ಕುಂದಾಪುರ (ಫೆ.16) : ಚಾಣಾಕ್ಷ ಚೆಸ್ ಸ್ಕೂಲ್, ಶಿವಮೊಗ್ಗ ಮತ್ತು ಮೌಂಟ್ ಕ್ಯಾರಮಲ್ ಸ್ಕೂಲ್ ಮತ್ತು ಶ್ರೀ ಶ್ರೀ ಟ್ರಸ್ಟ್ ಸಹಭಾಗಿತ್ವದಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಸ್ಪರ್ಧೆ – 2024ರಲ್ಲಿ ಕುಂದಾಪುರದ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಶ್ರೀನಿತ್ ಶೆಟ್ ಭಾಗವಹಿಸಿ ಬಾಲಕರ 7ರ ವಯೋಮಿತಿಯ ವಿಭಾಗದಲ್ಲಿ 7ರಲ್ಲಿ 4 ಪಾಯಿಂಟ್ ಗಳನ್ನು ಗಳಿಸಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಇವರನ್ನು ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಅಭಿನಂದಿಸಿದರು.
Month: February 2024
ಕೋಲಾರ ಜಿಲ್ಲಾ ಶ್ರೀನಿವಾಸಪುರದಲ್ಲಿ ರೈತ- ಕಾರ್ಮಿಕರ ಜಂಟಿ ಸಮಾವೇಶ
ಫೆಬ್ರವರಿ 16 ಕ್ಕೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ದೇಶಾದ್ಯಂತ ಸಾರ್ವತ್ರಿಕ ಮುಷ್ಕರ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ದಲ್ಲಿ ರೈತ – ಕಾರ್ಮಿಕರಿಂದ ಪ್ರತಿಭಟನಾ ಮೆರವಣಿಗೆ ಹೋರಾಟ ಮಾಡಲು ತೀರ್ಮಾನಿಸಲಾಗಿದೆ.
ರೈತ ಕಾರ್ಮಿಕರ ಮುಖಂಡರು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಪಿ. ಆರ್. ಸೂರ್ಯ ನಾರಾಯಣ ಮಾತನಾಡಿ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಪ್ಯಾಸಿಸ್ಟ್ ಸರ್ಕಾರ ಈ ದೇಶದ ಬಹುಸಂಖ್ಯಾತ ದುಡಿಯುವ ರೈತಾಪಿ ವರ್ಗ ಮತ್ತು ಕಾರ್ಮಿಕರನ್ನು ಕಡೆಗಣಿಸುತ್ತಾ ಬಂದಿದೆ. ರೈತಾಪಿ ವರ್ಗದ ಕೃಷಿಯನ್ನು ಕಾಪೆರ್Çರೇಟಿಕರಣ ಗೊಳಿಸುತ್ತಿದೆ. ಕೃಷಿ ಕ್ಷೇತ್ರದಲ್ಲಿ ಅನುದಾನಗಳು ಮತ್ತು ರಿಯಾಯಿತಿಗಳನ್ನು ಹಂತ ಹಂತವಾಗಿ ಕಡಿತಗೊಳಿಸುವ ಕ್ರಮಗಳನ್ನು ಕೈಗೊಂಡಿದೆ. ಹೊಸ ಆರ್ಥಿಕ ನೀತಿಗಳ ಜಾರಿಯಿಂದ ಕೃಷಿ ದುಬಾರಿಯಾಗಿ ರೈತಾಪಿ ವರ್ಗ ಕೃಷಿಯಿಂದ ದೂರ ಉಳಿಯುವಂತೆ ಮಾಡಿದೆ. ರೈತರು ಬೆಳೆದ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ. ಮಾಡಿದ ಸಾಲುಗಳನ್ನು ತೀರಿಸಲಾಗದೆ ರೈತರ ಆತ್ಮಹತ್ಯೆಗಳು ಮುಂದುವರೆದಿವೆ ಎಂದರು.
ದುಡಿಯುವ ಕಾರ್ಮಿಕ ವರ್ಗಕ್ಕೆ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ನೀಡಬೇಕಾಗಿದ್ದ ಕೇಂದ್ರ ಸರ್ಕಾರ ಕಾರ್ಮಿಕರ ಹಕ್ಕುಗಳ ರಕ್ಷಣಾ ಕಾಯ್ದೆಗಳನ್ನು ತೆಗೆದುಹಾಕಿ ಕಾಪೆರ್Çರೇಟ್ ಬೆಂಬಲಿತ ಕಾರ್ಮಿಕ ಸಂಹಿತೆಗಳನ್ನು ಜಾರಿಗೊಳಿಸಲು ಮುಂದಾಗಿದೆ. ಹತ್ತು ವರ್ಷಗಳಿಂದ ಭರವಸೆ ನೀಡಿದ ಯಾವುದೇ ಘೋಷಣೆಗಳು ಜಾರಿ ಮಾಡಿಲ್ಲ. ಜನಸಾಮಾನ್ಯರ ಅಗತ್ಯವಸ್ತುಗಳ ಬೆಲೆ ಏರಿಕೆ ನಿಯಂತ್ರಣ ಆಗುತ್ತಿಲ್ಲ. ಜಗತ್ತಿನಲ್ಲೇ ಅತಿ ಹೆಚ್ಚು ನಿರುದ್ಯೋಗ ಸಮಸ್ಯೆ ನಮ್ಮ ದೇಶದಲ್ಲಿದೆ. ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಈ ದೇಶದ ಸಂಪತ್ತು ಕೆಲವೇ ಶ್ರೀಮಂತರ ಕೈ ಸೇರುತ್ತಿದೆ. ಹಸಿವಿನ ಸೂಚ್ಯಂಕದಲ್ಲಿ ಭಾರತ 111 ನೇ ಸ್ಥಾನದಲ್ಲಿದ್ದರು ಸುಳ್ಳಿನ ಕತೆಗಳನ್ನು ಹೇಳುತ್ತಾ ಜನಸಾಮಾನ್ಯರನ್ನು ಭ್ರಮಾಲೋಕದಲ್ಲಿ ತೇಲಿ ಸುತ್ತಿದೆ ಎಂದರು. ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅIಖಿU ಜಿಲ್ಲಾ ಮುಖಂಡರಾದ ಆರ್ ಆಂಜಲಮ್ಮ ಮಾತನಾಡಿ ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಅಂಗನವಾಡಿ, ಬಿಸಿಯೂಟ ಯೋಜನೆಗಳನ್ನು ಕಡೆಗಣಿಸಿದ್ದಾರೆ. ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿಗೆ ಅನುದಾನಗಳು ಕಡಿತ ಮಾಡಿದ್ದಾರೆ.ಇದರ ವಿರುದ್ಧ ಸಂಘಟಿತ ಹೋರಾಟ ಅನಿವಾರ್ಯವಾಗಿದೆ ಎಂದರು.
ಅಂಗನವಾಡಿ ಮುಖಂಡರಾದ ಪುಷ್ಪ, ಅಂಬಿಕಾ, ಸಿ. ಪದ್ಮ,ಶಕುಂತಲಾ ,ಲಕ್ಷ್ಮೀ ., ಗ್ರಾಮ ಪಂ. ನೌ. ಸಂಘದ ತಾಲೂಕು ಅಧ್ಯಕ್ಷ ಯಲ್ದೂರು ಶಿವಶಂಕರ್, ಕಾರ್ಯದರ್ಶಿ ರಾಮೇಗೌಡ,ಕಟ್ಟಡ ಕಾರ್ಮಿಕಸಂಘದ ಸುಮಿತಿ ,ಬಿಸಿಯೂಟ ನೌಕರರ ಸಂಘದ ವೆಂಕಟಮ್ಮ,ಕ.ಪ್ರಾಂ ರೈತ ಸಂಘದ ತಾಲೂಕು ಕಾರ್ಯದರ್ಶಿ ಸೈಯದ್ ಪಾರೂಕ್, ಆರ್. ವೆಂಕಟೇಶ್ , , ಮಂಜುಳ,ರೈತ ಸಂಘದ ರಾಮಪ್ಪ, ಮುಂತಾದವರು ಉಪಸ್ಥಿತರಿದ್ದರು.”
ಪೆಗಳಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ದುಸ್ಥಿತಿ, ಕೊಠಡಿಗಳು ಶಿಥಲಾವಸ್ಥೆಗೆ ತಲುಪಿವೆ
ಶ್ರೀನಿವಾಸಪುರ : ರಾಜ್ಯದಲ್ಲಿ ಸರ್ಕಾರಿ ಶಾಲೆಗಳಲ್ಲಿ ಹೆಚ್ಚು ದಾಖಲಾತಿಗಳು ಇಲ್ಲದೆ ಬಹುತೇಕ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಆದರೆ ತಾಲೂಕಿನ ಪೆಗಳಪಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸ್ತುತ 3 ಕೊಠಡಿಗಳು ಇದ್ದು, 57 ವಿದ್ಯಾರ್ಥಿಗಳು ಇದ್ದು, ಆದರೆ ಈಗಿರುವ ಕೊಠಡಿಗಳು ಶಿಥಲಾವಸ್ಥೆಗೆ ತಲುಪಿದೆ.
ಪ್ರತಿನಿತ್ಯ ಭಯದ ವಾತಾವರಣದಲ್ಲಿಯೇ ವಿದ್ಯಾರ್ಥಿಗಳು ಪಾಠಪ್ರವನಗಳನ್ನು ಕೇಳುವ ದುಸ್ಥಿತಿ. ಪ್ರತಿನಿತ್ಯ ಭಯದ ವಾತರಣದಲ್ಲಿಯೇ ತರಗತಿಗಳಿಗೆ ಹಾಜರಾಗಬೇಕಾದ ಪರಿಸ್ಥಿತಿ. ಶಾಲೆಯ ಅವ್ಯವಸ್ಥೆ ಕಂಡು ಭಯದಿಂದ ದೇವಾಲಯದ ಆವರಣದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಒಂದು ಕಡೆಯಾದರೆ ಮತ್ತೊಂದು ಕಡೆ ಶೌಚಾಲಯಗಳಿಲ್ಲದೇ ಬಾಲಕೀಯರು ಬಯಲು ಶೌಚಾಲಯಕ್ಕೆ ಹೋಗಬೇಕಾದಂತಹ ಪರಿಸ್ಥಿತಿ ಸಮಸ್ಯೆಗಳ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೂ ತಂದಿದ್ದರು ಸಹ ಸಮಸ್ಯೆ ಬಗೆ ಹರಿದಿಲ್ಲವೆಂದು ವಿದ್ಯಾರ್ಥಿಗಳ ಪೆÇೀಷಕರು ಬೇಸರ ವ್ಯಕ್ತಪಡಿಸಿದ್ದಾರೆ
ರಸ್ತೆ ಬದಿಯಲ್ಲಿಯೇ ಶಾಲೆ ಇರುವ ಕಾರಣದಿಂದಾಗಿ ಕಾಂಪೌಂಡ್ ಸಹ ಇಲ್ಲಾ ಪ್ರತಿನಿತ್ಯ ವಾಹನಗಳ ಶಬ್ದದಿಂದ ಕಿರಿಕಿರಿಯಾಗುತ್ತಿದೆ ಶಾಲೆಯ ಹೆಸರಿನಲ್ಲಿ 1 ಎಕರೆ 10 ಕುಂಟೆ ಜಮೀನು ಮೀಸಲು ಇದ್ದು, ಆ ಸ್ಥಳದಲ್ಲಿ ಶಾಲೆ ನಿರ್ಮಾಣ ಮಾಡುವಂತೆ ವಿದ್ಯಾರ್ಥಿಗಳ ಪೆÇೀಷಕರು ಮನವಿ ಮಾಡುತ್ತಿದ್ದಾರೆ.
ಶಾಲಾ ಕಟ್ಟಡಗಳು ಸರ್ಕಾರ ದಿಂದ 4 ಕೊಠಡಿಗಳು ಮಂಜೂರಾಗಿದ್ದರೂ ಶಾಲಾ ಕಟ್ಟಡ ಹಳೆಯ ಶಾಲೆಯ ಸ್ಥಳದಲ್ಲಿಯೇ ನಿರ್ಮಾಣ ಮಾಡಬೇಕೆಂದು ಗ್ರಾಮದ ಒಂದು ಬಣ ಶಾಲೆಗೆ ಮಂಜೂರಾಗಿರುವ ಜಾಗದಲ್ಲಿ ನಿರ್ಮಾಣ ಮಾಡಬೇಕೆಂದು ಮತ್ತೊಂದು ಬಣ ಪ್ರತಿμÉ್ಠಗೆ ತೆಗೆದುಕೊಂಡು ವಿದ್ಯಾರ್ಥಿಗಳಿಗೆ ತೊಂದರೆ ಮಾಡುತ್ತಿದ್ದಾರೆಂದು ಪೆÇೀಷಕರಾದ ರಾಮಚಂದ್ರರೆಡ್ಡಿ, ಎಂ.ಕೆ.ವೆಂಕಟರಮಣಪ್ಪ, ಮುನಿರತ್ನ, ವೆಂಕಟರಾಮರೆಡ್ಡಿ, ಚಲ್ಲಪ್ಪ ಆರೋಪಿಸಿದ್ದಾರೆ
ನೋಟ್ 1 : ಶಾಲೆ ಮುಂಭಾಗ ಗ್ರಾಮಕ್ಕೆ ಹಾದುಹೋಗುವ ರಸ್ತೆ ಇದ್ದು, ಶಾಲೆಯು ರಸ್ತೆ ಬದಿಯಲ್ಲಿಯೇ ಇರುವ ಕಾರಣದಿಂದ ವಾಹನ ಸಂಚಾರವು ದಟ್ಟವಾಗಿರುತ್ತದೆ ಇದರಿಂದ ಮಕ್ಕಳಿಗೆ ಪಾಠಪ್ರವಚನಗಳಿಗೂ ಕಷ್ಟಕರವಾಗಿದೆ. ಶಾಲೆಗೆ ಸಂಬಂದಿಸಿದಂತೆ ಕಾಪೌಂಡ್ ಇಲ್ಲ, ಶೌಚಾಲಯಗಳು ಇಲ್ಲ. ಶಾಲೆ ಕಟ್ಟಡ ನಿರ್ಮಾಣಕ್ಕಾಗಿ 1 ಎಕರೆ 10 ಗುಂಟೆ ಮೀಸಲಾಗಿದೆ. ಸರ್ಕಾರದಿಂದ ಮಂಜೂರು ಆಗಿದೆ . ಆ ಸ್ಥಳದಲ್ಲಿ ಇನ್ನು ಕೊಠಡಿಗಳು ನಿರ್ಮಾಣವಾಗಿಲ್ಲ. ಮಳೆಗಾಲ ಬಂದರೆ ಮಕ್ಕಳನ್ನ ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತೇವೆ ಎಂದರು.
