ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಲಾಯಿತು. ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ಟೆಂಪೋ ಮತ್ತು ಟ್ಯಾಕ್ಸಿ ಡ್ರೈವರ್ ಎಸೋಸಿಯೇಷನ್ ಅಧ್ಯಕ್ಷ ಲಕ್ಷ್ಮಣ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ರೇವತಿ ಶೆಟ್ಟಿ, ಹಿರಿಯರಾದ ವಾಸುದೇವ ಎಡಿಯಾಳ್ ,ಕಿಸಾನ್ ಘಟಕದ ಅಧ್ಯಕ್ಷ ಭಾಸ್ಕರ್ ಶೆಟ್ಟಿ , ಇಂಟೆಕ್ ಅಧ್ಯಕ್ಷ ಚಂದ್ರ ಅಮೀನ್ , ಸೋಶಿಯಲ್ ಮೀಡಿಯಾ ಜಿಲ್ಲಾ ಅಧ್ಯಕ್ಷ ರೋಷನ್ ಶೆಟ್ಟಿ ಇನ್ನಿತರರು ಭಾಗವಹಿಸಿದರು. ಈ ಸಂದರ್ಭದಲ್ಲಿ ಟೆಂಪೋ ಮತ್ತು ಟ್ಯಾಕ್ಸಿ ಡ್ರೈವರ್ ಅಸೋಸಿಯೇಷನ್ ಪದಾಧಿಕಾರಿಗಳನ್ನು ಗೌರವಿಸಲಾಯಿತು. ಜಿಲ್ಲಾ ಸೇವಾದಳ ಕಾರ್ಯದರ್ಶಿ ಜ್ಯೋತಿ ನಾಯಕ್ ಸ್ವಾಗತಿಸಿ , ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೊ ನಿರೂಪಿಸಿ , ಕಾರ್ಯದರ್ಶಿ ಆಶಾ ಕರ್ವಾಲೊ ವಂದಿಸಿದರು.
Month: August 2024
ಕೋಲಾರ- ಸಂಭ್ರಮ ಸಡಗರದಿಂದ ಸ್ವಾತಂತ್ರ್ಯ ದಿನಾಚರಣೆ: ಉಸ್ತುವಾರಿ ಸಚಿವರಿಂದ ಧ್ವಜಾರೋಹಣ, ಸಂದೇಶ
ಕೋಲಾರ : ಸ್ವಾತಂತ್ರ್ಯ ದಿನದ ಅಂಗವಾಗಿ ಆ.15ರ ನಗರದ ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಆಟದ ಮೈದಾನದಲ್ಲಿ ಮಾನ್ಯ ನಗರಾಧಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಎಸ್. ಸುರೇಶ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು. ಸರ್ಕಾರ ಜನರಿಗೆ ನೀಡಿದ ಭರವಸೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ. ಕೋಲಾರ ಜಿಲ್ಲೆಗೆ ಭರಪೂರ ಅನುದಾನ ಒದಗಿಸಲು ಶ್ರಮ ವಹಿಸಲಾಗಿದೆ. ಒಳಚರಂಡಿ ಜಾಲ, ಗೃಹ ಸಂಪರ್ಕ ಕ್ಕಾಗಿ ಕೋಲಾರ ನಗರಕ್ಕೆ 60ಕೋಟಿಗಳ ಅನುದಾನ, ರಾಬರ್ಟ್ ಸನ್ ಪೇಟೆ ಅಭಿವೃದ್ಧಿಗೆ 20ಕೋಟಿ ಅನುದಾನ ಅನುಮೋದನೆ ಮಾಡಲಾಗಿದೆ. ವೇಮಗಲ್ ಕುರಗಲ್ ನಲ್ಲಿ ವಿವಿಧ ಯೋಜನೆಗಳಿಗಾಗಿ 3.50 ಕೋಟಿ ಅನುದಾನ ಮಂಜೂರು ಮಾಡಲಾಗಿದೆ. ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿಯಲ್ಲಿ ರೊಚ್ಚು ಸಂಸ್ಕಾರಣಾ ಘಟಕ ನಿರ್ಮಾಣಕ್ಕಾಗಿ 25.11ಕೋಟಿ ಅನುದಾನ ಮೀಸಲು ಇಡಲಾಗಿದೆ. ಅಮೃತ್ 2.0ಯೋಜನೆಯಡಿಯಲ್ಲಿ ನೀರು ಸರಬರಾಜು ಮತ್ತು ಹಸಿರು ವಲಯ ಹಾಗೂ ಪಾರ್ಕ್ ಗಳಿಗಾಗಿ ಜಿಲ್ಲೆಗೆ 40 ಕೋಟಿ ಅನುದಾನ ನೀಡಲಾಗಿದೆ. ಯಾರಗೊಳ್ ಆಣೆಕಟ್ಟಿನಿಂದ ಬಂಗಾರಪೇಟೆ, ಕೋಲಾರ ಹಾಗೂ ಮಾಲೂರು ತಾಲ್ಲೂಕುಗಳ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಇದಕ್ಕಾಗಿ 308.46ಕೋಟಿ ವೆಚ್ಚ ಮಾಡಲಾಗಿದೆ. ಎಂದರು.
