ಕುಂದಾಪುರ: ಹದಿಹರೆಯದ ಮಕ್ಕಳಲ್ಲಿ ಸಹಜವಾಗಿರುವಂಥ ಕೆಲವು ವರ್ತನೆ ಮತ್ತು ನಡತೆಗಳೇ ನಿಯಂತ್ರಣವಿಲ್ಲದೇ ಅತಿರೇಕಕ್ಕೇರಿದರೆ ಗಂಭೀರ ಸಮಸ್ಯೆಗಳು ಎದುರಾಗುತ್ತವೆ. ಎಚ್.ಐ.ವಿ ಪಾಸಿಟಿವ್ ಬಗ್ಗೆ ಯುವಜನತೆ ಹೆಚ್ಚಿನ ಅರಿವು ಪಡೆದು ಜೀವನದಲ್ಲಿ ಮುನ್ನಡೆಯುವ ಅಗತ್ಯವಿದೆ ಎಂದು ಕುಂದಾಪುರದ ಸರಕಾರಿ ಆಸ್ಪತ್ರೆಯ ಆಪ್ತಸಮಾಲೋಚಕರಾದ ಶ್ರೀಮತಿ ನಳಿನಾಕ್ಷಿ ಇವರು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Month: August 2024
ಮದರ್ ತೆರೇಸಾ ಮೆಮೋರಿಯಲ್ ಪ್ರೌಢಶಾಲಾ ವಿದ್ಯಾರ್ಥಿನಿ ನಂದಶ್ರೀ ವಿಜ್ಞಾನ ವಿಚಾರ ಗೋಷ್ಠಿ ಜಿಲ್ಲಾಮಟ್ಟಕ್ಕೆ ಆಯ್ಕೆ
ಅಬ್ಬನಡ್ಕದಲ್ಲಿ ಕೃಷ್ಣವೇಷ ಸ್ಪರ್ಧೆ ಬಹುಮಾನ ವಿತರಣಾ ಸಮಾರಂಭ – 110 ಮಕ್ಕಳು ಸ್ಪರ್ಧೆಯಲ್ಲಿ ಭಾಗಿ
ಬೆಳ್ಮಣ್ಣು: ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕøತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಮತ್ತು ಜೇಸಿಐ ಬೆಳ್ಮಣ್ಣು, ಯುವ ಜೇಸಿ ವಿಭಾಗ ಮತ್ತು ಮಹಿಳಾ ಜೇಸಿ ವಿಭಾಗದ ನೇತೃತ್ವದಲ್ಲಿ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸಭಾಂಗಣದಲ್ಲಿ ರವಿವಾರ ಶ್ರೀ ಕೃಷ್ಣಾಷ್ಟಮಿಯ ಪ್ರಯುಕ್ತ ಕೃಷ್ಣವೇಷ ಸ್ಪರ್ಧೆ ಜರಗಿತು. ಸ್ಪರ್ಧೆಯಲ್ಲಿ 110 ಮಕ್ಕಳು ಭಾಗವಹಿಸಿದ್ದರು.
ಜೇಸಿಐ ವಲಯಾಧಿಕಾರಿ ಪ್ರಶಾಂತ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಬೀರೊಟ್ಟು ದಿನೇಶ್ ಪೂಜಾರಿ, ಬೆಳ್ಮಣ್ಣು ಜೇಸಿಐ ಅಧ್ಯಕ್ಷೆ ಸರಿತಾ ದಿನೇಶ್ ಸುವರ್ಣ ಅವರ ಜಂಟಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಜೇಸಿಐ ವಲಯ ಉಪಾಧ್ಯಕ್ಷರಾದ ವಿಘ್ನೇಶ್ ಪ್ರಸಾದ್ ರಾವ್, ಬೈಲೂರು ಕ್ಷೇತ್ರದ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು, ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷರಾದ ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಸಂಕಲಕರಿಯ ಅಮ್ಮ ಕ್ಯಾಟರರ್ಸ್ ಮಾಲಕರಾದ ಸೋಮನಾಥ ಪೂಜಾರಿ, ಬೋಳ ಪಡುಗಿರಿ ಮೋಹನ್ ಶೆಟ್ಟಿ, ಬೋಳ ದಿಣೇಶ್ ಆಚಾರ್ಯ, ಮಂಜರಪಲ್ಕೆ ಮಂಜುನಾಥ ಕನ್ಟ್ರೆಕ್ಷನ್ ಮಾಲಕರಾದ ರೇಣು ಪಕಲ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವೇದಿಕೆಯಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಸ್ಥಾಪಕಾಧ್ಯಕ್ಷರಾದ ವಿಠಲ ಮೂಲ್ಯ ಕಾರ್ಯದರ್ಶಿ ವೀಣಾ ಪೂಜಾರಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಪದ್ಮಶ್ರೀ ಪೂಜಾರಿ, ಕಾರ್ಯಕ್ರಮದ ನಿರ್ದೇಶಕರಾದ ಸಂಧ್ಯಾ ಶೆಟ್ಟಿ, ಬೆಳ್ಮಣ್ಣು ಜೇಸಿಐ ಕಾರ್ಯದರ್ಶಿ ಸೌಜನ್ಯ ಕೋಟ್ಯಾನ್, ಮಹಿಳಾ ಜೇಸಿ ಸಂಯೋಜಕಿ ಶ್ವೇತಾ ಆಚಾರ್ಯ ಮೊದಲಾದವರು ವೇದಿಕೆಯಲ್ಲಿದ್ದರು. ಹೆಬ್ರಿ ಅಮೃತಾ ಭಾರತಿ ವಿದ್ಯಾ ಸಂಸ್ಥೆಯ ಉಪನ್ಯಾಸಕರಾದ ವೀಣೇಶ್ ಅಮೀನ್ ಅವರು ಕಾರ್ಯಕ್ರಮ ನಿರೂಪಿಸಿದರು.
ಸ್ಪರ್ಧೆಯು 0-02ವರ್ಷದೊಳಗಿನ ಮಕ್ಕಳಿಗೆ ಮುದ್ದುಕೃಷ್ಣ ಸ್ಪರ್ಧೆ, 02-04ವರ್ಷದೊಳಗಿನ ಮಕ್ಕಳಿಗೆ ಬಾಲಕೃಷ್ಣ ಸ್ಪರ್ಧೆ, 04-06 ವರ್ಷದೊಳಗಿನ ಮಕ್ಕಳಿಗೆ ಚೆಲ್ವ ಕೃಷ್ಣ ಸ್ಪರ್ಧೆ ಹಾಗೂ 07 ವರ್ಷದೊಳಗಿನ ಮಗುವಿನೊಂದಿಗೆ ತಾಯಿ ಯಶೋಧ ಕೃಷ್ಣ ಸ್ಪರ್ಧೆ ನಡೆಸಲಾಯಿತು.
ನಿಟ್ಟೆ ವಿದ್ಯಾ ಸಂಸ್ಥೆಯ ಸುರೇಖಾ ಶೆಟ್ಟಿ, ಹಾಗೂ ವಂಜಾರಕಟ್ಟೆ ವಿದ್ಯಾ ಸಂಸ್ಥೆಯ ಆಶಾ ಅವರು ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಶ್ರೀನಿವಾಸಪುರ : ಪುರಸಭಾ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂಧಿಯವರ ಕುಂದು ಕೊರತೆಗಳ ಸಭೆ
ಶ್ರೀನಿವಾಸಪುರ : ಪುರಸಭಾ ಅಧ್ಯಕ್ಷರ ಕಛೇರಿಯಲ್ಲಿಂದು ಪುರಸಭಾ ಅಧ್ಯಕ್ಷರಾದ ಬಿ.ಆರ್. ಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂಧಿಯವರ ಕುಂದು ಕೊರತೆಗಳ ಸಭೆ ನಡೆಸಿದರು.
ಪ್ರತಿ ದಿನ ಬೆಳಿಗ್ಗೆ ಎಲ್ಲಾ ಪೌರಕಾರ್ಮಿಕರು ಹಾಗೂ ಸ್ವಚ್ಛತಾ ಸಿಬ್ಬಂಧಿಯವರು ಸಮವಸ್ತ್ರ-ಸುರಕ್ಷಿತ ಸಲಕರಣೆಗಳನ್ನು ಧರಸಿ ಕರ್ತವ್ಯಕ್ಕೆ ಹಾಜರಾಗಿ ಶ್ರೀನಿವಾಸಪುರ ನಗರದ ಸುಚ್ಚಿತ್ವವನ್ನು ಕಾಪಾಡಲು ತಿಳಿಸಿದರು.
