ಕೆಜಿಎಫ್., ಮೇ.29 : ಕೆಜಿಎಫ್ ಪೊಲೀಸ್ ಜಿಲ್ಲೆಯ ರಾಬರ್ಟ್ಸನ್ಪೇಟೆ ಪೊಲೀಸ್ ಠಾಣೆಯ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ರೂ. 5,00,000/- ಮೌಲ್ಯದ 6 ಕೆಜಿ 340 ಗ್ರಾಂ ಒಣ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಮೇ.29 ರಂದು ಬೆಳಿಗ್ಗೆ ರಾಬರ್ಟ್ಸನ್ನ್ಪೇಟೆ ಪೊಲೀಸ್ ಠಾಣಾ ಸರಹದ್ದು, ಪಾರಾಂಡಹಳ್ಳಿಯ ಹೊರವಲಯದ ಕ್ಯಾಸಂಬಳ್ಳಿ ರಸ್ತೆಯ ಬದಿಯಲ್ಲಿ ದ್ವಿಚಕ್ರವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ರಾಬರ್ಟ್ಸನ್ಪೇಟೆ ಪೊಲೀಸ್ ಸಬ್ಇನ್ಸ್ಪೆಕ್ಟರ್ ಯತೀಶ ಮತ್ತು ಸಿಬ್ಬಂದಿಗಳು ಕೂಡಲೆ ದಾಳಿ ನಡೆಸಿ, ಆಂದ್ರಪ್ರದೇಶ ಕುಪ್ಪಂ ತಾಲ್ಲೂಕಿನ ಅನಿಗಾನೂರು ಗ್ರಾಮದ ವಾಸಿ ವೆಂಕಟಾಚಲಪತಿ, ವಿಜಿಲಾಪುರ ಗ್ರಾಮದ ಹಂಸಗಿರಿ ಮತ್ತು ಕೆಂಚನಬಲ್ಲ ಗ್ರಾಮದ ನಿಖಿಲ್ ಎಂಬುವವರನ್ನು ಬಂಧಿಸಿ, ಅವರುಗಳಿಂದ ಸುಮಾರು ರೂ. 5,00,000/- ಮೌಲ್ಯದ 6 ಕೆಜಿ 340 ಗ್ರಾಂ ಒಣ ಗಾಂಜಾವನ್ನು ಮತ್ತು ಕೃತ್ಯಕ್ಕೆ ಬಳಸಿದ ಸುಮಾರು ರೂ. 1,00,000/- ಮೌಲ್ಯದ ದ್ವಿಚಕ್ರವಾಹನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಆರೋಪಿಗಳನ್ನು ಬಂಧಿಸಿ, ಗಾಂಜಾ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಪಿ.ಎಸ್.ಐ ಯತೀಶ ಸಿಬ್ಬಂದಿಗಳಾದ ಗೋಪಿನಾಥ್, ಮಂಜುನಾಥರೆಡ್ಡಿ, ಬಸವರಾಜ್ ಕಾಂಬ್ಳೆ, ರಘು, ಮುರಳಿ ಮತ್ತು ಚಾಲಕ ಮನೋಹರ್ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು, ತಂಡವನ್ನು ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಶಿಸಿದ್ದಾರೆ.
Day: May 31, 2024
FOOD SAFETY AWARENESS PROGRAMME IN ST CLARE SCHOOL, AKULUTO / ಅಕುಲುಟೊದ ಸೇಂಟ್ ಕ್ಲೇರ್ ಶಾಲೆಯಲ್ಲಿ ಆಹಾರ ಸುರಕ್ಷತೆ ಜಾಗೃತಿ ಕಾರ್ಯಕ್ರಮ
Report by Fr Stephen Dsouza, Capuchin
AKULUTO: St Clare had the opportunity to have Food safety Awareness programme on Monday, 27th May 2024 conducted by Food safety wing Mokokchung Zone belonging to food safety and standard authority of India. The resource persons for the presentations were MsSauvik Das and Mr Vinod Patel of FSSAI empanelled Agency, MerenlenlaAo Designated Officer of Food Safety and SukumloYangthan, Food Safety Officer of Mokokchung Zone. In their address to the students they said that access to enough safe and nutritious food is key to sustaining life and promoting good health. Unsafe food containing harmful bacteria, viruses, parasites or chemical substances can cause more than 200 different diseases, ranging from diarrhoea to cancers. Food safety awareness plays a crucial role in safeguarding public health and preventing foodborne illnesses. It involves educating individuals and communities about the proper handling, preparation, and storage of food to avoid contamination and the spread of harmful bacteria and pathogens. By raising awareness about food safety, people become more conscious of potential risks associated with consuming unsafe food.
Basic food safety practices, such as washing hands before handling food, cooking meat thoroughly, avoiding cross-contamination between raw and cooked foods, and refrigerating perishables promptly, are essential to prevent foodborne diseases. Additionally, being aware of expiration dates and inspecting the quality of food products before consumption can further reduce health risks.
Food safety awareness extends beyond individual responsibility to encompass the food industry, where regular inspections, adherence to hygiene standards, and proper labeling contribute to consumer protection. Public health campaigns, educational programs, and information dissemination through various channels, including media and online resources, play a vital role in promoting food safety awareness among the general public.