ಎ.ವೆಂಟಕರಾಜು, ವಿದ್ಯಾರ್ಥಿ ಪೋಷಕ. ಪೆಗಳಪಲ್ಲಿ
ನೋಟ್ 2 : ಶಾಲೆಯು ರಸ್ತೆ ಬದಿಯಲ್ಲಿಯೇ ಇರುವುದರಿಂದ ವಿದ್ಯಾರ್ಥಿಗಳು ಪ್ರಾರ್ಥನೆ ಮಾಡುವ ಸಮಯದಲ್ಲಿ ವಾಹನಗಳ ಬಂದರೆ ಅಕ್ಕಪಕ್ಕ ಹೋಗುವ ಪರಿಸ್ಥಿತಿ . ವಾಹನ ಸವಾರರು ಗಾಡಿಗಳನ್ನು ನಿಲ್ಲಿಸುವುದಿಲ್ಲ. ಶಾಲೆಗೆಂದು 38 ಗುಂಟೆ ಇದೆ. ಇಲ್ಲಿ ನೀರಿನ ಸಮಸ್ಯೆ, ಶೌಚಾಲಯ ಸಮಸ್ಯೆ, ಇಲ್ಲಿ ಮೂಲಭೂತ ಸೌಲಭ್ಯಗಳು ಇಲ್ಲವೆಂದು ಮೇಲಿನ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿದ್ದೇವೆ ಎಂದರು.
ನಾರಾಯಣಸ್ವಾಮಿ, ಪ್ರಬಾರಿ ಮುಖ್ಯ ಶಿಕ್ಷಕ. ಪೆಗಳಪಲ್ಲಿ
ಪುರಸಭೆ ಸಭೆ ಸದಸ್ಯೆ ವಿ.ಲೀಲಾವತಿ ಶ್ರೀನಿವಾಸ್ ರಾಜಿನಾಮೆ ನೀಡಬೇಕು ಇವರ ಸದಸ್ಯತ್ವವನ್ನು ರದ್ದಪಡಿಸಬೇಕೆಂದು ಧರಣಿ
ಶ್ರೀನಿವಾಸಪುರ: ಪಟ್ಟಣದ ಜಗಜೀವನ ಪಾಳ್ಯದ ವಾರ್ಡ್ ನಂ. 20 ಪುರಸಭೆ ಸಭೆ ಸದಸ್ಯೆ ವಿ.ಲೀಲಾವತಿ ಶ್ರೀನಿವಾಸ್ ಕೂಡಲೇ ರಾಜಿನಾಮೆ ನೀಡಬೇಕು ಇವರ ಸದಸ್ಯತ್ವವನ್ನು ರದ್ದಪಡಿಸಬೇಕೆಂದು ಈ ಬಾಗದ ಜನತೆ ಮತ್ತು ಎಂ ಶ್ರೀನಿವಾಸನ್ ಅಭಿಮಾನಿಗಳು ಸದಸ್ಯೆ ಮನೆಯ ಮುಂದೆ ಧರಣಿ ಮಾಡಿ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ಮಾಡಿದರು.
ಇದೇ ಸಮಯದಲ್ಲಿ ವಾರ್ಡ್ ನಾಗರೀಕ ಪುನಿತ್ ಮಾತನಾಡಿ ಕೌನ್ಸಲರ್ ಎಂ. ಶ್ರೀನಿವಾಸನ್ ಕೊಲೆಯಾದ ಕಳೆದ ನಾಲ್ಕು ತಿಂಗಳಿನಿಂದ ನಾಪತ್ತೆಯಾದ ಜಗಜೀವನಪಾಳ್ಯ, ದಯಾನಂದರಸ್ತೆ, ರಂಗರಸ್ತೆ, ಪುರಸಭೆ ಸಭೆ ಸದಸ್ಯೆ ಲೀಲಾವತಿ ಶ್ರೀನಿವಾಸ್ರವರು ನಿನ್ನೆ ಬಡವಾಣೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಾರ್ಡ್ ನಂ-20 ನಾಗರೀಕರ ಕಷ್ಟಗಳನ್ನು ಕೇಳುವವರು ಇಲ್ಲದೆ ಅನಾಥರಾಗಿದ್ದಾರೆ.
ವಾರ್ಡ್ನ ನಾಗರೀಕ ಸುಬ್ರಮಣಿ ಮಾತನಾಡಿ ಕೌನ್ಸಿಲರ್ ಎಂ.ಶ್ರೀನಿವಾಸನ್ರವರ ಕೊಲೆ ಪ್ರಕರಣದಲ್ಲಿ ಪುರಸಭೆ ಸದಸ್ಯರಾಗಿರುವ ಲೀಲಾವತಿ ಶ್ರೀನಿವಾಸ್ ರವರ ಮಗ ಚಂದನ್ ನನ್ನು ಸಹಾ ಆರೋಪಿಯಾಗಿದ್ದು, ನ್ಯಾಯಾಂಗ ಬಂಧನದಲ್ಲಿರುವ ಕಾರಣ ಕೂಡಲೇ ನೈತಿಕ ಹೊಣೆ ಹೊತ್ತು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ಕೊಲೆ ಪ್ರಕರಣದಲ್ಲಿ ಯಾರು ಯಾರು ಇದ್ದರೂ ಅವರು ಈ ಭಾಗದಲ್ಲಿ ಇರಬಾರದು ಎಂದು ಒತ್ತಾಯಿಸಿ, ಆರೋಪಿಗಳು ಯಾವುದೇ ಕಾರಣಕ್ಕೂ ಬರಬಾರದು. ಅವರು ಬಂದರೆ ಅನಾಹುತಗಳ ಆಗುವುದು ಗ್ಯಾರಂಟಿ ಎಂದು ಎಚ್ಚರಿಸಿದರು. ಜಿಲ್ಲಾಡಳಿತ ಅವರನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.
ಪುರಸಭೆ ಸದಸ್ಯೆ ವಿ.ಲೀಲಾವತಿ ಶ್ರೀನಿವಾಸ್ ಮನೆಯ ಮುಂದೆ ತಮಟೆ ಬಾರಿಸಿಕಂಡು ಧರಣಿ ಮಾಡಿ ಪ್ರತಿಕೃತಿ ದಹನ ಮಾಡಿ ಕೂಡಲೇ ರಾಜೀನಾಮೆಗೆ ಒತ್ತಾಯಿಸಿ ದಿಕ್ಕಾರ ಕೂಗಿ ಆಕ್ರೋಶವನ್ನು ಹೊರಹಾಕಿ ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ರವರಿಗೆ ಲೀಲಾವತಿ ಶ್ರೀನಿವಾಸ್ ರವರನ್ನ ಸದಸ್ಯತ್ವ ದಿಂದ ರದ್ದು ಮಾಡಬೇಕು ಎನ್ನುತ್ತಾ ಹಾಗೂ ಪೆÇಲೀಸ್ ನಿರೀಕ್ಷಕ ಮಹಮ್ಮದ್ ಎಂ.ಬಿ.ಗೊರವನಕೊಳ್ಳರವರಿಗೆ ಕಾನೂನು ರೀತ್ಯ ಕ್ರಮಕೈಗೊಳ್ಳಲು ಮನವಿ ಪತ್ರ ಸಲ್ಲಿಸಿದರು.
ಇದೇ ಸಮಯದಲ್ಲಿ ಪೊಲೀಸ್ ನಿರೀಕ್ಷಕ ಮಹಮ್ಮದ್ ಎಂ.ಬಿ.ಗೊರವನಕೊಳ್ಳ ಪ್ರತಿಭಟನಕಾರರರೊಂದಿಗೆ ಮಾತನಾಡಿ ನಾಗರೀಕರು ಯಾವುದೇ ಕಾರಣಕ್ಕೂ ಕಾನೂನನ್ನು ಕೈಗೆ ತಗೆದುಕೊಳ್ಳಬೇಡಿ ನಿಮ್ಮ ಬೇಡಿಕೆಗಳನ್ನು ಕಾನೂನು ರೀತ್ಯ ಪರಿಹರಿಸಲಾಗುವುದು ಎಂದು ತಿಳಿಸಿದರು.