ಖಾಯಂ ಪೌರಕಾರ್ಮಿಕರಿಗೆ ಪ್ರತಿ ಮಾಹೆಯಾನ ವೇತನ ಪಾವತಿಯಾಗುವಂತೆ ಹೊರಗುತ್ತಿಗೆ ಕಾರ್ಮಿಕರಿಗೂ ಸಹ ಪ್ರತಿ ಮಾಹೆಯ 5ನೇ ತಾರೀಖಿನ ಒಳಗಾಗಿ ವೇತನ ಪಾವತಿ ಮಾಡುವಂತೆ ನೌಕರರು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಿಬ್ಬಂಧಿಗಳ ಸಮ್ಮುಖದಲ್ಲಿಯೇ ದೂರವಾಣಿ ಮೂಲಕ ಗುತ್ತಿಗೆದಾರನ್ನು ಸಂಪರ್ಕಸಿ ಬಾಕಿ ಇರುವ 03 ತಿಂಗಳ ವೇತನವನ್ನು ಇಂದೇ ಕಾರ್ಮಿಕರ ಖಾತೆಗೆ ಜಮೆ ಮಾಡುವಂತೆ ಆದೇಶಿಸಿದರು.
ಖಾಯಂ ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಲ್ಲಿ ಮನೆಗಳನ್ನು ನಿರ್ಮಿಸಲು ಇರುವ ತೊಡಕಗಳನ್ನು ಒಂದು ವಾರದಲ್ಲಿ ಬಗೆಹರಿಸಲಾಗುವುದು ಎಂಬುದಾಗಿ ತಿಳಿಸಿದ ಅವರು ಹೊರಗುತ್ತಿಗೆ ಕಾರ್ಮಿಕರಿಗೂ ಸಹ ಮುಂದಿನ ದಿನಗಳಲ್ಲಿ ಸೂಕ್ತ ಜಾಗವನ್ನು ಗುರುತಿಸಿ ನಿವೇಶನಗಳನ್ನು ವಿತರಣೆ ಮಾಡಲಾಗುವುದೆಂದು ಹಾಗೂ ಹೊರ ಗುತ್ತಿಗೆ ನೌಕರರು ನಿವೇಶನ ಹೊಂದಿದ್ದಲ್ಲಿ ತಕ್ಷಣವೇ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಶ್ರೀನಿವಾಸಪುರ ಪುರಸಭಾ ಸಭಾಂಗಣದಲ್ಲಿ “ಏಳ ಬಳಕೆ ಪ್ಲಾಸ್ಟಿಕ್ ನಿಷೇಧ” ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಶ್ರೀನಿವಾಸಪುರ ಪುರಸಭಾ ಸಭಾಂಗಣದಲ್ಲಿಂದು ಮಾನ್ಯ ಪುರಸಭಾ ಅಧ್ಯಕ್ಷರಾದ ಶ್ರೀ ಬಿ.ಆರ್. ಭಾಸ್ಕರ್ ರವರ ಅಧ್ಯಕ್ಷತೆಯಲ್ಲಿ “ಏಳ ಬಳಕೆ ಪ್ಲಾಸ್ಟಿಕ್ ನಿಷೇಧ” ಕುರಿತು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶ್ರೀನಿವಾಸಪುರ : ಪಟ್ಟಣದಲ್ಲಿ ಪ್ಲಾಸ್ಟಿಕ್ ಮುಕ್ತ ಜಾಗೃತಿ ಅಭಿಯಾನಕ್ಕೆ ಮಾನ್ಯ ಪುರಸಭಾ ಅಧ್ಯಕ್ಷರಾದ ಶ್ರೀ ಬಿ.ಆರ್. ಭಾಸ್ಕರ್ ರವರು ಚಾಲನೆ ನೀಡಿ ಮಾತನಾಡಿ ಕಡಿಮೆ ಉಪಯುಕ್ತತೆ ಮತ್ತು ಪರಿಸರ ಮೇಲೆ ಹೆಚ್ಚಿನ ಪ್ರತಿಕೂಲ ಪರಿಣಾಮ ಬೀರುತ್ತಿರುವ “ಏಳ ಬಳಕೆಯ ಪ್ಲಾಸ್ಟಿಕ್” ವಸ್ತುಗಳನ್ನು ಹಂತ ಹಂತವಾಗಿ ನಿರ್ಮೂಲನೆ ಮಾಡುವ ಸಲುವಾಗಿ ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಬೇಕೆಂದು ತಿಳಿಸಿದ ಅವರು ಸರ್ಕಾರವು ಹಲವು ರೀತಿಯಲ್ಲಿ ಪ್ಲಾಸ್ಟಿಕ್ ಮುಕ್ತ ಶ್ರೀನಿವಾಸಪುರವನ್ನಾಗಿ ಮಾಡಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಪ್ಲಾಸ್ಟಿಕ್ನಿಂದ ಆಗುತ್ತಿರುವ ದುಷ್ಪರಿಣಾಮಗಳ ಕುರಿತು ಹಾಗೂ ಮುಂದಿನ ಪೀಳಿಗೆಗೆ ಆಗುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದ ಅವರು ಪುರಸಭೆ ಅಧಿಕಾರಿಗಳು ಪ್ಲಾಸ್ಟಿಕ್ ಮಾರಾಟ ಮಾಡುವ ಅಂಗಡಿ ಮಾಲೀಕರಿಗೆ ಅನೇಕ ಬಾರಿ ದಂಡವನ್ನು ವಿಧಿಸಿದರೂ ಸಹ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ವ್ಯಾಪಾರಸ್ಥರು ತಮ್ಮ ಬಳಿ ಇರುವ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಲು ದಿನಾಂಕ: 05-09-2024ರ ವರೆಗೆ ಕಾಲಾವಕಾಶ ನೀಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಇದಕ್ಕೆ ಸ್ಪಂಧಿಸಿದ ಮಾನ್ಯ ಅಧ್ಯಕ್ಷರು ಸೆಪ್ಟೆಂಬರ್ 5ನೇ ತಾರೀಖಿನ ವರೆಗೆ ಅಂತಿಮ ಗಡವು ನೀಡಲಾಗಿದ್ದು, ನಂತರ ಯಾರಾದರೂ ನಿಷೇಧಿತ “ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡಿದರೆ ಗ್ರಾಹಕರಿಗೆ ಮತ್ತು ಅಂಗಡಿ ಮಾಲೀಕರಿಗೆ, ಸಾಗಾಣಿಕೆದಾರರಿಗೆ, ದಾಸ್ತಾನುದಾರರಿಗೆ ದಂಡವನ್ನು ವಿಧಿಸುವುದರ ಜೊತೆಗೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.
ಶ್ರೀನಿವಾಸಮರ ಪಟ್ಟಣದಲ್ಲಿರುವ ಟೀ-ಕಾಫೀ ಅಂಗಡಿ, ಬೀದಿ-ಬದಿ ವ್ಯಾಪಾರಿಗಳು, ಚಿಕನ್-ಮಟನ್ ಅಂಗಡಿ, ಹೋಟೆಲ್, ಬೇಕರಿ, ಬಾರ್ ಮತ್ತು ರೆಸ್ಟೋರೆಂಟ್, ಕಲ್ಯಾಣ ಮಂಟಪಗಳಲ್ಲಿ ಮದುವೆ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸಬಾರದು ಸೂಚನೆ ನೀಡಿದರು.
ಶ್ರೀನಿವಾಸಪುರ ಪಟ್ಟಣದಲ್ಲಿರುವ ಎಲ್ಲಾ ವ್ಯಾಪಾರಸ್ಥರು ಪುರಸಭೆಯಿಂದ ಉದ್ದಿಮೆ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆಯಲು ತಿಳಿಸಿದ ಅವರು 2024-25ನೇ ಸಾಲಿನ ಆಸ್ತಿ ತೆರಿಗೆ ಪಾವತಿಗೆ ಸರ್ಕಾರದ ವತಿಯಿಂದ ಶೇ.5% ರಿಯಾಯಿತಿ ಅವಧಿಯನ್ನು ದಿನಾಂಕ:14-09-2024ರ ವರೆಗೆ ವಿಸ್ತರಿಸಿ ಆದೇಶಿಸಿದ್ದು, ಸದರಿ ಅವಕಾಶವನ್ನು ಶ್ರೀನಿವಾಸಮರ ಪಟ್ಟಣದ ಎಲ್ಲಾ ಆಸ್ತಿ ಮಾಲೀಕರು ಸದುಪಯೋಗ ಪಡೆದುಕೊಂಡು ನಿಗಧಿತ ಅವಧಿಯೊಳಗೆ ತೆರಿಗೆ ಪಾವತಿ ಮಾಡಿ ಶ್ರೀನಿವಾಸಮರ ಪಟ್ಟಣದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಮಾನವಿ ಮಾಡಿದರು.
ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಕೆ.ಎಸ್. ಸುನೀತಾ, ಮುಖ್ಯಾಧಿಕಾರಿ ವೈ. ಎನ್. ಸತ್ಯನಾರಾಯಣ, ಕಛೇರಿ ವ್ಯವಸ್ಥಾಪಕರಾದ ಜಿ. ನವೀನ್ ಚಂದ್ರ ಆರೋಗ್ಯ ನಿರೀಕ್ಷರಾದ ಕೆ. ಜಿ. ರಮೇಶ್, ಕಂದಾಯಾಧಿಕಾರಿ ವಿ. ನಾಗರಾಜು, ಕಂದಾಯ ನಿರೀಕ್ಷಕ ಎನ್. ಶಂಕರ್ ಪುರಸಭೆ ಸಿಬ್ಬಂಧಿ ಹಾಗೂ ವರ್ತಕರ ಸಂಘದ ಅಧ್ಯಕ್ಷರಾದ ಸತ್ಯನಾರಾಯಣ ಶೆಟ್ಟಿ ಹಾಗೂ ವರ್ತಕರು ಸಭೆಯಲ್ಲಿ ಹಾಜರಿದ್ದರು.
ಕುಂದಾಪುರ : ಪುರಸಭೆ ಅಧ್ಯಕ್ಷರಾಗಿ ಮೋಹನ ದಾಸ ಶೆಣೈ- ಉಪಾಧ್ಯಕ್ಷೆಯಾಗಿ ವನಿತಾ ಬಿಲ್ಲವ ಆಯ್ಕೆ
ಕುಂದಾಪುರ. ಆ.29: ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಬಿಜೆಪಿಯ ಮೋಹನ ದಾಸ ಶೆಣೈ ಆಯ್ಕೆಯಾಗಿದ್ದಾರೆ, ಹಾಗೇ ಉಪಾಧ್ಯಕ್ಷೆಯಾಗಿ ಬಿಜೆಪಿಯ ವನಿತಾ ಬಿಲ್ಲವ ಆಯ್ಕೆಯಾಗಿದ್ದಾರೆ.
ಮೀಸಲಾತಿಯ ಪ್ರಕಾರ ಅಧ್ಯಕ್ಷತೆಗೆ ಸಾಮಾನ್ಯ ವರ್ಗ ಹಾಗೂ ಉಪಾಧ್ಯಕ್ಷತೆ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಮೋಹನ ದಾಸ್ ಶೆಣೈ, ಕಾಂಗ್ರೆಸ್ ನಿಂದ ಚಂದ್ರಶೇಖರ್ ಖಾರ್ವಿ, ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ವನಿತಾ ಬಿಲ್ಲವ ಪಕ್ಷೇತರ ಅಭ್ಯರ್ಥಿ ಕಮಲ ಮಂಜುನಾಥ್ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ 14 ಸದಸ್ಯಬಲ ಕಾಂಗ್ರೆಸ್ 8 ಸದಸ್ಯ ಬಲ ಹೊಂದಿದೆ. ಕಾಂಗ್ರೆಸ್ ನ ಸದಸ್ಯೆ ಲಕ್ಷ್ಮೀ ಬಾಯಿ ಗೈರಾಗಿದ್ದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಬಿಜೆಪಿ 16 ಹಾಗೂ ಕಾಂಗ್ರೆಸ್ 7 ಪಕ್ಷೇತರ 1 ಸದಸ್ಯರ ಹಾಜರಾತಿ ಇತ್ತು. ಬಿಜೆಪಿ 16 ಮತಗಳನ್ನು ಕಾಂಗ್ರೆಸ್ 8 ಮತಗಳನ್ನು ಪಡೆಯಿತು.ನಿರೀಕ್ಷೆಯಂತೆ ಬಿಜೆಪಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಬಿಜೆಪಿಯ ಮಡಿಲಿಗಾಗಿದೆ.
ತಹಶೀಲ್ದಾರ್ ಶೋಭಾಲಕ್ಷ್ಮೀ ಮತದಾನ ಪ್ರಕ್ರಿಯೆ ನಡೆಸಿದರು. ಮುಖ್ಯಾಧಿಕಾರಿ ಆನಂದ ಜೆ. ಉಪಸ್ಥಿತರಿದ್ದರು.
