ಕುಂದಾಪುರ, ಫೆ.11: ಲೂರ್ದ್ ಮಾತೆಯ ಹಬ್ಬದಂದು ಫೆಬ್ರವರಿ 11 ರಂದು ಬೆಳಿಗ್ಗೆ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರ ನೇತ್ರತ್ವದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಲಾಯಿತು. ಸಂಜೆ ಹೋಲಿ ರೋಜರಿ ದೇವಾಲಯದ ವಠಾರದಲ್ಲಿರುವ ಲೂರ್ದ್ ಮಾತೆಯ ಗ್ರೊಟ್ಟೊ ಎದುರುಗಡೆ ಲೂರ್ದ್ ಮಾತೆಯ ಹಬ್ಬದ ಪ್ರಯುಕ್ತ ಭಕ್ತಿಭಾವದ ಜಪಮಾಲ ಭಕ್ತಿಯನ್ನು ಆಚರಿಸಲಾಯಿತು.ರೋಜರಿ ಚರ್ಚಿನ ಭಕ್ತರು ಜಪಮಾಲಾ ಭಕ್ತಿಯಲ್ಲಿ ಶ್ರದ್ದಾ ಭಕ್ತಿಯಿಂದ ಪಾಲ್ಗೊಂಡರು. “ರೋಜರಿ ಮಾತೆಯು ಫ್ರಾನ್ಸ್ ದೇಶದ ಲೌರ್ಡೆಸ್ ಎಂಬಲ್ಲಿ ಬರ್ನಾಡೇಟ್ ಸೌಬಿರಸ್ ಎಂಬ 14 ವರ್ಷದ ಹೆಣ್ಣು ಮಗಳಿಗೆ 1858 ರಲ್ಲಿ, 18 ಭಾರಿ ದರ್ಶನ ನೀಡಿದಳು, ನಂತರ ನೀನು ನಿಂತ ಜಾಗದಲ್ಲಿ ನಿನ್ನ ಬೆರಳುಗಳಿಂದ ಮಣ್ಣನ್ನು ಕೆದುಕು ಅಂತಾ ರೋಜರಿ ಮಾತೆ ಹೇಳಿದಾಗ, ಅದರಂತೆ ಬರ್ನಾಡೇಟ್ ಮಣ್ಣು ಕೆದಕಿದಾಗ, ಅಲ್ಲಿನ ಬೆಟ್ಟದ ಭೂಮಿಯಲ್ಲಿ ನೀರು ಪುಟಿದೇಳುತ್ತದೆ, ನಂತರ ಅಲ್ಲಿ ದೊಡ್ಡ ಕೆರೆಯಾಗುತ್ತೆ, ನಂತರ ಆ ಕೆರೆಯಲ್ಲಿ ಮಿಂದು ಎದ್ದ ರೋಗಿಗಳು ಗುಣವಾಗ ತೊಡಗಿದರು. ಈಗ ಅದು ವಿಶ್ವದ ಅತೀ ಹೆಸರುವಾಸಿಯಾದ ಪವಾಡದ ಪುಣ್ಯಕ್ಷೇತ್ರವೆಂದು ಪ್ರಸಿದ್ದಿ ಗೊಂಡಿದೆ.
ಸಂಜೆ ನೆಡೆದ ಜಪಮಾಲಾ ಭಕ್ತಿಯ ಕಾರ್ಯಕ್ರಮದಲ್ಲಿ ಕಂಡ್ಲೂರು ಇಗರ್ಜಿಯ ಧರ್ಮಗುರು ವಂ|ಕೆನ್ಯೂಟ್ ಬಾರ್ಬೊಜಾ ದೇವರ ವಾಕ್ಯವನ್ನು ಮುರಿದು “ಅಂದು ಯೇಸು ಕ್ರಿಸ್ತರ ಕಾಲದಲ್ಲಿ ಕುಶ್ಟ ರೋಗವೆಂಬುದು ಮಹಾಮಾರಿ ರೋಗವಾಗಿತ್ತು, ಆ ಕಾಲದಲ್ಲಿ ಆ ರೋಗ ಗುಣಪಡಿಸಿದ ದಾಖಲೆಯೇ ಇಲ್ಲ. ಅದನ್ನು ಯೇಸು ಕ್ರಿಸ್ತರು ತಮ್ಮ ಆಶಿರ್ವಾದದಿಂದ ಅಂಗಾಂಗಗಳನ್ನು ಕೊಳೆತು ಹೋದವರನ್ನು ಸಂಪೂರ್ಣವಾಗಿ ಗುಣಪಡಿಸಿದ್ದರು, ಈ ಕುಶ್ಟ ರೋಗ ಮಾನವನ ಅತ್ಯಂತ ಪೀಡಕ ಮಹಾರೋಗ, ಇತ್ತಿಚೆಗೆ ಕಳೆದ ಶತಮಾನದಲ್ಲಿಯಷ್ಟೇ, ಈ ರೋಗಕ್ಕೆ ಗುಣ ಪಡಿಸುವ ಓಷಧಿ ಕಂಡು ಹುಡುಕಲಾಯಿತು, ಆದರೂ ಇಂದು ಕೂಡ ಈ ರೋಗದಿಂದ ಕೈ ಕಾಲು ಬೆರಳುಗಳು ಕೊಳೆತು ಹೋದದ್ದನು ಸರಿಪಡಿಸಲಾಗುತ್ತಿಲ್ಲ. ಕುಶ್ಟ ರೋಗ ಅಂಟಿದವರಿಗೆ ರೋಗವನ್ನು ನಿಯಂತ್ರಿಸುವುಕ್ಕೆ, ಉಲ್ಬಣಗೊಳ್ಳದಂತೆ ಮಾಡಲು ಆಗುತ್ತದೆ. ಆದರೆ ಇಂದಿನ ಪರಿಸ್ಥಿತೆಯೆ ಬೇರೆ, ಸಾಮಾಜಿಕ ಅಶ್ವಸ್ಥ ಕಳೆದಕೊಂಡವರು, ಪಾಪ ಪ್ರಜ್ನೆಯಲ್ಲಿ ಬದುಕುವ ರೋಗಿಗಳು ನಮ್ಮನ್ನು ಗುಣವಾಗುವುದು ಮುಖ್ಯವಾಗಿದೆ. ಈ ಸಮಸ್ಯೆ ಪರಿಹರಿಸಲು ನಾವು ಲೂರ್ದ್ ಮಾತೆಯ ಸಹಕಾರದಿಂದ ಯೇಸು ಕ್ರಿಸ್ತರಲ್ಲಿ ನಾವು ಕೇಳಿಕೊಳ್ಳಬೇಕು, ಲೂರ್ದ ನಗರದಲ್ಲಿ ರೋಜರಿ ಮಾತೆ ದ್ರಷ್ಟಿಗೆ ಬಿದ್ದ ಲೂರ್ದ್ ನಗರವು ಇಂದು ಲೂರ್ದ್ ಮಾತೆ ಎಂದು ಪ್ರಸಿದ್ದಿ ಪಡೆದಿದ್ದಾಳೆ, ಅವಳು ಹೇಳುವ ಪ್ರಕಾರ ನಾವು ಪಾಪ ಕ್ರತ್ಯಗಳಿಂದ ದೂರವಾಗಬೇಕು, ಜಪಮಾಲೆ ಪಠಿಸಿರಿ, ಯೇಸು ಕ್ರಿಸ್ತರು ಹೇಳಿದಂತೆ ಸತ್ಯ ಮಾರ್ಗದಲ್ಲಿ ನೆಡೆದುಕೊಳ್ಳಬೇಕು” ಎಂದು ಅವರು ತಮ್ಮ ಪ್ರವಚನದಲ್ಲಿ ತಿಳಿಸಿದರು.