Youtube Link: https://youtube.com/shorts/mZ8-dS7497M
ಅಕುಲುಟೊದ ಸೇಂಟ್ ಕ್ಲೇರ್ ಶಾಲೆಯಲ್ಲಿ ಆಹಾರ ಸುರಕ್ಷತೆ ಜಾಗೃತಿ ಕಾರ್ಯಕ್ರಮ
ಅಕುಲುಟೊ: ಸೇಂಟ್ ಕ್ಲೇರ್ ಅವರು ಆಹಾರ ಸುರಕ್ಷತೆ ಮತ್ತು ಭಾರತದ ಪ್ರಮಾಣಿತ ಪ್ರಾಧಿಕಾರಕ್ಕೆ ಸೇರಿದ ಆಹಾರ ಸುರಕ್ಷತಾ ವಿಭಾಗ ಮೊಕೊಕ್ಚುಂಗ್ ವಲಯದಿಂದ 27 ಮೇ 2024 ರಂದು ಸೋಮವಾರ ಆಹಾರ ಸುರಕ್ಷತೆ ಜಾಗೃತಿ ಕಾರ್ಯಕ್ರಮವನ್ನು ಹೊಂದಲು ಅವಕಾಶವನ್ನು ಪಡೆದರು. ಪ್ರಸ್ತುತಿಗಳ ಸಂಪನ್ಮೂಲ ವ್ಯಕ್ತಿಗಳು Ms Sauvik ದಾಸ್ ಮತ್ತು FSSAI ಎಂಪನೆಲ್ಡ್ ಏಜೆನ್ಸಿಯ ಶ್ರೀ ವಿನೋದ್ ಪಟೇಲ್, ಆಹಾರ ಸುರಕ್ಷತೆಯ ನಿಯೋಜಿತ ಅಧಿಕಾರಿ MerenlenlaAo ಮತ್ತು ಮೊಕೊಕ್ಚುಂಗ್ ವಲಯದ ಆಹಾರ ಸುರಕ್ಷತಾ ಅಧಿಕಾರಿ ಸುಕುಮ್ಲೋಯಾಂಗ್ಥಾನ್. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾಕಷ್ಟು ಸುರಕ್ಷಿತ ಮತ್ತು ಪೌಷ್ಟಿಕ ಆಹಾರದ ಪ್ರವೇಶವು ಜೀವನವನ್ನು ಉಳಿಸಿಕೊಳ್ಳಲು ಮತ್ತು ಉತ್ತಮ ಆರೋಗ್ಯವನ್ನು ಉತ್ತೇಜಿಸಲು ಪ್ರಮುಖವಾಗಿದೆ ಎಂದು ಹೇಳಿದರು. ಹಾನಿಕಾರಕ ಬ್ಯಾಕ್ಟೀರಿಯಾ, ವೈರಸ್ಗಳು, ಪರಾವಲಂಬಿಗಳು ಅಥವಾ ರಾಸಾಯನಿಕ ಪದಾರ್ಥಗಳನ್ನು ಒಳಗೊಂಡಿರುವ ಅಸುರಕ್ಷಿತ ಆಹಾರವು ಅತಿಸಾರದಿಂದ ಹಿಡಿದು ಕ್ಯಾನ್ಸರ್ಗಳವರೆಗೆ 200 ಕ್ಕೂ ಹೆಚ್ಚು ವಿವಿಧ ಕಾಯಿಲೆಗಳಿಗೆ ಕಾರಣವಾಗಬಹುದು. ಆಹಾರ ಸುರಕ್ಷತೆ ಜಾಗೃತಿಯು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಮತ್ತು ಆಹಾರದಿಂದ ಹರಡುವ ರೋಗಗಳನ್ನು ತಡೆಗಟ್ಟುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮಾಲಿನ್ಯ ಮತ್ತು ಹಾನಿಕಾರಕ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳ ಹರಡುವಿಕೆಯನ್ನು ತಪ್ಪಿಸಲು ಆಹಾರದ ಸರಿಯಾದ ನಿರ್ವಹಣೆ, ತಯಾರಿಕೆ ಮತ್ತು ಸಂಗ್ರಹಣೆಯ ಬಗ್ಗೆ ವ್ಯಕ್ತಿಗಳು ಮತ್ತು ಸಮುದಾಯಗಳಿಗೆ ಶಿಕ್ಷಣ ನೀಡುವುದನ್ನು ಇದು ಒಳಗೊಂಡಿರುತ್ತದೆ. ಆಹಾರ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಮೂಲಕ, ಅಸುರಕ್ಷಿತ ಆಹಾರವನ್ನು ಸೇವಿಸುವುದರೊಂದಿಗೆ ಸಂಭವನೀಯ ಅಪಾಯಗಳ ಬಗ್ಗೆ ಜನರು ಹೆಚ್ಚು ಜಾಗೃತರಾಗುತ್ತಾರೆ.
ಆಹಾರದಿಂದ ಹರಡುವ ರೋಗಗಳನ್ನು ತಡೆಗಟ್ಟಲು, ಆಹಾರವನ್ನು ನಿರ್ವಹಿಸುವ ಮೊದಲು ಕೈಗಳನ್ನು ತೊಳೆಯುವುದು, ಮಾಂಸವನ್ನು ಸಂಪೂರ್ಣವಾಗಿ ಬೇಯಿಸುವುದು, ಕಚ್ಚಾ ಮತ್ತು ಬೇಯಿಸಿದ ಆಹಾರಗಳ ನಡುವಿನ ಅಡ್ಡ-ಮಾಲಿನ್ಯವನ್ನು ತಪ್ಪಿಸುವುದು ಮತ್ತು ಬೇಗನೆ ಶೈತ್ಯೀಕರಣದಂತಹ ಮೂಲಭೂತ ಆಹಾರ ಸುರಕ್ಷತಾ ಅಭ್ಯಾಸಗಳು ಅವಶ್ಯಕ. ಹೆಚ್ಚುವರಿಯಾಗಿ, ಮುಕ್ತಾಯ ದಿನಾಂಕಗಳ ಬಗ್ಗೆ ತಿಳಿದಿರುವುದು ಮತ್ತು ಸೇವಿಸುವ ಮೊದಲು ಆಹಾರ ಉತ್ಪನ್ನಗಳ ಗುಣಮಟ್ಟವನ್ನು ಪರಿಶೀಲಿಸುವುದು ಆರೋಗ್ಯದ ಅಪಾಯಗಳನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
