction of a new church was purchased on the Pune-Bangalore road. A new church was built in 1963 and was consecrated by Archbishop Thomas Pothakamury, the Archbishop of Bangalore. The miraculous statue from the original shrine was shifted to the new Church. This church was replaced by the present edifice in 1992, which is an example of unique architectural skills.
Harihar church has grown in leaps and bounds and is said to have attracted a crowd of over 200,000 to the last Feast of the Nativity in 2018. In view of its considerable importance to the Christian community in Karnataka, the Vatican raised the Shrine of Our Lady of Health at Harihar to the status of a Minor Basilica on 18 September 2019. Many churches and basilicas of note were established in the wake of an extraordinary event that occurred at some point in their history. Harihar church, as the Basilica of Our Lady of Health is more widely known, is no exception to this rule. Its story begins sometime in the early 1800’s when a Brahmin who was bathing on its banks, accidentally fell into the swollen River Tungabhadra. According to local tradition, he saw a floating statue of Our Lady of Health and was able to save himself from drowning. He carried the statue back home and his wife and children too were miraculously healed of their ill health.
From that point of time, the Brahmin devoted himself completely to the service of Our Lady, until his death a few years later. He was laid to rest in his residential property, on which after some time a church was built. The shrine is situated quite close to the River Tungabhadra and has grown into a centre of pilgrimage from people of many parts of Karnataka. Harihar church acts like a magnet to people of different faiths who speak varied languages. It is easy to understand exactly why it has earned the sobriquet ‘Vailankanni of Karnataka’.
Harihar is a small town in Davangere district which was part of the erstwhile Mysore state. In 1833, the French MEP priest Fr Bigot Beauclair who was ordained in Pondicherry, paid a visit to Harihar. He is said to have witnessed pilgrims flocking to a place where a statue of the Blessed Virgin was venerated with great devotion. He was then informed of the legend behind the statue and what caused people to display such devotion to it. It is recorded that Fr Bigot built the church on the property donated by the Brahmin’s family in Harihar.
Although the fame of the Harihar church had spread considerably in the region, the spiritual needs of the Christians in that town were ministered.
ಕುಂದಾಪುರದ ರಂಗನಹಿತ್ಲು – ಮುದ್ದು ರಾಧೆ, ಮುದ್ದು ಕೃಷ್ಣ ವೇಷ ಸ್ಪರ್ಧೆ
ಕುಂದಾಪುರದ ರಂಗನಹಿತ್ಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ವಠಾರದಲ್ಲಿ ಸಹಾಯನಿಧಿ ಚರ್ಚ್ರೋಡ್ ಫ್ರೆಂಡ್ಸ್ ಇವರ ಆಶ್ರಯದಲ್ಲಿ ರವಿವಾರ ನಡೆದ ಮುದ್ದು ರಾಧೆ, ಮುದ್ದು ಕೃಷ್ಣ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಸಹಾಯನಿಧಿ ಚರ್ಚ್ರೋಡ್ ಫ್ರೆಂಡ್ಸ್ ವತಿಯಿಂದ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಸಹಕರಿಸಿದ ಎಲ್ಲಾ ಸಹಾಯನಿಧಿ ಚರ್ಚ್ರೋಡ್ ಫ್ರೆಂಡ್ಸ್ನ ಎಲ್ಲಾ ಪದಾಧಿಕಾರಿಗಳಿಗೆ ಹಾಗೂ ಪೋಷಕ ವೃಂದದವರಿಗೂ ವಂದಿಸಲಾಯಿತು.