ಲೂರ್ದ್ ಮಾತೆಯ ಪ್ರತಿಮೆಯನ್ನು ಬಣ್ಣದ ಮೇಣದ ಬತ್ತಿಗಳ ಮೂಲಕ ಮೆರವಣಿಗೆ ಮಾಡಿ, ಭಕ್ತಾಧಿಗಳಿಗೆ ಉತ್ತಮ ಆರೋಗ್ಯ, ರೋಗ ಋಜೀನಗಳನ್ನು ಗುಣ ಆಗುವಂತೆ ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನ ಆಶಿರ್ವದಿಸಿದರು.
ಜಪಮಾಲ ಭಕ್ತಿಯನ್ನು ಲೂರ್ದ್ ವಾಳೆಯವರು ನೇರವೆರಿಸಿದರು. ವಾಳೆಯ ಪಾಲನ ಮಂಡಳಿ ಸದಸ್ಯೆ ಶಾಂತಿ ಬರೆಟ್ಟೊ ನಿರೂಪಣೆ ಮಾಡಿದರು, ಪಾಲನ ಮಂಡಳಿ ಸದಸ್ಯ ಎಲ್.ಜೆ. ಫೆರ್ನಾಂಡಿಸ್ ವಂದಿಸಿದರು.
Month: February 2024
ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ ಪಾಲಕ ಸಂತ ಸಾಬೆಸ್ಟಿಯನವರ ಹಬ್ಬ
ಕುಂದಾಪುರ, ಫೆ.12: ಕುಂದಾಪುರ ಸಂತ ಸಾಬೆಸ್ಟಿಯನ್ ವಾಳೆಯಲ್ಲಿ, ವಾಳೆಯವರು ತಮ್ಮ ಪಾಲಕ ಸಂತ ಸಾಬಾಸ್ಟಿಯನರ ಹಬ್ಬವನ್ನು ರೋಜರಿ ಮಾತಾ ಇಗರ್ಜಿಯಲ್ಲಿ ಕ್ರೈಸ್ತ ಸಮುದಾಯದವರೊಂದಿಗೆ ಪವಿತ್ರ ಬಲಿದಾನವನ್ನು ಅರ್ಪಿಸುವ ಮೂಲಕ ಆಚರಿಸಿದರು.ಫೆಬ್ರವರಿ 10 ರಂದು ಸಂಜೆ ಹೇರಿಕುದ್ರು ಎಮಿಲಿಯಾನ್ ಪಾಯ್ಸ್ ಇವರ ಮನೆಯಲ್ಲಿ ವಾಳೆಯವರ ಸಮ್ಮಿಲನ ಕಾರ್ಯಕ್ರಮ ನೆಡೆಯಿತು. ಈ ಸಂದರ್ಭದಲ್ಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಮತ್ತು ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ಇವರನ್ನು ವಾಳೆಯ ಪರವಾಗಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಫಾ|ಸ್ಟ್ಯಾನಿ ತಾವ್ರೊ ‘ನಮ್ಮನ್ನು ಸನ್ಮಾಸಿದ್ದು, ನಿಮಗೆ ನಮ್ಮಲ್ಲಿರುವ ಪ್ರೀತಿಯನ್ನು ತೋರಿಸುತ್ತದೆ, ಎಂದು ಧನ್ಯವಾದಗಳನ್ನು ಅರ್ಪಿಸಿ, ಇಂತಹ ಹಬ್ಬಗಳನ್ನು ಆಚರಿಸುವುದರಿಂದ ವಾಳೆಯಯಲ್ಲಿ ಒಗ್ಗಟ್ಟು, ಪ್ರೀತಿ, ವಿಶ್ವಾಸ ಹೆಚ್ಚುತ್ತದೆ, ಕಿರು ಸಮುದಾಯದಲ್ಲಿ ದೇವರ ವಾಕ್ಯಗಳನ್ನು ಒದಿ ಅದರ ಪ್ರೇರಣೆಯಿಂದ ದೇವರಲ್ಲಿ ವಿಶ್ವಾಸವನ್ನು ಗಟ್ಟಿಗೊಳಿಸಬೇಕು. ನಿಮ್ಮ ವಾಳೆಯವರು ಚರ್ಚಿನ ಕೆಲಸ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಕ್ರಿಯಾತ್ಮಕವಾಗಿ ಭಾಗವಹಿಸುತ್ತಾರೆ. ನಿಮ್ಮ ವಾಳೆಯು ಅತ್ಯಂತ ಸುಂದರ ಪ್ರಕ್ರತಿಯನ್ನು ಹೊಂದಿದೆ, ನೀವು ಇಲ್ಲೆ ನೆಲೆ ನಿಲ್ಲಬೇಕು, ಎಂದೂ ನಿಮ್ಮ ಕುದ್ರುಗಳನ್ನು ಬಿಡಬಾರದು” ಎಂದು ಶುಭಾಶಯ ಕೋರಿ ಸಂದೇಶ ನೀಡಿದರು.
ಸಹಾಯಕ ಧರ್ಮಗುರು ವಂ|ಅಶ್ವಿನ್ ಆರಾನ್ನ ದೇವರ ವಾಕ್ಯದ ತಿರುಳನ್ನು ನೀಡಿ ವಾಳೆಯವರಿಗೆ ಕಿರು ಆಟಗಳನ್ನು ನಡೆಸಿಕೊಟ್ಟರು ಮಕ್ಕಳು ಮತ್ತು ಮಹಿಳೆಯರು ನ್ರತ್ಯ ಪ್ರದರ್ಶನ ನೀಡಿದರು. ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಧರ್ಮಭಗಿನಿ ಪ್ರೇಮಿಕಾ, ಕಿರು ಸಮುದಾಯ ಸಂಯೋಜಕಿ ಝೀಟಾ ಕರ್ವಾಲ್ಲೊ ಹಬ್ಬದ ಶುಭಾಶಯಗಳನ್ನು ಕೋರಿದರು, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ ಆಡೋಟಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿದರು.
ಪ್ರೇರಕಿ ಪ್ರಮೀಳಾ ಡಿಸಿಲ್ವಾ ವರದಿ ವಾಚಿಸಿದರು, ವಾಳೆಯಾ ಗುರಿಕಾರ್ಣಿಯಾದ ಜುಲಿಯಾನ ಮಿನೆಜೆಸ್ ಸ್ವಾಗತಿಸಿದರು. ಪ್ರತಿನಿಧಿ ವಿಲ್ಫ್ರೆಡ್ ಡಿಸೋಜಾ ಧನ್ಯವಾದಗಳನ್ನು ಅರ್ಪಿಸಿದರು. ರೀಶನ್ ಡಿಆಲ್ಮೇಡಾ ಮತ್ತು ಕಿಯಾರ ಪಾಯ್ಸ್ ನಿರೂಪಿಸಿದರು.
ದೇಶದಲ್ಲಿನ ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳು ಇರಬೇಕು ಎನ್ನುವ ದೃಷ್ಟಿಯಲ್ಲಿ ಸಂವಿಧಾನವನ್ನು ರಚನೆ ಮಾಡಲಾಗಿದೆ:ಎಂ.ಶ್ರೀನಿವಾಸನ್
ಶ್ರೀನಿವಾಸಪುರ : ದೇಶದಲ್ಲಿನ ಯಾವುದೇ ನಾಗರೀಕರು ಊಟ, ವಸತಿ ಇಲ್ಲದೆ, ಮಾತನಾಡಲು ಸ್ವಾತಂತ್ರವಿಲ್ಲದೆ ಇರುಬಾರದು ಎಲ್ಲರಿಗೂ ಹಕ್ಕು ಮತ್ತು ಕರ್ತವ್ಯಗಳು ಇರಬೇಕು ಎನ್ನುವ ದೃಷ್ಟಿಯಲ್ಲಿ ಸಂವಿಧಾನವನ್ನು ರಚನೆ ಮಾಡಲಾಗಿದೆ. ವಿದ್ಯಾರ್ಥಿಗಳು ಹಾಗೂ ದೇಶದಲ್ಲಿನ ಪ್ರತಿಯೊಬ್ಬರು ಸಹ ಸಂವಿಧಾನ ಬಗ್ಗೆ ಅರಿತುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಎಂ.ಶ್ರೀನಿವಾಸನ್ ಹೇಳಿದರು.
ತಾಲೂಕಿನ ದಳಸನೂರು ಗ್ರಾ.ಪಂ ಸಮೀಪದ ಶನಿವಾರ ಜಿಲ್ಲಾ ಪಂಚಾಯಿತಿ ಹಾಗು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳಿಗೆ ಯಾವುದೇ ಜಾತಿ , ಧರ್ಮಮ ವರ್ಗ, ಬೇದ ಇಲ್ಲ. ಎಲ್ಲಾ ಜಾತಿ ಮತ್ತು ಧರ್ಮಗಳು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಆದರೆ ಬೇರೆ ಕೆಲ ದೇಶಗಳಲ್ಲಿ ಒಂದು ಒಂದು ಧರ್ಮವರು ವಾಸಮಾಡುತ್ತಾರೆ ಅಲ್ಲಿ ಜನಸಂಖ್ಯಾ ಆದಾರದ ಮೇಲೆ ಕಾನೂನು ಕಟ್ಟಲೆಗಳು ಕಾರ್ಯನಿರ್ವಹಿಸುತ್ತದೆ . ನಮ್ಮ ದೇಶದಲ್ಲಿ ಎಲ್ಲಾ ಜಾತಿ, ಧರ್ಮಗಗಳು ಇದ್ದು, ಎಲ್ಲಾ ಜಾತಿ , ದರ್ಮಗಳಿಗೂ ಒಂದೇ ಸಂವಿಧಾನ ಅನ್ವಿಯಿಸುತ್ತದೆ.
75ವರ್ಷಗಳ ಹಿಂದೆ ರಚನೆಯಾದ ಸಂವಿಧಾನವು ಇಂದು ಪ್ರಜೆಗಳಿಗೊಸ್ಕರ, ಪ್ರಜೆಗಳಿಗಾಗಿ ರಚನೆಯಾದ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದೆ. ಸಂವಿಧಾನದ ಮೂರು ಅಂಗಗಳ ಅಡಿಯಲ್ಲಿ ಪ್ರತಿಯೊಬ್ಬರು ನಡೆಯಬೇಕು. ದೇಶದಲ್ಲಿನ ಪ್ರತಿಯೊಂದು ಕಾರ್ಯವು ಸಂವಿಧಾನದ ಅಡಿಯಲ್ಲಿಯೇ ನಡೆಯಬೇಕು ಎಂದು ಸಲಹೆ ನೀಡಿದರು.
ಇಒ ಎಸ್.ಶಿವಕುಮಾರಿ ಮಾತನಾಡಿ ಹಿಂದುಗಳಿಗೆ ಭಗವದ್ಗೀತೆ, ರಾಮಾಯಾಣ, ಮಹಭಾರತ , ಮುಸ್ಲೀಂರಿಗೆ ಖುರಾನ್, ಕ್ರಿಶ್ಚಿನ್ನರಿಗೆ ಬೈಬಲ್ ಮಾಹಾಗ್ರಂಥಗಳು ಆದರೆ ಎಲ್ಲಾ ಜನಾಂಗದವರಿಗೂ ಸಂವಿಧಾನವೇ ಮಹಾಗ್ರಂಥ. ಸಂವಿಧಾನ ಮಹಾಗ್ರಂಥವನ್ನು ನಾವೆಲ್ಲೂರು ಓದಿ, ಅದರಲ್ಲಿನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿತುಕೊಳ್ಳಬೇಕು ಎಂದರು.
ಸಂವಿಧಾನವು ಕೇವಲ ಒಂದು ಜನಾಂಗಕ್ಕೆ ಸೀಮಿತ ಎನ್ನುವ ತಪ್ಪು ಕಲ್ಪನೆ ಬಿಡಬೇಕು .ನಮ್ಮ ದೇಶವು ಮುನ್ನೆಡಯಬೇಕಾದರೆ ಸಂವಿಧಾನವು ಮುಖ್ಯ . ಸಂವಿಧಾನದ ಅಡಿಯಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಿದಾಗ ದೇಶವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗುತ್ತದೆ ಎಂದರು.
ಗ್ರಾ.ಪಂ ಉಪಾಧ್ಯಕ್ಷೆ ಉಮಾದೇವಿ ಮಾತನಾಡಿ ಸಂವಿಧಾನವು ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಕೊಟ್ಟಿದೆ. ಈ ಒಂದು ದೃಷ್ಟಿಯಿಂದ ಸಂವಿಧಾನದಲ್ಲಿನ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಓದಿಕೊಂಡು ಮಹಿಳೆಯರು ಜಾಗರೂಕರಾಗಬೇಕು ಎಂದರು.
ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್, ದಳಸನೂರು ಗ್ರಾ.ಪಂ ಅಧ್ಯಕ್ಷ ವೈ.ಎಂ. ಶ್ರೀನಿವಾಸ್, ಪಿಡಿಒ ಚಿನ್ನಪ್ಪ, ಗ್ರಾ.ಪಂ ಸದಸ್ಯರಾದ ಪಟೇಲ್, ಜಗದೀಶ್, ಗಂಗುಲಮ್ಮ, ಆರ್ಐ ಮುನಿರೆಡ್ಡಿ, ಮುಖ್ಯ ಶಿಕ್ಷಕಿ ದಿವ್ಯ ಶಿಕ್ಷಕ ಆನಂದ್, ಸಿಆರ್ಪಿ ಚನ್ನಪ್ಪ, ಮೇಲ್ವಿಚಾರಕ ಬೈರಾರೆಡ್ಡಿ, ಎಸ್ಡಿಎಂಸಿ ಅಧ್ಯಕ್ಷೆ ಆಯೀಷಾಬಾನು, ಮಾಸ್ತೇನಹಳ್ಳಿಯ ಪ್ರೌಡಶಾಲಾವರಣದಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವು ನಡೆಯಿತು. ಗ್ರಾ.ಪಂ.ಅಧ್ಯಕ್ಷ ಮಮತ ನಾರಾಯಣಸ್ವಾಮಿ, ಉಪಾಧ್ಯಕ್ಷೆ ಲಕ್ಷ್ಮಿಕೀರ್ತಿನಾಗೇಶ್, ಪಿಡಿಒ ಚಿನ್ನಪ್ಪ, ಕಾರ್ಯದರ್ಶಿ, ಶಂಕರಪ್ಪ, ಮಾಜಿ ಅಧ್ಯಕ್ಷ ಶಂಕರಪ್ಪ,
ಚಲ್ದಿಗಾನಹಳ್ಳಿ ಪ್ರಾಥಮಿಕ ಶಾಲಾವರಣದಲ್ಲಿನ ಬೈಲುರಂಗಮಂದಿರ ಗ್ರಾ.ಪಂ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷೆ ನಾಗರತ್ನಮ್ಮ, ಸದಸ್ಯ ಆನಂತ್, ಲಕ್ಷ್ಮಣರೆಡ್ಡಿ, ಪಿಡಿಒ ಜಗದೀಶ್,ಕಾರ್ಯದರ್ಶಿ ಅಮರನಾರಾಯಣ, ಮುಖಂಡರಾದ ರಾಮಾಂಜಮ್ಮ, ಮುನೆವೆಂಕಟಪ್ಪ, ಈರಪ್ಪ, ಸುರೇಶ್ನಾಯಕ್,ರಾಮಮೂರ್ತಿ, ಗೋಪಾಲರೆಡ್ಡಿ, ಶಿಕ್ಷಕರಾದ ಶಿವಮೂರ್ತಿ, ಗೋವಿಂದರೆಡ್ಡಿ ಇದ್ದರು.
ಜೆ.ತಿಮ್ಮಸಂದ್ರ ಗ್ರಾಮದಲ್ಲಿ ಗ್ರಾ.ಪಂ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮ
ಜೆ.ತಿಮ್ಮಸಂದ್ರ ಗ್ರಾಮದಲ್ಲಿ ಗ್ರಾ.ಪಂ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವು ಗ್ರಾ.ಪಂ ಅಧ್ಯಕ್ಷ ನಾಗೇಶ್ರೆಡ್ಡಿ, ಉಪಾಧ್ಯಕ್ಷೆ ಭಾರತಮ್ಮ, ಪಿಡಿಒ ವಿನೋಧರೆಡ್ಡಿ, ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ, ಸದಸ್ಯರಾದ ಕೃಷ್ಣಮ್ಮ, ಶಿಲ್ಪ, ಆರ್ಐಗಳಾದ ಮುನಿರೆಡ್ಡಿ, ಗುರುರಾಜರಾವ್, ವಿಎ. ಸ್ವಾತಿ ಬಂಡಾರಿ, ಸಿಬ್ಬಂದಿ ಜೆ.ಎ.ಮಂಜುನಾಥ್, ಮುಖಂಡರಾದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ನಾಗದೇನಹಳ್ಳಿ ದಲಿತ ಮುಖಂಡ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯಿತು.
ವಿಕಲಚೇತನ ಮಗುವಾದ ರೆಡ್ಡಮ್ಮಳಿಗೆ ಸರ್ವ ಶಿಕ್ಷಣ ಇಲಾಖೆ ವತಿಯಿಂದ 7850 ರೂಗಳ ಚೆಕ್ ವಿತರಿಸಿದರಣೆ
ಸಂವಿಧಾನವನ್ನು ಉಳಿಸಿಬೆಳಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಿಡಿಒ ಮಂಗಳಾಂಬ ಕರೆ
ಶ್ರೀನಿವಾಸಪುರ : ಪ್ರತಿಯೊಂದು ಇಲಾಖೆಯು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು , ಸಂವಿಧಾನವನ್ನು ಉಳಿಸಿಬೆಳಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪಿಡಿಒ ಮಂಗಳಾಂಬ ಕರೆ ನೀಡಿದರು.
ತಾಲೂಕಿನ ಆರಿಕುಂಟೆ ಪ್ರೌಡಶಾಲೆಯ ಕ್ರೀಡಾಂಗಣದಲ್ಲಿ ಶುಕ್ರವಾರ ಜಿಲ್ಲಾ ಪಂಚಾಯಿತ್, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನದಲ್ಲಿ ಮೂರು ಅಂಗಗಳು ಸಂವಿಧಾನದ ಅಡಿಯಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ಕ್ಷೇತ್ರಗಳು ಮುನ್ನಡೆಯಲು ಸಂವಿಧಾನ ಮಹಾಗ್ರಂಥ ಕಾರಣವಾಗಿದೆ. ಸಂವಿಧಾನವು ದೇಶದ ಪ್ರಜಾಪ್ರಭುತ್ವ ಮುನ್ನಡೆಯಲು ಮಹತ್ವವನ್ನು ಪಡದಿದೆ. ನಮ್ಮ ದೇಶಕ್ಕೆ ಸಂವಿದಾನವನ್ನು ರಚನೆ ಮಾಡಿಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ರವರಿಗೆ ಶತಕೋಟಿ ನಮನಗಳು ಎಂದರು.
ಗ್ರಾಮದ ಮಹಿಳೆಯರು ಪೂರ್ಣ ಕುಂಭ ಕಳಶಗಳೊಂದಿಗೆ ಸಂವಿಧಾನ ಜಾಗೃತಿ ರಥವನ್ನು ಅದ್ದೂರಿಯಾಗಿ ಬರಮಾಡಿಕಂಡರು.ಶಿಕ್ಷಣ ಇಲಾಖೆ, ಗ್ರಾಮಪಂಚಾಯಿತಿ , ಸಮಾಜಕಲ್ಯಾಣ ಇಲಾಖೆ ಈ ಕಾರ್ಯಕ್ರಮವು ಹಮ್ಮಿಕೊಳ್ಳಲಾಯಿತು.
ಗ್ರಾ.ಪಂ . ಅದ್ಯಕ್ಷೆ ಮುನಿವೆಂಕಟಮ್ಮ, ಉಪಾಧ್ಯಕ್ಷೆ ವೆಂಕಟಲಕ್ಷ್ಮಮ್ಮ, ಕಾರ್ಯದರ್ಶಿ ಚಂದ್ರಶೇಖರ್, ಮಾಜಿ ಅಧ್ಯಕ್ಷೆ ಸರಸ್ವತಮ್ಮ, ಮಾಜಿ ಅಧ್ಯಕ್ಷ ವೆಂಕಟರೆಡ್ಡಿ, ತಾ.ಪಂ ಮಾಜಿ ಲಕ್ಷ್ಮಣರೆಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಬಂಡಪಲ್ಲಿ ಚಂದ್ರಾರಡ್ಡಿ, ಗ್ರಾ.ಪಂ.ಸದಸ್ಯ ಡಿಎಸ್ಆರ್ .ಶ್ರೀನಾಥರೆಡ್ಡಿ, ಮುಖಂಡ ಆರಿಕುಂಟೆ ಅಂಬರೀಶ್, ಮುಖ್ಯ ಶಿಕ್ಷಕ ಮುರಳಿಬಾಬು ನೇತೃತ್ವದಲ್ಲಿ ನಡೆಯಿತು.
ಎಸ್ವಿಪುರ್ : ಆರಿಕುಂಟೆ ಗ್ರಾಮದ ಪ್ರೌಡಶಾಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತ್, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮಕ್ಕೆ ಮಂಗಳಾಂಬ ಚಾಲನೆ ನೀಡಿದರು.
ನೆಲವಂಕಿ ಗ್ರಾ.ಪಂ ಕಛೇರಿ ಬಳಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವು ಗ್ರಾ.ಪಂ. ಅಧ್ಯಕ್ಷ ರಾಮಚಂದ್ರಾರೆಡ್ಡಿ, ಉಪಾಧ್ಯಕ್ಷೆ ಬಿ.ಆರ್.ಶೋಭ, ಪಿಡಿಒ ವಿಜಯಲಕ್ಷ್ಮಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ರೋಣೂರು ಗ್ರಾಮದ ಪ್ರಾಥಮಿಕ ಶಾಲಾವರಣದಲ್ಲಿ ಗ್ರಾ.ಪಂ ಅಧ್ಯಕ್ಷೆ ಅಮರಾವತಮ್ಮ, ಉಪಾಧ್ಯಕ್ಷ ವೆಂಕಟರಮಣಾರೆಡ್ಡಿ, ಪಿಡಿಒ ಮಹೇಶ್, ಕಾರ್ಯದರ್ಶಿ ಮುರಳಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ತಾಡಿಗೋಳ್ ಗ್ರಾಮದ ಪ್ರಾಥಮಿಕ ಶಾಲಾವರಣದಲ್ಲಿ ನಡೆದ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಲಕ್ಷ್ಮಯ್ಯ, ತಾಡಿಗೋಳ್ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುರೇಶ್, ಉಪಾಧ್ಯಕ್ಷೆ ಪಲ್ಲವಿ ನಾರಾಯಣಸ್ವಾಮಿ, ಪಿಡಿಒ ಚಲಪತಿ, ಸದಸ್ಯರಾದ ಸವಿತ, ಪಾರ್ವತಮ್ಮ, ಜ್ಯೋತಿ, ಪ್ರೌಡಶಾಲೆಯ ಮುಖ್ಯ ಶಿಕ್ಷಕ ನಾಗರಾಜು, ಪ್ರಾಥಮಿಕ ಶಾಲೆಯ ಶಿಕ್ಷಕಿ ಸುನಂದಮ್ಮ, ಶಿಕ್ಷಕ ಗೋಪಾಲಕೃಷ್ಣ, ಸಿಆರ್ಪಿ ಶ್ರೀನಿವಾಸರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳ ಮೇಲ್ವಿಚಾರಕರಾದ ಡಿ.ಎನ್.ಮಂಜುನಾಥರೆಡ್ಡಿ , ಬೈರೇಗೌಡ, ಮೂರುಕಣ್ಣಪ್ಪ, ಗಣೇಶ್, ಶ್ರೀನಿವಾಸ್, ಕೆ.ಕೆ.ವೆಂಕಟರಮಣ, ವಿದ್ಯಾರ್ಥಿಗಳು, ಸಾರ್ವಜನಿಕರ ನೇತೃತ್ವದಲ್ಲಿ ನಡೆಯಿತು.
ಜೆ.ತಿಮ್ಮಸಂದ್ರ ಗ್ರಾಮದಲ್ಲಿ ಗ್ರಾ.ಪಂ ಆವರಣದಲ್ಲಿ ಸಂವಿಧಾನ ಜಾಗೃತಿ ಜಾಥ ಕಾರ್ಯಕ್ರಮವು ಗ್ರಾ.ಪಂ ಅಧ್ಯಕ್ಷ ನಾಗೇಶ್ರೆಡ್ಡಿ, ಉಪಾಧ್ಯಕ್ಷೆ ಭಾರತಮ್ಮ, ಪಿಡಿಒ ವಿನೋಧರೆಡ್ಡಿ, ಕಾರ್ಯದರ್ಶಿ ಎಸ್.ನಾರಾಯಣಸ್ವಾಮಿ, ಸದಸ್ಯರಾದ ಕೃಷ್ಣಮ್ಮ, ಶಿಲ್ಪ, ಆರ್ಐಗಳಾದ ಮುನಿರೆಡ್ಡಿ, ಗುರುರಾಜರಾವ್, ವಿಎ. ಸ್ವಾತಿ ಬಂಡಾರಿ, ಸಿಬ್ಬಂದಿ ಜೆ.ಎ.ಮಂಜುನಾಥ್, ಮುಖಂಡರಾದ ಚಲ್ದಿಗಾನಹಳ್ಳಿ ಮುನಿವೆಂಕಟಪ್ಪ, ನಾಗದೇನಹಳ್ಳಿ ದಲಿತ ಮುಖಂಡ ಶ್ರೀನಿವಾಸ್ ನೇತೃತ್ವದಲ್ಲಿ ನಡೆಯಿತು.
“ನೀರುಅತ್ಯಮೂಲ್ಯ ನೀರು ಉಳಿಸಿ ನಾಡ ಬೆಳೆಸಿ ಬೀದಿ ನಾಟಕ”
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯಕೋಲಾರಜಿಲ್ಲಾ ಶ್ರೀನಿವಾಸಪುರತಾಲೂಕಿನಯೋಜನಾಕಛೇರಿಯವ್ಯಾಪ್ತಿಯಲ್ಲಿನ ಗೌನಿಪಲ್ಲಿ ಶ್ರೀ ವೇಣುಗೋಪಾಲ ಸ್ವಾಮಿದೇವಸ್ಥಾನದಆವರಣದಲ್ಲಿಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನೀರು ಉಳಿಸುವುದರ ವಿಚಾರವಾಗಿ ಬೀದಿನಾಟಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುಗ್ರಾಮ ಪಂಚಾಯ್ತಿ ಸದಸ್ಯರಾದ ಭಕ್ಷು ಸಾಬ್ರವರು ಉದ್ಘಾಟಿಸಿ ಧರ್ಮಸ್ಥಳ ಯೋಜನೆಯ ಪ್ರತಿಯೊಂದು ಕಾರ್ಯಕ್ರಮಗಳು ಸಮಾಜ ಮುಖಿಚಿಂತನೆಯ ಕಾರ್ಯಕ್ರಮಗಳಾಗಿದ್ದು ಇದರಲ್ಲಿ ಭಾಗವಹಿಸುವುದೇ ಸಂತೋಷದ ವಿಚಾರ ಎಂದರು.
ತಾಲ್ಲೂಕುಯೋಜನಾಧಿಕಾರಿ ಪ್ರಕಾಶ್ಕುಮಾರ್ಮಾತನಾಡುತ್ತಾನೀರು ಮನಷ್ಯನಿಗೆಅತ್ಯಮೂಲ್ಯ.ಒಂದು ಹೊತ್ತುಎರಡು ಹೊತ್ತು ಊಟ ಇಲ್ಲದೇಇದ್ದರೂ ಬದುಕಬಹುದುಆದರೆಒಂದೊತ್ತು ನೀರುಇಲ್ಲದೆಇದ್ದರೆ ಬದುಕಲುಅಸಾಧ್ಯ, ಪ್ರಪಂಚದಎಲ್ಲಾ ಜೀವರಾಶಿಗಳಿಗೂ ನೀರುಅಗತ್ಯಆಗಿರುವುದರಿಂದ ಮಾನವಕುಲದವರಾದ ನಾವುಗಳು ಪ್ರಾಣಿ ಪಕ್ಷಿಗಳ ಮೇಲೆ ಕನಿಕರತೋರಿ ನೀರಿನ ಮೂಲಗಳಾದ ಕೆರೆಕುಂಟೆ ಬಾವಿ ಮತ್ತು ಬಳಕೆ ಮಾಡುವಎಲ್ಲಾರೀತಿಯ ನೀರನ್ನು ಮಿತವಾಗಿ ಬಳಸಿ ಪಾಣಿ ಪಕ್ಷಿಗಳಜೀವ ಉಳಿಸಬೇಕು. ನನ್ನಅನುಭವದಲ್ಲಿಇಂತಹಕಲಾವಿದರ ನಾಟಕವನ್ನುಎಂದೂನೋಡಿಲ್ಲಎಲ್ಲರಿಗೂ ಮನಮುಟ್ಟುವರೀತಿಯಂತೆ ಅಭಿನಯಿಸಿರುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೀರಿಲ್ಲದೆ ನಾವಿಲ್ಲ ನೀರಿನ ಬಗ್ಗೆ ಅರಿವು ಪಡೆಯದೇಇದ್ದರೆ ಮುಂದಿನ ದಿನಮಾನಗಳಲ್ಲಿ ನಾವೇ ಇರುವುದಿಲ್ಲ. ನೀರನ್ನು ಉಳಿಸಿ ನಾಡನ್ನು ಬೆಳೆಸಿ, ಹಲವಾರುಕಡೆಕೆರೆಯ ನೀರನ್ನು ಮೋಟರ್ ಪಂಪುಗಳ ಮೂಲಕ ಕದಿಯುತ್ತಿರುವುದುಆಕ್ಷಮ್ಯಅಪರಾದಎಂದುಜನಮನಜಾಗೃತಿಕಲಾತಂಡದಅಧ್ಯಕ್ಷರು ಮಾಸ್ತೇನಹಳ್ಳಿ ನಾರಾಯಣಸ್ವಾಮಿ ನಾಟಕದ ಪ್ರಾಸ್ತಾವಿಕ ನುಡಿಯ ಮೂಲಕ ತಿಳಿಸಿದರು..
ಎಚ್.ಆರ್.ಎ.ಸಿ ಎಫ್ದೆಹಲಿಯಅಧ್ಯಕ್ಷರಾದ ಕುಬೇರಗೌಡರವರು ಮಾತನಾಡುತ್ತಾಇತ್ತೀಚ್ಚಿನ ದಿನಗಳಲ್ಲಿ ನೀರುತುಂಬಾ ಪೋಲಾಗುತ್ತಿರುವುದನ್ನು ತಡೆಯಬೇಕುಅನಗತ್ಯವಾಗಿ ನೀರನ್ನು ದುರ್ಬಳಕೆ ಮಾಡದೆ ನೀರನ್ನು ಉಳಿಸಿ ಪ್ರಾಣಿಗಳನ್ನು ರಕ್ಷಿಸಿ ಗಿಡ ಮರಗಳನ್ನು ಬೆಳೆಸಬೇಕು ಎಂಬ ಹೇಳಿಕೆಯಂತೆ ಕೋಲಾರದಜನಮನಜಾಗೃತಿಕಲಾತಂಡಕಲಾವಿದರು ನಾಟಕದ ಮೂಲಕ ಎಲ್ಲರಿಗೂಅರಿವಾಗುವಂತೆಜಾಗೃತಿಮೂಡಿಸಿದ್ದಾರೆ ಇಂತಹಜಾಗೃತಿನಾಟಕಗಳು ನಮ್ಮಜನಾಂಗಕ್ಕೆತುಂಬಾ ಬೇಕಾಗಿದೆ ಈ ನಾಟಕದ ಮೂಲಕವಾಗಿ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂದು ಶುಭ ಹಾರೈಸಿದರು.
ಐ ಐ ಬಿ ಎಮ್ಕಾಲೇಜಿನ ಸಂಸ್ಥಾಪಕರಾದರೆಹಮತ್ ಪಾಷರವರು ಮಾತನಾಡುತ್ತಾ1982 ರಲ್ಲಿ ಪ್ರಾರಂಭವಾದ ಸಂಸ್ಥೆಯ ಕಾರ್ಯಚಟುವಟಿಕೆಗಳು ಪರ್ಯಾಯ ಸರ್ಕಾರದರೀತಿಯಲ್ಲಿದ್ದುಜನ ಮೆಚ್ಚುಗೆ ಪಡೆದುಕೊಂಡಿದೆಎಂದು ಶುಭ ಹಾರೈಸಿದರು.
ಈ ಸಂಧರ್ಭದಲ್ಲಿ ಕರ್ನಾಟಕ ರಕ್ಷಣಾವೇದಿಕೆಯಗೌರವಾಧ್ಯಕ್ಷರಾದ ಖಾಸೀಂಹುಸೇನ್, ನಿವೃತ್ತ ಪ್ರಾಂಶುಪಾಲರಾದಅಬ್ದುಲ್ ವಾಜೀದ್ಸಾಬ್, ಗ್ರಾಮಪಂಚಾಯ್ತಿ ಸದಸ್ಯರಾದಖಾದರ್ ಪಾಷ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸವಿತಾ, Sಚಿve Wಚಿಣeಡಿ ಜಿಲ್ಲಾಸಮನ್ವಯಾಧಿಕಾರಿ ಮಧು, ಗೌನಿಪಲ್ಲಿ ವಲಯದಮೇಲ್ವಿಚಾರಕರಾದಆನಂದಕೆ.ಜಿ, ಗೌನಿಪಲ್ಲಿವಲಯದಸೇವಾಪ್ರತಿನಿಧಿಗಳು, ಕಲಾತಂಡದÀಕುರುಬರಪೇಟೆಗಾಯಿತ್ರಿ, ಮಾಸ್ತೇನಹಳ್ಳಿ ಪೈಯರ್ ಪ್ರವೀಣ್, ಕುಮಾರಿಚೈತ್ರ, ವೆಲಗಲಬುರ್ರೆ ನವೀನ್, ಬಾಲ ನಟರಾದಎಂ.ಎನ್ ಸೋಹನ್ಮತ್ತು ಸುಚಿತ್ರಕೋಲಾರಮತ್ತುಸ್ವಸಹಾಯ ಸಂಘದ ಸದಸ್ಯರುಉಪಸ್ಥಿತರಿದ್ದರು.
Fr. Franklin D’Souza celebrated his Sacerdotal Silver Jubilee at his native Parish, Murkothpalke / ಫಾ. ಫ್ರಾಂಕ್ಲಿನ್ ಡಿಸೋಜ ಅವರು ತಮ್ಮ ಸ್ಥಳೀಯ ಪ್ಯಾರಿಷ್, ಮುರ್ಕೋತ್ ಪಾಲ್ಕೆಯಲ್ಲಿ ತಮ್ಮ ಯಾಜಕೀ ದೀಕ್ಷೆಯ ರಜತ ಮಹೋತ್ಸವವನ್ನು ಆಚರಿಸಿದರು
Moodbidre, February 9, 2024: Rev. Fr Franklin D’Souza a priest of Diocese of Shimoga, celebrated his Sacerdotal Silver Jubilee on February 8th, 2024 at his native Parish St. Francis Xavier’s Church Saverapura, Murkothpalke, Diocese of Mangalore.
Thanksgiving Holy Eucharist began at 10am. Most Rev. Dr Francis Serrao SJ, Bishop of Diocese of Shimoga, Most Rev. Lawrence Mukkuzhy, Bishop of Belthangady, Most Rev. Leo Cornelio, Archbishop Emeritus of Archdiocese of Bhopal, Rev. Msgr. Alfred Mendonca, Vicar General of Diocese of Mysore, Rev. Fr Alwyn Dias, Provincial of Holy Trinity Province Karnataka were present for the thanksgiving Holy Eucharist. There were 40priests who thanked God together with Fr Franklin D’Souza.
Fr Santhosh Pereira, Rector of Apostolic house, Shivamogga was the Emcee for the Mass and Fr Pius D’Souza preached a meaningful homily. Blue Angels Choir from Mangalore led the choir.
After the Mass, a short Felicitation was organised by the family. Bishop Lawrence, Archbishop Emeritus Leo Cornelio felicitated both Fr Franklin D’Souza and his mother who completed 80 years of her life.
On behalf of Diocese of Shimoga Rev. Fr Stany D’Souza felicitated Fr Franklin D’Souza and sang a felicitatory song.
On behalf of the Parish, Fr Noel Mascarenhas CSSR Parish Priest felicitated and honoured Fr Franklin D’Souza together with his parish committee.
Bishop Francis Serrao SJ, Bishop of Diocese of Shimoga felicitated Fr Franklin D’Souza and honoured him.
ಫಾ| ಫ್ರಾಂಕ್ಲಿನ್ ಡಿಸೋಜ ಅವರು ತಮ್ಮ ಸ್ಥಳೀಯ ಪ್ಯಾರಿಷ್, ಮುರ್ಕೋತ್ ಪಾಲ್ಕೆಯಲ್ಲಿ ತಮ್ಮ ಯಾಜಕೀ ದೀಕ್ಷೆಯ ರಜತ ಮಹೋತ್ಸವವನ್ನು ಆಚರಿಸಿದರು
ಮೂಡುಬಿದಿರೆ, ಫೆಬ್ರವರಿ 9, 2024: ಶಿವಮೊಗ್ಗ ಧರ್ಮಪ್ರಾಂತ್ಯದ ಧರ್ಮಗುರುಗಳಾದ ರೆ.ಫಾ.ಫ್ರಾಂಕ್ಲಿನ್ ಡಿಸೋಜ ಅವರು ತಮ್ಮ ಪವಿತ್ರ ಯಾಜಕೀ ದೀಕ್ಷೆಯ ರಜತ ಮಹೋತ್ಸವವನ್ನು ಫೆಬ್ರವರಿ 8, 2024 ರಂದು ತಮ್ಮ ಸ್ಥಳೀಯ ಪ್ಯಾರಿಷ್ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಸವೇರಪುರ, ಮುರ್ಕೋತ್ಪಲ್ಕೆ, ಮಂಗಳೂರು ಧರ್ಮಪ್ರಾಂತ್ಯದಲ್ಲಿ ಆಚರಿಸಿದರು.
ಕೃತಜ್ಞತಾ ಪವಿತ್ರ ಯೂಕರಿಸ್ಟ್ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಯಿತು. ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ ಎಸ್.ಜೆ., ಧರ್ಮಗುರು ಲಾರೆನ್ಸ್ ಮುಕ್ಕುಜಿ, ಬೆಳ್ತಂಗಡಿ ಬಿಷಪ್ ಮೋಸ್ಟ್ ರೆ. ಲಿಯೊ ಕರ್ನೆಲಿಯೊ, ಭೋಪಾಲ್ ಆರ್ಚ್ ಡಯಾಸಿಸ್ ನ ಆರ್ಚ್ ಬಿಷಪ್ ವಿಶ್ರಾಂತ ರೆ. ಮೈಸೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಆಲ್ಫ್ರೆಡ್ ಮೆಂಡೋನ್ಕಾ, ಹೋಲಿ ಟ್ರಿನಿಟಿ ಪ್ರಾವಿನ್ಸ್ ಕರ್ನಾಟಕದ ಪ್ರಾಂತೀಯ ರೆ.ಫಾ. ಫ್ರಾಂಕ್ಲಿನ್ ಡಿಸೋಜಾ ಅವರೊಂದಿಗೆ 40 ಪುರೋಹಿತರು ದೇವರಿಗೆ ಕೃತಜ್ಞತೆ ಸಲ್ಲಿಸಿದರು.