ಆಹಾರ ಸುರಕ್ಷತಾ ಜಾಗೃತಿಯು ಆಹಾರ ಉದ್ಯಮವನ್ನು ಒಳಗೊಳ್ಳಲು ವೈಯಕ್ತಿಕ ಜವಾಬ್ದಾರಿಯನ್ನು ಮೀರಿ ವಿಸ್ತರಿಸುತ್ತದೆ, ಅಲ್ಲಿ ನಿಯಮಿತ ತಪಾಸಣೆ, ನೈರ್ಮಲ್ಯ ಮಾನದಂಡಗಳ ಅನುಸರಣೆ ಮತ್ತು ಸರಿಯಾದ ಲೇಬಲಿಂಗ್ ಗ್ರಾಹಕರ ರಕ್ಷಣೆಗೆ ಕೊಡುಗೆ ನೀಡುತ್ತದೆ. ಸಾರ್ವಜನಿಕ ಆರೋಗ್ಯ ಅಭಿಯಾನಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ಮಾಧ್ಯಮಗಳು ಮತ್ತು ಆನ್ಲೈನ್ ಸಂಪನ್ಮೂಲಗಳು ಸೇರಿದಂತೆ ವಿವಿಧ ಚಾನಲ್ಗಳ ಮೂಲಕ ಮಾಹಿತಿ ಪ್ರಸರಣವು ಸಾರ್ವಜನಿಕರಲ್ಲಿ ಆಹಾರ ಸುರಕ್ಷತೆಯ ಜಾಗೃತಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ಯುಟ್ಯೂಬ್ ಲಿಂಕ್: https://youtube.com/shorts/mZ8-dS7497M
ಒಪಿಎಸ್, 7 ನೇ ವೇತನ ಆಯೋಗಜಾರಿಗೆ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ರ ಗೆಲ್ಲಿಸಿ – 2 ವರ್ಷ ಸಿಎಸ್ಆರ್ ನಿಧಿ ಶಾಲೆಗಳ ಅಭಿವೃದ್ದಿಗೆ ಬಳಕೆ- ಕೊತ್ತೂರು ಮಂಜುನಾಥ್
ಕೋಲಾರ:- ಜಿಲ್ಲಾಧ್ಯಂತ ಇರುವ ಕೈಗಾರಿಕೆಗಳ ಸಿಎಸ್ಆರ್ ನಿಧಿಯನ್ನು ಎರಡು ವರ್ಷಗಳ ಕಾಲ ಶಾಲೆಗಳ ಸಮಗ್ರ ಅಭಿವೃದ್ದಿಗೆ ಬಳಸಲು ನಿರ್ಧರಿಸಿದ್ದೇವೆ, ಇದರ ಜತೆಗೆ ಒಪಿಎಸ್ ಹಾಗೂ 7ನೇ ವೇತನ ಆಯೋಗ ಜಾರಿಗಾಗಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ರನ್ನು ಗೆಲ್ಲಿಸುವಂತೆ ಶಾಸಕ ಕೊತ್ತೂರು ಮಂಜುನಾಥ್ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಶಾಲೆಯಲ್ಲಿ ಡಿಟಿ ಶ್ರೀನಿವಾಸ್ ಪರ ಶಿಕ್ಷಕರ ಮತಯಾಚಿಸಿದ ಅವರು, ಸಿಎಸ್ಆರ್ ನಿಧಿಯನ್ನು ಶಾಲೆಗಳಲ್ಲಿ ಶೌಚಾಲಯ, ಕಟ್ಟಡ ದುರಸ್ಥಿ, ಹೊಸ ಕಟ್ಟಡಗಳ ನಿರ್ಮಾಣ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಲು ಬಳಸಲು ಸೂಚಿಸಲಾಗಿದೆ ಎಂದರು.
ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಬದ್ದವಾಗಿದೆ, 7ನೇ ವೇತನ ಆಯೋಗದ ವರದಿಯೂ ಸರ್ಕಾರದ ಕೈಸೇರಿದ್ದು ಅದೂ ಜಾರಿಯಾಗಲಿದೆ ಎಂದ ಅವರು, ಈ ಕುರಿತು ಚುನಾವಣಾ ನೀತಿ ಸಂಹಿತೆ ಇರುವುದರಿಂದ ಅಧಿಕೃತವಾಗಿ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ ಎಂದರು.
ದೇಶವು ಅಭಿವೃದ್ಧಿಯಾಗಲು ಶಿಕ್ಷಣ, ಆರೋಗ್ಯ ಮತ್ತು ರೈತರಿಗೆ ಮೊದಲ ಅಧ್ಯತೆ ನೀಡಬೇಕಾಗಿದೆ ಕಾಂಗ್ರೆಸ್ ಪಕ್ಷವು ಸಾಮಾನ್ಯ ಜನರ ಅಭಿವೃದ್ಧಿಯ ದೃಷ್ಟಿಯಿಂದ ಬಹಳಷ್ಟು ಕೊಡುಗೆಗಳನ್ನು ನೀಡಿದೆ ಎಂದರು.
ಸಿದ್ದರಾಮಯ್ಯನವರು ಯಾವುದೇ ಧರ್ಮ, ಜಾತಿಗೆ ಸೀಮಿತವಾಗದೆ ಎಲ್ಲಾ ವರ್ಗದ ಜನರಿಗೂ ಯೋಜನೆಗಳನ್ನು ರೂಪಿಸಿದ್ದಾರೆ. ಹೀಗಾಗಿ ಡಿ.ಟಿ ಶ್ರೀನಿವಾಸ್ ಅವರನ್ನು ಗೆಲ್ಲಿಸಿ ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಅವರ ಕೈ ಬಲಪಡಿಸಬೇಕು, ಶಿಕ್ಷಕರ ಸಮಸ್ಯೆಗಳಿಗೆ ಸದನದಲ್ಲಿ ಡಿಟಿ ಶ್ರೀನಿವಾಸ್ ಧ್ವನಿಯಾಗಲಿದ್ದಾರೆ ಅವರು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದು, ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ ಎಂದರು.
ತಿರಸ್ಕøತ ಮತಗಳಿಗೆ ಅವಕಾಶ ನೀಡದಿರಿ
ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಶಿಕ್ಷಕರ ಕ್ಷೇತ್ರದ ಕಳೆದ ಚುನಾವಣೆಯಲ್ಲಿ 6 ಸಾವಿರ ಮತಗಳು ತಿರಸ್ಕøತಗೊಂಡಿದ್ದವು, ಈ ಬಾರಿ ಎಚ್ಚರಿಕೆಯಿಂದ ಮತದಾನ ಮಾಡಲು ಮನವಿ ಮಾಡಿದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಿ.ಟಿ ಶ್ರೀನಿವಾಸ್ ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಬಲ್ಲವರಾಗಿದ್ದಾರೆ. ಸಮಸ್ಯೆಗಳನ್ನು ಹೇಗೆ ಪರಿಹಾರ ಮಾಡಬೇಕು ಎಂಬುದು ಅವರಿಗೆ ತಿಳಿದಿದೆ ಇಂತಹವರು ವಿಧಾನಪರಿಷತ್ಗೆ ಆಯ್ಕೆಯಾಗಿ ಬಂದರೆ, ಶಿಕ್ಷಣ ಕ್ಷೇತ್ರದ ಜಲ್ವಂತ ಸಮಸ್ಯೆಗಳನ್ನು ಪರಿಹಾರ ಸಾಧ್ಯ ಎಂದರು.
ಕ್ಷೇತ್ರದಲ್ಲಿ ಸುಮಾರು 18 ವರ್ಷಗಳಿಂದ ಆಯ್ಕೆಯಾಗಿದ್ದವರು ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಲಿಲ್ಲ ಹಾಗಾಗಿ ಶಿಕ್ಷಣದ ಗುಣಮಟ್ಟ ಕುಸಿದಿದೆ. ಶಿಕ್ಷಣವನ್ನು ಅಧೋಗತಿಗೆ ತಂದು ತರಿಸಿದ್ದಾರೆ ಎಂದರು.
ಐದು ಜಿಲ್ಲೆಗಳ 33 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡ ಈ ಆಗ್ನೇಯ ಶಿಕ್ಷಕರ ಕ್ಷೇತ್ರದಲ್ಲಿ ಸುಮಾರು 24 ಸಾವಿರದಷ್ಟು ಶಿಕ್ಷಕರು ಇದ್ದು ಸರಕಾರ ಇದ್ದ ಪಕ್ಷಕ್ಕೆ ಬೆಂಬಲಿಸಿದರೆ ನಿಮ್ಮ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತದೆ ಎಂದರು.
ಸರ್ಕಾರಿ ನೌಕರರ ಹಳೇ ಪಿಂಚಣಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದು, ಈಗಾಗಲೇ ಹಳೆ ಪಿಂಚಣಿ ಯೋಜನೆ ಜಾರಿಯಲ್ಲಿರುವ ರಾಜ್ಯಗಳಿಗೆ ತೆರಳಿ ಅಧ್ಯಯನ ಮಾಡಿ ವರದಿ ಕೊಡಲು ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಅಲ್ಲದೇ 7ನೇ ವೇತನ ಜಾರಿಗೂ ಮುಂದಾಗಿದೆ ಎಂದರು.
ಕಾಂಗ್ರೆಸ್ ನೇತೃತ್ವದ ಸರಕಾರವು ಬೌಧ್ಧಿಕವಾಗಿ ಮಕ್ಕಳು ಬೆಳೆಯಬೇಕು ಎಂಬ ಆಶಯದೊಂದಿಗೆ ಖಾಲಿ ಶಿಕ್ಷಕರ ಹುದ್ದೆಗಳನ್ನು ತುಂಬಲು ಮುಂದಾಗಿದೆ.ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಸರಕಾರದ ಪರವಾಗಿ ಇದ್ದವರನ್ನು ಆಯ್ಕೆ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಮತ್ತು ಬದಲಾವಣೆ ತರಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನರಸಾಪುರ ಎಸ್ಎಫ್ಸಿಎಸ್ ಅಧ್ಯಕ್ಷ ಮುನಿರಾಜು, ಗ್ರಾ.ಪಂ ಮಾಜಿ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ಮುಖಂಡರಾದ ಗ್ರಾ.ಪಂ ಮಾಜಿ ಸದಸ್ಯ ಎ.ಶ್ರೀಧರ್, ಮಾಜಿ ಉಪಾಧ್ಯಕ್ಷ ವೈ.ಮುನಿಯಪ್ಪ, ಮುಖಂಡರಾದ ಗಜೇಂದ್ರ, ನಿವೃತ್ತ ಮುಖ್ಯ ಶಿಕ್ಷಕ ದಾಸಪ್ಪ, ಮುಖಂಡರಾದ ರವೀಂದ್ರನಾಥ್, ಜರಾಲ್ಡ್, ಶಾಲೆಯ ಮುಖ್ಯಶಿಕ್ಷಕಿ ತಾಹೇರಾ ನುಸ್ರತ್, ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ,ಲೀಲಾ,ಸುಗುಣಾ, ಫರೀದಾ, ಚಂದ್ರಶೇಖರ್ ಮತ್ತಿತರರಿದ್ದರು.
ಶೈಕ್ಷಣಿಕ ಬಲವರ್ಧನೆ, ಶಿಕ್ಷಕರ ಸಮಸ್ಯೆಗಳ ನಿವಾರಣೆಗೆ ಸದಾ ದುಡಿಯುತ್ತಿರುವ ಮೈತ್ರಿ ಅಭ್ಯರ್ಥಿ ಡಾ.ವೈಎ.ನಾರಾಯಣಸ್ವಾಮಿರನ್ನು ಬೆಂಬಲಿಸಿ-ಸಿಎಂಆರ್.ಶ್ರೀನಾಥ್
ಕೋಲಾರ:- ಸತತ 18 ವರ್ಷಗಳ ಶಿಕ್ಷಕರ ಸಮಸ್ಯೆಗಳಿಗೆ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತಾ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಕಾರಣರಾಗಿರುವ ಹಸನ್ಮುಖಿ ಶಿಕ್ಷಕರ ಸ್ನೇಹಿ ನಾಯಕರೆಂದೇ ಗುರುತಿಸಿಕೊಂಡಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಅವರನ್ನು ಶಿಕ್ಷಕರು ಬೆಂಬಲಿಸಬೇಕು ಜೆಡಿಎಸ್ ಮುಖಂಡ ಸಿಎಂಆರ್.ಶ್ರೀನಾಥ್ ಮನವಿ ಮಾಡಿದರು.
ಗುರುವಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ವೈ.ಎ.ನಾರಾಯಣಸ್ವಾಮಿ ಪರ ಮತಯಾಚಿಸಿದ ಅವರು, ಶಿಕ್ಷಣ ಮತ್ತು ಶಿಕ್ಷಕರ ಬಗ್ಗೆ ಕಾಳಜಿ ಹೊಂದಿರುವ ವ್ಯಕ್ತಿ ಸದನದಲ್ಲಿ ಇರಬೇಕು ಎಂದರು.
ಶಿಕ್ಷಕರ ಸಮಸ್ಯೆಗಳಿಗೆ ಸದಾ ಸ್ಪಂದನೆ, ವೇತನ ತಾರತಮ್ಯ,ಬಡ್ತಿ ಸಂಬಂಧ ಇದ್ದ ಸಮಸ್ಯೆಗಳು, ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿ,ಅನುದಾನಿತ ಶಾಲೆಗಳ ಶಿಕ್ಷಕರ ಸಮಸ್ಯೆಗಳ ನಿವಾರಣೆ ಮತ್ತಿತರ ಅಂಶಗಳ ಕುರಿತು ಪಕ್ಷಬೇಧ ಮರೆತು ಸದನದ ಹೊರಗೂ,ಒಳಗೂ ಕೆಲಸ ಮಾಡಿರುವ ವೈಎಎನ್ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಜೆಡಿಎಸ್,ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ನೀಡಿರುವ ಆಡಳಿತವನ್ನು ಜನತೆ ಇಂದಿಗೂ ಮರೆತಿಲ್ಲ, ಶಿಕ್ಷಕರ ಹುದ್ದೆಗಳ ಭರ್ತಿ, ರಾಜ್ಯಾದ್ಯಂತ ಸರ್ಕಾರಿ ಪ್ರೌಢಶಾಲೆಗಳು, ಜೂನಿಯರ್ ಕಾಲೇಜುಗಳನ್ನು ಮಂಜೂರು ಮಾಡುವ ಮೂಲಕ ಹೊಸ ಆಯಾಮ ಸೃಷ್ಟಿಸಿದ್ದನ್ನು ಸ್ಮರಿಸಿದ ಅವರು, ಶೈಕ್ಷಣಿಕ ಅಭಿವೃದ್ದಿಗೆ ಒತ್ತು ನೀಡುವ ಮನಸ್ಥಿತಿ ಬಿಜೆಪಿ,ಜೆಡಿಎಸ್ಗಿದೆ ಎಂದರು.
ರವಿಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮುಂರಾಂಡಹಳ್ಳಿ ಡಾ.ಗೋಪಾಲಪ್ಪ ಮಾತನಾಡಿ, ರಾಜ್ಯದಲ್ಲಿ ಸಂಕಷ್ಟದಲ್ಲಿದ್ದ ಅಥಿತಿ ಉಪನ್ಯಾಸಕರ ಖಾಯಂ, ಜೆಒಸಿಯ 3 ಸಾವಿರ ಶಿಕ್ಷಕರನ್ನು ಖಾಯಂ ಮಾಡಿ ಅವರ ಬದುಕಿಗೆ ಭದ್ರತೆ ನೀಡಿದ್ದು, ಕುಮಾರಸ್ವಾಮಿ, ಯಡಿಯೂರಪ್ಪ ನೇತೃತ್ವದ ಸರ್ಕಾರ ಎಂದ ಅವರು, ಈ ಸಂದರ್ಭದಲ್ಲಿ ಶಿಕ್ಷಕರ ಧ್ವನಿಯಾಗಿ ವೈಎಎನ್ ಕೆಲಸ ಮಾಡಿದ್ದಾರೆ, ಅವರ ಮರು ಆಯ್ಕೆಯ ಮೂಲಕ ಸದನದಲ್ಲಿ ಶಿಕ್ಷಕರ ಸಮಸ್ಯೆಗಳ ವಿರುದ್ದ ಧ್ವನಿ ಮತ್ತಷ್ಟು ಗಟ್ಟಿಗೊಳ್ಳಲಿದೆ ಎಂದರು.
ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಮುಖಭಂಗವಾಗುವ ರೀತಿಯಲ್ಲಿ ಫಲಿತಾಂಶ ಬರಬೇಕು, ಶಿಕ್ಷಕರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಅದು ವೈ.ಎ.ನಾರಾಯಣಸ್ವಾಮಿ ಅವರಿಗೆ ಮಾತ್ರ, ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ವೈಎಎನ್ ಮಾಡುತ್ತಾರೆ ಎಂದು ತಿಳಿಸಿದರು.
ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಮಾತನಾಡಿ, ರಾಜ್ಯದಲ್ಲಿನ ಸರ್ಕಾರ ಸರ್ಕಾರಿ ಶಾಲೆಗಳನ್ನು ನಾಶ ಮಾಡುವ ಸಂಚು ಸದ್ದಿಲ್ಲದೇ ನಡೆಸುತ್ತಿದ್ದಾರೆ, ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರ ಹುದ್ದೆಗಳು ಸಾಕಷ್ಟು ಖಾಲಿ ಇವೆ. 60ಸಾವಿರ ಶಿಕ್ಷಕರ ಹುದ್ದೆ ಖಾಲಿ ಇರುವ ಕುರಿತ ವರದಿ ಆತಂಕಕಾರಿ ಎಂದ ಅವರು, ಇದು ಸರ್ಕಾರಿ ಶಾಲೆಗಳನ್ನು ಮುಗಿಸುವ ಹುನ್ನಾರ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದಾಗಿ ವೈಎಎನ್ ಗೆಲುವು ಮತ್ತಷ್ಟು ಸುಲಭವಾಗಲಿದೆ, ಸತತ 18 ವರ್ಷಗಳ ಕಾಲ ಶಿಕ್ಷಕರೊಂದಿಗೆ ಕೆಲಸ ಮಾಡಿರುವ ಅವರ ಕುರಿತು ನಮಗಿಂತ ಶಿಕ್ಷಕರಿಗೆ ಹೆಚ್ಚು ಗೊತ್ತಿದೆ, ಸಮಸ್ಯೆ ಹೊತ್ತು ಬರುವ ಶಿಕ್ಷಕರ ಕುರಿತು ಅವರಿಗಿರುವ ಕಾಳಜಿ ಅವರು ತೋರುವ ಪ್ರೀತಿ ಯಾರಿಂದಲೂ ಸಾಧ್ಯವಿಲ್ಲ ಎಂದರು.
ಈ ಸಂದರ್ಭದಲ್ಲಿ ಬಿಜೆಪಿಯ ಮಮತಮ್ಮ, ಮುಖಂಡರಾದ ಅಶೋಕ್, ಕಾರ್ತಿಕ್, ಪ್ರವೀಣ್, ಮಂಜುನಾಥ್, ಮುಖ್ಯಶಿಕ್ಷಕಿ ತಾಹೇರಾ ನುಸ್ರತ್, ಶಿಕ್ಷಕರಾದ ಸಿದ್ದೇಶ್ವರಿ, ಎಂ.ಆರ್.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಶ್ವೇತಾ,ಲೀಲಾ,ಸುಗುಣಾ, ಫರೀದಾ, ಚಂದ್ರಶೇಖರ್ ಮತ್ತಿತರರಿದ್ದರು.
ಮತ ಎಣಿಕೆಯ ಪೂರ್ವ ಸಿದ್ಧತೆ ತರಬೇತಿ: ವ್ಯವಸ್ಥಿತ ಮತ ಎಣಿಕೆಗೆ ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚನೆ
ಕೋಲಾರ : ಮತ ಎಣಿಕೆಗೆ ನಿಗಧಿಪಡಿಸಿರುವ ಸೂಚನೆಗಳ ಕ್ರಮಬದ್ಧತೆಯಲ್ಲಿ ಯಾವುದೇ ರೀತಿಯ ವ್ಯತ್ಯಾಸವಾಗದಂತೆ ನಿಯಮಗಳನ್ನು ಪರಿಪಾಲಿಸಿ ಮತ ಎಣಿಕೆ ಕಾರ್ಯವನ್ನು ಯಶಸ್ವಿಗೊಳಿಸಲು ಜಿಲ್ಲಾಧಿಕಾರಿ ಅಕ್ರಂ ಪಾಷ ಸೂಚಿಸಿದರು.
ಇಂದು ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಲೋಕಸಭಾ ಚುನಾವಣೆ – 2024ರ ಮತ ಎಣಿಕೆ ಪೂರ್ವ ಸಿದ್ಧತೆ ತರಬೇತಿಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಮತ ಎಣಿಕೆಗೆ ನಿಯೋಜನೆಗೊಂಡ ಅಧಿಕಾರಿ ಮತ್ತು ಸಿಬ್ಬಂದಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಮತ ಎಣಿಕೆ ಜೂನ್ 4ರಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ನಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮತ ಎಣಿಕೆಗೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಉತ್ತಮ ರೀತಿಯಲ್ಲಿ ತರಬೇತಿಯನ್ನು ಪಡೆದುಕೊಂಡು ಮತ ಎಣಿಕೆ ಕಾರ್ಯದಲ್ಲಿ ಲೋಪದೋಷಗಳಾಗದಂತೆ ನೋಡಿಕೊಳ್ಳಬೇಕೆಂದರು.
ಅಂದು ಬೆಳಗ್ಗೆ 6ಗಂಟೆಗೆ ಮತ ಎಣಿಕೆ ಕೇಂದ್ರದಲ್ಲಿ ಹಾಜರಿದ್ದು, ಉಪಹಾರ ಮುಗಿಸಿ 7 ಗಂಟೆಯೊಳಗೆ ತಮಗೆ ನಿಗದಿ ಪಡಿಸಿದ ಮತ ಎಣಿಕೆ ಕೊಠಡಿಯಲ್ಲಿ ಹಾಜರಿರಬೇಕು ಹಾಗೂ ಮತ ಎಣಿಕೆ ಕೊಠಡಿಯೊಳಗಡೆ ಮೊಬೈಲ್ ನ್ನು ನಿμÉೀಧಿಸಲಾಗಿದೆ. ಮತ ಎಣಿಕೆ ಕೊಠಡಿಯೊಳಗಡೆ ಪೆÇಲೀಸ್, ಸೆಕ್ಯುರಿಟಿ ಸಿಬ್ಬಂದಿಗಳಿಗೆ ಅನಾವಶ್ಯಕವಾಗಿ ಪ್ರವೇಶವಿರುವುದಿಲ್ಲ. ಅಭ್ಯರ್ಥಿಗಳಲ್ಲದೆ ಸಚಿವರು, ರಾಜ್ಯ ಸಚಿವರು, ಕೇಂದ್ರ ಸಚಿವರಿಗೆ ಮತ ಎಣಿಕೆ ಕೊಠಡಿಯೊಳಗಡೆ ಪ್ರವೇಶ ಇರುವುದಿಲ್ಲ ಎಂಬ ಮಾಹಿತಿ ತಿಳಿದಿರಲಿ ಎಂದು ಹೇಳಿದರು.
