ಶ್ರೀನಿವಾಸಪುರ 1 : ಮಕ್ಕಳಿಗೆ ಮೂರು ದಿನ ನೀಡುವ ಬದಲು ಎಲ್ಲಾ ವಾರದ 6 ದಿನಗಳು ನೀಡಿದರೆ ಒಳ್ಳೆಯದೆಂದು ಸಲಹೆ ನೀಡಿ ಸರ್ಕಾರಿ ಶಾಲೆ ಮಕ್ಕಳಿಗೆ ಯಾವುದೇ ರೀತಿಯ ಪೌಷ್ಠಿಕಾಂಶಗಳಿಂದ ವಂಚಿತರಾಗಬಾರದೆಂದು ಕಾರ್ಯಕ್ರಮ ರೂಪಿಸಿರುವ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆ ಎಂ ಎಫ್ ಸಮಸ್ಥೆಗೆ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಧನ್ಯವಾದಗಳು ತಿಳಿಸಿದರು
ಪಟ್ಟಣದ ತ್ಯಾಗರಾಜ ಬಡವಾಣೆಯಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಶಾಲಾ ಶಿಕ್ಷಣ ಇಲಾಖೆ, ಪ್ರದಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಿಂದ, ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಮತ್ತು ಕೆ ಎಂ ಎಫ್ ಇವರ ಸಹಯೋಗದಲ್ಲಿ ಮದ್ಯಾಹ್ನ ಉಪಹಾರ ಯೋಜನೆಯಡಿ ರಾಗಿಮಾಲ್ಟ್ ಹಾಲಿನ ಮಿಶ್ರಣವನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ತಿನ್ನುವ ಆಹಾರದಲ್ಲಿ ಪೌಷ್ಟಿಕ ಆಹಾರವು ಕಡಿಮೆ ಯಾಗಿರುವದರಿಂದ ಕೆಲ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆ ಕಾಣಿಸುತ್ತಿರಿವುದರಿಂದ ವಿದ್ಯಾರ್ಥಿಗಳು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನುತ್ತಾ ವಿದ್ಯಾರ್ಥಿಗಳು ಹೆಚ್ಚು ಕುರುಕು ತಿಂಡಿಗಳನ್ನು ತಿನ್ನದೇ ಪೌಷ್ಟಿಕ ಆಹಾರಗಳನ್ನು ತಿನ್ನುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 1 ರಿಂದ 10 ನೇ ತರಗತಿ ಎಲ್ಲಾ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕ ಆಹಾರವಾಗಿ ಬಿಸಿ ಹಾಲಿನೊಂದಿಗೆ ಮಿಶ್ರಣಗೊಳಿಸಿ ಶಾಲಾ ಮಕ್ಕಳಿಗೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ನಂತರ ಶಾಲೆಯ ಅಂದಾಜು 4 ಲಕ್ಷ ವೆಚ್ಚದಲ್ಲಿ ಮಂಜೂರಾತಿಯಾಗಿರುವ ಕಾಂಪೌಂಡ್ ನಿರ್ಮಾಣಕ್ಕೂ ಸಹ ಶಾಸಕರು ಭೂಮಿ ಪೂಜೆಯನ್ನು ನೆರವೇರಿಸಿದರು.
ಇಒ ಎಸ್.ಶಿವಕುಮಾರಿ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ, ಅಕ್ಷರದಾಸೋಹ ಸಹಾಯಕಿ ಸುಲೋಚನ, ಎಸ್ಡಿಎಂಸಿ ಅಧ್ಯಕ್ಷ ಆನಂದರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಎಸ್.ಶ್ರೀನಿವಾಸಪ್ಪ, ಪ್ರೌಡಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಸುಬ್ರಮಣಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಯ್ಯಾರೆಡ್ಡಿ, ಗುತ್ತಿಗೆದಾರ ಶ್ರೀನಿವಾಸರೆಡ್ಡಿ, ಮುಖ್ಯ ಶಿಕ್ಷಕ ಎಂ.ಬೈರೇಗೌಡ, ಶಿಕ್ಷಕರಾದ ಗೌರಮ್ಮ, ರೆಡ್ಡೆಮ್ಮ, ಶ್ರೀದೇವಿ, ಗೀಂತಾಂಜಲಿ, ಲೀಲಾವತಿ, ಗೀತಶ್ರೀ, ಫರ್ವೀನ್, ರಾಮಚಂದ್ರಪ್ಪ, ನಾಗರಾಜ್, ನಾರಾಯಣಸ್ವಾಮಿ ಇದ್ದರು.