ಕೋಲಾರ ನಗರದ ಹೊರವಲಯದಲ್ಲಿ ಹೊರವರ್ತುಲ ರಸ್ತೆ ಅಭಿವೃದ್ಧಿಗೆ 100 ಕೋಟಿ ಅನುದಾನ ಅಂದಾಜಿಸಲಾಗಿದೆ. ಈ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಹಳೇ ಬಸ್ ನಿಲ್ದಾನವನ್ನು ನವೀಕರಣ ಮಾಡಲು 5ಕೋಟಿಗಳ ಅನುದಾನ ಮಂಜೂರು ಮಾಡಲಾಗಿದೆ. ಬಂಗಾರಪೇಟ್, ಕೋಲಾರ ನಗರಗಳಲ್ಲಿ ಪಾದಚಾರಿ ಮಾರ್ಗ ಹಾಗೂ ಕೋಲಾರ ಚಿಕ್ಕಬಳ್ಳಾಪುರ ರಸ್ತೆ ಪಾದಚಾರಿ ಮಾರ್ಗ ಅಭಿವೃದ್ಧಿಗೆ 12 ಕೋಟಿ ಅನುದಾನ ಒದಗಿಸಲಾಗುವುದು. ಇಂತಹ ವಿಶೇಷ ಅನುದಾನಗಳನ್ನು ಜಿಲ್ಲೆಗೆ ಒದಗಿಸಲಾಗಿದೆ. ಎಂದರು.
ಜಿಲ್ಲೆಯಲ್ಲಿ ಇಲಾಖೆವಾರು ಪ್ರಗತಿಯ ವಿವರಗಳನ್ನು ತೆರೆದಿಟ್ಟರು.
ನಂತರ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಇದೇ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಒಂದು ವರ್ಷದ ಅಭಿವೃದ್ಧಿ ಕಾರ್ಯಕ್ರಮಗಳ ಸಾಧನಾ ಕೈಪಿಡಿ ಬಿಡುಗಡೆ ಮಾಡಲಾಯಿತು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಿಲ್ಲಾ ಕ್ರೀಡಾಂಗಣ ನವೀಕರಣ, ಕಾಮಗಾರಿ ಉದ್ಘಾಟನೆ,ತೋಟಗಾರಿಕೆ ಇಲಾಖೆಯ 2000ಮೇ. ಟನ್ ಸಾಮರ್ಥ್ಯದ ಶೀತಲ ಗೃಹ ಶಂಕುಸ್ಥಾಪನೆ, ನಿರ್ಮಿತಿ ಕೇಂದ್ರದ ಶಾಲಾ ಕಟ್ಟಡ, ಕೋದಂಡ ರಾಮಸ್ವಾಮಿ ದೇವಸ್ಥಾನ, ಸಾರ್ವಜನಿಕ ಸಂಪರ್ಕ ಕೇಂದ್ರ, ಕಂದಾಯ ನ್ಯಾಯಾಲಯ ಕಟ್ಟಡ, ಅಂಬೇಡ್ಕರ್ ಭವನ, ಅಟಲ್ ಜಿ ಜನಸ್ನೇಹಿ ಕೇಂದ್ರ ಕಟ್ಟಡ, ಕಂದಾಯ ಇಲಾಖೆಯ 2 ಹೊಸ ನಾಡ ಕಚೇರಿ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮ ನಡೆಯಿತು.
ಸಮಾರಂಭದಲ್ಲಿ ಕೋಲಾರ ಜಿಲ್ಲಾ ಶಾಸಕ ಡಾ. ಕೊತ್ತೂರ್ ಮಂಜುನಾಥ್ ಅವರು ಅಧ್ಯಕ್ಷತೆ ವಹಿಸಿದ್ದರು.ಕರ್ನಾಟಕ ವಿಧಾನ ಪರಿಷತ್ ಶಾಸಕರು ಹಾಗೂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೋಲಾರ ಸಂಸದ ಎಂ. ಮಲ್ಲೇಶ್ ಬಾಬು, ವಿಧಾನ ಪರಿಷತ್ ಶಾಸಕರಾದ ಇಂಚರ ಗೋವಿಂದರಾಜು, ಎಂ. ಎಲ್. ಅನಿಲ್ ಕುಮಾರ್, ಜಿಲ್ಲಾಧಿಕಾರಿ ಅಕ್ರಂ ಪಾಷ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಬಿ. ನಿಖಿಲ್ ಸ್ಥಳೀಯ ಮುಖಂಡರು, ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯ – ಸಂತ ಫ್ರಾನ್ಸಿಸ್ ಕ್ಸೇವಿಯರ್ ಪ್ರೌಢಶಾಲಾ ವಟಾರದಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯೋತ್ಸವ
ಉದ್ಯಾವರ : ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ವತಿಯಿಂದ ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಮತ್ತು ಐಸಿವೈಎಂ ಉದ್ಯಾವರ ಘಟಕದ ನೇತೃತ್ವದಲ್ಲಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಪ್ರೌಢಶಾಲಾ ವಟಾರದಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮದ ಧ್ವಜಾರೋಹಣ ಕಾರ್ಯಕ್ರಮ ನಡೆಸಲಾಯಿತು.
ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವಂ. ಫಾ. ಅನಿಲ್ ಡಿಸೋಜಾ ಧ್ವಜಾರೋಹಣ ನೆರವೇರಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಹಾಯಕ ಧರ್ಮ ಗುರು ವo. ಸ್ಟೇಫನ್ ರೊಡ್ರಿಗಸ್, ಪಾಲನ ಮಂಡಳಿಯ ಉಪಾಧ್ಯಕ್ಷ ಲಾರೆನ್ಸ್ ಡೇಸ, ಕಾರ್ಯದರ್ಶಿ ಜಾನ್ ಡಿಸೋಜಾ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲ. ರೋನಲ್ಡ್ ರೆಬೆಲ್ಲೊ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿವೈಎಂ ಅಧ್ಯಕ್ಷ ಗ್ಲ್ಯಾನಿಶ್ ಪಿಂಟೋ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರೆ, ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಕಾರ್ಯದರ್ಶಿ ಲ. ಜೆರಾಲ್ಡ್ ಪಿರೇರ ಧನ್ಯವಾದ ಸಮರ್ಪಿಸಿದರು. ಐಸಿವೈಎಂ ಸದಸ್ಯರು ರಾಷ್ಟ್ರಭಕ್ತಿ ಗೀತೆಗಳನ್ನು ಹಾಡಿದರು.
ಮದರ್ ತೆರೇಸಾ ಶಿಕ್ಷಣ ಸಂಸ್ಥೆಯಲ್ಲಿ R F O ಅವರಿಂದ ಧ್ವಜಾರೋಹಣ
ಶಂಕರನಾರಾಯಣ : ಇಲ್ಲಿನ ಮದರ್ ತೆರೇಸಾ ಎಜುಕೇಶನ್ ಟ್ರಸ್ಟ್ ಪ್ರವರ್ತಿತ ಮದರ್ ತೆರೇಸಾ ಮೆಮೋರಿಯಲ್ ಸ್ಕೂಲ್ ಮತ್ತು ಮದರ್ ತೆರೇಸಾಸ್ ಪಿ ಯು ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಜ್ಯೋತಿ ಕೆ ಸಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಹುತಾತ್ಮರಾದ ವೀರ ದೇಶ ಭಕ್ತ ಸ್ವಾತಂತ್ರ್ಯ ಹೋರಾಟಗಾರರನ್ನು ಕೇವಲ ಈ ದಿನ ಸ್ಮರಿಸದೇ ಅವರ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ದೇಶದ ಪ್ರಗತಿಗೆ ಎಲ್ಲರೂ ಕೈ ಜೋಡಿಸಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಪರಿಸರ ಸಂರಕ್ಷಣೆ ಅರಿವು ಮತ್ತು ಅಗತ್ಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು
ಮುಖ್ಯಶಿಕ್ಷಕ ರವಿದಾಸ್ ಶೆಟ್ಟಿ ಪ್ರಸ್ತಾವಿಕ ನುಡಿಗಳನ್ನಾಡಿದರು ಸ್ಕೌಟ್ಸ್ ಮತ್ತು ಗೈಡ್ಸ್, ಎಮರಾಲ್ಡ್, ಸಪಾಯರ್, ರೂಬಿ, ಟೋಪಾಜ್ ತಂಡಗಳಿಂದ ಆಕರ್ಷಕ ಪಥಸಂಚಲನ ವೀಕ್ಷಿಸಿದರು ಸಂಸ್ಥೆಯ ಆಡಳಿತಾಧಿಕಾರಿಗಳಾದ ಕುಮಾರಿ ಶಮಿತಾ ರಾವ್ ಮತ್ತು ಕುಮಾರಿ ರೆನಿಟಾ ಲೋಬೊ ಸರ್ವರಿಗೂ ಸ್ವತಂತ್ರ ದಿನಾಚರಣೆಯ ಶುಭಾಶಯಗಳನ್ನು ಕೋರಿದರು ಉಪಾಪ್ರಾಂಶುಪಾಲ ಮಂಜುನಾಥ್ ಬೈರಿ,ವಿಜ್ಞಾನ ವಿಭಾಗದ ಮುಖ್ಯಸ್ಥೆ ನಿರ್ಮಲಾ ಕುತ್ಯಾಡಿ,ಬೋಧಕ ಮತ್ತು ಬೋಧಕೇತರ ವರ್ಗ, ವಿದ್ಯಾರ್ಥಿ ಪ್ರತಿನಿದಿಗಳು, ಮತ್ತು ಪಾಲಕರು ಉಪಸ್ಥಿತರಿದ್ದರು
ಶಿಕ್ಷಕಿ ಚೈತ್ರಾ ಸ್ವಾಗತಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಗೀತಾ ವಂದಿಸಿ ಶಿಕ್ಷಕಿ ಅವಿನಾ ಡಿಸೋಜಾ ನಿರೂಪಿಸಿದರು ನಂತರ ವಿದ್ಯಾರ್ಥಿಗಳಿಂದ
ಏಕಪಾತ್ರಾಭಿನಯ ನಡೆಯಿತು ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಶಂಕರನಾರಾಯಣ ಗ್ರಾಮಪಂಚಾಯತ ವತಿಯಿಂದ ನೀಡಿದ ಸಿಹಿ ವಿತರಿಸಲಾಯಿತು.
