ಕುಂದಾಪುರ: ಒಳ್ಳೆಯ ಸಂಸ್ಕಾರದೊಂದಿಗೆ ಸಮಾಜದೊಳಗೆ ಒಂದಾಗಿ ಒಗ್ಗಟ್ಟಾಗಿ ಜೀವಿಸಿ ಜೀವನವನ್ನು ಕಟ್ಟಿಕೊಳ್ಳಿ ಎಂದು ಪದ್ಮಶ್ರೀ ಖ್ಯಾತ ಮನೋವೈದ್ಯ ಡಾ ಸಿ.ಆರ್.ಚಂದ್ರಶೇಖರ ಅವರು ಹೇಳಿದರು.
ಅವರು ಮೇ 27ರಂದು ಇಲ್ಲಿನ ಭಂಡಾರ್ಕಾರ್ಸ್ ಪದವಿ ಕಾಲೇಜಿನಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ “ಒತ್ತಡ ರಹಿತ ಜೀವನ” ಎಂಬ ವಿಷಯದ ಕುರಿತು ಮಾತನಾಡಿದರು.
ಮನುಷ್ಯನಿಗೆ ಮುಖ್ಯವಾಗಿ ಉತ್ತಮ ಸಾಮಾಜಿಕ ಸಂಪರ್ಕ ಅಗತ್ಯವಾಗಿ ಬೇಕು. ಅದು ಮನೆಗೆ ಮಾತ್ರ ಸೀಮಿತವಾಗಿರದೆ ಸಮಾಜದೊಳಗೂ ಅತ್ಯಂತ ಮುಖ್ಯವಾಗಿರುತ್ತದೆ. ಅಲ್ಲದೆ ಧೂಮಪಾನ ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗಬೇಡಿ. ಪ್ರಾಮಾಣಿಕತೆ ಮತ್ತು ಒಳ್ಳೆಯತನದಿಂದ ಬದುಕಬೇಕು. ಸಮಾಜದಲ್ಲಿ ಅಂತಹವರನ್ನು ಗುರುತಿಸುವುದುರೊಂದಿಗೆ ನೆನಪಿಟ್ಟುಕೊಳ್ಳುತ್ತದೆ ಎಂದು ಹೇಳಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಲೆಕ್ಕ ಪರಿಶೋಧಕ ಡಾ.ನಾಗರಾಜ ಆಚಾರ್ ಅವರು “ಯಶಸ್ವಿ ಜೀವನದ ಸೂತ್ರಗಳು” ಎಂಬ ವಿಷಯದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಹಿರಿಯ ಸದಸ್ಯರಾದ ಕೆ ಶಾಂತಾರಾಮ್ ಪ್ರಭು ವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಿಶ್ವಸ್ಥ ಮಂಡಳಿಯ ಸದಸ್ಯರಾದ ಸದಾನಂದ ಚಾತ್ರ, ರಾಜೇಂದ್ರ ತೋಳಾರ್, ಆಡಳಿತ ಮಂಡಳಿಯ ಸದಸ್ಯರಾದ ಯು.ಎಸ್.ಶೆಣೈ, ಮತ್ತು ಮಾಲಿಗ ಆಚಾರ್ ಉಪಸ್ಥಿತರಿದ್ದರು.
ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಶುಭಕರಾಚಾರಿ ಸ್ವಾಗತಿಸಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ.ಜಿ.ಎಂ.ಗೊಂಡ ವಂದಿಸಿದರು. ಮನಃಶಾಸ್ತ್ರ ಉಪನ್ಯಾಸಕಿ ರಾಜೇಶ್ವರಿ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಿಕೋದ್ಯಮ ಉಪನ್ಯಾಸಕಿ ಸುಮಲತಾ ಮತ್ತು ಜ್ಯೋತಿ ಅಲ್ಸೆ ಪರಿಚಯಿಸಿದರು.
Month: May 2024
29 ಮತ್ತು 30 ಕ್ಕೆ ಸಿದ್ಧತಾ ಕಾರ್ಯ ಮುಗಿಸಿ, 31ಕ್ಕೆ ತಳಿರು ತೋರಣಗಳೊಂದಿಗೆ ಶಾಲಾ ಪ್ರಾರಂಭೋತ್ಸವವನ್ನು ಮಾಡಬೇಕು: ಬಿಆರ್ಸಿ ಕೆ.ಸಿ.ವಸಂತಾ
ಶ್ರೀನಿವಾಸಪುರ : 29 ಮತ್ತು 30 ಕ್ಕೆ ಸಿದ್ಧತಾ ಕಾರ್ಯ ಮುಗಿಸಿ, 31ಕ್ಕೆ ತಳಿರು ತೋರಣಗಳೊಂದಿಗೆ ಶಾಲಾ ಪ್ರಾರಂಭೋತ್ಸವವನ್ನು ಮಾಡಬೇಕು . ನಲಿಕಲಿಗೆ ವಿದ್ಯಾ ಪ್ರವೇಶ, ಮತ್ತು ಸೇತುಬಂಧ 4 ರಿಂದ 10 ರ ವರೆಗೆ ಸೇತು ಬಂದ ಕಾರ್ಯಕ್ರಮವನ್ನು ಸುತ್ತೋಲೆಯಂತೆ ಕ್ರಮ ಕೈಗೊಂಡು ಎಸ್ಎಪಿ ತಯಾರಿಕೆಗೆ ಸಿದ್ಧತೆ ಮಾಡಿಕೊಳ್ಳುವುದು ಎಂದು ಬಿಆರ್ಸಿ ಕೆ.ಸಿ.ವಸಂತಾ ತಿಳಿಸಿದರು.