Month: February 2024
24 ರಂದು ಮಂಗಳೂರು ನಗರದಲ್ಲಿ ಫಾತಿಮಾ ರಲಿಯಾ ಕವನ ಸಂಕಲನ ಬಿಡುಗಡೆ
ಶನಿವಾರ 24 ರ ಸಂಜೆ ಮೂರು ಗಂಟೆಗೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಫಾತಿಮಾ ರಲಿಯಾ ಅವರ ಕವನ ಸಂಕಲನ ‘ಅವಳ ಕಾಲು ಸೋಲದಿರಲಿ’ ಬಿಡುಗಡೆಯಾಗಲಿದೆ. ಖ್ಯಾತ ಸಾಹಿತಿ ಡಾ. ಪುರುಷೋತ್ತಮ ಬಿಳಿಮಲೆಯವರು ಪುಸ್ತಕ ಬಿಡುಗಡೆ ಮಾಡಲಿದ್ದು, ಪುಸ್ತಕದ ಕುರಿತು ಸುಧಾ ಆಡುಕಳ ಮಾತಾಡಲಿದ್ದಾರೆ. ವಿಲ್ಸನ್ ಕಟೀಲ್ ಮತ್ತು ಮುಆದ್ ಜಿ.ಎಂ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಪುಸ್ತಕವನ್ನು ‘ಉಡುಗೊರೆ ಪ್ರಕಾಶನ’ ಪ್ರಕಟಿಸಿದ್ದು ಇದು ಫಾತಿಮಾ ರಲಿಯಾರಚರ ಮೂರನೇ ಕೃತಿಯಾಗಿದೆ. ಹಿಂದಿನ ಎರಡು ಕೃತಿಗಳಾದ ‘ಕಡಲು ನೋಡಲು ಹೋದವಳು’ ಮತ್ತು ‘ಒಡೆಯಲಾರದ ಒಡಪು’ ಅನ್ನು ಕ್ರಮವಾಗಿ ಅಹರ್ನಿಶಿ ಪ್ರಕಾಶನ ಮತ್ತು ಸಂಕಥನ ಪ್ರಕಟಿಸಿದೆ. ಮೂರೂ ಕೃತಿಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಎಚ್.ಎಮ್.ಎಮ್, ವಿ.ಕೆ.ಆರ್ ಶಾಲೆಯಲ್ಲಿ “ಸಿರಿಗನ್ನಡಂ ಗೆಲ್ಗೆ” ಕಾರ್ಯಾಗಾರ
ಕುಂದಾಪುರ (ಫೆ.22) : ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಎಚ್.ಎಮ್.ಎಮ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ವಿ.ಕೆ.ಆರ್ ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢಶಾಲೆಗಳ 6, 7 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗಾಗಿ “ಸರಿಗನ್ನಡಂ ಗೆಲ್ಗೆ” ಎಂಬ ವಿಷಯಾಧಾರಿತ ಸಂವಾದ ಕಾರ್ಯಾಗಾರ ಜರುಗಿತು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಂಗ ಸಂಸ್ಥೆಯಾಗಿರುವ ಡಾ.ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ರೇಷ್ಮಾ ಶೆಟ್ಟಿ ಆಗಮಿಸಿ, ಕನ್ನಡ ಭಾಷೆಯ ಹುಟ್ಟು, ಬೆಳವಣಿಗೆ, ಕನ್ನಡದ ಸೊಗಡು, ಸೊಬಗು, ಮಹತ್ವ ಮತ್ತು ವಿಶಿಷ್ಠತೆಗಳನ್ನು ಬಹಳ ಮಾರ್ಮಿಕವಾಗಿ ವಿದ್ಯಾರ್ಥಿಗಳಿಗೆ ಅರುಹಿದರು. ಸಂಸ್ಥೆಯ ಪ್ರಾಂಶುಪಾಲರಾದ ಡಾ. ಚಿಂತನಾ ರಾಜೇಶ್ ಮತ್ತು ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಶಿಕ್ಷಕಿ ಆಶಾ ವಿ ಕಾರ್ಯಕ್ರಮ ನಿರೂಪಿಸಿದರು.
ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ ಹಾಗೂ ಮೆರಿಟ್-ಕಂ-ಮೀನ್ಸ್ ಶುಲ್ಕ ಮರುಪಾವತಿ ವಿದ್ಯಾರ್ಥಿವೇತನ ಅರ್ಜಿ ಆಹ್ವಾನ
ಕೋಲಾರ : ಶೈಕ್ಷಣಿಕ ಸಾಲಿನಲ್ಲಿ ಪಿ.ಯು.ಸಿ, ಡಿಪ್ಲೋಮಾ, ತಾಂತ್ರಿಕ ಮತ್ತು ವೃತ್ತಿಪರ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಕರ್ನಾಟಕ ರಾಜ್ಯದ ಮತೀಯ ಅಲ್ಪಸಂಖ್ಯಾತರ ಸಮುದಾಯ ವರ್ಗದವರಾದ ಮುಸ್ಲಿಂ, ಜೈನ್, ಕ್ರಿಶ್ಚಿಯನ್, ಸಿಖ್, ಭೌಧ ಮತ್ತು ಪಾರ್ಸಿ ಮತ್ತು ಬೌದ್ದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ ಹಾಗೂ ಮೆರಿಟ್-ಕಂ-ಮೀನ್ಸ್ ಶುಲ್ಕ ಮರುಪಾವತಿ ವಿದ್ಯಾರ್ಥಿವೇತನ ನೀಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ರಾಜ್ಯದ ನಿವಾಸಿಯಾಗಿರಬೇಕು, ಹಿಂದಿನ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು, ಮೆಟ್ರಿಕ್ ನಂತರದ (ಶುಲ್ಕ ಮರುಪಾವತಿ) ಗಾಗಿ ಕಟುಂಬದ ವಾರ್ಷಿಕ ವರಮಾನ ಒಟ್ಟು ಆದಾಯ ರೂ. 2 ಲಕ್ಷಗಳನ್ನು ಮೀರಿರಬಾರದು ಮತ್ತು ಮೆರಿಟ್-ಕಂ-ಮೀನ್ಸ್(ಶುಲ್ಕ ಮರುಪಾವತಿ) ಗಾಗಿ ರೂ.2.5 ಲಕ್ಷಗಳನ್ನು ಮೀರಿರಬಾರದು.