ಕುಂದಾಪುರ, ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ
ಕುಂದಾಪುರ, ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ಕಚೇರಿಯಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸೊಸೈಟಿಯ ಅಧ್ಯ ಧ್ವಜಾರೋಹಣ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು ಆಗಮಿಸಿದ ಸಂಘದ ಅಧ್ಯಕ್ಷರಿಗೆ, ನಿರ್ದೇಶಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಹೃತ್ಪೂರ್ವಕ ಧನ್ಯವಾದಗಳು. ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ಧ್ವಜಾರೋಹಣ ಮಾಡಿದರು. ಸಂಘದ ಮುಖ್ಯ ನಿರ್ವಹಣ ಅಧಿಕಾರಿ ಮೇಬಲ್ ಡಿಆಲ್ಮೇಡಾ, ನಿರ್ದೇಶಕ ಮೈಕಲ್ ಪಿಂಟೊ, ವ್ಯವಸ್ಥಾಪಕರಾದ ವಿನೀತಾ ಡಿಸೋಜಾ, ದಾಮನ್ ಡಿಸೋಜಾ ಮುಂತಾದವರು ಉಪಸ್ಥಿತರಿದ್ದರು.
ಕುಂದಾಪುರ ಚರ್ಚಿನಲ್ಲಿ ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬ – ಪ್ರತಿಭಾವಂತರಿಗೆ ಪುರಸ್ಕಾರ
ಕುಂದಾಪುರ,ಅ.15: ಕುಂದಾಪುರ ಚರ್ಚಿನಲ್ಲಿ ಭಾಗ್ಯವಂತೆ ಮೇರಿ ಮಾತೆಯ ಸ್ವರ್ಗಾರೋಹಣದ ಹಬ್ಬವನ್ನು ಸಡಗರ ಮತ್ತು ಭಕ್ತಿಯಿಂದ ಆಚರಿಸಲಾಯಿತು.ದೇವರ ಪುತ್ರ, ಪವಿತ್ರ ಆತ್ಮನ ಶಕ್ತಿಯಿಂದ ಮನುಜನಾಗಿ ಮೇರಿ ಮಾತೆಯ ಗರ್ಭದಲ್ಲಿ ಜನಿಸಿದ ಮಹಾಮಾತೆಯನ್ನು ದೇವರು ಜೀವಂತವಾಗಿ ಸ್ವರ್ಗಕ್ಕೆ ಕರೆದುಕೊಂಡ ಹಬ್ಬ ಇದಾಗಿದೆ. ಇದೇ ದಿವಸ ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ ಲಭಿಸಿದ್ದು, ನಮ್ಮ ಭಾಗ್ಯವಾಗಿದೆ. ಮೇರಿ ಮಾತೆ ದೇವರ ವಾಕ್ಯವನ್ನು ಪಾಲಿಸಲು ತ್ವರಿತ ರೀತಿಯಲ್ಲಿ ಕಾರ್ಯಚರಿಸಿದಳು, ಮೇರಿ ಮಾತೆಯ ನಂಬಿಕೆ ತುಂಬ ಮೇಲ್ಪಟ್ಟಿದಾಗಿತ್ತು, ಹಾಗೆಯೇ ಮೇರಿ ಮಾತೆ ದೇವರ ವಾಕ್ಯವನ್ನು ನಡೆಸಿಕೊಡಲು ದಿನದಿಂದ ದಿನಕ್ಕೆ ಶಕ್ತಿಯುತಳಾದಳು, ಆ ಮಾಹಾ ಮಾತೆಗೆ ದೇವರ ಪುತ್ರನನ್ನೆ ಉಡುಗೊರೆಯಾಗಿ ನೀಡಿದನ್ನು ನಾವು ಮರೆಯಬಾರದು, ನಾವೆಲ್ಲ ಮೇರಿ ಮಾತೆಯ ಈ ಆದರ್ಶಗಳನ್ನು ಪಾಲಿಸಿ, ನಮಗೆ ಸ್ವರ್ಗದ ಉಡುಗೊರೆ ದೊರಕಲು ಪ್ರಯತ್ನಿಸಬೇಕು’ ಎಂದು ಸಂದೇಶ ನೀಡಿದರು
ಬಲಿದಾನದ ನಂತರ ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಕುಂದಾಪುರ ಚರ್ಚ್ ವ್ಯಾಪ್ತಿಗೆ ಒಳಪಟ್ಟ ಕಲಿಕೆ ಮತ್ತು ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಪ್ರತಿಭಾವಂತ ಮಕ್ಕಳನ್ನು ಬಹುಮಾನ ಪದಕ, ಸಮ್ಮಾನ ಪತ್ರ ನೀಡಿ ಸನ್ಮಾನಿಸಲಾಯಿತು.
ಕಥೊಲಿಕ್ ಸಭಾ ಕುಂದಾಪುರ ವಲಯದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಘಟಕದ ನಿಕಟ ಪೂರ್ವ ಅಧ್ಯಕ್ಷೆ ಘಟಕದಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸರ್ವ ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಬಹುಮಾನಗಳನ್ನು ವಿತರಿಸಿದರು, ಕಥೊಲಿಕ್ ಸಭಾದ ಪದಾಧಿಕಾರಿಗಳದ, ವಿನೋದ್ ಕ್ರಾಸ್ತಾ, ಬರ್ನಾಡ್ಡಿಕೋಸ್ತಾ, ಜೂಲಿಯೆಟ್ ಪಾಯ್ಸ್, ವಾಲ್ಟರ್ ಡಿಸೋಜಾ ಇನ್ನಿತರರು ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ, ಸ್ವಾಗತಿಸಿದರು. ಪದಾಧಿಕಾರಿ ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು.