ಪಟ್ಟಣದ ಬಿಆರ್ಸಿ ಕಚೇರಿಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಬಿಆರ್ಪಿ ಮತ್ತು ಕ್ಲಸ್ಟರ್ಗಳ ಸಿಆರ್ಪಿಗಳ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
ಶಿಕ್ಷಣ ಇಲಾಖೆಯು 2024-25 ನೇ ಸಾಲನ್ನು ಶೈಕ್ಷಣಿಕ ಬಲವರ್ಧನೆ ವರ್ಷವನ್ನಾಗಿ ಘೋಷಿಸಿದೆ. ಶೈಕ್ಷಣಿಕ ಮಾರ್ಗದರ್ಶಿ 24- 25 ನ್ನು ಪ್ರತಿ ಶಾಲೆಯಲ್ಲಿ ಇಡುವುದು.ಹಾಗೆ ಓದಿ ಅದರಂತೆ ಅನುಪಾಲನೆ ಮಾಡುವುದು. ಶಾಲಾ ಪ್ರಾರಂಭಕ್ಕೂ ಮುನ್ನಾ ದಿನ ಸ್ವಚ್ಛತಾ ಕಾರ್ಯದ ಅಂಗವಾಗಿ ಶಾಲಾವರಣ,ಕೊಠಡಿ, ಮೇಲ್ಚಾವಣಿ, ಸಂಪು,ಟ್ಯಾಂಕು, ಅಡುಗೆಮನೆ, ಶೌಚಾಲಯ, ಕುಡಿಯುವ ನೀರು, ಹೀಗೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು.
3 ರೀತಿಯ ವೇಳಾಪಟ್ಟಿ, ವಾರ್ಷಿಕ ಕ್ರಿಯಾ ಯೋಜನೆ, ಎಸ್ಡಿಪಿ ಪಂಚಾಂಗ, ಶಿಕ್ಷಕರ ವೈಯಕ್ತಿಕ ದಾಖಲೆಗಳು ಹೀಗೆ ಆಡಳಿತಾತ್ಮಕ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು. ಪಠ್ಯ ಪುಸ್ತಕ,ಸಮವಸ್ತ್ರಗಳನ್ನು ಮಕ್ಕಳಿಗೆ ವಿತರಿಸಿ, ಸ್ಯಾಟ್ಸ್ ನಲ್ಲಿ ಅಪೆÇ್ಲೀಡ್ ಮಾಡುವುದು . ದಾಖಲಾತಿ ಹೆಚ್ಚಳಕ್ಕೆ, ವಿವಿಧ ಆಕರ್ಷಣ ರೀತಿಯಲ್ಲಿದಾಖಲಾತಿ ಆಂದೋಲನವನ್ನು ಕೈಗೊಳ್ಳುವುದು. ಮಕ್ಕಳ ಸುರಕ್ಷತೆಗೆ ಸಂಪು,ವಿದ್ಯುತ್ ತಂತಿ, ಮೊದಲ ಅಂತಸ್ತಿನ ಕೊಠಡಿಗಳಿದ್ದಲ್ಲಿ ಮೆಸ್ ವ್ಯವಸ್ಥೆ ಮಾಡಿ, ಎಚ್ಚರಿಕೆ ವಹಿಸುವುದು.
ಎಸ್ಡಿಎಂಸಿ, ಪೆÇೀಷಕರು ಗ್ರಾಮಸ್ಥರೊಂದಿಗೆ ಸಮೀಕ್ಷೆ ನಡೆಸಿ ಶಾಲಾ ದಾಖಲಾತಿಯನ್ನು ಹೆಚ್ಚಿಸುವುದು.
ಹಿಂದಿನ ಸಾಲಿನ ಅನುದಾನಗಳನ್ನು ಸಮರ್ಪಕವಾಗಿ ಬಳಸಿಕೊಂಡು ಮೂಲಭೂತ ಸೌಲಭ್ಯಗಳನ್ನು ಉತ್ತಮಪಡಿಸಿರುವುದು. ಹಳೆ ವಿದ್ಯಾರ್ಥಿಗಳ ಸಂಘ ಕಡ್ಡಾಯವಾಗಿ ರಚನೆ ಮಾಡಿರುವ ಮಾಹಿತಿಯನ್ನು ಕಚೇರಿಗೆ ನೀಡುವುದು ಎಂದು ಮಾಹಿತಿ ನೀಡಿದರು.
ಈ ಪೂರ್ವ ಬಾವಿ ಸಭೆಗೆ ಬಿಆರ್ಪಿ, ಸಿಆರ್ಪಿಗಳಿಗೆ ಹೂಗುಚ್ಚುಗಳನ್ನು ನೀಡುವುದರ ಮೂಲಕ ಸ್ವಾಗತವನ್ನು ಕೋರಲಾಯಿತು. ತಾಲೂಕು ಪಠ್ಯ ವಿತರಣಾ ನೋಡಲ್ ಅಧಿಕಾರಿ ಎಲ್.ವಿ.ಲಕ್ಷ್ಮಿನಾರಾಯಣ, ಉರ್ದು ಬಾಷಾ ಇಸಿಒ ಸಾಧಿಕ್ಬಾಷ, ಬಿಆರ್ಪಿಗಳಾದ ಕೆ.ಎಸ್.ನಾಗರಾಜ್, ವೆಂಕಟಾಚಲಪತಿ, ಬಿಐಆರ್ಟಿಇ ಅಧಿಕಾರಿ ಜಿ.ವಿ.ಚಂದ್ರಪ್ಪ ಹಾಗು ತಾಲೂಕಿನ ಕ್ಷೇತ್ರ ಸಂನ್ಮೂಲ ವ್ಯಕ್ತಿಗಳು ಹಾಜರಿದ್ದರು.
ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜನರೇಟ್ರ್ ಉದ್ಘಾಟನೆ : ಅಧ್ಯಾಪಕರು ಮತ್ತು ಜಂಟಿ ಕಾರ್ಯದರ್ಶಿ ನಡುವೆ ವಿಚಾರ ವಿನಿಮಯ
ಕುಂದಾಪುರ, ಮೇ.30: ಕುಂದಾಪುರ ಪ್ರಸಿದ್ದ ರೋಜರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನೂತನವಾಗಿ ಅಳವಡಿಸಿದ ಆಧುನಿಕ ತಂತ್ರಜ್ಞಾನದ ಜನರೇಟರನ್ನು ಶಾಲೆಯ ಜಂಟಿ ಕಾರ್ಯದರ್ಶಿ, ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಶಾಲಾ ಮುಖ್ಯ ಶಿಕ್ಷಕಿ ಭಗಿನಿ ತೆರೆಜಾ ಶಾಂತಿ ಉದ್ಘಾಟಿಸಿದರು. ವಂ|ಸ್ಟ್ಯಾನಿ ತಾವ್ರೊ ಆಶಿರ್ವವಚನ ಮಾಡಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ, ಶಾಲಾ ಸಂಯೋಜಕರಾದ ಮಾರ್ಗರೇಟ್ ಪಿಕಾರ್ಡೊ, ಶಾಲೆಯ ಸಲಹ ಸಮಿತಿಯ ಸದಸ್ಯರಾದ ವಿನೋದ್ ಕ್ರಾಸ್ಟೊ, ಡಾ.ಸೋನಿ ಡಿಕೋಸ್ತಾ, ಸಂತ ಮೇರಿಸ್ ಸಮೂಹ ಶಿಕ್ಷಣ ಶಿಕ್ಷಣ ಸಂಸ್ಥೆಯ ಎಲ್ಲಾ ಮುಖ್ಯೋಪಾಧ್ಯಾಯರು, ರೋಜರಿ ಶಾಲೆಯ ಶಿಕ್ಷಕ -ಶಿಕ್ಷಕೇತರ ಸಿಬಂದಿ ಉಪಸ್ಥಿತರಿದ್ದರು.