ಅಲ್ಪಸಂಖ್ಯಾತರ ಅರ್ಹ ವಿದ್ಯಾರ್ಥಿಗಳು ರಾಜ್ಯ ವಿದ್ಯಾರ್ಥಿವೇತನ (ಎಸ್.ಎಸ್.ಪಿ) ವೆಬ್ಸೈಟ್ https://ssp.postmatric.karnataka.gov.in/ ನಲ್ಲಿ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ವೆಬ್ ಸೈಟ್ www.domkarnataka.nic.in ಹಾಗೂ ಜಿಲ್ಲಾ ಕಛೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ನೆಲ ಮಹಡಿ, ಮೌಲಾನಾ ಆಜಾದ್ ಭವನ, ಶ್ರೀ ದೇವರಾಜ್ ಅರಸು ಬಡಾವಣೆ, 2ನೇ ಬ್ಲಾಕ್, ಟಮಕ ವಾರ್ಡ್ ನಂ.1, ಕೋಲಾರ-563103 ದೂರವಾಣಿ ಸಂ:08152-295257 ಅನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂವಿಧಾನ ಜಾಗೃತಿ ಜಾಥಾ ಕುರಿತು ಜಿಲ್ಲಾಧಿಕಾರಿ ಅಕ್ರಂ ಪಾಷ ವಿಶೇಷ ಸಂದರ್ಶನ
ಕೋಲಾರ : ಕೋಲಾರ ಜಿಲ್ಲೆಯಲ್ಲಿ ಜ. 26ರಿಂದ ಸಂವಿಧಾನ ಜಾಗೃತಿ ಜಾಥಾ ಆರಂಭವಾಗಿದ್ದು, 120ಕ್ಕೂ ಅಧಿಕ ಗ್ರಾಮ ಪಂಚಾಯಿತಿಗಳಲ್ಲಿ ಸಂಚರಿಸಿದೆ. ಹೋದ ಕಡೆಯಲ್ಲೆಲ್ಲಾ ಜನರಿಂದ ಅಭೂತಪೂರ್ವವಾದ ಸ್ವಾಗತ ಸಿಕ್ಕಿದೆ. ಕೋಲಾರ ಜಿಲ್ಲೆಯ ಸಂವಿಧಾನ ಜಾಗೃತಿ ಜಾಥಾದ ವಿಶೇಷತೆಗಳ ಕುರಿತು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನೀಡಿದ ವಿಶೇಷ ಸಂದರ್ಶನ ಇಲ್ಲಿದೆ.
- ಸಂವಿಧಾನ ಜಾಗೃತಿ ಜಾಥಾ ನಡೆಸುವ ಉದ್ದೇಶ ಏನು?
ಸಂವಿಧಾನದ ಕುರಿತು ಜಾಗೃತಿ ಮೂಡಿಸುವುದೇ ಇದರ ಮೂಲ ಉದ್ದೇಶ. ಮುಖ್ಯವಾಗಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ನಮ್ಮ ಸಂವಿಧಾನ ಇಡೀ ಪ್ರಪಂಚದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದೆ. ಸರ್ವರಿಗೂ ನ್ಯಾಯವನ್ನು ನೀಡುವ, ಎಲ್ಲರನ್ನೂ ಒಳಗೊಳ್ಳುವ ಸಂವಿಧಾನವಾಗಿದೆ. ಈ ಸಂವಿಧಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಸಂವಿಧಾನದ ಶ್ರೇಷ್ಠತೆಯು ಮರೆಗೆ ಸಂದುತ್ತಿರುವ ಈ ಹೊತ್ತಿನಲ್ಲಿ ಇಂತಹದ್ದೊಂದು ಜಾಥಾ ಅಗತ್ಯ ಮಾತ್ರವಲ್ಲ ಅವಶ್ಯಕತೆಯೂ ಆಗಿತ್ತು.
- ಎಲ್ಲ ಜಿಲ್ಲೆಗಳಲ್ಲೂ ಈ ಜಾಥಾ ನಡೆಯುತ್ತಿದೆ. ನಮ್ಮ ಕೋಲಾರ ಜಿಲ್ಲೆಯಲ್ಲಿ ನಡೆಯುತ್ತಿರುವ ಜಾಥಾದ ವಿಶೇಷತೆ ಏನು?
ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಜಾಥಾ ನಡೆಯುತ್ತಿದೆ. ಆದರೆ, ಕೋಲಾರ ಜಿಲ್ಲೆ ಹೇಗೆ ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವೈಶಿಷ್ಟತೆಗಳನ್ನು ಹೊಂದಿದೆಯೋ ಹಾಗೆಯೇ ಸಂವಿಧಾನ ಜಾಗೃತಿ ಜಾಥಾದಲ್ಲೂ ಕೂಡ ತನ್ನದೆಯಾದ ವೈಶಿಷ್ಟ್ಯತೆಯನ್ನು ಹೊಂದಿದೆ. ಸಂವಿಧಾನ ರಚನೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ಅಗಾಧ ಮತ್ತು ಅನನ್ಯವಾದುದು. ವಿಶ್ವದಲ್ಲೆ ಶ್ರೇಷ್ಠ ಸಂವಿಧಾನ ಭಾರತಕ್ಕೆ ದೊರೆಯುವಲ್ಲಿ ಅವರ ಪಾತ್ರ ಮಹತ್ವಪೂರ್ಣವಾದುದು. ಅವರ ಕೊಡುಗೆ ಹಾಗೂ ಅವರಿಗೆ ಜೊತೆಯಾಗಿ ಸಹಕಾರ ನೀಡಿದ ಸಂವಿಧಾನ ಕರಡು ರಚನಾ ಸಮಿತಿಯ ಮೈಸೂರು ಭಾಗದ ಪ್ರತಿನಿಧಿ ಶ್ರೀ ಟಿ ಚನ್ನಯ್ಯನವರು ಕೋಲಾರದವರು ಎಂಬುದೇ ಹೆಮ್ಮೆ
- ಜಾಥಾದಲ್ಲಿ ವಿದ್ಯಾರ್ಥಿಗಳನ್ನು ಒಳಗೊಳ್ಳಲಾಗುತ್ತಿದೆಯೇ?
ಈಗಾಗಲೇ ಸಂವಿಧಾನದ ಕುರಿತು ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗಿಯಾಗಿದ್ದು, ವಿಜೇತರಾದವರನ್ನು ಗೌರವಿಸಲಾಗುತ್ತಿದೆ.
- ಜಾಥಾ ಕೇವಲ ಮೆರವಣಿಗೆಗೆ ಮಾತ್ರ ಸೀಮಿತವಾಗಿದೆಯೇ?