ಕುಂದಾಪುರ ಚರ್ಚ್ ಮೈದಾನದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ
ಕುಂದಾಪುರ,ಅ.15: ಕಥೊಲಿಕ್ ಸಭಾ ಕುಂದಾಪುರ ಚರ್ಚ್ ಘಟಕದ ವತಿಯಿಂದ ಅ.15 ರಂದು ಕುಂದಾಪುರ ಹೋಲಿ ರೋಜರಿ ಮಾತಾ ಇಗರ್ಜಿಯ ಮೈದಾನದಲ್ಲಿ, 78 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಕುಂದಾಪುರ ಚರ್ಚಿನ ಅ| ವಂ| ಪಾವ್ಲ್ ರೇಗೊ ಕೇಡೆಟಗಳಿಂದ ಗೌರವ ಸ್ವೀಕರಿಸಿ ಧ್ವಜಾರೋಹಣ ಗೈದು “ನಮ್ಮ ಹಿರಿಯರು ಮಾಡಿದತ್ಯಾಗ ಸಾಹಸಗಳ ಬಲಿದಾನದಿಂದ ಇವತ್ತು ನಾವು ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿದ್ದೇವೆ. ಅವರತ್ಯಾಗ ಬಲಿದಾನಕ್ಕೆ ನಾವು ಗೌರವ ನೀಡಬೇಕು’ ಎಂದುಅವರು ಶುಭಕೋರಿದರು. ಸ್ವಾತಂತ್ರದ ಬಗ್ಗೆ ಬಾಲಕಿ ವೇನಿಶಾ ಡಿಸೋಜಾ ಸ್ವಾಂತ್ರ್ಯದ ಬಗ್ಗೆ ಮಾತನಾಡಿದಳು, ಲಕ್ಷಾಂತರ ಜನ ದೇಶ ಭಕ್ತರ ಚಳುವಳಿ, ತ್ಯಾಗ ಬಲಿದಾನದಿಂದ ನಮಗೆ ಸ್ವಾಂತಂತ್ರ್ಯ ನಮಗೆ ದೊರಕಿದೆ, ಇದನ್ನು ಉಳಿಸ್ಸಿಕೋಳ್ಳುವ ಕರ್ತವ್ಯ ನಮಗಿದೆ’ ಎಂದು ತಿಳಿಸಿದಳು. ಚರ್ಚಿನ ಗಾಯನ ಮಂಡಳಿ ದೇಶ ಭಕ್ತಿ ಗೀತೆಗಳನ್ನು ಹಾಡಿದರು.
ಘಟಕದ ನಿಕಟಪೂರ್ವ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಕಥೊಲಿಕ್ ಸಭಾದ ಪದಾಧಿಕಾರಿಗಳಾದ, ವಿನೋದ್ ಕ್ರಾಸ್ತಾ, ಬರ್ನಾಡ್ ಡಿಕೋಸ್ತಾ, ಜೂಲಿಯೆಟ್ ಪಾಯ್ಸ್, ವಾಲ್ಟರ್ ಡಿಸೋಜಾ, ಜೋನ್ ಮಾಸ್ಟರ್, ಮುಂತಾದವರು ಮತ್ತು ಪಾಲನ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಸರ್ವ ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಜೋನ್ ಮಾಸ್ಟರ್, ಇನ್ನಿತರರು ಉಪಸ್ಥಿತರಿದ್ದರು. ಕಥೊಲಿಕ್ ಸಭಾ ಕುಂದಾಪುರದ ಅಧ್ಯಕ್ಷ ವಿಲ್ಸನ್ ಡಿಆಲ್ಮೇಡಾ ಸ್ವಾಗತಿಸಿದರು. ಪದಾಧಿಕಾರಿ ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶಾಂತಿ ಪಿಂಟೊ ವಂದಿಸಿದರು.
ಕುಂದಾಪುರ ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ನಿರಂತರ 5ನೇ ವರ್ಷದಲ್ಲಿಯೂ ಪ್ರತಿಷ್ಠಿತ “ಸಾಧನ ಪ್ರಶಸ್ತಿ”
ಕುಂದಾಪುರ, ಅ. 14; ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಕುಂದಾಪುರ, ನಿರಂತರ 5ನೇ ವರ್ಷದಲ್ಲಿಯೂ ಪ್ರತಿಷ್ಠಿತ “ಸಾಧನ ಪ್ರಶಸ್ತಿ” ಪಡೆದುಕೊಂಡು ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತು ಪಡಿಸಿದೆ, 5ನೇ ವರ್ಷದಲ್ಲಿಯೂ ಪ್ರತಿಷ್ಠಿತ “ಸಾಧನ ಪ್ರಶಸ್ತಿ” ಯನ್ನು ಪಡೆಯುವುದರ ಮೂಲಕ, 2023-24 ಆರ್ಥಿಕ ವರ್ಷದಲ್ಲಿ ಸಮಗ್ರ ಅಭಿವೃದ್ಧಿಗೆ ಮತ್ತು ಅತ್ಯುತ್ತಮ ಸಾಧನೆಗಳಿಗೆ ತೋರಿದ ಬದ್ದತೆ ಇದು ಎತ್ತಿ ತೋರಿಸುತ್ತದೆ, ಹೀಗೆ ಗೌರವಾನ್ವಿತ ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಈ ಸಹಕಾರ ಬ್ಯಾಂಕಿಂಗ್ ಕ್ಷೇತ್ರದಲ್ಲಿ ರೋಜರಿ ಕ್ರೆಡಿಟ್ಕೋ-ಆಪರೇಟಿವ್ ಸೊಸೈಟಿ ಮಾಡಿದ ಗಮನಾರ್ಹ ಕೊಡುಗೆಗಳಿಗೆ ಸಮ್ಮಾನಿಸಿದೆ.
ಆಗಸ್ಟ್ 14 ರಂದು, ಜಿಲ್ಲಾಕೇಂದ್ರ ಸಹಕಾರ ಬ್ಯಾಂಕಿನ ವಾರ್ಷಿಕ ಸಾಮಾನ್ಯ ಸಭೆಯ ಸಂದರ್ಭದಲ್ಲಿ, ಈ ಪ್ರಶಸ್ತಿಯನ್ನು ಗೌರವಾನ್ವಿತ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರು ಅದ್ಧೂರಿ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು. ಈ ಪ್ರಶಸ್ತಿ ಯಶಸ್ಸಿನ ಸಂಕೇತ ಮಾತ್ರವಲ್ಲ, ಆದರೆ ಸಮಾಜವನ್ನು ಹೊಸ ಎತ್ತರಗಳಿಗೆ ಎರಿಸುವ ನಿರಂತರ ಶ್ರಮ ಮತ್ತು ಮುಂದಾಲೋಚನೇಯ ನಾಯಕತ್ವದ ಪ್ರತ್ಯೇಕ ಗುರುತು ಎಂದು ಸಿಂಹಾಲೋಕನ ಮಾಡಬಹುದುಸಮಾಜದ ಪ್ರತೀಕವಾಗಿ ಸಂಘದ ಅಧ್ಯಕ್ಷರಾದ ಶ್ರೀ ಜಾನ್ಸನ್ಡಿ’ಅಲ್ಮೈಡಾ ಮತ್ತು ಉಪಾಧ್ಯಕ್ಷ ಕಿರಣ್ ಲೋಬೊ ಹಾಗೂ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಯಾದ ಮೇಬಲ್ ಡಿಆಲ್ಮೇಡಾ ಅವರು ಈ ಗೌರವವನ್ನು ಗೌರವ ಪೂರ್ವಕವಾಗಿ ಸ್ವೀಕರಿಸಿದರು. ಇವರ ಮುಂದಾಳತ್ವ ಮತ್ತು ಮಾರ್ಗದರ್ಶನವು ರೋಜರಿ ಸೊಸೈಟಿ ನಿರಂತರ ಬೆಳವಣಿಗೆ ಮತ್ತು ಯಶಸ್ಸಿನತ್ತ ಮುನ್ನಡೆಸಲು ಸಾಧ್ಯವಾಗಿದೆ.
ರೋಜರಿ ಕ್ರೆಡಿಟ್ಕೋ-ಆಪರೇಟಿವ್ ಸೊಸೈಟಿ ಶ್ರೇಷ್ಠತೆಯನ್ನು ನಿರಂತರವಾಗಿ ತೋರಿಸಿ ಕೊಂಡಿದೆ, ಇದರ 12 ಶಾಖೆಗಳು ಇದರ ಸಾಧನೆಗೆ ಪ್ರತೀಕವಾಗಿವೆ. ಈ ವರ್ಷ, ಸಂಸ್ಥೆಯು 4.05 ಕೋಟಿ ರೂಪಾಯಿಗಳ ಆಕರ್ಷಕ ಲಾಭವನ್ನು ಗಳಿಸಿದೆ, ಎಂದು ಸಂಸ್ಥೆಯ ಅಧ್ಯಕ್ಷ ಜೋನ್ಸನ್ ಡಿ ಆಲ್ಮೇಡ ಹೇಳುತ್ತಾರೆ. ಇದು ಇವರ ದೃಢವಾದ ಹಣಕಾಸು ನಿರ್ವಹಣೆಯ ಮತ್ತು ಹೊಸ ಅವಿಷ್ಖಾರಗಳ ಪ್ರತಿಫಲನವಾಗಿದೆ. ಅಲ್ಲದೆ, ಸಂಸ್ಥೆಯು 149 ಕೋಟಿ ರೂಪಾಯಿಗಳ ಸಾಲ ಮತ್ತು 175 ಕೋಟಿ ರೂಪಾಯಿಗಳ ಠೇವಣಿಗಳನ್ನು ಯಶಸ್ವಿಯಾಗಿ ವಿಸ್ತರಿಸಿದೆ, ಅದರ ಒಟ್ಟು ವ್ಯವಹಾರವು 1045 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಸಾಧನೆ ಮಾಡಿದೆ ಎಂದು ಅವರು ತಿಳಿಸುತ್ತಾರೆ.
ಈ ಪ್ರಶಸ್ತಿ ಸಂಸ್ಥೆಯ ಸದಸ್ಯರು ಮತ್ತು ಸಮುದಾಯದ ಪ್ರತಿ ನಿμÉ್ಠಯ ಸ್ಮರಣೆಯನ್ನು ಆಚರಿಸುತ್ತದೆ. ಇದು ಅವರಿಗೆ ಸಮರ್ಪಣೆ, ತಂಡದ ಕೆಲಸ, ಮತ್ತು ದೂರದ್ರಷ್ಟಿತ್ವದ ನಾಯಕತ್ವ ಕಾರಣವಾಗಿದೆ. ರೋಜರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಎಲ್ಲಾ ತಂಡಗಳು ತಮ್ಮ ಅತ್ಯುತ್ತಮ ಶ್ರಮದಿಂದ ಈ ವಿಶಿಷ್ಟ ಗೌರವವನ್ನು ಪಡೆಯಲು ಸಾಧ್ಯವಾಗಿದೆ ಎಂದು ಅಧ್ಯಕ್ಷರು ತಿಳಿಸುತ್ತಾ, ಅವರಿಗೆಲ್ಲ ಹೃದಯ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಶ್ರೀಗಂದಕ್ಕೂ ನಮ್ಮ ನಾಡಿಗೂ ಅಬಿನವ ಸಂಬಂದ ಇದೆ ಆದ್ದರಿಂದ ಈ ನಾಡಿಗೆ ಶ್ರೀಗಂದದ ನಾಡು ಎಂಬುದಾಗಿ ಹೆಸರುವಾಸಿ-ಶ್ರೀ ನಿರ್ಮಲಾನಂದನಾಥ ಸ್ವಾಮಿಜಿ
ಶ್ರೀನಿವಾಸಪುರ : ಶ್ರೀಗಂದಕ್ಕೂ ನಮ್ಮ ನಾಡಿಗೂ ಅಬಿನವ ಸಂಬಂದ ಇದೆ ಆದ್ದರಿಂದ ಈ ನಾಡಿಗೆ ಶ್ರೀಗಂದದ ನಾಡು ಎಂಬುದಾಗಿ ಕರೆಯುತ್ತಾರೆ. ಶ್ರೀಗಂದ ಮರಗಳನ್ನು ಬೆಳಸುವ ಸಂದರ್ಭದಲ್ಲಿ ಕೆಲ ಕಾನೂನಾತ್ಮಕ ಸಮಸ್ಯೆಗಳು ಬರುತ್ತವೆ . ಸರ್ಕಾರ ಮಟ್ಟದಲ್ಲಿಯೇ ಅಮರನಾರಾಯಣರವರ ತಂಡ ಇತ್ತೀಚಿಗೆ ನಿಯಮಗಳನ್ನು ಬದಲಿಸಿ, ಅರಣ್ಯ ಇಲಾಖೆಯಿಂದ ತೋಟಗಾರಿಕೆ ಇಲಾಖೆಗೆ ಬದಲಾಯಿಸಿ, ಸಾರ್ವಜೀಕರಣ ಮಾಡಿರುವುದು ಎಂದು ಶ್ರೀ ಆದಿಚುಂಚನಗಿರಿ ಮಾಹಾಸಂಸ್ಥಾನ ಪೀಠಾಧಾಪತಿಗಳಾದ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮಿಜಿ ಪ್ರಶಂಸನೀಯ ಎಂದರು
ತಾಲೂಕಿನ ಕೂಸ್ಸಂದ್ರ ಕ್ರಾಸ್ ಬಳಿಯ ಭುವನೇಶ್ವರಿ ನಿಸರ್ಗ ಆಗ್ರ್ಯಾನಿಕ್ ಫಾರ್ಮ್ನಲ್ಲಿ ಮಂಗಳವಾರ ಅಖಿಲ ಕರ್ನಾಟಕ ಶ್ರೀಗಂದ ಮತ್ತು ವನಕೃಷಿ ಬೆಳಗಾರರ ಸಂಘ, ಹಸಿರುನಾಡು ಶ್ರೀಗಂಧ ರೈತ ಉತ್ಪಾದಕ ಸಂಸ್ಥೆ, ಶ್ರೀ ನಾಡಪ್ರಭು ಕೆಂಪೇಗೌಡ ಸೇವಾ ಟ್ರಸ್ಟ್ , ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘ , ಅರಿಗ್ರಾಫ್ ಸಂಸ್ಥೆ ಸಹಯೋಗದಲ್ಲಿ ಸಸಿಗಳ ಲೋಕಾರ್ಪಣೆ ಹಾಗೂ ಕೃಷಿಕರ ಜಾಗೃತಿ ಸಮಾವೇಶವನ್ನು ಉದ್ಗಾಟಿಸಿ ಮಾತನಾಡಿದರು.
ಸಧ್ಯ ಈಗ ಒಬ್ಬ ಒಬ್ಬರಿಗೂ ಒಂದು ಗಿಡವನ್ನ ಬೆಳಸಿ ಮುಂದಿನ ಪೀಳಿಗೆಗೆ ಶುದ್ದ ಪರಿಸರವನ್ನು ನಿರ್ಮಾಣ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎಂದರು. ಇಲ್ಲವಾದರೆ ಮುಂದಿನ ದಿನದಲ್ಲಿ ಆಪತ್ತು ಕಟ್ಟಿಟ್ಟಿ ಬುತ್ತಿ ಎಂದರು.
ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ಶ್ರೀಗಂದ ಮರಗಳನ್ನು ಬೆಳೆಯುವುದರಿಂದ ರೈತ ಉಪಕಸುಬಾಗಿ ಶ್ರೀಗಂದ ಬೆಳೆಯನ್ನು ಬೆಳೆಯುವುದರಿಂದ ಆರ್ಥಿಕವಾಗಿ ಸಭಲರಾಗಲು ಸಾಧ್ಯವಾಗುತ್ತದೆ. ಮಾರುಕಟ್ಟೆಯಲ್ಲಿ ಶ್ರೀಗಂದವನ್ನ ವಿವಿಧ ಔಷಧಗಳು ಮತ್ತ ಸೌಂದರ್ಯ ವರ್ಧಕಗಳನ್ನು ತಯಾರಿಸಲು ಬಳಸುವುದರಿಂದ ಹೆಚ್ಚು ಬೇಡಿಕೆ ಇದೆ ಆದ್ದರಿಂದ ರೈತರು ಶ್ರೀಗಂದ ಬೆಳೆಯುವುದರಿಂದ ಆರ್ಥಿಕವಾಗಿ ಸಭಲರಾಗಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಅಖಿಲ ಕರ್ನಾಟಕ ಶ್ರೀಗಂದ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಅಮರನಾರಾಯಣ ಮಾತನಾಡಿ ಇತ್ತೀಚಿಗೆ ಪರಿಸರದಲ್ಲಿ ಬಿಸಿಲಿನ ತಾಪ ಹೆಚ್ಚುತ್ತಿದ್ದು , ಪರಿಸರದಲ್ಲಿ ಬಿಸಿಲಿನ ತಾಪವನ್ನು ಸರಿದೂಗಿಸಲು ನಾವೆಲ್ಲರೂ ಸೇರಿ ಪ್ರತಿದಿನ ಒಂದು ಗಿಡವನ್ನು ನೆಟ್ಟು ಮರವಾಗಿಸಬೇಕಾಗಿದೆ. ಸಾಮಾನ್ಯವಾಗಿ ಹುಟ್ಟಿದ ದಿನದೊಂದು ಸಾವಿರಾರೂ ರೂಗಳನ್ನು ವೆಚ್ಚಮಾಡುವುದು ಬಿಟ್ಟು ಗಿಡಗಳನ್ನು ನೆಟ್ಟು ಪರಿಸರವನ್ನು ಉಳಿಸುವಂತೆ ಕರೆನೀಡಿದರು.
ಬೈರಪಲ್ಲಿ ಬಿಜಿಎಸ್ ಶಾಲೆಯ ವಿದ್ಯಾರ್ಥಿಗಳಿಂದ ಕೃಷಿ ಗೀತೆ ಹಾಡಿದರು. ಬಿಜಿಎಸ್ ಶಾಲೆಯ ವಿದ್ಯಾರ್ಥಿ ಸಿ.ವಿ.ಅನಘ ಕಾರ್ಯಕ್ರಮದ ಬಗ್ಗೆ ಪ್ರಸ್ತಾವಿಕ ನುಡಿನುಡಿದರು. ಈ ಕಾರ್ಯಕ್ರಮದಲ್ಲಿ ಅಮರನಾರಾಯಣ, ಪರಿಮಳನಾರಾಯಣ ದಂಪತಿಗಳ ಮದುವೆ 41 ನೇ ಸಂವತ್ಸರದ ಆಚರಣೆಯನ್ನ ಹಮ್ಮಿಕೊಳ್ಳಲಾಯಿತು.
ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ ಹಾಗು ನಾಡಪ್ರಭು ಕೆಂಪೇಗೌಡ ಸೇವಾಟ್ರಸ್ಟ್ನ ಸಂಸ್ಥಾಪಕ ಅಧ್ಯಕ್ಷ ಬೆಲ್ಲಂ ಶ್ರೀನಿವಾಸರೆಡ್ಡಿ ಮಾತನಾಡಿದರು. ಚಿಕ್ಕಬಳ್ಳಾಪುರ ಶಾಖಾ ಮಠದ ಪೀಠಾಧತಿಗಳಾದ ಮಂಗಳನಂದನಾಥ ಸ್ವಾಮಿ, ಅಖಿಲ ಕರ್ನಾಟಕ ಶ್ರೀಗಂದ ಮತ್ತು ವನಕೃಷಿ ಬೆಳೆಗಾರರ ಸಂಘ ಉಪಾಧ್ಯಕ್ಷ ಯು ಶರಣಪ್ಪ, ಆರಿಗ್ರಾಫ್ ಸಂಸ್ಥೆ ಮುಖ್ಯಸ್ಥರು ಸುಬ್ಬುಯೋಯಿಸ್, ಪರಿಸರ ಪ್ರೇಮಿ ಪರಿಮಳಅಮರನಾರಾಯಣ, ಜಿಲ್ಲಾ ಮಾವು ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘ ಅಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ವೇಣುಗೋಪಾಲರೆಡ್ಡಿ, ಬಿಜಿಎಸ್ ಶಾಲೆಯ ಪ್ರೌಡಶಾಲೆ ಮುಖ್ಯ ಶಿಕ್ಷಕ ವೆಂಕಟರಾಮರೆಡ್ಡಿ, ಹಸಿರುನಾಡು ಶ್ರೀಗಂದ ರೈತ ಉತ್ಪಾದಕ ಅಧ್ಯಕ್ಷ ಟಿ.ಎಂ.ವೆಂಕಟೇಗೌಡ, ಕಾರ್ಯದರ್ಶಿ ಸುರೇಶ್, ಜಿ.ಪಂ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ, ಮುಖಂಡ ಕೊತ್ತೂರು ಅಮರನಾಥರೆಡ್ಡಿ ಇದ್ದರು.