ಕೆರೆಕಟ್ಟೆ ಪುಣ್ಯಕ್ಷೇತ್ರದಲ್ಲಿ ಸಂತ ಅಂತೋನಿಯವರ ಪವಿತ್ರ ನಾಲಿಗೆಯ ಹಬ್ಬ
ಕುಂದಾಪುರ ಫೆಬ್ರವರಿ 15, 2024 ಕುಂದಾಪುರ ತಾಲೂಕಿನ ಹೊಸಂಗಡಿ,ಕೆರೆಕಟ್ಟೆ ಸಂತ ಅಂತೋನಿಯವರ ಪ್ರಸಿದ್ದ ಪುಣ್ಯ ಕ್ಷೇತ್ರದಲ್ಲಿ ಸಂತ ಅಂತೋನಿಯವರ ಅವರ ನಾಲಿಗೆಯ ಅವಶೇಷದ ಹಬ್ಬವನ್ನು ಶ್ರದ್ಧಾ ಭಕ್ತಿ ಮತ್ತು ಸಂಭ್ರಮದಿಂದ ಫೆ.15 ರಂದು ಆಚರಿಸಲಾಯಿತು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಹಬ್ಬದ ಪ್ರಯುಕ್ತ ದಿವ್ಯ ಬಲಿದಾನವನ್ನು ಅರ್ಪಿಸಿದರು.
“ದೇವರೆ ನಮಗೆ ಪ್ರಾರ್ಥಿಸಲು ಕಲಿಸು” ಎಂಬುದು ಹಬ್ಬದ ವಿಷಯವಾಗಿದ್ದು, ತೊಟ್ಟಾಮ್ ಚರ್ಚಿನ ಧರ್ಮಗುರು ಹಾಗೂ ಸಂಪರ್ಕ ಸಾಧನ ಆಯೊಗೀದ ನಿರ್ದೇಶಕರಾರ ವಂ|ಡೆನಿಸ್ ಡೆಸಾ ದೇವರ ವಾಕ್ಯವನ್ನು ಪಠಿಸಿ “ಪ್ರೀತಿ ಒಂದು ಅದ್ಬುತ ಶಕ್ತಿ, ನಿರಂತರವಾಗಿ ಪ್ರೀತಿಸು, ಪ್ರೀತಿಸು ಅಂದರೆ ನಿಮಗೆ ಅದು ಕೇಳಿ ಕೇಳಿ ಬೇಜಾರಾಗಬಹುದು, ಆದರೆ ನಿತ್ಯವೂ ನಾವು ಊಟ ಮಾಡುತ್ತೇವೆ ಆದರೆ ಊಟ ಮಾಡಿ ಸಾಕಗುವುದಿಲ್ಲಾ, ನಮ್ಮ ಶ್ವಾಸ ಪುನಹ ಪುನಹ ತೆಗೆದುಕೊಳ್ಳುತ್ತೇವೆ ಆದರೆ ಸಾಕಾಗುವುದಿಲ್ಲ, ಹಾಗೇಯೆ ಪ್ರೀತಿ ಮಾಡುವುದು, ಪ್ರಾರ್ಥನೆ ಅಂದರೆ ನಮಗೆ ಆಮ್ಲಜನಕ ಇದ್ದಂತೆ. ಪ್ರಾರ್ಥನೆ ಮಾಡಿ ಮೇರಿ ಮಾತೆಗೆ ಸಾಕಾಗಲಿಲ್ಲ, ಯೇಸು ದೇವರ ಪುತ್ರ ಆದರೂ ಆತನು ಪಿತನಲ್ಲಿ ಪ್ರಾರ್ಥಿಸುತ್ತಿದ್ದ “ಪಿತನೇ ನನಗೆ ಸರಿಯಾದ ದಾರಿ ತೋರಿಸು” ಎಂದು. ಪ್ರಾರ್ಥನೆ ಅಂದರೆ ದೇವರೊಡನೆ ನಾವು ಸಂಬಂಧ ಇಟ್ಟುಕೊಳ್ಳುವುದು. ನಮ್ಮ ಮಕ್ಕಳಿಗೆ ಮೊತ್ತ ಮೊದಲು ಶಿಕ್ಷಕರು, ಆಥವ ಧರ್ಮಗುರುಗಳು ಪ್ರಾರ್ಥನೆ ಪ್ರೀತಿಯ ಪಾಠವನ್ನು ಕಲಿಸುವುದಲ್ಲಾ, ಅದು ಮೊತ್ತ ಮೊದಲು ಮನೆಯಲ್ಲಿ ಹೆತ್ತವರು ಕಲಿಸಬೇಕು. ಪ್ರೀತಿ ಇಗರ್ಜಿಯೊಳಗೆ ಮಾತ್ರವಲ್ಲ, ಅದು ಇಗರ್ಜಿಯ ಹೊರಗೆ ತೋರುವುದು ಅತ್ಯಂತ ಮಹತ್ವ, ಇಗರ್ಜಿಯ ಒಳಗೆ ತೊರ್ಪಡಿಸುವುದು ಬಹಳ ಸುಲಭ, ಸಮಾಜದಲ್ಲಿ ಒಂದು ದೇಹಕ್ಕೆ ಬಟ್ಟೆ ಇಲ್ಲದಿದ್ದರೆ ನಮ್ಮ ಪ್ರಾರ್ಥನೆ, ಪ್ರೀತಿ ಸಂಪೂರ್ಣವಾಗುವುದಿಲ್ಲಾ, ಆ ದೇಹಕ್ಕೆ ಬಟ್ಟೆ, ಊಟ ಕೊಡದಿದ್ದಲ್ಲಿ ನೀವು ಚರ್ಚಿನೊಳಗೆ ಅರ್ಪಿಸಿದ ಬಲಿದಾನ ವ್ಯರ್ಥ, ಇದೇ ಕಾರ್ಯರೂಪಕ್ಕೆ ತರುವ ಪ್ರಾರ್ಥನೆ ಪ್ರೀತಿಯ ನೀಜವಾದ ವಿಧಾನ. ನಮ್ಮ ರಾಷ್ಟ್ರಪತಿ ಎ.ಪ್.ಜೆ. ಅಬ್ದುಲ್ ಕಲಾಮ್ ತುಂಬ ಬಡವರು, ಪೇಪರ್ ಮಾರಾಟ ಮಾಡಿ 10 ನೇ ತರಗತಿ ಒದಿದರು, ಮುಂದೆ ಪಿ.ಯು.ಸಿ. ಮಾಡಲು ಬಯಸಿದರು, ಅದಕ್ಕೆ ಮದ್ರಾಸಿನ ತ್ರಿಚಿಯ ಜೆಸುವೀಟ್ ಧರ್ಮಗುರುಗಳ ಸೈಂಟ್ ಜೋಸೆಫ್ ಕಾಲೇಜಿಗೆ ತೆರಳಿ, ನನಗೆ ಪಿ.ಯು.ಸಿ ಓದಬೇಕು ಅಂತಾ ಕೇಳಿಕೊಂಡರು, ಫೀಸು ಕಟ್ಟಲು ಹಣ ಇಲದಕ್ಕ್ಲೆ ಅವರನ್ನು ಭರ್ತಿ ಮಾಡಿಕೊಳ್ಳಲಿಲ್ಲ, ಆದರೆ ಅಬ್ದುಲ್ ಕಲಾಂ ಸಂಜೆ ವರೆಗೆ ಆ ಕಾಲೇಜಿನ ಆವರಣದಲ್ಲೆ ಚಿಂತೆಯಿಂದ ಒಡಾಡಿದರು, ಸಂಜೆ ಪ್ರಾರ್ಥನೆ ಮುಗಿಸಿ ಮೈದಾನಕ್ಕೆ ಬಂದ ಕಾಲೇಜಿನ ಪ್ರಾಂಶುಪಾಲರಾದ ಫಾ| ತೋಮಸ್ ಸಿಕ್ವೇರಾ (ನಮ್ಮ ಮಂಗಳೂರಿನವರು) ಹುಡುಗ ಅಬ್ದುಲ್ ಕಲಾಮ್ ನನ್ನು ನೋಡಿ ವಿಚಾರಿಸಿ, ತಮ್ಮ ಪರಿಸ್ಥಿತಿಯನ್ನು ತಿಳಿಸಿದರು, ಅದನ್ನು ಕೇಳಿ ನೀನು ನಾಳೆ ಬಾ, ಎಂದು ಮರು ದಿನ ಬಂದಾಗ, ಅಬ್ದುಲ್ ಕಲಾಮ್ ಹತ್ತಿರ ಚೀಟಿ ಕೊಟ್ಟು ಆಫಿಸಿಗೆ ಕಳುಹಿಸುತ್ತಾರೆ, ಅದರಲ್ಲಿ ಈ ಹುಡುಗನನ್ನು ಕಾಲೇಜಿಗೆ ಸೇರಿಸಿಕೊಳ್ಳಿ, ಹಾಗೇ ಸೇರಿಸಿಕೊಳ್ಳುತ್ತಾರೆ, ಅಷ್ಟು ಮಾತ್ರವಲ್ಲ, ಅವನಿಗೆ ಹೋಸ್ಟೆಲನಲ್ಲಿ ಅವಕಾಶ ನೀಡಿ, ಇಷ್ಟೇ ಅಲ್ಲ, ತಿಂಗಳಿಗೊಂದು ಸಲ ಈ ಅಬ್ದುಲ್ ಕಮಾಮನನ್ನು ಭೇಟಿ ಮಾಡಿ ಪೆÇೀಸ್ಟ್ ಕವರ್ ಕೊಟ್ಟು ನಿನ್ನ ತಂದೆ ತಾಯಿಗೆ ಪತ್ರ ಬರೆ, ನೀನು ನಿನ್ನ ತಂದೆ ತಾಯಿ ಸಂಬಂಧ ಇಟ್ಟುಕೊಳ್ಳಬೇಕು ಎಂದು ತಿಳಿಸುತಿದ್ದರು. ಆಮೇಲೆ ಅವರು ಅಲ್ಲಿ ಪದವಿ ಮುಗಿಸಿದರು, ಬೇರೆ ಬೇರೆ ಪದವಿ ಪಡೆದರು, ವಿಜ್ಞಾನಿ ಆದರು, ನಂತರ ರಾಷ್ಟ್ರಪತಿ ಆದರು, ಅವರು ಈ ರಾಷ್ಟ್ರಪತಿ ಪದವಿ ಸ್ವಿಕಾರ ಮಾಡುವಾಗ ಜೆಸುವೀಟ್ ಧರ್ಮಗುರುಗಳಿಗೆ ಆ ಸಂಭ್ರಮದಲ್ಲಿ ಪಾಲ್ಗೊಳಲ್ಲು ಕರೆಯೋಲೆ, ವಿಶೇಷವಾಗಿ ಫಾ|ಸಿಕ್ವೇರಾರವರಿಗೆ ನೀಡುತ್ತಾರೆ ರಾಷ್ಟ್ರಪತಿ ಪದವಿ ಗ್ರಹಣ ಮಾಡುವಾಗ ಫಾ|ಸಿಕ್ವೇರಾರವರವರನ್ನು ಕಾಣದೆ, ಅವರನ್ನು ಕೇಳಿದಾಗ ಅವರು ದೈವಾಧಿನರಾಗಿದ್ದಾರೆ ಎಂದು ತಿಳಿಸುತ್ತಾರೆ, ಮುಂದೆ ಮದ್ರಾಸಿಗೆ ಬಂದಾಗ, ಅವರ ಸಮಾಧಿಯ ಬಳಿ ತೆರಳಿ “ಫಾದರ್ ಎದ್ದೇಳಿ ನಿಮ್ಮ ಅಬ್ದುಲ್ ಕಲಾಮ್ ಬಂದಿದ್ದಾನೆ” ಎಂದು ಮರುಗುತ್ತಾರೆ, ಇದೇ ನೀಜವಾದ ಪ್ರಾರ್ಥನೆ ಮತ್ತು ಪ್ರೀತಿ, ಅದಕ್ಕೆ ಯೇಸು ಕ್ರಿಸ್ತರ 2025 ನೇ ವರ್ಷದ ಉತ್ಸವಕ್ಕೆ ಪ್ರಾರ್ಥನೆಯ ವರ್ಷ ಎಂದು ನಮಗೆ ಪ್ರಾರ್ಥನೆಯನ್ನು ಕಾರ್ಯರೂಪಕ್ಕೆ ತರಲು ಪೆÇೀಪ್ ಫ್ರಾನ್ಸಿಸ್ ಕರೆ ಕೊಟ್ಟಿದ್ದಾರೆ. ಗುಂಡಿಟ್ಟು ಕೊಲ್ಲಬೇಕೆಂದಿಲ್ಲ, ನಾಲಿಗೆಯಿಂದ ಕೊಲ್ಲ ಬಹುದು, ಆದರೆ ಸಂತ ಅಂತೋನಿಯವರ ನಾಲಿಗೆ ಪವಿತ್ರವಾದದ್ದು, ಅವರು ಹೇಗೆ ನುಡಿಯುತಿದ್ದರೊ, ಅದರಂತೆ ಅವರು ನೆಡದರು ಅವರಂತೆ ನಾವು ಜೀವಿಸೋಣ ” ಎಂದು ಅವರು ಪ್ರವಚನ ನೀಡಿದರು.
ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅತಿ ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ”ಇದು ನಮಗೆ ಪ್ರಾರ್ಥನೇಯ ವರ್ಷ, ನಾವು ನಮ್ಮ ದಿನ ನಿತ್ಯದ ಪ್ರಾರ್ಥನೆ ಜಪಗಳನ್ನು ಮಾಡುವ, ಪವಿತ್ರ ಪುಸ್ತಕವನ್ನು ಓದಿ ಅಧ್ಯಾತ್ಮಿಕೆಯನ್ನು ಹೆಚ್ಚಿಸೋಣ, ನಮ್ಮಲ್ಲಿನ ಮನಸ್ಥಾಪ ನಿಲ್ಲಿಸೋಣ, ರಾಜಿ ಸಂಧಾನ ಮಾಡಿಕೊಳ್ಳೋಣ, ಎರಡನೇ ವೆಟೀಕನ್ ವಿಶ್ವಸಭೆಯ ದಸ್ತಾವೇಜುಗಳನ್ನು ಒದಬೇಕು ಎಂದು ಸಂದೇಶ ನೀಡುತಾ, ಇಲ್ಲಿ ಅನಾಥರಿಗಾಗಿ ನಿರ್ಗತಿಕರಿಗೆ ಆಶ್ರಮವನ್ನು ಕಟ್ಟಲು ಆರಂಭಿಸೇದ್ದೆವೆ, ಅದಕ್ಕೆ ಸಹಾಕಾರ ನೀಡಬೇಕು, ಸಂತ ಅಂತೋನಿ ಬಡವರ ನಿರ್ಗತಿಕರ ಸಂತನಾಗಿದ್ದ, ಅವರ ಕೆಲಸ ನಾವು ಮುಂದುವರಿಸೋಣ” ಎಂದು ತಿಳಿಸಿದರು. ಕುಂದಾಪುರ ವಲಯದ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ಹಬ್ಬಕ್ಕೆ ಶುಭ ಕೋರಿದರು.