ಸಂವಿಧಾನ ಜಾಗೃತಿ ಜಾಥಾ ಎಂದರೆ ಅದು ಕೇವಲ ಮೆರವಣಿಗೆಯಷ್ಟೇ ಅಲ್ಲ. ಅದೊಂದು ಬಗೆಯ ಅರಿವಿನ ಜಾಥಾ. ಸಂವಿಧಾನ ಕುರಿತು ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಜಾಥಾ. ಜೊತೆಗೆ ಪ್ರಧಾನ ಆಕರ್ಷಣೆಯಾದ ಸ್ಥಬ್ದ ಚಿತ್ರದಲ್ಲಿ ‘ಎಲ್ಇಡಿ’ ಪರದೆ ಇದ್ದು, ಸಂವಿಧಾನದ ಮಹತ್ವ ಕುರಿತ ವಿಡಿಯೊಗಳನ್ನು ಪ್ರದರ್ಶಿಸಲಾಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಹಾಗೂ ಬುದ್ಧ ಅವರ ಭಾವಚಿತ್ರಗಳನ್ನು ಇರಿಸಿ, ಅವರ ಸಂದೇಶಗಳನ್ನು ಬರೆಯಲಾಗಿದೆ. ಸಂವಿಧಾನದ ಪ್ರಸ್ತಾವನೆಯ ಪ್ರತಿಗಳನ್ನು ವಿತರಿಸಲಾಗುತ್ತಿದೆ. ಸಂಪನ್ಮೂಲ ವ್ಯಕ್ತಿಗಳಿಂದ ಸಂವಿಧಾನದ ಕುರಿತು ವಿಶೇಷ ಉಪನ್ಯಾಸ ನೀಡಲಾಗುತ್ತಿದೆ.
- ಜಾಥಾಕ್ಕೆ ಕೋಲಾರದ ಜನರಿಂದ ಸ್ಪಂದನೆ ಹೇಗಿದೆ?
ನಿಜಕ್ಕೂ ಜಾಥಾಕ್ಕೆ ಜನರು ಈ ಪ್ರಮಾಣದಲ್ಲಿ ಸ್ಪಂದಿಸುತ್ತಾರೆ ಎಂದುಕೊಂಡಿರಲಿಲ್ಲ. ಅನೇಕ ಗ್ರಾಮ ಪಂಚಾಯಿತಿಗಳಲ್ಲಿ ಜನರು ಸಾಂಪ್ರದಾಯಿಕ ಹಾಗೂ ವಿವಿಧ ಕಲಾತಂಡಗಳೊಂದಿಗೆ ಅದ್ದೂರಿಯ ಸ್ವಾಗತ ಕೋರಿದ್ದಾರೆ. ಬೈಕ್, ಸೈಕಲ್, ಆಟೊ ರ್ಯಾಲಿ ಮೂಲಕ ಭವ್ಯ ಸ್ವಾಗತ ನೀಡಿದ್ದಾರೆ. ಜನರೇ ಸ್ವಯಂಪ್ರೇರಿತರಾಗಿ ಬಂದು ಜಾಗೃತಿ ರಥವನ್ನು ವೀಕ್ಷಿಸಿದ್ದಾರೆ. ಮತ್ತೂ ವಿಶೇಷ ಸಂಗತಿ ಎಂದರೆ, ಜಾಥಾದಲ್ಲಿ ನಡೆಯುವ ಸಂವಿಧಾನ ಕುರಿತ ವಿಶೇಷ ಉಪನ್ಯಾಸ ಮುಗಿಯುವವರೆಗೂ ಇದ್ದು, ನಂತರ ಹೊರಡುತ್ತಿದ್ದಾರೆ. ಜನರಿಂದ ಇದುವರೆಗೂ ನಿರೀಕ್ಷೆಗೂ ಮೀರಿದ ಸ್ಪಂದನೆ ದೊರೆತಿದೆ. ಜಾಥಾದ ಯಶಸ್ಸು ಕೋಲಾರದ ಸಮಸ್ತ ಸಜ್ಜನ ನಾಗರಿಕ ಬಂಧುಗಳಿಗೆ ಸಲ್ಲಬೇಕಿದೆ.
ಕೋಲಾರ ಜಿಲ್ಲೆಯಲ್ಲಿ ಸಂಚರಿಸುತ್ತಿರುವ ಸಂವಿಧಾನ ಜಾಗೃತಿ ಜಾಥಾದ ಸ್ತಬ್ದಚಿತ್ರ ಜಾಥಾದಿಂದ ಏನಾದರೂ ಪ್ರಯೋಜನವಾಗುತ್ತದೆಯೆ?
ಜಾಥಾದಿಂದ ಹೆಚ್ಚಿನ ಪ್ರಯೋಜನ ವಿಶೇಷವಾಗಿ ಯುವ ಸಮುದಾಯದವರಿಗೆ ಆಗುತ್ತಿದೆ. ಹಿರಿಯರಿಗೆ ಸಂವಿಧಾನದ ಕುರಿತು ಒಂದಿಷ್ಟು ತಿಳಿವಳಿಕೆ ಇದೆ. ಆದರೆ, ನಮ್ಮ ಯುವ ತಲೆಮಾರಿಗೆ ಈ ಕುರಿತು ಜಾಗೃತಿ ತೀರಾ ಕಡಿಮೆ ಇದೆ. ಅವರಿಗೆ ಅವರ ಮೂಲಭೂತ ಹಕ್ಕುಗಳು ಹಾಗೂ ಮಾಡಲೇ ಬೇಕಾದ ಕರ್ತವ್ಯಗಳನ್ನು ಕುರಿತು ಈ ಜಾಥಾದ ಮೂಲಕ ಹೇಳಲಾಗುತ್ತಿದೆ. ಜೊತೆಗೆ, ಸಂವಿಧಾನದಡಿ ಸಿಗಬಹುದಾದ ಸೌಲಭ್ಯಗಳ ಕುರಿತೂ ಮಾಹಿತಿ ನೀಡಲಾಗುತ್ತಿದೆ.
ಜಾಥಾ ಎಲ್ಲಿಯವರೆಗೆ ನಡೆಯುತ್ತದೆ? ಮುಕ್ತಾಯ ಹೇಗಿರುತ್ತದೆ.