ನಂತರ ನೆಡದ ಅಧ್ಯಾಪಕರು ಮತ್ತು ಜಂಟಿ ಕಾರ್ಯದರ್ಶಿ ನಡುವೆ ವಿಚಾರ ವಿನಿಮಯ ನಡೆಯಿತು, ಶಾಲಾ ಅಭಿವ್ರದ್ದಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡುವ ಬಗ್ಗೆ ವಿಚಾರ ವಿನಿಮಯ ನಡೆಸಲಾಯಿತು, ಇದನ್ನು ಜಂಟಿ ಕಾರ್ಯದರ್ಶಿ ವಂ|ಸ್ಟ್ಯಾನಿ ತಾವ್ರೊ ನಡೆಸಿಕೊಟ್ಟರು. ಮುಖ್ಯ ಶಿಕ್ಷಕಿ ಭಗಿನಿ ತೆರೆಜಾ ಶಾಂತಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನೂತನವಾಗಿ ಶಾಲೆಗೆ ಸಂಯೋಜಕರಾಗಿ ನಿಯುಕ್ತರಾದ ಮಾರ್ಗರೇಟ್ ಪಿಕಾರ್ಡೊ ಹಾಗೇ ನೂತನವಾಗಿ ಆಯ್ಕೆಯಾದ ಶಿಕ್ಷಕಿಯರಾದ ಭಗಿನಿ ಜುಲಿಯೆಟ್ (ಆ.ಕಾ.) ರೇನಿಷಾ ಡಿಆಲ್ಮೇಡಾ ಮತ್ತು ಸಿಲ್ವಿಯಾ ಫೆರ್ನಾಂಡಿಸ್ ಇವರನ್ನು ಪರಿಚಯಿಸಲಾಯಿತು. ಶಿಕ್ಷಕಿ ಸೆಲಿನ್ ಡಿಸೋಜಾ ಸ್ವಾಗತಿಸಿದರು, ಶಿಕ್ಷಕಿ ನೀತಾ ಡಿಸೋಜಾ ವಂದಿಸಿದರು, ಶಿಕ್ಷಕಿ ನಿಖಿತಾ ಶೆಟ್ಟಿ ನಿರೂಪಿಸಿದರು.
ಆರ್.ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜು : ದ್ವಿತೀಯ ಪಿ.ಯು.ಸಿ ಪರೀಕ್ಷೆ-2 ರ ಫಲಿತಾಂಶ
ದ್ವಿತೀಯ ಪಿ.ಯು.ಸಿ ಪರೀಕ್ಷೆ- 2 ರಲ್ಲಿ ಕುಂದಾಪುರದ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯ ಶೈಕ್ಷಣಿಕ ಸಾಧನೆಯನ್ನು ಮಾಡಿರುತ್ತಾರೆ. ವಿಜ್ಞಾನ ವಿಭಾಗದ ಸುಹಾನಿ ಎನ್. 593 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ ಆರನೇ ಸ್ಥಾನವನ್ನು ಪಡೆದಿರುತ್ತಾರೆ. ವಾಣಿಜ್ಯ ವಿಭಾಗದ ಸುರಕ್ಷಾ 590 ಅಂಕಗಳೊಂದಿಗೆ ರಾಜ್ಯಮಟ್ಟದಲ್ಲಿ 8ನೇ ಸ್ಥಾನವನ್ನು ಪಡೆದಿರುತ್ತಾರೆ. ವಿಜ್ಞಾನ ವಿಭಾಗದ ಆಶಿಕಾ-589, ತನುಶ್ರೀ- 589 ಅಂಕಗಳೊಂದಿಗೆ ಹತ್ತನೇ ಸ್ಥಾನವನ್ನೂ ಪಡೆದಿರುತ್ತಾರೆ. ವಿಜ್ಞಾನ ವಿಭಾಗದ ತ್ರಿಷಾ-588, ಅನ್ವಿತಾ- 588, ಸುಜನ್ ಕುಮಾರ್-587, ನಿಶಾ-587, ಶ್ರೀಲಕ್ಷ್ಮಿ-586,
ಸಾನಿಕಾ-586, ರಶ್ಮಿತಾ-584, ಸುಮಿತ್-582, ಅಂಕಗಳನ್ನು ಪಡೆದಿರುತ್ತಾರೆ ಎಂದು ಪ್ರಾಂಶುಪಾಲರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ವಿದ್ಯಾರ್ಥಿಗಳ ಈ ಉತ್ಕೃಷ್ಟ ಸಾಧನೆಯನ್ನು ಮೆಚ್ಚಿ ಕಾಲೇಜಿನ ಸಂಚಾಲಕರಾದ ಶ್ರೀ. ಬಿ.ಎಮ್. ಸುಕುಮಾರ್ ಶೆಟ್ಟಿಯವರು, ಆಡಳಿತ ಮಂಡಳಿಯ ಸದಸ್ಯರು, ಪ್ರಾಂಶುಪಾಲರು, ಬೋಧಕ- ಬೋಧಕೇತರ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.
ಬೋಧನೆಯ ಉತ್ಕೃಷ್ಟತೆಯನ್ನು ಬೆಳೆಸುವುದು: ಸೇಂಟ್ ಥೆರೆಸಾ ಶಾಲೆಯಲ್ಲಿ ಸಾಫ್ಟ್ ಸ್ಕಿಲ್ಸ್ನೊಂದಿಗೆ ಶಿಕ್ಷಕರನ್ನು ಸಬಲೀಕರಣ ಗೊಳಿಸುವುದು / Cultivating Teaching Excellence: Empowering Educators with Soft Skills at St Theresa’s School
ಬೆಂದೂರಿನ ಸೇಂಟ್ ಥೆರೆಸಾ ಶಾಲೆಯಲ್ಲಿ ಶೈಕ್ಷಣಿಕ ಪ್ರಯಾಣವನ್ನು ಬಲಪಡಿಸುವ ಪೂರ್ವಭಾವಿ ಪ್ರಯತ್ನದಲ್ಲಿ, ಮ್ಯಾನೇಜ್ಮೆಂಟ್ 28 ಮೇ, 2024 ರಂದು ಸಿಬ್ಬಂದಿ ಸಂವರ್ಧನಾ ಕಾರ್ಯಕ್ರಮವನ್ನು ಆಯೋಜಿಸಿದೆ, ಗೌರವಾನ್ವಿತ ಸಂದೇಶ ಫೌಂಡೇಶನ್ನ ನಿರ್ದೇಶಕರಾದ ರೆ.ಫಾ. ಸುದೀಪ್ ಪಾಲ್, ಸೆಮಿನಾರ್, ಸೆಮಿನಾರ್ ಅನ್ನು ಮುನ್ನಡೆಸಿದರು. “ಮೃದು ಕೌಶಲ್ಯಗಳ ಮೂಲಕ ಬೋಧನೆಯ ಉತ್ಕೃಷ್ಟತೆಯನ್ನು ಹೆಚ್ಚಿಸುವುದು”, 2024-25 ರ ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗುವ ಮೊದಲು ಶಿಕ್ಷಣತಜ್ಞರು ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಲು ಒಂದು ಮೂಲಾಧಾರವಾಗಿದೆ.
ದಿನವು ದೈವಿಕ ಆಶೀರ್ವಾದದ ಗಂಭೀರ ಆವಾಹನೆಯೊಂದಿಗೆ ತೆರೆದುಕೊಂಡಿತು, ನಂತರ ಸ್ವಾಗತದ ಬೆಚ್ಚಗಿನ ಮಾತುಗಳು ಮತ್ತು ರೆವ್ ಫಾದರ್ ಡಾ. ಸುದೀಪ್ ಪಾಲ್ ಅವರನ್ನು ವಿಶೇಷ ಸಂಪನ್ಮೂಲ ವ್ಯಕ್ತಿಯಾಗಿ ಪರಿಚಯಿಸಲಾಯಿತು. ರೋಮಾಂಚಕ ಸ್ವರವನ್ನು ಹೊಂದಿಸಿ, ಭಾಗವಹಿಸುವವರನ್ನು ಉತ್ತೇಜಿಸಲು ಮತ್ತು ತೊಡಗಿಸಿಕೊಳ್ಳಲು ನಿಖರವಾಗಿ ವಿನ್ಯಾಸಗೊಳಿಸಲಾದ ಸಂವಾದಾತ್ಮಕ ಗುಂಪು ಚಟುವಟಿಕೆಗಳೊಂದಿಗೆ ಅಧಿವೇಶನವು ಪ್ರಾರಂಭವಾಯಿತು.
Fr.ಸುದೀಪ್ ಪಾಲ್ ಅವರು ಶಿಕ್ಷಣತಜ್ಞರಲ್ಲಿ ಮೃದು ಕೌಶಲ್ಯಗಳನ್ನು ಬೆಳೆಸುವ ಪ್ರಮುಖ ಪ್ರಾಮುಖ್ಯತೆಯನ್ನು ನಿರರ್ಗಳವಾಗಿ ವಿವರಿಸಿದರು. ಆತ್ಮವಿಶ್ವಾಸ, ನಾಯಕತ್ವ, ಮಧ್ಯಸ್ಥಿಕೆ, ತಂಡದ ಮನೋಭಾವ, ಸಮಸ್ಯೆ-ಪರಿಹರಣೆ, ಸಹಾನುಭೂತಿ ಮತ್ತು ಸೃಜನಶೀಲ ಚಿಂತನೆಯಂತಹ ಗುಣಲಕ್ಷಣಗಳನ್ನು ಒತ್ತಿಹೇಳುತ್ತಾ, ಅವರು ಶಿಕ್ಷಕ ವೃತ್ತಿಯಲ್ಲಿ ಸಮಗ್ರ ಅಭಿವೃದ್ಧಿಯನ್ನು ಬೆಳೆಸುವಲ್ಲಿ ಅವರ ಅನಿವಾರ್ಯ ಪಾತ್ರವನ್ನು ಒತ್ತಿಹೇಳಿದರು. ಪರಿಣಾಮಕಾರಿ ಸಂವಹನ ಸಾಮರ್ಥ್ಯ ಮತ್ತು ಪ್ರವೀಣ ಸಮಯ ನಿರ್ವಹಣೆಯನ್ನು ಸಮಗ್ರ ಶಿಕ್ಷಣ ಬೆಳವಣಿಗೆಗೆ ಅಗತ್ಯವಾದ ನಿರ್ಣಾಯಕ ಅಂಶಗಳಾಗಿ ಪ್ರತಿಪಾದಿಸಲಾಗಿದೆ.
ವಿದ್ಯಾರ್ಥಿಗಳೊಂದಿಗೆ ಮಾತ್ರವಲ್ಲದೆ ಸಹೋದ್ಯೋಗಿಗಳು, ಪೋಷಕರು ಮತ್ತು ಇತರ ಮಧ್ಯಸ್ಥಗಾರರೊಂದಿಗೆ ಸಕಾರಾತ್ಮಕ ಸಂಬಂಧಗಳನ್ನು ಬೆಳೆಸುವಲ್ಲಿ ಮೃದು ಕೌಶಲ್ಯಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ನೈಜ-ಜೀವನದ ಉದಾಹರಣೆಗಳ ಮೂಲಕ ಇದನ್ನು ವಿವರಿಸಲಾಗಿದೆ, ಪ್ರವೀಣ ಮೃದು ಕೌಶಲ್ಯಗಳು ಸ್ಪಷ್ಟ ಸಂವಹನ, ತಡೆರಹಿತ ಸಹಯೋಗ ಮತ್ತು ಪರಿಣಾಮಕಾರಿ ತರಗತಿಯ ನಿರ್ವಹಣೆಯನ್ನು ಹೇಗೆ ಸುಗಮಗೊಳಿಸುತ್ತವೆ ಎಂಬುದನ್ನು ವಿವರಿಸುತ್ತದೆ.
ಆತ್ಮಾವಲೋಕನದ ರಸಪ್ರಶ್ನೆಯನ್ನು ಶಿಕ್ಷಕರ ಪರಾನುಭೂತಿ ಮತ್ತು ಭಾವನಾತ್ಮಕ ಬುದ್ಧಿವಂತಿಕೆಯ ಮಟ್ಟವನ್ನು ಅಳೆಯಲು ಚತುರತೆಯಿಂದ ರಚಿಸಲಾಗಿದೆ, ಇದು ವೈಯಕ್ತಿಕ ಬೆಳವಣಿಗೆಗೆ ಅನುಕೂಲಕರವಾದ ಪ್ರತಿಫಲಿತ ವಾತಾವರಣವನ್ನು ಉತ್ತೇಜಿಸುತ್ತದೆ.
ಪುಷ್ಟೀಕರಣದ ಟಿಪ್ಪಣಿಯ ಮೇಲೆ ಮುಕ್ತಾಯಗೊಂಡ ಕಾರ್ಯಕ್ರಮವು ಶಿಕ್ಷಕರನ್ನು ನವೀಕೃತ ಮನಸ್ಥಿತಿಯೊಂದಿಗೆ ಮತ್ತು ಮುಂಬರುವ ಶೈಕ್ಷಣಿಕ ವರ್ಷವನ್ನು ನ್ಯಾವಿಗೇಟ್ ಮಾಡಲು ಮುಂದಾಲೋಚನೆಯ ದೃಷ್ಟಿಯನ್ನು ಹೊಂದಿದೆ.
Cultivating Teaching Excellence: Empowering Educators with Soft Skills at St Theresa’s School
In a proactive endeavour to fortify the educational journey at St. Theresa’s School, Bendir, the Management organised a Staff Enrichment Programme on 28 May, 2024, spearheaded by Rev Fr Dr. Sudeep Paul, Director of the esteemed Sandesha Foundation, the seminar, titled “Enhancing Teaching Excellence through Soft Skills,” served as a cornerstone for educators to hone their craft before the commencement of the new academic year 2024-25
The day unfolded with a solemn invocation of divine blessings, followed by warm words of welcome and the introduction of Rev Fr Dr. Sudeep Paul as the distinguished resource person. Setting a vibrant tone, the session commenced with interactive group activities meticulously designed to invigorate and engage participants.
FrSudeep Paul eloquently elucidated the paramount importance of cultivating soft skills among educators. Emphasizing traits such as confidence, leadership, mediation, team spirit, problem-solving, empathy, and creative thinking, he underscored their indispensable role in fostering holistic development within the teaching profession. Effective communication prowess and adept time management were posited as crucial facets essential for comprehensive pedagogical growth.
The pivotal role soft skills play in fostering positive relationships not only with students but also with colleagues, parents, and other stakeholders. This was illustrated through a plethora of real-life examples, illuminating how adept soft skills facilitate clear communication, seamless collaboration, and effective classroom management.
An introspective quiz was ingeniously crafted to gauge educators’ levels of empathy and emotional intelligence, fostering a reflective atmosphere conducive to personal growth.
Concluding on a note of enrichment, the programme equipped teachers with a renewed mindset and a forward-thinking vision for navigating the academic year ahead.
ನೆಹರು ಪುಣ್ಯಸ್ಮರಣೆ : ತಮಿಳುನಾಡಿನ ತಳ್ಳಕುಳಂನಲ್ಲಿ -ಸಚಿವ ಕೆ.ಎಚ್.ಮುನಿಯಪ್ಪರಿಂದ ಪ್ರತಿಮೆಗೆ ಮಾಲಾರ್ಪಣೆ
ಕೋಲಾರ:- ಭಾರತದ ಮೊದಲ ಪ್ರಧಾನ ಮಂತ್ರಿ ದಿವಂಗತ ಜವಾಹರಲಾಲ್ ನೆಹರು ಅವರ ಪುಣ್ಯ ಸ್ಮರಣೆಯಂದು ರಾಜ್ಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆಹೆಚ್. ಮುನಿಯಪ್ಪ ತಮಿಳುನಾಡು ರಾಜ್ಯದ ಮದುರೈ ನ ತಳ್ಳಕುಳಂ ನಲ್ಲಿ ನೆಹರು ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರಧಾನಿಯಾಗಿ ಅಲಿಪ್ತ ನೀತಿಯ ನೇತರಾರಾಗಿ, ಶಾಂತಿಧೂತರಾಗಿ, ಪಂಚಮಶೀಲ ತತ್ವಗಳನ್ನು ಜಾರಿಗೆ ತರುತ್ತಾರೆ, ಉತ್ತರ, ಭಾಷಣಕಾರರು, ಲೇಖಕರು ಆಗಿದ್ದರು. 1955 ರಲ್ಲಿ ಭಾರತರತ್ನ, 1964 ರಲ್ಲಿ ಪ್ರಧಾನಿಯಾಗಿದ್ದಾಗಲೇ ಮರಣ ಹೊಂದುತ್ತಾರೆ.
ಸುಮಾರು 17 ವರ್ಷಗಳ ಕಾಲ ಪ್ರಧಾನಿಯಾಗಿ, ಉತ್ತಮ ಕೆಲಸಗಳನ್ನು ರಾಜನೀತಿಯನ್ನು, ಅನೇಕ ರಾಜಕಾರಣಿಗಳಿಗೆ ರಾಜನೀತಿ ಮಾರ್ಗಗದರ್ಶಕರಾಗಿ ಕಂಡ ಬಂದ ನೆಹರು ಅವರ ಆದರ್ಶ ಇಂದಿನ ರಾಜಕಾರಣಿಗಳಿಗೆ ಅಗತ್ಯವಿದೆ ಎಂದರು.
ಆಗರ್ಭ ಶ್ರೀಮಂತರ ಕುಟುಂಬದಲ್ಲಿ ಜನಿಸಿದ ನೆಹರು ಆನಂದ ಭವನದಲ್ಲಿ ಇವರ ಬಾಲ್ಯ ಜೀವನ ಸಾಗುತ್ತದೆ. ದೆಹಲಿಯ ಇವರ ಭವ್ಯ ಭಂಗಲೆಯಲ್ಲಿ ವಾಸವಿರುತ್ತಾರೆ. ತಂದೆ ತಾಯಿಯವರು ನೆಹರು ಎಂದು ನಾಮಕರಣ ಮಾಡುತ್ತಾರೆ. ಕಾಶ್ಮೀರದಲ್ಲಿ ವಾಸವಿದ್ದ ಸಂದರ್ಭದಲ್ಲಿ ರಾಜಕುಲ ಕುಟುಂಬ ಎಂದು ಕರೆಯಲ್ಪಡುತ್ತಿದ್ದರು ಎಂದು ಸ್ಮರಿಸಿದರು.
ನೆಹರು ಇಂಗ್ಲೆಂಡಿನ ಕೆಂಬ್ರಿಡ್ಜ್ನಲ್ಲಿ ಎಂ.ಎ ಪದವಿ ಪಡೆದು ಭಾರತ್ ಲಾದಲ್ಲಿ ಲಾ ಪದವಿ ಪಡೆದು ವಕೀಲ ವೃತ್ತಿ ಆರಂಭಿಸುತ್ತಾರೆ. ತದ ನಂತರ ಸ್ವಾತಂತ್ಯ ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಬ್ರಿಟೀಷರ ವಿರುದ್ಧ ಹೋರಾಟ ಮಾಡಿ 1947 ರಲ್ಲಿ ಸ್ವಾತಂತ್ರ್ಯ ಪಡೆದು ತದ ನಂತರ ಪ್ರಧಾನಿಯಾಗಿ ನೇಮಕವಾಗುತ್ತಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕಾರ್ತಿಕೆಯನ್ ಹಾಗೂ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.
ಖಾಸಗಿ ಶಾಲೆಗಳು ಡೊನೇಷನ್ ಪಡೆದರೆ ಶಾಲಾ ಮಾನ್ಯತೆ ರದ್ದು – ಜಿಲ್ಲಾಧಿಕಾರಿ ಅಕ್ರಂ ಪಾಷ ಖಡಕ್ ಎಚ್ಚರಿಕೆ
ಕೋಲಾರ : ಕೋಲಾರ ಜಿಲ್ಲೆಯ ಅನುದಾನ ರಹಿತ ಅಥವಾ ಅನುದಾನಿತ ಖಾಸಗಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿಗಾಗಿ ಯಾವುದೇ ರೀತಿಯ ಡೊನೇಷನ್ ಪಡೆಯುವಂತಿಲ್ಲ ಒಂದು ವೇಳೆ ಕಾನೂನು ಬಾಹಿರವಾಗಿ ದೇಣಿಗೆ ಪಡೆದಿರುವುದು ಕಂಡುಬಂದಲ್ಲಿ ಅಂತಹ ಶಾಲೆಗಳ ನೋಂದಣಿ ರದ್ದು ಮಾಡಿ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಎಚ್ಚರಿಕೆ ನೀಡಿದ್ದಾರೆ.
ಪ್ರಸಕ್ತ ಶೈಕ್ಷಣಿಕ ಸಾಲಿಗೆ ಇಂದಿನಿಂದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ ಕೆಲವು ಶಾಲೆಗಳಲ್ಲಿ ಡೊನೇಷನ್ ಪಡೆಯಲಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರು ಈ ಎಚ್ಚರಿಕೆ ನೀಡಿದ್ದಾರೆ. ನಿಯಮಾವಳಿಗಳನ್ವಯು ಸರ್ಕಾರವು ನಿಗಧಿಪಡಿಸಲಾದ ಶುಲ್ಕಗಳನ್ನು ಮಾತ್ರ ಪಡೆದುಕೊಂಡು ಪ್ರವೇಶಾತಿ ನೀಡಬೇಕು. ಒಂದು ವೇಳೆ ಕಾನೂನು ಬಾಹಿರವಾಗಿ ಡೊನೇಷನ್ ಪಡೆದರೆ ಆರ್.ಟಿ.ಇ ಕಾಯ್ದೆ ಪ್ರಕಾರ ಅಂತಹ ಶಾಲೆಗಳ ನೋಂದಣಿಯನ್ನು ರದ್ದು ಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪಾಲಕರು ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಪ್ರತಿಯೊಂದು ಶಾಲೆಯು ತನ್ನ ಸೂಚನಾ ಫಲಕದಲ್ಲಿ ಪ್ರವೇಶ ಶುಲ್ಕ ಕುರಿತು ಸ್ಪಷ್ಟ ಮಾಹಿತಿಯನ್ನು ಪ್ರದರ್ಶಿಸಬೇಕು. ಶಿಕ್ಷಣ ಹಕ್ಕು ಕಾಯ್ದೆ 2009ರ ಸೆಕ್ಷನ್ (2)ಬಿ ನಂತೆ ಎಲ್ಲಾ ಖಾಸಗಿ ಶಾಲೆಗಳು ತಾವು ಅಧಿಸೂಚಿಸಿರುವ ಶುಲ್ಕವನ್ನು ಶಾಲೆಯ ಅಧಿಕೃತ ಅಂರ್ತಜಾಲತಾಣ, ಶಾಲಾ ನೋಟಿಸ್ ಬೋರ್ಡ್ ಹಾಗೂ ಎಸ್.ಎ.ಟಿ.ಎಸ್. ಇಲಾಖಾ ಅಂರ್ತಜಾಲತಾಣಗಳಲ್ಲಿ ಪೋಷಕರು ಮತ್ತು ಸಾರ್ವಜನಿಕರಿಗೆ ಶುಲ್ಕದ ಬಗ್ಗೆ ಮಾಹಿತಿ ಲಭ್ಯವಾಗುವಂತೆ ಪ್ರಕಟಿಸಬೇಕು. ಇದರಿಂದ ಪಾಲಕರು ಮತ್ತು ಸಾರ್ವಜನಿಕರಿಗೆ ಪ್ರವೇಶ ಶುಲ್ಕದ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ ಮತ್ತು ಪ್ರವೇಶ ಪ್ರಕ್ರಿಯೆ ಕುರಿತ ಗೊಂದಲ ನಿವಾರಣೆಯಾಗುತ್ತದೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಶಾಲೆಯು ಡೊನೇಷನ್ ಕೇಳಿದರೆ ಅಥವಾ ಡೊನೇಷನ್ ಪಡೆದುಕೊಂಡರೆ ಜಿಲ್ಲಾಧಿಕಾರಿಗಳ ಕಛೇರಿ ಅಥವಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ (ಡಿ.ಡಿ.ಪಿ.ಐ) ಕಚೇರಿಗೆ
ಸಾರ್ವಜನಿಕರು ದೂರು ಸಲ್ಲಿಸಬಹುದೆಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದ್ದಾರೆ. ಸಾರ್ವಜನಿಕರ ದೂರು ಆಧರಿಸಿ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆ ಕುರಿತು ಅರಿವು,ತರಬೇತಿ ಪಡೆದರೆ ಸಕಾಲದಲ್ಲಿ ಅಮೂಲ್ಯವಾದ ಜೀವವನ್ನು ಉಳಿಸಲು ಸಹಕಾರಿಯಾಗುತ್ತದೆ : ಡಾ.ರಾಜೇಶ್
ಕೋಲಾರ,ಮೇ.27: ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆ ಕುರಿತು ಅರಿವು ಹಾಗೂ ತರಬೇತಿ ಪಡೆದು ಸಕಾಲದಲ್ಲಿ ತೊಂದರೆಗೊಳಗಾದವರಿಗೆ ನೆರವು ನೀಡಿದಾಗ ಅಮೂಲ್ಯವಾದ ಜೀವವನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ದೇವರಾಜ ಅರಸು ವೈದ್ಯಕೀಯ ಸಂಶೋಧನಾ ಕೇಂದ್ರದ ತುರ್ತು ಚಿಕಿತ್ಸ ವಿಭಾಗದ ಕನ್ಸಲ್ಟೆಂಟ್ ಡಾ.ರಾಜೇಶ್ ಅವರು ತಿಳಿಸಿದರು.
ತುರ್ತು ವೈದ್ಯಕೀಯ ಚಿಕಿತ್ಸಾ ದಿನಾಚರಣೆ ಅಂಗವಾಗಿ ನಗರದ ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ದೇವರಾಜ ಅರಸು ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ, ಇಂದು ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ತುರ್ತು ಆರೋಗ್ಯ ಸಂದರ್ಭಗಳಲ್ಲಿ ಪರಿಹಾರದ ವಿಧಾನಗಳು ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು.
ವಿವಿಧ ರೀತಿಯ ಕಾರಣ ಹಾಗೂ ಪ್ರಜ್ಞೆತಪ್ಪಿದ, ಉಸಿರಾಟದ ತೊಂದರೆಗೆ ಒಳಗಾದ, ಅಪಘಾತ-ಅಘಾತಕ್ಕೆ ಒಳಗಾದ, ವಿಷ ಜಂತುಗಳ ಕಡಿತಕ್ಕೆ ಒಳಗಾದ ವ್ಯಕ್ತಿಗಳನ್ನು ಆಸ್ಪತ್ರೆಗೆ ದಾಖಲಿಸುವ ಮೊದಲು, ಸಂದರ್ಭಾನುಸಾರ ಪರಿಸ್ಥಿತಿಯನ್ನು ಅವಲೋಕಿಸಿ ನೀಡುವ ಪ್ರಥಮ ಚಿಕಿತ್ಸೆಯ ಉಪಚಾರದಿಂದ ವ್ಯಕ್ತಿಯ ಜೀವವನ್ನು ಉಳಿಸಬಹುದು ಎಂದರು.
ದೇವರಾಜ ಅರಸು ವೈದ್ಯಕೀಯ ಸಂಶೋಧನಾ ಕೇಂದ್ರದ ಸಹಾಯಕ ಪ್ರೊ.ಡಾ.ಕೃಷ್ಣಮೂರ್ತಿ ಮಾತನಾಡಿ, ಅಪಘಾತ ಸಂಭವಿಸಿದ ವೇಳೆ ಅವರು ಯಾರೇ ಆಗಿರಲಿ ಅವರನ್ನು ಅಪಾಯದಿಂದ ಪಾರು ಮಾಡುವುದು ಮುಖ್ಯ. ಸುರಕ್ಷಿತವಾಗಿ ಆಸ್ಪತ್ರೆಗೆ ಕೊಂಡೊಯ್ಯಬೇಕು. ಕೈ, ಕಾಲು, ತಲೆ ಯಾವ ಭಾಗಕ್ಕಾದರೂ ಪೆಟ್ಟಾಗಿರಬಹುದು. ಕುತ್ತಿಗೆಯಿಂದ ಶ್ವಾಸಕೋಶಕ್ಕೆ ಸಂಬಂಧ ಕಲ್ಪಿಸಿರುವ ಉಸಿರಾಟದ ನರಬಳ್ಳಿಗೆ ಹೆಚ್ಚು ಒತ್ತಡವಾಗದಂತೆ ನೋಡಿಕೊಳ್ಳಬೇಕು ಎಂದ ಅವರು, ವಿಷಕಾರಿ ಹಾವುಗಳು, ನಾಯಿ, ಕೋತಿ, ಬೆಕ್ಕು, ಜೇನುನೊಣ ಸೇರಿದಂತೆ ಕಡಿತದ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಕೆಲವು ತುರ್ತು ಪರಿಹಾರ ಕ್ರಮಗಳ ಬಗ್ಗೆ ವಿವರಿಸಿದರು.
ಸಂಕಷ್ಟಕ್ಕೆ ಒಳಗಾದ ವ್ಯಕ್ತಿಯ ಬಗ್ಗೆ ಸಮೀಪದ ಆಸ್ಪತ್ರೆಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ನ್ ನ್ನು ಕರೆಸಿಕೊಳ್ಳಬೇಕು ಅದು ಬರುವವರೆಗೂ ಇಲ್ಲವೆ ಆಸ್ಪತ್ರೆಗೆ ನಾವೇ ಸಾಗಿಸುವವರೆಗೂ ನೀಡುವ ಪ್ರಾಥಮಿಕ ಚಿಕಿತ್ಸೆ ನೀಡಬೇಕು, ಆಸ್ಪತ್ರೆಗೆ ಸಾಗಿಸಿದ ನಂತರ ಯಾವ ಸಮಯದಲ್ಲಿ ಯಾವ ರೀತಿ ಯಾವ ಕಾರಣದಿಂದ ಆಗಿದೆ ಎಂದು ವೈದ್ಯರಿಗೆ ನಿಖರ ಮಾಹಿತಿ ಹಾಗೂ ಸಾಂದರ್ಭಿಕ ಆಧಾರಗಳನ್ನು ನೀಡಿದ್ದಲ್ಲಿ ವೈದ್ಯರು ಮುಂದಿನ ವೈದ್ಯಕೀಯ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಅಪಘಾತವಾದಾಗ ಮೊದಲ ಒಂದು ಗಂಟೆ ಅತ್ಯಮೂಲ್ಯವಾದುದು. ಅದನ್ನು ಸರಿಯಾಗಿ ಬಳಸಿಕೊಂಡರೆ ಜೀವ ಉಳಿಸಬಹುದು. ಈ ವಿಷಯವನ್ನು ಎಲ್ಲರೂ ತಿಳಿದುಕೊಂಡಿರಬೇಕು. ಯಾವುದೇ ಅನಾಹುತ ಸಂಭವಿಸಿದಾಗ ಜನರು ಗಾಬರಿಯಾಗದೇ ಜೀವವನ್ನು ರಕ್ಷಿಸುವ ಸರಳ ವಿಧಾನಗಳನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಾಗಾರದಲ್ಲಿ ಸೀನಿಯರ್ ರೆಸಿಡೆಂಟ್ಗಳಾದ ಡಾ.ಚಂದ್ರಕೀರ್ತಿ, ಡಾ.ಈಶ್ವರ್ ಪ್ರಥಮ ಚಿಕಿತ್ಸೆಯ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದರು.
ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಾಗಾರದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ರಾಜ್ಯ ಸಂಘದ ಖಜಾಂಚಿ ಎಂ.ವಾಸುದೇವಹೊಳ್ಳ ಸೇರಿದಂತೆ ಅನೇಕ ಪತ್ರಕರ್ತರು ಹಾಜರಿದ್ದರು.
NCYM OF NAGALAND UNIVERSITY LUMAMI, BIDS FAREWELL TO SENIORS
Report by Fr Stephen Dsouza, Capuchin
The Catholic youth of Nagaland University bid farewell to Seniors on Sunday 26th May 2024, who were doing their studies in different departments. Fr Stephen Dsouza Parish Priest of St Clare Church, Akuluto presided over the solemn Eucharist on the feast of day of Holy Trinity. In the introduction he thanked all the seniors for their lively participation in liturgy for the past two years always willing to do anything to make the liturgy meaningful.
Fr James Furtado Asst Parish Priest of St Clare Church Akuluto beautifully preached homily on the mystery of holy Trinity. “He said as Trinity is united, we also need to work in unity to work wonders and bring glory to God.” A felicitation programme was held on the occasion of farewell, during which as a token of love and appreciation seniors were honored with gifts by the juniors. The Programme was concluded with the Fellowship meal prepared by the juniors.
YoutubeLink :https://youtu.be/b6Z1Q1bkHnU
ನಾಗಾಲ್ಯಾಂಡ್ ವಿಶ್ವವಿದ್ಯಾಲಯ ಲುಮಾಮಿ NCYM ಇದರ , ಹಿರಿಯರಿಗೆ ಬೀಳ್ಕೊಡುಗೆ
ನಾಗಾಲ್ಯಾಂಡ್ ವಿಶ್ವವಿದ್ಯಾನಿಲಯದ ಕ್ಯಾಥೋಲಿಕ್ ಯುವಕರು 26 ಮೇ 2024 ರಂದು ಭಾನುವಾರ ವಿವಿಧ ವಿಭಾಗಗಳಲ್ಲಿ ತಮ್ಮ ಅಧ್ಯಯನವನ್ನು ಮಾಡುತ್ತಿರುವ ಹಿರಿಯರಿಗೆ ಬೀಳ್ಕೊಟ್ಟರು. ಅಕುಲುಟೊದ ಸೇಂಟ್ ಕ್ಲೇರ್ ಚರ್ಚ್ನ ಫಾದರ್ ಸ್ಟೀಫನ್ ಡಿಸೋಜಾ ಪ್ಯಾರಿಷ್ ಪಾದ್ರಿ ಹೋಲಿ ಟ್ರಿನಿಟಿಯ ದಿನದಂದು ಗಂಭೀರವಾದ ಯೂಕರಿಸ್ಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಅವರು ಕಳೆದ ಎರಡು ವರ್ಷಗಳಿಂದ ಧರ್ಮಾಚರಣೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದಕ್ಕಾಗಿ ಎಲ್ಲಾ ಹಿರಿಯ ಯುವಕರ ಧನ್ಯವಾದಗಳನ್ನು ಅರ್ಪಿಸಿದರು, ಧರ್ಮಾಚರಣೆಯನ್ನು ಅರ್ಥಪೂರ್ಣಗೊಳಿಸಲು ಯಾವಾಗಲೂ ಏನು ಮಾಡಲು ಸಿದ್ಧರಿದ್ದಾರೆ.
ಸೇಂಟ್ ಕ್ಲೇರ್ ಚರ್ಚ್ ಅಕುಲುಟೊದ ಫಾದರ್ ಜೇಮ್ಸ್ ಫುರ್ಟಾಡೊ ಸಹಾಯಕ ಪ್ಯಾರಿಷ್ ಪವಿತ್ರ ಟ್ರಿನಿಟಿಯ ರಹಸ್ಯವನ್ನು ಸುಂದರವಾಗಿ ಬೋಧಿಸಿದರು. “ಟ್ರಿನಿಟಿಯು ಐಕ್ಯವಾಗಿರುವಂತೆಯೇ, ನಾವು ಅದ್ಭುತಗಳನ್ನು ಮಾಡಲು ಮತ್ತು ದೇವರಿಗೆ ಮಹಿಮೆಯನ್ನು ತರಲು ಐಕ್ಯತೆಯಿಂದ ಕೆಲಸ ಮಾಡಬೇಕಾಗಿದೆ” ಎಂದು ಅವರು ಹೇಳಿದರು. ಬೀಳ್ಕೊಡುಗೆಯ ಸಂದರ್ಭದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಕಿರಿಯರಿಂದ ಹಿರಿಯರಿಗೆ ಪ್ರೀತಿ ಮತ್ತು ಮೆಚ್ಚುಗೆಯ ಸಂಕೇತವಾಗಿ ಉಡುಗೊರೆಗಳನ್ನು ನೀಡಿ ಗೌರವಿಸಲಾಯಿತು. ಕಿರಿಯರು ತಯಾರಿಸಿದ ಫೆಲೋಶಿಪ್ ಊಟದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.