ಪುಣ್ಯ ಕ್ಷೇತ್ರಕ್ಕೆ ದಾನ ಮತ್ತು ಪೆÇೀಷಕತ್ವ, ಸಹಕರಿಸಿದವರಿಗೆ ಮೇಣದ ಬತ್ತಿಗಳನ್ನು ನೀಡಿ ಗೌರವಿಸಲಾಯಿತು. ಹಬ್ಬದ ಬಲಿ ಪೂಜೆಯಲ್ಲಿ ಕುಂದಾಪುರ ವಲಯದ ಹೆಚ್ಚಿನ ಧರ್ಮಗುರುಗಳು, ಇತರ ವಲಯದ ಧರ್ಮಗುರುಗಳು ಸಹಬಲಿದಾನವನ್ನು ಅರ್ಪಿಸಿದರು. ಧರ್ಮಭಗಿನಿಯವರು ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿದ್ದು ಇತರ ಜಿಲ್ಲೆಯವರು ಭಾಗವಹಿಸಿದ್ದ ಹಬ್ಬದಲ್ಲಿ, ಪುಣ್ಯ ಕ್ಷೇತ್ರದ ರೆಕ್ಟರ್ ವಂ|ಸುನೀಲ್ ವೇಗಸ್ ಧನ್ಯವಾದಗಳನ್ನು ಸಮರ್ಪಿಸಿದರು. ಉಡುಪಿ ಧರ್ಮಪ್ರಾಂತ್ಯದ ನಿಲಯದ ಧರ್ಮಗುರು ವಂ| ಸಿರಿಲ್ ಲೋಬೊ ಹಬ್ಬದ ಕಾರ್ಯಕ್ರಮಕ್ಕೆ ಸಹಕರಿಸಿದರು. ಸರ್ವರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಅಭಿವೃದ್ಧಿ ಸಂಸ್ಥೆ (ರಿ.) – ಕಲಾ ಕುಸುಮ ಪ್ರಶಸ್ತಿ ಪ್ರದಾನ 2024
ಹಂಗಾರಕಟ್ಟೆ : ಸಮಕಾಲೀನ ಸಮಾಜದ ಸ್ಥಿತಿಗತಿಯಲ್ಲಿ ನಾವೆಲ್ಲ ಕಲಿತು-ಬೆರೆತು ಅನನ್ಯತೆಯನ್ನು ಸಾಧಿಸಬೇಕಾಗಿದೆ. ಮೌಲ್ಯಗಳು ಕಟ್ಟಾಜ್ಞೆ ಆಗುವುದಿಲ್ಲ. ಅದು ದಿನೇ ದಿನೇ ರೂಢಿಸಿಕೊಳ್ಳುವ ಪ್ರಕ್ರಿಯೆಯಾಗಿದ್ದು ನಾವುಗಳು ಸನ್ನಿವೇಶವನ್ನು ರೂಪಿಸಿಕೊಡುವ ಮಹತ್ತರ ಕೆಲಸ ಮಾಡಬೇಕಾಗಿದೆ. ಮೌಲ್ಯ ಪ್ರಜ್ಞೆಯನ್ನು ಸಾಕ್ಷಾತ್ಕರಿಸಿಕೊಳ್ಳಲು ತಂದೆ, ತಾಯಿ, ಪಾಲಕರು, ಸಂಘ ಸಂಸ್ಥೆಯವರು ಕ್ರಿಯಾತ್ಮಕ ಹೆಜ್ಜೆ ಇಡುವಂತೆ ಮಗುವಿನಲ್ಲಿ ಅಂತರಂಗದ ತುಡಿತವನ್ನು ಪ್ರೇರೇಪಿಸುವುದಾಗಿದೆ ಎಂದು ರೊ| ಕೆ.ಆರ್. ನಾೈಕ್, ಸೂಪರ್ ಗ್ರೇಡ್ ಇಲೆಕ್ಟ್ರಿಕಲ್ ಕಂಟ್ರಾಕ್ಟರ್ ಹಂಗಳೂರು ಅವರು ಹೇಳಿದರು.
ಅವರು ಇತ್ತೀಚೆಗೆ ಅಭಿವೃದ್ಧಿ ಸಂಸ್ಥೆ (ರಿ.), ಬಾಳ್ಕುದ್ರು ಹಂಗಾರಕಟ್ಟೆ ಇದರ 14ನೇ ವಾರ್ಷಿಕೋತ್ಸವದ ಅಂಗವಾಗಿ ಸರಕಾರಿ ಪ್ರೌಢಶಾಲೆ, ಗುಂಡ್ಮಿ, ಸಾಸ್ತಾನ ಇಲ್ಲಿ ಹಮ್ಮಿಕೊಂಡ ‘ವ್ಯಕ್ತಿತ್ವ ವಿಕಸನ ಮತ್ತು ಜೀವನ ಮೌಲ್ಯಗಳು’ ಎಂಬ ಮಾಹಿತಿ ಶಿಬಿರ ಹಾಗೂ ಸಂಸ್ಥೆ ನೀಡುವ ಕಲಾ ಕುಸುಮ ಪ್ರಶಸ್ತಿ ಪ್ರಧಾನ ಮಾಡಿ ಮಗುವಿನಲ್ಲಿ ಮೌಲ್ಯಗಳು ರೂಢಿಗತವಾಗಿರುವುದು, ಅದನ್ನು ನಿರಂತರ ಬಳಸುವುದು, ಆಪ್ತ ಸಮಾಜದ ನಿರ್ಮಾಣವೇ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಸಭಾಧ್ಯಕ್ಷತೆಯನ್ನು ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸತೀಶ್ ಐತಾಳ್ ನಿರ್ವಹಿಸಿ ನಮ್ಮಲ್ಲಿ ಅಡಕವಾಗಿರುವ ಸೂಕ್ತ ಪ್ರತಿಭೆ ಅನಾವರಣಗೊಳ್ಳುವುದೇ ಅತೀ ಪ್ರಮುಖ ಘಟ್ಟವಾಗಿದ್ದು ನಮ್ಮ ದೈನಂದಿನ ಕ್ರಿಯೆಯಲ್ಲಿ ಅದನ್ನು ಅನುಷ್ಠಾನಗೊಳಿಸುವುದು ಗುರು-ಹಿರಿಯರಲ್ಲಿ ಗೌರವ, ಪ್ರೀತಿ ಮತ್ತು ಸ್ವಾಭಿಮಾನವನ್ನು ಪ್ರಕಟಿಸಬೇಕಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಬಾರ್ಕೂರಿನ ಖ್ಯಾತ ಉದ್ಯಮಿ ರಾಜಗೋಪಾಲ್ ನಂಬಿಯಾರ್ ಮಾತಾಡಿ ಮೌಲ್ಯ ಪ್ರಜ್ಞೆ ಮತ್ತು ಶಿಕ್ಷಣ ಪರಸ್ಪರ ಪೂರಕವಾಗಿದ್ದು ಅವಿನಾಭಾವ ಸಂಬಂಧ ಹೊಂದಿದೆ. ಮೌಲ್ಯಗಳಿಗೆ ಕ್ರಿಯಾ ಸ್ವರೂಪ ಕೊಡುವ ಕೆಲಸವನ್ನು ಶಿಕ್ಷಣವು ಮಾಡುತ್ತದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಮಂದಾರ ಶೆಟ್ಟಿ ಮಾತಾಡಿ ಇಂದಿನ ಸಾಮಾಜಿಕ ಸ್ಥಿತ್ಯಂತರ ಕಾಲಘಟ್ಟದಲ್ಲಿ ನಮ್ಮ ಜನಪದೀಯ ಸಂಸ್ಕøತಿ, ಜೀವನ ಕ್ರಮ, ನಡೆ ನುಡಿ, ಆಚಾರ-ವಿಚಾರ, ಆಹಾರ-ವಿಹಾರ, ಹಬ್ಬ ಹರಿದಿನಗಳು ತೀವ್ರ ಪಲ್ಲಟನೆಗೊಂಡಿದೆ. ನಮ್ಮ ಗುರಿಗಳನ್ನು ತಲುಪಲು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದೇವೆ. ಅದು ಅವರ ಭವಿಷ್ಯಕ್ಕೆ ಕಂಟಕವಾಗುವುದು ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ರಾಘವೇಂದ್ರ ಜಿ., ಶಾಲಾ ಮುಖ್ಯ ಶಿಕ್ಷಕರಾದ ಸತೀಶ್ ಐತಾಳ್, ಕಲಾ ಕುಸುಮ ಪ್ರಶಸ್ತಿ ವಿಜೇತರಾದ ಆವರ್ಸೆ ಶ್ರೀನಿವಾಸ ಮಡಿವಾಳ, ಸಂಪನ್ಮೂಲ ವ್ಯಕ್ತಿ ಗಿರೀಶ್ ಅಚ್ಲಾಡಿ, ಸಂಸ್ಥೆಯ ಕಾರ್ಯದರ್ಶಿ ರಮೇಶ್ ವಕ್ವಾಡಿ, ಪೋಷಕ ಪರಿಷತ್ ಸದಸ್ಯ ಗಣೇಶ್ ಗಾಣಿಗ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿ ಮಾತನಾಡಿ ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯ, ಸಾಮಾಜಿಕ ಮೌಲ್ಯ, ಸಾಂಸ್ಕøತಿಕ ಮೌಲ್ಯ ಹಾಗೂ ಮಾನವೀಯ ಮೌಲ್ಯಗಳ ಕುರಿತು ವಿಶೇಷ ಉಪನ್ಯಾಸ ನೀಡಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಅಲ್ಲದೇ ವಿದ್ಯಾರ್ಥಿಗಳು ಯಾವುದಾದರೊಂದು ಪ್ರವೃತ್ತಿ ಯಾ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮವನ್ನು ಕು| ವರ್ಷ ಸಾಲಿಗ್ರಾಮ ನಿರೂಪಿಸಿ ಶಾಲಾ ಮುಖ್ಯ ಶಿಕ್ಷಕ, ಸತೀಶ್ ಐತಾಳ್ ಸ್ವಾಗತಿಸಿ, ರಮೇಶ್ ವಕ್ವಾಡಿ ಪ್ರಸ್ತಾವನೆ ಮಾಡಿ ವಂದಿಸಿದರು. ಸುಮಾರು 185 ವಿದ್ಯಾರ್ಥಿಗಳು ಈ ಮಾಹಿತಿ ಶಿಬಿರದಿಂದ ಪ್ರಯೋಜನ ಪಡೆದರು.
ಕುಂದಾಪುರ:ಎಚ್.ಎಮ್.ಎಮ್, ವಿ.ಕೆ.ಆರ್ ಶಾಲೆಗಳಲ್ಲಿ ಶಿಕ್ಷಕ ಪುನಶ್ಚೇತನ ಕಾರ್ಯಾಗಾರ
ಕುಂದಾಪುರ (ಫೆ.15) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ. ಕೆ. ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳಲ್ಲಿ ಶಿಕ್ಷಕರಿಗಾಗಿ “ಕಲಿಕಾ ನ್ಯೂನ್ಯತೆಯ ಕಾರಣಗಳು” ಎಂಬ ವಿಷಯಾಧಾರಿತ ಶಿಕ್ಷಕ ಪುನಶ್ಚೇತನ ಕಾರ್ಯಾಗಾರ ಫೆಬ್ರವರಿ 13, ಮಂಗಳವಾರದಂದು ಜರುಗಿತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ, ಕೇರಳದ, ಕೊಚ್ಚಿನ್ನಲ್ಲಿ ಮಕ್ಕಳ ಮನಶಾಸ್ತ್ರಜ್ಞರು ಮತ್ತು ಹಿರಿಯ ಸಲಹೆಗಾರರಾಗಿರುವ ಡಾ. ಫಿಲಿಪ್ ಜಾನ್ ಆಗಮಿಸಿ, ಮಕ್ಕಳಲ್ಲಿ ಕಂಡುಬರುವ ಕಲಿಕಾ ನ್ಯೂನ್ಯತೆಗಳು, ಅದಕ್ಕೆ ಕಾರಣಗಳು ಮತ್ತು ಪರಿಹಾರೋಪಾಯಗಳನ್ನು ಬಹಳ ಮನೋಜ್ಞವಾಗಿ ಶಿಕ್ಷಕರಿಗೆ ಅರುಹಿದರು. ಕಾರ್ಯಾಗಾರದಲ್ಲಿ ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶುಭಾ ಕೆ ಎನ್ ಕಾರ್ಯಕ್ರಮ ನಿರೂಪಿಸಿದರು
ಎಚ್. ಎಮ್. ಎಮ್, ವಿ ಕೆ ಆರ್ ಶಾಲೆಯಲ್ಲಿ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರಿಂದ “ಮಕ್ಕಳೊಂದಿಗೆ ಮಾತು–ಕತೆ” ಕಾರ್ಯಾಗಾರ
ಕುಂದಾಪುರ ಫೆ. 15 : ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್. ಎಮ್. ಎಮ್. ಆಂಗ್ಲ ಮಾಧ್ಯಮ ಮತ್ತು ವಿ. ಕೆ ಆರ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳಲ್ಲಿ ಫೆಬ್ರವರಿ 12, ಸೋಮವಾರದಂದು 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಮಕ್ಕಳೊಂದಿಗೆ ಮಾತು–ಕತೆ” ಕಾರ್ಯಾಗಾರ ಜರುಗಿತು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕವಿ, ವಿದ್ವಾಂಸ, ನಿರ್ದೇಶಕ, ನಾಟಕಕಾರರೂ ಆಗಿರುವ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಆಗಮಿಸಿ, ಮಕ್ಕಳಿಗೆ ಅನೇಕ ಕಥೆಗಳನ್ನು ಬಹಳ ಅತ್ಯುತ್ತಮವಾದ ಭಾವಾಭಿನಯದ ಮೂಲಕ ಹೇಳಿದರು. ಉಪಾಧ್ಯಾಯರ ಕಥೆಗಳನ್ನು ಕೇಳುತ್ತಾ ಮಕ್ಕಳು ಸಂಭ್ರಮಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕ ಶ್ರೀನಿವಾಸ ಬೈಂದೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಕಂಡ್ಲೂರು ಸಂತ ಅಂತೋನಿ ನೂತನ ಚರ್ಚ್ ಕಟ್ಟಡ ಲೋಕಾರ್ಪಣೆ : ದೇವಾಲಯವು ಸ್ವರ್ಗದ ದ್ವಾರಗಳಾಗಿವೆ-ಬಿಷಪ್ ಜೆರಾಲ್ಡ್ ಲೋಬೊ
ಕುಂದಾಪುರ,ಫೆ.14: ಕಂಡ್ಲೂರು ಸಂತ ಅಂತೋನಿಯವರಿಗೆ ಸಮರ್ಪಿಸಲ್ಪಟ್ಟ ನೂತನ ಚರ್ಚ್ ಕಟ್ಟಡವನ್ನು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಇವರು ತಮ್ಮ ದಿವ್ಯ ಹಸ್ತದಿಂದ ಉದ್ಘಾಟಿಸಿ ಲೋಕಾರ್ಪಣೆ ಮಾಡಿದರು.
ಇದಕ್ಕೂ ಮೊದಲು ಚರ್ಚಿನ ಎದುರುಗಡೆ ನಿರ್ಮಾಣಗೊಂಡ ಮೇರಿ ಮಾತೆಯ ಗ್ರೊಟ್ಟೊವನ್ನು ಉಡುಪಿ ಧರ್ಮಪ್ರಾಂತ್ರದ ಮೊನ್ಸಿಂಝೊರ್ ಅ|ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್ ಆಶಿರ್ವವಚನ ಮಾಡಿ ಉದ್ಘಾಟನೆ ಮಾಡಿದರು.
ಚರ್ಚಿನ ನೂತನ ಕಟ್ಟಡಕ್ಕೆ 2019 ರಲ್ಲಿ ಶಂಕುಸ್ಥಾಪನೆ ಮಾಡಿದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ, ಈಗ ಪುರ್ಣಗೊಂಡ ನೂತನ ಚರ್ಚ್ ಕಟ್ಟಡವನ್ನು ಉದ್ಘಾಟನೆ ಮಾಡಿ ಆಶಿರ್ವಚಿಸಿ, ನೂತನ ಚರ್ಚ್ನ್ನು ಆಶಿರ್ವದಿಸುವ ಎಲ್ಲಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟು ಪವಿತ್ರ ಬಲಿದಾನದ ನೇತ್ರತ್ವನ್ನು ವಹಿಸಿಕೊಂಡು, ದಿವ್ಯ ಬಲಿದಾನವನ್ನು ಅರ್ಪಿಸಿ “ದೇವಾಲಯವು ದೇವರು ವಾಸಿಸುವ ಪವಿತ್ರ ಸ್ಥಳ, ಇದು ದೇವರ ಅಸ್ಥಿತ್ವವುಳ್ಳ ಜಾಗ ಇದು. ದೇವರು ನಮ್ಮ ಜತೆ ಇದ್ದು ನಮ್ಮ ಜತೆ ಜೀವಿಸುವ ಸ್ಥಳ. ದೇವಾಲಯವು ಸ್ವರ್ಗದ ದ್ವಾರವಾಗಿದೆ, ದೇವಾಲಯದ ದ್ವಾರದಿಂದ ಸರ್ವಶ್ವರನ ಮಹಿಮೆ ಪ್ರವೇಶಿಸಿ ದೇವಾಲಯದೊಳಗೆಲ್ಲ ತುಂಬುತ್ತದೆ, ಆದರಿಂದ ಇದು ಬಹು ಪವಿತ್ರ ಥಳವಾಗಿದೆ. ಆದರಿಂದ ನಾವೆಲ್ಲ ಈ ಥಳದಲ್ಲಿ ಭಯ ಭಕ್ತಿಯಿಂದ ನಮ್ಮನ್ನು ತೊಡಗಿಸಿಕೊಳ್ಳಬೇಕು’ ಎಂದು ಶುಭ ಸಂದೇಶ ನೀಡಿದರು.
ಈ ಪವಿತ್ರ ಆಶಿರ್ವಚನ ಮತ್ತು ಬಲಿದಾನದ ಕಾರ್ಯಕ್ರಮದಲ್ಲಿ ಕಂಡ್ಲೂರು ಚರ್ಚಿನ ಧರ್ಮಗುರು ವಂ|ಕೆನ್ಯೂಟ್ ಬಾರ್ಬೊಜಾ, ಕುಂದಾಪುರ ವಲಯ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ, ಮೊನ್ಸಿಂಝೊರ್ ಅ|ವಂ|ಫರ್ಡಿನಾಂಡ್ ಗೊನ್ಸಾಲ್ವಿಸ್, ಉಡುಪಿ ಧರ್ಮಪ್ರಾಂತ್ರದ ಛಾನ್ಸಲರ್ ಅ|ವಂ|ರೋಶನ್ ಡಿಸೋಜಾ, ಕುಂದಾಪುರ ವಲಯದ ಎಲ್ಲಾ ಚರ್ಚಿನ ಧರ್ಮಗುರುಗಳು, ಅತಿಥಿ ಧರ್ಮಗುರುಗಳು ಭಾಗಿಯಾದರು. ಧರ್ಮಗುರು ವಂ|ಸಿರಿಲ್ ಲೋಬೊ ಧಾರ್ಮಿಕ ಕಾರ್ಯಕ್ರಮವನ್ನು ನಿರೂಪಿಸಿದರು.
ನಂತರ ನೆಡದ ಸಭಾಕಾರ್ಯಕ್ರಮದಲ್ಲಿ ಚರ್ಚಿನ ಧರ್ಮಗುರು ವಂ|ಕೆನ್ಯೂಟ್ ಬಾರ್ಬೊಜಾ ಸ್ವಾಗತಿಸಿದರು. ಪಾಲನ ಮಂಡಳಿ ಕಾರ್ಯದರ್ಶಿ ಲವೀನಾ ಡೆಸಾ ವರದಿಯನ್ನು ವಾಚಿಸಿದರು, ಕಂಡ್ಲೂರು ಜಾಮಿಯಾ ಮಸೀದಿಯ ಇಮಾಮ್ ಮೌಲಾನ ಇಲಿಯಾಸ್ ನಾಡ್ವಿ ಇವರು ಸಂದೇಶ ನೀಡಿದರು. ಅ|ವಂ| ಸ್ಟ್ಯಾನಿ ತಾವ್ರೊ ಈ ಚರ್ಚಿನ ಕಾಮಗಾರಿಗಾಗಿ ನಮ್ಮ ವಂದನೀಯ ಬಿಷಪ್ ಜೆರಾಲ್ಡ್ ತುಂಬ ಮುತುವರ್ಜಿಯನ್ನು ವಹಿಸಿಕೊಂಡಿದ್ದರೆಂದು ತಿಳಿಸಿ, ನಿಮ್ಮ ಚರ್ಚಿನಲ್ಲಿ ನಮ್ಮ ಉಡುಪಿ ಧರ್ಮಪ್ರಾಂತ್ಯದ ಅತ್ಯಂತ ಹಿರಿಯ ಚರ್ಚ್ ಆದ ಕುಂದಾಪುರ ಚರ್ಚಿನ ಪಾಲಕಿ ರೋಜರಿಮಾತೆಯ ವರ್ಣಚಿತ್ರವನ್ನು ಹಾಕಿ, ರೋಜರಿ ಮಾತೆ ಈ ಕಡೆಯ ಎಲ್ಲಾ ಚರ್ಚಗಳ ಮಾತೆಯೆಂದು ಬಿಂಬಿಸಿದಕ್ಕೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಚರ್ಚಿನಲ್ಲಿ ಹಿಂದೆ ಸೇವೆ ನೀಡಿದ ಧರ್ಮಗುರುಗಳನ್ನು, ಇತರ ಧರ್ಮಗುರುಗಳನ್ನು, ಕಟ್ಟಡ ರಚನೆಯಲ್ಲಿ ತೊಡಗಿಸಿಕೊಂಡವರನ್ನು ಸನ್ಮಾನಿಸಲಾಯಿತು. ಚರ್ಚಿನ ಧರ್ಮಗುರು ವಂ| ವಂ|ಕೆನ್ಯೂಟ್ ಬಾರ್ಬೊಜಾ ಇವರನ್ನು ಉಡುಪಿ ಧರ್ಮಪ್ರಾಂತ್ಯದ ಪರವಾಗಿ ಬಿಷಪರು ಸನ್ಮಾನಿಸಿದರು. ಬಿಷಪ್ ಜೆರಾಲ್ಡ್ ಲೋಬೊರವರನ್ನು ಫಾ|ಸ್ಟ್ಯಾನಿ ತಾವ್ರೊ ನೇತ್ರತ್ವದಲ್ಲಿ ಗೌರವಿಸಲಾಯಿತು. ಬಿಶಪರು “ಈ ನೂತನ ಕಟ್ಟಡ ಪೂರ್ಣಗೊಂದಿದಕ್ಕೆ ಸಂತೋಷವಾಗಿದೆ, ನಿಮ್ಮ ಶ್ರಮ ತ್ಯಾಗ ಮತ್ತು ಇತರ ಚರ್ಚುಗಳ ಉದಾರ ಮನಸ್ಸಿನವರಿಂದ ಇದು ಸಾಕಾರಗೊಂಡಿದೆ” ಎಂದು ಶುಭಕೋರಿ ಅಭಿನಂದಿಸಿದರು.ವೆನೀಶಾ ಡಿಸೋಜಾ ಮತ್ತು ಜ್ಯೋತಿ ಬುತೆಲ್ಲೊ ನಿರೂಪಿಸಿದರು. ಪಾಲನ ಮಂಡಳಿ ಉಪಾಧ್ಯಕ್ಷ ವಿನೋದ್ ಡಿಸೋಜಾ ವಂದಿಸಿದರು.