ಕೋಲಾರದಲ್ಲಿ ಫೆ. 23ಕ್ಕೆ ಜಾಥಾ ಮುಗಿಯುತ್ತದೆ. 25ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಸಮಾವೇಶಕ್ಕೆ ಸ್ಥಬ್ದ ಚಿತ್ರ ತೆರಳಲಿದೆ.
ಜೆರೋಸಾ ಹೈಸ್ಕೂಲ್ ಪ್ರಕರಣ:ಪೋಲಿಸರ ವರದಿಯಲ್ಲಿ ಶಿಕ್ಷಕಿಯ ಮೇಲಿನ ಆಪಾದನೆಯಲ್ಲಿ ಯಾವುದೇ ಸತ್ಯಾಂಶ ಇಲ್ಲ-ಹೈಕೋರ್ಟಿನ ನಿವೃತ್ತ ನ್ಯಾಯಧೀಶರಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು- ಕಥೊಲಿಕ್ ಸಭಾ ಆಗ್ರಹ
ಸಂತ ಜೆರೋಸಾ ಹೈಸ್ಕೂಲ್ ಮಂಗಳೂರು ಇಲ್ಲಿ ಫೆಬ್ರವರಿ 10 2024ರಂದು ಶಾಲೆಯ ಇಂಗ್ಲೀಷ್ ಟೀಚರ್ ಹೇಳಿದ ಪಾಠದ ವಿಷಯದಲ್ಲಿ ಸ್ಥಳೀಯ ಶಾಸಕರಾದ ಶ್ರೀ ವೇದವ್ಯಾಸ್ ಕಾಮತ್ ಮತ್ತು ಹಲವು ಸಂಘಟನೆಯ ಕಾರ್ಯಕರ್ತರು ಮಾಡಿದ ಆಪಾದನೆಯಲ್ಲಿ ಯಾವುದೇ ಸತ್ಯಾಂಶ ಇರುವುದಿಲ್ಲ ಎಂಬುದಾಗಿ ಸ್ಥಳೀಯ ಪೋಲಿಸರ ವರದಿಯಲ್ಲಿ ಉಲ್ಲೇಖಿಸಲಾಗಿರುವುದು ತಿಳಿದು ಬಂದಿರುತ್ತದೆ. ಹೀಗಿರುವಾಗ ಶಾಸಕರ ಮುಖಂಡತ್ವದಲ್ಲಿ ನಡೆದ ಘಟನೆಗಳು ಖಂಡನೀಯವಾಗಿರುತ್ತವೆ ಎಂದು ಹೇಳಲು ವಿಷಾದಿಸುತ್ತೇವೆ. ನಿಷ್ಪಕ್ಷ ನ್ಯಾಯ ನೀಡಬೇಕಾದ ಶಾಸಕರು ಸಮಸ್ಯೆಯನ್ನು ಬಗೆಹರಿಸುವುದನ್ನು ಬಿಟ್ಟು ಶಾಲಾ ಮಕ್ಕಳನ್ನು ಒಟ್ಟುಕೂಡಿಸಿ, ಅವರನ್ನು ಉದ್ರೇಕಿಸಿ ಶಿಕ್ಷಕರ ಹಾಗೂ ಅದೇ ಶಾಲೆಯ ವಿರೋಧ ಘೋಷಣೆ ಕೂಗಿ ಅಪಹಾಸ್ಯ ಮಾಡಿರುವುದು ಖಂಡನೀಯವಾಗಿದೆ.
ರಾಷ್ಟ್ರಕವಿ ಟಾಗೋರ್ರವರ ಪದ್ಯವನ್ನು ಶಾಲೆಯ ಶಿಕ್ಷಕಿ ಭೋದಿಸುವಾಗ ಹೇಳಿದ ವಿಷಯಗಳನ್ನು ಹೆತ್ತವರು ಎಂದು ಹೇಳುವವರು ಆಡಿಯೋ ಮೂಲಕ ಪ್ರಚಾರ ಮಾಡಿ ಶಾಲಾ ಆಡಳಿತ ಮಂಡಳಿಯ ಗಮನಕ್ಕೆ ತಾರದೆ ಸಂಘಟನೆಯವರನ್ನು ಒಟ್ಟುಗೂಡಿಸಿ ಶಾಲೆಯ ಹೆಸರಿಗೆ ಮಸಿ ಬಳಸಲು ಪಿತೂರಿ ನಡೆಸಿರುವುದಾಗಿದೆ.
ಸುಮಾರು 60 ವರುಷಗಳಿಂದ ಧರ್ಮಭಗಿನಿಯರು ನಡೆಸಿಕೊಂಡು ಬಂದಿರುವ ಈ ಶಾಲೆಯಲ್ಲಿ ಅಸಂಖ್ಯಾಂತ ಹೆಣ್ಣು ಮಕ್ಕಳು ವಿವಿಧ ಧರ್ಮಜಾತಿಗೆ ಸೇರಿರುವವರು ವಿಧ್ಯಾಭ್ಯಾಸ ಪಡೆದಿರುತ್ತಾರೆ. ಯಾವುದೇ ಒಂದು ಕಪ್ಪು ಚುಕ್ಕೆ ಈ ಶಾಲೆಗೆ ಇದುವರೆಗೂ ಇರುವುದಿಲ್ಲ್ಲ. ಶಾಲೆಯ ಮಕ್ಕಳ ಪಠ್ಯ ಚಟುವಟಿಕೆಗಳ ಜೊತೆ ಮಕ್ಕಳ ವೈಯಕ್ತಿಕ ಬೆಳವಣಿಗೆ ಮತ್ತು ಅವರ ಆರೋಗ್ಯದ ಬಗ್ಗೆ ಶಾಲೆಯವರು ಕಾಳಜಿ ವಹಿಸಿರುವ ಹಲವಾರು ದೃಷ್ಟಾಂತಗಳು ಇವೆ.