ಶಿವಮೊಗ್ಗದ ಅಪೋಸ್ಟೋಲಿಕ್ ಹೌಸ್ ನ ರೆಕ್ಟರ್ ಫಾದರ್ ಸಂತೋಷ್ ಪಿರೇರಾ ಪವಿತ್ರ ಬಲಿಪೂಜೆಯ ನಿರ್ವಾಹಕ ಮತ್ತು ಫಾದರ್ ಪಿಯೂಸ್ ಡಿಸೋಜಾ ಅರ್ಥಪೂರ್ಣ ಪ್ರವಚನ ಬೋಧಿಸಿದರು. ಮಂಗಳೂರಿನ ಬ್ಲೂ ಏಂಜಲ್ಸ್ ಕಾಯಿರ್ ತಂಡದ ನೇತೃತ್ವ ವಹಿಸಿದ್ದರು.
ಬಲಿಪೂಜೆಯ ನಂತರ ಕುಟುಂಬದವರಿಂದ ಕಿರು ವಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಬಿಷಪ್ ಲಾರೆನ್ಸ್, ಆರ್ಚ್ಬಿಷಪ್ ಎಮೆರಿಟಸ್ ಲಿಯೊ ಕರ್ನೆಲಿಯೊ ಅವರು ಫ್ರಾಂಕ್ಲಿನ್ ಡಿಸೋಜಾ ಮತ್ತು ತಮ್ಮ ಜೀವನದ 80 ವರ್ಷಗಳನ್ನು ಪೂರೈಸಿದ ಅವರ ತಾಯಿ ಇಬ್ಬರನ್ನೂ ಅಭಿನಂದಿಸಿದರು.
ಶಿವಮೊಗ್ಗ ಧರ್ಮಪ್ರಾಂತ್ಯದ ಪರವಾಗಿ ಫಾದರ್ ಸ್ಟ್ಯಾನಿ ಡಿಸೋಜಾ ಅವರು ಫ್ರಾಂಕ್ಲಿನ್ ಡಿಸೋಜ ಅವರನ್ನು ಸನ್ಮಾನಿಸಿ, ಭಾವಪೂರ್ಣ ಗೀತೆಯನ್ನು ಹಾಡಿದರು.
ಪ್ಯಾರಿಷ್ ಪರವಾಗಿ ಫಾ.ನೋಯೆಲ್ ಮಸ್ಕರೇನ್ಹಸ್ ಸಿ.ಎಸ್.ಎಸ್.ಆರ್ ಪ್ಯಾರಿಷ್ ಪ್ರೀಸ್ಟ್ ಫ್ರಾಂಕ್ಲಿನ್ ಡಿಸೋಜ ಅವರನ್ನು ಅವರ ಪ್ಯಾರಿಷ್ ಕಮಿಟಿಯೊಂದಿಗೆ ಸನ್ಮಾನಿಸಿ ಗೌರವಿಸಿದರು.ಫ್ರಾಂಕ್ಲಿನ್ ಡಿಸೋಜಾ ಅವರನ್ನು ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಫ್ರಾನ್ಸಿಸ್ ಸೆರಾವೋ ಎಸ್.ಜೆ ಸನ್ಮಾನಿಸಿ ಗೌರವಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿಗೆ RGUHS ಹೋಮಿಯೋಪಥಿ ವೈದ್ಯಕೀಯ ವಿಭಾಗದ ಪರೀಕ್ಷೆಗಳಲ್ಲಿ 10 ರ್ಯಾಂಕ್ ಗಳಲ್ಲಿ 7 ರ್ಯಾಂಕ್ – ಒಟ್ಟು110 ರ್ಯಾಂಕ್ ಗಳು / Father Muller Homoeopathic Medical College, Deralakatte bags 7 out of 10 ranks in Under Graduate examination of RGUHS and 110 overall ranks
ಮಂಗಳೂರು: ಸಪ್ಟೆಂಬರ್ 2018ರಿಂದ ಜೂನ್2022ರ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ನಡೆಸಿರುವ ಹೋಮಿಯೋಪಥಿ ವೈದ್ಯಕೀಯ ವಿಭಾಗದ ಪರೀಕ್ಷೆಗಳಲ್ಲಿ ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ಮೆಡಿಕಲ್ಕಾಲೇಜಿನ ಪದವಿಪೂರ್ವ ವಿದ್ಯಾರ್ಥಿಗಳು (ಬಿ.ಎಚ್.ಎಮ್.ಎಸ್2017-18) 10 ರ್ಯಾಂಕ್ ಗಳಲ್ಲಿ 7ರ್ಯಾಂಕ್ಗಳಿಸುವ ಮೂಲಕ ಸ್ಥಿರ ಮತ್ತು ದಕ್ಷ ಪರಿಶ್ರಮವನ್ನು ಮತ್ತೊಮ್ಮೆ ಪ್ರದರ್ಶಿಸಿದ್ದಾರೆ. ಕೋರ್ಸ್ವಾರು 21 ಹಾಗೂ ವಿಷಯವಾರು 82 ರ್ಯಾಂಕ್ ಗಳನ್ನು ಪಡೆದು ಒಟ್ಟು110 ರ್ಯಾಂಕ್ ಗಳನ್ನು ಗಳಿಸಿಕೊಂಡಿದೆ.
ಫಾದರ್ ಮುಲ್ಲರ್ಚಾರಿಟೇಬಲ್ ಸಂಸ್ಥೆಯನಿರ್ದೇಶಕರಾದಅತೀ ವಂದನೀಯ ಫಾ.ರಿಚರ್ಡ್ ಅಲೋಶಿಯಸ್ ಕುವೆಲ್ಲೊರವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು ಹಾಗೂ ಪ್ರಾಂಶುಪಾಲರು ಮತ್ತುಅಧ್ಯಾಪಕರ ಮಾರ್ಗದರ್ಶನವನ್ನು ಶ್ಲಾಘಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯಕಾಲೇಜು ಮತ್ತುಆಸ್ಪತ್ರೆಯ ಆಡಳಿತಮಂಡಳಿ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳ ವತಿಯಿಂದ ರ್ಯಾಂಕ್ ಗಳಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು ಸಲ್ಲಿಸಿದ್ದ್ದಾರೆ
Father Muller Homoeopathic Medical College, Deralakatte bags 7 out of 10 ranks in Under Graduate examination of RGUHS and 110 overall ranks.
The Undergraduate students (BHMS 2017-18) of Father Muller Homoeopathic Medical College, Deralakatte have displayed yet again the consistent and efficient hardwork and dedication by bagging 7out of 10 ranks in the BHMS examinations held from September 2018 to June 2022 by the Rajiv Gandhi University of Health Sciences, Karnataka. Father Muller Homoeopathic Medical College, Deralakatte has secured Course-wise 21ranks and subject-wise 82ranks with the tally of110 ranks.
Rev Fr Richard Aloysius Coelho Director, FMCI in his press release congratulated the ranks holders and appreciated the guidance and dedication of the Principal and faculty members.Hearty congratulation to the rank holders from the Management, faculty members and students of Father Muller Homoeopathic Medical College, Deralakatte.