ಕುಂದಾಪುರ – ಮನೆಯಲ್ಲಿ ಸಾಕಿದ ದೇಸಿ ನಾಯಿಗಳಿಗೆ(ಬೀದಿ ನಾಯಿ ಅಲ್ಲ) ಸಂತಾನಹರಣ ಉಚಿತ ಶಸ್ತ್ರಚಿಕಿತ್ಸೆ ನಡೆಸಲಾಗುವುದು
ಕುಂದಾಪುರ: ಮಧ್ವರಾಜ್ ಎನಿಮಲ್ ಕೇರ್ ಟ್ರಸ್ಟ್ ಮಲ್ಪೆ, ಇನ್ನರ್ ವ್ಹೀಲ್ ಮತ್ತು ರೋಟರಿ ಕ್ಲಬ್ ಕುಂದಾಪುರ ದಕ್ಷಿಣ, WVS India ಇವರ ಸಹಭಾಗಿತ್ವದಲ್ಲಿ ಕುಂದಾಪುರ ಸರಕಾರಿ ಪಶು ಆಸ್ಪತ್ರೆಯಲ್ಲಿ ಸೆಪ್ಟೆಂಬರ್ 2 ರಿಂದ 6ರ ತನಕ, ಮನೆಯಲ್ಲಿ ಸಾಕಿದ ದೇಸಿ ನಾಯಿಗಳಿಗೆ(ಬೀದಿ ನಾಯಿ ಅಲ್ಲ) ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲಾಗುವುದು. ಈ ಶಸ್ತ್ರಚಿಕಿತ್ಸೆಯು ಉಚಿತವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಸಂಘಟಕರ ಆಶಯ.
ನಾಯಿಯ ಮಾಲಕರು ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಮುಂಚಿತವಾಗಿ ನೋಂದಾಯಿಸ ಬೇಕಾಗಿ ಕೋರಿದ್ದಾರೆ.
8277390909, 9844790531
ಗಂಗೊಳ್ಳಿ ಕೊಸೇಸಾಂವ್ ಅಮ್ಮನವರ ದೇವಾಲಯದಲ್ಲಿ ಕಾರ್ಮಿಕರ ದಿನ
ಗಂಗೊಳ್ಳಿ: ಕೊಸೇಸಾಂವ್ ಅಮ್ಮನವರ ದೇವಾಲಯ ಗಂಗೊಳ್ಳಿಯಲ್ಲಿ ಆಗಸ್ಟ್ 18 ರಂದು ಕಥೋಲಿಕ್ ಸಭಾ, ಕಾರ್ಮಿಕರ ಆಯೋಗ ಮತ್ತು ನೀತಿ ಮತ್ತು ಶಾಂತಿ ಆಯೋಗದ ಸಹಯೋಗದೊಂದಿಗೆ ಕಾರ್ಮಿಕರ ದಿನ ಮತ್ತು ನ್ಯಾಯ ಮತ್ತು ನೀತಿಯ ದಿನದ ಆಚರಣೆಯನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಸಂತ ಲಾರೆನ್ಸ್ ಪದವಿ ಪೂರ್ವ ಕಾಲೇಜು ಮೂಡುಬೆಳ್ಳೆಯ ಪ್ರಾಂಶುಪಾಲರಾದ ಶ್ರೀಯುತ ಎಡ್ವರ್ಡ್ ಲಾರ್ಸನ್ ಡಿಸೋಜಾ ಹಾಗೂ ಉಡುಪಿ ಧರ್ಮ ಪ್ರಾಂತ್ಯದ ಕಾರ್ಮಿಕ ಆಯೋಗದ ನಿರ್ದೇಶಕರಾದ ಶ್ರೀಯುತ ಎಲ್ರಾಯ್ ಕಿರಣ್ ಕ್ರಾಸ್ತಾ ಉಪಸ್ಥಿತರಿದ್ದರು. ಶ್ರೀ ಲಾರ್ಸೆನ್ ದಿಸೋಜರವರು ಸಂವಿಧಾನದಲ್ಲಿರುವ ಹಕ್ಕುಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಶ್ರೀ ಕಿರಣ್ ಕ್ರಾಸ್ತಾರವರು ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯದ ಬಗ್ಗೆ ಮತ್ತು ನೋಂದಾವಣೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಚರ್ಚಿನ ಧರ್ಮಗುರುಗಳು ವಂದನಿಯ ಫಾದರ್ ಥೋಮಸ್ ರೋಶನ್ ಡಿಸೋಜಾರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಥೋಲಿಕ್ ಸಭಾ ಅಧ್ಯಕ್ಷರಾದ ಎಡ್ವರ್ಡ್ ಫೆರ್ನಾಂಡಿಸ್ ನೆರೆದಿರುವ ಎಲ್ಲರನ್ನೂ ಸ್ವಾಗತಿಸಿದರು. ಆಯೋಗದ ಸಂಚಾಲಕರಾದ ರೆನಿಟಾ ಬಾರ್ನೆಸ್ ಮತ್ತು ಸೆಲಿನ್ ಲೋಬೊ ಸಂಪನ್ಮೂಲ ವ್ಯಕ್ತಿಗಳ ಪರಿಚಯವನ್ನು ನೀಡಿದರು. ವಿಲ್ಸನ್ ಡಾಯಸ್ ಕಾರ್ಯಕ್ರಮವನ್ನು ನಿರೂಪಿಸಿದರು. ಓವಿನ್ ರೆಬೆಲ್ಲೊ ವಂದನಾರ್ಪಣೆಗೈದರು.