ಹೀಗಿರುವಾಗ ಸ್ಥಳೀಯ ಶಾಸಕರು ಶಾಲಾ ಆಡಳಿತ ಮಂಡಳಿಯವರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಮಕ್ಕಳಿಂದ ಘೋಷಣೆ ಕೂಗಿಸಿ ಪ್ರತಿಭಟನೆ ನಡೆಸಿ ಬಲವಂತವಾಗಿ ಶಿಕ್ಷಕಿಯನ್ನು ವಜಾಗೊಳಿಸಲು ಒತ್ತಡ ಹಾಕಿ, ವಜಾಗೊಳಿಸಿರುವುದು ಎಷ್ಟು ಸರಿ…? ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿ ಆನಂತರ ಮಕ್ಕಳೊಂದಿಗೆ ನರ್ತಿಸಿ ಸಂತೋಷ ಪಟ್ಟಿರುವುದು ಖಂಡನೀಯವಾಗಿರುತ್ತದೆ.
ಸ್ಥಳೀಯ ಮಾದ್ಯಮಗಳ ವರದಿ ಪ್ರಕಾರ ಈ ಘಟನೆಯ ಸಂದರ್ಭದಲ್ಲಿ ಸ್ಥಳೀಯ ಇಬ್ಬರು ಕಾರ್ಪೋರೇಟರ್ ಹಾಗೂ ನೆರೆಯ ಶಾಸಕರಾದ ಶ್ರೀ ಭರತ್ ಶೆಟ್ಟಿ ಮುಂತಾದವರು ಬಂದು ಕುಮ್ಮಕ್ಕು ನೀಡಿರುವುದು ಹಾಗೂ ಹೆದರಿಕೆ ಹುಟ್ಟಿಸಿದ್ದುದರ ಬಗ್ಗೆ ತಾವು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಬೇಕು.
ಈ ಘಟನೆಯ ಬಗ್ಗೆ ಐಎ.ಎಸ್ ಅಧಿಕಾರಿಯವರ ಬದಲು ಹೈಕೋರ್ಟ್ನ ನಿವೃತ್ತ ನ್ಯಾಯಧೀಶರಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಮತ್ತು ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಕಾನೂನು ಪ್ರಕಾರ ಶಿಕ್ಷೆಗೊಳಪಡಿಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕೆಂದು ವಿನಂತಿಸಿ ಬಂಟ್ವಾಳ ತಾಲೂಕು ತಹಶೀಲ್ದಾರ್ ರವರ ಮುಖಾಂತರ ಸನ್ಮಾನ್ಯ ಮುಖ್ಯ ಮಂತ್ರಿಗಳು ಕರ್ನಾಟಕ ಸರಕಾರ ಇವರಿಗೆ ಕಥೊಲಿಕ್ ಸಭಾ ಬಂಟ್ವಾಳ ವಲಯ ಸಮಿತಿ ಪರವಾಗಿ ಮನವಿಯನ್ನು ಸಲ್ಲಿಸಿರುತ್ತೇವೆ. ಈ ಸಂದರ್ಭದಲ್ಲಿ ಕಥೊಲಿಕ್ ಸಭಾ ಬಂಟ್ವಾಳ ವಲಯದ ಆದ್ಯಾತ್ಮಿಕ ನಿರ್ದೇಶಕರು ವಂ| ವಲೇರಿಯನ್ ಡಿಸೋಜ, ಉಪಾಧ್ಯಕ್ಷರಾದ ಮೊಲಿ ಟೆಲ್ಲಿಸ್, ಕಾರ್ಯದರ್ಶಿ ಆಲ್ವಿನ್ ಡಿಸೋಜ, ಕೇಂದ್ರಿಯ ನಿಕಟ ಪೂರ್ವ ಅಧ್ಯಕ್ಷರಾದ ಸ್ಟೇನಿ ಲೋಬೊ, ಅಗ್ರಾರ್ ಚರ್ಚ್ನ ಸಹಾಯಕ ಧರ್ಮಗುರುಗಳು, ಧರ್ಮಭಗಿನಿಯರು, ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ವಿಶ್ವದ ಅತ್ಯಂತ ದುಬಾರಿ ಶರ್ಟ್ ಭಾರತದ ವ್ಯಕ್ತಿ ಧರಿಸುತ್ತಾನೆ ! ಆ ಶರ್ಟ್ ನೋಡಿರಿ!!
ವಿಶ್ವದ ಅತ್ಯಂತ ದುಬಾರಿ ಶರ್ಟ್ನ್ನು ಧರಿಸುವ (ಹೊಂದಿರುವ) ವ್ಯಕ್ತಿ, ಭಾರಾತೀವನಾಗಿದ್ದಾನೆ. ಆ ಶರ್ಟ್ ಮಹಾರಾಷ್ಟ್ರ ಮೂಲದ ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ಪಂಕಜ್ ಪರಾಖ್ ಅವರಾದಾಗಿದೆ. ಈ ಶರ್ಟ್ ಸಿದ್ದ ಪಡಿಸುವಾಗ ಇದರ ಬೆಲೆ ಬರೋಬ್ಬರಿ 98,35,099 ರೂ. ಅಂತೆ.
ಪಂಕಜ್ ಪರಾಖ್ ಬಳಿ ಇರುವ ಗೋಲ್ಡನ್ (golden) ಶರ್ಟ್ 4.10 ಕೆಜಿ ತೂಕವಿದ್ದು, ಈಗ ಬರೋಬ್ಬರಿ 1.30 ಕೋಟಿ ರೂ. ಮೌಲ್ಯದ್ದಾಗಿದೆ ಎಂದು ತಿಳಿದು ಬಂದಿದೆ.
ಇದಲ್ಲದೇ ಪಂಕಜ್ ಪರಾಖ್ ಬಳಿ ಚಿನ್ನದ ಗಡಿಯಾರ, ಹಲವಾರು ಚಿನ್ನದ ಸರಗಳು, ದೊಡ್ಡ ಚಿನ್ನದ ಉಂಗುರಗಳು, ಚಿನ್ನದ ಮೊಬೈಲ್ ಕವರ್ ಮತ್ತು ಚಿನ್ನದ ಚೌಕಟ್ಟಿನ ಕನ್ನಡಕಗಳ ಸಂಗ್ರಹವೂ ಇದೆಯೆಂದು ತಿಳಿದು ಬಂದಿದೆ.
