ಶ್ರೀನಿವಾಸಪುರ : ನಮ್ಮ ದೇಶದ ಸಂಸ್ಕøತಿ , ಪರಂಪರೆಯು ಅತ್ಯಂತ ಶ್ರೀಮಂತವಾದದು. ಇಂದಿನ ಯುವ ಪೀಳಿಗೆಯು ಪಾಶ್ಚಿತ್ಯ ಸಂಸ್ಕøತಿಯ ಆಚಾರವಿಚಾರಗಳನ್ನು ಆಚರಿಸುವುದನ್ನು ಬಿಟ್ಟು, ನಮ್ಮ ದೇಶದ ಪವಿತ್ರವಾದ ಸಂಸ್ಕøತಿಯನ್ನು ಉಳಿಸಿಬೆಳಸುವಂತಾಗಬೇಕು ಎಂದು ದೇವಾಲಯದ ಧರ್ಮದರ್ಶಿ ಅಶ್ವಥರೆಡ್ಡಿ ಹೇಳಿದರು.
ತಾಲೂಕಿನ ತಿನ್ನಲಿ ಗ್ರಾಮದಲ್ಲಿ ಶನಿವಾರ, ಭಾನುವಾರ ಶ್ರೀ ಆದಿಶಕ್ತಿ ದೇವಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು. ನಂತರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. .
ಪೂಜಾ ಕಾರ್ಯಕ್ರಮಗಳನ್ನು ಆಗಮಿಕರಾದ ದಿವಾಕರ್, ಆತ್ರೇಯಸ್, ಧನಂಜಯ್, ಗ್ರಾಮದ ಮುಖಂಡರಾದ ಸರಸ್ವತಮ್ಮ, ಗ್ರಾ.ಪಂ. ಮಾಜಿ ಸದಸ್ಯ ಟಿ.ಕೆ.ಶ್ರೀನಿವಾದರೆಡ್ಡಿ, ಟಿ.ಎಂ.ಶಂಕರ್, ವಿ.ರವಿಶಂಕರ್, ಟಿ.ಕೆ.ರಾಮಚಂದ್ರೇಗೌಡ, ಟಿ.ರಾಮಚಂದ್ರರೆಡ್ಡಿ ಹಾಗು ಗ್ರಾಮಸ್ಥರು ಇದ್ದರು.
Day: May 21, 2024
ಶ್ರೀನಿವಾಸಪುರ : ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ , ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ : ಹೈಕೋಟ್ ವಕೀಲ ಶಿವಪ್ರಕಾಶ್
ಶ್ರೀನಿವಾಸಪುರ : ಅಧಿಕಾರಿಗಳು ತಮ್ಮ ಅಧಿಕಾರವನ್ನು ದುರುಪಯೋಗ , ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಖಂಡಿಸಿದರು. ಅಧಿಕಾರಿಗಳು ಯಾವುದೇ ಕಾರಣಕ್ಕೂ ತಮ್ಮ ಭೂಮಿಯನ್ನು ವಶಪಡಿಸಿಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಈ ಸಭೆಯ ಮೂಲಕ ಚರ್ಚೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೈಕೋಟ್ ವಕೀಲ ಶಿವಪ್ರಕಾಶ್ ಹೇಳಿದರು.
ಪಟ್ಟಣದ ನೌಕರರ ಭವನದಲ್ಲಿ ಭಾನುವಾರ ಭೂಮಿ ಹೋರಾಟ ಸಮಿತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ಸರ್ಕಾರ ಏನು ತೀರ್ಮಾನ ತೆಗೆದುಕೊಳ್ಳುತ್ತದೋ, ಅದಕ್ಕೆ ಅಧಿಕಾರಿಗಳು, ರೈತರು ಬದ್ಧರಾಗಬೇಕು, ಸಣ್ಣ ರೈತರು ಬದ್ದರಾಗಬೇಕಾಗಿದೆ. ಸರ್ಕಾರದ ತೀರ್ಮಾನಕ್ಕೆ ತಲೆಬಾಗಬೇಕಾಗುತ್ತದೆ ಎಂದರು. ಅರಣ್ಯ ಇಲಾಖೆ ಅಧಿಕಾರಿಗಳು ರೈತರ ಮೇಲೆ ಬೆದರಿಕೆ ಹಾಕುವುದು ಆಗಲಿ, ನಮ್ಮ ಮೇಲೆ ಬೆದರಿಕೆ ಹಾಕುವುದು ಆಗಲಿ ಆಗಬಾರದು ಎಂದು ಎಚ್ಚರಿಸಿದರು.
ಸರ್ಕಾರವೇ ಸಾಗುವಳಿ ಚೀಟಿಯ ಮುಖಾಂತರ ರೈತರಿಗೆ ಕೊಟ್ಟಂತಹ ಭೂಮಿಯನ್ನು ಅರಣ್ಯ ಇಲಾಖೆಯು ವಶಪಡಿಸಿಕೊಂಡಿರುವದು ಸರಿಯಲ್ಲ. ರೈತರು ತಮ್ಮ ಜೀವನಾಡಿಯಾಗಿ ಬೆಳದಂತಹ ಮಾವು ಗಿಡಗಳನ್ನು ನಾಶಪಡಿಸಿರುವುದು ಸರಿಯಲ್ಲ. ಸುಪ್ರೀಂ ಕೋರ್ಟ್ನಲ್ಲಿ ಅರಣ್ಯ ಇಲಾಖೆ ಡಿಎಫ್ಒ ಕಾನೂನು ಬಾಹೀರವಾಗಿ ರೈತರ ಭೂಮಿಯನ್ನ ವಶಪಡಿಸಿಕೊಂಡಿರುವುದ ಸರಿಯಲ್ಲ ಎಂಬ ವಾದ ವಿವಿದಾಗಳು ನಡೆದವು.
ಮುಖ್ಯ ಮಂತ್ರಿಗಳು ಜಂಟಿ ಸರ್ವೆ ಆಗುವತನಕ ಯಾವುದೇ ಕಾರಣಕ್ಕೂ ರೈತರ ಭೂಮಿಯನ್ನ ವಶಪಡಿಸಿಕೊಳ್ಳುವ ಕೆಲಸ ಮಾಡಬಾರದು ಎಂದು ಹೇಳಿದ್ದರೂ ಸಹ ಅಧಿಕಾರಿಯು ತಮ್ಮ ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದರು.
ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಮಾತನಾಡಿ ಸರ್ಕಾರವು ಯಾವ ರೈತರು ಭೂಮಿಯನ್ನು ಸಾಗುವಳಿ ಮಾಡುತ್ತಿದ್ದಾರೆ ಅಂತಹವರಿಗೆ ಭೂಮಿಯ ಸಾಗುವಳಿ ಚೀಟಿ ನೀಡಿದೆ. ಬಡವರಿಗೆ, ದಲಿತರಿಗೆ ಕಾನೂನು ಬದ್ದವಾಗಿ ಭೂಮಿಯನ್ನ ಹಂಚಿಕೆ ಮಾಡಿದೆ.
ಭೂಮಿ ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ನಾರಾಯಣಸ್ವಾಮಿ ಮಾತನಾಡಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಪಾತಕೋಟೆ ನವೀನ್ಕುಮಾರ್, ಭೂಮಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಟಿ.ಎಂ.ವೆಂಟೇಶ್, ಕಾರ್ಯದರ್ಶಿ ಬಿ.ಎಸ್.ಸೈಯದ್ ಫಾರಕ್, ರೈತ ಮುಖಂಡರಾದ ಮುಳಬಾಗಿಲು ಗೋಪಾಳ್, ಪಾಳ್ಯ ಗೋಪಾಲ್, ಸರ್ವಿಸ್ ಸ್ಟೇಷನ್ ಸತ್ಯಣ್ಣ ಇದ್ದರು.
ಹಾಲಾಡಿ ಲಕ್ಷ್ಮೀದೇವಿ ಕಾಮತ್ ಅವರಿಗೆ “ಸರಸ್ವತಿ ಪ್ರಭಾ” ಪುರಸ್ಕಾರ
ಸಾಂಪ್ರದಾಯಿಕ ಜನಪದ ಹಾಡುಗಳ ಸಂಗ್ರಾಹಕರಾದ, ಸಾಹಿತಿ, ಹಿರಿಯ ಕಲಾವಿದೆ ಹಾಗೂ ಸಂಘಟಕರಾದ ಕುಂದಾಪುರದ ಹಾಲಾಡಿ ಲಕ್ಷ್ಮೀದೇವಿ ಕಾಮತರನ್ನು ಹುಬ್ಬಳ್ಳಿಯ “ಸರಸ್ವತಿ ಪ್ರಭಾ” ಕೊಂಕಣಿ ಮಾಸಿಕ ವತಿಯಿಂದ ಕುಂದಾಪುರದಲ್ಲಿ ನಡೆದ ಸಮಾರಂಭದಲ್ಲಿ “ಸರಸ್ವತಿ ಪ್ರಭಾ ಪುರಸ್ಕಾರ” ನೀಡಿ ಸಮ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು “ಕುಂದಪ್ರಭ” ಸಂಸ್ಥೆಯ ಅಧ್ಯಕ್ಷ ಯು.ಎಸ್.ಶೆಣೈ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರದೀಪ್ ಕುಮಾರ್ ಪಂಡಿತ್ ಕುಮಟಾ, ಅಪ್ಪುರಾಯ ಪೈ ಹುಬ್ಬಳ್ಳಿ ಆಗಮಿಸಿದ್ದರು.
“ಸರಸ್ವತಿ ಪ್ರಭಾ” ಸಂಪಾದಕ ಆರ್ಗೋಡು ಸುರೇಶ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, “36 ವರ್ಷಗಳಿಂದ ಪ್ರಕಟವಾಗುತ್ತಿರುವ “ಸರಸ್ವತಿ ಪ್ರಭಾ” ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಪ್ರಸಾರ ಹೊಂದಿದ್ದು, ಕುಂದಾಪುರದಲ್ಲೂ ಓದುಗರಿದ್ದಾರೆ. ಪ್ರತಿ ವರ್ಷ ಹಿರಿಯ ಸಾಧಕರಿಗೆ “ಸರಸ್ವತಿ ಪ್ರಭಾ” ಪುರಸ್ಕಾರ ನೀಡುವ ಕಾರ್ಯಕ್ರಮ ನಡೆಸುತ್ತಿದ್ದೇವೆ. ಈ ವರ್ಷ ಕೊಂಕಣಿ ಕನ್ನಡ ಸಾಹಿತ್ಯ, ಕಲೆಯಲ್ಲಿ 5 ದಶಕಗಳಿಂದ ಅಪೂರ್ವ ಸಾಧನೆಗೈದ ಹಾಲಾಡಿ ಲಕ್ಷ್ಮೀದೇವಿ ಕಾಮತ್ ಅವರಿಗೆ ನೀಡುತ್ತಿದ್ದೇವೆ. ಅವರ ಸಾಧನೆ ಅಭಿನಂದನೀಯ” ಎಂದರು.
ಪುರಸ್ಕಾರ ಸ್ವೀಕರಿಸಿದ ಲಕ್ಷ್ಮೀದೇವಿ ಕಾಮತ್ ಮಾತನಾಡಿ, “ಜನಪದ ಕಲೆಗಳ ಬಗ್ಗೆ ಆಸಕ್ತಿ ಬಾಲ್ಯದಿಂದಲೇ ಬಂದದ್ದು. ಮೈಸೂರಿನಿಂದ ಕುಂದಾಪುರಕ್ಕೆ ಬಂದ ಮೇಲೆ ನಮ್ಮ ಹಲವು ಗ್ರಾಮೀಣ ಪ್ರದೇಶದ ಗ್ರಾಹಕರಲ್ಲಿ ಇರುವ ಪ್ರತಿಭೆಯನ್ನು ಕಂಡು ಕೊಂಕಣಿ, ಕನ್ನಡ ಜನಪದ ಸಾಹಿತ್ಯ ಸಂಗ್ರಹ ಮಾಡಲು ಹಳ್ಳಿಗಳಿಗೆ ತಿರುಗಾಡಿದೆ. ಅದನ್ನೆಲ್ಲ ಸಂಗ್ರಹಿಸಿ “ಜೀವನ ಚಕ್ರ” ಎಂಬ ಕೃತಿ ರಚಿಸಿದೆ. ಕೊಂಕಣಿ ಭಾಷೆ, ಕಲೆ, ಅಭಿವೃದ್ಧಿ ಬಗ್ಗೆ ಸೇವೆ ಸಲ್ಲಿಸಲು ನನಗೆ ತುಂಬಾ ಮಂದಿ ಸಹಾಯ ಮಾಡಿದ್ದಾರೆ. ಈ ಆಸಕ್ತಿ ನಿರಂತರವಾಗಿ ಉಳಿಸಿಕೊಳ್ಳಲು ನನ್ನ ಪತಿ ಹಾಲಾಡಿ ವಾಸುದೇವ ಕಾಮತ್ ಹಾಗೂ ಹಿತೈಷಿಗಳು ಕಾರಣರಾಗಿದ್ದಾರೆ. ನಮ್ಮ ಸಂಸ್ಕøತಿ ಉಳಿಸುವುದೇ ನನ್ನ ಮುಖ್ಯ ಧ್ಯೇಯ” ಎಂದರು.
ಪ್ರದೀಪ್ ಕುಮಾರ್ ಪಂಡಿತ ಅಭಿನಂದನಾ ಪತ್ರ ವಾಚನ ಮಾಡಿದರು.
“ಸರಸ್ವತಿ ಪ್ರಭಾ” ಕೊಂಕಣಿ ಮಾಸಿಕದ ಸಂಘಟನಾ ಪ್ರಮುಖರಾಗಿ 30 ವರ್ಷ ಸೇವೆ ಸಲ್ಲಿಸಿದ ಅಪ್ಪುರಾಯ ಪೈಯವರನ್ನು ಗೌರವಿಸಲಾಯಿತು.
ಮಹಿಳಾ ದಿನಾಚರಣೆ ಅಂಗವಾಗಿ ನಿವೃತ್ತ ಮುಖ್ಯೋಪಾಧ್ಯಾಯಿನಿ ಲತಾ ಭಟ್ ಅವರನ್ನು ಗೌರವಿಸಲಾಯಿತು.ಯಕ್ಷಗಾನ ತರಬೇತುದಾರ, ಮುಖ್ಯ ಶಿಕ್ಷಕ, ವಿಠಲ ಕಾಮತ್ ಉಪ್ಪಿನಕುದ್ರು, ವ್ಯವಹಾರೋದ್ಯಮಿ ಮಾಧವ ಶ್ಯಾನುಭಾಗ ವಡೇರಹೋಬಳಿ ಅಭಿನಂದನಾ ಮಾತುಗಳನ್ನಾಡಿದರು.
ಅಧ್ಯಕ್ಷತೆ ವಹಿಸಿದ್ದ ಯು. ಎಸ್. ಶೆಣೈ ಮಾತನಾಡಿ, “ಹಾಲಾಡಿ ಲಕ್ಷ್ಮೀದೇವಿ ವಾಸುದೇವ ಕಾಮತ್ ಸರಸ್ವತಿ ಸನ್ಮಾನ ಪುರಸ್ಕಾರಕ್ಕೆ ಅರ್ಹ ಸಾಧಕರಾಗಿದ್ದಾರೆ. ಅವರಂತೆ ಜೀವನದಲ್ಲಿ ಭಾಷೆ, ಸಂಸ್ಕøತಿ ಸಾಹಿತ್ಯಕ್ಕಾಗಿ ಜನಪದ ಸಂಪ್ರದಾಯದ ಉಳಿವಿಗಾಗಿ ಶ್ರಮ ಪಟ್ಟವರು ವಿರಳ. ಅವರು ಕಿರಿಯರಿಗೆ ಪ್ರೇರಣೆ ನೀಡುವ ಅನುಕರಣೀಯ ನಾಯಕತ್ವ ಹೊಂದಿದ್ದಾರೆ. ಅವರ ಕ್ರಿಯಾಶೀಲತೆ ಅಭಿನಂದನೀಯ, ಕುಂದಾಪುರಕ್ಕೆ ಅವರ ಕೊಡುಗೆ ದೊಡ್ಡದು” ಎಂದರು.
ಹಿರಿಯ ಶಿಕ್ಷಕ ದಿನೇಶ ಪ್ರಭು ಕಾರ್ಯಕ್ರಮ ನಿರೂಪಿಸಿದರು. ರಕ್ಷಿತಾ ರಾಮನಾಥ ಪ್ರಾರ್ಥಿಸಿದರು. ಶ್ವೇತಾ ರವೀಂದ್ರ ನಾಯಕ್ ಸ್ವಾಗತಿಸಿ, ಶ್ರೀಮತಿ ವಿಜಯಾ ಸದಾಶಿವ ಕಾಮತ್ ವಂದಿಸಿದರು.