ಪ್ರತಿಯೊಬ್ಬರಿಗೂ ಕಾನೂನು ಅರಿವು ಅಗತ್ಯ-ಸಿವಿಲ್ ನ್ಯಾಯಾಧೀಶ ಸುನೀಲ ಎಸ್ ಹೊಸಮನಿ
ಕೋಲಾರ,ಆ.28: ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಈಗಿರುವ ಕಾನೂನುಗಳ ಬಗ್ಗೆ ಅರಿವು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಸುನೀಲ ಎಸ್ ಹೊಸಮನಿ ಅಭಿಪ್ರಾಯಪಟ್ಟರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ, ಸಹಕಾರ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕೋಲಾರ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಸಹಕಾರ ಒಕ್ಕೂಟದಲ್ಲಿ ಹಮ್ಮಿಕೊಂಡಿದ್ದ ಕೋಲಾರ ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಮಹಿಳಾ (ಸ್ಪೆಪ್) ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ವಿಶೇಷ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ದುರ್ಬಲ ವರ್ಗದವರಿಗೆ ಉಚಿತ ಮತ್ತು ಸಮರ್ಥ ಕಾನೂನು ಸೇವೆಗಳನ್ನು ಒದಗಿಸುವ ಸಲುವಾಗಿ ಕಾನೂನು ಸೇವೆಗಳ ಪ್ರಾಧಿಕಾರವನ್ನು ರಚಿಸಲಾಗಿದ್ದು, ಕಾನೂನು ಅರಿವು ಕಾರ್ಯಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸಲಾಗುತ್ತಿದೆ ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಬಾಲ್ಯವಿವಾಹಕ್ಕೆ ಕಾರಣರಾದವರು ಶಿಕ್ಷೆಗೆ ಒಳಪಡುವದರ ಜೊತೆಗೆ 2 ಲಕ್ಷ ದಂಡ ಮತ್ತು 2 ವರ್ಷ ಜೈಲು ಶಿಕ್ಷಯನ್ನು ಅನುಭವಿಸಬೇಕಾಗುತ್ತದೆ. ಪೊಕ್ಸೋ ಕಾಯ್ದೆ, ಪೋಷಕರು ಅಪ್ರಾಪ್ತ ಬಾಲಕರಿಗೆ ಬೈಕ್ಗಳನ್ನು ಕೊಟ್ಟು ಮಾಡಿಕೊಳ್ಳುವ ಎಡವಟ್ಟುಗಳಿಂದ ಆಗುವ ಪರಿಣಾಮಗಳು ಮತ್ತು ಪೋಷಕರು ಎದುರಿಸಬೇಕಾದ ಕಾನೂನು ಸಮಸ್ಯೆಗಳ ಬಗ್ಗೆ ವಿವರಿಸುತ್ತಾ ತಮಗೆ ಯಾವುದೇ ಸಮಸ್ಯೆ ಇದ್ದರೂ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಹೇಳಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಪ್ರಧಾನ ವ್ಯವಸ್ಥಾಪಕ ಎ.ಸಿ.ಶ್ರೀನಿವಾಸಗೌಡ ಮಾತನಾಡಿ, ಹೈನುಗಾರಿಕೆಯಲ್ಲಿ ಹೆಚ್ಚಿನ ಲಾಭವನ್ನು ಗಳಿಸಬೇಕಾದರೆ ಒಕ್ಕೂಟದಿಂದ ಸಿಗುವ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸಿಕೊಂಡು ಅದನ್ನು ಅಳವಡಿಸಿಕೊಂಡರೆ ಲಾಭದತ್ತ ಮುನ್ನಡೆಯಬಹುದು ಎಂದರು.
ಕಾರ್ಯಾಗಾರಗಳಲ್ಲಿ ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡರೆ ಮಾತ್ರ ಸಂಘಗಳ ಪ್ರಗತಿಗೆ ಮುನ್ನಡಿ ಬರೆಯಬಹುದು. ಚುನಾವಣೆ ನಡೆಸುವ ಬಗ್ಗೆ ತಮಗೆ ಮಾಹಿತಿ ಇದ್ದರೆ ಚುನಾವಣಾ ಸಮಯದಲ್ಲಿ ಆಗುವ ತೊಡಕುಗಳನ್ನು ನಿವಾರಿಸಿಕೊಳ್ಳಬಹುದು ಎಂದರು.
ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಪಾಕರಹಳ್ಳಿ ಪಿ.ಎಂ.ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಕ್ಕೂಟದ ಮೂಲ ಉದ್ದೇಶ ಸಹಕಾರ ಸಂಘಗಳಿಗೆ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಿ ಅವರಿಗೆ ಅರಿವು ಮೂಡಿಸುವುದಾಗಿದೆ. ಈ ನಿಟ್ಟಿನಲ್ಲಿ ತರಬೇತಿ, ಕಾರ್ಯಾಗಾರಗಳಲ್ಲಿ ಭಾಗವಹಿಸಿ ಇಲ್ಲಿ ನೀಡುವ ಇತರೆ ವಿಷಯಗಳ ಬಗ್ಗೆ ಅರಿವು ಮೂಡಿಸಿಕೊಂಡು ಸಂಘಗಳಲ್ಲಿ ಅಳವಡಿಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕೆಂದರು.
ಕಾರ್ಯಾಗಾರಗಳಲ್ಲಿ ತಿಳಿಸುವ ಕಾನೂನು ತಿದ್ದುಪಡಿ ಹಾಗೂ ಚುನಾವಣಾ ನಡೆಸುವ ಕುರಿತು ಅರಿತುಕೊಂಡಿದ್ದೇ ಆದಲ್ಲಿ ಸಂಘಗಳಲ್ಲಿ ಚುನಾವಣೆ ನಡೆಸಲು ಸಹಕಾರಿಯಾಗುತ್ತದೆ ಎಂದರು.
ಸಹಕಾರ ಸಂಘಗಳ ಇತ್ತೀಚಿನ ಕಾನೂನು ತಿದ್ದುಪಡಿಗಳು ಮತ್ತು ಸಹಕಾರ ಸಂಘಗಳಲ್ಲಿ ಚುನಾವಣೆ ನಡೆಸುವ ಕುರಿತು ಸಹಕಾರ ಸಂಘಗಳ ನಿವೃತ್ತ ಜಂಟಿ ನಿಬಂಧಕ ಹೆಚ್.ಎಸ್.ನಾಗರಾಜಯ್ಯ, ಮಹಿಳಾ ಸಹಕಾರ ಸಂಘಗಳಿಗೆ ಹಾಲು ಒಕ್ಕೂಟದಿಂದ ದೊರೆಯುವ ಸೌಲತ್ತುಗಳ ಕುರಿತು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಉಪ ವ್ಯವಸ್ಥಾಪಕಿ ವಿಜಯಲಕ್ಷ್ಮಿ ಆರ್ ಉಪನ್ಯಾಸ ನೀಡಿದರು.
ಇದಕ್ಕೂ ಮುನ್ನಾ ಸಭೆಯಲ್ಲಿದವರು ತಾವು ಯಾವುದೇ ಕಾರಣಕ್ಕೂ 18ರೊಳಗಿನ ಮಕ್ಕಳಿಗೆ ಬಾಲ್ಯ ವಿವಾಹ ಮಾಡುವುದಿಲ್ಲ. ಅಕ್ಕಪಕ್ಕದ ಮನೆಗಳಲ್ಲಿಯೂ ಸಹ ಬಾಲ್ಯ ವಿವಾಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಉಪಾಧ್ಯಕ್ಷ ಟಿ.ಕೆ.ಬೈರೇಗೌಡ, ನಿರ್ದೇಶಕರುಗಳಾದ ಉರಿಗಿಲಿ ರುದ್ರಸ್ವಾಮಿ, ಎಸ್.ವಿ.ಗೋವರ್ಧನರೆಡ್ಡಿ, ಡಿ.ಆರ್.ರಾಮಚಂದ್ರೇಗೌಡ, ಎನ್.ಶಂಕರನಾರಾಯಣಗೌಡ, ಎನ್.ನಾಗರಾಜ್, ಆರ್.ಅರುಣ, ಪಿ.ಎನ್.ಕೃಷ್ಣಾರೆಡ್ಡಿ, ಕೆ.ಎಂ.ವೆಂಕಟೇಶಪ್ಪ, ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ಮುಖ್ಯಕಾರ್ಯನಿರ್ವಹಣಾಧಿಕಾರಿ ಭಾರತಿ ಕೆ.ಎಂ, ವ್ಯವಸ್ಥಾಪಕಿ ಎನ್.ಲಕ್ಷ್ಮೀದೇವಿ, ರವಿಕುಮಾರ್ ಇದ್ದರು.