ಶ್ರೀನಿವಾಸಪುರ : ವಿವಿಧ ಬ್ಯಾಂಕ್ಗಳ ಸಹಯೋಗದಲ್ಲಿ ಮಂಗಳವಾರ ಅರ್ಥಿಕ ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ
ಶ್ರೀನಿವಾಸಪುರ : ಹಣಕಾಸಿನ ಸಾಕ್ಷರತೆಯು ವ್ಯಕ್ತಿಗಳು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳ ಗ್ರಾಹಕರಿಗೆ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ . ವಂಚನೆಗಳಿ0ದ ತಮ್ಮನ್ನು ರಕ್ಷಿಸಿಕೊಳ್ಳಬಹುರಾಗಿದೆ ಎಂದರು. ಅರ್ಥಿಕ ಸಾಕ್ಷರತೆಯ ಫಲಿತಾಂಶಗಳನ್ನು ಸುಧಾರಿಸಲು ಪರಿಣಾಮಕಾರಿ ಮತ್ತು ಅಂತರ್ಗತ ಹಣಕಾಸು ಶಿಕ್ಷಣ ಕಾರ್ಯಕ್ರಮಗಳು ಮತ್ತು ನೀತಿಗಳ ಅವಶ್ಯಕತೆ ಇದೆ ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ತಿಳಿಸಿದರು.
ಪಟ್ಟಣದ ಪುರಸಭೆ ಕಛೇರಿಯಲ್ಲಿ ಪಟ್ಟಣದ ವಿವಿಧ ಬ್ಯಾಂಕ್ಗಳ ಸಹಯೋಗದಲ್ಲಿ ಮಂಗಳವಾರ ಅರ್ಥಿಕ ಸಾಕ್ಷರತಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಹಣಕಾಸಿನ ಸಾಕ್ಷರತೆಯು ವ್ಯಕ್ತಿಗಳು ತಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು, ಸಾಲ ಮತ್ತು ವಂಚನೆಯನ್ನು ತಪ್ಪಿಸಲು , ಭವಿಷ್ಯಕ್ಕಾಗಿ ಯೋಜನೆ ಮತ್ತು ಅನಿರೀಕ್ಷಿತ ಘಟನೆಗಳನ್ನು ನಿಭಾಯಿಸಲು ಸಹಾಯಮಾಡುತ್ತದೆ. ಅರ್ಥಿಕ ಸಾಕ್ಷರತೆಯು ಅರ್ಥಿಕ ಸ್ಥಿರತೆ , ಅರ್ಥಿಕ ಬೆಳವಣಿಗೆ , ಸಾಮಾಜಿಕ ನ್ಯಾಯ ಮತ್ತು ಪರಿಸರ ಸುಸ್ಥಿರತೆಯನ್ನು ಉತ್ತೇಜಿಸುವ ಮೂಲಕ ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದರು.
ಶಿಕ್ಷಣ ಇಲಾಖೆಯ ಇಸಿಒ ಟಿ.ಆಂಜಪ್ಪ ಮಾತನಾಡಿ ಬೀದಿ ಬದಿಯ ವ್ಯಾಪಾರಿಗಳು ತಮ್ಮ ಮಕ್ಕಳನ್ನು ಯಾವುದೇ ಕಾರಣಕ್ಕೂ ಖಾಸಗಿ ಶಾಲೆಗಳಿಗೆ ತಮ್ಮ ಮಕ್ಕಳ ದಾಖಲಿಸದಂತೆ ಸಲಹೆ ನೀಡಿದರು. ಖಾಸಗಿ ಶಾಲೆಗಳು ಹೆಚ್ಚಿನ ಲಕ್ಷಾನುಗಟ್ಟಲೆ ಶುಲ್ಕವನ್ನು ವಸೂಲಿ ಮಾಡುತ್ತಾರೆ. ಸರ್ಕಾರಿಂದ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಅನೇಕ ಹಲವು ಉಪಯುಕ್ತ ಯೋಜನೆಗಳನ್ನು ತಂದಿದೆ ಎಂದರು.
ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳ ವರೆಗೂ ಖಾಸಗಿ ಶಾಲೆಗಳಲ್ಲಿ ಆರ್ಟಿಇ ಮೂಲಕ ದಾಖಲು ಆಗಲು ಅರ್ಜಿ ಸಲ್ಲಿಸಲು ಅವಕಾಶವಿದ್ದು, ವಾಸವಿರುವ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಯಾವುದೇ ಸರ್ಕಾರಿ ಶಾಲೆಗಳು ಇಲ್ಲದ ಪಕ್ಷದಲ್ಲಿ ಖಾಸಗಿ ಶಾಲೆಯಲ್ಲಿ ಆರ್ಟಿಇ ಅರ್ಜಿ ಸಲ್ಲಿಸಿ ದಾಖಲಾತಿ ಆಗುಬಹುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಯೋಜನೆಗಳಲ್ಲಿ ಪಿಎಂಎಸ್ವೈ ವರ್ಷಕ್ಕೆ ೨೦ರೂ ಕಂತು ಕಟ್ಟಿದರೆ ೨ಲಕ್ಷ ವಿಮೆ ಬರುತ್ತದೆ. ಪಿಎಂಜೆಜೆವೈ ಯೋಜನೆಯಲ್ಲಿ ೪೩೬ರೂ ವಿಮೆ ಹಣ ಕಂತು ಕಟ್ಟಿದರೆ ೨ ಲಕ್ಷ ವಿಮೆ ಬರುತ್ತದೆ. ಎಟಿಎಂ ವಿಮೆಯಲ್ಲಿ ವರ್ಷಕ್ಕೆ ೫೦೦ ರೂ ವಿಮೆ ಕಂತು ಕಟ್ಟಿದರೆ ೧೦ ಲಕ್ಷ ವಿಮೆ ಹಣ ಬರುತ್ತದೆ., ವರ್ಷಕ್ಕೆ ೧೦೦೦ರೂ ಕಂತು ವಿಮೆ ಕಟ್ಟಿದರೆ ೨೦ ಲಕ್ಷ ರೂ ಬರುತ್ತದೆ ಎಂದು ವಿವಿಧ ಬ್ಯಾಂಕುಗಳ ವ್ಯವಸ್ಥಾಪಕರು ತಮ್ಮ ಬ್ಯಾಂಕುಗಳ ವಿಮೆ ಹಾಗು ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಬಿ ವೆಂಕಟರೆಡ್ಡಿ, ಪುರಸಭೆ ವ್ಯವಸ್ಥಾಪಕ ನವೀನ್ ಚಂದ್ರ ,ಆರೋಗ್ಯ ನಿರೀಕ್ಷಕ ಕೆ ಜಿ ರಮೇಶ್ ,ಪರಿಸರ ಅಭಿಯಂತರರು ಲಕ್ಷ್ಮಿಷ ,ಕಂದಾಯ ಅಧಿಕಾರಿ ವಿ ನಾಗರಾಜ್, ಕಂದಾಯ ನಿರೀಕ್ಷಕ ಎನ್ ಶಂಕರ್, ಪುರಸಭೆ ಸಿಬ್ಬಂದಿ ನಾಗೇಶ್ ,ಸಂತೋಷ್ ,ಸುರೇಶ್ ,ಗೌತಮ್ ಪ್ರತಾಪ್, ಶಿವಪ್ರಸಾದ್.ಇದ್ದರು.