ಮತ ಎಣಿಕೆ ಪ್ರಾರಂಭವಾಗುವ ಮೊದಲು ವಿವಿಪ್ಯಾಟ್ ಆನ್ ಮಾಡುವುದು, ರಿಸಲ್ಟ್ ಬಟನ್ ಪ್ರೆಸ್ ಮಾಡುವುದು ಹಾಗೂ ಅದನ್ನು ಕ್ಲೋಸ್ ಮಾಡುವಾಗ ಬಹು ಎಚ್ಚರಿಕೆಯಿಂದ ತಮಗೆ ವಹಿಸಿದ ಮಾರ್ಗಸೂಚಿಗಳಂತೆ ಕಾರ್ಯ ನಿರ್ವಹಿಸಬೇಕು. ಮತ ಎಣಿಕೆಗೆ ನಿಯೋಜನೆಗೊಂಡ ಏಜೆಂಟ್ರ ಬಳಿ ಶಾಂತವಾಗಿ ವರ್ತಿಸಿ, ಅವರಿಗೆ ಏನಾದರೂ ಸಂಶಯಗಳಿದ್ದರೆ ಅವುಗಳನ್ನು ಪರಿಹರಿಸಿರಿ. ಪ್ರತಿ ಇವಿಎಂ ಗಳಲ್ಲಿ ಎಣಿಕೆಯಾದ ತಕ್ಷಣ ನಿಖರವಾಗಿ ಅಂಕಿ ಅಂಶಗಳನ್ನು ಬರೆದುಕೊಳ್ಳಬೇಕು. ಇಂದಿನ ತರಬೇತಿ ಅವಧಿಯಲ್ಲಿ ಸ್ಪಷ್ಟವಾದ ಮಾಹಿತಿ ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳಿ, ಏಕೆಂದರೆ ಮತ ಎಣಿಕೆ ಮೇಲ್ವೀಚಾರಕರ ಜವಾಬ್ದಾರಿ ಬಹು ಮುಖ್ಯವಾಗಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ನಾರಾಯಣ ಅವರು ಮಾತನಾಡಿ, ಅಂಚೆ ಮತಪತ್ರ ಎಣಿಕೆಗಾಗಿ ಪ್ರತ್ಯೇಕ ಕೊಠಡಿ ಹಾಗೂ 4 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಸರ್ವೀಸ್ ವೋಟ್ಗಳನ್ನು (ಇ.ಟಿ.ಪಿ.ಬಿ.ಎಸ್) ಚುನಾವಣಾಧಿಕಾರಿಗಳ ಸಮ್ಮುಖದಲ್ಲಿ ತಂತ್ರಾಂಶದಲ್ಲಿ ಮತ ಎಣಿಕೆ ಮಾಡಲಾಗುವುದು. ವಿಧಾನಸಭೆ ಕ್ಷೇತ್ರವಾರು ಐದು ಮತಗಟ್ಟೆಗಳ ವಿ.ವಿ. ಪ್ಯಾಟ್ಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಿ ಅಭ್ಯರ್ಥಿಗಳ, ಏಜೆಂಟರ ಸಮಕ್ಷಮದಲ್ಲಿ ವಿ.ವಿ.ಪ್ಯಾಟ್ ಸ್ಲಿಪ್ ಎಣಿಕೆ ಮಾಡಲಾಗುವುದು. ಮತ ಎಣಿಕೆ ಅಧಿಕಾರಿ ಮತ್ತು ಸಿಬ್ಬಂದಿಗಳ ವಾಹನಗಳನ್ನು ನಿಗಧಿತ ನಿಲುಗಡೆ ತಾಣಗಳಲ್ಲಿ ಮಾತ್ರ ನಿಲುಗಡೆ ಮಾಡಬೇಕು. ಸಾಕಷ್ಟು ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ. ಆಯಾ ಕ್ಷೇತ್ರವಾರು ಏಜೆಂಟರಿಗೆ ಮತ್ತು ಮತ ಎಣಿಕೆ ಸಿಬ್ಬಂದಿಗಳಿಗೆ ವಿವಿಧ ಬಣ್ಣಗಳ ಪಾಸ್ಗಳನ್ನು ವಿತರಿಸಲಾಗಿದೆ. ಆನಾವಶ್ಯಕವಾಗಿ ತಮ್ಮ ಎಣಿಕೆ ಟೇಬಲ್ ಬಿಟ್ಟು ಎಣಿಕಾ ಸ್ಥಳಗಳಲ್ಲಿ ಒಡಾಡುವಂತಿಲ್ಲ, ಅನಗತ್ಯಗೊಂದಲ ಸೃಷ್ಠಿ ಮಾಡುವಂತಿಲ್ಲ. ಪೊಲೀಸರೊಂದಿಗೆ ಸಮನ್ವಯ ಸಾದಿಸಿಕೊಂಡು ಮತ ಎಣಿಕೆ ಕಾರ್ಯ ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಮತ ಎಣಿಕೆ ಕೇಂದ್ರದಲ್ಲಿ ಯಾವುದೇ ಮೊಬೈಲ್ನ್ನು ಅನುಮತಿಸಲಾಗುವುದಿಲ್ಲ. ಮಾಧ್ಯಮ ಮಿತ್ರರು ನಿಗಧಿತ ಅವಧಿಯೊಳಗೆ ತಮಗೆ ಮೀಸಲಿರಿಸಿದ ಆಸನಗಳಲ್ಲಿ ಆಸೀನರಾಗಬೇಕು. ಅನಗತ್ಯವಾಗಿ ಮತ ಎಣಿಕೆ ಸಿಬ್ಬಂದಿಗೆ ತೊಂದರೆಕೊಡಬಾರದು ಎಂದು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಾಣಿಕ್ಯಳ್ ಅವರು ಮಾತನಾಡಿ, ಸರ್ವೀಸ್ ವೋಟ್ಗಳನ್ನು ಕ್ರಮಬದ್ಧವಾಗಿ ಇದ್ದಲ್ಲಿ ಮಾತ್ರ ಪರಿಗಣನೆಗೆ ತೆಗೆದುಕೊಳ್ಳಬೇಕು. ಸ್ವಘೋಷಿತ ಪ್ರಮಾಣ ಪತ್ರದಲ್ಲಿ ಮತದಾರರ ಹಾಗೂ ಪತ್ರಾಂಕಿತ ಅಧಿಕಾರಿ ಸಹಿಯಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಮತ ಎಣಿಕೆ ಕಾರ್ಯದಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ತಮ್ಮ ಜವಬ್ದಾರಿಗಳನ್ನು ನಿರ್ವಹಿಸಬೇಕು. ಬುದ್ದಿವಂತಿಕೆಯಿಂದ ಕಾರ್ಯನಿರ್ವಹಿಸಿ ಜಿಲ್ಲೆಗೆ ಕೀರ್ತಿ ಪ್ರತಿಷ್ಠೆ ತರಬೇಕು ಎಂದರು.
ಮಾಸ್ಟರ್ ಟ್ರೇನರ್ ಬೋಡಿರೆಡ್ಡಿ ಅವರು, ತರಬೇತಿಗೆ ಆಗಮಿಸಿದ ಸಿಬ್ಬಂದಿಗಳಿಗೆ ಮತ ಎಣಿಕೆ ಪ್ರಕ್ರಿಯೆಯಲ್ಲಿ ಅನುಸರಿಸಬಹುದಾದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಉಪವಿಭಾಗಧಿಕಾರಿ ವೆಂಕಟಲಕ್ಷ್ಮಿ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್, ಎಲ್ಲಾ ಎ.ಆರ್.ಓ, ಎಲ್ಲಾ ತಹಸೀಲ್ದಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಿಷಪ್ ಜೆರಾಲ್ಡ್ ಲೋಬೊ ಇವರಿಂದ ಉಡುಪಿ ಧರ್ಮಪ್ರಾಂತ್ಯದ ಧರ್ಮಗುರುಗಳ ವರ್ಗಾವಣೆಯ ಪಟ್ಟಿ ಬಿಡುಗಡೆ / Bishop Gerald Lobo released the transfer list of priests of Udupi Diocese
ಉಡುಪಿ,ಮೇ.30: ಉಡುಪಿ ಧರ್ಮಪ್ರಾಂತ್ಯದಿಂದ ಧರ್ಮಗುರುಗಳ ಮತ್ತು ಸಹಾಯಕ ಧರ್ಮಗುರುಗಳ ವರ್ಗಾವಣೆಯ ಪಟ್ಟಿಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ನಾಧ್ಯಕ್ಷರಾದ ಡಾ|ಅ|ವಂ|ಜೆರಾಲ್ಡ್ ಐಸಾಕ್ ಲೋಬೊ ಮಾಧ್ಯಮಕ್ಕೆ ಬಿಡುಗಡೆಗೊಳಿಸಿದ್ದಾರೆ. ವರ್ಗವಣೆಯ ವಿವರವನ್ನು ಕೆಳಗೆ ನೀಡಲಾಗಿದೆ.
Bishop Gerald Lobo released the transfer list of priests of Udupi Diocese
Udupi, May 30: The list of transfer of priests and assistant priests from Udupi Diocese has been released to the media by the President of Udupi Diocese, Dr. Gerald Isaac Lobo. The classification details are given below.
ವಿಶ್ವವಿದ್ಯಾಲಯವು ಜುಲೈ/ಆಗಸ್ಟ್ 2023 ರಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡರ್ಕಾರ್ಸ್ ಕಾಲೇಜಿಗೆ ಐದು ರ್ಯಾಂಕ್ ಗಳು
ಕುಂದಾಪುರ: ಮಂಗಳೂರು ವಿಶ್ವವಿದ್ಯಾಲಯವು ಜುಲೈ/ಆಗಸ್ಟ್ 2023 ರಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಕುಂದಾಪುರದ ಭಂಡರ್ಕಾರ್ಸ್ ಕಾಲೇಜಿಗೆ ಐದು ರ್ಯಾಂಕ್ ಗಳು ದೊರಕಿವೆ.
ಬಿ.ಎ. ಪದವಿ ಪರೀಕ್ಷೆಯಲ್ಲಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ನಾಗರಾಜ್ ನಾಯಕ್ ಮತ್ತು ಜಯಂತಿ ನಾಯಕ್ ಅವರ ಪುತ್ರಿ ವರೇಣ್ಯ ನಾಯಕ್ ಅವರಿಗೆ ಪ್ರಥಮ ರ್ಯಾಂಕ್ ದೊರೆತಿದೆ.
ಬಿ.ಸಿ.ಎ ಪದವಿ ಪರೀಕ್ಷೆಯಲ್ಲಿ ಬೈಂದೂರು ತಾಲೂಕಿನ ಶಾಜಿ ಜರ್ಜ್ ಮತ್ತು ಲಿಟ್ಟಿ ಮೋಲ್ ಅವರ ಪುತ್ರಿ ಸ್ಯಾಂಡ್ರಮೋಲ್ ಶಾಜಿ ಅವರಿಗೆ ದ್ವಿತೀಯ ರ್ಯಾಂಕ್, ಕುಂದಾಫುರ ತಾಲೂಕಿನ ಹೆಮ್ಮಾಡಿ ಗ್ರಾಮದ ಕೃಷ್ಣ ಪೂಜಾರಿ ಮತ್ತು ಬೇಬಿ ಪೂಜಾರಿ ಅವರ ಪುತ್ರಿ ಸ್ಮಿತಾ ಅವರಿಗೆ ನಾಲ್ಕನೇ ರ್ಯಾಂಕ್, ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮದ ವಾಸುದೇವ ನಾವಡ ಮತ್ತು ಕಮಲಾಕ್ಷಿ ನಾವಡ ಅವರ ಪುತ್ರಿ ಕವನ ನಾವಡ ಅವರಿಗೆ ಏಳನೇ ರ್ಯಾಂಕ್, ಕುಂದಾಪುರ ತಾಲೂಕಿನ ಮಣೂರು ಗ್ರಾಮದ ಕೃಷ್ಣ ಎನ್. ಮತ್ತು ಸುಜಾತಾ ಕೆ. ಅವರ ಪುತ್ರಿ ಛಾಯಾ ಕೆ.ಅವರಿಗೆ ಹತ್ತನೇ ರ್ಯಾಂಕ್. ದೊರೆತಿದೆ.
ಇವರಿಗೆ ಕಾಲೇಜಿನ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ವಿಶ್ವಸ್ಥ ಮಂಡಳಿ, ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯರ್ಥಿಗಳು ಅಭಿನಂದಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.