ಕಥೋಲಿಕ್ ಸಭಾ ಮಂಗಳೂರು (ರಿ) ಇವರ ಆಶ್ರಯದಲ್ಲಿ ಮೆರ್ಸಿ ಅಮ್ಮನವರ ದೇವಾಲಯ ಪಾನೀರ್ ನಿಂದ ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರ ಮುಡಿಪುಗೆ ಪಾದಯಾತ್ರೆ
ಕಥೋಲಿಕ್ ಸಭಾ ಮಂಗಳೂರು (ರಿ) ಇವರ ಆಶ್ರಯದಲ್ಲಿ ಮಂಗಳೂರು ದಕ್ಷಿಣ ವಲಯದ ವ್ಯಾಪ್ತಿಯಲ್ಲಿ ಇರುವ ಎಲ್ಲಾ ವಿಚಾರಣಾ ಕೇಂದ್ರಗಳು ಹಾಗೂ ಎಲ್ಲಾ ಆಯೋಗಗಳ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಮೆರ್ಸಿ ಅಮ್ಮ ಅವರ ದೇವಾಲಯ ಉಳ್ಳಾಲ್ ಪಾನೀರ್ ಇಲ್ಲಿಂದ ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರ ಮುಡಿಪು ಇಲ್ಲಿಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಪ್ರಾಯಶ್ಚಿತ್ತ ಕಾಲದಲ್ಲಿ ಕಥೋಲಿಕ ಕ್ರೈಸ್ತರು ಜೀವನ ಪರಿವರ್ತನೆಗಾಗಿ ಹಾಗೂ ತ್ಯಾಗ ಮತ್ತು ಒಳ್ಳೆಯ ಕೆಲಸ ಮಾಡಿ ದೇವರ ಅನುಗ್ರಹ ಪಡೆಯಲು ಈ ಯಾತ್ರೆಯಲ್ಲಿ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸರಿ ಸುಮಾರು ನಾಲ್ಕು ಶತಮಾನಗಳ ಹಿಂದೆ ಪಾನೀರ್ ಧರ್ಮ ಕೇಂದ್ರದಲ್ಲಿ ಸೇವೆ ಸಲ್ಲಿಸಿ , ಮುಡಿಪು ಬೆಟ್ಟದಲ್ಲಿ ಅವರ ಆತ್ಮ ಪರೀಕ್ಷೆ ಯ ವೇಳೆಯಲ್ಲಿ ನಡೆದ ಅದ್ಭುತ ನೆನೆದು,ಅವರು ನಡೆದ ದಾರಿಯನ್ನು ಇಂದು ಭಕ್ತಾದಿಗಳು ಕಾಲ್ನಡಿಗೆಯಲ್ಲಿ ಕ್ರಮಿಸಲಿದ್ದಾರೆ ಎಂದು ಕಥೋಲಿಕ್ ಸಭಾ ಮಂಗಳೂರು ಕೇಂದ್ರೀಯ ಸಭೆಯ ಅಧ್ಯಕ್ಷರಾದ ಶ್ರೀ ಆಲ್ವಿನ್ ಡಿಸೋಜ ಪಾನೀರ್ ಇವರು ನಮ್ಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಕೇಂದ್ರೀಯ ಅಧ್ಯಕ್ಷರು ಆಲ್ವಿನ್ ಡಿಸೋಜರವರ ನೇತೃತ್ವದಲ್ಲಿ ಇವತ್ತು ಪಾನೀರ್ ಚರ್ಚ್ ನ ಫಾದರ್ ವಿಕ್ಟರ್ ಡಿಮೆಲ್ಲೊರವರು ಉದ್ಘಾಟನೆ ಮಾಡಿದರು.ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ಆಧ್ಯಾತ್ಮಿಕ ನಿರ್ದೇಶಕರಾದ ಅಸ್ಸಿಸ್ಸಿ ರೆಬೆಲ್ಲೊರವರು ಹಾಗೂ ದಕ್ಷಿಣ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ಫಾದರ್ ಎಡ್ವರ್ಡ್ ಮೋನಿಸ್, ಫಜೀರು ಚರ್ಚಿನ ವಂದನಿಯ ಜೊನ್ ವಾಸ್ ರವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಹಲವಾರು ಧರ್ಮಭಗಿನಿಯರು, ಧರ್ಮಗುರುಗಳು, ಹಾಗೂ ಹಲವಾರು ಭಕ್ತಾಧಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು.